ಕಾಕಿನಾಡ
This article is written like a travel guide rather than an encyclopedic description of the subject. (June 2009) |
ಕಾಕಿನಾಡ
కాకినాడ Kakinada Cocanada | |
---|---|
City | |
Nickname: Fertilizer City | |
• Rank | ೫ |
Population (೨೦೦೭) | |
• City | ೮೯೬೩೨೯ |
• Rank | ೫ |
• Metro | ೮೯೬೩೨೯ |
ಕಾಕಿನಾಡ ( ಕಾಕಿನಾಡ (ತೆಲುಗು:కాకినాడ) pronunciation (ಸಹಾಯ·ಮಾಹಿತಿ)ಒಂದು ನಗರ ಪ್ರದೇಶವಾಗಿದ್ದು , ಪುರಸಭೆಯ ಆಡಳಿತವಿದ್ದು, ಭಾರತ ದೇಶದ ,ಆಂಧ್ರ ಪ್ರದೇಶರಾಜ್ಯ ದಲ್ಲಿದೆ. ಇದು ಅತಿ ದೊಡ್ಡ ನಗರ ಪ್ರದೇಶ ಹಾಗು ಹೆಚ್ಚು ಜನಸಾಂದ್ರತೆಯನ್ನು ಹೊಂದಿದ್ದು,ಪೂರ್ವ ಗೋದಾವರಿ ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವಾಗಿದೆ.[೧] ೨೦೦೭ ರ ಜನಗಣತಿಯ ಅನ್ವಯ ಈ ನಗರದ ಜನಸಂಖ್ಯೆ ಸುಮಾರು ೮೯೬,೩೨೯. ಈ ಕರಾವಳಿ ನಗರ ಪ್ರದೇಶವು ಶೀಘ್ರವಾಗಿ ಅಭಿವೃದ್ಧಿಯನ್ನು ಹೊಂದುತ್ತಿದ್ದು,ಇತ್ತೀಚೆಗೆ ವಿಶೇಷ ಆರ್ಥಿಕ ವಲಯಸ್ಥಾನವನ್ನು ನೀಡಿರುವುದು ಅಭಿನಂದನಾರ್ಹ. ಈ ನಗರವು ಆಳ-ನೀರಿನ ಬಂದರು ಪ್ರದೇಶವನ್ನೂ ಹೊಂದಿದ್ದು, ಶೀಘ್ರವಾಗಿ ವಿಸ್ತರಣೆಯಾಗುತ್ತಾ ಬೆಳೆಯುತ್ತಿದೆ. ಏಷ್ಯ ಖಂಡದಲ್ಲಿ ಚಂಡೀಘರ್ ನಂತರ ಈ ನಗರವು ಅತ್ಯುತ್ತಮ ನಕಾಶೆಯನ್ನು ಹೊಂದಿದೆ. ಕಾಕಿನಾಡ ತೀರದಿಂದ ೫ ಕಿ. ಮೀ . ದೂರದಲ್ಲಿ , ಹೋಪ್ ಐಲ್ಯಾಂಡ್‌ಎಂಬ ಸಣ್ಣ ದ್ವೀಪವಿದ್ದುದರಿಂದ ಕಾಕಿನಾಡವನ್ನು ಸ್ವಾಭಾವಿಕ ಬಂದರನ್ನಾಗಿ ಮಾಡಿದೆ. ಹಳೆಯ ರೇವು ಹಲವು ದಶಮಾನಗಳ ಕೆಲಸ ಮಾಡಿದ್ದು ಭಾರತದ ದೊಡ್ಡ,ಚಿಕ್ಕ ಬಂದರಾಗಿದ್ದು, ತದ ನಂತರ ,ಆಳ ನೀರಿನ ಬಂದರನ್ನು ನಿರ್ಮಾಣ ಮಾಡಲಾಗಿದೆ. ಈಗ, ಆಳ ನೀರಿನ ಬಂದರು ಹಾಗೂ ಹಳೆಯ ರೇವು ಬಂದರು ಒಂದರ ಪಕ್ಕ ಒಂದು ಕೆಲಸವನ್ನು ಮಾಡುತ್ತಿವೆ.
ಪದಮೂಲ/ಶಬ್ದವ್ಯುತ್ಪತ್ತಿ
[ಬದಲಾಯಿಸಿ]- ಆಂಧ್ರಪ್ರದೇಶದ ಇತರೆ ದೊಡ್ಡ ನಗರಗಳಿಗೆ ಹೋಲಿಸಿದರೆ, ಕಾಕಿನಾಡ ಇತ್ತೀಚಿನ ಚಿಕ್ಕ ನಗರವಾಗಿದೆ.. ಯುರೋಪಿನ ಮಂದಿ ಇಲ್ಲಿಗೆ ಬರಲಾರಂಭಿಸಿದ ಕಳೆದ ೩೦೦ ವರ್ಷಗಳಲ್ಲಿ ಈ ನಗರವು ಪ್ರಧಾನವಾಗಿ ಬೆಳೆದಿದ್ದು, ಬ್ರಿಟೀಷರು ಈ ಪ್ರದೇಶವನ್ನು ಪ್ರಧಾನ ನೆಲೆಯನ್ನಾಗಿ ಪರಿವರ್ತಿಸಿ,ಆಡಳಿತವನ್ನು ನಡೆಸಿದ್ದಾರೆ.
- ಕಾಕಿನಾಡ ಎಂಬ ಹೆಸರಿನ ಜನನದ ಹಿನ್ನಲೆಯಲ್ಲಿ,ಹಲವಾರು ಸಿದ್ಧಾಂತಗಳಿವೆ. ಯುರೋಪಿಯನ್ನರು ಇಲ್ಲಿ ಬರುವ ಮುಂಚೆ ರಾಜ್ಯಭಾರವನ್ನು ನಡೆಸುತ್ತಿದ್ದ ನಂದಿ ರಾಜರು ಈ ಪ್ರದೇಶವನ್ನು,'ಕಾಕಿನಂದಿವಾಡ ' ಎಂದು ಕರೆಯುತ್ತಿದ್ದರು.ನಂತರದ ಕಾಲಾವಧಿಯಲ್ಲಿ ಈ ಹೆಸರನ್ನು ಬದಲಾಯಿಸಿ, 'ಕಾಕಿ ನಾಡ' ಎನ್ನಲಾಯಿತು. ಬ್ರಿಟೀಷರು 'ಕೋಕ್ಯನಡ'ಎಂದು ಕರೆಯುತ್ತಿದ್ದರು.( ಬ್ರಿಟೀಷರ ಉಚ್ಚಾರ "ಕೋ ಕ್ಯಾನಡ" )ಸ್ವಾತಂತ್ರ್ಯಾನಂತರ ಇದನ್ನು 'ಕಾಕಿನಾದ' ಎಂದು ನಾಮಕರನಿಸಲಾಯಿತು.ಆದರೂ ಬ್ರಿಟೀಷರ ಆಡಳಿತಾವಧಿಯಲ್ಲಿ ಹುಟ್ಟಿಕೊಂಡಿದ್ದ ಕೆಲವು ಸಂಘಸಂಸ್ಥೆಗಳು ಈಗಲೂ ಅದೇ ಹೆಸರನ್ನು ಉಳಿಸಿಕೊಂಡು ಬಂದಿವೆ. ({0}ಉದಾ {/0}, ಕೋಕಾನಾಡ ಚೇಂಬರ್ ಆಫ್ ಕಾಮರ್ಸ್ ). ಇಂದಿಗೂ ಸಹ ಈ ನಗರದ ಎರಡು ರೈಲ್ವೆ ನಿಲ್ದಾಣಗಳು (ಕೋ ಕ್ಯಾನಡ ಟೌನ್ ಜಂಕ್ಷನ್)ಸಿಸಿಟಿ ಮತ್ತು ("ಕೋ ಕ್ಯಾನಡ" ಬಂದರು) ಸಿಓಎ ಎಂದು ಭಾರತೀಯ ರೈಲ್ವೆಯಿಂದ ಕರೆಯಲ್ಪಡುತ್ತಿವೆ.
- ಈ ಬಂದರು ನಗರಕ್ಕೆ ಯುರೋಪಿನಿಂದ ಬಂದ ವಸಾಹತಿನ ಜನರಲ್ಲಿ ಡಚ್ಚರು ಮೊದಲಿಗರು , ತದನಂತರ ಬ್ರಿಟೀಷರು ಹಾಗೂ ಕೆನಡಿಯನ್ ಬಾಪ್ಟಿಸ್ಟ್ ಮಿಶನ್‌ನ ಕ್ರೈಸ್ತ ಪಾದ್ರಿಗಳು ೧೮೭೪[೨] ರಲ್ಲಿ ಕಾಕಿನಾಡಕ್ಕೆ ಬಂದಿಳಿದರು.
- ಕಾಕಿನಾಡ ವನ್ನು ಎರಡನೇ ಮದ್ರಾಸ್ ಎಂದು ತಿಳಿಯಲಾಗುತ್ತದೆ. ಮೂಲ ನಗರ ಪ್ರದೇಶದಲ್ಲಿ,ಕೇಂದ್ರೀಯ ವ್ಯಾಪಾರ ಜಿಲ್ಲೆಯಿದ್ದು,ಅತ್ಯುತ್ತಮ ನಕಾಶೆಯನ್ನು ಹೊಂದಿದ ನಗರವಾಗಿದೆ. ಹಲವಾರು ಭಾಗಗಳಾಗಿ ಮುಖ್ಯ ರಸ್ತೆಗಳನ್ನು ಹೊಂದಿದ್ದು ಅವುಗಳು ನೇರವಾಗಿ, ನಗರದಾದ್ಯಂತ ಸಮಾನಾಂತರವಾಗಿ ಹರಡಿವೆ.
ಭೌಗೋಳಿಕ ವಿವರಣೆ
[ಬದಲಾಯಿಸಿ]ಕಾಕಿನಾಡ ಇರುವ ಸ್ಥಳವು 16°56′N 82°13′E / 16.93°N 82.22°E.[೩] ಇದು ಸಮುದ್ರ ಮಟ್ಟಕ್ಕಿಂತ ೨ ಮೀಟರ್ (೬ ಅಡಿ) ಎತ್ತರದಲ್ಲಿದೆ. ಸರಾಸರಿ ವಾರ್ಷಿಕ ಸಾಮಾನ್ಯ ಮಳೆಯು ೧೧೦ ರಿಂದ ೧೧೫ ಸೆಂಟಿ ಮೀಟರಿನಷ್ಟು ಆಗುತ್ತದೆ. ೮೨ ೧/೨ ಡಿಗ್ರಿಯ ಪೂರ್ವ ರೇಖಾಂಶದ ಆಧಾರದ ಮೇಲೆ ಐ ಎಸ್ ಟಿ (ಭಾರತೀಯ ಕಾಲಮಾನ ಸಮಯ ) ವನ್ನು ಲೆಕ್ಕಹಾಕಿ ಕಾಕಿನಾಡದ ಮುಖಾಂತರ ಹಾದು ಹೋಗುತ್ತದೆ. ಬೇರೆ ನಗರಗಳಿಗೆ ಇರುವ ಅಂತರ
- ಹೈದರಾಬಾದ್ ೫೫೩ ಕಿ ಮಿ
- ವಿಜಯವಾಡ ೨೧೦ ಕಿ ಮಿ
- ವಿಶಾಖಪಟ್ಣಂ ೧೮೬ ಕಿ ಮಿ
ಪೌರಾಡಳಿತ
[ಬದಲಾಯಿಸಿ]ಕಾಕಿನಾಡ ಪುರಸಭೆಯು ಕಾಕಿನಾಡದ ಆಡಳಿತವನ್ನು ನಡೆಸುತ್ತದೆ, ಆಯ್ಕೆಗೊಂಡ ಜನ ಪ್ರತಿನಿಧಿಗಳು ಹಾಗೂ ಕಮೀಷನರ್ ಇರುತ್ತಾರೆ . ನಗರ ಪ್ರದೇಶವನ್ನು ೫೦ ವಾರ್ಡುಗಳಾಗಿ ವಿಭಜಿಸಲಾಗಿದ್ದು , ಪ್ರತಿಯೊಂದು ವಾರ್ಡ್ ನಿಂದ ಒಬ್ಬ ನಗರಸಭೆ ಸದಸ್ಯ ಚುನಾಯಿತನಾಗುತ್ತಾನೆ. ಇಡೀ ನಗರಕ್ಕೆ ಒಬ್ಬ ಮಹಾಪೌರ ಚುನಾಯಿತನಾಗುತ್ತಾನೆ. ಭಾರತೀಯ ಆಡಳಿತ ಸೇವೆಯ (ಐಎಎಸ್ )ಒಬ್ಬ ಕಮೀಷನರನ್ನು ರಾಜ್ಯ ಸರ್ಕಾರವು ನೇಮಕ ಮಾಡುತ್ತದೆ . ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಜಿಲ್ಲಾಧಿಕಾರಿಗಳ ಕಚೇರಿ ಇದೆ.
ಸಾರಿಗೆ
[ಬದಲಾಯಿಸಿ]- ವಾಯುಮಾರ್ಗ/ವಿಮಾನಯಾನ
ಹತ್ತಿರದ ವಿಮಾನ ನಿಲ್ದಾಣವು ರಾಜಮಂಡ್ರಿ ಯಲ್ಲಿ ಸ್ಥಾಪಿತವಾಗಿದ್ದು ,ನಗರದಿಂದ ಸುಮಾರು ೬೫ ಕಿ ಮಿ ದೂರದಲ್ಲಿದೆ. ಹೈದರಾಬಾದ್ , ಚೆನ್ನೈ , ಬೆಂಗಳೂರು ಮತ್ತು ವಿಶಾಖಪಟ್ಟಣ ಗಳಿಗೆ ವಿಮಾನಯಾನದ ಸೇವೆಯನ್ನು ಒದಗಿಸಲಾಗಿದೆ . ಕಿಂಗ್ ಫಿಷರ್ ವಿಮಾನಯಾನಸಂಸ್ಥೆಯು ಇಲ್ಲಿಂದ ಸೇವೆಯನ್ನು ಒದಗಿಸುತ್ತದೆ. ಹತ್ತಿರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ೧೪೫ ಕಿ ಮಿ ಅಂತರದಲ್ಲಿನ ವಿಶಾಖಪಟ್ಟಣದಲ್ಲಿದ್ದು ಎಲ್ಲಾ ಮುಖ್ಯ ವಿಮಾನಯಾನಗಳ, ದೊಡ್ಡ ದೊಡ್ಡ ನಗರಗಳ ರಾಷ್ಟ್ರೀಯ ಸಂಪರ್ಕವನ್ನು ಹೊಂದಿದೆ.
- ರೈಲು ಸಾರಿಗೆ
ಸಮುದ್ರದ ತೀರವನ್ನು ಹೊಂದಿರುವ ಕಾಕಿನಾಡ ನಗರವು ರೈಲ್ವೆ ನಿಲ್ದಾಣವನ್ನು ಹೊಂದಿದೆ. ಇದು ಎರಡು ರೈಲ್ವೆ ನಿಲ್ದಾಣಗಳನ್ನು ಹೊಂದಿದ್ದು ಕಾಕಿನಾಡ ನಗರ ನಿಲ್ದಾಣ (ಜಂಕ್ಷನ್) (೩ km) ಮತ್ತು ಕಾಕಿನಾಡ ಬಂದರು (೮ km) ಆಗಿದೆ . ವಿಭಜಿಸಲ್ಪಟ್ಟ ಹಳಿಗಳ ಮುಖಾಂತರ , 'ಕಾಕಿನಾಡ' ದಿಂದ 'ಸಮಾಲ್ ಕೋಟ್ ನಿಲ್ದಾಣ ' (೧೨ ಕಿ ಮಿ )ಕ್ಕೆ ಸಂಪರ್ಕಿಸಬಹುದಾಗಿದ್ದು, ಇದು ಚೆನ್ನೈ -ಹೌರ ಹಳಿಗೆ ಸಂಪರ್ಕ ಸಾಧಿಸಬಹುದಾಗಿದೆ. ಎಲ್ಲಾ ವೇಗದೂತ ರೈಲುಗಳು ಕಾಕಿನಾಡದಲ್ಲಿ ನಿಂತು ದೇಶದ ಎಲ್ಲಾ ಮುಖ್ಯ ಸ್ಥಳಗಳ ಸಂಪರ್ಕ ಹೊಂದಿದೆ.
- ರಸ್ತೆ ಸಾರಿಗೆ
ಉತ್ತಮ ರಸ್ತೆಗಳು ಕಾಕಿನಾಡವನ್ನು ಸಂಪರ್ಕಿಸುವುದರ ಜೊತೆಗೆ ರಾಜ್ಯದೊಳಗಿನ ಹಾಗೂ ಭಾರತ ದೇಶದ ಉಳಿದ ಭಾಗಗಳನ್ನು ಸಂಪರ್ಕಿಸುವ ರಸ್ತೆಗಳ ರಚನೆಯಾಗಿದೆ.
- ಸಮುದ್ರ
ರಾಜ್ಯ ಮಟ್ಟದಲ್ಲಿ ವಿಶಾಖಪಟ್ಟಣ ಬಂದರಿನ ನಂತರ ಕಾಕಿನಾಡ ಎರಡನೇ ದೊಡ್ಡ ಆಳ-ನೀರಿನ ರೇವನ್ನು ಹೊಂದಿದೆ. ಇದನ್ನುಕಾಕಿನಾಡ ಸಮುದ್ರ-ಬಂದರು ನಿಗಮವು Archived 2008-10-27 ವೇಬ್ಯಾಕ್ ಮೆಷಿನ್ ನಲ್ಲಿ. ನೋಡಿಕೊಳ್ಳುತ್ತದೆ. ಈ ಆಳ-ನೀರಿನ ಬಂದರನ್ನು ನಿರ್ಮಾಣ ಮಾಡುವ ಮೊದಲು,ರೇವು ಬಂದರು ,೪೦ ಸಣ್ಣ ಬಂದರುಗಳಿಗಿಂತ ದೊಡ್ಡ ಬಂದರಾಗಿ ಭಾರತದಲ್ಲಿ ಕೆಲಸ ಮಾಡಿವೆ. ಇದು ದೇಶದ ಎಲ್ಲಾ,ದೊಡ್ಡ ದೊಡ್ಡ ಬಂದರುಗಳಿಗೆ ಉತ್ತಮ ಸಂಪರ್ಕಗಳನ್ನು ಹೊಂದಿದೆ. ಈಗ ಆಳ-ನೀರಿನ ಬಂದರು ಮತ್ತು ಹಳೆಯ ರೇವು ಬಂದರುಗಳು ಜೊತೆ ಜೊತೆಯಾಗಿ ಕೆಲಸ ಮಾಡುತ್ತಿವೆ. ಇದು ಒಳ್ಳೆಯ ಸಮುದ್ರ-ಬಂದರನ್ನು ಸಹ ಹೊಂದಿದೆ. ಜೆ ಎಸ್ ಡಬ್ಲ್ಯು ಇನ್ ಫ್ರಾಸ್ಟ್ರಕ್ಚರ್ ಅಂಡ್ ಲಾಜಿಸ್ಟಿಕ್ಸ್ ,ಎಂಬ ಮೂಲಾವಶ್ಯಕತೆ ಮತ್ತು ಸೇನಾ ಸಂಚಲನ ಶಾಸ್ತ್ರ ನಿಗಮವನ್ನು ಜೆ ಎಸ್ ಡಬ್ಲ್ಯು ತಂಡವು ಮಾಲೀಕತ್ವವನ್ನು ಹೊಂದಿದ್ದು,ಹಡಗುಗಳ ರಿಪೇರಿ ಮತ್ತು ಹಡಗಿಗೆ ಬೇಕಾದ ಸಾಮಗ್ರಿಗಳ ತಯಾರಿಯಲ್ಲಿದ್ದು, ಕಾಕಿನಾಡ ಬಂದರಿಗೆ ಹತ್ತಿರದಲ್ಲೇ ಇದ್ದು; ೨೫೦ ಮಿಲಿಯನ್ ಅಮೇರಿಕನ್ ಡಾಲರುಗಳ ಬಂಡವಾಳವನ್ನು ಹೂಡಿದೆ .[೪] ಎರಡನೇ ಬಂದರನ್ನೂ ಸಹ ನಿರ್ಮಿಸಲು ಯೋಜಿಸಲಾಗಿದ್ದು,ಅದನ್ನು ಕೆಎಸ್ಇಜಡ್ ಗೆ (ಕಾಕಿನಾಡ ವಿಶೇಷ ಆರ್ಥಿಕ ವಲಯ ) ಮಾತ್ರ ಬಳಸಲು ನಿರ್ಧರಿಸಲಾಗಿದೆ.[೫]
ಮಾರ್ಗಸೂಚಿ ವಲಯ/ವಿಸ್ತರಣೆ
[ಬದಲಾಯಿಸಿ]Warangal, Karimnagar, Pune, ಮುಂಬೈ | Raipur, Patna, Lucknow, Kanpur, ನವ ದೆಹಲಿ | Visakhapatnam, Bhubaneshwar, Kolkatta | ||
Rajahmundry, Hyderabad, Khammam, Solapur, Goa | Bay of Bengal | |||
Kakinada | ||||
Vijayawada, Guntur, Nellore, Tirupati, Chennai, ಬೆಂಗಳೂರು | Yanam, Amalapuram | Bay of Bengal |
ಉದ್ಯಮ/ಕೈಗಾರಿಕೆ
[ಬದಲಾಯಿಸಿ]೧೯೪೦ ರಲ್ಲಿ (ಸ್ವಾತಂತ್ರ್ಯ ಪಡೆವ ಸಮಯದಲ್ಲಿ ) ಕಾಕಿನಾಡದ ಸುತ್ತ ಮುತ್ತ ಕೆಲವೇ ಕೆಲವು ಕಾರ್ಖಾನೆಗಳಿದ್ದವು. ಸ್ಥಳೀಯ ಆರ್ಥಿಕ ಪರಿಸ್ಥಿತಿಯು ಮುಖ್ಯವಾಗಿ, ಬೇಸಾಯ ಮತ್ತು ಮೀನುಗಾರಿಕೆಯನ್ನು ಒಳಗೊಂಡಿತ್ತು. ಆರು ದಶಕಗಳ ನಂತರ , ಕಾಕಿನಾಡದ ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವನೆಯಾಗಳು ಹಲವಾರು ವಿವಿಧ ಕಾರ್ಖಾನೆಗಳು,ಕೈಗಾರಿಕಾ ವಲಯಕ್ಕೆ ಕಾರಣವಾಯಿತು.
- ರಾಸಾಯನಿಕ ಗೊಬ್ಬರ
ಕಾಕಿನಾಡವನ್ನು ಆಂಧ್ರ ಪ್ರದೇಶದ "ರಸ ಗೊಬ್ಬರಗಳ ನಗರ " ಎಂದೇ ಕರೆಯಲಾಗುತ್ತದೆ. ಈ ನಗರವು ಎರಡು ರಸ ಗೊಬ್ಬರ ಉತ್ಪಾದನೆಯ ತವರೂರಾಗಿದೆ: ಕರಾವಳಿ ಆಂಧ್ರ ಪ್ರದೇಶದ ಬಹುದೊಡ್ಡ ಯೂರಿಯಾ ಉತ್ಪಾದನೆ ನಾಗಾರ್ಜುನ ಫರ್ಟಿಲೈಸರ್ಸ್ Archived 2009-12-15 ವೇಬ್ಯಾಕ್ ಮೆಷಿನ್ ನಲ್ಲಿ. ರವರದ್ದಾಗಿದೆ . ಮತ್ತೊಂದು ಕಾರ್ಖಾನೆ , ಗೋದಾವರಿ ಫರ್ಟಿಲೈಸರ್ಸ್ Archived 2010-07-29 ವೇಬ್ಯಾಕ್ ಮೆಷಿನ್ ನಲ್ಲಿ. ಮುರುಗಪ್ಪ ತಂಡದವರಾಗಿದ್ದು , ಡೈ- ಅಮೋನಿಯಂ ಹೈಡ್ರೋಜನ್ ಫಾಸ್ಫೇಟ್ (ಡಿಎಪಿ ) ಅನ್ನು ಉತ್ಪಾದಿಸುತ್ತದೆ .
- ಮೋಟಾರು ಮತ್ತು ಕಬ್ಬಿಣ /ಉಕ್ಕು
ಕಾಕಿನಾಡದಲ್ಲಿ ಹಲವಾರು ಮೋಟಾರು ಮತ್ತು ಕಬ್ಬಿಣ /ಉಕ್ಕು ನಿರ್ಮಾಣ ಕೈಗಾರಿಕೆಗಳಿದ್ದು, ಶ್ರೀ ರಾಮದಾಸ್ ಮೋಟಾರು ಸಾರಿಗೆ ಸಂಸ್ಥೆ , ಶ್ರೀ ಭವಾನಿ ಎರಕ ಹೊಯ್ಯುವ ನಿಗಮ ಮುಂತಾದವೂ ಸೇರಿವೆ.
- ಸಕ್ಕರೆ
ಮುರುಗಪ್ಪ ತಂಡದ -ಮಾಲೀಕತ್ವದ ಈಐಡಿ ಪ್ಯಾರಿ (ಭಾರತ ) ನಿಗಮ ಮತ್ತು ಕಾರ್ಗಿಲ್ ಅಂತರ ರಾಷ್ಟ್ರೀಯ ಎಸ್ಎ ರವರು ಹೊರಡಿಸಿರುವ ಹೇಳಿಕೆಯ ಪ್ರಕಾರ ಜಂಟಿ ಯೋಜನೆಯಾಗಿ ಬಂದರು ಬಳಿಯ ಸಕ್ಕರೆ ಶುದ್ಧೀಕರಿಸುವ ಘಟಕವನ್ನು ಅಂದ್ರ ಪ್ರದೇಶದ ಕಾಕಿನಾಡದಲ್ಲಿ ಸ್ಥಾಪಿಸಲು ಯೋಜಿಸಿರುತ್ತಾರೆ. ಈಐಡಿ ಪ್ಯಾರಿ ವೈಸ್ -ಚೇರ್ಮನ್ ಎ ವೇಲ್ಲಯನ್ ಅವರ ಹೇಳಿಕೆಯ ಪ್ರಕಾರ ಇದು ೩೨೫ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯಾಗಿದೆ. ಡಿಸೆಂಬರ್ ೨೦೦೮ ರಿಂದ ಇದು ಕಾರ್ಯಾರಂಭವನ್ನು ಮಾಡುವ ನಿರೀಕ್ಷೆಯಿದೆ.ಆರಂಭದಲ್ಲಿ ೬ ಲಕ್ಷ ಟನ್ನುಗಳ ಶುದ್ಧೀಕರಣ ಕ್ರಿಯೆ ಆರಂಭವಾಗಲಿದ್ದು, ಅಂತಿಮವಾಗಿ ಒಂದು ಮಿಲಿಯನ್ ಟನ್ನುಗಳಷ್ಟು ಗುರಿಯಾಗಲಿದೆ.[೬][೭] ರಿಲಯನ್ಸ್ ಸಂಸ್ಥೆಯೂ ಸಹ ಸಕ್ಕರೆ ಗಿರಣಿ ತೆರೆಯಲು ಯೋಜಿಸುತ್ತಿದೆ.
- ಪೆಟ್ರೋಲಿಯಂ/ಖನಿಜ ತೈಲ
ಇತ್ತೀಚೆಗೆ ಹಲವಾರು ತೈಲ ಕಂಪನಿಗಳು ಕಾಕಿನಾಡದಲ್ಲಿ, ಕಾಕಿನಾಡವನ್ನು ಮುಖ್ತ ತೈಲ ಹಾಗೂ ಹಬೆ ಹಡಗು ಸಾಗಾಣಿಕೆ ಕೇಂದ್ರವನ್ನಾಗಿ ಪತಿವರ್ತಿಸಲು ಯೋಜಿಸಿವೆ. ಬೇಕರ್ ಹ್ಯೂಸ್ , ಸ್ಕುಲಂರ್ಜರ್ ಎಂಬ ವಿಶ್ವ ವಿಖ್ಯಾತ ಕಂಪನಿಗಳು ಕಾಕಿನಾಡದ ತೈಲ ಉತ್ಪಾದನೆಯಲ್ಲಿ ತೊಡಗಿರುವ ಉದಾಹರಣೆಗಳಿವೆ. ಇತ್ತೀಚಿನ ದಿನಗಳಲ್ಲಿ,'ಗ್ಯಾಸ್/ಹಬೆ' ದೊರೆತಾಗಲಿನಿಂದ ನಗರದಲ್ಲಿ ಆರ್ಥಿಕಪರಿಸ್ಥಿತಿ ಹೆಚ್ಚುವ ರೀತಿಯಲ್ಲಿ ಬಂಡವಾಳ ಹೂಡು ವಿಕೆಯೂ ಹೆಚ್ಚುತ್ತಿದೆ.ಭಾರತ [೮] ದಲ್ಲಿಯೇ ಅತೀ ಹೆಚ್ಚು ದೊಡ್ಡ ಪ್ರಾಕೃತಿಕ ಗ್ಯಾಸಿನ ತಾಣವಾಗಿದೆ. ಇದನ್ನು ತೈಲ ಮತ್ತು ಪ್ರಾಕೃತಿಕ ಗ್ಯಾಸ್ ನಿಗಮ (ಓ ಎನ್ ಜಿ ಸಿ ) ಮತ್ತು ರಿಲಯನ್ಸ್ ಕೃಷ್ಣ - ಗೋದಾವರಿ ತಾಣ ದಲ್ಲಿದೆ . ಶ್ರೀ ಶಕ್ತಿ ಎಲ್ ಪಿಜಿ ನಿಗಮವು , Archived 2009-12-27 ವೇಬ್ಯಾಕ್ ಮೆಷಿನ್ ನಲ್ಲಿ. ಎಲ್ ಪಿಜಿ ಟರ್ಮಿನಲ್ ಮತ್ತು 'ಎಲ್ ಪಿಜಿ ಬಾಟ್ಲಿಂಗ್' ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿದೆ. 'ಓ ಎನ್ ಜಿ ಸಿ' ರವರು ಈಗ ಒಂದು ತೈಲ ಶುದ್ಧೀಕರಣ ಘಟಕವನ್ನು ಕಾಕಿನಾಡದಲ್ಲಿ ತೆರೆಯಲು ಸನ್ನದ್ಧರಾಗುತ್ತಿದ್ದಾರೆ. ರಿಲಯನ್ಸ್ ಗ್ಯಾಸ್ ಟ್ರಾನ್ಸ್ ಪೋರ್ಟೇಶನ್ ಇನ್ ಫ್ರಾಸ್ಟ್ರಕ್ಚರ್ ನಿಗಮವು (ಅರ ಜಿ ಟಿ ಐ ಎಲ್ ) ೧,೪೪೦ ಕಿ ಮಿ ಉದ್ದದ ಕೊಳವೆ ಹಾದಿಯನ್ನು ಕಾಕಿನಾಡದಿಂದ ಭರೂಚ್ (ಗುಜರಾತ್ ) ವರಗೆ ನಿರ್ಮಿಸುತ್ತಿದ್ದು, ಇದರಲ್ಲಿ ೧೨೦ ಮಿಲಿಯನ್ ಕ್ಯುಬಿಕ್ ಮೀಟರ್ನಷ್ಟು ದಿನಕ್ಕೆ (ಎಂ ಸಿ ಎಂ ಡಿ ) ನ್ಯಾಚುರಲ್ ಗ್ಯಾಸ್ ಅನ್ನು, ಕೃಷ್ಣ -ಗೋದಾವರಿ ವಲಯದಲ್ಲಿ ರಿಲಯನ್ಸ್ ಕಾರ್ಖಾನೆಗಳ [೯] ಮಾಲೀಕತ್ವದಲ್ಲಿ ಭಾರತದ ಪಶ್ಚಿಮ-ಬಂದರಿನಾದ್ಯಂತ ನಿರ್ಮಿಸುತ್ತಿದೆ.
- ಕಚ್ಚಾ ತೈಲ ಶುದ್ಧೀಕರಣ ಘಟಕ ಮತ್ತು 'ಬಯೋಫ್ಯೂಲ್' ಯೋಜನೆಗಳು
೨೦೦೨ ರಲ್ಲಿ ಹಲವಾರು ಕಚ್ಚಾತೈಲ ಶುದ್ಧೀಕರಣ ಘಟಕಗಳ ಸ್ಥಾಪನೆಯಿಂದಾಗಿ ಕಾಕಿನಾಡದಲ್ಲಿ ಶುದ್ಧೀಕರಣದ ಕ್ರಿಯೆಯು ದಿನಕ್ಕೆ ೩೦೦೦ ಟನ್ನುಗಳಷ್ಟು ಮುಟ್ಟಿವೆ. ಕಾಕಿನಾಡ ಬಂದರಿನ ಸೌಲಭ್ಯದಿಂದಾಗಿ 'ಕ್ರೂಡ್ ಸೋಯಾಬೀನ್ ಎಣ್ಣೆ ' ಮತ್ತು 'ಕ್ರೂಡ್ ಪಾಮ್ ಎಣ್ಣೆ' ಗಳನ್ನೂ ಆಮದು ಮಾಡಿಕೊಳ್ಳುವ ಸೌಲಭ್ಯ ಇದೆ. ಕಾಕಿನಾಡದಲ್ಲಿ ಕಚ್ಚಾತೈಲ ಶುದ್ಧೀಕರಣ ಘಟಕದಿಂದ,ಒಂದು ದಿನಕ್ಕೆ ೩೦೦೦ ಎಂಟಿಎಸ್ ಗಿಂತಲೂ ಹೆಚ್ಚು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯ ಶುದ್ಧೀಕರಣ ಘಟಕಗಳು 'ಅಕಾಲ್ಮಾರ್ ಅಯಿಲ್ಸ್ ಮತ್ತು 'ಫ್ಯಾಟ್ಸ್ ಲಿಮಿಟೆಡ್' (ಈಗ ,ಅದನ್ನು ಅದಾನಿ ವಿಲ್ಮಾರ್ ಲಿಮಿಟೆಡ್ ವಹಿಸಿಕೊಂಡಿದೆ. ) ರುಚಿ ಇನ್ಫ್ರಾಸ್ಟ್ರಕ್ಚರ್ , ನಿಖಿಲ್ ರೀಫೈನರೀಸ್ ಲಿಮಿಟೆಡ್, ಮುಂತಾದವು .[೧೦] ಕಾಕಿನಾಡದ 'ವಕಾಲಪುಡಿ ಇಂಡಸ್ತ್ರಿಯಲ್ ಪಾರ್ಕ್' ಇತ್ತೀಚೆಗೆ ಅಮೆರಿಕಾದ ೧೦ ಮಿಲಿಯನ್ ಡಾಲರ್ ಗೂ ಹೆಚ್ಚು ಬಂಡವಾಳದ ಹೂಡಿಕೆಯನ್ನು ಆಕರ್ಷಿಸಿದ್ದು, ಬಯೋ -ಡೀಸಲ್ ಕಂಪನಿಗಳಾದ ರಿಲಯನ್ಸ್ ಕೈಗಾರಿಕೆಗಳು , ನ್ಯಾಚುರಲ್ ಬಯೋ ಎನರ್ಜಿ Archived 2010-07-12 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಯುನಿವೆರ್ಸಲ್ ಬಯೋ ಫ್ಯೂಲ್ .[೧೧] ಜೊತೆಯಾಗಿವೆ. ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಆಂಧ್ರ ಪ್ರದೇಶ ಸರ್ಕಾರವು ಜೊತೆಗೂಡಿ ಜಟ್ರೋಫಾ ಪ್ಲಾನ್ ಟಿಂಗ್‌ಕೈ ಜೋಡಿಸಿದೆ. ಜಟ್ರೋಫಾ ವನ್ನು ಬೆಳೆಯಲು ಕಂಪನಿಯು 200 acres (0.81 km2) ಕಾಕಿನಾಡದಲ್ಲಿ ಭೂಮಿಯನ್ನು ಆಯ್ಕೆ ಮಾಡಿದ್ದು, ಇದರಿಂದಾಗಿ ಉನ್ನತ ಮಟ್ಟದ ಬಯೋ -ಡೀಸಲ್ ಇಂಧನ ಉತ್ಪಾದನೆಗೆ ಕಾರಣವಾಗುತ್ತದೆ .[೧೨][೧೩]
- ಎಲೆಕ್ಟ್ರಾನಿಕ್ಸ್ /ವಿದ್ಯುತ್ಕಾಂತ
ಆಂಧ್ರ ಎಲೆಕ್ಟ್ರಾನಿಕ್ಸ್ ನಿಗಮವು ,ಕಾಕಿನಾಡದ ತವರಾಗಿದ್ದು, ವಿದ್ಯುತ್ಕಾಂತ ಉಪಕರಣಗಳನ್ನು ಉತ್ಪಾದಿಸುವ ಕೈಗಾರಿಕೆಯಾಗಿದ್ದು, ೧೯೭೭ ರಿಂದ ಕಾರ್ಯಾರಂಭ ಮಾಡಿದೆ.
- ಮಾಹಿತಿ ತಂತ್ರಜ್ಞಾನ / ಐಟಿಇಎಸ್
ಕಾಕಿನಾಡವು ಆಂದ್ರಪ್ರದೇಶದ ೪ ಟಯರ್ -II ನಗರ ಪ್ರದೇಶವಾಗಿದ್ದು , 'ಭಾರತದ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್' ನ (ಎಸ್ ಟಿಪಿಐ ) ಸೌಲಭ್ಯವನ್ನು ೨೦೦೭ ರಿಂದ ಹೊಂದಿದೆ [೧೪] ಈ ರೀತಿಯ ಸೌಲಭ್ಯಗಳು ಇಲ್ಲಿ ದೊರೆತಾಗಿನಿಂದಲೂ,ಹಲವಾರು ನಿಗಮಗಳು ಇಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿದ್ದು,ಈ ನಗರದಲ್ಲಿ, ವೇಗವಾಗಿ ಬೆಳೆಯಲಾರಮ್ಭಿಸಿದ್ದು, ಈ ಜಿಲ್ಲೆಯಲ್ಲಿ ಇರುವ ಉನ್ನತ ಮಟ್ಟದ ವಿದ್ಯೆ,ಕೆಲಸ ಮಾಡುವ ವಾತಾವರಣ ಕಾರಣವಾಗಿದೆ. ಕಾಕಿನಾಡದಲ್ಲಿ ಈಗ ಸಧ್ಯಕ್ಕೆ ೧೫ ಕಂಪನಿಗಳು ಕೆಲಸ ಮಾಡುತ್ತಿದ್ದು , ಇನ್ನುಳಿದ ೪ ಕಂಪನಿಗಳು ಎಸ್ ಟಿಪಿಐ ಸೌಲಭ್ಯವನ್ನು ಹೊಂದಿವೆ .[೧೫] ಫೆಬ್ರವರಿ , ೨೦೦೭ ರಲ್ಲಿ ೧೨೦ ಕೆಲಸಗಾರರೊಂದಿಗೆ [೧೬] ಕಾಕಿನಾಡದಲ್ಲಿ ಇನ್ಫೋಟೆಕ್ ಎಂಟರ್ ಪ್ರೈಸಸ್ Archived 2011-11-20 ವೇಬ್ಯಾಕ್ ಮೆಷಿನ್ ನಲ್ಲಿ. ಹೆಸರಿನಲ್ಲಿ, ಹೈದರಾಬಾದ್ ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಫ್ಟ್ ವೇರ್ ಕಂಪನಿಯನ್ನು ಎಸ್ ಟಿಪಿಐ ನಲ್ಲಿ ಹೊಂದಿದೆ. ಅವಿನಿಯಾನ್ ಐಎನ್ ಸಿ , ಎಂಬ ಅಮೆರೀಕಾ ಮೂಲದ ತಾಂತ್ರಿಕ ಕೈಗಾರಿಕೆಯು 'ಜಿಯೋ ಸ್ಪಾಶಿಯಲ್'ಹಾಗು 'ಇಂಜಿನೀಯರಿಂಗ್' ಸೇವೆಗಳೊಡನೆ ತನ್ನ ಕಾರ್ಯವನ್ನು ಆರಂಭಿಸಿದ್ದು, ಏಪ್ರಿಲ್ , ೨೦೦೮ ರಿಂದ ಕಾಕಿನಾಡದಲ್ಲಿ ತನ್ನ ಹೊಸ ಸೌಲಭ್ಯಗಳೊಂದಿಗೆ ಸುಮಾರು ೧೦೦ ಜನರಿಗೆ ಕೆಲಸವನ್ನು ನೀಡಿದ್ದು, ಈ ಕೆಲಸಗಾರರ ಶಕ್ತಿಯನ್ನು ೨೫೦ ಕ್ಕೆ ಹೆಚ್ಚಿಸಲು ಚಿಂತಿಸಿದೆ .[೧೭][೧೮] [೧೯] ಮಾರ್ಚ್ , ೨೦೧೦ ರಿಂದ ವಾರದ ೭ ದಿನಗಳ ಕಾಲ, ದಿನದ ೨೪ ಘಂಟೆ ದುಡಿಮೆ ಮಾಡುವ ಯೋಜನೆಯೊಂದಿಗೆ ೧೮ ಸೀಟರ್ ಸೌಲಭ್ಯಗಳೊಂದಿಗೆ ಫಸ್ಟ್ ಆಬ್ಜೆಕ್ಟ್ ಟೆಕ್ನಾಲಜೀಸ್ Archived 2014-05-15 ವೇಬ್ಯಾಕ್ ಮೆಷಿನ್ ನಲ್ಲಿ. ಕಾರ್ಯಾರಂಭ ಮಾಡಿದೆ. ಆಸ್ ಪೈರ್ ಟೆಕ್ನಾಲಜೀಸ್ Archived 2014-08-07 ವೇಬ್ಯಾಕ್ ಮೆಷಿನ್ ನಲ್ಲಿ., ಟ್ರೇಸ್ ಔಟ್ ಟೆಕ್ನಾಲಜೀಸ್ , ಫೋರ್ ಟೆಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ Archived 2009-03-27 ವೇಬ್ಯಾಕ್ ಮೆಷಿನ್ ನಲ್ಲಿ., ನೈರೋಸ್ ಟೆಕ್ನಾಲಜೀಸ್ , ಮೆಕಾನ್ ಜೀ ಇನ್ಫೋಟೆಕ್ ಮತ್ತು ಸಾಫ್ಟ್ ವೇರ್ ಸರ್ವೀಸಸ್ ,3 ಒನ್ ಟೆಕ್ನಾಲಜೀಸ್ , ಈಸ್ಟಿ ಸಲ್ಯುಶನ್ಸ್ Archived 2008-08-19 ವೇಬ್ಯಾಕ್ ಮೆಷಿನ್ ನಲ್ಲಿ., ಮುಂತಾದ ಸಣ್ಣ ಹಾಗು ಮಧ್ಯಮ ಗಾತ್ರದ ಕಂಪನಿಗಳು /ನಿಗಮಗಳು ಕಾಕಿನಾಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
- ಮೀನುಗಾರಿಕೆ ಮತ್ತು ಬೇಸಾಯ
ಕಾಕಿನಾಡದಲ್ಲಿ ೨೮ ಇಳಿಯುವ ತಾಣಗಳಿದ್ದು ,ಒಂದು ದೊಡ್ಡ ಮೀನಿನ ಬಂದರೂ ಸಹ ಇದೆ. ಕಾಕಿನಾಡದ ಸುತ್ತಮುತ್ತ ಹಲವಾರು ಜಾಗ ಮೀನುಗಾರಿಕೆಯ ಆವಾಸ ಸ್ಥಾನವಾಗಿದೆ.[೨೦] ಇಲ್ಲಿಯ ಹಲವಾರು ಸಂಸ್ಥೆಗಳು ಮೀನು, ಸೀಗಡಿ ಮುಂತಾದ ಸಮುದ್ರ ಪರಿಕರಗಳನ್ನು ರಫ್ತೂ ಸಹ ಮಾಡುತ್ತಿವೆ. ಮೀನು ಮತ್ತು ಕೃಷಿಯಿಂದ ಆಗುತ್ತಿರುವ ಆರ್ಥಿಕ ಲಾಭವನ್ನು ಪರಿಗಣಿಸಿ, ಆಂಧ್ರ ಪ್ರದೇಶ ಸರ್ಕಾರವು ಮೀನುಗಾರಿಕೆ ಸಂಶೋಧನಾ ಕೇಂದ್ರವನ್ನು ೧೯೫೮ ರಲ್ಲಿ ಎ ಪಿ ಎಸ್ ಐ ಎಫ್ ಟಿ (ಆಂಧ್ರ ಪ್ರದೇಶ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ ) Archived 2009-09-16 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ ಸಂಸ್ಥೆಯನ್ನು ಕಾಕಿನಾಡದಲ್ಲಿ ಎಫ್ ಎ ಓ ಸಹಕಾರದೊಂದಿಗೆ ಆರಂಭಿಸಿದೆ. ಸಿ ಐ ಎಫ್ ಇ Archived 2008-05-12 ವೇಬ್ಯಾಕ್ ಮೆಷಿನ್ ನಲ್ಲಿ. (ಕೇಂದ್ರೀಯ ಮೀನುಗಾರಿಕೆ ವಿದ್ಯಾ ಸಂಸ್ಥೆ )ಯು ,ವಿಶ್ವವಿದ್ಯಾನಿಲಯವನ್ನು ನಡೆಸುತಿದ್ದು,ಭಾರತ ಸರ್ಕಾರದ ಆಡಳಿತವು ೧೯೬೧ ರಲ್ಲಿ ,ಕಾಕಿನಾಡದಲ್ಲಿ ೩ ಕ್ಯಾಂಪಸ್ ಗಳನ್ನೂ ಹೊಂದಿದೆ. ಸಿಐಎಫ್ಇ ಯು ಭಾರತದಲ್ಲಿ ಮೊದಲ ಮೀನುಗಾರಿಕಾ ವಿಶ್ವವಿದ್ಯಾನಿಲಯವಾಗಿದೆ .ಮತ್ತು ಈ ಕೇಂದ್ರೀಯ ಸಂಸ್ಥೆಯು ಮೀನುಗಾರಿಕಾ ಸಿಬ್ಬಂದಿ /ಕೆಲಸಗಾರರಿಗೆ,ಭಾರತವಷ್ಟೇ ಅಲ್ಲದೆ ಆಫ್ರಿಕಾ,ಏಷ್ಯಾ ರಾಷ್ಟ್ರಗಳಲ್ಲಿರುವವರಿಗೆ ಸ್ನಾತಕೋತ್ತರ ಶಿಕ್ಷಣ ಮತ್ತು ತರಭೇತಿಯನ್ನು ನೀಡುತ್ತಿದೆ.
- ಅಕ್ಕಿ ಗಿರಣಿಗಳು
ಕಾಕಿನಾಡದ ಸುತ್ತಮುತ್ತ ಹಲವಾರು ಅಕ್ಕಿ ಗಿರಣಿಗಳು ಇದ್ದು,ಬೇರೆ ಬೇರೆ ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತಿವೆ.
- ವಿದ್ಯುತ್/ಶಕ್ತಿಯ ಉತ್ಪಾದನೆ
'ಸ್ಪೆಕ್ಟ್ರಂ ಪವರ್ ಜನರೇಶನ್ ನಿಗಮವು ' ೨೦೮ ಮೆಗಾವ್ಯಾಟ್ ಶಕ್ತಿಯ ಉತ್ಪಾದನೆಯ ಸ್ಥಾವರವನ್ನು ಕಾಕಿನಾಡದಲ್ಲಿ ಹೊಂದಿದೆ .[೨೧] ಶೀಘ್ರದಲ್ಲಿಯೇ , ಕಾಕಿನಾಡವು ತೇಲಾಡುವ ವಿದ್ಯುತ್ ಸ್ಥಾವರವನ್ನು (ಎಫ್ ಪಿ ಪಿ )ಹೊಂದಲಿದೆ. 'ಇಂಡಸ್ಟ್ರಿ ಮಜರ್ ಜಿಎಂಅರ್ ಎನರ್ಜಿ' ಎಂಬ ಸಂಸ್ಥೆಯು, ೨೨೦ ಮೆಗಾ ವ್ಯಾಟ್ ಸಾಮರ್ಥ್ಯದ ಹೆಮ್ಮೆಯ ಎಂಡಬ್ಲ್ಯು ಎಫ್ ಪಿ ಪಿ (ತೇಲಾಡುವ ವಿದ್ಯುತ್ ಸ್ಥಾವರ )ಯನ್ನು , ೬೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳ್ಳಲಿದೆ. 'ಜಿಎಂಅರ್' ತನ್ನ ವಿದ್ಯುತ್ ಉತ್ಪಾದನೆಯನ್ನು ರಾಜ್ಯ ಸರ್ಕಾರ [೨೨] ದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ರಾಜ್ಯ 'ಪವರ್ ಗ್ರಿಡ್' ಗೆ ವಿದ್ಯುತ್ ಸರಬರಾಜನ್ನು ಮಾಡಲಿದೆ.
ಆರ್ಥಿಕ ವ್ಯವಸ್ಥೆ/ಆರ್ಥಿಕ ಪರಿಸ್ಥಿತಿ
[ಬದಲಾಯಿಸಿ]೧೯೮೦ ರ ಆರಂಭದವರೆವಿಗೂ ( ಇಲ್ಲಿ ರಸಗೊಬ್ಬರ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ಆರಂಭಿಸುವ ಮುನ್ನ ), ಸ್ಥಳೀಯ ಆರ್ಥಿಕ ಪರಿಸ್ಥಿತಿಯು, ಇಲ್ಲಿನ ಮೋಟಾರು ಬಿಡಿಭಾಗಗಳು,ಉಕ್ಕಿನ ಕಾರ್ಖಾನೆಗಳು,ವ್ಯವಸಾಯ ಮತ್ತು ಮೀನುಗಾರಿಕೆಯನ್ನು ಅವಲಂಭಿಸಿದ್ದವು. ಇಲ್ಲಿಂದ ವಿದೆಶಕ್ಕ್ರ್ ಆಗುವ ರಫ್ತು ಮುಖ್ಯವಾಗಿ ಸಮುದ್ರ ಅಹಾರಗಳಾಗಿದ್ದು, (ಸೀಗಡಿ , ಏಡಿ , ಮೀನು ) ಮತ್ತು ಸಂಬಂಧಿಸಿದ ಉತ್ತ್ಪನ್ನಗಳು . ಬೇಸಾಯದ ಉತ್ಪನ್ನಗಳಾದ ಅಕ್ಕಿ , ಜೋಳ ,[೨೩] ಎಣ್ಣೆ ಪದಾರ್ಥಗಳು ,[೨೪] ಬೇಯಿಸಿದ ಆಹಾರ ಪದಾರ್ಥಗಳು , ರಾಸಾಯನಿಕ ವಸ್ತುಗಳು , ಕಬ್ಬಿಣದ ಅದಿರು , ಬಾಕ್ಸೈಟ್ ಪುಡಿ ,[೨೫] ಬಯೋ ಫ್ಯೂಲ್/ಬದಲೀ ಇಂದನ [೧೧] ಮುಂತಾದವು . ರಾಸಾಯನಿಕ ವಸ್ತುಗಳು , ಕಚ್ಚಾ ಎಣ್ಣೆಗಳು , ವ್ಯವಸಾಯದ ಉತ್ಪನ್ನಗಳು [೨೬] (ಗೋಧಿ , ಸಕ್ಕರೆ ಮುಂತಾದವು )ಗಳನ್ನೂ ಆಮದು ಮಾಡಿಕೊಳ್ಳುತ್ತಿವೆ .
ಶಿಕ್ಷಣ/ವಿದ್ಯಾಭ್ಯಾಸ
[ಬದಲಾಯಿಸಿ]ಹಲವು ವಿದ್ಯೆಗಳ-ಶೈಕ್ಷಣಿಕ ಬೇಡಿಕೆಯನ್ನು ಅನುಸರಿಸಿ, ಕಾಕಿನಾಡ ಜಿಲ್ಲೆಯಾದ್ಯಂತ ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳು ತಲೆ ಎತ್ತಿವೆ. ಕಳೆದ ಒಂದು ದಶಕದಲ್ಲಿ ಅತ್ಯುತ್ತಮ ಕಾಲೇಜುಗಳು ಹಾಗು ಅನೇಕ ವಸತಿ ಕಾಲೇಜುಗಳು ಸ್ಥಾಪಿತವಾಗಿದ್ದು ,ಬೆಳೆಯುತ್ತಿರುವ ಶೈಕ್ಷಣಿಕ ಬೇಡಿಕೆಯನ್ನು ಪೂರೈಸುತ್ತಿವೆ. ಹಲವಾರು ವೃತ್ತಿ ನಿರತ ಕಾಲೇಜುಗಳೂ ಸಹ ಕಾಕಿನಾಡ ನಗರದ ಸುತ್ತಮುತ್ತ ಇದ್ದು , ಇಂಜಿನಿಯರಿಂಗ್ , ವೈದ್ಯಕೀಯ , ಮಾಹಿತಿ ತಂತ್ರಜ್ಞಾನ ಮತ್ತು ಮ್ಯಾನೇಜ್ ಮೆಂಟ್/ಆಡಳಿತ ಡಿಗ್ರಿ ಹಾಗೂ ಉನ್ನತ ಶಿಕ್ಷಣದ ಸೌಲಭ್ಯವನ್ನು ನೀಡುತ್ತಿವೆ. ಏನೇ ಆಗಲಿ , ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾನಿಲಯ, ಇಂಜಿನಿಯರಿಂಗ್ ಶಿಕ್ಷಣವನ್ನು ಒದಗಿಸಿ,ಕಾಕಿನಾಡದಲ್ಲಿ ಅತ್ಯುತ್ತಮ ವಿದ್ಯಾದಾನ ಮಾಡುತ್ತಿರುವುದು ಒಂದು ಹೆಮ್ಮೆಯ ವಿಷಯವಾಗಿದೆ. ಮತ್ತು ರಂಗರಾಯ ಮೆಡಿಕಲ್ ಕಾಲೇಜ್ ಆಂಧ್ರ ಪ್ರದೇಶ ರಾಜ್ಯದಲ್ಲಿಯೇ ಒಂದು ಉತ್ತಮ ಕಾಲೇಜು ಎಂದು ಕರೆಸಿಕೊಂಡಿದೆ. . ಇದಿಷ್ಟೇ ಅಲ್ಲದೆ , ಕಾಕಿನಾಡ ಇತರ ಹಲವಾರು ವಿದ್ಯಾತಾಣಗಳಿಗೆ ಮತ್ತು ವಿದ್ಯಾ ಸಂಸ್ಥೆಗಳಿಗೆ ಆಶ್ರಯವನ್ನು ನೀಡಿವೆ. ಕೆಲವು ಸಂಸ್ಥೆಗಳು ಇತ್ತೀಚಿಗೆ,"ಬ್ಯಾಚ್ಯುಲರ್ ಡಿಗ್ರಿ ಹಾಗೂ ಡಿಪ್ಲಮೋ" ಮಟ್ಟದಲ್ಲಿ ವಿವಿಧ ರೀತಿಯ ಕೋರ್ಸುಗಳನ್ನು ನೀಡುತ್ತಿವೆ,ಅವುಗಳೆಂದರೆ:
- ಪ್ರಗತಿ ಇಂಜಿನಿಯರಿಂಗ್ ಕಾಲೇಜು
- ಆದಿತ್ಯ ಇಂಜಿನಿಯರಿಂಗ್ ಕಾಲೇಜು
- ಕಾಕಿನಾಡ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಮತ್ತು ಟೆಕ್ನಾಲಜಿ.
- ಕಾಕಿನಾಡ ಮಹಿಳೆಯರ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಮತ್ತು ಟೆಕ್ನಾಲಜಿ.
- ಕಾಕಿನಾಡ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ಮತ್ತು ಟೆಕ್ನಾಲಜಿ II
- ಚೈತನ್ಯ ವಿಜ್ಞಾನ ಇನ್ಸ್ಟಿಟ್ಯೂಟ್ ಮತ್ತು ಟೆಕ್ನಾಲಜಿ
- ರಾಜೀವ್ ಗಾಂಧಿ ಮ್ಯಾನೇಜ್ ಮೆಂಟ್ ವಿಜ್ಞಾನ ಇನ್ಸ್ಟಿಟ್ಯೂಟ್
- ರಾಜೀವ್ ಗಾಂಧಿ ಕಾನೂನು ಇನ್ಸ್ಟಿಟ್ಯೂಟ್
- ಪಿ ಅರ್ ಸರ್ಕಾರಿ ಕಾಲೇಜ್
- ವಿ ಎಸ್ ಲಕ್ಷ್ಮಿ ಮಹಿಳೆಯರ ಪದವಿ ಕಾಲೇಜ್
- ವಿ ಎಸ್ ಲಕ್ಷ್ಮಿ ಪದವಿ ಕಾಲೇಜ್
- ಐಡಿಯಲ್ ಕಲೆ ಮತ್ತು ವಿಜ್ಞಾನ ಕಾಲೇಜ್
- ಐಎಫ್ಇಎನ್ (ಐ ಸಿ ಎಫ್ ಎ ಐ ಫ್ಲಕ್ಸಿ ಎಜುಕೇಶನ್ )
- ಸಾಯಿ ನರ್ಸಿಂಗ್ ಕಾಲೇಜ್
- ಐಡಿಯಲ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್
- ಕಾಕಿನಾಡ ಫ್ಯಾಶನ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್
- ಸೈಂಟ್. ಮೇರಿಯ ಶಿಕ್ಷಣ ಕಾಲೇಜ್
- ಸಿವಸಾಯಿ ನರ್ಸಿಂಗ್ ಸ್ಕೂಲ್
- ಕ್ಯಾನನ್ ಅಂಕಿತ ಹೋಟೆಲ್ ಮ್ಯಾನೇಜ್ಮೆಂಟ್ ಅಕಾಡೆಮಿ
- ಮೋಹನ್ ಪದವಿ ಕಾಲೇಜ್
- ಒಮೆಗಾನ್ ಸ್ಕೂಲ್ ಇಫ್ ಬಿಸ್ ನೆಸ್ಸ್
- ಸುಧಾ ವೋಕೆಶನಲ್ ಜೂನಿಯರ್ ಕಾಲೇಜ್
- ಆಂಧ್ರ ಪಾಲಿಟೆಕ್ನಿಕ್
- ವುಮೆನ್ ಪಾಲಿಟೆಕ್ನಿಕ್ ಕಾಲೇಜ್ , ಏಷ್ಯಾದ ಮೊದಲ ಮಹಿಳಾ ಪಾಲಿಟೆಕ್ನಿಕ್ ಕಾಲೇಜ್.
- ದೀಪ್ತಿ ಹೋಟೆಲ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್
- ಪಿವಿಅರ್ ಪದವಿ ಕಾಲೇಜ್ ಟ್ರಸ್ಟ್
- ಎಸ್ ಕೆ ಎಂ ಎಲ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್
- ಮೀನುಗಾರಿಕೆ ಟೆಕ್ನಾಲಜಿ ರಾಜ್ಯ ಇನ್ಸ್ಟಿಟ್ಯೂಟ್
- ಎಎಸ್ ಡಿ ಮಹಿಳೆಯರ ಸರ್ಕಾರಿ ಪದವಿ ಕಾಲೇಜ್ , ಜೆ ಕೆ . ಪುರ
- ಜನಪ್ರಿಯ ನರ್ಸಿಂಗ್ ಸ್ಕೂಲ್
- ಆದಿತ್ಯ ಪದವಿ ಕಾಲೇಜ್
- ಆದರ್ಶ ಪದವಿ ಕಾಲೇಜ್
ಗಮನಿಸಿ : ಕೆಲವೊಂದು ಸಂಸ್ಥೆಗಳು ಕಾಕಿನಾಡದಲ್ಲಿ ಇಲ್ಲವಾದರೂ , ಕಾಕಿನಾಡದಿಂದ ೪೦ ಕಿ.ಮೀ. ಸುತ್ತಮುತ್ತಲಿನ ಆಸುಪಾಸಿನಲ್ಲಿದೆ. ಕಾಕಿನಾಡದ 'ಚೈತನ್ಯ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್' ನ , ಶ್ರೀ 'ಚೈತನ್ಯ ' ಸತ್ಯನಾರಾಯಣ ರಾಜು' ರವರು ಸಂಸ್ಥಾಪಕ ಅಧ್ಯಕ್ಷರು. ಈ ಸಂಸ್ಥೆಯಲ್ಲಿ ಹಲವಾರು ಇಂಜಿನಿಯರಿಂಗ್ ಕಾಲೇಜುಗಳು , ಮತ್ತು ಉನ್ನತ ಶಿಕ್ಷಣ ಡಿಗ್ರಿ ಕಾಲೇಜುಗಳು, ಆಡಳಿತ , ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ , ಕಲಾ ಕಾಲೇಜುಗಳು ಮತ್ತು ಐಟಿಐ ಕಾಲೇಜುಗಳು ಮತ್ತು ಸ್ಕೂಲುಗಳು ಸೇರಿವೆ. ಕಾಕಿನಾಡ ನಗರದಲ್ಲಿ ಹೆಸರು ಮಾಡಿದ ಶಾಲೆಯೆಂದರೆ, " ಶ್ರೀ ಚೈತನ್ಯ ಇ -ಟೆಕ್ನೋ ಶಾಲೆ ." ಕಾಕಿನಾಡದ ಗ್ರಾಮಾಂತರ ಭಾಗದ ಅತ್ಯುತ್ತಮ ಶಾಲೆ ಎಂದರೆ, 'ಶ್ರೀಕಾಂತ ಸಾರ್ವಜನಿಕ ಶಾಲೆ .' ಇತ್ತೀಚೆಗೆ, ಕಾಕಿನಾಡದಲ್ಲಿ , ಜೆ ಎನ್ ಟಿ ಯು ಕಾಂಸ್ಟಿಟುಯಂಟ್ ಇಂಜಿನಿಯರಿಂಗ್ ಕಾಲೇಜ್ ಅನ್ನು, ಜೆ ಎನ್ ಟಿ ಯು ಕೆ ಎಂದು ವಿಶ್ವವಿದ್ಯಾನಿಲಯವಾಗಿ ಉನ್ನತೀಕರಿಸಲಾಗಿದ್ದೂ, ಡಾ. ಅಲ್ಲಂ ಅಪ್ಪಾ ರಾವ್ ರವರು ಪ್ರಥಮ ಉಪಕುಲಪತಿಗಳಾಗಿದ್ದಾರೆ . ನೋಂದಣಿಕರಣವು ಒಳಗೊಂಡಿದ್ದು : ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯು, ಭಾರತದ ಹಲವಾರು ತಾಂತ್ರಿಕ ಕಾಲೇಜುಗಳ ಪಟ್ಟಿಯನ್ನು ಹೊಂದಿದ್ದು,<http://www.aicte.ernet.in/ Archived 2008-12-01 ವೇಬ್ಯಾಕ್ ಮೆಷಿನ್ ನಲ್ಲಿ.> ರಲ್ಲಿ ಕಾಣಬಹುದಾಗಿದೆ.
ಜನರು
[ಬದಲಾಯಿಸಿ]ಗೋದಾವರಿ - ತೆಲುಗು ಸ್ವರ ಉಚ್ಚಾರಣೆಯಿಂದ ಕಾಕಿನಾಡದ ಜನರನ್ನು ಸುಲಭವಾಗಿ ಗುರುತಿಸಬಹುದಾಗಿದೆ. ತಮ್ಮ ವಿನಯ,ಪರ ಸಹಿಷ್ಣುತೆ ಮತ್ತು ಬೇರೆಯವರೊಂದಿಗೆ ಬೆರೆಯುವ ಗುಣಗಳಿಂದ ಹೆಚ್ಚು ಹೆಸರನ್ನು ಮಾಡಿದ್ದಾರೆ. ಗೋದಾವರಿ - ತೆಲುಗು ಸ್ವರ ಉಚ್ಚಾರಣೆಯಿಂದ, ಹಿರಿಯರನ್ನು ಮತ್ತು ಅಪರಿಚಿತರನ್ನು ಗೌರವಪೂರ್ವಕವಾಗಿ ಕಾಣುತ್ತಾರೆ. ಈ ಭಾಗದ ಜನರು ತೆಲುಗು ಭಾಷೆಯ ವ್ಯಾಕರಣವನ್ನು ಬಳಸಿ ಹಿರಿಯ,ಅಪರಿಚಿತರೊಂದಿಗೆ ಮಾತನಾಡುವ ಹವ್ಯಾಸ ಆಂಧ್ರ ಪ್ರದೇಶದ ಇತರೆ ತೆಲುಗು ಭಾಷೆ ಮಾತನಾಡುವವರಲ್ಲಿ ಇರುವುದಿಲ್ಲ. ಹಲವಾರು ಶಾಲೆ, ಕಾಲೇಜುಗಳು, ಮತ್ತು ವಿಶ್ವವಿದ್ಯಾನಿಲಯಗಳನ್ನು ಹೊಂದಿರುವ ದೊಡ್ಡ ವಿದ್ಯಾಕೇಂದ್ರ ಕಾಕಿನಾಡ. ಹಲವು ಯುವಜನಾಂಗ ಬೇರೆ ಬೇರೆ ಭಾಗಗಳಿಗೆ,ಹೊರದೇಶಗಳಿಗೆ ತಮ್ಮ ಗುರುಯನ್ನು ಈಡೇರಿಸಿಕೊಳ್ಳಲು ತೆರೆಳುತ್ತಿದ್ದಾರೆ. ಸಮಾಜದ ಕೆಲವೊಂದು ಔಚಿತ್ಯಪೂರ್ಣ ಭಾಗಗಳಲ್ಲಿ,ವ್ಯಾಪಾರ ಹಾಗೂ ಬಂಡವಾಳ ಹೂಡಿಕೆಯಲ್ಲಿ ತೊಡಗಿವೆ. ಸ್ಥಳೀಯ ಜನಸಂಖ್ಯೆಯಿಂದ ಹಲವರು,ತಮ್ಮ ತಮ ಹಳ್ಳಿಗಳನ್ನು ಬಿಟ್ಟು, ಬೇರೆಡೆ ಕೆಲಸ ಮತ್ತು ಅವಕಾಶಗಳನ್ನು ಹುಡುಕಿಕೊಂಡು ಹೊರಡುತ್ತಾರೆ. 'ಕೋಕ್ಯಾನಡ' 'ಸಿಸಿಡಿಬಿ' ಯಸದಸ್ಯತ್ವವನ್ನು ಹೊಂದಿದ್ದು,ಸದರಿ ಸದಸ್ಯರು ಈ ನಗರದ ಮೇಲೆ ಹೆಚ್ಚು ವ್ಯಾಮೋಹ ಹೊಂದಿದ್ದಾರೆ.
ಆಹಾರ
[ಬದಲಾಯಿಸಿ]ಪಶ್ಚಿಮ ಗೋದಾವರಿಯ ಆಂಧ್ರ ಪ್ರದೇಶವು ರುಚಿಕರ ಆಹಾರಗಳಿಗೆ ಜನಪ್ರಿಯತೆಯನ್ನು ಹೊಂದಿದೆ. ಕಾಕಿನಾಡದ ಬಾಯಿನೀರೂರಿಸುವ ಉಪ್ಪಿನಕಾಯಿ (ಆವಕಾಯ ) ಮಾವಿನಹಣ್ಣಿನಿಂದ ಮಾಡಲ್ಪಟ್ಟಿದ್ದು, , ತರಕಾರಿಗಳು (ಉದಾ. ಹೂ ಕೋಸು ಆವಕಾಯ ), ಕೋಳಿ , ಎದಿಕಾಯಿ , ಮಾಂಸ ಮತ್ತು ಮೀನು. ಒಣ ಮೀನಿನ ( ಇಂಡು ಚೇಪ ) ಮತ್ತು ಏಡಿಕಾಯಿ (ಇಂಡು ರೋಯ) ಇಲ್ಲಿನ ಕೆಲವರಿಗೆ ಸ್ವಾದಕರ ತಿಂಡಿಗಳಾಗಿವೆ . ಕಾಕಿನಾಡ ಕಾಜ [೨೭] ಕಾಕಿನಾಡದಲ್ಲಿ ಪ್ರಸಿದ್ಧವಾಗಿದ್ದು,ತದನಂತರದ ದಿನಗಳಲ್ಲಿ ,ಆನ್ದ್ರದಾದ್ಯಂತ ಜನಪ್ರಿಯತೆಯನ್ನು ಗಳಿಸಿದ್ದಷ್ಟೇ ಅಲ್ಲದೆ,ದೂರದ ಬಿಹಾರ್ ಮತ್ತು ಉತ್ತರ ಪ್ರದೇಶ[೨೮] ಗಳಲ್ಲಿ ಜನಪ್ರಿಯತೆಯನ್ನು ಹೊಂದಿದೆ. 'ಕೋಟಯ್ಯ ಸಿಹಿ' ( ೧೯೦೦ ರಲ್ಲಿ ಕಂಡು ಹಿಡಿಯಲ್ಪಟ್ಟಿದ್ದು ) ಸ್ಥಳೀಯವಾಗಿ ಹೆಚ್ಚು ಜನಪ್ರಿಯವಾಗಿದ್ದು, ಕಾಕಿನಾಡ ಕಾಜ ದ ಉತ್ಪಾದನೆಗೆ ಕಾರಣವಾಗಿದೆ.ಇದನ್ನು , ಮೈದಾಮತ್ತು ಸಕ್ಕರೆಯ ದ್ರಾವಣದಲ್ಲಿ ಅದ್ದಿ ತಯಾರಿಸಲಾಗುತ್ತದೆ. ಹಲವಾರು ಬೀದಿ ಬೀದಿಗಳಲ್ಲಿ, ತಳ್ಳುಗಾಡಿಗಳಲ್ಲಿ,ಕೈ ಗಾಡಿಗಳಲ್ಲಿ,ಜನಪ್ರಿಯತೆಯ ಭಾಜಿ/ಬಜ್ಜಿಗಳು ಮತ್ತು ರುಚಿಕರವಾದ ಈರುಳ್ಳಿ ಮಿಶ್ರಣ , ರುಚಿಕರ ಅಕ್ಕಿಯ 'ಸೇವ್'ತಿಂಡಿ ಪದಾರ್ಥಗಳು ಹೆಸರು ಮಾಡಿವೆ. (ಪಿದಾಥ ಕಿಂಧ ಪಪ್ಪು ). ಇಡೀ ಆಂಧ್ರಪ್ರದೇಶದ ಕಾಕಿನಾಡದ ಕೆಲವು ಸ್ಥಳಗಳಲ್ಲಿ, ಚೆಕ್ಕರಕೇಲಿ ಅರತಿಪಂಡು (ಬಾಳೆಹಣ್ಣು ) ಮತ್ತು ಕೊಥಪಲ್ಲಿ ಕೊಬ್ಬರಿ ಮಾಮಿಡಿಪಂಡು (ಮಾವು )ಗಳೂ ಸಿಗುತ್ತವೆ. ಅತ್ಯಂತ ರುಚಿಕರ ಪೆಸರಟ್ಟು ಕಾಕಿನಾಡದಲ್ಲಿ ಜನಪ್ರಿಯತೆ ಹೊಂದಿದ್ದು , ಹೆಸರು ಬೇಳೆ (ಪೆಸರ ಪಪ್ಪು ), ಹಸಿರು ಮೆಣಸಿನಕಾಯಿ , ಶುಂಟಿ ಮುಂತಾದುವುಗಳಿಂದ ಮಾಡಿದ ತಿಂಡಿ ಪದಾರ್ಥಗಳು ಹೆಚ್ಚು ಜನಪ್ತಿಯತೆ ಹೊಂದಿವೆ. ಇವುಗಳನ್ನು ಹೊಟೇಲುಗಳಲ್ಲಿ ಮತ್ತು ಬೀದಿ ಬೀದಿಯ ಅಂಗಡಿಗಳಲ್ಲಿ ಮಾರುತ್ತಾರೆ. ಆಂಧ್ರದ ಬಂದರು ಪ್ರದೇಶದಲ್ಲಿ 'ಪೂಟಾರೆಕೂಲು' ಎಂಬುದು ಬಹಳ ಪ್ರಸಿದ್ಧ ಸಿಹಿ ತಿಂಡಿಯಾಗಿದ್ದು ,ಇದನ್ನು ತೆಳುವಾದ ಸಕ್ಕರೆ ಪಾಕದಿಂದ ಮಾಡಲ್ಪಟ್ಟಿದ್ದು, ಕಾಕಿನಾಡಕ್ಕೆ ಹತ್ತಿರದ 'ಆತ್ರೇಯಪುರಂ' ನಲ್ಲಿ ಜನಿಸಿದುದಾಗಿದೆ .
ಕ್ರೀಡೆ
[ಬದಲಾಯಿಸಿ]ಕ್ರಿಕೆಟ್ ಇಲ್ಲಿ ಹೆಚ್ಚು ಜನಪ್ರಿಯವಾಗಿದ್ದು,ನಂತರದ ಸ್ಥಾನವನ್ನು ಬ್ಯಾಡ್ಮಂಟನ್ ಮತ್ತು ಅಥ್ಲೆಟಿಕ್ಸ್ ಗಳು ಪಡೆದುಕೊಂಡಿವೆ . ಈ ನಗರವು ಅನೇಕ ಸ್ಥಳೀಯ ಕ್ರಿಕೆಟ್ ತಂಡಗಳಿಗೆ ತವರುಮನೆಯಾಗಿದ್ದು,ಈ ತಂಡವು , ಬೇರೆ ಬೇರೆ ಜಿಲ್ಲಾಮಟ್ಟದ ಮತ್ತು ವಲಯ ಮಟ್ಟದ ಆಟಗಳಲ್ಲಿ ಭಾಗವಹಿಸುತ್ತವೆ. ಕಾಕಿನಾಡ ಕ್ರಿಕೆಟ್ ಸ್ಟೇಡಿಯಂ ಅನ್ನು ಹೊಂದಿದ್ದು , ರಣಜಿ ಟ್ರೋಫಿ ಪಂದ್ಯಗಳನ್ನು ನಡೆಸಲು ಉಪಯೋಗಿಸಲಾಗುತ್ತದೆ .ಸ್ಥಳೀಯ ಆಟಗಳಾದ ಗೊಲೀಲು (ಮಾರ್ಬಲ್ಸ್ ),ಗೂಟಿಬಿಲ್ಲ ಮುಂತಾದವುಗಳನ್ನು , ಬಹಳ ಆಸಕ್ತಿಯಿಂದ ಆಡಲಾಗುತ್ತದೆ.
ಆಕರಗಳು
[ಬದಲಾಯಿಸಿ]- ↑ "ಕಾಕಿನಾಡ ಮಾಹಿತಿಯ ಪೋರ್ಟಲ್". Archived from the original on 2011-10-17. Retrieved 2010-06-07.
- ↑ ಫ್ರಾಂಕ್ ಬ್ಯರ್ನೆ , "ಇಂಡಿಯಾ : 'ಸಿಬಿಎಂ' ನ ಜನ್ಮಸ್ಥಳ " ಮೊಸೈಕ್ ಎ ಪಬ್ಲಿಕೇಶನ್ ಆಫ್ ದಿ ಕೆನಡಿಯನ್ ಬಾಪ್ಟಿಸ್ಟ್ ಮಿನಿಸ್ಟರೀಸ್. ವಿಂಟರ್ ೨೦೦೮. ಪುಟ ೧೦.
- ↑ ಬೀಳುತ್ತಿರುವ ಮಳೆಯ ಗೆನೋಮಿಕ್ಸ್ , ಸೇರಿದೆ - ಕಾಕಿನಾಡ
- ↑ "ದಿ ಟೆಲಿಗ್ರಾಫ್ - ಕಲ್ಕತ್ತಾ (ಕೋಲ್ಕತ ) | ಬಿಸ್ ನೆಸ್ಸ್ | ಜೆ ಎಸ್ ಡಬ್ಲ್ಯು ಅಡ್ಡ್ಸ್ ಮುಸ್ಕ್ಲೆ ಟು ಇನ್ಫ್ರಾಸ್ಟ್ರಕ್ಚರ್ ಆರ್ಮ್". Archived from the original on 2009-02-02. Retrieved 2010-06-07.
- ↑ "ಎಂ ಜಂಕ್ಷನ್ : ಲಾಜಿಸ್ಟಿಕ್ಸ್ - ಕಾಕಿನಾಡ ಎಸ್ಇಜೆಡ್ ನ ಯೋಜನೆ ಆಳ-ನೀರಿನ ಬಂದರು". Archived from the original on 2009-12-04. Retrieved 2010-06-07.
- ↑ ""ಇಐಡಿ ಪ್ಯಾರಿ ಟೀಮ್ಸ್ ಅಪ್ ವಿಥ್ ಕಾರ್ಗಿಲ್ ಫಾರ್ ಶುಗರ್ ಇ ಓ ಯು ", ದಿ ಹಿಂದೂ (25 ಏಪ್ರಿಲ್ 2006)". Archived from the original on 2012-10-26. Retrieved 2010-06-07.
- ↑ "ಮುರುಗಪ್ಪ ಗ್ರೂಪ್ ಟರ್ನ್ಓವರ್ ಅಪ್ ಬಯ್ 15%", ಸಿಫಿ ಬಿಸ್ನೆಸ್ಸ್ (2008-05-06)
- ↑ ಹೇಮಂಗಿ ಬಲ್ಸೆ , "ರಿಲಯನ್ಸ್ ಗ್ಯಾಸ್ -ಫೈಂಡ್ 40 ಟೈಮ್ಸ್ ಬಿಗ್ಗರ್ ದ್ಯಾನ್ ಬಾಂಬೆ ಹೈ ", ರಿಡಿಫ್ .ಕಾಂ (ಅಕ್ಟೋಬರ್ 31 2002)
- ↑ "ರಿಲಯನ್ಸ್ ಗೆಟ್ಸ್ ರೆಡಿ ಟು ಟೆಸ್ಟ್ ಈಸ್ಟ್ -ವೆಸ್ಟ್ ಗ್ಯಾಸ್ ಪೈಪ್ ಲೈನ್ " (ಏಪ್ರಿಲ್ 14 2008) ಸಿಎನ್ ಬಿಸಿ ಮನಿ ಕಂಟ್ರೋಲ್ .ಕಾಂ
- ↑ "ನಿಖಿಲ್ , ಅಕಾಲ್ಮಾರ್ ಎಡಿಬ್ಲೆ ಆಯಿಲ್ ರಿಫೈನರೀಸ್ ಗೋ ಆನ್ ಸ್ಟ್ರೀಮ್ ", ದಿ ಹಿಂದೂ
- ↑ ೧೧.೦ ೧೧.೧ ಮನಿ ಕಂಟ್ರೋಲ್ >> ನ್ಯೂಸ್ >> ಬಿಸ್ ನೆಸ್ಸ್ >> ಬಯೋ -ಫ್ಯೂಲ್ ಇಸ್ ನೆಕ್ಸ್ಟ್ ಬಿಗ್ ಬೆಟ್ ಇಫ್ ಕ್ರೂಡ್ ಕಂಟಿನ್ಯೂಸ್ ಟು ರೈಸ್
- ↑ "RIL enters bio-diesel farming". Archived from the original on 2006-12-09. Retrieved 2006-11-15.
- ↑ ರಿಲಯನ್ಸ್ ?ಎಸ್ ನ್ಯೂ ಬಯೋ ಫ್ಯೂಲ್ ಬಿಸ್ ನೆಸ್ಸ್ ಮಾಡೆಲ್ ಟು ಪ್ರೋವೈಡ್ ಫ್ಯೂಲ್ ವಿಥ್ ಫುಡ್ - ಕಾರ್ಪೋರೆಟ್ ನ್ಯೂಸ್ - ಲೈವ್ ಮಿಂಟ್ .ಕಾಮ್
- ↑ ""ಆಂಧ್ರ ಪ್ರದೇಶ್ ನ್ಯೂಸ್ : ಎಸ್ಇಜಡ್ ಪೇವ್ಸ್ ದಿ ವೇ ಫಾರ್ ಕಾಕಿನಾಡ ಟು ಬಿ ಐಟಿ ಹಬ್ " ದಿನವೊಂದಕ್ಕೆ ". Archived from the original on 2010-10-06. Retrieved 2010-06-07.
- ↑ "ಖಾಬ್ರಯಿನ್ .ಇನ್ಫೋ". Archived from the original on 2012-03-04. Retrieved 2021-08-28.
- ↑ ದಿ ಹಿಂದೂ ಬಿಸ್ ನೆಸ್ಸ್ ಲೈನ್ : ಇನ್ಫೋಟೆಕ್ ಸೆಂಟರ್ ಅಟ್ ಕಾಕಿನಾಡ
- ↑ ಅವಿನಿಯಾನ್ ಒಪನ್ಸ್ ನ್ಯೂ ಫೆಸಿಲಿಟಿ ಇನ್ ಕಾಕಿನಾಡ
- ↑ ಅವಿನಿಯಾನ್ ಎಕ್ಸ್ ಪ್ಯಾನ್ದಿಂಗ್ - ಸಿಫಿ .ಕಾಮ್
- ↑ "Andhra Pradesh News : US IT firm opens shop in Kakinada". The Hindu. 2008-04-03. Archived from the original on 2011-03-11. Retrieved 2010-04-23.
- ↑ ದಿ ಹಿಂದೂ ಬಿಸ್ ನೆಸ್ಸ್ ಲೈನ್ : ಕಾಕಿನಾಡ ಗೆಟ್ಸ್ ಅಕ್ವ ಫಾರ್ಮಿಂಗ್ ಸೊಸೈಟಿ
- ↑ ಲೆಹ್ಮನ್ ಬ್ರದರ್ಸ್ ಟು ಟೇಕ್ ಓವರ್ ಸ್ಪೆಕ್ಟ್ರಂ
- ↑ ""ಕಾಕಿನಾಡ ಟು ಹ್ಯಾವ್ ಫ್ಲೋಟಿಂಗ್ ಪವರ್ ಪ್ಲಾಂಟ್ ಸೂನ್ " ವೆಬ್ ಇಂಡಿಯಾ .ಕಾಮ್ (ಏಪ್ರಿಲ್ 6 2008)". Archived from the original on 2009-02-02. Retrieved 2010-06-07.
- ↑ "ಅಪ್ಡೇಟ್ 1-ಇಂಡಿಯಾ ಕಾರ್ನ್ ಎಕ್ಸ್ ಪೋರ್ಟ್ಸ್ ಅಪ್ ಟು ಸೆಪ್ಟೆಂಬರ್ ಸೆಟ್ ಟು ಟ್ರೆಬ್ಲೆ -ಟ್ರೇಡ್ | ರಿಯುಟೆರ್ಸ್". Archived from the original on 2009-02-02. Retrieved 2010-06-07.
- ↑ ಆಯಿಲ್ ಮೀಲ್ಸ್ ಎಕ್ಸ್ ಪೋರ್ಟ್ಸ್ ಸರ್ಜ್ 82.05% ಇನ್ ಜೂನ್ `08
- ↑ ವೇದಾಂತ ಟು ಎಕ್ಸ್ ಪೋರ್ಟ್ ಬಾಕ್ಸೈಟ್ ಪೌಡರ್ ಫ್ರಂ ಕಾಡಿನಾಡ
- ↑ "ದಿ ಹಿಂದೂ ನ್ಯೂಸ್ ಅಪ್ ಡೇಟ್ ಸರ್ವಿಸ್". Archived from the original on 2009-02-02. Retrieved 2010-06-07.
- ↑ "KOTAIAH'S Foods Pvt. Ltd Since 1900 - KOTAIAHS'S KAJA". Kakinadakaja.com. Retrieved 2010-04-23.
- ↑ ಖಾಜ ಕಂಟಿನ್ಯೂಸ್ ಟು ಬಿ ದಿ ಸ್ಟಾರ್ ಅಟ್ಟ್ರ್ಯಾಕ್ಶನ್ ಆಫ್ ಸಿಲೋ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕಾಕಿನಾಡ ಮಾಹಿತಿ ಪೋರ್ಟಲ್ - ಪ್ಳಸೆಸ್. ಇದು ಸುತ್ತ ಮುತ್ತಲಿನ ಸ್ಥಳದ ಮಾಹಿತಿಗಳನ್ನೂ ಸಹ ಒದಗಿಸುತ್ತದೆ. Archived 2012-11-05 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಕಿನಾಡದ ಬಗ್ಗೆ Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಕಿನಾಡ ರೇವು ಪಟ್ಟಣ/ಬಂದರು Archived 2009-02-02 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಕಿನಾಡದ ಬಗ್ಗೆ
- Pages with non-numeric formatnum arguments
- Wikipedia articles needing style editing from June 2009
- Articles with invalid date parameter in template
- All articles needing style editing
- Short description is different from Wikidata
- Articles containing Telugu-language text
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Articles with hAudio microformats
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons link is locally defined
- ಆಂಧ್ರ ಪ್ರದೇಶದ ನಗರಗಳು ಮತ್ತು ಪಟ್ಟಣಗಳು
- ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ರೈಲು ನಿಲ್ದಾಣಗಳು
- ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ಮಂಡಲಗಳು
- ಆಂಧ್ರ ಪ್ರದೇಶದ ಜಿಲ್ಲೆಗಳು