ಅಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಣ್ಣಯ್ಯ ಇಂದ ಪುನರ್ನಿರ್ದೇಶಿತ)
ಬಾಂಗ್ಲಾದೇಶದ ಸಹೋದರರು
ಇದು ಸಂಬಂಧ ಸೂಚಕ ಪದದ ಬಗ್ಗೆ ಅಣ್ಣಯ್ಯ ಹೆಸರಿನ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ

ಅಣ್ಣಎಂಬುದು ಒಂದು ನಾಮಪದ. ಒಂದು ಕುಟುಂಬದಲ್ಲಿ, ತಾಯಿಗೆ ಹುಟ್ಟುವ ಹಿರಿಯ ಗಂಡು ಮಗು ಅಥವಾ ಆ ತಾಯಿಗೆ ಹುಟ್ಟುವ ಮತ್ತೊಂದು ಮಗುವಿನ ಮುನ್ನ ಹುಟ್ಟುವ ಗಂಡು ಮಗುವನ್ನು ಅಣ್ಣನಾಗುತ್ತಾರೆ. ಜನಪದ ಗೀತೆಗಳಲ್ಲಿ ಅಣ್ಣ, ತಂಗಿ, ತಮ್ಮ, ತಂಗಿಯ ಬಗ್ಗೆ ಹಲವಾರು ಜನಪದ ಗೀತೆಗಳಿವೆ.

ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು
ಬೆನ್ನ ಕಟ್ಟುವರು ಸಭೆಯೊಳಗೆ|ಸಾವಿರ
ಹೊನ್ನ ಕಟ್ಟುವರು ಉಡಿಯೊಳಗೆ||

ಅಣ್ಣ ಪದದ ಅರ್ಥಗಳು ಕೆಳಗಿನಂತಿವೆ.

  • ಹಿರಿಯ, ಮೊದಲು ಹುಟ್ಟಿದವ
  • ಹೆಚ್ಚು ಅನುಭವ ಹೊಂದಿದವ
  • ಸೋದರ, ಒಡಹುಟ್ಟಿದವನು[೧]
  • ಒಡಹುಟ್ಟುಗ[೨]
  • ಸಹೋದರ ಮತ್ತು ಸಹೋದರಿಯರ ಸಂಬಂಧ, ಪ್ರೀತಿ ಮತ್ತು ಪವಿತ್ರದ ಸಂಕೇತವಾಗಿರುವ ದಿನವೇ ರಕ್ಷಾ ಬಂಧನ.
  • ರಕ್ಷಾ ಬಂಧನ ದಿನದಂದು ಸಹೋದರಿಯರು ತಮ್ಮ ಅಣ್ಣ ಮತ್ತು ತಮ್ಮಂದಿರಿಗೆ ರಾಖಿಯನ್ನು ಕಟ್ಟಿ, ಅವರ ಜೀವನ ಸುಗಮವಾಗಿರಲಿ ಎಂದು ಹಾರೈಸುತ್ತಾರೆ.

ಉಲ್ಲೇಖ[ಬದಲಾಯಿಸಿ]

  1. ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) - ಪ್ರೊ. ಜಿ. ವೆಂಕಟಸುಬ್ಬಯ್ಯ ನಿಘಂಟು
  2. ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಪದಗಳು - ಪ್ರೊ. ಡಿ. ಎನ್. ಶಂಕರ ಭಟ್



"https://kn.wikipedia.org/w/index.php?title=ಅಣ್ಣ&oldid=1065640" ಇಂದ ಪಡೆಯಲ್ಪಟ್ಟಿದೆ