ನೀಲಕಂಠ
ನೀಲಕಂಠ | |
---|---|
ನೀಲಕಂಠ | |
Conservation status | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಸಿ.ಬೆಂಗಾಲೆನ್ಸಿಸ್
|
Binomial name | |
ಕೊರಾಸಿಯಸ್ ಬೆಂಗಾಲೆನ್ಸಿಸ್ (Linnaeus, 1758)
| |
Synonyms | |
Corvus benghalensis |
ನೀಲಕಂಠ(Indian Roller)ದಕ್ಷಿಣ ಏಷಿಯಾ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿ. ಇದರ ನೀಲ ಬಣ್ಣದಿಂದ ಇದಕ್ಕೆ ನೀಲಕಂಠ ಎಂಬ ಹೆಸರು ಬಳಕೆಯಲ್ಲಿದೆ.ಇದು ಕರ್ನಾಟಕ,ಆಂಧ್ರಪ್ರದೇಶ,ಬಿಹಾರ ಹಾಗೂ ಒಡಿಶಾ ರಾಜ್ಯಗಳ ರಾಜ್ಯ ಪಕ್ಷಿಯಾಗಿ ಗುರುತಿಸಲ್ಪಟ್ಟಿದೆ.
ಲಕ್ಷಣಗಳು
[ಬದಲಾಯಿಸಿ]ಇದು ಪಾರಿವಾಳಕ್ಕಿಂತ ಚಿಕ್ಕದಾದ ಪಕ್ಷಿ.ನೆತ್ತಿ,ರೆಕ್ಕೆ ತಿಳಿ ನೀಲಿಯಾಗಿದ್ದು,ಕತ್ತು,ಎದೆ,ಬೆನ್ನು ಕಂದು ಬಣ್ಣವಿದೆ.ಕೊಕ್ಕು ಕಪ್ಪಗಿದೆ.ಸುಮಾರು ೨೬ ರಿಂದ ೨೮ ಸೆಂಟಿಮೀಟರ್ ಉದ್ದವಿರುತ್ತದೆ.
ಆವಾಸ
[ಬದಲಾಯಿಸಿ]ಇದು ಮುಖ್ಯವಾಗಿ ಪರ್ಣಪಾತಿ ಕಾಡಿನ ಅಂಚು,ಕೃಷಿಭೂಮಿ,ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ತಂತಿ,ಮರ,ಬಂಡೆ ಹಾಗೂ ಕಂಬಗಳಲ್ಲಿ ಕುಳಿತಿರುತ್ತದೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಪೊಟರೆಯಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡುಕಟ್ಟಿ,೪ ಅಥವಾ ೫ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೧೭ ದಿನಗಳವರೇಗೆ ಕಾವು ಕೊಟ್ಟು ಮರಿಮಾಡುತ್ತದೆ. ಮಾರ್ಚಿಯಿಂದ ಜುಲೈ ಸಂತಾನೋತ್ಪತ್ತಿಯ ಕಾಲ.ಹೆಣ್ಣುಗಳನ್ನು ಆಕರ್ಷಿಸಲು ಗಂಡು ಹಕ್ಕಿ ಆಗಸದಲ್ಲಿ ಗಿರಕಿ ಹೊಡೆಯುತ್ತದೆ.
ಛಾಯಾಂಕಣ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ BirdLife International (2008). Coracias benghalensis. In: IUCN 2008. IUCN Red List of Threatened Species. Retrieved 04 July 2009.