ವಿಷಯಕ್ಕೆ ಹೋಗು

ನಾಂದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಂದಿ
ನಾಂದಿ
ನಿರ್ದೇಶನಎನ್.ಲಕ್ಷ್ಮೀನಾರಾಯಣ್
ನಿರ್ಮಾಪಕವಾದಿರಾಜ್-ಜವಾಹರ್
ಪಾತ್ರವರ್ಗರಾಜಕುಮಾರ್ ಹರಿಣಿ, ಕಲ್ಪನಾ ಬಾಲಕೃಷ್ಣ, ವಾದಿರಾಜ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಆರ್.ಎನ್.ಕೃಷ್ಣ
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭಾರತಿ ಫಿಲಂಸ್
ಸಾಹಿತ್ಯಆರ್.ಎನ್.ಜಯಗೋಪಾಲ್
ಇತರೆ ಮಾಹಿತಿಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ ಮೊದಲ ಕನ್ನಡ ಚಿತ್ರ

ನಾಂದಿ (೧೯೬೪) , ಶ್ರೀಯುತ ಎನ್.ಲಕ್ಶ್ಮಿನಾರಾಯಣ ಅವರು ನಿರ್ದೇಶಿಸಿದ ಒಂದು ಅತ್ಯುತ್ತಮ ಚಲನಚಿತ್ರ. ಶ್ರೀ ಭಾರತಿ ಚಿತ್ರ ಲಾಂಚನದಡಿ ವಾದಿರಾಜ್ ಮತ್ತು ಜವಾಹರ್ ಸಹೋದರರ ನಿರ್ಮಾಣದಲ್ಲಿ ಬಂದ ಚಿತ್ರ. ಕೇವಲ ಮನೋರಂಜನೆಯೊಂದೇ ಚಿತ್ರದ ಗುರಿಯಲ್ಲ, ಅದು ಜನರ ಸಾಮಾಜಿಕ ಆಲೋಚನೆಯ ದೃಷ್ಟಿಕೋನದೆಡೆಗೆ ಕೂಡಾ ಸೆಳೆಯಬೇಕು ಎಂಬುದಕ್ಕೆ ನಾಂದಿ ಒಂದು ಉತ್ತಮ ಉದಾಹರಣೆ. "ಕಿವುಡ-ಮೂಗರ" ಸಮಸ್ಯೆಯ ಕುರಿತಾದ ಚಿತ್ರ ನಾಂದಿ.

ಚಿತ್ರಕಥೆ

[ಬದಲಾಯಿಸಿ]

ಶಾಲಾ ಮಾಸ್ತರರ ಸರಳ ಜೀವನದ ಕಥೆ ನಾಂದಿ. ಮೊದಲ ಹೆರಿಗೆಯ ಸಮಯದಲ್ಲಿ ಪತ್ನಿಯನ್ನು ಕಳೆದುಕೊಳ್ಳುವ ಈತ, ಮರುಮದುವೆಯಾಗುವಾಗ ಉದ್ದೇಶಪೂರ್ವಕವಾಗಿ ಕಿವುಡು ಮೂಗಿಯ ಹುಡುಗಿಯನ್ನು ಮದುವೆಯಾಗುತ್ತಾನೆ. ಅಂತಹ ಯುವತಿಯ ಜೀವನಕ್ಕೆ ಆಸರೆಯಾಗಿ ನಿಲ್ಲುತ್ತಾನೆ. ಶಾಲಾಮಾಸ್ತರನಾಗಿ ಡಾ.ರಾಜ್ ಕುಮಾರ್, ಮೊದಲ ಪತ್ನಿಯಾಗಿ ಕಲ್ಪನಾ ಹಾಗು ಕಿವುಡು-ಮೂಕ ಹುಡುಗಿಯಾಗಿ ಹರಿಣಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ಪ್ರತೀ ಘಟನೆ ಪ್ರತೀ ಪಾತ್ರ ಒಂದು ಸಂದೇಶವನ್ನು ಹೊಂದಿದೆ. ಉದಾಹರಣೆ: ಹತ್ತು-ಹನ್ನೆರಡು ಮಕ್ಕಳನ್ನು ಪಡೆದು ಕಷ್ಟ ಪಡುವ ಬಾಲಕೃಷ್ಣ ಕುಟುಂಬ ಯೋಜನೆಯ ಬಗ್ಗೆ ಆಗಲೇ ಯೋಚಿಸುವಂತೆ ಮಾಡಿದೆ.

ಚಿತ್ರದ ಹಾಡುಗಳು

[ಬದಲಾಯಿಸಿ]
  • ಚಂದ್ರಮುಖೀ ಪ್ರಾಣಸಖಿ ಚತುರೆ ನೀ ಹೇಳೇ...
  • ಹಾಡೊಂದ ಹಾಡುವೆ ನೀ ಕೇಳು ಮಗುವೇ....
  • ಉಡುಗೊರೆಯೊಂದಾ ತಂದಾ....

ಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು.

೧೯೬೪ರ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ "ನಾಂದಿ" ಚಿತ್ರಕ್ಕೆ ಪ್ರಶಸ್ತಿ ಬರಬಹುದೆಂದು ಕನ್ನಡಿಗರು ಕಾತರರಾಗಿದ್ದರು,ಆದರೆ ಆಗಿನ ಆಯ್ಕೆ ಪದ್ದತಿಯ ದೋಷದಿಂದಾಗಿ ನಾಂದಿಗೆ ಪ್ರಶಸ್ತಿ ಬರಲಿಲ್ಲ,ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಟ್ಟಿಯನ್ನು ವಿರೋದಿಸಿ ಸ್ವಯಂ ಪ್ರೇರಣೆಯಿಂದ ಬೆಂಗಳೂರಿನ ಸಿನಿಮಾ ಪ್ರೇಮಿಗಳು ಬೀದಿಗಿಳಿದು ಪ್ರತಿಭಟಿಸಿದರು."ನಮನ

"https://kn.wikipedia.org/w/index.php?title=ನಾಂದಿ&oldid=1179688" ಇಂದ ಪಡೆಯಲ್ಪಟ್ಟಿದೆ