ವಿಷಯಕ್ಕೆ ಹೋಗು

ಪಿ.ಬಿ.ಶ್ರೀನಿವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ. ಬಿ. ಶ್ರೀನಿವಾಸ್
ಹಿನ್ನೆಲೆ ಮಾಹಿತಿ
ಜನ್ಮನಾಮಪ್ರತಿವಾದಿ ಭಯಂಕರ ಶ್ರೀನಿವಾಸ್
ಅಡ್ಡಹೆಸರುಪಿಬಿಎಸ್
ಜನನ(೧೯೨೮-೦೯-೨೨)೨೨ ಸೆಪ್ಟೆಂಬರ್ ೧೯೨೮
ಕಾಕಿನಾಡ, ಆಂಧ್ರ ಪ್ರದೇಶ
ಮರಣಏಪ್ರಿಲ್ ೧೪, ೨೦೧೩(ವಯಸ್ಸು ೮೪)
ಚೆನ್ನೈ, ತಮಿಳುನಾಡು
ಸಂಗೀತ ಶೈಲಿಹಿನ್ನೆಲೆ ಗಾಯನ, ಕರ್ನಾಟಕ ಸಂಗೀತ, ಗಝಲ್
ವೃತ್ತಿಚಲನಚಿತ್ರ ಹಿನ್ನೆಲೆ ಗಾಯಕ
ವಾದ್ಯಗಳುಹಾರ್ಮೋನಿಯಂ
ಸಕ್ರಿಯ ವರ್ಷಗಳು೧೯೫೧- ೨೦೧೩

ಪಿಬಿಎಸ್ ಎಂದು ವ್ಯಾಪಕವಾಗಿ ಕರೆಯಲ್ಪಡುವ ಪ್ರತಿವಾದಿ ಭಯಂಕರ ಶ್ರೀನಿವಾಸ್(೨೨ ಸೆಪ್ಟೆಂಬರ್ ೧೯೨೮ - ೧೪ ಏಪ್ರಿಲ್ ೨೦೧೩)ರವರು ಭಾರತೀಯ ಹಿನ್ನೆಲೆ ಗಾಯಕ, ಸಂಯೋಜಕ, ಹಾರ್ಮೋನಿಯಂ ವಾದಕ, ಗೀತರಚನೆಕಾರ ಮತ್ತು ಕವಿ. ಇವರು ದಕ್ಷಿಣ ಚಿತ್ರರಂಗ ಮತ್ತು ಬಾಲಿವುಡ್‌ನಲ್ಲಿ‌ ತಮ್ಮ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ.[೧][೨] ಅವರ ಪ್ರಮುಖ ಕೃತಿಗಳು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿವೆ.[೩] ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲೂ ಜನಪ್ರಿಯರಾಗಿದ್ದ ಇವರು, ಕನ್ನಡ, ತಮಿಳು, ತೆಲುಗು, ಮಲಯಾಳಂ, ಉರ್ದು, ಹಿಂದಿ, ಸಂಸ್ಕೃತ ಈ ಎಂಟು ಭಾಷೆಗಳಲ್ಲೂ ಸಂಪೂರ್ಣ ಪಾಂಡಿತ್ಯ ಹೊಂದಿದ್ದರು. ಅವರು ಸಂಗೀತ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತಮಿಳು ಕಲೈಮಾಮಣಿ ಪ್ರಶಸ್ತಿ ಮತ್ತು ಆಂಧ್ರ ಶಿವ ಪ್ರತಿಷ್ಠಾನದ ಮಾಧವಪೆದ್ದಿ ಸತ್ಯಂ ಪ್ರಶಸ್ತಿಯನ್ನು ಪಡೆದಿದ್ದಾರೆ.[೪][೫] ಅವರ ಗೌರವಾರ್ಥವಾಗಿ, ಚೆನ್ನೈನ ಶ್ರೀ ಕಲಾ ಸುಧಾ ತೆಲುಗು ಸಂಘವು ಹಿರಿಯ ಗಾಯಕರನ್ನು ಗೌರವಿಸಲು ಪಿ.ಬಿ.ಶ್ರೀನಿವಾಸ್ ಮಹಾಪುರುಷ ಪ್ರಶಸ್ತಿಯನ್ನು ಸ್ಥಾಪಿಸಿತು.[೨]

ಆರಂಭಿಕ ಜೀವನ

[ಬದಲಾಯಿಸಿ]

ಪ್ರತಿವಾದಿ, ಭಯಂಕರ ಶ್ರೀನಿವಾಸ್ ಅವರು ಆಂಧ್ರಪ್ರದೇಶ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ತೆಲುಗು ಮಾತನಾಡುವ ವೈಷ್ಣವ ಬ್ರಾಹ್ಮಣ ಸಂಗೀತ ಕುಟುಂಬದಲ್ಲಿ ಪ್ರತಿವಾದಿ ಭಯಂಕರ ಫಣೀಂದ್ರಸ್ವಾಮಿ ಮತ್ತು ಶೇಷಗಿರಿಯಮ್ಮ ಅವರ ಕಿರಿಯ ಮಗನಾಗಿ ಜನಿಸಿದರು.[೬] ಇವರ ವಂಶಸ್ಥರು ವಾದ ಮಾಡುವುದರಲ್ಲಿ ತುಂಬಾ ಪ್ರಸಿದ್ಧರಾಗಿದ್ದರಂತೆ. ಹಾಗಾಗಿ 'ಪ್ರತಿವಾದಿ ಭಯಂಕರ' ಎನ್ನುವುದು ಇವರ ಮನೆತನಕ್ಕೆ ಇದ್ದ ಹೆಸರು. ಅವರ ತಂದೆ ನಾಗರಿಕ ಸೇವಕರಾಗಿದ್ದರು ಮತ್ತು ಅವರ ತಾಯಿ ಸಂಗೀತಗಾರ್ತಿಯಾಗಿದ್ದರು. ಆತನ ತಂದೆ ಆತ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು ಮತ್ತು ಶ್ರೀನಿವಾಸ್‌ರವರಿಗೆ ಬ್ಯಾಚುಲರ್ ಆಫ್ ಕಾಮರ್ಸ್ ಪದವಿಯನ್ನು ನೀಡಲಾಯಿತು. ನಂತರ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿ ವಿಶಾರದ್ ಅನ್ನು ಉತ್ತೀರ್ಣಗೊಳಿಸಿದರು.[೭][೮]

ಸಂಗೀತ ವೃತ್ತಿ

[ಬದಲಾಯಿಸಿ]

ಅವರ ಚಿಕ್ಕಪ್ಪ ಕಿಡಂಬಿ ಕೃಷ್ಣಸ್ವಾಮಿ ನಾಟಕ ಕಲಾವಿದ ಮತ್ತು ಗಾಯಕರಾಗಿದ್ದರು. ಶ್ರೀನಿವಾಸ್‌ರವರು ೧೨ ವರ್ಷದವರಾಗಿದ್ದಾಗ, ಕೃಷ್ಣಸ್ವಾಮಿ ಅವರಿಗೆ ನಾಟಕವೊಂದರಲ್ಲಿ ಹಾಡಲು ಅವಕಾಶ ನೀಡಿದರು. ನಂತರ, ತರಬೇತಿ ಪಡೆದ ಹಾರ್ಮೋನಿಯಂ ವಾದಕ ಮತ್ತು ಗಾಯಕನಾದ ಶ್ರೀನಿವಾಸ್, ಮದ್ರಾಸ್‌ನ ಜೆಮಿನಿ ಸ್ಟುಡಿಯೋಸ್‌ಗೆ ಹೋದರು. ವೀಣಾ ವಾದಕನಾದ ಏಮಾನಿ ಶಂಕರ ಶಾಸ್ತ್ರಿಯವರು , ಜೀವಂತ ಸಂಗೀತಗಾರರಲ್ಲಿ ಒಬ್ಬರಾಗಿದ್ದರು. ಅವರು ಶ್ರೀನಿವಾಸ್‌ರನ್ನು ಜೆಮಿನಿ ಸ್ಟುಡಿಯೋಸ್‌ನ ಮಾಲೀಕ ಎಸ್. ಎಸ್. ವಾಸನ್‌ಗೆ ಪರಿಚಯಿಸಿದನು. ಅಲ್ಲಿ, ಶ್ರೀನಿವಾಸ್‌ರವರು ತಮ್ಮ ನೆಚ್ಚಿನ ಗಾಯಕ ಮೊಹಮ್ಮದ್ ರಫಿ ಹಾಡಿದ ಸೂಪರ್ ಹಿಟ್ ಹಾಡನ್ನು ಹಾಡಿದರು. ನೌಶಾದ್ ಅಲಿ ಸಂಯೋಜಿಸಿದ ದೀದಾರ್ (೧೯೫೧) ಚಿತ್ರದ "ಹುಯೆ ಹಮ್ ಜಿಂಕೆ ಲಿಯೆ ಬರ್ಬಾದ್" ಅವರಿಗೆ ವೃತ್ತಿಪರ ಹಿನ್ನೆಲೆ ಗಾಯಕರಾಗುವ ಅವಕಾಶವನ್ನು ತಂದುಕೊಟ್ಟಿತು.[೯][೧೦] ಅವರು ಹಾಡಿದ ಮೊದಲ ಕನ್ನಡ ಹಾಡು ಜಾತಕಫಲ(೧೯೫೩) ಚಿತ್ರದ್ದಾಗಿದೆ.

ಬರಹಗಾರರಾಗಿ

[ಬದಲಾಯಿಸಿ]

ಪಿ ಬಿ ಶ್ರೀನಿವಾಸರು ಹಿನ್ನೆಲೆ ಗಾಯಕರಲ್ಲದೆ ಸಹಸ್ರಾರು ಹಾಡುಗಳನ್ನು ಸುಮಾರು ಎಂಟು ಭಾಷೆಗಳಲ್ಲಿ ಬರೆದಿದ್ದಾರೆ. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದಾಗ, ಪಿ.ಬಿ. ಶ್ರೀನಿವಾಸ್‌ರವರು ಎಸ್. ಜಾನಕಿ ಜೊತೆಗೆ "ಮ್ಯಾನ್ ಆನ್ ಮೂನ್" ಎಂಬ ಇಂಗ್ಲೀಷ್ ಗೀತೆಯನ್ನು ರೆಕಾರ್ಡ್ ಮಾಡಿ ಅವರಿಗೆ ಕಳುಹಿಸಿದರು. ಆ ದಿನಗಳಲ್ಲಿ ಅದು ಅವರಿಗೆ ದೊಡ್ಡ ಚಪ್ಪಾಳೆ ನೀಡಿತು ಎಂದು ಅವರು ತಮ್ಮ ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದಾರೆ.[೧೧] ಅವರು ಅಮೆರಿಕದಲ್ಲಿದ್ದ ಸಂದರ್ಭದಲ್ಲಿದ್ದಾಗ ಒಂದು ಸಮಾರಂಭದಲ್ಲಿ ಈ ಹಾಡನ್ನು ಕೇಳಿದ ಪ್ರಸಿದ್ಧ ವಿಶ್ವವಿದ್ಯಾಲಯದ ಮುಖ್ಯಸ್ಥರು ಅವರನ್ನು ಡಾಕ್ಟರೇಟ್ ಪದವಿಗೆ ಶಿಫಾರಸ್ಸು ಮಾಡಿದರು. ಹೀಗಾಗಿ ಪಿ ಬಿ ಎಸ್ ಅವರಿಗೆ ದೊರೆತ ಮೊದಲ ಡಾಕ್ಟರೇಟ್ ಗೌರವ ಅಮೆರಿಕದ ವಿಶ್ವವಿದ್ಯಾಲಯದ್ದು. ಅವರು ಹಲವಾರು ಗಝಲ್‌ಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಭಾಗ್ಯಜ್ಯೋತಿ ಚಿತ್ರಕ್ಕೆ ಅವರು ವಾಣಿ ಜಯರಾಂ ಅವರೊಂದಿಗೆ ಹಾಡಿರುವ "ದಿವ್ಯಗಗನ ವನವಾಸಿನಿ" ಎಂಬ ಸಂಸ್ಕೃತ ಗೀತೆ ಅವರ ಸ್ವಂತ ರಚನೆಯಾಗಿದೆ. "ನವನೀತ ಸುಮಸುಧಾ" ಎಂಬ ರಾಗ ಅವರ ಸ್ವಯಂ ಸೃಷ್ಟಿಯಾಗಿದೆ. 'ಶ್ರೀನಿವಾಸ ಗಾಯತ್ರಿ ವ್ರತ', 'ಗಾಯಕುಡಿ ಗೇಯಲು', ‘ಪ್ರಣವಂ’ ಎನ್ನುವ ಪುಸ್ತಕಗಳನ್ನೂ ಇವರು ಪ್ರಕಟಿಸಿದ್ದಾರೆ. ಕನ್ನಡ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಪಿ. ಬಿ. ಶ್ರೀನಿವಾಸರು ತಮ್ಮ ಜೇಬಿನಲ್ಲಿನ ಹಲವು ಪೆನ್ನುಗಳು, ಅವರೊಂದಿಗಿದ್ದ ಹಲವು ಪುಸ್ತಕಗಳು ಹಾಗೂ ಅವರು ರಚಿಸಿದ ಹಾಡುಗಳ ಬಗ್ಗೆ ಮಾತನಾಡಿ, ಪಿಬಿಎಸ್‌ ಎಂದರೆ ಪ್ಲೇ ಬ್ಯಾಕ್‌ ಸಿಂಗರ್‌ ಅಲ್ಲದೆ 'ಪೆನ್ಸ್‌, ಬುಕ್ಸ್ ಯ್ಯಾಂಡ್ ಸಾಂಗ್ಸ್‌' (ಪೆನ್ನುಗಳು, ಪುಸ್ತಕಗಳು ಮತ್ತು ಹಾಡುಗಳು) ಎಂದೂ ಅರ್ಥ ನೀಡಬಲ್ಲದು ಎಂದು ಹೇಳಿದ್ದರು.

ರಾಜ್ ಕುಮಾರ್ ಅವರಿಗೆ ಹೊಂದಿದ್ದ ಧ್ವನಿ

[ಬದಲಾಯಿಸಿ]

ಕನ್ನಡದ ಮುಖ್ಯ ನಾಯಕ ನಟರಾಗಿದ್ದ ಡಾ.ರಾಜ್‍ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು.[೧೨] ಡಾ.ರಾಜಕುಮಾರ್ ಸ್ವತ: ಹಾಡಲು ಪ್ರಾರಂಭಿಸುವವರೆಗೆ, ಅವರ ಬಹುತೇಕ ಚಿತ್ರಗಳಿಗೆ ಪಿ.ಬಿ.ಶ್ರೀನಿವಾಸ್ ಧ್ವನಿ ನೀಡಿದ್ದರು. ಒಮ್ಮೆ ರಾಜ್‌ಕುಮಾರ್ ಹೀಗೆ ಹೇಳಿದ್ದರು: “ಪಿ.ಬಿ. ಶ್ರೀನಿವಾಸ್ ಧ್ವನಿ ನನಗೆ ಆತ್ಮವಿದ್ದಂತೆ”. ಸುಮಾರು ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ರಾಜ್ ಕುಮಾರ್ ಅವರಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ.[೧೩]

ಪಿಬಿಎಸ್‌ರ ಜೀವನಚರಿತ್ರೆ

[ಬದಲಾಯಿಸಿ]
ಸ್ಟುಡಿಯೋದಲ್ಲಿ ಗಾಯಕಿ ಸಂಗೀತ ಕಟ್ಟಿ ಅವರೊಂದಿಗೆ ಧ್ವನಿಮುದ್ರಣ ಮಾಡುತ್ತಿರುವ ಪ್.ಬಿ.ಶ್ರೀನಿವಾಸ್‌.

ಮಾಧುರ್ಯ ಸಾರ್ವಭೌಮ ಡಾ. ಪಿ. ಬಿ. ಶ್ರೀನಿವಾಸ್-ನಾದಯೋಗಿಯ ಸುನದಯಾನ (ಬರಹ:ಆರ್. ಶ್ರೀನಾಥ್ , ಪ್ರಕಾಶಕರು: ಸುರಭಿ ಪ್ರಕಾಶನ, ಬೆಂಗಳೂರು) ಎಂಬ ಶೀರ್ಷಿಕೆಯ ಜೀವನಚರಿತ್ರೆಯನ್ನು ಗಾಯಕರಾದ ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜೈರಾಮ್ ಮತ್ತು ಕೆ. ಜೆ. ಯೇಸುದಾಸ್‌ರವರು ೨೦೧೩ರ ಮೇ ೭ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಡುಗಡೆ ಮಾಡಿದರು.[೧೪] ಈ ಕೃತಿಗೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ, ನಟ ಮತ್ತು ಗಾಯಕರಾದ ಕೆ.ಎಸ್.ಎಲ್. ಸ್ವಾಮೀ (ರವೀ) ಅವರ ಮುನ್ನುಡಿ ಮತ್ತು ಹಿರಿಯ ಪತ್ರಕರ್ತೆ ಮತ್ತು ಸಾಹಿತಿಯಾಗಿರುವ ಡಾ|| ವಿಜಯಾ ಅವರ ಬೆನ್ನುಡಿಯಿದೆ. ಅಮರ ಗಾಯಕನ ಕುರಿತಾದ ಈ ಮಹತ್ವದ ಕೃತಿಗೆ ೨೦೧೩ರ ಸಾಲಿನ "ಅತ್ಯುತ್ತಮ ಚಲನಚಿತ್ರ ಸಾಹಿತ್ಯಕೃತಿ" ರಾಜ್ಯ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಗಳು

[ಬದಲಾಯಿಸಿ]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಚಿತ್ರಗಳು

[ಬದಲಾಯಿಸಿ]
 • ಜಾತಕಫಲ
 • ಶ್ರೀಕೃಷ್ಣಗಾರುಡಿ
 • ಮಹಿಷಾಸುರ ಮರ್ದಿನಿ
 • ಕನ್ಯಾರತ್ನ
 • ಶ್ರೀಶೈಲ ಮಹಾತ್ಮೆ
 • ಸತಿಸಾವಿತ್ರಿ
 • ಸಂಧ್ಯಾರಾಗ
 • ರತ್ನಮಂಜರಿ
 • ರಾಜದುರ್ಗದ ರಹಸ್ಯ
 • ಪಾರ್ವತಿ ಕಲ್ಯಾಣ
 • ನಂದಾದೀಪ
 • ನವಜೀವನ
 • ರಣಧೀರ ಕಂಠೀರವ
 • ನಮ್ಮ ಊರು
 • ನಮ್ಮ ಮಕ್ಕಳು
 • ನಾಂದಿ
 • ನಕ್ಕರೆ ಅದೇ ಸ್ವರ್ಗ
 • ಪ್ರತಿಧ್ವನಿ
 • ಪ್ರತಿಜ್ಞೆ
 • ರೌಡಿರಂಗಣ್ಣ
 • ರಾಣಿ ಹೊನ್ನಮ್ಮ
 • ಸರ್ವಮಂಗಳ
 • ಸತಿಸುಕನ್ಯ
 • ಸಂತ ತುಕಾರಾಂ
 • ಶ್ರೀ ರಾಮಾಂಜನೇಯ ಯುದ್ಧ.........ಹೀಗೆ ಹಲವಾರು

ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಮಧುರ ಗೀತೆಗಳು

[ಬದಲಾಯಿಸಿ]
 1. ನಾವಾಡುವ ನುಡಿಯೇ ಕನ್ನಡನುಡಿ - ಗಂಧದ ಗುಡಿ
 2. ನಗು ನಗುತ ನಲಿ ನಲಿ - ಬಂಗಾರದ ಮನುಷ್ಯ
 3. ವೈದೇಹಿ ಏನಾದಳು? - ದಶಾವತಾರ
 4. ಇಳಿದು ಬಾ ತಾಯೆ ಇಳಿದು ಬಾ - ಅರಿಶಿನ ಕುಂಕುಮ
 5. ಕಲ್ಲಾದೆ ಏಕೆಂದು ಬಲ್ಲೆ, ಶಿವನೇ - ಭಲೇ ಹುಚ್ಚ
 6. ಹಾರುತಿರುವ ಹಕ್ಕಿಗಳೇ - ಪ್ರತಿಧ್ವನಿ
 7. ಇವಳು ಯಾರು ಬಲ್ಲೆರೇನು - ಗೌರಿ
 8. ಒಲವಿನ ಪ್ರಿಯಲತೆ ಅವಳದೆ ಚಿಂತೆ - ಕುಲವಧು
 9. ಹಾಡೊಂದ ಹಾಡುವೆ ನೀ ಕೇಳು - ನಾಂದಿ
 10. ಬಾರೆ ಬಾರೆ ಚಂದದ ಚೆಲುವಿನ ತಾರೆ - ನಾಗರಹಾವು
 11. ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ - ಕಸ್ತೂರಿ ನಿವಾಸ
 12. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು - ಕಸ್ತೂರಿ ನಿವಾಸ
 13. ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ ವೀರ ನಾರಿಯ -ನಾಗರಹಾವು
 14. ಸಂಗಮ ಸಂಗಮ ಅನುರಾಗ ತಂದ ಸಂಗಮ - ನಾಗರಹಾವು
 15. ಕಮಲದ ಹೂವಿಂದ ಕೆನ್ನೆಯ ಮಾಡಿದನು - ಬಾಳು ಬೆಳಗಿತು
 16. ಉತ್ತರ ಧ್ರುವದಿಂ ದಕ್ಶಿಣ ಧ್ರುವಕೂ - ಶರಪಂಜರ
 17. ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ - ಎರಡು ಕನಸು
 18. ಎಂದೆಂದೂ ನಿನ್ನನು ಮರೆತು ಬದುಕಿರಲಾರೆ - ಎರಡು ಕನಸು
 19. ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ - ಎರಡು ಕನಸು
 20. ಎಂದು ನಿನ್ನ ನೋಡುವೆ... - ಎರಡು ಕನಸು
 21. ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ - ಕನ್ಯಾರತ್ನ
 22. ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ - ಗಾಂಧಿ ನಗರ
 23. ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ - ದೂರದ ಬೆಟ್ಟ
 24. ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ - ದಾರಿತಪ್ಪಿದ ಮಗ
 25. ಆಕಾಶವೆ ಬೀಳಲಿ ಮೇಲೆ ನಾ ನಿನ್ನ ಕೈ ಬಿಡೆನು - ನ್ಯಾಯವೇ ದೇವರು
 26. ಗೋಧೋಳಿ ಹಾರುವ ಹೊತ್ತು, ಹೆಗಲಲ್ಲಿ ನೇಗಿಲ ಹೊತ್ತು - ಪುನರ್ ಜನ್ಮ
 27. ಕನ್ನಡತಿ ನಮ್ಮೊಡತಿ, ನೀ ಕಣ್ಣು ತೆರೆದು ನೋಡಿ - ಪುನರ್ ಜನ್ಮ
 28. ಒಲಮೆಯ ಹೂವೇ ನೀ ಎಲ್ಲಿ ಹೋದೆ - ಪುನರ್ ಜನ್ಮ
 29. ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ - ಭಕ್ತ ಕನಕದಾಸ
 30. ಕುಲ ಕುಲ ಕುಲವೆಂದು ಹೊಡೆದಾಡದಿರಿ- ಭಕ್ತ ಕನಕದಾಸ
 31. ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ - ಸ್ವಯಂವರ
 32. ನಿಲ್ಲು ನೀ ನಿಲ್ಲು ನೀ ನೀಲವೇಣಿ - ಅಮರಶಿಲ್ಪಿ ಜಕ್ಕಣಾಚಾರಿ
 33. ಕಣ್ಣು ರೆಪ್ಪೆ ಒಂದನೊಂದು ಮರೆವುದೆ -
 34. ಆಗದು ಎಂದು ಕೈಲಾಗದು ಎಂದು ಕೈಕಟ್ಡಿ ಕುಳಿತರೆ -ಬಂಗಾರದ ಮನುಷ್ಯ
 35. ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ -ಬಂಗಾರದ ಮನುಷ್ಯ
 36. ಮೈಸೂರು ದಸರಾ ಎಷ್ಟೊಂದು ಸುಂದರ - ಕರುಳಿನಕರೆ
 37. ಯಾರು ಏನು ಮಾಡುವರು ನನಗೇನು ಕೇಡು ಮಾಡುವರು - ಕ್ರಾಂತಿವೀರ
 38. ನಿದಿರೆಯು ಸದಾ ಏಕೊ ದೂರ - ಸಿಪಾಯಿರಾಮು
 39. ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ - ಬೆಟ್ಟದ ಹುಲಿ
 40. ವೇದಾಂತಿ ಹೇಳಿದನು ಮಣ್ಣೆಲ್ಲ ಹೊನ್ನು ಹೊನ್ನು - ಮಾನಸ ಸರೋವರ
 41. ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ - ಸಂಧ್ಯಾರಾಗ
 42. ಆ ಮೊಗವು ಎಂಥ ಚೆಲುವು - ಬಂಗಾರದ ಹೂ
 43. ಚಿನ್ನ ಎಂದು ನಗುತಿರು ನನ್ನ ಸಂಗ ಬಿಡದಿರು - ಪ್ರೇಮದ ಕಾಣಿಕೆ
 44. ಭಗವಂತ ಕೈ ಕೊಟ್ಟ ದುಡಿಯೋಕಂತ - ಮಣ್ಣಿನ ಮಗ
 45. ಆಡೋಣ ನೀನು ನಾನು, ನನ್ನ ಆಸೆ ತಾರೆ ನೀನು - ಕಸ್ತೂರಿ ನಿವಾಸ
 46. ಬಂದೆ ನೀ ಬಂದೆ ಮನದ ಮನೆಯ ಅತಿಥಿಯಾಗಿ - ಗಂಡೊಂದು ಹೆಣ್ಣಾರು
 47. ಬಾರೇ ನೀ ಚೆಲುವೆ, ನಿನ್ನಂದ ಚೆಂದ ಮಕರಂದ - ಸ್ವರ್ಣಗೌರಿ
 48. ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು - ವಿಜಯನಗರದ ವೀರಪುತ್ರ
 49. ಒಲುಮೆಯ ಹೊವೇ ನೀ ಹೋದೆ ಎಲ್ಲಿಗೆ?
 50. ಮೌನವೇ ಆಭರಣ,ಮುಗುಳ್ನಗೇ ಶಶಿಕಿರಣ
 51. ಅಮ್ಮಾ,ಅಮ್ಮಾ ನೀ ಅಮ್ಮಾ ಎಂದಾಗ ಎಂಥ ಸಂತೊಷವು
 52. ಎಲ್ಲಿ ಮರೆಯಾದೆ ವಿಠ್ಠಲ, ಏಕೇ ದೂರಾದೆ? - ಭಕ್ತ ಕುಂಬಾರ
 53. ಬೆಳದಿಂಗಳಿನ ನೊರೆ ಹಾಲು ಕೊಡದಲಿ ತುಂಬಿ ತಂದವಳೆ
 54. ಎಂದು ನಿನ್ನ ನೋಡುವೆ, ಎಂದು ನಿನ್ನ ಸೇರುವೆ, ನಿಜ ಹೇಳಲೇನು - ಎರಡು ಕನಸು
 55. ಒಲವೆ ಜೀವನ ಸಾಕ್ಷಾತ್ಕಾರ - ಸಾಕ್ಷಾತ್ಕಾರ
 56. ರಂಗಿ ನಿನ್ ಮೇಲೆ ನನ್ನ ಮನಸೈತೆ ಕಣ್ ತುಂಬ ನಿನ್ ಗೊಂಬೆ ತುಂಬೈತೆ
 57. ನಿನದೆ ನೆನಪು ದಿನವು ಮನದಲ್ಲಿ - ರಾಜ ನನ್ನ ರಾಜ
 58. ನೂರು ಜನ್ಮ ಸಾಲದು ಈ ನಿನ್ನ ನೋಡಲು- ರಾಜ ನನ್ನ ರಾಜ
 59. ಬ್ರಹ್ಮಚಾರಿ ಮರುಳಾದ ಪ್ರೇಮ ದೇವಿಗೆ ಶರಣಾದ
 60. ಜಗದೀಶನಾಡುವ ಜಗವೇ ನಾಟಕ ರಂಗ
 61. ಜನ್ಮ ಜನ್ಮದ ಅನುಬಂಧ,ಹೃದಯ ಹೃದಯಗಳ ಪ್ರೇಮಾನುಬಂಧ - ಸಾಕ್ಷಾತ್ಕಾರ
 62. ಈ ದಿನ ಮಜ ಕಂಡೆನು ನಿಜ, ಆದೆನು ರಾಜ
 63. ಮನವೇ ಮಂದಿರ, ನ್ಯಾಯ ದೇಗುಲ - ತೂಗುದೀಪ
 64. ನನ್ನವಳು ನನ್ನೆದೆಯ, ಹೊನ್ನಾಡನಾಳುವಳು
 65. ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
 66. ಶುಭಮಂಗಳ, ಸುಮಹೂರ್ತವೇ, ಸುಖವೇ
 67. ಸಿಹಿಮುತ್ತು,ಸಿಹಿಮುತ್ತು ಎನ್ನೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು- ನಾ ನಿನ್ನ ಮರೆಯಲಾರೆ
 68. ಒಂದು ಒಂದು ಮಾತು ನಾನು ಹೇಳಲೆ
 69. ರವಿವರ್ಮನ ಕುಂಚದ ಕಲೆ ಬಲೆ - ಸೊಸೆ ತಂದ ಸೌಭಾಗ್ಯ
 70. ಮಾನವ ದೇಹವು, ಮೂಳೆ ಮಾಂಸದ ತಡಿಕೆ - ಭಕ್ತ ಕುಂಬಾರ
 71. ಎಲ್ಲೂ ಹೋಗೊಲ್ಲ ಮಾಮ, ಎಲ್ಲೂ ಹೋಗೊಲ್ಲ - ಗಂಧದ ಗುಡಿ
 72. ಕಲ್ಲು ಸಕ್ಕರೆ ಕೊಳ್ಳಿರೋ, ನೀವೆಲ್ಲರೂ
 73. ಹಾಡೊಂದ ಹಾಡುವೆ ನೀ ಕೇಳು ಮಗುವೇ - ನಾಂದಿ
 74. ಹಳ್ಳಿಯಾದರೇನು ಶಿವ.... - ಮೇಯರ್ ಮುತ್ತಣ್ಣ
 75. ವೇದಾಂತಿ ಹೇಳಿದನು... - ಮಾನಸ ಸರೋವರ

ತಮಿಳು ಹಾಡುಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ಭಾಷೆ ಹಾಡು ಸಂಗೀತ ನಿರ್ದೇಶಕ ಸಹ-ಗಾಯಕ
೧೯೫೩ ಜಾತಕಂ ತಮಿಳು ಸಿಂಧನೈ ಎನ್ ಸೆಲ್ವಂ ಆರ್.ಗೋವರ್ಧನಂ
ಮೂಡ ನಂಬಿಕೈಯಾಲೆ ಪಾಲಾ ಕೇಡು ವಿಲೈಯುಮ್
೧೯೫೪ ವಿದುತಲೈ ತಮಿಳು ಅನ್ಬೋಡು ಇನ್ಬಾಮಗಾ ವಾಝಲಂ ಲೆಟ್ಚುಮನನ್ ಕುರುನಾಥ್
೧೯೫೬ ನಲ್ಲ ವೀಡು ತಮಿಳು ಕಲೈಮತಿಯೇ ಎನ್ ಕಾದಲ್ ಕೃಷ್ಣಮೂರ್ತಿ ಮತ್ತು ನಾಗರಾಜ ಅಯ್ಯರ್ ಆರ್.ಬಾಲಸರಸ್ವತಿ ದೇವಿ
೧೯೫೬ ಪಾಸಾವಲೈ ತಮಿಳು ಮಲರೋಡು ವಿಶಾನಾಗಂ.... ನೀಧಿ ಇಧುಥಾನಾ ವಿಶ್ವನಾಥನ್-ರಾಮಮೂರ್ತಿ
೧೯೫೭ ಭಕ್ತ ಮಾರ್ಕಂಡೇಯ ತಮಿಳು ಅನ್ಬಿನ್ ಉರುವೆ ನೀಯೆ ವಿಶ್ವನಾಥನ್-ರಾಮಮೂರ್ತಿ ಸೂಲಮಂಗಲಂ ರಾಜಲಕ್ಷ್ಮಿ
೧೯೫೭ ಕರ್ಪುಕ್ಕರಸಿ ತಮಿಳು ಕನಿಯೋ ಪಾಗೋ ಕರ್ಕಂಡೋ ಜಿ.ರಾಮನಾಥನ್ ಎಂ.ಎಲ್.ವಸಂತಕುಮಾರಿ
೧೯೫೭ ಎಂ.ಎಲ್.ಎ. ತಮಿಳು ಕಾಮನ್ ಕಂಡು ಮೊಗಮ್ ಪೆಂಡ್ಯಾಲ ನಾಗೇಶ್ವರ ರಾವ್ ಜಿಕ್ಕಿ
೧೯೫೭ ಮಗಥಾಲ ನಟ್ಟು ಮೇರಿ ತಮಿಳು ಕನ್ನುಕ್ಕು ನಾರೆ ಮಿನ್ನಿಡುಮ್ ಥಾರೈ ಆರ್.ಪಾರ್ಥಸಾರಥಿ ಎಸ್. ಜಾನಕಿ
೧೯೫೭ ಮಕ್ಕಲೈ ಪೆಟ್ರಾ ಮಗರಾಸಿ ತಮಿಳು ಒಂಡ್ರು ಸೆರ್ಂದಾ ಅನ್ಬು ಮಾರುಮಾ ಕೆ.ವಿ. ಮಹಾದೇವನ್ ಉಡುತ ಸರೋಜಿನಿ
೧೯೫೭ ಸಮಯ ಸಂಜೀವಿ ತಮಿಳು ಗಾಮಾ ಗಮವೇನಾ ನರುಮಾನಂ ವೀಸುಧೆ ಜಿ.ರಾಮನಾಥನ್ ಜಿಕ್ಕಿ
೧೯೫೭ ಸತ್ಯವಾನ್ ಸಾವಿತ್ರಿ ತಮಿಳು ಎದುಕೊ ಇಂದ್ರಾನಂದಂ ಎಸ್.ರಾಜೇಶ್ವರ ರಾವ್ ಮತ್ತು ಬಾಬು ರಾವ್ ಎಸ್.ವರಲಕ್ಷ್ಮಿ
ರಾವೆಲಾನೊ ಎಸ್.ವರಲಕ್ಷ್ಮಿ
೧೯೫೭ ಸೌಭಾಗ್ಯವತಿ ತಮಿಳು ತಟ್ಟಜಾಮ್ ತಟ್ಟಿತ್ತಜಮ್ ಪೆಂಡ್ಯಾಲ ನಾಗೇಶ್ವರ ರಾವ್
೧೯೫೮ ಇಲ್ಲರಾಮೆ ನಲ್ಲರಂ ತಮಿಳು ಮರಾನೆ ಉನ್ ಮಲರ್ಕನೈ ಕೆ.ಜಿ.ಮೂರ್ತಿ ಪಿ.ಸುಶೀಲಾ & ಎಸ್. ಜಾನಕಿ
೧೯೫೮ ಕುದುಂಬ ಗೌರವಂ ತಮಿಳು ಸೀರಮ್ ಕಾಲಂ ವಂದಚು ವಿಶ್ವನಾಥನ್-ರಾಮಮೂರ್ತಿ ಕೆ.ಜಮುನಾ ರಾಣಿ & ಎಲ್.ಆರ್.ಈಶ್ವರಿ
೧೯೫೮ ತಿರುದರ್ಗಲ್ ಜಕ್ಕಿರಥೈ ತಮಿಳು ಅಝಾಗೆ ಉನ್ನೈ ಕಾಂಡೋಮ್ ಕೆ.ವಿ. ಮಹಾದೇವನ್ ಎಸ್. ಜಾನಕಿ
೧೯೫೯ ಅರುಮೈ ಮಗಲ್ ಅಭಿರಾಮಿ ತಮಿಳು ತಂಗಾ ನಿರಾಮ್ ಇಡಾಜ್ ಸೆಂಬವಲಂ ವಿ.ದಕ್ಷಿಣಮೂರ್ತಿ ಪಿ.ಸುಶೀಲಾ
೧೯೫೯ ಅವಲ್ ಯಾರ್ ತಮಿಳು ಪುದು ಅಳಗೈ ರಸಿಕ ವರುಮ್ ಎಸ್.ರಾಜೇಶ್ವರ ರಾವ್ ಜಿಕ್ಕಿ
೧೯೫೯ ಅಳಗರ್ಮಲೈ ಕಲ್ವನ್ ತಮಿಳು ಪೂಂತೇಂದ್ರಲೆ ವಂದಿದುವೈ.. ಕನಿಂದಾ ಕಾದಲ್ ಬಿ.ಗೋಪಾಲಂ ಪಿ.ಸುಶೀಲಾ
೧೯೫೯ ದೈವ ಬಲಂ ತಮಿಳು ಆದಿಚ್ಚಾ ಆದಿ ವಯಿತ್ತಿಲೆ ಆದಿಚಿದನಂ ಜಿ.ಅಶ್ವತ್ಥಾಮ ಎ.ಎಲ್. ರಾಘವನ್
ಮಲರೋಡು ವಿಲೈಯಾದುಮ್ ಎಸ್. ಜಾನಕಿ
ಎನ್ ಮನವಾನಿಲ್ ಆದುಮ್ ರಾಣಿ ಎಸ್. ಜಾನಕಿ
ನೀಲವತು ತವರಿ ಪೆನ್ನೈ ಮಾರಿ ಎಸ್. ಜಾನಕಿ
೧೯೫೯ ಎಂಗಲ್ ಸೆಲ್ವಿ ತಮಿಳು ಉನ್ನೈ ನಂಬಿ ಅವಲ್ ಇರುಂಧಾಲ್ ಕೆ.ವಿ. ಮಹಾದೇವನ್
೧೯೭೯ ಇನಿಕ್ಕುಮ್ ಇಲಮೈ ತಮಿಳು ಮಾಲೈ ಮಾಯಾಂಗಿನಾಲ್ ಶಂಕರ್-ಗಣೇಶ್ ಎಸ್.ಪಿ. ಶೈಲಜಾ
೧೯೭೯ ಕಡವುಲ್ ಅಮೈತಾ ಮೇದೈ ತಮಿಳು ತೆಂಡ್ರಲೆ ನೀ ಪೇಸು ಇಳಯರಾಜಾ
೧೯೮೬ ಊಮೈ ವಿಜಿಗಲ್ ತಮಿಳು ಥೋಲ್ವಿ ನಿಲಯೆಣ್ಣ ನಿನೈತಾಲ್ ಮನೋಜ್-ಗ್ಯಾನ್ & ಅಬಾವನನ್ ಅಬಾವನನ್
೧೯೮೯ ಪೂ ಮನಂ ತಮಿಳು ಸಿಲಾನೆರಾಮ್ ಯೆಧೇಧೋ ನಡಕುಮ್ ವಿದ್ಯಾಸಾಗರ್
೧೯೯೨ ನಾಲಯ ಸೀಧಿ ತಮಿಳು ಉಯಿರೆ ಉನ್ನೈ ಇದಯಂ ಆದಿತ್ಯನ್ ಸಂಗೀತ ಕಟ್ಟಿ
೧೯೯೩ ಏರ್ಪೋರ್ಟ್ ತಮಿಳು ಉಯಿರೆ ಉನ್ನೈ ಎಸ್.ಪಿ.ವೆಂಕಟೇಶ್
೨೦೦೪ ೭G ರೇನ್ಬೋ ಕಾಲೋನಿ ತಮಿಳು ಇತು ಎನ್ನ ಮಾತರಂ ಯುವನ್ ಶಂಕರ್ ರಾಜಾ
೨೦೧೦ ಆಯಿರಥಿಲ್ ಒರುವನ್ ತಮಿಳು ಪೆಮ್ಮನೇಯ್ ಜಿ.ವಿ.ಪ್ರಕಾಶ್ ಕುಮಾರ್ ಬಾಂಬೆ ಜಯಶ್ರೀ

ಶ್ರೀನಿವಾಸ್ ಅವರು ಏಪ್ರಿಲ್ ೧೪, ೨೦೧೩ ರಂದು ತಮ್ಮ ೮೪ ನೇ ವಯಸ್ಸಿನಲ್ಲಿ ಚೆನ್ನೈನ ತಮ್ಮ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಮರುದಿನ ಅವರ ಅಂತ್ಯಸಂಸ್ಕಾರ ಮಾಡಲಾಯಿತು. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದರು.[೧೯]

ಉಲ್ಲೇಖಗಳು

[ಬದಲಾಯಿಸಿ]
 1. Srinivasan, Meera (14 April 2013). "PBS leaves behind a treasure trove of melodies". The Hindu – via www.thehindu.com.
 2. ೨.೦ ೨.೧ "Mangalorean.com - Mangalore News Articles, Classifieds to Around the World". 4 March 2016. Archived from the original on 4 March 2016.
 3. "PBS no more". The Hindu. 14 April 2013.
 4. Kolappan, B. (15 April 2013). "A singer who evoked pathos, a nonpareil". The Hindu – via www.thehindu.com.
 5. "Chennai: Legendary singer Dr P B Sreenivas no more".
 6. "Chennai: Legendary singer Dr P B Sreenivas no more"."Chennai: Legendary singer Dr P B Sreenivas no more".
 7. "The Hindu : Bit of drive-in nostalgia". Archived from the original on 8 May 2009. Retrieved 18 April 2008.{{cite web}}: CS1 maint: unfit URL (link)
 8. Khajane, Muralidhara (14 April 2013). "P.B. Sreenivas was the voice of Rajkumar". The Hindu – via www.thehindu.com.
 9. "Archived copy". mobiletoi.timesofindia.com. Archived from the original on 14 June 2013. Retrieved 13 January 2022.{{cite web}}: CS1 maint: archived copy as title (link)
 10. Madhurya Sarvabhouma Dr.P.B.Srinivos - Nadayogiya sunaadayaana by R. Srinath
 11. https://www.sjanaki.net/telugu-music/with-pbs
 12. https://www.thehindu.com/news/national/karnataka/pb-sreenivas-was-the-voice-of-rajkumar/article4617526.ece
 13. https://celebrityborns.com/biography/p-b-sreenivas/931
 14. Kolappan, B. (15 April 2013). "A singer who evoked pathos, a nonpareil". The Hindu – via www.thehindu.com.Kolappan, B. (15 April 2013). "A singer who evoked pathos, a nonpareil". The Hindu – via www.thehindu.com.
 15. "P.B. Sreenivas was the voice of Rajkumar". Archived from the original on 15 June 2013. Retrieved 16 April 2013.
 16. "Rajyotsava Awardee's list". Karnataka Govt website. Govt of Karnataka. Retrieved 30 August 2020.
 17. "P.B. Sreenivas was the voice of Rajkumar". Archived from the original on 15 June 2013. Retrieved 16 April 2013.
 18. "PB Srinivas gets Dr Rajakumar Souhardha award - South Cinema - Kannada News - ibnlive". 9 June 2012. Archived from the original on 9 June 2012.
 19. "Null | NewsWhip |". www.newswhip.com. Archived from the original on 15 June 2013. Retrieved 3 February 2022.