ಎನ್.ಲಕ್ಷ್ಮೀನಾರಾಯಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎನ್.ಲಕ್ಷ್ಮೀನಾರಾಯಣ್ ("ಎನ್ನೆಲ್ ")ಕನ್ನಡ ಚಿತ್ರರಂಗದ ಮೇರು ನಿರ್ದೇಶಕರಲ್ಲಿ ಒಬ್ಬರು.ಕನ್ನಡ ಚಿತ್ರರಂಗಕ್ಕೆ ಕಲಾತ್ಮಕತೆಯ ಸ್ಪರ್ಶ ಕೊಟ್ಟು,ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಇವರ ಪಾಲು ದೊಡ್ಡದು. ೧೯೬೪ರಲ್ಲಿ ವಾದಿರಾಜ್ ನಿರ್ಮಾಣದ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರಗಳ ನಿರ್ದೇಶನಕ್ಕೆ ಕಾಲಿಟ್ಟರು.

ಹಿನ್ನೆಲೆ[ಬದಲಾಯಿಸಿ]

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪ್ರತಿಭಾವಂತರ ಕುಟುಂಬದಲ್ಲಿ ಒಬ್ಬರಾಗಿ ಜನಿಸಿದ ಲಕ್ಷ್ಮೀನಾರಾಯಣ್‌ಗೆ ಬಾಲ್ಯದಿಂದಲೇ ಕಲೆಯ ಸೆಳೆತ ಹೆಚ್ಚು.ಹೀಗಾಗಿ ಚಿಕ್ಕಂದಿನಿಂದಲೇ ಛಾಯಾಗ್ರಹಣ, ಸಿನಿಮಾ ತಾಂತ್ರಿಕತೆಯನ್ನು ಅಭ್ಯಾಸ ಮಾಡಿದರು.

ಚಿತ್ರರಂಗ ಪ್ರವೇಶ[ಬದಲಾಯಿಸಿ]

ಚಿತ್ರರಂಗದಲ್ಲಿದ್ದ ತಮ್ಮ ಸೋದರಮಾವ ಬಿ.ಆರ್.ಕೃಷ್ಣಮೂರ್ತಿಯವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು.ಇವರು ಸಹನಿರ್ದೇಶನ ಮಾಡಿದ ಮೊದಲ ಚಿತ್ರ ಶ್ರೀರಾಮ ಪೂಜ.ನಂತರ ಆರ್.ನಾಗೇಂದ್ರರಾಯರ ಸಹ ನಿರ್ದೇಶಕರಾಗಿ ದುಡಿದರು.ಕನ್ನಡ ಚಿತ್ರರಂಗಕ್ಕೆ ಪ್ರಯೋಗಶೀಲತೆಯನ್ನು ಅಳವಡಿಸಬೇಕೆಂಬ ಹಂಬಲದಿಂದ,'ಬ್ರಿಟಿಷ್ ಫಿಲಂ ಇನ್‌ಸ್ಟಿಟ್ಯೂಟ್' ಸೇರಿ ತರಬೇತಿ ಪಡೆದರು.ಇವರ ನಿರ್ದೇಶನದ ಬ್ಲಿಸ್ ಎಂಬ ಮೂಕಿ ಚಿತ್ರ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಪ್ರದರ್ಶನ ಕಂಡಿತು.

ನಿರ್ದೇಶಿಸಿರುವ ಚಿತ್ರಗಳು[ಬದಲಾಯಿಸಿ]

ಸಾಧನೆಗಳು[ಬದಲಾಯಿಸಿ]

ಪ್ರಶಸ್ತಿ/ಪುರಸ್ಕಾರಗಳು[ಬದಲಾಯಿಸಿ]

  • ಅಬಚೂರಿನ ಪೋಸ್ಟಾಫೀಸು ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡರ ಪ್ರಶಸ್ತಿ ದೊರೆತಿದೆ.
  • ಬೆಟ್ಟದ ಹೂವು ಚಿತ್ರಕ್ಕೆ ರಾಷ್ಟ್ರಪತಿಗಳ ರಜತ ಪದಕ ದೊರೆತಿದೆ.
  • "ಎನ್ನೆಲ್ " ಅವರ ಉಯ್ಯಾಲೆ ಮತ್ತು ಮುಕ್ತಿ ಚಿತ್ರಗಳು ೧೯೬೯-೭೦ ರ ದ್ವಿತೀಯ ಅತ್ಯುತ್ತಮ ರಾಜ್ಯ ಚಲನಚಿತ್ರ ಪ್ರಶಶ್ತಿಯನ್ನು ಹಂಚಿಕೊಂಡವು.

ಒಬ್ಬ ನಿರ್ದೇಶಕನ ಎರಡು ಚಿತ್ರಗಳು ಒಂದೇ ಪ್ರಶಸ್ತಿಯನ್ನು ಹಂಚಿಕೊಂಡ ಅಪರೂಪದ ದಾಖಲೆ ಮತ್ತೆ ಪುನರಾವರ್ತನೆಯಾಗಲಿಲ್ಲ.

ಇತರ ಆಸಕ್ತಿಗಳು[ಬದಲಾಯಿಸಿ]

ದೇಶ-ವಿದೇಶಗಳಲ್ಲಿನ ಚಲನಚಿತ್ರ ಕ್ಷೇತ್ರದ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದರು.ಚಲನಚಿತ್ರ ಮಾಧ್ಯಮದಲ್ಲಿ ಕ್ಲಾಸಿಕ್ ಅಂಶಗಳನ್ನು ಗುರುತಿಸಿ,ಅದರ ಬೆಳವಣಿಗೆ ಮತ್ತು ಸಂವಹನಕ್ಕೆ ನಿರಂತರ ಶ್ರಮಿಸುತ್ತಿದ್ದರು."ಫಿಲಂ ಸೊಸೈಟಿ" ಆಂದೋಲನವನ್ನು ಕರ್ನಾಟಕದಲ್ಲಿ ಶುರು ಮಾಡಿದರು.ಕರ್ನಾಟಕದಲ್ಲಿ ಚಲನಚಿತ್ರೋತ್ಸವಗಳು ಪ್ರಾರಂಭವಾಗಲು ಕಾರಣಕರ್ತರಾದರು.ನಿರ್ದೇಶಕನ ವಿದೇಶಯಾತ್ರೆ ಅವರ ಪ್ರಮುಖ ಕೃತಿ.ಫೆಬ್ರುವರಿ ೧೬, ೧೯೯೧ರಲ್ಲಿ ಅಕಾಲಿಕವಾಗಿ ನಿಧನರಾದರು.