ಅನಂತ್ ನಾಗ್ |
---|
|
ಜನನ | ಅನಂತ್ ನಾಗರಕಟ್ಟೆ ಸೆಪ್ಟೆಂಬರ್-೦೪-೧೯೪೮
ಶಿರಾಲಿ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ) |
---|
ರಾಷ್ಟ್ರೀಯತೆ | ಭಾರತೀಯ |
---|
ಉದ್ಯೋಗ | ನಟ/ರಾಜಕಾರಣಿ |
---|
ಜೀವನ ಸಂಗಾತಿ | ಗಾಯತ್ರಿ (m. ೧೯೮೭) |
---|
ಮಕ್ಕಳು | ಅದಿತಿ ಅನಂತ್ ನಾಗ್ |
---|
ಅನಂತನಾಗ್ (ಅನಂತ್ ನಾಗರಕಟ್ಟೆ) - ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.[೧]
ಅನಂತನಾಗ್ ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ,
ಕೊಂಕಣಿ ಮತ್ತು ಮರಾಠಿ ರಂಗಭೂಮಿಗಳಲ್ಲಿ ಎಂಟು ವರ್ಷಗಳ ಕಾಲ ತೊಡಗಿಸಿಕೊಂಡರು. ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್ ಅವರೂ ಸಹ ಖ್ಯಾತ ಚಿತ್ರ ಕಲಾವಿದರು. [೨]
ನಟನಾಗಿ ಅನಂತ್ ಅವರು ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ಮರಣೀಯ ಪಾತ್ರಗಳಲ್ಲಿ ನಟಿಸಿದ್ದಾರೆ. [೩]
ಶ್ಯಾಂ ಬೆನೆಗಲ್ ನಿರ್ದೇಶನದ ಹಿಂದಿ ಭಾಷೆಯ ‘ಅಂಕುರ್’ ಅನಂತ್ ಅವರ ಮೊದಲ ಚಿತ್ರ. ಮುಂದೆ "ನಿಶಾಂತ್", "ಕಲಿಯುಗ್", "ಗೆಹ್ರಾಯಿ", "ಭೂಮಿಕಾ", "ಮಂಗಳಸೂತ್ರ್", "ಕೊಂಡುರಾ" ಮತ್ತು "ರಾತ್" ಸೇರಿದಂತೆ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ.
ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಾಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ[ಬದಲಾಯಿಸಿ]
ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’ ಚಿತ್ರದಲ್ಲಿ ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿದರು. ೧೯೭೭ರ ದೊರೈ ಭಗವಾನರ ‘ಬಯಲುದಾರಿ’ ಚಿತ್ರ ಜನಪ್ರಿಯವಾಯಿತು. ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್’ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
ಅನಂತನಾಗ್ – ಲಕ್ಷ್ಮೀ ತಾರಾಜೋಡಿ ಹಲವಾರು ಯಶಸ್ವೀಚಿತ್ರಗಳನ್ನು ನೀಡಿದೆ. ಅವುಗಳಲ್ಲಿ ‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ 25ಕ್ಕೂ ಹೆಚ್ಚಿನ ಚಿತ್ರಗಳಿವೆ.
‘ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ಬಾಡದ ಹೂ’, ‘ಜನ್ಮಜನ್ಮದ ಅನುಬಂಧ’, ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಪ್ರಮುಖ ಚಿತ್ರಗಳು.
ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು.
‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಬಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’ ಸೇರಿದಂತೆ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿದವು.
ಅನಂತ್ ನಾಗ್ ಅವರು ಇತರ ನಟರೊಂದಿಗೆ ನಟಿಸಿರುವ ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆಗಿನ ‘ಕಾಮನಬಿಲ್ಲು’,ವಿಷ್ಣುವರ್ಧನ್ ಜೊತೆಗಿನ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ರವಿಚಂದ್ರನ್ ಅವರ ‘ರಣಧೀರ’, ಶಾಂತಿಕ್ರಾಂತಿ’ ಪ್ರಮುಖವಾದವು. ‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತದ ಜನಪ್ರಿಯ ಧಾರಾವಾಹಿಗಳಲ್ಲೊಂದಾದ, ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದರು.
ಸಂಖ್ಯೆ
|
ವರ್ಷ
|
ಚಿತ್ರದ ಹೆಸರು
|
ಚಿತ್ರ ನಿರ್ಮಾಣ ಸಂಸ್ಥೆ
|
ನಿರ್ದೇಶನ
|
ನಿರ್ಮಾಪಕರು
|
ಸಂಗೀತ
|
ಛಾಯಗ್ರಹಣ
|
೧
|
1973
|
ಸಂಕಲ್ಪ
|
|
ಪಿ. ವಿ. ನಂಜರಾಜ್ ಅರಸ್
|
ಪಿ. ವಿ. ನಂಜರಾಜ್ ಅರಸ್
|
೨
|
1975
|
ದೇವರ ಕಣ್ಣು
|
ಭಗವತಿ ಪ್ರೊಡಕ್ಷನ್ಸ್
|
ವೈ.ಆರ್.ಸ್ವಾಮಿ
|
ಎಸ್.ಎನ್.ಪಾಲ್
|
ಟಿ.ಜಿ.ಲಿಂಗಪ್ಪ
|
ಚಿಟ್ಟಿಬಾಬು
|
೩
|
1975
|
ಹಂಸಗೀತೆ
|
ಅನಂತಲಕ್ಷ್ಮಿ ಫಿಲಂಸ್
|
ಜಿ.ವಿ.ಐಯ್ಯರ್
|
ಜಿ.ವಿ.ಐಯ್ಯರ್
|
ಬಾಲಮುರಳಿ ಕೃಷ್ಣ
|
ನಿಮಾಯ್ ಘೋಶ್
|
೪
|
1976
|
ಬಯಲು ದಾರಿ
|
ಅನುಪಮ ಮೂವೀಸ್
|
ದೊರೈ-ಭಗವಾನ್
|
ದೊರೆ-ಭಗವಾನ್
|
ರಾಜನ್-ನಾಗೇಂದ್ರ
|
[[]]
|
೫
|
1977
|
ಕನ್ನೇಶ್ವರ ರಾಮ
|
ಶಾರದ ಮೂವೀಸ್
|
ಎಂ.ಎಸ್.ಸತ್ಯು
|
ಎಂ.ಭಕ್ತವತ್ಸಲ
|
ಬಿ.ವಿ.ಕಾರಾಂತ್
|
ಇಶಾನ್ ಆರ್ಯ
|
೬
|
1977
|
ಅನುರೂಪ
|
ಲಂಕೇಶ್ ಫಿಲಂಸ್
|
ಲಂಕೇಶ್
|
ಪಿ.ಲಂಕೇಶ್
|
ರಾಜೀವ್ ತಾರನಾಥ್
|
ಬಿ.ಸಿ.ಗೌರಿಶಂಕರ್
|
೭
|
1978
|
ಕುದುರೆಮುಖ
|
ಶ್ರೀ ಭಗವತಿ ಪ್ರೊಡಕ್ಷನ್ಸ್
|
ವೈ.ಆರ್.ಸ್ವಾಮಿ
|
ವೈ.ಆರ್.ಸ್ವಾಮಿ
|
ಟಿ.ಜಿ.ಲಿಂಗಪ್ಪ
|
ಆರ್.ಚಿಟ್ಟಿಬಾಬು
|
೮
|
1978
|
ಮಾತು ತಪ್ಪದ ಮಗ
|
ಭರತ ಸಿನಿ ಆರ್ಟ್ಸ್
|
ಪೇಕೇಟಿ ಶಿವರಾಂ
|
ಕೆ.ಆರ್.ಬಲಾನಿ
|
ಇಳಯರಾಜ
|
ಜೆ.ಸತ್ಯನಾರಾಯಣ
|
೯
|
1978
|
ಪ್ರೇಮಾಯಣ
|
ರೂಪಯನ್
|
ಗೀತಪ್ರಿಯ
|
ಎಂ.ಪ್ರಭಾಕರ್
|
ವಿಜಯಭಾಸ್ಕರ್
|
ಯು.ಎಮ್.ಎನ್.ಶರೀಫ್
|
೧೦
|
1978
|
ಮಧುರ ಸಂಗಮ
|
ಡಿ.ವಿ.ಆರ್.ಮೂವೀಸ್
|
ಟಿ.ಪಿ.ವೇಣುಗೋಪಾಲ್
|
ವಿ.ವಿಜಯಚಂದರ್
|
ರಾಜನ್-ನಾಗೇಂದ್ರ
|
ಎಮ್.ಎ.ರೆಹಮಾನ್
|
೧೧
|
1979
|
ನಾ ನಿನ್ನ ಬಿಡಲಾರೆ
|
ಸಪ್ತಸ್ವರ ಮೂವಿ ಮೇಕರ್ಸ್
|
ವಿಜಯ್
|
ಸಿ.ಜಯರಾಮ್
|
ರಾಜನ್-ನಾಗೇಂದ್ರ
|
ಎಸ್.ವಿ.ಶ್ರೀಕಾಂತ್
|
೧೨
|
೧೯೭೯
|
ಮುತ್ತು ಒಂದು ಮುತ್ತು
|
|
ಆರ್. ಎನ್. ಜಯಗೋಪಾಲ್
|
ಆರ್. ಎನ್. ಜಯಗೋಪಾಲ್
|
೧೩
|
1979
|
ಚಂದನದ ಗೊಂಬೆ
|
ಮಂತ್ರಾಲಯ ಆರ್ಟ್ ಮೂವೀಸ್
|
ದೊರೈ-ಭಗವಾನ್
|
ಎನ್.ಭಕ್ತವತ್ಸಲಂ
|
ರಾಜನ್-ನಾಗೇಂದ್ರ
|
೧೪
|
1980
|
ಮಿಂಚಿನ ಓಟ
|
ಸಂಕೇತ್
|
ಶಂಕರನಾಗ್
|
ಅನಂತನಾಗ್
|
ಎಲ್.ವೈದ್ಯನಾಥನ್
|
ಬಿ.ಸಿ.ಗೌರಿಶಂಕರ್
|
೧೫
|
1980
|
ಧೈರ್ಯ ಲಕ್ಷ್ಮಿ
|
ವಿಜಯವಾಣಿ ಕಂಬೈನ್ಸ್
|
ಗೋಪು
|
ಕೆ.ಎಸ್.ಅಶೋಕ್
|
ಜಿ.ಕೆ.ವೆಂಕಟೇಶ್
|
ಎಮ್.ಜಿ.ಬೆಂಜಮಿನ್
|
೧೬
|
1980
|
ಒಂದು ಹೆಣ್ಣು ಆರು ಕಣ್ಣು
|
ಮಹಿಜಾ ಫಿಲಂಸ್
|
ವಿ.ಮಧುಸೂದನರಾವ್
|
ಸಿ.ಹೆಚ್.ಪ್ರಕಾಶರಾವ್
|
ಎಸ್.ರಾಜೇಶ್ವರ ರಾವ್
|
ಎಸ್.ಎಸ್.ಲಾಲ್
|
೧೭
|
1980
|
ನಾರದ ವಿಜಯ
|
ಜೈನ್ ಕಂಬೈನ್ಸ್
|
ಸಿದ್ದಲಿಂಗಯ್ಯ
|
ಎನ್.ವೀರಸ್ವಾಮಿ
|
ಅಶ್ವತ್-ವೈದಿ
|
ಆರ್.ಮಧುಸೂದನ್
|
೧೮
|
1980
|
ಜನ್ಮ ಜನ್ಮದ ಅನುಬಂಧ
|
ಪುಷ್ಪ ಪ್ರೊಡಕ್ಷನ್ಸ್
|
ಶಂಕರನಾಗ್
|
ಎನ್.ಭಕ್ತವತ್ಸಲಂ
|
ಇಳಯರಾಜ
|
ಬಿ.ಸಿ.ಗೌರಿಶಂಕರ್
|
೧೯
|
1980
|
ಪ್ರೇಮಜ್ವಾಲೆ
|
ತುಮಕೂರು ಚಿತ್ರಾಲಯ
|
ಗೀತಪ್ರಿಯ
|
ಸಿ.ಪಿ.ಮೂಡಲಗಿರಿಯಪ್ಪ
|
ಎಮ್.ರಂಗರಾವ್
|
ಅಣ್ಣಯ್ಯ
|
೨೦
|
1981
|
ಅನುಪಮ
|
ವಿಜಯ ವಿನಾಯಕ ಮೂವಿ ಮೇಕರ್ಸ್
|
ರೇಣುಕಾಶರ್ಮ
|
ಜೆ.ಜಯಮ್ಮ
|
ಅಶ್ವತ್-ವೈದಿ
|
೨೧
|
1981
|
ಮರೆಯದ ಹಾಡು
|
ಕೆ.ವಿ.ಎಸ್.ಮೂವೀಸ್
|
ಆರ್.ಎನ್.ಜಯಗೋಪಾಲ್
|
ಕೆ.ವಿ.ಎಸ್.ಮೂವೀಸ್
|
ಜಿ.ಕೆ.ವೆಂಕಟೇಶ್
|
ಆರ್.ಎನ್.ಕೆ.ಪ್ರಸಾದ್
|
೨೨
|
1981
|
ಶ್ರೀಮಾನ್
|
ಗುರುಕರ್ ಫಿಲಂಸ್
|
ಗೀತಪ್ರಿಯ
|
ಮಂಜುಳ ಶಂಕರ್
|
ಉಪೇಂದ್ರಕುಮಾರ್
|
ಚಿಟ್ಟಿಬಾಬು
|
೨೩
|
1982
|
ಅಂದದ ಅರಮನೆ
|
ವರ್ಣಶ್ರೀ ಫಿಲಂಸ್
|
ವಿ.ಸೋಮಶೇಖರ್
|
ಪ್ರಮಿಳ ಶಂಕರ್
|
ಉಪೇಂದ್ರಕುಮಾರ್
|
ಬಿ.ಎಸ್.ಬಸವರಾಜ್
|
೨೪
|
1982
|
ಬಾಡದ ಹೂವು
|
ಕೆ.ಎಸ್.ಎನ್.ಮೂವೀಸ್
|
ಕೆ.ವಿ.ಜಯರಾಮ್
|
ಕೆ.ಎಸ್.ನಾರಾಯಣ್
|
ಅಶ್ವತ್-ವೈದಿ
|
ಬಿ.ಎಸ್.ಬಸವರಾಜ್
|
೨೫
|
1982
|
ಮುಳ್ಳಿನ ಗುಲಾಬಿ
|
ನವದುರ್ಗ ಪ್ರೊಡಕ್ಷನ್ಸ್
|
ವಿಜಯ್
|
ವಿಜಯರೆಡ್ಡಿ
|
ಸತ್ಯಂ
|
ಸಾಯಿ ಪ್ರಸಾದ್
|
೨೬
|
1982
|
ಬರ
|
ಎಂ.ಎಸ್.ಸತ್ಯು ಪ್ರೊಡಕ್ಷನ್ಸ್
|
ಎಂ.ಎಸ್.ಸತ್ಯು
|
ಎಂ.ಎಸ್.ಸತ್ಯು
|
ಅಶೋಕ್ ಗುಂಜಾಲ್
|
೨೭
|
1982
|
ನನ್ನ ದೇವರು
|
ರಾಜೇಶ್ವರಿ ಭಾಗ್ಯ ಕಲಾಮಂದಿರ
|
ಬಿ.ಮಲ್ಲೇಶ್
|
ಕೆ.ಎಸ್.ಅಶೋಕ್
|
ರಾಜನ್-ನಾಗೇಂದ್ರ
|
ಗೌರಿಶಂಕರ್
|
೨೮
|
1982
|
ಹಾಸ್ಯರತ್ನ ರಾಮಕೃಷ್ಣ
|
ವರ್ಣ ಪ್ರೊಡಕ್ಷನ್ಸ್
|
ಬಿ.ಎಸ್.ರಂಗ
|
ಬಿ.ಎಸ್.ರಂಗ
|
ಟಿ.ಜಿ.ಲಿಂಗಪ್ಪ
|
ಬಿ.ಎಸ್.ಹರಿದಾಸ್
|
೨೯
|
1982
|
ಬೆತ್ತಲೆ ಸೇವೆ
|
ಜನಪ್ರಿಯ ಮೂವೀಸ್
|
ಕೆ.ವಿ.ಜಯರಾಮ್
|
ಡಿ.ಟಿ.ಜಯಕುಮಾರ್
|
ರಾಜನ್-ನಾಗೇಂದ್ರ
|
ಬಿ.ಸಿ.ಗೌರಿಶಂಕರ್
|
೩೦
|
1983
|
ಸಿಂಹಾಸನ
|
ಅಜಂತ ಕಂಬೈನ್ಸ್
|
ಸಿ.ಆರ್.ಸಿಂಹ
|
ಎ.ಆರ್.ರಾಜು
|
ಅಶ್ವತ್-ವೈದಿ
|
ಎಸ್.ಯಾದವ್
|
೩೧
|
1983
|
ಅನ್ವೇಷಣೆ
|
ಸೌಮ್ಯ ಆರ್ಟ್ಸ್
|
ಟಿ.ಎಸ್.ನಾಗಾಭರಣ
|
ರಾಜಾ
|
ವಿಜಯಭಾಸ್ಕರ್
|
ಎಸ್.ರಾಮಚಂದ್ರ
|
೩೨
|
1983
|
ಬೆಂಕಿಯ ಬಲೆ
|
ಮಂತ್ರಾಲಯ ಆರ್ಟ್ಸ್ ಕಂಬೈನ್ಸ್
|
ದೊರೈ-ಭಗವಾನ್
|
ರಮೇಶ್
|
ರಾಜನ್-ನಾಗೇಂದ್ರ
|
[[]]
|
೩೩
|
1983
|
ಕಾಮನಬಿಲ್ಲು
|
ಪದ್ಮಾವತಿ ಸಿನಿ ಆರ್ಟ್ಸ್ ಫಿಲಂಸ್
|
ಚಿ.ದತ್ತರಾಜ್
|
ಜೆ.ಜಯಮ್ಮ
|
ಉಪೇಂದ್ರಕುಮಾರ್
|
ಬಿ.ಸಿ.ಗೌರಿಶಂಕರ್
|
೩೪
|
1983
|
ಭಕ್ತಪ್ರಹ್ಲಾದ
|
ವೈಷ್ಣವಿ ಮೂವೀಸ್
|
ವಿಜಯ್
|
ಎಸ್.ಎ.ಗೋವಿಂದರಾಜ್
|
ಟಿ.ಜಿ.ಲಿಂಗಪ್ಪ
|
[[]]
|
೩೫
|
1983
|
ಇಬ್ಬನಿ ಕರಗಿತು
|
ವರಲಕ್ಷ್ಮಿ ಮೂವೀಸ್
|
ಕೆ.ವಿ.ಜಯರಾಮ್
|
ಮೋಹನ್
|
ರಾಜನ್-ನಾಗೇಂದ್ರ
|
ಚಿಟ್ಟಿಬಾಬು
|
೩೫
|
1983
|
ಮುದುಡಿದ ತಾವರೆ ಅರಳಿತು
|
ಕಲಾನಿಕೇತನ್
|
ಕೆ.ವಿ.ಜಯರಾಮ್
|
ಹೆಚ್.ಎಸ್.ಅನಂತ
|
ಎಮ್.ರಂಗರಾವ್
|
ಎಸ್.ರಾಮಚಂದ್ರ
|
೩೬
|
1983
|
ಗಾಯತ್ರಿ ಮದುವೆ
|
ಗಾಯತ್ರಿ ಆರ್ಟ್ಸ್ ಫಿಲಂಸ್
|
ಬಿ.ಮಲ್ಲೇಶ್
|
ಲಕ್ಷ್ಮಣ್
|
ರಾಜನ್-ನಾಗೇಂದ್ರ
|
ಬಿ.ಸಿ.ಗೌರಿಶಂಕರ್
|
೩೭
|
1983
|
ಮಕ್ಕಳೇ ದೇವರು
|
ಬಾಲ ತ್ರಿಪುರ ಸುಂದರಿ ಕಂಬೈನ್ಸ್
|
ಆರ್.ಎನ್.ಜಯಗೋಪಾಲ್
|
ವೈ.ಯಶೋದಮ್ಮ
|
ಸತ್ಯಂ
|
ಪಿ.ಭಾಸ್ಕರರಾವ್
|
೩೮
|
1983
|
ಚಲಿಸದ ಸಾಗರ
|
ನವದುರ್ಗ ಪ್ರೊಡಕ್ಷನ್ಸ್
|
ವಿಜಯ್
|
ವಿಜಯರೆಡ್ಡಿ
|
ಸತ್ಯಂ
|
ಅಣ್ಣಯ್ಯ
|
೩೯
|
1983
|
ನೋಡಿ ಸ್ವಾಮಿ ನಾವಿರೋದು ಹೀಗೆ
|
ಗಾಯತ್ರಿ ಚಿತ್ರಾಲಯ
|
ಶಂಕರನಾಗ್
|
ರಮೇಶ್ ಭಟ್
|
ಜಿ.ಕೆ.ವೆಂಕಟೇಶ್
|
ಕುಲಶೇಖರ್
|
೪೦
|
1984
|
ಸುಖ ಸಂಸಾರಕ್ಕೆ ೧೨ ಸೂತ್ರಗಳು
|
[[]]
|
ರಾಜಾಚಂದ್ರ
|
ಹೆಚ್.ಆರ್.ಪ್ರಭಾಕರ್
|
ಚಕ್ರವರ್ತಿ
|
ಚಂಗಯ್ಯ
|
೪೧
|
1984
|
ಪ್ರೇಮವೆ ಬಾಳಿನ ಬೆಳಕು
|
ಭುವನೇಶ್ವರಿ ಆರ್ಟ್ಸ್ ಪ್ರೊಡಕ್ಷನ್ಸ್
|
ಎ.ವಿ.ಶೇಷಗಿರರಾವ್
|
ಅಂಕಲಗಿ ಬ್ರದರ್ಸ್
|
ಎಮ್.ರಂಗರಾವ್
|
[[]]
|
೪೨
|
1984
|
ಪ್ರೇಮಸಾಕ್ಷಿ
|
ಪ್ರಭಾತ್ ಪಿಚ್ಚರ್ಸ್
|
ಮಲ್ಲೇಶ್
|
ಹೆಚ್.ವಿ.ನಾಗೇಂದ್ರಪ್ಪ
|
ರಾಜನ್-ನಾಗೇಂದ್ರ
|
ಬಿ.ಸಿ.ಗೌರಿಶಂಕರ್
|
೪೩
|
1984
|
ರಾಮಾಪುರದ ರಾವಣ
|
ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ಸ್
|
ರಾಜಾಚಂದ್ರ
|
ಸಿ.ಜಯರಾಮ್
|
ಉಪೇಂದ್ರಕುಮಾರ್
|
ಗೌರಿಶಂಕರ್
|
೪೪
|
1984
|
ಒಲವೇ ಬದುಕು
|
ದುರ್ಗ ದತ್ತ ಎಂಟರ್‌ಪ್ರೈಸಸ್
|
ಕೆ.ವಿ.ಜಯರಾಮ್
|
ಕೆ.ವಿ.ಜಯರಾಮ್
|
ಎಮ್.ರಂಗರಾವ್
|
ಎಸ್.ರಾಮಚಂದ್ರ
|
೪೫
|
1984
|
ಆಕ್ಸಿಡೆಂಟ್
|
ಸಂಕೇತ್
|
ಶಂಕರನಾಗ್
|
ಸಂಕೇತ್
|
ಇಳಯರಾಜ
|
ಶಂಕರ್
|
೪೬
|
1984
|
ಮಕ್ಕಳಿರಲವ್ವ ಮನೆತುಂಬ
|
ದುರ್ಗ ದತ್ತ ಎಂಟರ್‌ಪ್ರೈಸಸ್
|
ಟಿ.ಎಸ್.ನಾಗಾಭರಣ
|
ಶಿವಾನಂದ್ ಸವಣೂರ್
|
ಜಿ.ಕೆ.ವೆಂಕಟೇಶ್
|
ಕುಲಶೇಖರ್
|
೪೭
|
1985
|
ಬಿಡುಗಡೆಯ ಬೇಡಿ
|
ಶ್ರೀ ಮಂತ್ರಾಲಯ ಎಂಟರ್‌ಪ್ರೈಸಸ್
|
ದೊರೈ-ಭಗವಾನ್
|
ರಮೇಶ್ ರಿಜ್ವಿ
|
ರಾಜನ್-ನಾಗೇಂದ್ರ
|
[[]]
|
೪೮
|
1985
|
ಪರಮೇಶಿ ಪ್ರೇಮ ಪ್ರಸಂಗ
|
ಗಾಯತ್ರಿ ಚಿತ್ರಾಲಯ
|
ರಮೇಶ್ ಭಟ್
|
ರಮೇಶ್ ಭಟ್
|
ಜಿ.ಕೆ.ವೆಂಕಟೇಶ್
|
ಕುಲಶೇಖರ್
|
೪೯
|
1985
|
ಶ್ವೇತಗುಲಾಬಿ
|
ಜಯದುರ್ಗ ಕಂಬೈನ್ಸ್
|
ಕೆ.ವಿ.ಜಯರಾಮ್
|
ಕೆ.ವಿ.ಜಯರಾಮ್
|
ಕಲ್ಯಾಣ್ ವೆಂಕಟೇಶ್
|
ಎಸ್.ರಾಮಚಂದ್ರ
|
೫೦
|
1985
|
ಹಾವು ಏಣಿಯಾಟ
|
ಶ್ರೀ ಸಾಯಿ ಗುರು ಫಿಲಂಸ್
|
ವಿ.ಆರ್.ಕೆ.ಪ್ರಸಾದ್
|
ಎಂ.ಎಸ್.ಎಸ್.ಮೂರ್ತಿ
|
ವಿಜಯಭಾಸ್ಕರ್
|
ಮಧು ಅಂಬಟ್
|
೫೧
|
1985
|
ಸೇಡಿನ ಹಕ್ಕಿ
|
ವರಲಕ್ಷ್ಮಿ ಮೂವೀಸ್
|
ದೊರೈ-ಭಗವಾನ್
|
ವರಲಕ್ಷ್ಮಿ
|
ರಾಜನ್-ನಾಗೇಂದ್ರ
|
ಚಿಟ್ಟಿಬಾಬು
|
೫೨
|
1985
|
ಶಬ್ದಗಳು
|
ಶ್ರೀ ಬಹದ್ದೂರ್ ಆರ್ಟ್ಸ್
|
ಸುರೇಶ್ ದಾವಣಗೆರೆ
|
ಎಂ.ಸುರೇಶ್
|
ರಾಜನ್-ನಾಗೇಂದ್ರ
|
ನಿಮಯ್ ಘೋಶ್
|
೫೩
|
1985
|
ಹೆಂಡ್ತಿ ಬೇಕು ಹೆಂಡ್ತಿ
|
ಪ್ರಭಾತ್ ಪಿಚ್ಚರ್ಸ್
|
ಅನಿಲ್ ಆನಂದ್
|
ಹೆಚ್.ವಿ.ನಾಗೇಂದ್ರಪ್ಪ
|
ಎಮ್.ರಂಗರಾವ್
|
ದೇವಧರ್
|
೫೪
|
1986
|
ಹೊಸ ನೀರು
|
ಪಂಚಮ್ ಮೂವಿ ಮೇಕರ್ಸ್
|
ಕೆ.ವಿ.ಜಯರಾಮ್
|
ಕೆ.ಎಸ್.ಸಚಿದಾನಂದ್
|
ಜಿ.ಕೆ.ವೆಂಕಟೇಶ್
|
ಬಿ.ಎಸ್.ಬಸವರಾಜ್
|
೫೫
|
1986
|
ನೆನಪಿನ ದೋಣಿ
|
ಸಂತೋಷ್ ಕಂಬೈನ್ಸ್
|
ಟಿ.ಎಸ್.ನಾಗಾಭರಣ
|
ವಿ.ವರ್ಗೀಸ್
|
ವಿಜಯಭಾಸ್ಕರ್
|
ಬಿ.ಸಿ.ಗೌರಿಶಂಕರ್
|
೫೬
|
1986
|
ಅರುಣರಾಗ
|
ಜಯದುರ್ಗ ಫಿಲಂಸ್
|
ಕೆ.ವಿ.ಜಯರಾಮ್
|
ಮೀನಾಕ್ಷಿ ಜಯರಾಮ್
|
ಎಮ್.ರಂಗರಾವ್
|
ಮಾಪಾಕ್ಷಿ
|
೫೭
|
1986
|
ಮನೆಯೇ ಮಂತ್ರಾಲಯ
|
ರೋಹಿಣಿ ಪಿಚ್ಚರ್ಸ್
|
ಭಾರ್ಗವ
|
ರೋಹಿಣಿ ಪಿಚ್ಚರ್ಸ್
|
ಎಮ್.ರಂಗರಾವ್
|
ಡಿ.ವಿ.ರಾಜಾರಾಮ್
|
೫೮
|
1987
|
ತಾಯಿ
|
ಪ್ರಗತಿ ಎಂಟರ್‌ಪ್ರೈಸಸ್
|
ಪೇರಾಲ
|
ಕೆ.ಸಿ.ಎನ್.ಚಂದ್ರ
|
ಸತ್ಯಂ
|
ಸುಂದರನಾಥ್ ಸುವರ್ಣ
|
೫೯
|
1987
|
ಅಗ್ನಿಪರ್ವ
|
ಶ್ರೀ ತುಳಸಿ ಪ್ರೊಡಕ್ಷನ್ಸ್
|
ಕೆ.ಸುಂದರನಾಥ ಸುವರ್ಣ
|
ಸುಂದರನಾಥ್ ಸುವರ್ಣ
|
ವೈದ್ಯನಾಥನ್
|
ಸುಂದರನಾಥ್ ಸುವರ್ಣ
|
೬೦
|
1987
|
ಅವಸ್ಥೆ
|
ಚಿಗುರು ಮೂವೀಸ್
|
ಕೃಷ್ಣ ಮಸಡಿ
|
ಮಹಿಮಾ ಪಟೇಲ್
|
ವಿಜಯಭಾಸ್ಕರ್
|
ಎಸ್.ರಾಮಚಂದ್ರ
|
೬೧
|
1987
|
ಕುರುಕ್ಷೇತ್ರ
|
ರೋಹಿಣಿ ಪಿಚ್ಚರ್ಸ್
|
ಭಾರ್ಗವ
|
ಅನುರಾಧ
|
ಎಮ್.ರಂಗರಾವ್
|
ಆರ್.ಮಧುಸೂದನ್
|
೬೨
|
1987
|
ಅತಿರಥ ಮಹಾರಥ
|
ಜ್ಯೋತಿ ಆರ್ಟ್ ಮೂವೀಸ್
|
ಪೇರಾಲ
|
ಭೀಮವರಪು
|
ಚಕ್ರವರ್ತಿ
|
ಕಬೀರ್ ಲಾಲ್
|
೬೩
|
1987
|
ದೈವಶಕ್ತಿ
|
ಎ.ಎನ್.ಎಸ್.ಪ್ರೊಡಕ್ಷನ್ಸ್
|
ರೇಣುಕಾಶರ್ಮ
|
ಬಿ.ಎನ್.ಗಂಗಾಧರ್
|
ಹಂಸಲೇಖ
|
ಪ್ರಸಾದ್ ಬಾಬು
|
೬೪
|
1988
|
ಬ್ರಹ್ಮ ವಿಷ್ಣು ಮಹೇಶ್ವರ
|
ರೋಹಿಣಿ ಪಿಚ್ಚರ್ಸ್
|
ರಾಜಾಚಂದ್ರ
|
ಅಮ್ರತ್ ಸಿಂಗ್
|
ವಿಜಯಾನಂದ್
|
[[]]
|
೬೫
|
1988
|
ರಣಧೀರ
|
ಈಶ್ವರಿ ಪ್ರೊಡಕ್ಷನ್ಸ್
|
ವಿ.ರವಿಚಂದ್ರನ್
|
ವಿ.ರವಿಚಂದ್ರನ್
|
ಹಂಸಲೇಖ
|
ಆರ್.ಮಧುಸೂದನ್
|
೬೬
|
1988
|
ಶಾಂತಿನಿವಾಸ
|
ವಿಜಯ ಸಿನಿ ಪ್ರೊಡಕ್ಷನ್ಸ್
|
ಭಾರ್ಗವ
|
ಆರ್.ಎಫ್.ಮಾಣಿಕ್ ಚಂದ್
|
ಎಮ್.ರಂಗರಾವ್
|
ಡಿ.ವಿ.ರಾಜಾರಾಮ್
|
೬೭
|
1988
|
ವರ್ಣಚಕ್ರ
|
ನಾಗೇಶ್ ಇಂಟರ್ನಾಷನಲ್
|
ಕೆ.ವಿ.ಜಯರಾಮ್
|
ಕೆ.ಟಿ.ವೆಂಕಟಗಿರಿ
|
ಕಲ್ಯಾಣ್ ವೆಂಕಟೇಶ್
|
ಎಸ್.ರಾಮಚಂದ್ರ
|
೬೮
|
1988
|
ಶ್ರೀ.ವೆಂಕಟೇಶ್ವರ ಮಹಿಮೆ
|
ಎಸ್.ಆರ್.ಸಿನಿ ಅಸೋಷಿಯೇಟ್ಸ್
|
ಅನಿಲ್ ಬೈಂದೂರು
|
ಎಸ್.ಆರ್.ಸಿನಿ
|
ಎಮ್.ಎಸ್.ವಿಶ್ವನಾಥನ್
|
ಬಿ.ಎಸ್.ಬಸವರಾಜ್
|
೬೯
|
1988
|
ಬಾಳೊಂದು ಭಾವಗೀತೆ
|
ವಿಜಯೇಶ್ವರಿ
|
ಗೀತಪ್ರಿಯ
|
ಗೀತ ಶ್ರೀನಾಥ್
|
ಹಂಸಲೇಖ
|
ಬಿ.ಎನ್.ಹರಿದಾಸ್
|
೭೦
|
1988
|
ಮುತ್ತೈದೆ
|
ಚಿತ್ರ ಪ್ರೊಡಕ್ಷನ್ಸ್
|
ರೇಣುಕಾಶರ್ಮ
|
ಕೆ.ಚಿದಂಬರಶೆಟ್ಟಿ
|
ಎಮ್.ರಂಗರಾವ್
|
ವಿ.ಪ್ರಭಾಕರ್
|
೭೧
|
1989
|
ಅಮಾನುಷ
|
ಪೃಥ್ವಿ ಕ್ರಿಯೇಷನ್ಸ್
|
ನಂಜುಂಡೇಗೌಡ
|
ಪಾಂಡುರಂಗವಿಠಲ
|
ಹಂಸಲೇಖ
|
ಸುಂದರನಾಥ್ ಸುವರ್ಣ
|
೭೨
|
1989
|
ಹೆಂಡ್ತಿಗೇಳ್ಬೇಡಿ
|
ರಕ್ಷಿತಾ ಫಿಲಂಸ್
|
ದಿನೇಶ್ ಬಾಬು
|
ಶೋಭಪ್ರಕಾಶ್
|
ವಿಜಯಾನಂದ್
|
ದಿನೇಶ್ ಬಾಬು
|
೭೩
|
1989
|
ಇದು ಸಾಧ್ಯ
|
ಜೈನ್ ಮೂವೀಸ್
|
ದಿನೇಶ್ ಬಾಬು
|
ದಿನೇಶ್ ಬಾಬು
|
ವಿಜಯಾನಂದ್
|
ದಿನೇಶ್ ಬಾಬು
|
೭೪
|
1989
|
ಗಗನ
|
ರವಿಕಿರಣ್ ಕಂಬೈನ್ಸ್
|
ದೊರೈ-ಭಗವಾನ್
|
ಎಸ್.ಆರ್.ಕೃಷ್ಣನ್
|
ರಾಜನ್-ನಾಗೇಂದ್ರ
|
ಕೃಷ್ಣ
|
೭೫
|
1990
|
ಗೋಲ್ಮಾಲ್ ರಾಧಾಕೃಷ್ಣ
|
ಚಿತ್ರ ಪ್ರೊಡಕ್ಷನ್ಸ್
|
ಸಾಯಿಪ್ರಕಾಶ್
|
ಕೆ.ಚಿದಂಬರಶೆಟ್ಟಿ
|
ಎಮ್.ರಂಗರಾವ್
|
ಜೆ.ಜಿ.ಕೃಷ್ಣ
|
೭೬
|
1990
|
ರಾಮರಾಜ್ಯದಲ್ಲಿ ರಾಕ್ಷಸರು
|
ಪ್ರಗತಿ ಎಂಟರ್‌ಪ್ರೈಸಸ್
|
ಡಿ.ರಾಜೇಂದ್ರಬಾಬು
|
ಕೆ.ಸಿ.ಎನ್.ಮೋಹನ್
|
ಎಮ್.ರಂಗರಾವ್
|
ಬಿ.ಎಸ್.ಬಸವರಾಜ್
|
೭೭
|
1990
|
ಸ್ವರ್ಣ ಸಂಸಾರ
|
ಶ್ರೀ ದೇವಿ ಪಿಚ್ಚರ್ಸ್
|
ಸಾಯಿಪ್ರಕಾಶ್
|
ಸಾಯಿಪ್ರಕಾಶ್
|
ಉಪೇಂದ್ರಕುಮಾರ್
|
ಕೃಷ್ಣ
|
೭೮
|
1990
|
ಚಾಲೆಂಜ್ ಗೋಪಾಲಕೃಷ್ಣ
|
ಚಿತ್ರ ಪ್ರೊಡಕ್ಷನ್ಸ್
|
ಸಾಯಿಪ್ರಕಾಶ್
|
ಕೆ.ಚಿದಂಬರಶೆಟ್ಟಿ
|
ಉಪೇಂದ್ರಕುಮಾರ್
|
ಆರ್.ಎನ್.ಕೆ.ಪ್ರಸಾದ್
|
೭೯
|
1990
|
ಉದ್ಭವ
|
ಸ್ಪಂದನ ಕ್ರಿಯೇಷನ್ಸ್
|
ಕೋಡ್ಲು ರಾಮಕೃಷ್ಣ
|
ಕೋಡ್ಲು ರಾಮಕೃಷ್ಣ
|
ಮೈಸೂರು ಗೋಪಿ
|
ಬಿ.ಎಸ್.ಬಸವರಾಜ್
|
೮೦
|
1990
|
ಅಭಿಮನ್ಯು
|
ಶ್ರೀ ಸುದರ್ಶನ್ ಪ್ರೊಡಕ್ಷನ್ಸ್
|
ರವಿರಾಜ
|
ಬಾಬು
|
ಹಂಸಲೇಖ
|
ಲೋಕಸಿಂಗ್
|
೮೧
|
1990
|
ಮತ್ತೆ ಹಾಡಿತು ಕೋಗಿಲೆ
|
ಶ್ರೀ ಶಂಕರಿ ಪ್ರೊಡಕ್ಷನ್ಸ್
|
ಭಾರ್ಗವ
|
ಎಸ್.ಶಂಕರ್
|
ರಾಜನ್-ನಾಗೇಂದ್ರ
|
ಡಿ.ವಿ.ರಾಜಾರಾಮ್
|
೮೨
|
1990
|
ಅನಂತ ಪ್ರೇಮ
|
ನೂರ್ ಜಹಾನ್ ಫಿಲಂಸ್
|
ಜನಾರ್ಧನ್
|
ನೂರ್ ಜಹಾನ್
|
ಹಂಸಲೇಖ
|
ಟಿ.ಜನಾರ್ಧನ್
|
೮೩
|
1990
|
ಗಣೇಶನ ಮದುವೆ
|
ಕಲಾಪ್ರಿಯ
|
ಫಣಿರಾಮಚಂದ್ರ
|
ಪದ್ಮ ಸುದೀಂದ್ರ
|
ರಾಜನ್-ನಾಗೇಂದ್ರ
|
ಆರ್.ಮಂಜುನಾಥ್
|
೮೪
|
1990
|
ಇವಳೆಂಥಾ ಹೆಂಡ್ತಿ
|
ರೋಹನ್ ಫಿಲಂ ಕಂಬೈನ್ಸ್
|
ಮುದ್ದುರಾಜ್
|
ಶ್ಯಾಮ್ ಎನ್.ಶೆಟ್ಟಿ
|
ಉಪೇಂದ್ರಕುಮಾರ್
|
ಶ್ರೀರಂಗ
|
೮೫
|
1991
|
ಮನೇಲಿ ಇಲಿ ಬೀದೀಲಿ ಹುಲಿ
|
ಮಂತ್ರಾಲಯ ಎಂಟರ್‌ಪ್ರೈಸಸ್
|
ಸಾಯಿಪ್ರಕಾಶ್
|
ಬಿ.ಹೆಚ್.ಬುಚ್ಚಿರೆಡ್ಡಿ
|
ಶಂಕರ್-ಗಣೇಶ್
|
ಜಾನಿಲಾಲ್
|
೮೬
|
1991
|
ಗೋಲ್ಮಾಲ್ ಭಾಗ-೨
|
ಬಿ.ಆರ್.ಪ್ರೊಡಕ್ಷನ್ಸ್
|
ಸಾಯಿಪ್ರಕಾಶ್
|
ಕೆ.ಎಸ್.ರಾಮನ್
|
ಉಪೇಂದ್ರಕುಮಾರ್
|
ಕಬೀರ್ ಲಾಲ್
|
೮೭
|
1991
|
ರೋಲ್‌ಕಾಲ್ ರಾಮಕೃಷ್ಣ
|
ಸಂಮೃದ್ದ ಎಂಟರ್‌ಪ್ರೈಸಸ್
|
ಬಿ.ರಾಮಮೂರ್ತಿ
|
ಎಸ್.ಆರ್.ರಾಜೇಶ್ವರಿ
|
ಉಪೇಂದ್ರಕುಮಾರ್
|
ಕೃಷ್ಣ
|
೮೮
|
1991
|
ಗೌರಿ ಗಣೇಶ
|
ಕಲಾಸಿಂಧು
|
ಫಣಿರಾಮಚಂದ್ರ
|
ಜಿ.ವಿಶ್ವನಾಥ
|
ರಾಜನ್-ನಾಗೇಂದ್ರ
|
ಆರ್.ಮಂಜುನಾಥ್
|
೮೯
|
1991
|
ಹೊಸಮನೆ ಅಳಿಯ
|
ಯಶಸ್ವಿ ಎಂಟರ್‌ಪ್ರೈಸಸ್
|
ಬಿ.ರಾಮಮೂರ್ತಿ
|
ಪುಷ್ಪ ಎಸ್.ಮೂರ್ತಿ
|
ಮನೋರಂಜನ್ ಪ್ರಭಾಕರ್
|
ಬಿ.ಎಸ್.ಶಾಸ್ತ್ರಿ
|
೯೦
|
1991
|
ನಾಗಿಣಿ
|
ಶ್ರೀ ಲಕ್ಷ್ಮಿ ಪ್ರೊಡಕ್ಷನ್ಸ್
|
ಶ್ರೀಪ್ರಿಯ
|
ಬಿ.ಎನ್.ಗಂಗಾಧರ್
|
ಶಂಕರ್-ಗಣೇಶ್
|
ಪ್ರಸಾದ್ ಬಾಬು
|
೯೧
|
1992
|
ಉಂಡು ಹೋದ ಕೊಂಡು ಹೋದ
|
ಪದ್ಮಾಂಬ ಕಂಬೈನ್ಸ್
|
ನಾಗತಿಹಳ್ಳಿ ಚಂದ್ರಶೇಖರ್
|
ಜಿ.ಕುಮಾರಸ್ವಾಮಿ
|
ವಿಜಯಭಾಸ್ಕರ್
|
ಎಸ್.ರಾಮಚಂದ್ರ
|
೯೨
|
1992
|
ವಜ್ರಾಯುಧ
|
ಸಂಮೃದ್ದ ಎಂಟರ್‌ಪ್ರೈಸಸ್
|
ಬಿ.ರಾಮಮೂರ್ತಿ
|
ಎಸ್.ಆರ್.ರಾಜೇಶ್ವರಿ
|
ಹಂಸಲೇಖ
|
ವಿ.ಕೆ.ಕಣ್ಣನ್
|
೯೩
|
1992
|
ಗಣೇಶ ಸುಬ್ರಹ್ಮಣ್ಯ
|
ಕಲಾಪ್ರೇಮಿ
|
ಫಣಿರಾಮಚಂದ್ರ
|
ವಿಶ್ವಸಾಗರ್
|
ವಿ.ಮನೋಹರ್
|
ಆರ್.ಮಂಜುನಾಥ್
|
೯೪
|
1992
|
ಒಂದು ಸಿನಿಮಾ ಕಥೆ
|
ಗಾಯತ್ರಿ ಸಿನಿ ಕ್ರಿಯೇಷನ್ಸ್
|
ಫಣಿರಾಮಚಂದ್ರ
|
ಕೃಷ್ಣ
|
ರಾಜನ್-ನಾಗೇಂದ್ರ
|
ಬಿ.ಎಸ್.ಸಿಂಗ್
|
೯೫
|
1992
|
ಶಕ್ತಿ ಯುಕ್ತಿ
|
ಸಿ.ಕೆ.ಪ್ರೊಡಕ್ಷನ್ಸ್
|
ಬಿ.ರಾಮಮೂರ್ತಿ
|
ಎಲ್.ಎನ್.ಚಕ್ರವರ್ತಿ
|
ಮನೋರಂಜನ್ ಪ್ರಭಾಕರ್
|
ಬಿ.ಎಸ್.ಶಾಸ್ತ್ರಿ
|
೯೬
|
1992
|
ಮರಣ ಮೃದಂಗ
|
ಶ್ರೀ ಚಿತ್ರ ಕ್ರಿಯೇಷನ್ಸ್
|
ಬಿ.ರಾಮಮೂರ್ತಿ
|
ಕೆ.ಚಿದಂಬರಶೆಟ್ಟಿ
|
ಹಂಸಲೇಖ
|
ಮಲ್ಲಿಕಾರ್ಜುನ್
|
೯೭
|
1992
|
ಝೇಂಕಾರ
|
ತ್ರೀಮೂರ್ತಿ ಎಂಟರ್‌ಪ್ರೈಸಸ್
|
ರಘುರಾಮ್
|
ದಿನೇಶ್ ಪಟೇಲ್
|
ಹಂಸಲೇಖ
|
ಜೆ.ರಾಬರ್ಟ್
|
೯೮
|
1993
|
ರಾಜಕೀಯ
|
ಮುತ್ಯಾಲಮ್ಮನ್ ಕ್ರಿಯೇಷನ್ಸ್
|
ಶಿವಮಣಿ
|
ಪಿ.ಪಿ.ವರದರಾಜನ್
|
ಹಂಸಲೇಖ
|
ಸುಂದರನಾಥ್ ಸುವರ್ಣ
|
೯೯
|
1993
|
ಆತಂಕ
|
ಎಸ್.ಎಸ್.ಪ್ರೊಡಕ್ಷನ್ಸ್
|
ಸಾಯಿಪ್ರಕಾಶ್
|
ಶಾರದ ಶಾಸ್ತ್ರಿ
|
ಹಂಸಲೇಖ
|
ಜಾನಿಲಾಲ್
|
೧೦೦
|
1993
|
ಮಾಂಗಲ್ಯ ಬಂಧನ
|
ಅನುಪಮ ಆರ್ಟ್ಸ್
|
ದೊರೈ-ಭಗವಾನ್
|
ಎಸ್.ಕೆ.ಭಗವಾನ್
|
ಹಂಸಲೇಖ
|
ಜೆ.ಜಿ.ಕೃಷ್ಣ
|
೧೦೧
|
1993
|
ಕಾದಂಬರಿ
|
ಕಲಸಂಗಮ
|
ಕೋಡ್ಲು ರಾಮಕೃಷ್ಣ
|
ಸಾವಿತ್ರಿ
|
ಹಂಸಲೇಖ
|
ಎಸ್.ರಾಮಚಂದ್ರ
|
೧೦೨
|
1993
|
ನಿಷ್ಕರ್ಷ
|
ಸೃಷ್ಟಿ ಫಿಲಂಸ್
|
ಸುನಿಲ್ ಕುಮಾರ್ ದೇಸಾಯಿ
|
ದೊಡ್ಡಬಸವನ
|
ಗುಣಸಿಂಗ್
|
ಪಿ.ರಾಜನ್
|
೧೦೩
|
1994
|
ತೂಗುವೆ ಕೃಷ್ಣನ
|
ಗಾಯತ್ರಿ ಸಿನಿ ಕ್ರಿಯೇಷನ್ಸ್
|
ವಸಂತ ಕುಣಿಗಲ್
|
ಬಿ.ಎಸ್.ಕೃಷ್ಣ
|
ಮನೋರಂಜನ್ ಪ್ರಭಾಕರ್
|
ಬಿ.ಸತ್ಯನಾರಾಯಣ
|
೧೦೪
|
1994
|
ಯಾರಿಗೂ ಹೇಳ್ಬೇಡಿ
|
ಶ್ರೀ ಬನಶಂಕರಿ ಕಂಬೈನ್ಸ್
|
ಕೋಡ್ಲು ರಾಮಕೃಷ್ಣ
|
ಆಶ ಗುಣಶೇಖರ್
|
ರಾಜನ್-ನಾಗೇಂದ್ರ
|
ಎಸ್.ರಾಮಚಂದ್ರ
|
೧೦೫
|
1995
|
ಬೆಳದಿಂಗಳ ಬಾಲೆ
|
ಸಹನ ಪ್ರೊಡಕ್ಷನ್ಸ್
|
ಸುನಿಲ್ ಕುಮಾರ್ ದೇಸಾಯಿ
|
ಬಿ.ಎಸ್.ಮುರಳಿ
|
ಗುಣಸಿಂಗ್
|
ಪಿ.ರಾಜನ್
|
೧೦೬
|
1995
|
ನಿಲುಕದ ನಕ್ಷತ್ರ
|
ಮುಕ್ತ ಮೂವೀಸ್
|
ಕೋಡ್ಲು ರಾಮಕೃಷ್ಣ
|
ಎಸ್.ನಾಗರಾಜ್
|
ಸಂಗೀತ ರಾಜ
|
ಎಸ್.ರಾಮಚಂದ್ರ
|
೧೦೭
|
1996
|
ಸಮಕ್ಕೊಂದು ಸುಳ್ಳು
|
ಬಿ.ಆರ್.ಪ್ರೊಡಕ್ಷನ್ಸ್
|
ಸಾಯಿಪ್ರಕಾಶ್
|
ಕೆ.ಎಸ್.ರಾಮನ್
|
ಉಪೇಂದ್ರಕುಮಾರ್
|
ಭಾಷಲಾಲ್
|
೧೦೮
|
1996
|
ತಾಳಿ ಪೂಜೆ
|
ವಿಷ್ಣು ಪ್ರೊಡಕ್ಷನ್ಸ್
|
ವಿ.ಚಂದ್ರಹಾಸ
|
ಎಸ್.ಎಸ್.ಹೆಗ್ಡೆ
|
ಹಂಸಲೇಖ
|
ಸಿ.ಡಿ.ರಾಜು
|
೧೦೯
|
1996
|
ನಿರ್ಬಂಧ
|
ಸೃಷ್ಟಿ ಫಿಲಂಸ್
|
ಹೆಚ್.ಎಸ್.ರಾಜಶೇಖರ್
|
ದೊಡ್ಡಗೌಡ ಪಾಟೀಲ್
|
ರಾಜೇಶ್ ರಾಮನಾಥ್
|
ಸುಂದರನಾಥ್ ಸುವರ್ಣ
|
೧೧೦
|
1996
|
ಜೀವನದಿ
|
ಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್
|
ಡಿ.ರಾಜೇಂದ್ರಬಾಬು
|
ಪಿ.ಧನರಾಜ್
|
ಕೋಟಿ
|
ಪ್ರಸಾದ್ ಬಾಬು
|
೧೧೧
|
1997
|
ಗಣೇಶ ಐ ಲವ್ ಯು
|
ಜಿ.ಆರ್.ಕೆ.ಕ್ರಿಯೇಷನ್ಸ್
|
ಹೆಚ್.ಎಸ್.ಫಣಿರಾಮಚಂದ್ರ
|
ಜಿ.ಆರ್.ಕೆ.ಕ್ರಿಯೇಷನ್ಸ್
|
ರಾಜೇಶ್ ರಾಮನಾಥ್
|
ಆರ್.ಮಂಜುನಾಥ್
|
೧೧೨
|
1999
|
ವಿಶ್ವ
|
[[]]
|
ಶಿವಮಣಿ
|
ಪಿ.ಧನರಾಜ್
|
ಹಂಸಲೇಖ
|
ರಮೇಶ್ ಬಾಬು
|
೧೧೩
|
1999
|
ನಾನೇನು ಮಾಡಿಲ್ಲ
|
[[]]
|
ದಿನೇಶ್ ಬಾಬು
|
ಎನ್.ಚಂದ್ರಕುಮಾರ್
|
ಕೆ.ಕಲ್ಯಾಣ್
|
ಪಿ.ಕೆ.ಹೆಚ್.ದಾಸ್
|
೧೧೪
|
2000
|
ಟೈಗರ್ ಪದ್ಮಿನಿ
|
ರೇಣುಕ ಮೂವೀಸ್
|
ಬಿ.ಮಲ್ಲೇಶ್
|
ರೇಣುಕಾದೇವಿ
|
ಹಂಸಲೇಖ
|
ಕಣ್ಣನ್
|
೧೧೫
|
2000
|
ಚಾಮುಂಡಿ
|
ರಾಮು ಎಂಟರ್‌ಪ್ರೈಸಸ್
|
ಎ.ಮೋಹನ್ ಗಾಂಧಿ
|
ರಾಮು
|
ಹಂಸಲೇಖ
|
ಪ್ರತಾಪ್
|
೧೧೬
|
2000
|
ಕೃಷ್ಣಲೀಲಾ
|
ರಾಕ್‌ಲೈನ್ ಪ್ರೊಡಕ್ಷನ್ಸ್
|
ಡಿ.ರಾಜೇಂದ್ರಬಾಬು
|
ರಾಕಲೈನ್ ವೆಂಕಟೇಶ್
|
ವಿ.ಮನೋಹರ್
|
ಬಿ.ಸಿ.ಗೌರಿಶಂಕರ್
|
೧೧೭
|
2000
|
ನನ್ನ್ ಹೆಂಡ್ತಿ ಚೆನ್ನಾಗಿದ್ದಾಳೆ
|
ಭವಾನಿ ಫಿಲಂಸ್
|
ದಿನೇಶ್ ಬಾಬು
|
ದಿನೇಶ್ ಬಾಬು
|
ರಾಜೇಶ್ ರಾಮನಾಥ್
|
ಪಿ.ಕೆ.ಹೆಚ್.ದಾಸ್
|
೧೧೮
|
2000
|
ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ
|
ಶ್ರೀ ಮಂಜುನಾಥ ಎಂಟರ್‌ಪ್ರೈಸಸ್
|
ಕೋಡ್ಲು ರಾಮಕೃಷ್ಣ
|
ಕೆ.ಟಿ.ವೀರೇಶ್
|
ಸಾಧುಕೋಕಿಲ
|
ಸುಂದರನಾಥ್ ಸುವರ್ಣ
|
೧೧೯
|
2001
|
ಮತದಾನ
|
[[]]
|
ಟಿ.ಎನ್.ಸೀತಾರಾಮ್
|
[[]]
|
ಸಿ.ಅಶ್ವತ್, ವಿ.ಮನೋಹರ್
|
[[]]
|
೧೨೦
|
2001
|
ಕುರಿಗಳು ಸಾರ್ ಕುರಿಗಳು
|
[[]]
|
ಎಸ್.ವಿ.ರಾಜೇಂದ್ರಸಿಂಗ್ ಬಾಬು
|
[[]]
|
[[]]
|
[[]]
|
೧೨೧
|
2001
|
ಅಸುರ
|
[[]]
|
ಎಸ್.ಮಹೇಂದರ್
|
[[]]
|
ಗುರುಕಿರಣ್
|
[[]]
|
೧೨೨
|
2001
|
ಆಂಟಿಪ್ರೀತ್ಸೆ
|
[[]]
|
ಹೆಚ್.ವಾಸು
|
ಮುನಿರತ್ನ
|
ಚೈತನ್ಯ (ಎಲ್.ಎನ್.ಶಾಸ್ತ್ರಿ)
|
[[]]
|
೧೨೩
|
2001
|
ಚಿತ್ರ
|
ಉಷಾಕಿರಣ್ ಮೂವೀಸ್
|
ದಿನೇಶ್ ಬಾಬು
|
ರಾಮೋಜಿ ರಾವ್
|
ಗುರುಕಿರಣ್
|
ಪಿ.ಆರ್.ಸೌಂದರ್ ರಾಜ್
|
೧೨೪
|
2001
|
ಅಮ್ಮ
|
ಶ್ರೀ ಸಂಗಮೇಶ್ವರ ಪ್ರೊಡಕ್ಷನ್ಸ್
|
ಡಿ.ರಾಜೇಂದ್ರಬಾಬು
|
ಕೆ.ವೆಂಕಟೇಶ್, ಎಸ್.ಸಿ.ಅಂಬರೀಶ್
|
ಎಮ್.ಎಮ್.ಕೀರವಾಣಿ
|
ಪ್ರಸಾದ್ ಬಾಬು
|
೧೨೫
|
2001
|
ನೀಲ
|
ದೃಷ್ಟಿ ಸೃಷ್ಟಿ
|
ಟಿ.ಎಸ್.ನಾಗಾಭರಣ
|
ಡಾ.ಅಜಯಕುಮಾರ್, ಟಿ.ಎಸ್.ನಾಗಾಭರಣ
|
ವಿಜಯಭಾಸ್ಕರ್
|
ಜಿ.ಎಸ್.ಭಾಸ್ಕರ್
|
೧೨೬
|
2002
|
ಭೂತಯ್ಯನ ಮಕ್ಕಳು
|
ಶ್ರೀ ರಾಜಮಾತ ಪ್ರೊಡಕ್ಷನ್ಸ್
|
ಜಿ.ಕೆ.ಮುದ್ದುರಾಜ್
|
ಆರ್.ಗಿರಿ
|
[[]]
|
[[]]
|
೧೨೭
|
2002
|
ಮನಸೇ ಓ ಮನಸೇ
|
[[]]
|
ಎಂ.ಎಸ್.ರಾಜಶೇಖರ್
|
ರಾಮೋಜಿ ರಾವ್
|
ವಿ.ಮನೋಹರ್
|
ಪ್ರಸಾದ್ ಬಾಬು
|
೧೨೮
|
2002
|
ನಾನು ನಾನೇ
|
[[]]
|
ಡಿ.ರಾಜೇಂದ್ರಬಾಬು
|
ಮಡಿಕೊಂಡ ಮುರಳಿಕೃಷ್ಣ
|
ದೇವ
|
ಪ್ರಸಾದ್ ಬಾಬು
|
೧೨೯
|
2002
|
ಹಾಲಿವುಡ್
|
ರಾಮು ಎಂಟರ್‌ಪ್ರೈಸಸ್
|
ದಿನೇಶ್ ಬಾಬು
|
ರಾಮು
|
ಗುರುಕಿರಣ್
|
ಪಿ.ಕೆ.ಹೆಚ್.ದಾಸ್
|
೧೩೦
|
2003
|
ಆನಂದ
|
ಉಷಾಕಿರಣ್ ಮೂವೀಸ್
|
ಮುಳ್ಳಪೂಡಿ
|
ರಾಮೋಜಿ ರಾವ್
|
ರಾಜೇಶ್ ರಾಮನಾಥ್
|
ಪಿ.ಕೆ.ಹೆಚ್.ದಾಸ್
|
೧೩೧
|
2003
|
ಬೆಂಗಳೂರು ಬಂದ್
|
ಓಂ ಶಕ್ತಿ ಸಿನಿ ಕಂಬೈನ್ಸ್
|
ತೇಸಿ ವೆಂಕಟೇಶ್
|
ಎಂ.ವೆಂಕಟೇಶ್, ಆರ್.ಮಂಜುನಾಥ್,
|
ಹಂಸಲೇಖ
|
[[]]
|
೧೩೨
|
2003
|
ಲಂಕೇಶ್ ಪತ್ರಿಕೆ
|
ಲಕ್ಷ್ಮಿಶ್ರೀ ಕಂಬೈನ್ಸ್
|
ಇಂದ್ರಜಿತ್ ಲಂಕೇಶ್
|
ಕೆ.ಮಂಜು
|
ಬಬ್ಡಿ
|
ಸುಂದರನಾಥ್ ಸುವರ್ಣ
|
೧೩೩
|
2003
|
ಪ್ರೀತಿ ಪ್ರೇಮ ಪ್ರಣಯ
|
ಇಂಡೋ-ಹಾಲಿವುಡ್ ಫಿಲಂಸ್
|
ಕವಿತಾ ಲಂಕೇಶ್
|
ಮನೋಮೂರ್ತಿ, ರಾಮಪ್ರಸಾದ್, ಸೋಮಶೇಖರ್,
|
ಮನೋಮೂರ್ತಿ
|
[[]]
|
೧೩೪
|
2003
|
ಖುಷಿ
|
ಶ್ರೀ ಜೈಮಾತ ಕಂಬೈನ್ಸ್
|
ಪ್ರಕಾಶ್
|
ಜೆ.ಜಯಮ್ಮ
|
ಗುರುಕಿರಣ್
|
ಹೆಚ್.ಸಿ.ಸುರೇಶ್
|
೧೩೫
|
2004
|
ಸಾಗರಿ
|
ಸ್ನೇಹ ಎಂಟರ್‌ಪ್ರೈಸಸ್
|
ವಿಕ್ಟರಿ ವಾಸು
|
ಸಂಜಯ್
|
ಸಾಧುಕೋಕಿಲ
|
ಸಿ.ಡಿ.ರಾಜು
|
೧೩೬
|
2004
|
ಬಿಡಲಾರೆ
|
ಶ್ರೀ ಶಕ್ತಿ ಪ್ರೊಡಕ್ಷನ್ಸ್
|
ರಮಣ
|
ಆರ್.ಎಫ್.ಮಾಣಿಕ್ ಚಂದ್, ಕೆ.ಪಿ.ಪ್ರಭುಶಂಕರ್
|
ಇಂದ್ರ
|
ಸತೀಶ್ ಬಾಬು
|
೧೩೭
|
2004
|
ಪಕ್ಕದಮನೆ ಹುಡುಗಿ
|
ಶಿವಕುಮಾರ್ ಪ್ರೊಡಕ್ಷನ್ಸ್
|
ಎಂ.ಎಸ್.ರಾಜಶೇಖರ್
|
[[]]
|
ರಾಜೇಶ್ ರಾಮನಾಥ್
|
[[]]
|
೧೩೮
|
2005
|
ನೆನಪಿರಲಿ
|
ಕಲ್ಪನ ಶಕ್ತಿ
|
ರತ್ನಜ
|
ಅಜಯ್ ಆರ್.ಗೌಡ
|
ಹಂಸಲೇಖ
|
ರಾಮಚಂದ್ರ
|
೧೩೯
|
2005
|
ವಿಷ್ಣುಸೇನಾ
|
ಶ್ರೀ ಹೃದಯೇಶ್ವರಿ ಫಿಲಂಸ್
|
ಬಿ.ನಾಗಣ್ಣ
|
ಎಂ.ಗೋವಿಂದ್
|
ದೇವ
|
ರಮೇಶ್ ಬಾಬು
|
೧೪೦
|
2006
|
ಶ್ರೀ
|
ಶ್ರೀ ಚೌಡೇಶ್ವರಿ ಸಿನಿ ಕ್ರಿಯೇಷನ್ಸ್
|
ಪ್ರಕಾಶ್
|
ಕೆ.ಎಸ್.ದುಶ್ಯಂತ್, ಕೆ.ಎಸ್.ಸಂತೋಷಕುಮಾರ್
|
ವಾಲಿಸ ಸಂದೀಪ್
|
ಕೃಷ್ಣಕುಮಾರ್
|
೧೪೧
|
2006
|
ಉಪ್ಪಿದಾದಾ ಎಂ.ಬಿ.ಬಿ.ಎಸ್
|
ಜೆಮಿನಿ ಫಿಲಂ ಸರ್ಕ್ಯೂಟ್
|
ಡಿ.ರಾಜೇಂದ್ರ ಬಾಬು
|
ಕೆ.ಭೂಪಯ್ಯ
|
ಆರ್.ಪಿ.ಪಟ್ನಾಯಕ್
|
ಹೆಚ್.ಎಮ್.ರಾಮಚಂದ್ರ
|
೧೪೨
|
2006
|
ರವಿಶಾಸ್ತ್ರಿ
|
ಸಂದೇಶ್ ಕಂಬೈನ್ಸ್
|
ಎಂ.ಎಸ್.ರಾಜಶೇಖರ್
|
ಸಂದೇಶ್ ನಾಗರಾಜ್
|
ರಾಜೇಶ್ ರಾಮನಾಥ್
|
ಸುಂದರನಾಥ್ ಸುವರ್ಣ
|
- ಅಂಕುರ (1974)
- ನಿಶಾಂತ (1975)
- ಭೂಮಿಕಾ (1977)
- ಮಂಥನ್ (1977)
- ಕೊಂಡುರಾ (1978)
- ಕಲಿಯುಗ್ (1980)
- ಮಂಗಲಸೂತ್ರ (1981)
- ಗೆಹ್ರಾಯಿ (1982)
- ಸೂಖಾ/ಬರ (1983)
- ರಾತ್ (1990)
- ಯುವಾ (2002)
ಪ್ರಶಸ್ತಿ - ಪುರಸ್ಕಾರ[ಬದಲಾಯಿಸಿ]
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
- ಅತ್ಯುತ್ತಮ ನಟ - ಮಿಂಚಿನ ಓಟ (1979-80)
- ಅತ್ಯುತ್ತಮ ನಟ - ಹೊಸ ನೀರು (1985-86)
- ಅತ್ಯುತ್ತಮ ನಟ - ಅವಸ್ಥೆ (1987-88)
- ಅತ್ಯುತ್ತಮ ನಟ - ಗಂಗವ್ವ ಗಂಗಾಮಾಯಿ (1994-95)
- ಎರಡನೆಯ ಅತ್ಯುತ್ತಮ ಚಲನಚಿತ್ರ - ಮಿಂಚಿನ ಓಟ (1979-80) [ಶಂಕರ ನಾಗ್ ಜೊತೆ]
- ವಿಷ್ಣುವರ್ಧನ ಪ್ರಶಸ್ತಿ (2010)
ಫಿಲಂಫೇರ್ ಅವಾರ್ಡ ಕನ್ನಡ
- ಅತ್ಯುತ್ತಮ ನಟ - ನಾ ನಿನ್ನ ಬಿಡಲಾರೆ (1979)
- ಅತ್ಯುತ್ತಮ ನಟ - ಹೆಂಡ್ತಿಹೇಳ್ಬೇಡಿ (1989)
- ಅತ್ಯುತ್ತಮ ನಟ - ಉದ್ಭವ (1990)
- ಅತ್ಯುತ್ತಮ ನಟ - ಗೌರಿ ಗಣೇಶ (1991)
- ಅತ್ಯುತ್ತಮ ನಟ - ಗೋದಿ ಬಣ್ಣ ಸಾಧಾರಣ ಮೈಕಟ್ಟು (2016)
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ - "ನನ್ನ ತಮ್ಮ ಶಂಕರ"
- ರಾಜ್ಯೋತ್ಸವ ಪ್ರಶಸ್ತಿ (2007)
- ↑ http://www.frontline.in/arts-and-culture/cinema/films-were-bolder-in-the-past/article5184996.ece
- ↑ http://kannada.filmibeat.com/celebs/ananth-nag/biography.html
- ↑ http://timesofindia.indiatimes.com/city/bangalore/About-real-life-and-reel-lives/articleshow/6765949.cms