ಬಾಳು ಬೆಳಗಿತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬಾಳು ಬೆಳಗಿತು (೧೯೭೦, ಕನ್ನಡ): ಸಿದ್ದಲಿ೦ಗಯ್ಯನವರ ನಿರ್ದೇಶನ, ಡಾ|| ರಾಜಕುಮಾರ್ (ದ್ವಿಪಾತ್ರ), ಭಾರತಿ, ಜಯಂತಿ ಮತ್ತು ದ್ವಾರಕೀಶ್ ಮುಖ್ಯತಾರಾಗಣದಲ್ಲಿ ತೆರೆಕಂಡ ಕನ್ನಡ ಸಿನಿಮಾ ಬಾಳು ಬೆಳಗಿತು. ಚಿತ್ರಶ್ರೀ ಅಂತರರಾಷ್ಟ್ರೀಯ ಬ್ಯಾನರ್ ಅಡಿಯಲ್ಲಿ ಮೂಡಿಬ೦ದ ಈ ಚಿತ್ರದ ನಿರ್ಮಾಪಕರು ಕೆ. ಎಸ್. ಪ್ರಸಾದ್, ಬಿ. ವಿ. ಶ್ರೀನಿವಾಸ್ ಮತ್ತು ಎ. ಎಸ್. ಭಕ್ತವತ್ಸಲಂ. ಪತ್ತೇದಾರಿ ಮತ್ತು ಸಾಂಸಾರಿಕ ಕಥಾಹಂದರ ಹೊಂದಿರುವ ಈ ಚಿತ್ರ ಡಾ|| ರಾಜಕುಮಾರ್ ಅಭಿನಯದಲ್ಲಿ ಮೂಡಿಬಂದ ೧೨೬ನೇ ಚಿತ್ರವಾಗಿದೆ.