ವೈ.ವಿ.ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈ.ವಿ.ರಾವ್

ವೈ.ವಿ.ರಾವ್ - ದಕ್ಷಿಣ ಭಾರತದ ಚಲನಚಿತ್ರ ನಿರ್ದೇಶಕರು. ಕನ್ನಡದ ಪ್ರಪ್ರಥಮ ಚಲನಚಿತ್ರ ,ಸತಿ ಸುಲೋಚನ (೧೯೩೪)ವನ್ನು ನಿರ್ದೇಶಿಸಿದವರು. ಇವರ ಪೂರ್ಣ ನಾಮಧೇಯ ಯರಗುದಿಪತಿ ವರದ ರಾವ್. ಮೂಲತ: ವೈ.ವಿ.ರಾವ್ ಅವರು ಆಂಧ್ರಪ್ರದೇಶದ ಯರಗುಡಪಾಟದವರು. ಮುಂಬೈಯಲ್ಲಿ ಹಲವಾರು ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ್ದರು; ನಿರ್ದೇಶನವನ್ನೂ ಮಾಡಿದ್ದರು. ೧೯೩೦ರಲ್ಲಿ ಗುಬ್ಬಿ ವೀರಣ್ಣರವರಿಗಾಗಿ ‘ಹರಿಮಾಯ’ ಚಿತ್ರವನ್ನು ನಿರ್ದೇಶಿಸಿ ಜೊತೆಗೆ ಅದರಲ್ಲಿ ನಟಿಸಿದ್ದರು. ಕನ್ನಡವಲ್ಲದೆ ತಮಿಳು, ತೆಲುಗು, ಕೊಂಕಣಿ ಹಾಗೂ ಹಿಂದಿ ಭಾಷೆಗಳಲ್ಲಿಯೂ ಪ್ರಪ್ರಥಮವಾಗಿ ಚಲನಚಿತ್ರಗಳನ್ನು (motion pictures) ಮಾಡಿದವರು . ಇವರಿಗೆ ಬಹಳವಾಗಿ ಹೆಸರು ತಂದುಕೊಟ್ಟಂತಹ ಚಿತ್ರ, ತಮಿಳಿನ 'ಚಿಂತಾಮಣಿ'(೧೯೩೭).ಈ ಚಿತ್ರದ ಮೂಲಕ ಸುಪ್ರಸಿದ್ದ 'ಎಂ.ಕೆ.ತ್ಯಾಗರಾಜ ಭಾಗವತರ್'ರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.ಪಂಚಭಾಷಾ ನಟಿಯಾದ ‘ಜೂಲಿ’ ಖ್ಯಾತಿಯ ನಟಿ ಲಕ್ಷ್ಮಿ ವೈ.ವಿ.ರಾವ್ ರ ಮಗಳು.

ವೈ.ವಿ.ರಾವ್ ಅಭಿನಯಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ 'ಗರುಡ ಗರ್ವ ಭಂಗಂ', 'ಗಜೇಂದ್ರ ಮೋಕ್ಷಂ','Rose of Rajasthan'...ಹೀಗೆ ಮುಂತಾದವು.

ವೈ.ವಿ.ರಾವ್ ನಿರ್ದೇಶಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ 'ಪಾಂಡವ ನಿರ್ವಾಣ'(೧೯೩೦), 'ಪಾಂಡವ ಅಜ್ಞಾತವಾಸ'(೧೯೩೦) ಮತ್ತು 'ಹರಿಮಾಯಾ'(೧೯೩೨ ರಲ್ಲಿ ಬೆಂಗಳೂರಿನಲ್ಲಿ ಗುಬ್ಬಿ ವೀರಣ್ಣರಿಂದ ನಿರ್ಮಾಣವಾದ ಚಿತ್ರ. ಎಂ.ವಿ.ರಾಜಮ್ಮ ನಾಯಕಿಯಾಗಿದ್ದರು).

ಪೌರಾಣಿಕ ತಮಿಳು ಚಿತ್ರವಾದ 'ಸಾವಿತ್ರಿ'ಯಲ್ಲಿ ಸುಪ್ರಸಿದ್ದ ಸಂಗೀತಗಾರ್ತಿ ಎಂ.ಎಸ್.ಸುಬ್ಬುಲಕ್ಷ್ಮಿಯವರು ನಾರದನ ಪಾತ್ರ ವಹಿಸಿ ಪ್ರಸಿದ್ದಿಯಾಗಿದ್ದರು. ಇದೇ ಚಿತ್ರದಲ್ಲಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ದರಾಗಿದ್ದ ಶಾಂತ ಆಪ್ಟೆ'ಯವರು ನಾಯಕಿಯಾಗಿ ಅಭಿನಯಿಸಿದ್ದರು.ನಮನ

ವೈ.ವಿ.ರಾವ್ ನಿರ್ದೇಶನದ ಕನ್ನಡ ಚಿತ್ರಗಳು[ಬದಲಾಯಿಸಿ]

ನಿಧನ[ಬದಲಾಯಿಸಿ]

ವೈ.ವಿ.ರಾವ್ ಅವರು ೧೯೭೩ ರಲ್ಲಿ ನಿಧನರಾದರು.