ಮುಂಗಾರು ಮಳೆ
ಮುಂಗಾರು ಮಳೆ | |
---|---|
ಮುಂಗಾರು ಮಳೆ | |
ನಿರ್ದೇಶನ | ಯೋಗರಾಜ್ ಭಟ್ |
ನಿರ್ಮಾಪಕ | ಇ ಕೃಷ್ಣಪ್ಪ |
ಚಿತ್ರಕಥೆ | ಪ್ರೀತಂ ಗುಬ್ಬಿ, ಯೋಗರಾಜ್ ಭಟ್ |
ಕಥೆ | ಪ್ರೀತಂ ಗುಬ್ಬಿ |
ಸಂಭಾಷಣೆ | ಯೋಗರಾಜ್ ಭಟ್ |
ಪಾತ್ರವರ್ಗ | ಗಣೇಶ್ , ಸಂಜನಾ ಗಾಂಧಿ/ಪೂಜಾ ಗಾಂಧಿ, ಅನಂತ್ ನಾಗ್, ಜೈ ಜಗದೀಶ್,ಪದ್ಮಜಾ ರಾವ್, ಸುಧಾ ಬೆಳವಾಡಿ |
ಸಂಗೀತ | ಮನೋ ಮೂರ್ತಿ |
ಛಾಯಾಗ್ರಹಣ | ಕೃಷ್ಣ |
ಸಂಕಲನ | ದೀಪು ಎಸ್ ಕುಮಾರ್ |
ಬಿಡುಗಡೆಯಾಗಿದ್ದು | ೨೦೦೬ |
ಪ್ರಶಸ್ತಿಗಳು | ೨೦೦೬-೦೭ ಕರ್ನಾಟಕ ರಾಜ್ಯ ಪ್ರಶಸ್ತಿ "ಅತ್ಯ್ಯುತ್ತಮ ಚಿತ್ರ", ಫಿಲಂಫೇರ್ ಪ್ರಶಸ್ತಿ "ಅತ್ಯುತ್ತಮ ಸಂಗೀತ" ಮತ್ತು "ಅತ್ಯುತ್ತಮ ನಿರ್ದೇಶನ" |
ನೃತ್ಯ | ಹರ್ಷ, ರಘು |
ಚಿತ್ರ ನಿರ್ಮಾಣ ಸಂಸ್ಥೆ | ಇ ಕೆ ಎಂಟರ್ ಟೈನರ್ಸ್ |
ಸಾಹಿತ್ಯ | ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಕವಿರಾಜ್, ಹೃದಯ ಶಿವ |
ಹಿನ್ನೆಲೆ ಗಾಯನ | ಸೋನು ನಿಗಮ್, ಶ್ರೇಯಾ ಘೋಷಾಲ್, ಹೇಮಂತ್, ಕುನಾಲ್ ಗಾಂಜಾವಾಲಾ, ಉದಿತ್ ನಾರಾಯಣ್, ಸುನಿಧಿ ಚೌಹಾಣ್ |
ಮುಂಗಾರು ಮಳೆ ೨೦೦೬ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ೫೦೦ ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ ೧೨೫ ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ಯಶಸ್ಸುಗಳಿಸಿದ್ದಕ್ಕೆ ಸಾಕ್ಷಿ. ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಬೆಂಗಳೂರಿನ ಪಿವಿಆರ್ ಸಿನೆಮಾಸ್ ಚಿತ್ರಮಂದಿರದಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶಿಸಲ್ಪಟ್ಟಿದ್ದು ಭಾರತದಲ್ಲಿ ಒಂದು ದಾಖಲೆ[೧].
ಚಿತ್ರವನ್ನು ತೆಲುಗಿನಲ್ಲಿ ವಾನ ಮತ್ತು ಬೆಂಗಾಲಿಯಲ್ಲಿ ಪ್ರೇಮೆರ್ ಕಹಿನಿ ಎಂದು ಮರು-ನಿರ್ಮಾಣ ಮಾಡಲಾಯಿತು.
ನಿರ್ಮಾಣ ಹಿನ್ನೆಲೆ ಮತ್ತು ಬೆಳವಣಿಗೆಗಳು
[ಬದಲಾಯಿಸಿ]ನಿರ್ದೇಶಕ ಯೋಗರಾಜ್ ಭಟ್ ಅವರು ಮಯೂರ್, ರಾಧಿಕಾ ನಟಿಸಿದ ಮಣಿ ಮತ್ತು ಸುದೀಪ್, ರಮ್ಯಾ ನಟಿಸಿದ ರಂಗ (ಎಸ್.ಎಸ್.ಎಲ್.ಸಿ) ಚಿತ್ರಗಳನ್ನ ನಿರ್ದೇಶಿಸಿದ್ದರು. ಎರಡೂ ಚಿತ್ರಗಳು ಹೆಚ್ಚಿನ ಯಶಸ್ಸು ಕಾಣಲಿಲ್ಲ. ನಂತರ ಯುವ ಲೇಖಕ ಪ್ರೀತಂ ಗುಬ್ಬಿ ಜೊತೆಗೂಡಿ ಮುಂಗಾರು ಮಳೆ ಚಿತ್ರದ ಕಥೆ ಬರೆದರು. ಯೋಗರಾಜ್ ಭಟ್ ಅವರು ಚಿತ್ರದ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರಿಗಾಗಿ ನಿರೂಪಿಸಿದ್ದರು. ಆದರೆ ಪುನೀತ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು. "ಕಾಮಿಡಿ ಟೈಮ್" ಗಣೇಶ್ ಅವರು ಮುಂಗಾರು ಮಳೆ ಚಿತ್ರದ ಕಥೆ ನಿರ್ಮಾಣದ ಹಂತದಲ್ಲೇ ಯೋಗರಾಜ್ ಅವರೊಡನೆ ಕೆಲಸ ಮಾಡಿದ್ದರಿಂದ ಚಿತ್ರದಲ್ಲಿ ನಟಿಸುವ ಬಯಕೆ ತೋಡಿಕೊಂಡರು. ಯೋಗರಾಜ್ ಅವರನ್ನು ನಿರ್ಮಾಪಕ ಈ. ಕೃಷ್ಣಪ್ಪ ಅವರಿಗೆ ಭೇಟಿ ಮಾಡಿಸಿದ್ದೂ ಗಣೇಶ್ ಅವರೇ. ಕೃಷ್ಣಪ್ಪ ಮತ್ತು ಗಣೇಶ್ ಒಂದೆ ಊರಿನವರಾದ್ದರಿಂದ (ನೆಲಮಂಗಲದ ಅಡಕಮಾರನಹಳ್ಳಿ), ಕೃಷ್ಣಪ್ಪನವರು ಚಿತ್ರದ ಕಥೆ ಕೇಳಿ, ಮೆಚ್ಚಿಕೊಂಡು, ಚಿತ್ರ ನಿರ್ಮಿಸಲು ಒಪ್ಪಿದರು. ಕನ್ನಡದ ಯಾವುದೇ ಹೆಸರಾಂತ ನಟಿ ಸಿಗದ ಕಾರಣ, ಯೋಗರಾಜ್ ಅವರು ಉತ್ತರ ಭಾರತದ ಸಂಜನಾ ಗಾಂಧಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು. ಇದು ೨೦೧೫ರವರೆಗೆ ಯೋಗರಾಜ್ ರ ಅತಿ ಯಶಸ್ವಿ ಚಿತ್ರ.
ತಾರಾಗಣ
[ಬದಲಾಯಿಸಿ]- "ಗೋಲ್ಡನ್ ಸ್ಟಾರ್" ಗಣೇಶ್ - ಪ್ರೀತಂ ಪಾತ್ರದಲ್ಲಿ
- "ಗೋಲ್ಡನ್ ಕ್ವೀನ್" ಸಂಜನಾ ಗಾಂಧಿ - ನಂದಿನಿ ಪಾತ್ರದಲ್ಲಿ
- ಅನಂತ್ ನಾಗ್ - ಕರ್ನಲ್ ಸುಬ್ಬಯ್ಯ ಪಾತ್ರದಲ್ಲಿ
- ಸುಧಾ ಬೆಳವಾಡಿ - ಕಮಲಾ ಪಾತ್ರದಲ್ಲಿ
- ಪದ್ಮಜಾ ರಾವ್ - ಬಬ್ಲೀ ಬಬೀತ ಪಾತ್ರದಲ್ಲಿ
- ದಿಗಂತ್ - ಗೌತಮ್ ಪಾತ್ರದಲ್ಲಿ
- ನೀನಾಸಂ ಅಶ್ವತ್ಥ್ - ಜಾಲಿ ಪಾತ್ರದಲ್ಲಿ
- ಜೈಜಗದೀಶ್ - ಜಯಂತ್ ರಾವ್ ಪಾತ್ರದಲ್ಲಿ.
ಹಾಡುಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ಒಂದೆ ಒಂದು ಸಾರಿ | ಕುನಾಲ್ ಗಾಂಜಾವಾಲ, ಪ್ರಿಯಾ ಹೇಮೇಶ್. |
2 | ಮುಂಗಾರು ಮಳೆಯೆ | ಸೋನು ನಿಗಂ. |
3 | ಕುಣಿದು ಕುಣಿದು ಬಾರೆ | ಉದಿತ್ ನಾರಾಯಣ್, ಸುನಿಧಿ ಚವ್ಹಾಣ್, ಸ್ಟೀಫನ್. |
4 | ಅನಿಸುತಿದೆ | ಸೋನು ನಿಗಂ. |
5 | ಸುವ್ವಿ ಸುವ್ವಾಲಿ | ಹೇಮಂತ್ ಕುಮಾರ್. |
6 | ಇವನು ಗೆಳೆಯನಲ್ಲಾ | ಶ್ರೇಯಾ ಘೋಶಾಲ್. |
7 | ಅರಳುತಿರು | ಶ್ರೇಯಾ ಘೋಶಾಲ್. |
ಉಲ್ಲೇಖಗಳು
[ಬದಲಾಯಿಸಿ]- ↑ "'Mungaru Male' National record". Correspondent. IndiaGlitz. Archived from the original on 2007-12-07. Retrieved 2007-12-08.