ಮಣಿರತ್ನಂ
ಗೋಚರ
ಮಣಿರತ್ನಂ | |
---|---|
Born | Gopala Ratnam Subramaniam ೨ ಜೂನ್ ೧೯೫೬ ಮದುರೈ, ತಮಿಳು ನಾಡು, India |
Occupation(s) | ಚಿತ್ರ ನಿರ್ದೇಶಕ ನಿರ್ಮಾಪಕ Screenwriter |
Years active | 1983–present |
Spouse | ಸುಹಾಸಿನಿ (1988–present) |
ಮಣಿರತ್ನಂ (೧೯೫೬-) - ದಕ್ಷಿಣ ಭಾರತದ ಸಿನಿಮಾ ದಿಗ್ಗಜರಲ್ಲಿ ಮಣಿರತ್ನಂ ಪ್ರಮುಖರು. ತಮಿಳು ಸಿನಿಮಾ ರಂಗದಲ್ಲಿ ಕ್ರಾಂತಿ ಮಾಡಿ, ಅದರ ಛಾಪನ್ನು ಭಾರತದಾದ್ಯಂತ ಹರಡಿದರು. ತಮ್ಮ ಚಿತ್ರಗಳಲ್ಲಿ ಛಾಯಾಚಿತ್ರಣಕ್ಕೆ ಮತ್ತು ಬೆಳಕಿಗೆ ಮಹತ್ವ ನೀಡಿ ಅದರಿಂದ ವಿಶಿಷ್ಟ ಶೈಲಿಯನ್ನು ಸೃಷ್ಟಿಸಿರುವ ಇವರು ಹುಟ್ಟಿದ್ದು ತಮಿಳುನಾಡಿನ ಮದರಾಸಿನಲ್ಲಿ.
೧೯೮೩ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ 'ಪಲ್ಲವಿ ಅನು ಪಲ್ಲವಿ' ಎಂಬ ಹೆಸರಿನಲ್ಲಿ ಚಿತ್ರಿಸಿದರು.
'ಮೌನರಾಗಂ', 'ನಾಯಗನ್', 'ಅಗ್ನಿ ನಕ್ಷತ್ರಂ', 'ಗೀತಾಂಜಲಿ', 'ಅಂಜಲಿ', 'ರೋಜಾ', 'ತಿರುಡಾ ತಿರುಡಾ', 'ಮುಂಬಯಿ', 'ಇರುವರ್', 'ದಿಲ್ ಸೇ', 'ಅಲೈ ಪಾಯುದೆ', 'ಕಣ್ಣತ್ತಿಲ್ ಮುತ್ತಮಿಟ್ಟಾಳ್' ಮತ್ತು 'ಯುವಾ' ಇವರು ನಿರ್ದೇಶಿಸಿದ ಚಿತ್ರಗಳು.