ವಿಷಯಕ್ಕೆ ಹೋಗು

ಆ ದಿನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆ ದಿನಗಳು
ನಿರ್ದೇಶನಕೆ.ಎಂ. ಚೈತನ್ಯ
ನಿರ್ಮಾಪಕಸಯ್ಯದ್ ಅಮಾನ್, ಎಮ್.ಎಸ್. ರವೆಎಂದ್ರ
ಚಿತ್ರಕಥೆಅಗ್ನಿ ಶ್ರೀಧರ್, ಗಿರೀಶ್ ಕಾರ್ನಾಡ್
ಕಥೆಅಗ್ನಿ ಶ್ರೀಧರ್
ಸಂಭಾಷಣೆಅಗ್ನಿ ಶ್ರೀಧರ್
ಪಾತ್ರವರ್ಗಚೇತನ್ ಅರ್ಚನ ಅತುಲ್‌ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶಿಷ್ ವಿದ್ಯಾರ್ಥಿ, ಗಿರೀಶ್ ಕಾರ್ನಾಡ್, ವಿನಯಾ ಪ್ರಕಾಶ್
ಸಂಗೀತಇಳಯರಾಜ
ಛಾಯಾಗ್ರಹಣಎಚ್.ಸಿ. ವೇಣು
ಸಂಕಲನಪಿ. ಹರಿದಾಸ್
ಬಿಡುಗಡೆಯಾಗಿದ್ದು೨೦.೧೦.೨೦೦೭
ಚಿತ್ರ ನಿರ್ಮಾಣ ಸಂಸ್ಥೆಮೇಘಾ ಮೋವೀಸ್
ಸಾಹಿತ್ಯಕೆ. ಕಲ್ಯಾಣ್, ಸುಮನಾ ಕಿತ್ತೂರ್
ಹಿನ್ನೆಲೆ ಗಾಯನಇಳಯರಾಜ, ನಂದಿತಾ, ವಿಜಯ್ ಏಸುದಾಸ್

ಕಥೆಯ ಹಿನ್ನೆಲೆ

[ಬದಲಾಯಿಸಿ]

೧೯೮೬ರ ಸಮಯದಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಅಗ್ನಿ ಶ್ರೀಧರ್ ಬರೆದಿರುವ ದಾದಾಗಿರಿಯ ದಿನಗಳು ಪುಸ್ತಕದ ಕಥೆಯ ಮೇಲೆ ಈ ಚಿತ್ರವನ್ನು ಮಾಡಲಾಗಿದೆ. ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ಆ ದಿನಗಳು ತೆರೆ ಕಂಡ ದಿನ ತೆಗೆದ ಛಾಯಾಚಿತ್ರ

ಚೇತನ್ ಒಬ್ಬ ಸಭ್ಯ ಯುವಕ. ತನಗಿ೦ತ ಕೆಲವು ತಿ೦ಗಳುಗಳಷ್ಟು ವಯಸ್ಸಿನಲ್ಲಿ ದೊಡ್ಡವಳಾದ ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಆತನ ತ೦ದೆ ಒಬ್ಬ ಬಿಸಿನೆಸ್ ಮ್ಯಾನ್. ತ೦ದೆಗೆ ತನ್ನ ಮಗ ಪ್ರೀತಿಸುತ್ತಿರುವ ಹುಡುಗಿಯನ್ನು ಕ೦ಡರೆ ಆಗುವುದಿಲ್ಲ, ಕಾರಣ ಆಕೆಯ ವಯಸ್ಸು ಹಾಗು ಅ೦ತಸ್ತು. ಆದರೂ ಸಹ ಚೇತನ್ ತನ್ನ ತ೦ದೆಯನ್ನು ವಿರೋಧಿಸಿ ಆಕೆಯನ್ನು ಮದುವೆಯಾಗುವ ಇಚ್ಚೆ ವ್ಯಕ್ತಪಡಿಸುತ್ತಾನೆ. ಇದನ್ನು ಸಹಿಸದ ಚೇತನ್ ನ ತ೦ದೆ ಕೋತ್ವಾಲ್ ರಾಮಚ೦ದ್ರನಿಗೆ ತನ್ನ ಮಗ ಪ್ರೀತಿಸುತ್ತಿರುವ ಹುಡುಗಿಯನ್ನು ಬೆದರಿಸುವ೦ತೆ ಸುಫಾರಿ ಕೊಡುತ್ತಾನೆ. ಕೊನೆಗೆ ಕೋತ್ವಾಲ್ ನನ್ನ್ ಕೊಲೆಮಾಡಿ ವಿವಾಹ ಆಗುತ್ತದೆ