ವಿಷಯಕ್ಕೆ ಹೋಗು

ಸುಧಾ ಬೆಳವಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಧಾ ಬೆಳವಾಡಿ[೧] ಭಾರತದ ಒಬ್ಬ ಚಲನಚಿತ್ರ ಅಭಿನೇತ್ರಿ. ಕನ್ನಡ ಭಾಷೆಯ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ. ಕರ್ನಾಟಕದಲ್ಲಿ ರಂಗ ಭೂಮಿಯಲ್ಲಿಯೂ ಹೆಚ್ಚಾಗಿ ಕೆಲಸಮಾಡಿದ್ದಾರೆ.ಸುಧಾ ಬೆಳವಾಡಿಯವರಿಗೆ ಖ್ಯಾತಿ ತಂದುಕೊಟ್ಟ ಚಿತ್ರಗಳು:

 1. ಮತದಾನ (೨೦೦೧)
 2. ಮುಂಗಾರು ಮಳೆ,(೨೦೦೬)
 3. ಮೊಗ್ಗಿನ ಮನಸ್ಸು (೨೦೦೮)
 4. ಕಾಡು (೧೯೭೩)

ಜೀವನ[ಬದಲಾಯಿಸಿ]

ಸುಧಾರವರು [೨] ಕನ್ನಡ ಅಭಿನೇತ್ರಿ, ಭಾರ್ಗವಿ ನಾರಾಯಣ್ ಮತ್ತು ಬೆಳವಾಡಿ ನಂಜುಂಡಯ್ಯ ನಾರಾಯಣ್ ರವರ ಮಗಳು. ತಂದೆ, ಬೆಳವಾಡಿ ನಂಜುಂಡಯ್ಯ ನಾರಾಯಣ್ ರಂಗಭೂಮಿಯಲ್ಲಿ 'ಮೇಕ್ ಅಪ್ ನಾಣಿ' ಎಂದು ಸುಪ್ರಸಿದ್ಧರಾಗಿದ್ದರು. ಅವರೊಬ್ಬ ಕನ್ನಡ ನಟರಾಗಿದ್ದರು ಸಹಿತ. ಒಡಹುಟ್ಟಿದವರು ಸುಜಾತ, ಪ್ರಕಾಶ್, ಮತ್ತು ಪ್ರದೀಪ್, ಪ್ರಕಾಶ್ ಬೆಳವಾಡಿಯವರು ಭಾರತೀಯ ರಂಗಭೂಮಿ, ಚಲನ ಚಿತ್ರ ಮತ್ತು ಕಿರುತೆರೆಯಲ್ಲಿ ಮೀಡಿಯಾ ಪರ್ಸನ್, ನ್ಯಾಷನಲ್ ಫಿಲಂ ಅವಾರ್ಡ್ ವಿಜೇತರಾಗಿದ್ದಾರೆ. ಸುಧಾರವರು ಎಂ.ಜಿ.ಸತ್ಯರಾವ್ ರವರನ್ನು ಮದುವೆಯಾಗಿದ್ದಾರೆ. ಸತ್ಯರಾವ್ ಅತ್ಯುತ್ತಮ್ಮ ಪಟ್ಕಥಾ ಲೇಖಕರು. ಅವರು ಸ್ವದೇಸ್ ಹಿಂದಿ ಚಲನ ಚಿತ್ರಕ್ಕೆ ಪಟ್ಕಥೆಯನ್ನು ಬರೆದು ವಿಖ್ಯಾತರಾಗಿದ್ದಾರೆ. ಈ ದಂಪತಿಗಳ ಮಕ್ಕಳು, ಶಾಂತನು ಮತ್ತು ಸಂಯುಕ್ತ. ಸಂಯುಕ್ತ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಕೆಲಸಮಾಡುತ್ತಿದ್ದಾಳೆ.

ಸುಧಾ ಬೆಳವಾಡಿಯವರ ಕಲಾ ಕೊಡುಗೆ[ಬದಲಾಯಿಸಿ]

ಒಟ್ಟಾರೆ ೭೦ ಚಿತ್ರಗಳಲ್ಲಿ ನಟಿಸಿದ ಸುಧಾ ಬೆಳವಾಡಿಯವರು, ೧೭ ನಾಟಕಗಳಲ್ಲೂ ಕೆಲಸಮಾಡಿದ್ದಾರೆ. ಕಿರು ತೆರೆಯಲ್ಲಿ ಮಂಥನ, ಮನ್ವಂತರ, ಮಹಾಪರ್ವ, ಮಗಳು ಜಾನಕಿ (೨೦೧೯) ಸುಧಾ ಬೆಳವಾಡಿಯವರು ಅಭಿನಯಿಸಿದ ಕೆಲವು ಪ್ರಮುಖ ಚಲನ ಚಿತ್ರಗಳು :

 1. ಆಡುವ ಗೊಂಬೆ (2019)
 2. ಕಾಫಿ ತೋಟ (೨೦೧೭)
 3. ಪುಟ ತಿರುಗಿಸಿ ನೋಡು (2016)
 4. ವಾಸ್ತು ಪ್ರಕಾರ (2015)
 5. ಹೆಜ್ಜೆಗಳು (2013)
 6. ಬಚ್ಚನ್ (2013)
 7. ಗೂಗ್ಲಿ (2013)
 8. ತಮಸ್ಸು (2010)
 9. ಪ್ರೇಮ್ ಕಹಾನಿ (2009)
 10. ಭಾಗ್ಯದ ಬಳೆಗಾರ (2009)
 11. ಕಾರಂಜಿ (2009)
 12. ಗಾಳಿಪಟ (2008)
 13. ಮೀರಾ ಮಾಧವ ರಾಘವ (2007)
 14. ಮುಂಗಾರು ಮಳೆ (2006)
 15. ಜೋಕ್ ಫಾಲ್ಸ್ (2004)
 16. ಮೈಸೂರ್ ಮಸಾಲ The UFO Incident (2019)

ಮಗಳು ಜಾನಕಿ[ಬದಲಾಯಿಸಿ]

ಖ್ಯಾತ ನಿರ್ಮಾಪಕ,ನಿರ್ದೇಶಕ, ಟಿ.ಎನ್.ಸೀ ರವರ, ಕರ್ನಾಟಕದ ಬಹಳ ಜನಪ್ರಿಯ ಧಾರಾವಾಹಿ, "ಮಗಳು ಜಾನಕಿ" ಎಂಬ ಕಿರುತೆರೆ ಧಾರಾವಾಹಿಯ ಕೊಡುಗೆ ಈಗಾಗಲೇ ೨೨೦ (೦೩,ಮೇ,೨೦೧೯) ಕಂತುಗಳನ್ನು ಯಶಸ್ವಿಯಾಗಿ ಮುಟ್ಟಿದೆ. ಇದರಲ್ಲಿ ಸುಧಾ ಬೆಳವಾಡಿಯವರು ಸಿಎಸ್ಪಿಯವರ ತಂಗಿ, ಶ್ಯಾಮಲಮ್ಮನಾಗಿ, ಮಧುಕರನ ಅತ್ತೆಯಾಗಿ, ಅತ್ಯುತ್ತಮ ಅಭಿನಯವನ್ನು ಕೊಟ್ಟು ರಸಿಕರೆಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

 1. Dramatic journey, ActiveIndia, Shruthi shrinath, May, 31, 2015, deccanherald.com
 2. sudha belawadi Profile, VeethiThe face of India, July, 12,2018

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. Three generations come together for one film 24 jan, 2017,E-Times
 2. filmography