ವಿಷಯಕ್ಕೆ ಹೋಗು

ಸಂವತ್ಸರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ ೬೦ ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಈ ಸಂವತ್ಸರಗಳನ್ನು ಪ್ರಭವ, ವಿಭವ, ಶುಕ್ಲ ಇತ್ಯಾದಿ ಹೆಸರುಗಳಿಂದ ಗುರುತಿಸುತ್ತಾರೆ. ಮೊದಲನೆಯ ಸಂವತ್ಸರವು ಪ್ರಭವ ಎಂಬ ಹೆಸರಿನಿಂದ ಕರೆಸಿಕೊಂಡರೆ ಕೊನೆಯ ಅಂದರೆ ೬೦ನೇ ಸಂವತ್ಸರವನ್ನು ಕ್ಷಯ ಅಥವಾ ಅಕ್ಷಯ ಎಂದು ಕರೆಯಲಾಗಿದೆ. ಬೃಹಸ್ಪತಿ ಗ್ರಹವು ಒಂದು ಪ್ರದಕ್ಷಿಣೆ ಮುಗಿಸಲು ೧೨ ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಇದನ್ನು "ಬಾರ್ಹಸ್ಪತ್ಯ ಯುಗ" ಎನ್ನುತ್ತಾರೆ. ಇಂತಹ ಐದು ಬ್ರಾಹಸ್ಪತ್ಯ ಯುಗಗಳ ಒಟ್ಟು ಕಾಲಾವಧಿ ೬೦ ವರ್ಷಗಳ ಒಂದು ಚಕ್ರಕ್ಕೆ ಅಷ್ಟು ಸಂವತ್ಸರಗಳೆಂದು ಪರಿಗಣಿಸುತ್ತೇವೆ.

ವರ್ಷದ ಪರಿಕಲ್ಪನೆ[ಬದಲಾಯಿಸಿ]

ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷವಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ಒಟ್ಟು ೬೦ ಸಂವತ್ಸರಗಳಿವೆ.

ಸಂವತ್ಸರ (संवत्सर) ಎಂಬುದು ಸಂಸ್ಕೃತ ಭಾಷೆಯ ಒಂದು ಪಾರಿಭಾಷಿಕ ಪದವಾಗಿದ್ದು, ವೇದ ಸಾಹಿತ್ಯಗಳಲ್ಲಿ ಮುಖ್ಯವಾಗಿ ಋಗ್ವೇದ ಮತ್ತು ಇತರ ಪ್ರಾಚೀನ ಸಾಹಿತ್ಯ ಪಠ್ಯಗಳಲ್ಲಿ ಒಂದು ವರ್ಷಕ್ಕೆ ಸಂವಾದಿಯಾಗಿ ಬಳಕೆಯಾಗುತ್ತಿತ್ತು.[೧] ಒಂದು ಜೋವಿಯನ್ ವರ್ಷವನ್ನು ಭಾರತೀಯ ಕ್ಯಾಲೆಂಡರ್‌ಗಳಲ್ಲಿ ಬೃಹಸ್ಪತಿ(ಗುರು) ಗ್ರಹದ ಸಾಪೇಕ್ಷ ಸ್ಥಾನವನ್ನು ಆಧರಿಸಿದ ವರ್ಷವಾಗಿದೆ. ಅದು ಒಂದು ನಕ್ಷತ್ರಪುಂಜದಿಂದ ಮುಂದಿನ ನಕ್ಷತ್ರಕ್ಕೆ ಸಾಗಲು ತೆಗೆದುಕೊಳ್ಳುವ ಸರಾಸರಿ ಚಲನೆಯ ಸಮಯವಾಗಿದೆ.

ಸಂವತ್ಸರಗಳು[ಬದಲಾಯಿಸಿ]

೧೮೦ ವರ್ಷಗಳ ಸಂವತ್ಸರ ಕ್ರಮ[ಬದಲಾಯಿಸಿ]

ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರ, ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ ಇಲ್ಲಿದೆ ನೋಡಿ.[೨]

ಸಂಖ‍್ಯೆ ಸಂವತ್ಸರ ಇಂಗ್ಲಿಷ್ ವರ್ಷ ಇಂಗ್ಲಿಷ್ ವರ್ಷ ಇಂಗ್ಲಿಷ್ ವರ್ಷ
ಪ್ರಭವ[೩] ೧೮೬೭ ೧೯೨೭ ೧೯೮೭
ವಿಭವ[೪] ೧೮೬೮ ೧೯೨೮ ೧೯೮೮
ಶುಕ್ಲ[೫] ೧೮೬೯ ೧೯೨೯ ೧೯೮೯
ಪ್ರಮೋದೂತ[೬] ೧೮೭೦ ೧೯೩೦ ೧೯೯೦
ಪ್ರಜೋತ್ಪತ್ತಿ[೭] ೧೮೭೧ ೧೯೩೧ ೧೯೯೧
ಅಂಗೀರಸ[೮] ೧೮೭೨ ೧೯೩೨ ೧೯೯೨
ಶ್ರೀಮುಖ[೯] ೧೮೭೩ ೧೯೩೩ ೧೯೯೩
ಭಾವ[೧೦] ೧೮೭೪ ೧೯೩೪ ೧೯೯೪
ಯುವ[೧೧] ೧೮೭೫ ೧೯೩೫ ೧೯೯೫
೧೦ ಧಾತ ೧೮೭೬ ೧೯೩೬ ೧೯೯೬
೧೧ ಈಶ್ವರ ೧೮೭೭ ೧೯೩೭ ೧೯೯೭
೧೨ ಬಹುಧಾನ್ಯ ೧೮೭೮ ೧೯೩೮ ೧೯೯೮
೧೩ ಪ್ರಮಾದಿ ೧೮೭೯ ೧೯೩೯ ೧೯೯೯
೧೪ ವಿಕ್ರಮ ೧೮೮೦ ೧೯೪೦ ೨೦೦೦
೧೫ ವೃಷ ೧೮೮೧ ೧೯೪೧ ೨೦೦೧
೧೬ ಚಿತ್ರಭಾನು ೧೮೮೨ ೧೯೪೨ ೨೦೦೨
೧೭ ಸ್ವಭಾನು ೧೮೮೩ ೧೯೪೩ ೨೦೦೩
೧೮ ತಾರಣ ೧೮೮೪ ೧೯೪೪ ೨೦೦೪
೧೯ ಪಾರ್ಥಿವ ೧೮೮೫ ೧೯೪೫ ೨೦೦೫
೨೦ ವ್ಯಯ ೧೮೮೬ ೧೯೪೬ ೨೦೦೬
೨೧ ಸರ್ವಜಿತ್ ೧೮೮೭ ೧೯೪೭ ೨೦೦೭
೨೨ ಸರ್ವಧಾರಿ ೧೮೮೮ ೧೯೪೮ ೨೦೦೮
೨೩ ವಿರೋಧಿ ೧೮೮೯ ೧೯೪೯ ೨೦೦೯
೨೪ ವಿಕೃತಿ ೧೮೯೦ ೧೯೫೦ ೨೦೧೦
೨೫ ಖರ ೧೮೯೧ ೧೯೫೧ ೨೦೧೧
೨೬ ನಂದನ ೧೮೯೨ ೧೯೫೨ ೨೦೧೨
೨೭ ವಿಜಯ ೧೮೯೩ ೧೯೫೩ ೨೦೧೩
೨೮ ಜಯ ೧೮೯೪ ೧೯೫೪ ೨೦೧೪
೨೯ ಮನ್ಮಥ ೧೮೯೫ ೧೯೫೫ ೨೦೧೫
೩೦ ದುರ್ಮುಖಿ ೧೮೯೬ ೧೯೫೬ ೨೦೧೬
೩೧ ಹೇಮಲಂಬ (ಹೇವಿಳಂಬಿ / ಹೇವಿಲಂಬಿ ಅಲ್ಲ)[೧೨] ೧೮೯೭ ೧೯೫೭ ೨೦೧೭
೩೨ ವಿಳಂಬಿ ೧೮೯೮ ೧೯೫೮ ೨೦೧೮
೩೩ ವಿಕಾರಿ ೧೮೯೯ ೧೯೫೯ ೨೦೧೯
೩೪ ಶಾರ್ವರಿ ೧೯೦೦ ೧೯೬೦ ೨೦೨೦
೩೫ ಪ್ಲವ ೧೯೦೧ ೧೯೬೧ ೨೦೨೧
೩೬ ಶುಭಕೃತ ೧೯೦೨ ೧೯೬೨ ೨೦೨೨
೩೭ ಶೋಭಕೃತ ೧೯೦೩ ೧೯೬೩ ೨೦೨೩
೩೮ ಕ್ರೋಧಿ ೧೯೦೪ ೧೯೬೪ ೨೦೨೪
೩೯ ವಿಶ್ವಾವಸು ೧೯೦೫ ೧೯೬೫ ೨೦೨೫
೪೦ ಪರಾಭವ ೧೯೦೬ ೧೯೬೬ ೨೦೨೬
೪೧ ಪ್ಲವಂಗ ೧೯೦೭ ೧೯೬೭ ೨೦೨೭
೪೨ ಕೀಲಕ ೧೯೦೮ ೧೯೬೮ ೨೦೨೮
೪೩ ಸೌಮ್ಯ ೧೯೦೯ ೧೯೬೯ ೨೦೨೯
೪೪ ಸಾಧಾರಣ ೧೯೧೦ ೧೯೭೦ ೨೦೩೦
೪೫ ವಿರೋಧಿಕೃತ ೧೯೧೧ ೧೯೭೧ ೨೦೩೧
೪೬ ಪರಿಧಾವಿ ೧೯೧೨ ೧೯೭೨ ೨೦೩೨
೪೭ ಪ್ರಮಾದ ೧೯೧೩ ೧೯೭೩ ೨೦೩೩
೪೮ ಆನಂದ ೧೯೧೪ ೧೯೭೪ ೨೦೩೪
೪೯ ರಾಕ್ಷಸ ೧೯೧೫ ೧೯೭೫ ೨೦೩೫
೫೦ ನಳ ೧೯೧೬ ೧೯೭೬ ೨೦೩೬
೫೧ ಪಿಂಗಳ ೧೯೧೭ ೧೯೭೭ ೨೦೩೭
೫೨ ಕಾಳಯುಕ್ತಿ ೧೯೧೮ ೧೯೭೮ ೨೦೩೮
೫೩ ಸಿದ್ಧಾರ್ಥಿ ೧೯೧೯ ೧೯೭೯ ೨೦೩೯
೫೪ ರೌದ್ರಿ ೧೯೨೦ ೧೯೮೦ ೨೦೪೦
೫೫ ದುರ್ಮತಿ ೧೯೨೧ ೧೯೮೧ ೨೦೪೧
೫೬ ದುಂದುಭಿ ೧೯೨೨ ೧೯೮೨ ೨೦೪೨
೫೭ ರುಧಿರೋದ್ಗಾರಿ ೧೯೨೩ ೧೯೮೩ ೨೦೪೩
೫೮ ರಕ್ತಾಕ್ಷಿ ೧೯೨೪ ೧೯೮೪ ೨೦೪೪
೫೯ ಕ್ರೋಧನ ೧೯೨೫ ೧೯೮೫ ೨೦೪೫
೬೦ ಅಕ್ಷಯ ೧೯೨೬ ೧೯೮೬ ೨೦೪೬

ಉಲ್ಲೇಖಗಳು[ಬದಲಾಯಿಸಿ]

 1. Bettina Bäumer; Kapila Vatsyayan (1992). Kalātattvakośa: A Lexicon of Fundamental Concepts of the Indian Arts. Motilal Banarsidass. pp. 215–216. ISBN 978-81-208-1044-0.
 2. ಕನ್ನಡ ರತ್ನಕೋಶ, ೧೯೭೭. ಹಾ.ಮಾ.ನಾಯಕ(ಸಂ), ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು
 3. https://glosbe.com/kn/hi/ಪ್ರಭವ
 4. https://glosbe.com/kn/hi/ವಿಭವ
 5. https://glosbe.com/kn/hi/ಶುಕ್ಲ
 6. https://glosbe.com/kn/hi/ಪ್ರಮೋದೂತ
 7. https://glosbe.com/kn/hi/ಪ್ರಜೋತ್ಪತ್ತಿ
 8. https://glosbe.com/kn/hi/ಅಂಗೀರಸ
 9. https://glosbe.com/kn/hi/ಶ್ರೀಮುಖ
 10. https://glosbe.com/kn/hi/ಭಾವ
 11. https://glosbe.com/kn/hi/ಯುವ
 12. https://www.facebook.com/ssntb/posts/1356125147778618/
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: