ಜಿ.ಕೆ.ವೆಂಕಟೇಶ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ (ಮೇ ೧೨, ೨೦೧೫) ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಜಿ.ಕೆ.ವೆಂಕಟೇಶ್ (ಸೆಪ್ಟೆಂಬರ್ ೨೧, ೧೯೨೭ - ನವೆಂಬರ್ ೧೯೯೩) -ಗುರ್ಜದ ಕೃಷ್ಣದಾಸ್ ವೆಂಕಟೇಶ್ ಎಂಬುದು ಜಿ.ಕೆ.ವೆಂಕಟೇಶ್ ಅವರ ಪೂರ್ಣನಾಮ. ಕನ್ನಡ ಚಿತ್ರರಂಗದ ಹಾಗೂ ದಕ್ಷಿಣ ಭಾರತದ ಇತರ ಚಿತ್ರರಂಗಗಳ ಹೆಸರಾಂತ ಸಂಗೀತ ನಿರ್ದೇಶಕರಲ್ಲೊಬ್ಬರು.[೧][೨]
ಜನನ ಮತ್ತು ಸಂಗೀತದ ಅಭ್ಯಾಸ
[ಬದಲಾಯಿಸಿ]ಬೆಂಗಳೂರಿನಲ್ಲಿ ಸೆಪ್ಟೆಂಬರ್ ೨೧ ೧೯೨೭ರಂದು ಜನಿಸಿದ ಜಿ.ಕೆ.ವೆಂಕಟೇಶ್ ತಮ್ಮ ಸೋದರನ ಬಳಿ ಸಂಗೀತ ಅಭ್ಯಾಸ ಮಾಡಿದರು. ಖ್ಯಾತ ಸಂಗೀತ ನಿರ್ದೇಶಕರಾದ ಎಸ್.ವೆಂಕಟರಾಮನ್ ಮತ್ತು ವಿಶ್ವನಾಥನ್ ರಾಮಮೂರ್ತಿಯವರ ಬಳಿ ಸಹಾಯಕರಾಗಿದ್ದರು. ಇವರು ಬೆಂಗಳೂರು ಆಕಾಶವಾಣಿಯಲ್ಲಿ ಎ"ಗ್ರೇಡ್ ಗಾಯಕರಾಗಿದ್ದರು.
ಕನ್ನಡ ಚಿತ್ರರಂಗ
[ಬದಲಾಯಿಸಿ]- ಸಿಂಗ್ ಠಾಕೂರರ ಸೋದರಿ ಚಿತ್ರಕ್ಕೆ ಪದ್ಮನಾಭಶಾಸ್ತ್ರಿ ಅವರೊಡನೆ ಸಂಗೀತ ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ವೀಣಾ ವಿದ್ವಾಂಸರಾಗಿದ್ದ ವೆಂಕಟೇಶ್ ಹಿಂದೂಸ್ಥಾನಿ ಸಂಗೀತದಲ್ಲಿ ಪರಿಣತರಾಗಿದ್ದರು.
ಶಾಸ್ತ್ರೀಯ ಮತ್ತು ಜಾನಪದ ಸಂಗೀತದ ಸಮ್ಮಿಶ್ರಣವನ್ನು ಸಾಧಿಸಿದ್ದು ಅವರ ವೈಶಿಷ್ಟ್ಯ.
- ೧೯೬೨ ರಲ್ಲಿ 'ಕರುಣೆಯೇ ಕುಟುಂಬದ ಕಣ್ಣು" ಎಂಬ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ ತಯಾರಿಸಿದ ಹೆಗ್ಗಳಿಕೆ ಇವರದು.ಕರುಣೆಯೇ ಕುಟುಂಬದ ಕಣ್ಣು ಚಿತ್ರದ "ನಿಜವೋ ಸುಳ್ಳೋ ನಿರ್ಧರಿಸಿ "ಹಾಡಿನ ಸಂಗೀತ ಸಂಯೋಜನೆಗೆ ಧಾಖಲೆ ಎನಿಸಿದ್ದ "ಎಂಬತ್ತು" ವಾದ್ಯಗಾರನ್ನು ಬಳಸಿಕೊಳ್ಳಲಾಗಿತ್ತು. ಕನ್ನಡ ಚಿತ್ರರಂಗಕ್ಕೆ ಕವಿಗಳ ರಚನೆಗಳನ್ನು ಪರಿಚಯಿಸಿದ ಕೀರ್ತಿ ಜಿ.ಕೆ.ವೆಂಕಟೇಶ್ ಅವರಿಗೆ ಸಲ್ಲುತ್ತದೆ.
- ೧೯೬೩ರಲ್ಲಿ ತೆರೆಕಂಡ ಎಸ್.ಕೆ.ಎ.ಚಾರಿ ನಿರ್ದೇಶನದ ಗೌರಿ ಚಿತ್ರಕ್ಕೆ ಕುವೆಂಪು ಅವರ ಯಾವ ಜನ್ಮದ ಮೈತ್ರಿ ಮತ್ತು ಕೆ.ಎಸ್.ನರಸಿಂಹಸ್ವಾಮಿ ಅವರ ಇವಳು ಯಾರು ಬಲ್ಲೆಯೇನು? ಕವಿತೆಗಳನ್ನು ಅಳವಡಿಸಿದರು.
ಇದು ಕವನಗಳನ್ನು ಚಿತ್ರಗೀತೆಗಳಾಗಿ ಅಳವಡಿಸುವ ಹೊಸ ಪರಂಪರೆಗೆ ಕಾರಣವಾಯಿತು.
- ಜಿ.ಕೆ.ವೆಂಕಟೇಶ್ ಹಲವಾರು ಹೊಸ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದ್ದಾರೆ. ಬಿ.ಕೆ.ಸುಮಿತ್ರ, ಬೆಂಗಳೂರು ಲತಾ, ಸಿ.ಅಶ್ವಥ್, ಸುಲೋಚನಾ ಮುಂತಾದವರನ್ನು ಪರಿಚಯಿಸಿದರು. ದಕ್ಷಿಣ ಭಾರತದ ಇತರ ಖ್ಯಾತ ಸಂಗೀತ ನಿರ್ದೇಶಕರುಗಳಾದ ಇಳಯರಾಜ, ಎಲ್.ವೈದ್ಯನಾಥನ್, ಶಂಕರ್ ಗಣೇಶ್ ಅವರು ಜಿ.ಕೆ.ವೆಂಕಟೇಶ್ ಅವರ ಅನುಯಾಯಿಗಳು.
- ರಾಜ್‍ಕುಮಾರ್ ಅವರನ್ನು ಗಾಯಕರಾಗಿ ಪರಿಚಯಿಸಿದವರೂ ಜಿ.ಕೆ.ವೆಂಕಟೇಶ್. ಮಹಿಷಾಸುರ ಮರ್ಧಿನಿ ಚಿತ್ರಕ್ಕಾಗಿ ಯುಗಳಗೀತೆಯನ್ನು ರಾಜ್ ಅವರಿಂದ ಹಾಡಿಸಿದ ವೆಂಕಟೇಶ್ ಮತ್ತೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಯಾರೇ ಕೂಗಾಡಲಿ ಗೀತೆಯನ್ನು ಹಾಡಿಸಿ ಅವರನ್ನು ಪೂರ್ಣಪ್ರಮಾಣದ ಗಾಯಕರನ್ನಾಗಿಸಿದರು.
- ಸಂಧ್ಯಾರಾಗ, ಭಕ್ತ ಕುಂಬಾರ, ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಸೇರಿದಂತೆ ಸುಮಾರು ೧೨೦ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳ ೬೦೦ ಗೀತೆಗಳಿಗೆ ಸಂಗೀತ ನೀಡಿರುವ ಜಿ.ಕೆ.ವೆಂಕಟೇಶ್, ಭಕ್ತ ಕುಂಬಾರ ಮತ್ತು ಹೊಸ ನೀರು ಚಿತ್ರಗಳಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಗಾಯಕರಾಗಿ ಜಿ.ಕೆ.ವೆಂಕಟೇಶ್
[ಬದಲಾಯಿಸಿ]ಜಿ.ಕೆ.ವೆಂಕಟೇಶ್ ಅವರು ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ.
- ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ (ಚಿತ್ರ: ಕಣ್ತೆರೆದು ನೋಡು)
- ವಿರಸವೆಂಬ ವಿಷಕೆ (ಚಿತ್ರ:ಭೂತಯ್ಯನ ಮಗ ಅಯ್ಯು)
- ಆಡಿಸಿದಾತ ಬೇಸರ ಮೂಡಿ (ಚಿತ್ರ: ಕಸ್ತೂರಿ ನಿವಾಸ)
ನಿರ್ಮಾಪಕರಾಗಿ ಜಿ.ಕೆ.ವೆಂಕಟೇಶ್
[ಬದಲಾಯಿಸಿ]- ೧೯೬೪ರಲ್ಲಿ ವೆಂಕಟೇಶ್ ತುಂಬಿದ ಕೊಡ ಚಿತ್ರವನ್ನು ನಿರ್ಮಾಣ ಮಾಡಿದರು. ಅವರ ಖ್ಯಾತಿಗೆ ತಕ್ಕಂತೆ ಪ್ರಯೋಗಶೀಲವಾಗಿದ್ದ ಈ ಚಿತ್ರದಲ್ಲಿ ಅನಕೃ ಅವರನ್ನು ಬೆಳ್ಳಿತೆರೆಯ ಮೇಲೆ ತಂದರು. ಇದೇ ಚಿತ್ರದಲ್ಲಿ, ಪಿ.ಕಾಳಿಂಗರಾಯರಿಂದ ಅಂತಿಂಥ ಹೆಣ್ಣು ನೀನಲ್ಲ ಎಂಬ ಗೀತೆಯನ್ನು ಹಾಡಿಸಿದ್ದಲ್ಲದೆ ಅವರು ಹಾಡುತ್ತಿರುವ ದೃಶ್ಯವನ್ನು ಬೆಳ್ಳಿತೆರೆಯ ಮೇಲೆ ರೂಪಿಸಿದ್ದರು.
- ೧೯೬೭ರಲ್ಲಿ ರಾಜಕುಮಾರ್ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಇಮ್ಮಡಿ ಪುಲಿಕೇಶಿ ಐತಿಹಾಸಿಕ ಚಿತ್ರವನ್ನು ನಿರ್ಮಿಸಿದರು. ಇವರ ನಗುವ ಹೂವು ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆಯಿತು. "ನಗುವ ಹೂವು" ಚಿತ್ರದ (1970) ಆರ್. ಎನ್. ಸುದರ್ಶನ್ ಹಾಡಿರುವ "ಇರಬೇಕು ಇರಬೇಕು ಅರಿಯದ ಕಂದನ ತರಹ" ಈ ಗೀತೆಯ ಮಾಧುರ್ಯಕ್ಕೆ ಬೇರೆ ಯಾವ ಕನ್ನಡದ ಗೀತೆಯೂ ಸಾಟಿಯೇ ಇಲ್ಲ ಎಂದರು ಶಿಷ್ಯ ಇಳಯರಾಜ.[೩]
ನಿಧನ
[ಬದಲಾಯಿಸಿ]ಜಿ.ಕೆ.ವೆಂಕಟೇಶ್ ಅವರು ನವೆಂಬರ್ ೧೯೯೩ರಲ್ಲಿ ನಿಧನ ಹೊಂದಿದರು. ಅವರ ಸ್ವಇಚ್ಛೆಯಂತೆ ಅವರ ಕಣ್ಣುಗಳನ್ನು ಮರಣೊತ್ತರವಾಗಿ ದಾನ ಮಾಡಲಾಗಿದೆ.
ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದ ಕನ್ನಡ ಚಿತ್ರಗಳು
[ಬದಲಾಯಿಸಿ]ಜಿ.ಕೆ.ವೆಂಕಟೇಶ್ ನಿರ್ಮಾಣದ ಕನ್ನಡ ಚಿತ್ರಗಳು
[ಬದಲಾಯಿಸಿ]# | ವರ್ಷ | ಚಿತ್ರ |
---|---|---|
೧ | ೧೯೬೪ | ತುಂಬಿದ ಕೊಡ |
೨ | ೧೯೬೭ | ಇಮ್ಮಡಿ ಪುಲಿಕೇಶಿ |
ಉಲ್ಲೇಖಗಳು
[ಬದಲಾಯಿಸಿ]
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ