ವಿಷಯಕ್ಕೆ ಹೋಗು

ವಿಜಯಭಾಸ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಭಾಸ್ಕರ್

ಕನ್ನಡ ಚಿತ್ರ ಸಂಗೀತದ ಸಾಧ್ಯತೆಯನ್ನು ಗಮನಾರ್ಹವಾಗಿ ವಿಸ್ತರಿಸಿದ ಹೆಗ್ಗಳಿಕೆಯ ಸಂಗೀತ ನಿದೇಶಕ ವಿಜಯಭಾಸ್ಕರ್.(೧೯೩೧-೨೦೦೨)

ವಿಜಯಭಾಸ್ಕರ್ ಜನಿಸಿದ್ದು ಬೆಂಗಳೂರಿನಲ್ಲಿ ೧೯೩೧ರ ಸೆಪ್ಟೆಂಬರ್ ೭ ರಂದು.ತಂದೆ ಕೃಷ್ಣ ಮೂರ್ತಿ ,ತಾಯಿ ಜೀಜಾಬಾಯಿ,ಮನೆಯಲ್ಲಿ ಸದಾ ಸಂಗೀತದ ವಾತಾವರಣ.ಮನೆಯ ಹತ್ತಿರದಲ್ಲಿ ಸದಾ ಹರಿಕತೆ,ಭಜನೆ,ಭಕ್ತಿಗೀತೆಗಳ ಅನುರಣನ.ಸಂಗೀತದತ್ತ ಆಸಕ್ತಿ ಸಹಜವಾಗಿಯೇ ಬೆಳೆಯಿತು..ಸೌತ್ ಪೆರೇಡ್ ಮೈದಾನದಲ್ಲಿ ನಡೆಯುತಿದ್ದ ಪಾಶ್ಚಿಮಾತ್ಯ ಮಾದರಿಯ ಬ್ರಾಸ್ ಬ್ಯಾಂಡ್ ಇದಕ್ಕೆ ಇಂಬು ನೀಡಿತು.ತಂದೆಯ ಆಸೆಯಂತೆ ಇಂಜಿನಿಯರಿಂಗ್ ಓದಿದರು,ನಡುವೆಯೇ ಸಂಗೀತ ಕಲಿತರು.ನಾರಾಯಣ ಸ್ವಾಮಿಗಳ ಬಳಿ ಕರ್ನಾಟಕ ಸಂಗೀತ ,ಜಿ,ವಿ,ಭಾವೆಯವರ ಬಳಿ ಹಿಂದೂಸ್ತಾನಿ,ಲೀನೀ ಹಂಟ್ ಬಳಿ ಪಾಶ್ಚಾತ್ಯ ಸಂಗೀತ ಕಲಿತ ಅವರು,ಮ್ಯಕಾನಿಕಲ್ ಇಂಜಿನಿಯರಿಂಗ್ ಮುಗಿಸುವ ವೇಳೆಗೆ ಸಂಗೀತದಲ್ಲಿಯೂ ಪ್ರೌಡಿಮೆ ಪಡೆದಿದ್ದರು.ಈಗ ಆಯ್ಕೆಯ ಪ್ರಶ್ನೆ ಬಂದಾಗ ವಿಜಯಭಾಸ್ಕರ್ ಸಂಗೀತವನ್ನೇ ಆರಿಸಿಕೊಂಡರು.ಭವಿಷ್ಯವನ್ನು ಅರಸಿ ಮುಂಬೈಗೆ ತೆರಳಿದರು.ಅಲ್ಲಿ ನೌಷಾದ್ ಸಹಾಯಕರಾಗಿ ಪ್ರೌಡಿಮೆಯನ್ನು ಪಡೆದರು.ಪಿಯಾನೊ ನುಡಿಸುವುದರಲ್ಲಿ ಪರಿಣತಿ ಹೊಂದಿದ್ದ ಇವರು, ಪ್ರಖ್ಯಾತ ಸಾಹಿತಿಗಳಾದ ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್.ಎಸ್, ಅವರ ಕೃತಿಗಳನ್ನು ಚಲನಚಿತ್ರಕ್ಕೆ ಅಳವಡಿಸಿದವರಲ್ಲಿ ಪ್ರಮುಖರು.

೧೯೫೪ರಲ್ಲಿ ತೆರೆಕಂಡ "ಶ್ರೀ ರಾಮ ಪೂಜಾ "ಇವರಿಗೆ ಸ್ವತಂತ್ರ್ಯ ಸಂಗೀತ ನಿರ್ದೇಶನಕ್ಕೆ ಅವಕಾಶ ಕಲ್ಪಿಸಿದ ಮೊದಲ ಚಿತ್ರ.ಈ ಚಿತ್ರಕ್ಕೆ ಅಚ್ಹ ಕನ್ನಡಿಗರದ್ದೇ ಆದ "ಜಯ ಮಾರುತಿ ವಾದ್ಯ ವ್ರಂದ"ವನ್ನು ಬಳಸಿದರು.ಕನ್ನಡ ವಾದ್ಯಗಾರನ್ನೇ ಸಂಪೂರ್ಣ ಬಳಸಿಕೊಂಡು ಸಂಗೀತ ನಿರ್ದೇಶನ ಮಾಡಿದ ಮೊದಲಿಗರು ವಿಜಯಭಾಸ್ಕರ್.ನಂತರ "ಭಾಗ್ಯ ಚಕ್ರ"ಚಿತ್ರಕ್ಕೆ ಅವರು ಸಂಗೀತ ಮಾತ್ರವಲ್ಲ ಚಿತ್ರ ಕಥೆ -ಸಂಭಾಷಣೆ ಕೂಡಾ ಬರೆದರು.ಹಿಂದಿ ಚಿತ್ರ ರಂಗದ ನಿಕಟ ಪರಿಚಯವಿದ್ದ ಅವರು ಶಾಟ್ ಡಿವಿಜನ್ ಅನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿದ್ದರು."ರಾಣಿ ಹೊನ್ನಮ್ಮ " ಅವರಿಗೆ ಹೆಸರು ತಂದು ಕೊಟ್ಟಿತು.ಅವರ ಸಾಮರ್ಥ್ಯವನ್ನೆಲ್ಲಾ ಸಾಕಾರಗೊಳಿಸಿದಂತಹ ಚಿತ್ರ "ಸಂತ ತುಕಾರಾಂ".ಚಿತ್ರದ ಗೀತೆಗಳೆಲ್ಲವೂ ಜನಪ್ರೀಯವಾಗುವುದರ ಜೊತೆಗೆ ವಿಜಯಭಾಸ್ಕರ್ ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರಾದರು.ಪ್ರಯೋಗಶೀಲರಾಗಿದ್ದ ಅವರು"ಮನ ಮೆಚ್ಹಿದ ಮಡದಿ "ಚಿತ್ರದ ಟೈಟಲ್ ನಲ್ಲಿ ರಾಷ್ಟ್ರ ಕವಿ ಕುವೆಂಪು ಅವರ "ಜೈ ಭಾರತ ಜನನಿಯ ತನುಜಾತೆ "ಯನ್ನು ಹಿನ್ನೆಲೆ ಗೀತೆಯಾಗಿ ಬಳಸಿದ್ದರು.ಮುಂದೆ ಈ ಗೀತೆ ನಾಡ ಗೀತೆಯಾಗಲು ಈ ಪ್ರಯೋಗವೇ ಕಾರಣವಾಯಿತು.

"ನಾಂದಿ" ಚಿತ್ರದಲ್ಲಿ ವಾದ್ಯದ ಅಬ್ಬರವಿಲ್ಲದೆ ಸುಕೋಮಲತೆಯಿಂದ ಅವರು ಮೂಡಿಸಿದ ಸಂಗೀತ ಇನ್ನೂಂದು ಹೆಗ್ಗಳಿಕೆಯಾಯಿತು.ಇದರಲ್ಲಿನ "ಹಾಡೊಂದ ಹಾಡುವೆ "ವಿಶಿಷ್ಟ ಗೀತೆಯಾಗಿ ಇಂದಿಗೂ ಉಳಿದಿದೆ.೧೯೬೭ರಲ್ಲಿ ತೆರೆ ಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಬೆಳ್ಳಿ ಮೋಡ"ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದರು,ಅಲ್ಲಿಂದ ಒಂದು ಅನುಪಮ ಚಿತ್ರ ಯಾತ್ರೆ ಆರಂಭವಾಯಿತು.ಪುಟ್ಟಣ್ಣನವರ ೧೮ ಚಿತ್ರಗಳಿಗೆ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ.ಮಾತ್ರವಲ್ಲ ಕೆ,ಎಸ್,ಎಲ್, ಸ್ವ್ವಾಮಿ ಮತ್ತು ಗೀತಪ್ರಿಯ ಅವರ ಬಹುತೀಕ ಚಿತ್ರಗಳಿಗೆ ವಿಜಯಭಾಸ್ಕರ್ ಅವರದೇ ಸಂಗೀತ.ವ್ಯಾಪಾರಿ ಚಿತ್ರಗಳಿಗೆ ಮಾತ್ರವಲ್ಲದೆ ಕಲಾತ್ಮಕ ಚಿತ್ರಗಳಿಗೂ ವಿಜಯಭಾಸ್ಕರ್ ಪರಿಣಾಮಕಾರಿ ಸಂಗೀತ ನಿರ್ದೇಶನ ಮಾಡಿದ್ದಾರೆ."ಸಂಕಲ್ಪ,""ಅನ್ವೇಷಣೆ',"ಎಲ್ಲಿಂದಲೂ ಬಂದವರು","ಬ್ಯಾಂಕರ್ ಮಾರ್ಗಯ್ಯ",ಹಾವು ಏಣಿ ಆಟ","ಸೂರ್ಯ","ಸಂಗ್ಯಾ ಬಾಳ್ಯ', ಮೊದಲಾದ ಚಿತ್ರಗಳು ಅದಕ್ಕೆ ಉದಾಹರಣೆ.

ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳ ಕಲಾತ್ಮಕ ಚಿತ್ರಗಳನ್ನೂ ತಮ್ಮ ಸಂಗೀತದಿಂದ ಮಹತ್ವವನ್ನಾಗಿಸಿದ ವಿಜಯಭಾಸ್ಕರ್ "ಅಡೂರ್ ಗೋಪಾಲ ಕೃಷ್ಣನ್ "ಅವರ ಎಲ್ಲ ಚಿತ್ರಗಳಿಗೂ ಸಂಗೀತ ನೀಡಿದ ವಿಶಿಷ್ಟ ಹೆಗ್ಗಲ್ಲಿಕೆ ಇವರದ್ದು.'ಮಲಯ ಮಾರುತ"ಅವರು ಸಂಗೀತದ ಹಲವು ಸಾಧ್ಯತೆಯನ್ನು ಬಿಂಬಿಸಿದ ವಿಶಿಷ್ಟ ಚಿತ್ರ ಗಳಲ್ಲಿ ಒಂದು,.ಇವರಿಗೆ 'ಮಲಯ ಮಾರುತ"ಮತ್ತು "ಮುರಳಿ ಗಾನ ಅಮೃತ ಪಾನ"ಚಿತ್ರಗಳಿಗೆ ಪ್ರತಿಷ್ಟಿತ "ಸುರ್ ಸಿಂಗಾರ್"ಗೌರವ ದೊರೆತಿದೆ.ಈ ಗೌರವ ಪಡೆದ ದಕ್ಷಿಣ ಭಾರತದ ಮೊದಲ ಸಂಗೀತ ನಿರ್ದೇಶಕರು ಎಂಬ ಹೆಗ್ಗಳಿಕೆ ಇವರದ್ದು. ಕಸ್ತೂರಿ ಶಂಕರ್, ಬಿ.ಆರ್.ಛಾಯ, ಬಿ.ಕೆ.ಸುಮಿತ್ರ ಅವರನ್ನು ಕನ್ನಡ ಚಿತ್ರರಂಗ ಕ್ಕೆ ಪರಿಚಯಿಸಿದ್ದಾರೆ. ನಿರ್ದೇಶಕ ಗೀತಪ್ರಿಯ ಅವರಿಗೆ ಆ ಹೆಸರನ್ನು ವಿಜಯಭಾಸ್ಕರ್ ಅವರೇ ಸೂಚಿಸಿದರು.

ಬೆಳ್ಳಿ ಮೋಡ,ಯಾವ ಜನ್ಮದ ಮೈತ್ರಿ,ಸಂಕಲ್ಪ,ಧರಣಿ ಮಂಡಲ ಮದ್ಯದೊಳಗ್ಫೆ,ಮುರಳಿ ಗಾನ ಅಮೃತ ಪಾನ,ಪತಿತ ಪಾವನಿ ಹೀಗೆ ಆರು ಚಿತ್ರಗಳಿಗೆ ಶ್ರೀಷ್ಠ ಸಂಗೀತ ನಿರ್ದೇಶಕ ರಾಜ್ಯಪ್ರಶಷ್ಟಿ ಪಡೆದು ದಾಖಲೆ ಸ್ತಾಪಿಸಿರುವ ಅವರು ಕನ್ನಡದ ೧೭೪ ಚಿತ್ರಗಳೂ ಸೇರಿದಂತೆ ಆರು ಭಾಷೆಗಳ ೪೮೪ ಚಿತ್ರಗಳಿಗೆ ಸಂಗೀತ ನೀಡಿದ ವಿಶಿಷ್ಟವಾದ ದಾಖಲೆಯನ್ನು ಹೊಂದಿದ್ದಾರೆ.೧೯೮೫ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ೨೦೦೧ ರಲ್ಲಿ ಜೀವಮಾನದ ಸಾಧನೆಗೆ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದ ವಿಜಯ್ ಭಾಸ್ಕರ್ ಸಂಗೀತ ನೀಡಿದ ಕೊನೆಯ ಚಿತ್ರ "ಶ್ರಾವಣ ಸಂಬ್ರಮ'. ಬಹುಕಾಲ ಮದರಾಸು ನಿವಾಸಿಯಾಗಿದ್ದ ಅವರು ಹಲವು ಕನಸುಗಳನ್ನು ಇಟ್ಟುಕೊಂಡು ಜೀವನ ಸಂದ್ಯೆಯಲ್ಲಿ ಸ್ವಂತ ಮನೆ ಕಟ್ಟಿಕೊಂಡು ಬೆಂಗಳೂರಿಗೆ ಬಂದರು,ಆದರೆ ವಿಧಿಗೆ ಇದು ಸಹನೆಯಾಗಲಿಲ್ಲವೂ ಏನೋ ಇದಾದ ಕೆಲವೇ ದಿನಗಳಲ್ಲಿ (೨೦೦೨) ವಿಜಯ ಭಾಸ್ಕರ್ ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದರು.ಅವರು ಕೊಟ್ಟಿರುವ ಸಾವಿರಾರು ಅಮರ ಗೀತೆಗಳು ಸಂಗೀತ ದಿಗ್ಗಜರ ನೆನಪನ್ನು ಚಿರವಾಗಿ ಉಳಿಸಿದೆ. "ನಮನ"

ನಿಧನ[ಬದಲಾಯಿಸಿ]

ವಿಜಯಭಾಸ್ಕರ್ ಅವರುಮಾರ್ಚ್ ೩, ೨೦೦೨ ರಂದು ಬೆಂಗಳೂರಿನಲ್ಲಿ ನಿದನ ಹೊಂದಿದರು.

ವಿಜಯಭಾಸ್ಕರ್ ಸಂಗೀತ ನೀಡಿರುವ ಕನ್ನಡ ಚಲನಚಿತ್ರಗಳು[ಬದಲಾಯಿಸಿ]

# ವರ್ಷ ಚಿತ್ರ
೧೯೫೫ ಶ್ರೀರಾಮ ಪೂಜ
೧೯೫೬ ಭಾಗ್ಯಚಕ್ರ
೧೯೬೦ ರಾಣಿ ಹೊನ್ನಮ್ಮ
೧೯೬೩ ಮನ ಮೆಚ್ಚಿದ ಮಡದಿ
೧೯೬೩ ಸಂತ ತುಕಾರಾಮ
೧೯೬೪ ಪೋಸ್ಟ್ ಮಾಸ್ಟರ್
೧೯೬೪ ಪತಿಯೇ ದೈವ
೧೯೬೪ ನಾಂದಿ
೧೯೬೫ ಬೆರೆತ ಜೀವ
೧೦ ೧೯೬೫ ಅಮರಜೀವಿ
೧೧ ೧೯೬೬ ತೂಗುದೀಪ
೧೨ ೧೯೬೭ ಬೆಳ್ಳಿಮೋಡ
೧೩ ೧೯೬೭ ಲಗ್ನಪತ್ರಿಕೆ
೧೪ ೧೯೬೭ ಪ್ರೇಮಕ್ಕು ಪರ್ಮಿಟ್ಟೆ
೧೫ ೧೯೬೮ ಮಂಕುದಿಣ್ಣೆ
೧೬ ೧೯೬೮ ಮೈಸೂರು ಠಾಂಗ
೧೭ ೧೯೬೮ ಭಾಗ್ಯದ ಬಾಗಿಲು
೧೮ ೧೯೬೮ ಆನಂದ ಕಂದ
೧೯ ೧೯೬೮ ಅಣ್ಣ ತಮ್ಮ
೨೦ ೧೯೬೮ ಮಣ್ಣಿನ ಮಗ
೨೧ ೧೯೬೯ ಸುವರ್ಣ ಭೂಮಿ
೨೨ ೧೯೬೯ ನಮ್ಮ ಮಕ್ಕಳು
೨೩ ೧೯೬೯ ಮಲ್ಲಮ್ಮನ ಪವಾಡ
೨೪ ೧೯೬೯ ಎರಡು ಮುಖ
೨೫ ೧೯೬೯ ಮಕ್ಕಳೇ ಮನೆಗೆ ಮಾಣಿಕ್ಯ
೨೬ ೧೯೬೯ ಉಯ್ಯಾಲೆ
೨೭ ೧೯೬೯ ಬೃಂದಾವನ
೨೮ ೧೯೭೦ ಗೆಜ್ಜೆಪೂಜೆ
೨೯ ೧೯೭೦ ಅರಿಶಿನ ಕುಂಕುಮ
೩೦ ೧೯೭೦ ಅನಿರೀಕ್ಷಿತ
೩೧ ೧೯೭೦ ಭೂಪತಿ ರಂಗ
೩೨ ೧೯೭೦ ಠಕ್ಕ ಬಿಟ್ರೆ ಸಿಕ್ಕ
೩೩ ೧೯೭೦ ಲಕ್ಷ್ಮಿ ಸರಸ್ವತಿ
೩೪ ೧೯೭೦ ಬಾಳು ಬೆಳಗಿತು
೩೫ ೧೯೭೦ ಆರು ಮೂರು ಒಂಬತ್ತು
೩೬ ೧೯೭೦ ಸೀತ
೩೭ ೧೯೭೧ ಶರಪಂಜರ
೩೮ ೧೯೭೧ ಸಿಗ್ನಲ್‌ಮ್ಯಾನ್ ಸಿದ್ದಪ್ಪ
೩೯ ೧೯೭೧ ಕಲ್ಯಾಣಿ
೪೦ ೧೯೭೧ ಭಲೇ ಅದೃಷ್ಟವೋ ಅದೃಷ್ಟ
೪೧ ೧೯೭೧ ಮುಕ್ತಿ
೪೨ ೧೯೭೨ ಬಾಳ ಪಂಜರ
೪೩ ೧೯೭೨ ಯಾವ ಜನ್ಮದ ಮೈತ್ರಿ
೪೪ ೧೯೭೨ ಹೃದಯ ಸಂಗಮ
೪೫ ೧೯೭೨ ನಾ ಮೆಚ್ಚಿದ ಹುಡುಗ
೪೬ ೧೯೭೨ ನಂದಗೋಕುಲ
೪೭ ೧೯೭೨ ಮರೆಯದ ದೀಪಾವಳಿ
೪೮ ೧೯೭೨ ಜೀವನ ಜೋಕಾಲಿ
೪೯ ೧೯೭೨ ನಾಗರಹಾವು
೫೦ ೧೯೭೩ ದೇವರು ಕೊಟ್ಟ ತಂಗಿ
೫೧ ೧೯೭೩ ಸಿ.ಐ.ಡಿ ೭೨
೫೨ ೧೯೭೩ ಸಂಕಲ್ಪ
೫೩ ೧೯೭೩ ಸೀತೆಯಲ್ಲ ಸಾವಿತ್ರಿ
೫೪ ೧೯೭೩ ಜಯ ವಿಜಯ
೫೫ ೧೯೭೩ ಮನೆ ಬೆಳಗಿದ ಸೊಸೆ
೫೬ ೧೯೭೩ ಕೆಸರಿನ ಕಮಲ
೫೭ ೧೯೭೩ ಅಬಚೂರಿನ ಪೋಸ್ಟ್ ಆಫೀಸ್
೫೮ ೧೯೭೪ ಉಪಾಸನೆ
೫೯ ೧೯೭೫ ಶುಭಮಂಗಳ
೬೦ ೧೯೭೫ ಕಸ್ತೂರಿ ವಿಜಯ
೬೧ ೧೯೭೫ ಭಾಗ್ಯಜ್ಯೋತಿ
೬೨ ೧೯೭೫ ನಿನಗಾಗಿ ನಾನು
೬೩ ೧೯೭೫ ಬಿಳಿ ಹೆಂಡ್ತಿ
೬೪ ೧೯೭೫ ಹೆಣ್ಣು ಸಂಸಾರದ ಕಣ್ಣು
೬೫ ೧೯೭೬ ಕಥಾಸಂಗಮ
೬೬ ೧೯೭೬ ಮಕ್ಕಳ ಭಾಗ್ಯ
೬೭ ೧೯೭೬ ಬೆಸುಗೆ
೬೮ ೧೯೭೬ ಚಿರಂಜೀವಿ
೬೯ ೧೯೭೬ ತುಳಸಿ
೭೦ ೧೯೭೬ ಮಾಯಾ ಮನುಷ್ಯ
೭೧ ೧೯೭೬ ಫಲಿತಾಂಶ
೭೨ ೧೯೭೭ ಹರಕೆ
೭೩ ೧೯೭೭ ಸಂಘರ್ಷ
೭೪ ೧೯೭೭ ದೀಪ
೭೫ ೧೯೭೭ ಮಾಗಿಯ ಕನಸು
೭೬ ೧೯೭೭ ಮುಗ್ಧಮಾನವ
೭೭ ೧೯೭೭ ಕುಂಕುಮ ರಕ್ಷೆ
೭೮ ೧೯೭೭ ಬನಶಂಕರಿ
೭೯ ೧೯೭೭ ದೇವರೆ ದಿಕ್ಕು
೮೦ ೧೯೭೭ ಗಂಡ ಹೆಂಡ್ತಿ
೮೧ ೧೯೭೮ ಹಾವಿನ ಹೆಜ್ಜೆ
೮೨ ೧೯೭೮ ಸಿರಿತನಕ್ಕೆ ಸವಾಲ್
೮೩ ೧೯೭೮ ಪಡುವಾರಳ್ಳಿ ಪಾಂಡವರು
೮೪ ೧೯೭೮ ಪ್ರೇಮಾಯಣ
೮೫ ೧೯೭೮ ತಪ್ಪಿದ ತಾಳ
೮೬ ೧೯೭೮ ವಸಂತ ಲಕ್ಷ್ಮಿ
೮೭ ೧೯೭೮ ಅಳುಕು
೮೮ ೧೯೭೮ ಅಮರನಾಥ್
೮೯ ೧೯೭೯ ಅದಲು ಬದಲು
೯೦ ೧೯೭೯ ಸದಾನಂದ
೯೧ ೧೯೭೯ ಮುಯ್ಯಿ
೯೨ ೧೯೭೯ ಮಲ್ಲಿಗೆ ಸಂಪಿಗೆ
೯೩ ೧೯೭೯ ಧಂಗೆ ಎದ್ದ ಮಕ್ಕಳು
೯೪ ೧೯೮೦ ಅಖಂಡ ಬ್ರಹ್ಮಚಾರಿಗಳು
೯೫ ೧೯೮೦ ಹಂತಕನ ಸಂಚು
೯೬ ೧೯೮೦ ಕಪ್ಪು ಕೊಳ
೯೭ ೧೯೮೦ ಎಲ್ಲಿಂದಲೋ ಬಂದವರು
೯೮ ೧೯೮೦ ಸುಬ್ಬಿ ಸುಬ್ಬಕ್ಕ ಸುವ್ವಲಾಲಿ
೯೯ ೧೯೮೦ ನಮ್ಮಮ್ಮನ ಸೊಸೆ
೧೦೦ ೧೯೮೦ ಮದರ್
೧೦೧ ೧೯೮೦ ಬಂಗಾರದ ಜಿಂಕೆ
೧೦೨ ೧೯೮೦ ಮಿಥುನ
೧೦೩ ೧೯೮೦ ಡ್ರೈವರ್ ಹನುಮಂತು
೧೦೪ ೧೯೮೧ ಲೀಡರ್ ವಿಶ್ವನಾಥ್
೧೦೫ ೧೯೮೧ ತೀರದ ಬಯಕೆ
೧೦೬ ೧೯೮೧ ಛಲಗಾರ
೧೦೭ ೧೯೮೧ ಗ್ರಹಣ
೧೦೮ ೧೯೮೧ ನಾರಿ ಸ್ವರ್ಗಕ್ಕೆ ದಾರಿ
೧೦೯ ೧೯೮೧ ಬಾಳು ಬಂಗಾರ
೧೧೦ ೧೯೮೧ ಬಂಗಾರದ ಮನೆ
೧೧೧ ೧೯೮೧ ಪ್ರೀತಿಸಿ ನೋಡು
೧೧೨ ೧೯೮೨ ಜೋಡಿ ಜೀವ
೧೧೩ ೧೯೮೨ ಜಿಮ್ಮಿಗಲ್ಲು
೧೧೪ ೧೯೮೨ ಮಾನಸ ಸರೋವರ
೧೧೫ ೧೯೮೨ ಸುವರ್ಣ ಸೇತುವೆ
೧೧೬ ೧೯೮೩ ದೇವರ ತೀರ್ಪು
೧೧೭ ೧೯೮೩ ಅನ್ವೇಷಣೆ
೧೧೮ ೧೯೮೩ ಧರಣಿ ಮಂಡಲ ಮಧ್ಯದೊಳಗೆ
೧೧೯ ೧೯೮೩ ಬ್ಯಾಂಕರ್ ಮಾರ್ಗಯ್ಯ
೧೨೦ ೧೯೮೩ ಮತ್ತೆ ವಸಂತ
೧೨೧ ೧೯೮೩ ಆನಂದಸಾಗರ
೧೨೨ ೧೯೮೩ ಮುತ್ತೈದೆ ಭಾಗ್ಯ
೧೨೩ ೧೯೮೩ ಸಂಚಾರಿ
೧೨೪ ೧೯೮೪ ಶುಭಮುಹೂರ್ತ
೧೨೫ ೧೯೮೪ ಅಮೃತಘಳಿಗೆ
೧೨೬ ೧೯೮೪ ಹುಲಿ ಹೆಜ್ಜೆ
೧೨೭ ೧೯೮೪ ಪವಿತ್ರ ಪ್ರೇಮ
೧೨೮ ೧೯೮೪ ಋಣಮುಕ್ತಳು
೧೨೯ ೧೯೮೫ ಹಾವು ಏಣಿಯಾಟ
೧೩೦ ೧೯೮೫ ಮಾವನೊ ಅಳಿಯನೊ
೧೩೧ ೧೯೮೫ ಮಸಣದ ಹೂವು
೧೩೨ ೧೯೮೬ ತವರು ಮನೆ
೧೩೩ ೧೯೮೬ ನೆನಪಿನ ದೋಣಿ
೧೩೪ ೧೯೮೬ ಸುಂದರ ಸ್ವಪ್ನಗಳು
೧೩೫ ೧೯೮೬ ಮಲಯ ಮಾರುತ
೧೩೬ ೧೯೮೭ ಹುಲಿ ಹೆಬ್ಬುಲಿ
೧೩೭ ೧೯೮೭ ತಾಳಿಯ ಆಣೆ
೧೩೮ ೧೯೮೭ ಆಸೆಯ ಬಲೆ
೧೩೯ ೧೯೮೭ ಅವಸ್ಥೆ
೧೪೦ ೧೯೮೭ ಬಂಧಮುಕ್ತ
೧೪೧ ೧೯೮೭ ಸೂರ್ಯ
೧೪೨ ೧೯೮೮ ತಾಯಿಯ ಆಸೆ
೧೪೩ ೧೯೮೮ ಭೂಮಿ ತಾಯಾಣೆ
೧೪೪ ೧೯೮೮ ಗುಡುಗು ಸಿಡಿಲು
೧೪೫ ೧೯೮೮ ತಾಯಿಗೊಬ್ಬ ಕರ್ಣ
೧೪೬ ೧೯೮೮ ಮಿಥಿಲೆಯ ಸೀತೆಯರು
೧೪೭ ೧೯೮೮ ಕಾಡಿನ ಬೆಂಕಿ
೧೪೮ ೧೯೮೯ ತಾಳಿಗಾಗಿ
೧೪೯ ೧೯೮೯ ಮಧುಮಾಸ
೧೫೦ ೧೯೯೦ ಅಮೃತಬಿಂದು
೧೫೧ ೧೯೯೦ ಎದುರು ಮನೆ ಮೀನಾ
೧೫೨ ೧೯೯೦ ಪ್ರಥಮ ಉಷಾಕಿರಣ
೧೫೩ ೧೯೯೧ ಇದುವೇ ಜೀವನ
೧೫೪ ೧೯೯೨ ಪುಟ್ಟ ಹೆಂಡ್ತಿ
೧೫೫ ೧೯೯೨ ಉಂಡೂ ಹೋದ ಕೊಂಡೂ ಹೋದ
೧೫೬ ೧೯೯೨ ಹರಕೆಯ ಕುರಿ
೧೫೭ ೧೯೯೨ ಸಂಗ್ಯಾ ಬಾಳ್ಯ
೧೫೮ ೧೯೯೩ ಜಂಬೂಸವಾರಿ
೧೫೯ ೧೯೯೪ ಸೂಪರ್ ನೋವ ೪೫೯
೧೬೦ ೧೯೯೫ ಆಘಾತ
೧೬೧ ೧೯೯೬ ಹೆತ್ತವಳ ಕೂಗು
೧೬೨ ೧೯೯೮ ಅವಳ ಚರಿತ್ರೆ

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು[ಬದಲಾಯಿಸಿ]

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ