ಗಿರೀಶ್ ಕಾರ್ನಾಡ್

ವಿಕಿಪೀಡಿಯ ಇಂದ
Jump to navigation Jump to search
ಗಿರೀಶ್ ರಘುನಾಥ ಕಾರ್ನಾಡ್
ಗಿರೀಶ್ ರಘುನಾಥ ಕಾರ್ನಾಡ್
ಜನನಮಾಥೆರಾನ್, ಸಬರಕಾಂತ, ಮಹಾರಾಷ್ಟ್ರ
ವೃತ್ತಿನಾಟಕಕಾರ
ರಾಷ್ಟ್ರೀಯತೆಭಾರತೀಯ

ಜೀವನ[ಬದಲಾಯಿಸಿ]

ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ|ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ|ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದು ಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ೫ ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು.

 • ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ.
 • ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು.
 • ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು.
 • ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.


ನಾಟಕ ರಚನೆ[ಬದಲಾಯಿಸಿ]

ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕ ರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜುಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ.

ನಾಟಕಗಳು[ಬದಲಾಯಿಸಿ]

 • ೧. ಮಾ ನಿಷಾಧ - ಏಕಾಂಕ ನಾಟಕ
 • ೨. ಯಯಾತಿ - ೧೯೬೧
 • ೩. ತುಘಲಕ್ - ೧೯೬೪
 • ೪. ಹಯವದನ - ೧೯೭೨
 • ೫. ಅಂಜುಮಲ್ಲಿಗೆ - ೧೯೭೭
 • ೬. ಹಿಟ್ಟಿನ ಹುಂಜ ಅಥವಾ ಬಲಿ - ೧೯೮೦
 • ೭. ನಾಗಮಂಡಲ - ೧೯೯೦
 • ೮. ತಲೆದಂಡ - ೧೯೯೦
 • ೯. ಅಗ್ನಿ ಮತ್ತು ಮಳೆ - ೧೯೯೫
 • ೧೦. ಟಿಪ್ಪುವಿನ ಕನಸುಗಳು - ೧೯೯೭
 • ೧೧. ಒಡಕಲು ಬಿಂಬ - ೨೦೦೫
 • ೧೨. ಮದುವೆ ಅಲ್ಬಮ್
 • ೧೩. ಫ್ಲಾವರ್ಸ - ೨೦೧೨
 • ೧೪. ಬೆಂದ ಕಾಳು ಆನ್ ಟೋಸ್ಟ- ೨೦೧೨

ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ ಗಾಗಿ ಭಾರತದ ಸ್ವಾತಂತ್ರೋತ್ಸವದ ೫೦ ವರ್ಷದ ನೆನಪಿನ ಕಾರ್ಯಕ್ರಮಕ್ಕಾಗಿ ಬರೆದುಕೊಟ್ಟ ನಾಟಕ-ಟಿಪ್ಪುವಿನ ಕನಸುಗಳು.

'ಆತ್ಮ ಕಥೆ[ಬದಲಾಯಿಸಿ]

ಆಡಾಡತ ಆಯುಷ್ಯ - ೨೦೧೧

ಚಿತ್ರರಂಗ[ಬದಲಾಯಿಸಿ]

"ಸಂಸ್ಕಾರ" ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ.ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ ಪ್ರಾಣೇಶಾಚಾರ್ಯರದು.ಪಿ.ಲಂಕೇಶಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ. ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ.

 • ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು.
 • ಮುಂದೆ "ತಬ್ಬಲಿಯು ನೀನಾದೆ ಮಗನೆ", "ಕಾಡು", "ಒಂದಾನೊಂದು ಕಾಲದಲ್ಲಿ"ಚಿತ್ರಗಳನ್ನು ನಿರ್ದೇಶಿಸಿದರು."ಕಾಡು" ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು.
 • ನಂತರ "ಉತ್ಸವ", "ಗೋಧೂಳಿ"ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು.
 • ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ "ಕಾನೂರು ಹೆಗ್ಗಡಿತಿ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.
 • ಇದಲ್ಲದೆಕನಕ ಪುರಂದರ, ದ.ರಾ.ಬೇಂದ್ರೆ ಹಾಗು ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು.
 • ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು.
 • ೨೦೦೭ ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.

ಇತರೆ[ಬದಲಾಯಿಸಿ]

 • ಕಾರ್ನಾಡ್ ಅವರಿಗೆ ಪ್ರಶಸ್ತಿ ಬಂದಾಗ ಸೌಜನ್ಯದಿಂದಲೇ ಮರಾಠಿವಿಜಯತೆಂಡೂಲ್ಕರ್ ಅವರಂಥವರಿಗೆ ಈ ಪ್ರಶಸ್ತಿ ಬರಬೇಕಿತ್ತು ಎಂದು ಹೇಳಿ ದೊಡ್ಡತನ ಮೆರೆದಿದ್ದರು.
 • ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಕುವೆಂಪುಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು ಆರ್ ಅನಂತಮೂರ್ತಿಯವರ ಸಂಸ್ಕಾರ ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೆ ಕಾರ್ನಾಡ್ ಪಾತ್ರರಾಗಿದ್ದಾರೆ.
 • ತಮ್ಮ ೪೨ರ ವಯಸ್ಸಿನಲ್ಲಿ ಕೊಡಗಿನ ವೀರಯೋಧ ಕೋದಂಡೇರ ಗಣಪತಿಯವರ ಪುತ್ರಿ, ಡಾ. ಸರಸ್ವತಿ ಗಣಪತಿಯವರನ್ನು ಅಧಿಕೃತವಾಗಿ ಮದುವೆಯಾದ ಗಿರೀಶರಿಗೆ ೨ ಮಕ್ಕಳು, ಶಾಲ್ಮಲಿ ರಾಧಾ ಮತ್ತು ರಘು ಅಮಯ್. ೧೦ ವರ್ಷಗಳ ಕಾಲ, ಲಿವ್-ಇನ್ ಆಗಿ ಸಂಸಾರ ನಡೆಸಿದ ಹಿರಿಮೆ ಕಾರ್ನಾಡರದು.[೧]
 • ತುಘಲಕ್ ನಾಟಕವನ್ನು ತಮ್ಮ ಮಿತ್ರ ಮತ್ತು ಸಹಾಯಕ ನಿರ್ದೇಶಕ ಕೃಷ್ಣ ಬಸರೂರುರೊಡಗೂಡಿ ಬರೆದಿದ್ದಾಗಿ, ಆ ನಾಟಕದ ಅರ್ಪಣೆಯಲ್ಲಿ ಹೇಳಿದ್ದಾರೆ.
 • ಒಂದಾನೊಂದು ಕಾಲದಲ್ಲಿ ಚಿತ್ರವನ್ನು ೧೯೭೭ರಲ್ಲಿ ನಿರ್ದೇಶಿಸುವಾಗ ಕಳರಿಪಯಟ್ಟು ಮತ್ತು ಮುಂತಾದ ಸಾಹಸಕಲೆಗಳನ್ನು ಮೊದಲ ಬಾರಿ ಕನ್ನಡ ತೆರೆಯಲ್ಲಿ ಅಳವಡಿಸಿದ ಹಿರಿಮೆ ಕಾರ್ನಾಡರದ್ದು.

ಕಾರ್ನಾಡರು ಅಭಿನಯಿಸಿದ ಪ್ರಮುಖ ಚಲನಚಿತ್ರಗಳು[ಬದಲಾಯಿಸಿ]

ಚಿತ್ರದ ಹೆಸರು ವರ್ಷ ಪಾತ್ರ ಭಾಷೆ ಉಲ್ಲೇಖ
Tiger Zinda Hai 2017 Shenoy Hindi
Shivaay 2016 Anushka's father Hindi
24 2016 Sathya's grandfather Tamil
Dheera Rana Vikrama 2015 Home Minister Of Karnataka
Rudra Tandava 2015 Chiranjeevi Sarja's Father
Savari 2 2014 Vishwanath
Samrat & Co. 2014
Yaare Koogadali 2012
Mugamoodi 2012 Tamil
Ek Tha Tiger 2012 Dr. Shenoy (RAW Chief)
Kempe Gowda 2011 Mahadev Gowda (Kavya's Father) Kannada
Narthagi 2011 Tamil
Komaram Puli 2010 Narasimha rao (Prime minister) Telugu
Life Goes On 2009 Sanjay
Aashayein 2009 Parthasarthi
8 x 10 Tasveer 2009 Anil Sharma
Aa dinagalu 2007 Girish Nayak Kannada
Tananam Tananam 2006 Shastry Kannada
Dor 2006 Randhir Singh
Iqbal 2005 Guruji
Shankar Dada MBBS 2004 Satya Prasad Telugu
Chellamae 2004 Rajasekhar Tamil
Hey Ram 2000 Uppilli Iyengar Tamil
Pukar 2000 Mr. Rajvansh
Prathyartha 1999 Sheshanag Dixit (Home Minister of India)
AK-47 1999 Vishwanath Rao (Shiva Rajkumar's Father) Kannada
Aakrosh: Cyclone of Anger 1998 Rajwansh Shashtri
April Fool 1998 Kannada
China Gate 1998 Forest Officer Sunder Rajan
Minsaara Kanavu 1997 Amal Raj Tamil
Ratchagan 1997 Sriram Tamil
The Prince 1996 Vishwanath Malayalam
Aatank 1996 Inspector Khan
Dharma Chakram 1996
Sangeetha Sagara Ganayogi Panchakshara Gavai 1995 Hanagal Kumaraswamiji
Aagatha 1994 Psychiatrist Kannada
Kadhalan 1994 Kakarla Satyanarayana Murti Tamil
Praana Daata 1993
Cheluvi 1992 Village Headman
Gunaa 1991
Antarnaad 1991
Brahma 1991
Chaitanya 1991
Nehru: The Jewel of India 1990
ಸಂತ ಶಿಶುನಾಳ ಷರೀಫ 1990 ಗುರು ಗೋವಿಂದಭಟ್ಟರು ಕನ್ನಡ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟ ಗೌರವ
ಮಿಲ್ ಗಯೀ ಮಂಜಿಲ್ ಮುಝೆ 1989
ಆಕರ್ಷಣ್ 1988
ಸೂತ್ರಧಾರ್ 1987 ಜಮೀನ್ದಾರ
ನಾನ್ ಅದಿಮೈ ಇಲ್ಲೈ 1986 ರಜನೀಕಾಂತ್ರ ಮಾವ ತಮಿಳು
ನೀಲ ಕುರಿಂಜಿ ಪೋತಪ್ಪೋಳ್ 1986 ಅಪ್ಪು ಮೆನನ್ ಮಲಯಾಳಂ
ಸುರ್ ಸಂಗಮ್ 1985 ಪಂಡಿತ್ ಶಿವಶಂಕರ ಶಾಸ್ತ್ರಿ
ಮೇರಿ ಜಂಗ್ 1985 ದೀಪಕ್ ವರ್ಮ
ಜಮಾನ 1985 ಸತೀಶ್ ಕುಮಾರ್
ನೀ ತಂದ ಕಾಣಿಕೆ 1985 ಡಾ.ವಿಷ್ಣುವರ್ಧನ್ರ ತಂದೆ
ಡೈವೋರ್ಸ್ 1984
ತರಂಗ್ 1984 ದಿನೇಶ್
ಅನ್ವೇಷಣೆ 1983 ರೊಟ್ಟಿ
ಏಕ್ ಬಾರ್ ಚಲೇ ಆವೋ 1983 ದೀನದಯಾಳ್
ಆನಂದ ಭೈರವಿ 1983 ನಾರಾಯಣ ಶರ್ಮ
ತೇರೀ ಕಸಮ್ 1982 ರಾಕೇಶ್
ಅಪರೂಪ್ 1982
ಉಂಬರ್ಥಾ 1982 ಅಡ್ವೋಕೇಟ್ ಸುಭಾಷ್ ಮಹಾಜನ್ ಮರಾಠಿ
ಶಮಾ 1981 ನವಾಬ್ ಯೂಸುಫ್ ಖಾನ್
ಅಪ್ನೇ ಪರಾಯೇ 1980 ಹರೀಶ್ ಹಿಂದಿ
ಮನ್ ಪಸಂದ್ 1980 ಖಿನಾಥ್
ಆಶಾ 1980 ದೀಪಕ್
ಬೇಕಸೂರ್ 1980 ಡಾ. ಆನಂದ್ ಭಟ್ನಾಗರ್
ರತ್ನದೀಪ್ 1979
ಸಂಪರ್ಕ್ 1979 ಹೀರಾ
ಜೀವನ್ಮುಕ್ತ್ 1977 ಅಮರಜೀತ್ ಹಿಂದಿ
ಸ್ವಾಮಿ 1977 ಘನಶ್ಯಾಮ್ ಹಿಂದಿ
ಮಂಥನ್ 1976 ಡಾ. ರಾವ್ ಹಿಂದಿ
ನಿಶಾಂತ್ 1975 ಸ್ಕೂಲ್ ಮಾಸ್ಟರ್ ಹಿಂದಿ
ಜಾದೂ ಕಿ ಶಂಖ್ 1974 ಹಿಂದಿ
ವಂಶವೃಕ್ಷ 1971 ಕನ್ನಡ
ಸಂಸ್ಕಾರ 1970 ಪ್ರಾಣೇಶಾಚಾರ್ಯ ಕನ್ನಡ

ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. "ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಸೋಲು ಗೆಲುವು ಎರಡೂ ಅಡಗಿದೆ." ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ.

ಪ್ರಶಸ್ತಿಗಳ ಗೌರವ ದೊರೆಕಿದೆ.

 • ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ೧೯೮೮-೯೩ ಕಾರ್ಯನಿರ್ವಹಿಸಿದ್ದಾರೆ.
 • ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
 • ೨೦೦೮ -೦೯ ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಡಳಿ ಘೋಷಿಸಿದ್ದ " ಪುಟ್ಟಣ್ಣ ಕಣಗಾಲ್ "ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಗಿರೀಶ್ ಕಾರ್ನಾಡ್ ನಿರಾಕರಿಸಿದ್ದಾರೆ .
 • ಅವರ ಜೀವಮಾನದ ಸಾಧನೆಗಾಗಿ ಕೆ.ಎಸ್.ಆರ್.ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಲ ಕ್ಷಣಗಳಲ್ಲಿಯೇ ಹಿಂದಕ್ಕೆ ಪಡೆದು ಅದನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಲಾಗಿತ್ತು.(ದಾಸ್ ಅವರಿಗೆ ಪ್ರಶಸ್ತಿ ನೀಡಿದ್ದನ್ನು ಘೋಷಿಸಿದ ಕೂಡಲೆ "ಕೆ.ಎಸ್.ಆರ್.ದಾಸ್" ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿಲ್ಲವೆಂಬುದು ಪತ್ರಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಅದನ್ನು ಕೂಡಲೆ ಹಿಂದೆ ಪಡೆದು ಅದನ್ನು ಕಾರ್ನಾಡ್ ಅವರಿಗೆ ಭಾರ್ಗವ ನೀಡಿದ್ದರು.
 • ಟಾಟಾ ಲಿಟರೇಚರ್ ಲೈವ ಜೀವಮಾನ ಸಾಧನೆ (ಚಿತ್ರೋದ್ಯಮ)-2017

[೧] [೨] [೩] [೪] [೫]

ಅಭಿನಯಿಸಿದ ತೆಲುಗು ಚಿತ್ರಗಳು[ಬದಲಾಯಿಸಿ]

 • http://about-jati.blogspot.in/