ವಿಷಯಕ್ಕೆ ಹೋಗು

ರಸಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಸಿಕನು (ರಸಜ್ಞ) ಲಲಿತ ಕಲೆಗಳು, ಪಾಕಶೈಲಿಗಳ ಬಗ್ಗೆ ಬಹಳ ಜ್ಞಾನವನ್ನು ಹೊಂದಿರುವ ವ್ಯಕ್ತಿ, ಅಥವಾ ಅಭಿರುಚಿಯ ವಿಷಯಗಳಲ್ಲಿ ನಿಪುಣ ತೀರ್ಪುಗಾರನಾಗಿರುತ್ತಾನೆ. ಅನೇಕ ಕ್ಷೇತ್ರಗಳಲ್ಲಿ ಈ ಪದವು ಈಗ ಢೋಂಗಿಯ ಅನಿಸಿಕೆಯನ್ನು ಹೊಂದಿದೆ, ಮತ್ತು ಭಾಗಶಃ ವ್ಯಂಗ್ಯಾತ್ಮಕ ಅರ್ಥದಲ್ಲಿ ಬಳಸಲ್ಪಡಬಹುದು, ಆದರೆ ಕಲಾ ವ್ಯಾಪಾರದಲ್ಲಿ ರಸಜ್ಞತೆಯು ಶೈಲಿ ಮತ್ತು ತಂತ್ರದ ಆಧಾರದ ಮೇಲೆ ಕೃತಿಗಳ ಪ್ರತ್ಯೇಕ ಕಲಾವಿದರ ಗುರುತಿಸುವಿಕೆ ಮತ್ತು ಆರೋಪಣದಲ್ಲಿ ಮಹತ್ತ್ವಪೂರ್ಣ ಕೌಶಲವಾಗಿ ಉಳಿದುಕೊಂಡಿದೆ, ಏಕೆಂದರೆ ಈ ವಿಷಯದಲ್ಲಿ ಅತ್ಯಂತ ಮುಂಚಿನ ಇತಿಹಾಸದ ದಸ್ತಾವೇಜು ಸಂಬಂಧಿತ ಸಾಕ್ಷ್ಯದ ಕೊರತೆಯಿದೆ. ವೈನ್ ವ್ಯಾಪಾರದಲ್ಲಿನ ಸನ್ನಿವೇಶವು ಇದೇ ರೀತಿಯಾಗಿದೆ, ಉದಾಹರಣೆಗೆ ವೈನ್‍ನ ರುಚಿನೋಡುವಿಕೆಯ ಮೂಲಕ ಎಳೆ ವೈನ್‍ನ ವಯಸ್ಸಾಗುವಿಕೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವಲ್ಲಿ.

ಕಲೆಯಲ್ಲಿ ರಸಜ್ಞತೆ

[ಬದಲಾಯಿಸಿ]

"ಒಂದು ವರ್ಣಚಿತ್ರವನ್ನು ಯಾರು ಬರೆದಿದ್ದಾರೆ ಎಂದು ಬಹುತೇಕ ಸಹಜವಾಗಿ ಹೇಳುವ ಸಾಮರ್ಥ್ಯ"ವನ್ನು ರಸಜ್ಞತೆ ಎಂದು ವ್ಯಾಖ್ಯಾನಿಸಲಾಗುತ್ತದೆ.[] ರಸಿಕರು ಅಂತಿಮವಾಗಿ ಕಲಾಕೃತಿಗಳನ್ನು ಕಲಾವಿದರ ಶೈಲಿ ಮತ್ತು ತಂತ್ರದ ತಮ್ಮ ಅನುಭವದ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಾರೆ. ಒಳಜ್ಞಾನದಿಂದ ತಿಳಿಯುವ ತೀರ್ಮಾನವು ಅತ್ಯಗತ್ಯವಾಗಿದೆ, ಆದರೆ ಅದು ಸ್ವತಃ ಕೃತಿಯ ಆಮೂಲಾಗ್ರ ತಿಳುವಳಿಕೆಯಲ್ಲಿ ನೆಲೆಗೊಂಡಿರಬೇಕು.

ಉಲ್ಲೇಖಗಳು

[ಬದಲಾಯಿಸಿ]
  1. Grosvenor, Bendor (2010-12-08). "On Connoisseurship". Arthistorynews.com. Retrieved 2015-03-18.
"https://kn.wikipedia.org/w/index.php?title=ರಸಿಕ&oldid=912760" ಇಂದ ಪಡೆಯಲ್ಪಟ್ಟಿದೆ