ರಮೇಶ್ ಭಟ್
ಗೋಚರ
ರಮೇಶ್ ಭಟ್ | |
|---|---|
ನಟ ರಮೇಶ್ ಭಟ್ | |
| ಜನನ | ಕುಂದಾಪುರ, ಕರ್ನಾಟಕ ರಾಜ್ಯ,ಭಾರತ |
| ರಾಷ್ಟ್ರೀಯತೆ | ಭಾರತೀಯ |
| ವೃತ್ತಿ | ನಟ, ಚಿತ್ರ ನಿರ್ದೇಶಕ, ನಿರ್ಮಾಪಕ |
ರಮೇಶ್ ಭಟ್ ಕನ್ನಡ ಚಲನಚಿತ್ರರಂಗದ ಒಬ್ಬ ಪ್ರಮುಖ ನಟರು. ಕರ್ನಾಟಕದ ಕುಂದಾಪುರದವರಾದ ಅವರು ಅನೇಕ ಹಾಸ್ಯ ಮತ್ತು ಪೋಷಕಪಾತ್ರಗಳಲ್ಲಿ ನಟಿಸಿದ್ದಾರೆ, ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಅವರ ಅಭಿನಯದ ಚಲನಚಿತ್ರಗಳಲ್ಲಿ ನೋಡಿ ಸ್ವಾಮಿ ನಾವಿರೋದು ಹೀಗೆ, ಗಣೇಶನ ಮದುವೆ, ಗಣೇಶ ಸುಬ್ರಹ್ಮಣ್ಯ ಸೇರಿವೆ. ೧೯೯೦ರ ದಶಕದಲ್ಲಿ ದೂರದರ್ಶನದ ಧಾರಾವಾಹಿ 'ಕ್ರೇಝಿ ಕರ್ನಲ್' ದಲ್ಲಿ ಅಭಿನಯಕ್ಕಾಗಿ ಜನಪ್ರಿಯತೆ ಗಳಿಸಿದವರು.
ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಕಾರಣದಿಂದ ಅವರು ಶಂಕರ್ ನಾಗ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಇದರ ಫಲವಾಗಿ ಅನೇಕ ನಾಟಕಗಳು, ಚಲನಚಿತ್ರಗಳು ಹಾಗೂ ಟಿವಿ ಧಾರಾವಾಹಿಗಳಿಗೆ ಅವಕಾಶ ದೊರೆಯಿತು. ಅವರು 'ಮಾಲ್ಗುಡಿ ಡೇಸ್' ಎಂಬ ಪ್ರಸಿದ್ಧ ದೂರದರ್ಶನ ಧಾರಾವಾಹಿಗೆ ಸಹಾಯಕ ನಿರ್ದೇಶಕರಾಗಿ ಸಹ ಕಾರ್ಯನಿರ್ವಹಿಸಿದ್ದರು. ಜೊತೆಗೆ, 1983ರಲ್ಲಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡ 'ಪರಮೇಶಿ ಪ್ರೇಮ ಪ್ರಸಂಗ' ಎಂಬ ಚಲನಚಿತ್ರವನ್ನು ಸಹ ನಿರ್ದೇಶಿಸಿದರು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ರಮೇಶ್ ಭಟ್ ಐ ಎಮ್ ಡಿ ಬಿನಲ್ಲಿ