ವಿಷಯಕ್ಕೆ ಹೋಗು

ಬಿ.ಕಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಣಿಜ್ಯ ಬ್ಯಾಚುಲರ್ ( B.Com ಅಥವಾ B.Comm) ವಾಣಿಜ್ಯ ಮತ್ತು ಸಂಬಂಧಿತ ವಿಷಯಗಳಲ್ಲಿ ಸ್ನಾತಕಪೂರ್ವ ಪದವಿ ಆಗಿದೆ .ಈ ಪದವಿಯನ್ನು ವಾಣಿಜ್ಯ ಪದವಿ ಎಂದು ಕರೆಯಲಾಗುತ್ತದೆ .ಈ ಪದವಿಯನ್ನು ಪ್ರಧಾನವಾಗಿ ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ನೀಡಲಾಗುತ್ತದೆ , ಆದರೆ ಈ ಪದವಿಯನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ಇನ್ನುಮುಂದೆ ನೀಡುವುದಿಲ್ಲ . ಇದು ಸಾಮಾನ್ಯವಾಗಿ ಪೂರ್ಣ ಸಮಯ , ಮೂರು ಅಥವಾ ನಾಲ್ಕು ವರ್ಷಗಳಲ್ಲಿ ವ್ಯಾಸಾ೦ಗ ಮಾಡಬಹುದಾದ ಪದವಿ ಆಗಿದೆ .

ಒದಗಿಸಲಾಗುವ ವಿಷಯಗಳು[ಬದಲಾಯಿಸಿ]

ಕಾಮರ್ಸ್ ಪದವಿಯನ್ನು ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ವ್ಯಾಪಕ ನಿರ್ವಹಣಾ ಕೌಶಲ್ಯವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಅದೇ ಸಮಯದಲ್ಲಿ ಒಂದು ನಿರ್ದಿಷ್ಟ ವ್ಯಾಪಾರ ಪ್ರದೇಶದಲ್ಲಿನ ಸವಾಲುಗಳನ್ನು, ಅಧ್ಯಯನಗಳ ಮೂಲಕ ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಲು ಉಪಯುಕ್ತವಾಗಿದೆ. ಆದ್ದರಿಂದ ಹೆಚ್ಚು ವಿಶ್ವವಿದ್ಯಾಲಯಗಳು ಈ ಪದವಿಯನ್ನು ಹೇಗೆ ರೂಪಿಸಿವೆಯೆ೦ದರೆ, ವಿದ್ಯಾರ್ಥಿಗಳೂ ವ್ಯಾಸಾ೦ಗ ಮಾಡುವಾಗ ತಮ್ಮನ್ನು ತಾವು ಸಾಮಾನ್ಯ ವ್ಯಾಪಾರ ಕ್ಷೇತ್ರದ ತತ್ವಗಳಿಗೆ ತೆರೆದುಕೊಳ್ಳಲು ಪ್ರಯೋಜನಕಾರಿ ವಿಷಯಗಳಾದ, ಅಕೌಂಟಿಂಗ್ / ಹಣಕಾಸು, ಮಾನವ ಸಂಪನ್ಮೂಲ , ಅಂಕಿಅಂಶಗಳು , ಮಾರ್ಕೆಟಿಂಗ್ , ಅರ್ಥಶಾಸ್ತ್ರ , ಮತ್ತು ಮಾಹಿತಿ, ಈ ಎಲ್ಲಾ ವಿಷಯಗಳನ್ನು ಬಿ ಕಾಂ ಪದವಿಯಲ್ಲಿ ಒದಗಿಸಲಾಗುತ್ತದೆ.

ಈ ಪದವಿಯ ಪಠ್ಯಕ್ರಮವು ಸಾಮಾನ್ಯವಾಗಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಭಾರತ, ಮಾಲ್ಟಾ, ದಕ್ಷಿಣ ಆಫ್ರಿಕಾ, ಕೆನಡಾ, ಹಾಂಗ್ ಕಾಂಗ್ ಮತ್ತು ಯುನೈಟೆಡ್ ಕಿಂಗ್ಡಮ್ ದೇಶಗಳಲ್ಲಿ ಮೂರು ವರ್ಷದ ಕ್ರಮವಾಗಿರುತ್ತದೆ ಮತ್ತು ನೇಪಾಳದಲ್ಲಿ ಎರಡು ವರ್ಷದ ಭಾಗಗಳಲ್ಲಿ ಇರುತ್ತದೆ. ಇದು ಐರ್ಲೆಂಡ್, ಕೆನಡಾ, ಘಾನಾ, ಫಿಲಿಪ್ಪೀನ್ಸ್ ಮತ್ತು ನೆದರ್ಲ್ಯಾಂಡ್ಸ್ ಬಹುತೇಕ ಗಣರಾಜ್ಯದಲ್ಲಿ ನಾಲ್ಕು ವರ್ಷಗಳ ಅಗತ್ಯವಿದೆ. ಮಾಲ್ಟಾ ದಲ್ಲಿ B.Com (ಆನರ್ಸ್)ಅನ್ನು ಹೆಚ್ಚುವರಿ ವರ್ಷದ ಸ್ನಾತಕೋತ್ತರ ಅರ್ಹತೆಯಾಗಿ ಪರಿಗಣಿಸಲಾಗುವುದಿಲ್ಲ ಆದರೆ ದಕ್ಷಿಣ ಆಫ್ರಿಕಾ ಮತ್ತು ಭಾರತದ ಕೆಲವು ವಿಶ್ವವಿದ್ಯಾಲಯಗಳಲ್ಲಿ B.Com (ಆನರ್ಸ್)ಅನ್ನು ಹೆಚ್ಚುವರಿ ಸ್ನಾತಕೋತ್ತರ ಅರ್ಹತಾವಾಗಿ ಪರಿಗಣಿಸಲಾಗಿದೆ . ಪಾಕಿಸ್ತಾನದಲ್ಲಿ B.Com ಮೂರು ವರ್ಷಗಳ ಅದ್ಯಾಯನ ಹಾಗು B.Com (ಆನರ್ಸ್) ಎರಡು ವರ್ಷಗಳ ಅಧ್ಯಯನ ಹೊಂದಿದೆ, ನಾಲ್ಕು ವರ್ಷದ ಕಾರ್ಯಕ್ರಮವನ್ನು ಇಲ್ಲಿ ಬಿಎಸ್ (ಆನರ್ಸ್) ವಾಣಿಜ್ಯ ಎಂದು ಪರಿಗಣಿಸಲಾಗಿದೆ.

"https://kn.wikipedia.org/w/index.php?title=ಬಿ.ಕಾಮ್&oldid=717286" ಇಂದ ಪಡೆಯಲ್ಪಟ್ಟಿದೆ