ಆನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೬೦ ಸಂವತ್ಸರಗಳಲ್ಲಿ ಆನಂದ ಎನ್ನುವುದೂ ಒಂದು ಸಂವತ್ಸರ.

ಆನಂದ ಅಂದರೆ ಅಕ್ಷರಶಃ ಪರಮಸುಖ ಅಥವಾ ಸಂತೋಷ. ಹಿಂದೂ ವೇದಗಳು, ಉಪನಿಷತ್ತುಗಳು ಮತ್ತು ಭಗವದ್ಗೀತೆಯಲ್ಲಿ, ಆನಂದ ಶಬ್ದವು ಶಾಶ್ವತ ಸುಖವನ್ನು ಸೂಚಿಸುತ್ತದೆ ಮತ್ತು ಇದು ಸಂಸಾರದ ಅಂತ್ಯದ ಜೊತೆಗಿರುತ್ತದೆ. ಯಾರು ತಮ್ಮ ಕ್ರಿಯೆಗಳ ಫಲಗಳನ್ನು ತ್ಯಜಿಸಿ ತಮ್ಮನ್ನು ಸಂಪೂರ್ಣವಾಗಿ ದೈವಿಕಕ್ಕೆ ಶರಣು ಮಾಡಿಕೊಳ್ಳುತ್ತಾರೊ ಅವರು ಪರಮಾತ್ಮದೊಂದಿಗೆ ಪರಿಪೂರ್ಣ ಒಂದಿಕೆಯಲ್ಲಿ ಆನಂದವನ್ನು ಅನುಭವಿಸಲು ಸಂಸಾರ ಚಕ್ರದ ಅಂತಿಮ ಸೀಮಾರೇಖೆ ತಲುಪುತ್ತಾರೆ. ಭಾವೋದ್ರಿಕ್ತ ಬದ್ಧತೆಯ ಮೂಲಕ ದೇವರೊಂದಿಗೆ ಒಂದಿಕೆಯನ್ನು ಅರಸುವ ಸಂಪ್ರದಾಯವನ್ನು ಭಕ್ತಿ ಎಂದು ಸೂಚಿಸಲಾಗುತ್ತದೆ.[೧]

ಮಾನವರು ಪರಸ್ಪರ ಭಿನ್ನವಾಗಿರುತ್ತಾರೆ, ಮತ್ತು ಪ್ರತಿಯೊಬ್ಬರು ಆನಂದಕ್ಕೆ ತಮಗೆ ಅತ್ಯಂತ ಸೂಕ್ತವಾದ ಹಾದಿಯನ್ನು ಆರಿಸಿಕೊಳ್ಳುತ್ತಾರೆ. ಹಾಗಾಗಿ, ಹಿಂದೂ ತತ್ವಶಾಸ್ತ್ರದಲ್ಲಿ ಆನಂದಕ್ಕೆ ವಿಭಿನ್ನ ಅರ್ಥಗಳು ಮತ್ತು ಅದನ್ನು ಸಾಧಿಸಲು ವಿಭಿನ್ನ ರೀತಿಗಳಿವೆ ಎಂದು ಸ್ವಾಮಿ ವಿವೇಕಾನಂದರು ಸಾಧಿಸುತ್ತಾರೆ.

ಅರವಿಂದರ ಪ್ರಕಾರ, ಸಂತೋಷವು ಮಾನವಕುಲದ ಸಹಜ ಸ್ಥಿತಿಯಾಗಿದೆ ಎಂದು ತಮ್ಮ ಪುಸ್ತಕ ದ ಲೈಫ಼್ ಡಿವೈನ್‍ನಲ್ಲಿ ಹೇಳುತ್ತಾರೆ ಮತ್ತು ಅದು ಅಸ್ತಿತ್ವದ ಆಹ್ಲಾದ ಎಂದು ಹೇಳುತ್ತಾರೆ. ಆದರೆ, ಮಾನವಕುಲವು ನೋವು ಮತ್ತು ಆಹ್ಲಾದದ ಉಭಯತ್ವಗಳನ್ನು ಬೆಳೆಸುತ್ತದೆ. ನೋವು ಹಾಗೂ ಕಷ್ಟಗಳ ಪರಿಕಲ್ಪನೆಗಳು ಮನಸ್ಸು ಕಾಲಾನಂತರದಲ್ಲಿ ಬೆಳೆಸಿಕೊಂಡ ಅಭ್ಯಾಸಗಳ ಕಾರಣ ಎಂದು ಅರವಿಂದರು ಮುಂದೆ ಹೇಳುತ್ತಾರೆ. ಮನಸ್ಸು ಯಶಸ್ಸು, ಘನತೆ ಮತ್ತು ವಿಜಯವನ್ನು ಆಹ್ಲಾದಕರ ಸಂಗತಿಗಳೆಂದು ಮತ್ತು ಸೋಲು, ವೈಫಲ್ಯ, ದುರಾದೃಷ್ಟವನ್ನು ಅಹಿತಕರ ಸಂಗತಿಗಳೆಂದು ಕಾಣುತ್ತದೆ.

ಹಿಂದೂ ತತ್ವಶಾಸ್ತ್ರವೇದಾಂತ ಪರಂಪರೆಯ ಪ್ರಕಾರ, ಜೀವವು ಎಲ್ಲ ಪಾಪಗಳು, ಎಲ್ಲ ಬಯಕೆಗಳು, ಎಲ್ಲ ಸಂದೇಹಗಳು, ಎಲ್ಲ ಕ್ರಿಯೆಗಳು, ಎಲ್ಲ ಕಷ್ಟಗಳು, ಎಲ್ಲ ನೋವುಗಳು, ಮತ್ತು ಎಲ್ಲ ಸಾಮಾನ್ಯ ದೈಹಿಕ ಹಾಗೂ ಮಾನಸಿಕ ಆಹ್ಲಾದಗಳಿಂದ ಮುಕ್ತವಾದಾಗ ಎನಿಸುವ ಮಹೋನ್ನತ ಸಂತೋಷದ ಸ್ಥಿತಿಯೇ ಆನಂದ. ಬ್ರಹ್ಮನ್‍ನಲ್ಲಿ ಸ್ಥಾಪಿತವಾದಾಗ ಅದು ಜೀವನಮುಕ್ತವಾಗುತ್ತದೆ (ಪುನರ್ಜನನದ ಚಕ್ರದಿಂದ ಮುಕ್ತಿ). ಉಪನಿಷತ್ತುಗಳು ಆನಂದ ಶಬ್ದವನ್ನು ಬ್ರಹ್ಮನ್ ಅನ್ನು ಸೂಚಿಸಲು ಮತ್ತೆಮತ್ತೆ ಬಳಸುತ್ತವೆ. ಬ್ರಹ್ಮನ್ ಅಂದರೆ ಅಂತರತಮ ಆತ್ಮ, ಇದಕ್ಕೆ ಯಾವುದೇ ವಾಸ್ತವ ಬಂಧನಗಳಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. J. Bruce Long; Laurie Louise Patton (2005), "LIFE", Encyclopedia of Religion, vol. 8 (2nd ed.), Thomson Gale, pp. 5447–5448
"https://kn.wikipedia.org/w/index.php?title=ಆನಂದ&oldid=821796" ಇಂದ ಪಡೆಯಲ್ಪಟ್ಟಿದೆ