ವಿಷಯಕ್ಕೆ ಹೋಗು

ಮನೋ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮನೋ‌ ಮೂರ್ತಿ (ಪೂರ್ಣ ಹೆಸರು-ಮನೋಹರ ಮೂರ್ತಿ) ಕನ್ನಡ ಚಲನಚಿತ್ರ ರಂಗದ ಸಂಗೀತ ಸಂಯೋಜಕ. ಇವರು ನಾಗತಿಹಳ್ಳಿ ಚಂದ್ರಶೇಖರ ಅವರು ನಿರ್ದೇಶಿಸಿದ್ದ ಅಮೆರಿಕ ಅಮೆರಿಕಾ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡ ಸಂಗೀತ ಲೋಕಕ್ಕೆ ಕಾಲಿರಿಸಿದರು.

ಇವರು ಉಸ್ತಾದ್ ಜಾಕಿರ್ ಹುಸೇನ್ ಅವರ ಹತ್ತಿರ ಹಿಂದೂಸ್ತಾನಿ ತಬಲಾ ಬಾರಿಸುವುದನ್ನು ಕಲಿತಿದ್ದಾರೆ. ಅಲ್ಲದೆ ಅಮೆರಿಕಾದ ಪ್ರತಿಷ್ಠಿತ ಶಾಲೆಯಿಂದ ಪಾಪ್ ಸಂಗೀತವನ್ನು ಕಲಿತಿದ್ದಾರೆ. ನಂತರ ಇವರು ಕವಿತಾ ಲಂಕೇಶರ ಪ್ರೀತಿ ಪ್ರೇಮ ಪ್ರಣಯ ಚಿತ್ರಕ್ಕೆ ಸಂಗೀತ ನೀಡಿದರು. ಅದರ ನಂತರ ಅಶೋಕ್ ಪಾಟೀಲ್ ನಿರ್ದೇಶನದ ಜೋಕ್ ಫಾಲ್ಸ್ ಚಿತ್ರಕ್ಕೂ ಸಂಗೀತ ನೀಡಿದರು.

ಸ್ವಲ್ಪ ಸಮಯದ ನಂತರ ಅವರು ಸಂಗೀತ ನೀಡಿದ ಅಮೃತ ಧಾರೆ ಚಿತ್ರದ ಸುಮಧುರ ಸಂಗೀತ, ಸಂಗೀತದಿಂದ ಮತ್ತಷ್ಟು ಜನಪ್ರಿಯರಾದರು

ಇವರು ಸಂಗೀತ ನೀಡಿದ್ದ ಯೋಗರಾಜ್ ಭಟ್ಮುಂಗಾರು ಮಳೆ ಚಿತ್ರದ ಹಾಡುಗಳು ಅತ್ಯಂತ ಜನಪ್ರಿಯವಾದವು. ಇವರು ನಂತರ ಮಿಲನ ಚಿತ್ರಕ್ಕೆ ಸಂಗೀತ ನೀಡಿ ಮತ್ತಷ್ಟು ಜನಪ್ರಿಯರಾದರು. ನಂತರ ಇವರು ಮಾತಾಡ್ ಮಾತಾಡು ಮಲ್ಲಿಗೆ, ಗೆಳೆಯ, ಮೊಗ್ಗಿನ ಮನಸ್ಸು ಚಿತ್ರಗಳಿಗೆ ಸಂಗೀತ ನೀಡಿದರು.