ವಿಶೇಷ ಆರ್ಥಿಕ ವಲಯ
This article's introduction may be too long for the overall article length. (November 2010) |
ವಿಶೇಷ ಆರ್ಥಿಕ ವಲಯ (SEZ ) ಎಂಬುದೊಂದು ಭೌಗೋಳಿಕ ಪ್ರದೇಶವಾಗಿದ್ದು, ದೇಶವೊಂದರ ವಿಶಿಷ್ಟ ಅಥವಾ ರಾಷ್ಟ್ರೀಯ ಕಾನೂನುಗಳಿಗಿಂತ ಹೆಚ್ಚಿನ ರೀತಿಯಲ್ಲಿ ಮುಕ್ತ-ಮಾರುಕಟ್ಟೆ-ಉದ್ದೇಶಿತವಾಗಿರುವ ಆರ್ಥಿಕ ಮತ್ತು ಇತರ ಕಾನೂನುಗಳನ್ನು ಅದು ಹೊಂದಿರುತ್ತದೆ. ವಿಶೇಷ ಆರ್ಥಿಕ ವಲಯವೊಂದರ ಒಳಗೆ "ರಾಷ್ಟ್ರವ್ಯಾಪಿ" ಕಾನೂನುಗಳು ಸ್ಥಗಿತಗೊಳಿಸಲ್ಪಟ್ಟಿರಲು ಸಾಧ್ಯವಿದೆ. 'SEZ' ವರ್ಗವು ಹೆಚ್ಚು ನಿರ್ದಿಷ್ಟವಾಗಿರುವ ವಲಯದ ಬಗೆಗಳ ಒಂದು ವ್ಯಾಪಕ ಶ್ರೇಣಿಯನ್ನು ಒಳಗೊಳ್ಳುತ್ತದೆ; ಅಂದರೆ ಮುಕ್ತ ವ್ಯಾಪಾರದ ವಲಯಗಳು (ಫ್ರೀ ಟ್ರೇಡ್ ಜೋನ್ಸ್-FTZ), ರಫ್ತು ಸಂಸ್ಕರಣಾ ವಲಯಗಳು (ಎಕ್ಸ್‌ಪೋರ್ಟ್ ಪ್ರೊಸೆಸಿಂಗ್ ಜೋನ್ಸ್-EPZ), ಮುಕ್ತ ವಲಯಗಳು (ಫ್ರೀ ಜೋನ್ಸ್-FZ), ಕೈಗಾರಿಕಾ ವಸಾಹತುಗಳು (ಇಂಡಸ್ಟ್ರಿಯಲ್ ಎಸ್ಟೇಟ್ಸ್-IE), ಮುಕ್ತ ರೇವುಪಟ್ಟಣಗಳು, ನಗರ ಪ್ರದೇಶದ ಉದ್ದಿಮೆ ವಲಯಗಳು ಮತ್ತು ಇತರ ವಲಯಗಳು ಇದರಲ್ಲಿ ಸೇರಿಕೊಂಡಿರುತ್ತವೆ. ವಿಶಿಷ್ಟವಾಗಿ ಒಂದು ಅಂತರರಾಷ್ಟ್ರೀಯ ವ್ಯವಹಾರ ಅಥವಾ ಒಂದು ಬಹುರಾಷ್ಟ್ರೀಯ ಸಂಸ್ಥೆಯ (ಮಲ್ಟಿ ನ್ಯಾಷನಲ್ ಕಂಪನಿ-MNC) ರೂಪದಲ್ಲಿ ವಿದೇಶಿ ಹೂಡಿಕೆದಾರರಿಂದ ನಡೆಯುವ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸುವುದು ಸಾಮಾನ್ಯವಾಗಿ ಇಂಥದೊಂದು ರಚನಾ-ಸ್ವರೂಪದ ಗುರಿಯಾಗಿರುತ್ತದೆ.
ಚೀನಿ ಜನರ ಗಣರಾಜ್ಯದಲ್ಲಿ, ೧೯೮೦ರ ದಶಕದ ಆರಂಭದಲ್ಲಿ ಡೆಂಗ್ ಕ್ಸಿಯೋಪಿಂಗ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ವಿಶೇಷ ಆರ್ಥಿಕ ವಲಯಗಳು ಸಂಸ್ಥಾಪಿಸಲ್ಪಟ್ಟವು. ಚೀನಾದಲ್ಲಿನ ಅತ್ಯಂತ ಯಶಸ್ವಿ ವಿಶೇಷ ಆರ್ಥಿಕ ವಲಯ ಎನಿಸಿಕೊಂಡಿರುವ ಷೆನ್‌ಜೆನ್, ಒಂದು ಸಣ್ಣ ಹಳ್ಳಿಯಿಂದ ಒಂದು ನಗರವಾಗಿ ಅಭಿವೃದ್ಧಿಹೊಂದಿದ್ದು, ೨೦ ವರ್ಷಗಳ ಅವಧಿಯಲ್ಲಿ ೧೦ ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಈ ನಗರವು ಹೊಂದಿದೆ. ವಿಶೇಷ ಆರ್ಥಿಕ ವಲಯಗಳ ಸಂಸ್ಥಾಪನೆ ಮತ್ತು ನೆಲೆಗೊಳಿಸುವಿಕೆಯಲ್ಲಿ ಭಾರತವೂ ಸಹ ಒಂದು ಗಮನಾರ್ಹ ಪಾತ್ರವನ್ನು ವಹಿಸಿದೆ. ಇದು ಏಷ್ಯಾದಲ್ಲಿನ ಅತಿದೊಡ್ಡ ಹೊರಗುತ್ತಿಗೆ ಕೈಗಾರಿಕೆಯನ್ನು ಹೊಂದಿದೆ.
ಚೀನಾದ ಉದಾಹರಣೆಗಳನ್ನು ಅನುಸರಿಸಿಕೊಂಡು, ಹಲವಾರು ದೇಶಗಳಲ್ಲಿ ವಿಶೇಷ ಆರ್ಥಿಕ ವಲಯಗಳು ಸ್ಥಾಪಿಸಲ್ಪಟ್ಟಿವೆ. ಅವುಗಳೆಂದರೆ: ಬ್ರೆಜಿಲ್, ಭಾರತ, ಇರಾನ್, ಜೋರ್ಡಾನ್, ಕಜಾಕಸ್ಥಾನ್, ಪಾಕಿಸ್ತಾನ, ಫಿಲಿಪೈನ್ಸ್ ದ್ವೀಪಸಮೂಹ, ಪೋಲೆಂಡ್, ದಕ್ಷಿಣ ಕೊರಿಯಾ, ರಷ್ಯಾ, ಯುಕ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್, ಕಾಂಬೋಡಿಯ, ಉತ್ತರ ಕೊರಿಯಾ. ಪ್ರಸ್ತುತ, ಪೆರುವಿನ ಪುನೊವನ್ನು ಒಂದು "ಝೋನಾ ಇಕನಾಮಿಕಾ" ಆಗಿ ಮಾರ್ಪಡಿಸಲು ಅದರ ಅಧ್ಯಕ್ಷ ಅಲನ್ ಗಾರ್ಸಿಯಾ ಎಲ್ಲ ರೀತಿಯಲ್ಲಿಯೂ ಅದನ್ನು ಸಜ್ಜುಗೊಳಿಸಿದ್ದಾರೆ.
ಒಂದು ಏಕೈಕ SEZನ ಗಡಿರೇಖೆಗಳ ವ್ಯಾಪ್ತಿಯೊಳಗೆ ಬಹುವಿಧದ 'ನಿರ್ದಿಷ್ಟ' ವಲಯಗಳು ಸೇರಿಕೊಂಡಿರಲು ಸಾಧ್ಯವಿದೆ. ಸ್ತರಗಳಿಂದ ಕೂಡಿದ ಈ ಪ್ರವೇಶಮಾರ್ಗದ ಅತ್ಯಂತ ಪ್ರಸಿದ್ಧ ಉದಾಹರಣೆಗಳೆಂದರೆ, ಫಿಲಿಪೈನ್ಸ್‌ನಲ್ಲಿರುವ ಸ್ಯೂಬಿಕ್ ಕೊಲ್ಲಿ ಮುಕ್ತರೇವುಪಟ್ಟಣ ವಲಯ, ಜೋರ್ಡಾನ್‌ನಲ್ಲಿರುವ ಅಕಾಬಾ ವಿಶೇಷ ಆರ್ಥಿಕ ವಲಯ ಪ್ರಾಧಿಕಾರ, ಭಾರತದಲ್ಲಿನ ಶ್ರೀಸಿಟಿ ಬಹು-ಉತ್ಪನ್ನ SEZ ಮತ್ತು ಮುಂಡ್ರಾ SEZ; ಮತ್ತು ವಿಶ್ವ ಬ್ಯಾಂಕ್‌ನ ೨೦೦೭ರ ಅಂದಾಜುಗಳ ಅನುಸಾರ, ವಿಶ್ವಾದ್ಯಂತದ ೧೨೦ ದೇಶಗಳಲ್ಲಿನ SEZಗಳಲ್ಲಿ ೩,೦೦೦ಕ್ಕೂ ಹೆಚ್ಚಿನ ಯೋಜನೆಗಳು ನೆರವೇರುತ್ತಿವೆ.
ವಿಶ್ವದಾದ್ಯಂತ ಹಬ್ಬಿರುವ ವೈವಿಧ್ಯಮಯವಾದ ಸಾಂಸ್ಥಿಕ ಸ್ವರೂಪಗಳನ್ನು ಬಳಸಿಕೊಂಡು SEZಗಳನ್ನು ಕಾರ್ಯಗತಗೊಳಿಸಲಾಗಿದೆ; ಸಂಪೂರ್ಣವಾಗಿ ಸಾರ್ವಜನಿಕ ಸ್ವರೂಪದ ಸಂಸ್ಥೆಗಳಿಂದ (ಸರ್ಕಾರಿ ಕಾರ್ಯನಿರ್ವಾಹಕ, ಸರ್ಕಾರಿ ಅಭಿವರ್ಧಕ, ಸರ್ಕಾರಿ ನಿಯಂತ್ರಕ) ಮೊದಲ್ಗೊಂಡು 'ಸಂಪೂರ್ಣವಾಗಿ' ಖಾಸಗಿ ಸ್ವರೂಪದ ಸಂಸ್ಥೆಗಳವರೆಗೆ (ಖಾಸಗಿ ಕಾರ್ಯನಿರ್ವಾಹಕ, ಖಾಸಗಿ ಅಭಿವರ್ಧಕ, ಸಾರ್ವಜನಿಕ ನಿಯಂತ್ರಕ) ಈ ಸಾಂಸ್ಥಿಕ ಸ್ವರೂಪಗಳ ವ್ಯಾಪ್ತಿಯಿದೆ ಎಂಬುದು ಗಮನಾರ್ಹ ಅಂಶ. ಅನೇಕ ನಿದರ್ಶನಗಳಲ್ಲಿ, ಸಾರ್ವಜನಿಕ ವಲಯದ ಕಾರ್ಯನಿರ್ವಾಹಕರು ಮತ್ತು ಅಭಿವರ್ಧಕರು ಭಾಗಶಃ-ಸರ್ಕಾರ ಸಂಸ್ಥೆಗಳಾಗಿ ವರ್ತಿಸುತ್ತವೆ; ಅಂದರೆ, ಅವು ಒಂದು ಮಿಥ್ಯಾ-ಸಾಂಸ್ಥಿಕ ಸಂಸ್ಥೆಯ ಸ್ವರೂಪವನ್ನು ಹೊಂದಿರುತ್ತವೆ ಮತ್ತು ಆಯವ್ಯಯದ ಸ್ವಾಯತ್ತತೆಯನ್ನು ಹೊಂದಿರುತ್ತವೆ. SEZಗಳು ಅನೇಕವೇಳೆ ಒಂದು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ವ್ಯವಸ್ಥೆಯ ಅಡಿಯಲ್ಲಿ ಅಭಿವೃದ್ಧಿಹೊಂದಿರುತ್ತವೆ; ಯೋಜನೆಯ ಮೇಲೆ ಒಂದು ಸಮಂಜಸವಾದ ಪ್ರತಿಫಲದ ಮೊತ್ತವನ್ನು (ಅಪಾಯ ಮಟ್ಟಗಳನ್ನು ಅವಲಂಬಿಸಿ ಇದು ವಿಶಿಷ್ಟವಾಗಿ ೧೦-೨೦%ನಷ್ಟಿರುತ್ತದೆ) ಖಾಸಗಿ ವಲಯದ ಓರ್ವ ಅಭಿವರ್ಧಕನು ಗಳಿಸುವುದಕ್ಕೆ ನೆರವಾಗಲು ಒಂದಷ್ಟು ಮಟ್ಟಿಗಿನ ಬೆಂಬಲವನ್ನು (ಆಫ್-ಸೈಟ್ ಮೂಲಸೌಕರ್ಯ, ಇಕ್ವಿಟಿ ಹೂಡಿಕೆ, ಸುಲಭ ಸಾಲಗಳು, ಬಾಂಡ್ ನೀಡಿಕೆಗಳು, ಇತ್ಯಾದಿಗಳಿಗೆ ಅವಕಾಶವನ್ನು ನೀಡುವ ಮೂಲಕ) ಸಾರ್ವಜನಿಕ ವಲಯವು ಇಂಥದೊಂದು ವ್ಯವಸ್ಥೆಯಲ್ಲಿ ಒದಗಿಸುತ್ತದೆ.
ಚೀನಾ
[ಬದಲಾಯಿಸಿ]ಪ್ರಸಕ್ತವಾಗಿ, ದೇಶದಲ್ಲಿನ ಅತ್ಯಂತ ಪ್ರಸಿದ್ಧ SEZಗಳಲ್ಲಿ ಷೆನ್‌ಜೆನ್, ಕ್ಸಿಯಾಮೆನ್, ಷಾಂತೋವ್, ಮತ್ತು ಝುಹಾಯ್ ಸೇರಿವೆ. ಷೆನ್‌ಜೆನ್, ಷಾಂತೋವ್, ಮತ್ತು ಝುಹಾಯ್ ವಲಯಗಳೆಲ್ಲವೂ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿವೆ ಎಂಬುದು, ಹಾಗೂ ಸರಕುಗಳ ಸಾಗಾಣಿಕೆಗಾಗಿ ಸಮುದ್ರವು ಉತ್ತಮವಾದ ಪ್ರವೇಶಾವಕಾಶವನ್ನು ಹೊಂದಿರುವ ಚೀನಾದ ದಕ್ಷಿಣ ಭಾಗದ ತೀರಪ್ರದೇಶದಲ್ಲಿ ಅವೆಲ್ಲವೂ ನೆಲೆಗೊಂಡಿವೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕಾಂಗೊ ಪ್ರಜಾಸತ್ತೀಯ ಗಣರಾಜ್ಯ
[ಬದಲಾಯಿಸಿ]ಕಾಂಗೊ ಪ್ರಜಾಸತ್ತೀಯ ಗಣರಾಜ್ಯವು ತನ್ನ ಮೊದಲ ವಿಶೇಷ ಆರ್ಥಿಕ ವಲಯವನ್ನು ಎನ್'ಸೇಲೇಯ ಕಿನ್‌ಶಾಸ ಜಿಲ್ಲೆಯಲ್ಲಿ ನಿರ್ಮಿಸಲು ಯೋಜಿಸುತ್ತಿದೆ. ಈ SEZ ೨೦೧೨ರಲ್ಲಿ ಕಾರ್ಯಾತ್ಮಕವಾಗಲಿದೆ ಮತ್ತು ಇದನ್ನು ಕೃಷಿ-ಉದ್ಯಮಗಳಿಗೆ ಸಮರ್ಪಿಸಲಾಗುತ್ತದೆ.[೧]
ಭಾರತ
[ಬದಲಾಯಿಸಿ]ವಿದೇಶಿ ಹೂಡಿಕೆಯನ್ನು ವರ್ಧಿಸುವ ಮತ್ತು ದೇಶದಿಂದಾಗುವ ರಫ್ತುಗಳನ್ನು ಉತ್ತೇಜಿಸಬೇಲಿರುವ ಅಗತ್ಯವನ್ನು ಪರಿಗಣಿಸಿ ಹಾಗೂ ಸ್ವದೇಶಿ ಉದ್ದಿಮೆಗಳು ಮತ್ತು ತಯಾರಕರು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆಯನ್ನು ಕಾಯ್ದಕೊಳ್ಳುವಂತಾಗಲು ಅವರಿಗೆ ಸೂಕ್ತವಾದ ಕಾರ್ಯಕ್ಷೇತ್ರವೊಂದನ್ನು ರೂಪಿಸಬೇಕಿರುವ ಅಗತ್ಯವನ್ನು ಮನಗಂಡು, ಭಾರತ ಸರ್ಕಾರವು ದೇಶದಲ್ಲಿ ವಿಶೇಷ ಆರ್ಥಿಕ ವಲಯಗಳ ಕಾರ್ಯನೀತಿಯನ್ನು ಪರಿಚಯಿಸುವುದರ ಕುರಿತು ೨೦೦೦ದ ಏಪ್ರಿಲ್‌ನಲ್ಲಿ ಪ್ರಕಟಿಸಿತ್ತು; ಈ ವಲಯಗಳು ವ್ಯಾಪಾರದ ಕಾರ್ಯಾಚರಣೆಗಳು, ಸುಂಕಗಳು ಮತ್ತು ದರಪಟ್ಟಿಗಳಿಗೆ ಸಂಬಂಧಿಸಿದಂತಿರುವ ವಿದೇಶಿ ಪ್ರದೇಶವಾಗಲಿವೆ ಎಂದು ಭಾವಿಸಲಾಗಿತ್ತು. ೨೦೦೭ರ ವೇಳೆಗೆ ಇದ್ದಂತೆ, ೫೦೦ಕ್ಕೂ ಹೆಚ್ಚಿನ SEZಗಳು ಪ್ರಸ್ತಾವಿಸಲ್ಪಟ್ಟಿದ್ದು ಅವುಗಳ ಪೈಕಿ ೨೨೦ರಷ್ಟು SEZಗಳು ಸೃಷ್ಟಿಸಲ್ಪಟ್ಟಿವೆ. ಇದು ವಿಶ್ವ ಬ್ಯಾಂಕ್‌ನ ಕಳವಳ-ಕಾಳಜಿಗಳಿಗೆ ಕಾರಣವಾಗಿದೆ, ಏಕೆಂದರೆ ಇಂಥದೊಂದು ದೊಡ್ಡ ಸಂಖ್ಯೆಯ SEZಗಳು ಊರ್ಜಿತಗೊಳ್ಳುತ್ತವೆಯೇ ಎಂಬುದು ಅದರ ಮುಂದಿರುವ ಪ್ರಶ್ನೆ. ಭಾರತದಲ್ಲಿನ ವಿಶೇಷ ಆರ್ಥಿಕತೆಯು PRC ಮಾದರಿಯನ್ನು ನಿಕಟವಾಗಿ ಅನುಸರಿಸುತ್ತದೆ.
ವಿಶೇಷ ಆರ್ಥಿಕ ವಲಯದ ಕಾಯಿದೆಯನ್ನು ಭಾರತವು ೨೦೦೫ರಲ್ಲಿ ಅನುಮೋದಿಸಿತು. ಭಾರತದಲ್ಲಿ SEZಗಳ ಅಭಿವೃದ್ಧಿಯ ಕುರಿತಾದ ವಿಷಯದಲ್ಲಿ ಸರ್ಕಾರವು ಪೂರ್ವ-ನಿಯಾಮಕವಾಗಿದೆ. ಸರ್ಕಾರವು ಕಾರ್ಯನೀತಿಗಳನ್ನು ಸೂತ್ರೀಕರಿಸಿದೆ, ಅವನ್ನು ಸಾಂದರ್ಭಿಕವಾಗಿ ಅವಲೋಕಿಸಿದೆ ಮತ್ತು SEZಗಳ ಅಭಿವರ್ಧಕರಿಗೆ ಮಾತ್ರವೇ ಅಲ್ಲದೇ, SEZಗಳಲ್ಲಿ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೂ ಹೇರಳವಾದ ಸೌಕರ್ಯಗಳನ್ನು ಒದಗಿಸುವುದರ ಕುರಿತು ಖಾತ್ರಿಪಡಿಸಿದೆ.
ಭಾರತದಲ್ಲಿರುವ SEZಗಳು
[ಬದಲಾಯಿಸಿ]ಭಾರತದಲ್ಲಿ SEZಗಳು ವಿಶೇಷ ವಲಯಗಳಾಗಿದ್ದು, ಸರ್ಕಾರದಿಂದ ಇವು ಸೃಷ್ಟಿಸಲ್ಪಟ್ಟಿವೆ ಮತ್ತು ಆ ನಿರ್ದಿಷ್ಟ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆಯನ್ನು ಅಭಿವೃದ್ಧಿಪಡಿಸುವುದಕ್ಕಾಗಿ ವಿಶೇಷ ಅವಕಾಶಗಳು ಅಥವಾ ಮುನ್ನೇರ್ಪಾಡುಗಳನ್ನು ಒದಗಿಸಲೆಂದು ಈ ವಿಶೇಷ ವಲಯಗಳು ಸರ್ಕಾರಿ-ಖಾಸಗಿ ಮಾಲೀಕತ್ವದಿಂದ ಅಥವಾ ಏಕಮಾತ್ರವಾಗಿ ಖಾಸಗಿ ಮಾಲೀಕತ್ವದಿಂದ ನಡೆಸಲ್ಪಡುತ್ತಿವೆ. ಗುಜರಾತ್‌ನ ಕಾಂಡ್ಲಾದಲ್ಲಿ ಭಾರತ ಸರ್ಕಾರವು ತನ್ನ ಮೊದಲ SEZಗೆ ೧೯೬೫ರಲ್ಲಿ ಚಾಲನೆ ನೀಡಿತು. ವಿದೇಶಿ ಹೂಡಿಕೆಯನ್ನೂ ಒಳಗೊಂಡಂತೆ SEZಗಳಿಗೆ ಹೂಡಿಕೆಗಳನ್ನು ಆಕರ್ಷಿಸುವುದಕ್ಕಾಗಿ SEZಗಳಲ್ಲಿನ ಘಟಕಗಳಿಗೆ ಉತ್ತೇಜನಗಳು (ಪ್ರೋತ್ಸಾಹ ಧನಗಳು) ಮತ್ತು ಸೌಕರ್ಯಗಳನ್ನು ನೀಡಲಾಗುತ್ತಿದ್ದು, ಈ ಕೆಳಗಿನವು ಅವುಗಳಲ್ಲಿ ಸೇರಿವೆ:-
- SEZ ಘಟಕಗಳ ಅಭಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಆಮದು/ಸ್ವದೇಶಿ ಸರಕುಗಳ ಸುಂಕ ಮುಕ್ತ ಸಂಗ್ರಹಣೆ.
- ಆದಾಯ ತೆರಿಗೆ ಕಾಯಿದೆಯ ಖಂಡ ೧೦AA ಅಡಿಯಲ್ಲಿ SEZ ಘಟಕಗಳಿಗೆ ಸಂಬಂಧಿಸಿದ ರಫ್ತು ಆದಾಯದ ಮೇಲೆ ಮೊದಲ ೫ ವರ್ಷಗಳವರೆಗೆ ೧೦೦% ಆದಾಯ ತೆರಿಗೆ ವಿನಾಯಿತಿ, ಅದಾದ ನಂತರದ ಮುಂದಿನ ೫ ವರ್ಷಗಳವರೆಗೆ ೫೦% ಆದಾಯ ತೆರಿಗೆ ವಿನಾಯಿತಿ ಮತ್ತು ಮುಂದಿನ ೫ ವರ್ಷಗಳವರೆಗೆ ಬಂಡವಾಳದಲ್ಲೇ ತೊಡಗಿಸಲ್ಪಟ್ಟ ರಫ್ತು ಲಾಭದ ಮೇಲೆ ೫೦% ಆದಾಯ ತೆರಿಗೆ ವಿನಾಯಿತಿ.
- ಆದಾಯ ತೆರಿಗೆ ಕಾಯಿದೆಯ ಖಂಡ ೧೧೫JB ಅಡಿಯಲ್ಲಿ ಕನಿಷ್ಟ ಪರ್ಯಾಯ ತೆರಿಗೆಯಿಂದ ವಿನಾಯಿತಿ.
- SEZ ಘಟಕಗಳು ಮಾನ್ಯತೆಪಡೆದ ಬ್ಯಾಂಕ್ ವ್ಯವಹಾರ ಮಾರ್ಗಗಳ ಮೂಲಕ ವರ್ಷವೊಂದರಲ್ಲಿ ೧೨೫೦೦ ಶತಕೋಟಿ US$ವರೆಗಿನ ಮೊತ್ತದ ವಾಣಿಜ್ಯೋದ್ದೇಶದ ಬಾಹ್ಯ ಸಾಲವನ್ನು ತೀರುವಳಿ ಸಮಯದ ಯಾವುದೇ ನಿರ್ಬಂಧವಿಲ್ಲದೆ ಪಡೆಯುವುದಕ್ಕೆ ಅವಕಾಶ.
- ಕೇಂದ್ರ ಮಾರಾಟ ತೆರಿಗೆಯಿಂದ ವಿನಾಯಿತಿ.
- ಸೇವಾ ತೆರಿಗೆಯಿಂದ ವಿನಾಯಿತಿ.
- ಕೇಂದ್ರ ಮತ್ತು ರಾಜ್ಯ ಮಟ್ಟದ ಅನುಮೋದನೆಗಳಿಗಾಗಿ ಏಕಗವಾಕ್ಷಿ ಪರವಾನಗಿ.
- ಆಯಾಯಾ ರಾಜ್ಯ ಸರ್ಕಾರಗಳಿಂದ ನೀಡಲ್ಪಟ್ಟಂತೆ ರಾಜ್ಯ ಮಾರಾಟ ತೆರಿಗೆ ಮತ್ತು ಇತರ ವಂತಿಗೆಗಳಿಂದ ವಿನಾಯಿತಿ.
SEZ ಅಭಿವರ್ಧಕರಿಗೆ ಲಭ್ಯವಾಗುವ ಪ್ರಮುಖ ಉತ್ತೇಜನಗಳು ಮತ್ತು ಸೌಕರ್ಯಗಳಲ್ಲಿ ಇವು ಸೇರಿವೆ:-
- BOA ವತಿಯಿಂದ ಅನುಮೋದಿಸಲ್ಪಟ್ಟ ಅಧಿಕೃತ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ SEZಗಳ ಅಭಿವೃದ್ಧಿಗಾಗಿ ಆಮದು ವಸ್ತು ಸುಂಕು/ಅಬಕಾರಿ ಸುಂಕಗಳಿಂದ ವಿನಾಯಿತಿ.
- ೧೫ ವರ್ಷಗಳ ಒಟ್ಟಾರೆ ಅವಧಿಯಲ್ಲಿನ ೧೦ ವರ್ಷಗಳ ಒಂದು ವಿಭಾಗದಲ್ಲಿ SEZನ ಅಭಿವೃದ್ಧಿಯ ವ್ಯವಹಾರದಿಂದ ಪಡೆಯಲಾದ ಆದಾಯದ ಮೇಲೆ, ಆದಾಯ ತೆರಿಗೆ ಕಾಯಿದೆಯ ಖಂಡ ೮೦-IAB ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ.
- ಆದಾಯ ತೆರಿಗೆ ಕಾಯಿದೆಯ ಖಂಡ ೧೧೫ JB ಅಡಿಯಲ್ಲಿ ಕನಿಷ್ಟ ಪರ್ಯಾಯ ತೆರಿಗೆಯಿಂದ ವಿನಾಯಿತಿ.
- ಆದಾಯ ತೆರಿಗೆ ಕಾಯಿದೆಯ ಖಂಡ ೧೧೫O ಅಡಿಯಲ್ಲಿ ಲಾಭಾಂಶ ವಿತರಣಾ ತೆರಿಗೆಯಿಂದ ವಿನಾಯಿತಿ.
- ಕೇಂದ್ರ ಮಾರಾಟ ತೆರಿಗೆಯಿಂದ (CST) ವಿನಾಯಿತಿ.
- ಸೇವಾ ತೆರಿಗೆಯಿಂದ (SEZ ಕಾಯಿದೆಯ ಖಂಡ ೭, ೨೬ ಮತ್ತು ಎರಡನೇ ಅನುಸೂಚಿಯ ಅನುಸಾರ) ವಿನಾಯಿತಿ.
ಭಾರತದಲ್ಲಿರುವ ವಿಶೇಷ ಆರ್ಥಿಕ ವಲಯಗಳ ಪಟ್ಟಿ
೨೦೧೦ರ ಅಕ್ಟೋಬರ್ ವೇಳೆಗೆ ಇದ್ದಂತೆ, ಭಾರತದಾದ್ಯಂತ ಈ ಕೆಳಕಂಡ ರಾಜ್ಯಗಳಲ್ಲಿ ಪ್ರಸಕ್ತವಾಗಿ ೧೧೪ SEZಗಳು ಕಾರ್ಯಾಚರಣೆ ನಡೆಸುತ್ತಿವೆ.[೪] ಕರ್ನಾಟಕ - ೧೮; ಕೇರಳ - ೬; ಚಂಡೀಗಢ - ೧; ಗುಜರಾತ್ - ೮; ಹರಿಯಾಣ - ೩; ಮಹಾರಾಷ್ಟ್ರ - ೧೪; ರಾಜಾಸ್ಥಾನ - ೧; ಒಡಿಶಾ - ೧ ತಮಿಳುನಾಡು - ೧೬; ಉತ್ತರ ಪ್ರದೇಶ - ೪; ಪಶ್ಚಿಮ ಬಂಗಾಳ - ೨.
ಇದರ ಜೊತೆಗೆ, ಈ ಕೆಳಕಂಡ ರಾಜ್ಯಗಳಲ್ಲಿ ೫೦೦ಕ್ಕೂ ಹೆಚ್ಚಿನ SEZಗಳು ಭಾರತ ಸರ್ಕಾರದ ವತಿಯಿಂದ (೨೦೧೦ರ ಅಕ್ಟೋಬರ್ ವೇಳೆಗೆ ಇದ್ದಂತೆ) ಔಪಚಾರಿಕವಾಗಿ ಅನುಮೋದಿಸಲ್ಪಟ್ಟಿವೆ.[೫] ಆಂಧ್ರಪ್ರದೇಶ - ೧೦೯; ಚಂಡೀಗಢ - ೨; ಛತ್ತೀಸ್‌ಗಢ - ೨; ದಾದ್ರಾ ನಗರ್ ಹವೇಲಿ - ೪; ದೆಹಲಿ- ೩; ಗೋವಾ - ೭; ಗುಜರಾತ್ - ೪೫; ಹರಿಯಾಣ - ೪೫; ಜಾರ್ಖಂಡ್ - ೧; ಕರ್ನಾಟಕ - ೫೬; ಕೇರಳ - ೨೮; ಮಧ್ಯಪ್ರದೇಶ - ೧೪; ಮಹಾರಾಷ್ಟ್ರ - ೧೦೫; ನಾಗಾಲ್ಯಾಂಡ್ - ೧; ಒಡಿಶಾ - ೧೧; ಪಾಂಡಿಚೆರಿ - ೧; ಪಂಜಾಬ್ - ೮; ರಾಜಾಸ್ತಾನ - ೮; ತಮಿಳುನಾಡು - ೭೦; ಉತ್ತರಾಖಾಂಡ್ - ೩; ಉತ್ತರ ಪ್ರದೇಶ - ೩೩; ಪಶ್ಚಿಮ ಬಂಗಾಳ - ೨೨;
ಇಂಡೊನೇಷಿಯಾ
[ಬದಲಾಯಿಸಿ]ಇರಾನ್
[ಬದಲಾಯಿಸಿ]- ಅರ್ಗ್ - ಇ - ಜೇಡಿಡ್ ವಿಶೇಷ ಆರ್ಥಿಕ ವಲಯ: ವಾಹನ ತಯಾರಿಕಾ ಕೇಂದ್ರ.
- ಪೆಟ್‌ಜೋನ್: ಪೆಟ್ರೋರಾಸಾಯನಿಕ ವಿಶೇಷ ಆರ್ಥಿಕ ವಲಯ, ಮಾಹ್‌ಶಾಹ್ರ್.
- ಕಿಶ್: ಕಿಶ್ ದ್ವೀಪದ ವಿಶೇಷ ಆರ್ಥಿಕ ವಲಯ.
- ಸರಾಖ್ಸ್
- ಸಿರ್ಜಾನ್
- ಶಾಹಿದ್ ರಜಾಯೀ ರೇವುಪಟ್ಟಣ [೬] Archived 2006-01-05 ವೇಬ್ಯಾಕ್ ಮೆಷಿನ್ ನಲ್ಲಿ.
- ಅಮೀರಾಬಾದ್ ವಿಶೇಷ ಆರ್ಥಿಕ ವಲಯ [೭] Archived 2012-05-13 ವೇಬ್ಯಾಕ್ ಮೆಷಿನ್ ನಲ್ಲಿ.
- ಬುಶೆಹ್ರ್ ರೇವುಪಟ್ಟಣ
- ಪಯಾಮ್ ವಿಶೇಷ ಆರ್ಥಿಕ ವಲಯ ವು ಟೆಹ್ರಾನ್ ರಾಜಧಾನಿ ನಗರಕ್ಕೆ ಅತಿ ನಿಕಟವಾಗಿರುವ SEZ ಆಗಿದ್ದು, ಇದು ೩೬೦೦ ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ ಹಾಗೂ ಕರಜ್ ಎಂಬಲ್ಲಿ ಸ್ಥಾಪಿಸಲ್ಪಟ್ಟಿರುವ ಪಯಾಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದ ೧೦೦೦೦ ಹೆಕ್ಟೇರ್ ವ್ಯಾಪ್ತಿಯೊಳಗೆ ಇದು ನೆಲೆಗೊಂಡಿದೆ. ವಿಮಾನ ಸರಕು ಮತ್ತು ಅಂಚೆಯ ಸಾಗಾಣಿಕೆಯ ಅಭಿವೃದ್ಧಿ, ಸರಕುಗಳ ದಾಸ್ತಾನು, ಶೈತ್ಯಾಗಾರ ವ್ಯವಸ್ಥೆ, ಪ್ಯಾಕಿಂಗ್ ಸೇವೆಗಳು, ಸರಕಿನ ಉತ್ಪಾದಕತೆ, ಕೆಟ್ಟುಹೋಗುವ ಮತ್ತು ಕಾಲಸಂವೇದಿ ಸರಕಿನ ರಫ್ತು ಮೊದಲಾದವುಗಳಿಗೆ ಸಂಬಂಧಿಸಿ ಈ ವಿಮಾನ ನಿಲ್ದಾಣವು ಸ್ಥಾಪಿಸಲ್ಪಟ್ಟಿರುವುದು ಗಮನಾರ್ಹ. ಪಯಾಮ್ ಈ ಪ್ರದೇಶದಲ್ಲಿನ ಏಕೈಕ SEZ ಆಗಿದ್ದು, ತನ್ನದೇ ಆದ ವಿಮಾನ ನಿಲ್ದಾಣ ಮತ್ತು ವಿಮಾನ ವ್ಯವಸ್ಥೆಯ ಸವಲತ್ತನ್ನು ಅದು ಹೊಂದಿದೆ. ರೈಲುಮಾರ್ಗ, ಭೂಗತರೈಲು ಮತ್ತು ಇತರ ಸಂಬಂಧಿತ ಹೆದ್ದಾರಿಗಳಿಗೆ ಸುಲಭದ ಪ್ರವೇಶಾವಕಾಶವನ್ನು ಹೊಂದುವುದರೊಂದಿಗೆ ಇದು ಟೆಹ್ರಾನ್‌ನ ಕೈಗಾರಿಕಾ, ಆರ್ಥಿಕ ಮತ್ತು ವ್ಯವಸಾಯದ ಕೇಂದ್ರಗಳಿಗೆ ಹೊಂದಿಕೊಂಡಂತಿದೆ. FDIನ್ನು (ವಿದೇಶಿ ನೇರಹೂಡಿಕೆಯನ್ನು) ಆಕರ್ಷಿಸುವ ದೃಷ್ಟಿಯಿಂದ, ಪ್ರತಿ ಪಾಲುದಾರಿಕೆಯ ಪ್ರಮಾಣಾನುಸಾರವಾಗಿ ಇರಾನಿಯರು ಮತ್ತು ವಿದೇಶಿ ಪ್ರಜೆಗಳು ಹೂಡಿಕೆ ಮಾಡುವುದಕ್ಕೆ ಪಯಾಮ್ ಸಮಾನ ಅವಕಾಶ ಮತ್ತು ಸಾಧ್ಯತೆಯನ್ನು ಸೃಷ್ಟಿಸಿದೆ; ಅಷ್ಟೇ ಅಲ್ಲ, ವಿದೇಶಿ ಹೂಡಿಕೆಗಳ ಆಕರ್ಷಣೆ ಮತ್ತು ಸಂರಕ್ಷಣಾ ಕಾನೂನಿಗೆ ಅನುಸಾರವಾಗಿ ಖಾತರಿ ವಿದೇಶಿ ಹೂಡಿಕೆ, ಮತ್ತು ಆಡಳಿತಾತ್ಮಕ ಕಾನೂನುಗಳ ಯಾವುದೇ ಅಡಚಣೆಯಿಲ್ಲದೆಯೇ ಹೂಡಿಕೆಯ ಹಾಗೂ ಇದರಿಂದ ಗಳಿಸಿದ ಆದಾಯದ ವರ್ಗಾವಣೆಯ ಸ್ವಾತಂತ್ರ್ಯವನ್ನೂ ಇದು ನೀಡುತ್ತದೆ. ಮೇಲಾಗಿ, ಸರಕುಗಳು, ಯಂತ್ರೋಪಕರಣ ಮತ್ತು ಕಚ್ಚಾ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಆಮದುವಸ್ತು ಸುಂಕಗಳಿಲ್ಲದೆಯೇ ಮುಕ್ತ ಪ್ರವೇಶದ್ವಾರವನ್ನು ಇಲ್ಲಿ ಕಲ್ಪಿಸಲಾಗಿದ್ದು, ಸದರಿ ಬಾಬತ್ತುಗಳು ವಲಯದಲ್ಲಿ ನೆಲೆಯೂರಿರುವವರೆಗೆ ಈ ಸೌಕರ್ಯ ಲಭ್ಯವಿರುತ್ತದೆ; ಸುಂಕ ಇಲಾಖೆಯ ಶಿಷ್ಟಾಚಾರಗಳಿಲ್ಲದೆಯೇ ವಲಯದಿಂದ ಸರಕುಗಳು ರಫ್ತಾಗಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.[೮] Archived 2018-02-19 ವೇಬ್ಯಾಕ್ ಮೆಷಿನ್ ನಲ್ಲಿ.
ಕಜಾಕ್‌ಸ್ತಾನ್
[ಬದಲಾಯಿಸಿ]ಅಧ್ಯಕ್ಷರ ಅಧಿಕೃತ ಆದೇಶದಿಂದ ಬಹುವಿಧದ ಆರ್ಥಿಕ ವಲಯಗಳು ಸೃಷ್ಟಿಸಲ್ಪಟ್ಟಿವೆ. ಪ್ರತಿಯೊಂದು ವಲಯವೂ ಒಂದು ವಿಭಿನ್ನವಾದ ಗಮನವನ್ನು ಹೊಂದಿದೆ. ದಕ್ಷಿಣ ಕಝಕ್‌ಸ್ಥಾನ್‌ನ "ಓಂಟುಸ್ಟಿಕ್" ವಿಶೇಷ ಆರ್ಥಿಕ ವಲಯವನ್ನು ಕಝಕ್‌ಸ್ಥಾನ್‌ನಲ್ಲಿನ ಜವಳಿ ಕೈಗಾರಿಕೆಯ ಅಭಿವೃದ್ಧಿಗೆ ಮೀಸಲಾಗಿರಿಸಲಾಗಿದೆ.
ಮಲೇಷಿಯಾ
[ಬದಲಾಯಿಸಿ]೨೦೦೯ರ ಆಗಸ್ಟ್‌ನಲ್ಲಿ ಪೂರ್ವತೀರದ ಆರ್ಥಿಕತೆಯ ಪ್ರದೇಶದ SEZಗೆ[೨] ಮಲೇಷಿಯಾ ಚಾಲನೆ ನೀಡಿತು. ದೇಶದ ಮೊದಲ ವಿಶೇಷ ಆರ್ಥಿಕ ವಲಯವೆನಿಸಿಕೊಂಡಿರುವ ಇದು, ರಾಷ್ಟ್ರೀಯ GDPಗೆ ೨೩ ಶತಕೋಟಿ RMನಷ್ಟು ಕೊಡುಗೆಯನ್ನು ನೀಡುತ್ತದೆ ಮತ್ತು ECERನಲ್ಲಿ ೨೨೦,೦೦೦ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮ್ಯಾನ್ಮಾರ್
[ಬದಲಾಯಿಸಿ]ವಿಭಿನ್ನ ವಲಯಗಳಿಗಾಗಿ ತೆರಿಗೆ ವಿನಾಯಿತಿಗಳನ್ನು ನೀಡುವ (ಉತ್ಪಾದನಾ ವಲಯಕ್ಕಾಗಿ ೫ ವರ್ಷಗಳು, ಉನ್ನತ-ತಂತ್ರಜ್ಞಾನಕ್ಕಾಗಿ ೮ ವರ್ಷಗಳು, ಕೃಷಿ, ಜಾನುವಾರು ಸಾಕಣೆ ಮತ್ತು ಅರಣ್ಯಶಾಸ್ತ್ರಕ್ಕಾಗಿ ೨ ವರ್ಷಗಳು, ಮತ್ತು ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ೧ ವರ್ಷ) ವಿಶೇಷ ಆರ್ಥಿಕ ವಲಯಗಳು ರಾಖಿನೆ ಸಂಸ್ಥಾನದಲ್ಲಿನ ಸಿಟ್‌ವೆ ಉಪಜಿಲ್ಲೆ ಮತ್ತು ಕ್ಯೌಕ್‌ಪ್ಯೂ ಉಪಜಿಲ್ಲೆಗಳಲ್ಲಿ ಪೂರ್ವಭಾವಿ ನಿರ್ಮಾಣದ ಹಂತದಲ್ಲಿವೆ.[೩] ಅಂತರರಾಷ್ಟ್ರೀಯ ದರ್ಜೆಯ ಒಂದು ವಿಮಾನ ನಿಲ್ದಾಣವೂ ಸಹ ನಿರ್ಮಾಣವಾಗಬೇಕಿದೆ. ಇಲ್ಲಿ ನೆಲೆಗೊಳ್ಳಲಿರುವ ಮುಕ್ತ ವ್ಯಾಪಾರದ ಆರು ವಲಯಗಳೆಂದರೆ, ಯಾಂಗನ್‌ನಲ್ಲಿನ ಥಿಲಾವಾ ರೇವುಪಟ್ಟಣ, ಮಾನ್ ಸಂಸ್ಥಾನದಲ್ಲಿನ ಮಾವ್ಲಾಮೈನ್, ಕಯಿನ್ ಸಂಸ್ಥಾನದಲ್ಲಿನ ಮೈಯಾವ್ಯಾಡಿ ಮತ್ತು ಹಿಪ-ಆನ್, ರಾಖಿನೆ ಸಂಸ್ಥಾನದಲ್ಲಿನ ಕ್ಯೌಕ್‌ಫ್ಯು ಮತ್ತು ಮಂಡಾಲೆ ಪ್ರದೇಶದಲ್ಲಿನ ಪೈಯಿನ್ ಓ ಲ್ವಿನ್.[೪]
ಉತ್ತರ ಕೊರಿಯಾ
[ಬದಲಾಯಿಸಿ]ರಾಜಿನ್-ಸೋನ್‌ಬಾಂಗ್ ಆರ್ಥಿಕ ವಿಶೇಷ ವಲಯ ವು UNನ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮವೊಂದರ ಅಡಿಯಲ್ಲಿ ೧೯೯೪ರಲ್ಲಿ ಸ್ಥಾಪಿಸಲ್ಪಟ್ಟಿತು. ಟ್ಯೂಮನ್ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಈ ವಲಯವು, ಚೀನಿ ಜನರ ಗಣರಾಜ್ಯದ ಯಾನ್‌ಬಿಯನ್ ಕೊರಿಯನ್ ಸ್ವಾಯತ್ತ ಪ್ರಿಫೆಕ್ಟಿನ ಆಡಳಿತ ಪ್ರಾಂತಕ್ಕೆ (ಅಥವಾ, ಕೊರಿಯನ್ ಭಾಷೆಯಲ್ಲಿ ಯೆನಾನ್‌ಬೈಯಾನ್) ಹಾಗೂ ರಷ್ಯಾಕ್ಕೆ ಎಲ್ಲೆಯಾಗಿ ಪರಿಣಮಿಸಿದೆ. ೨೦೦೦ನೇ ಇಸವಿಯಲ್ಲಿ ಈ ಪ್ರದೇಶದ ಹೆಸರನ್ನು ರಾಸನ್ ಎಂಬುದಾಗಿ ಮೊಟಕುಗೊಳಿಸಲಾಯಿತು ಮತ್ತು ಇದು ಉತ್ತರ ಹ್ಯಾಮ್‌ಗಿಯೋಂಗ್ ಪ್ರಾಂತ್ಯದಿಂದ ಪ್ರತ್ಯೇಕಿಸಲ್ಪಟ್ಟಿತು.
ಪಾಕಿಸ್ತಾನ
[ಬದಲಾಯಿಸಿ]ತಮ್ಮ SEZಗಳೊಂದಿಗೆ ಚೀನಿಯರು ಸಾಧಿಸಿದ ಯಶಸ್ಸಿನ ಉದಾಹರಣೆಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಚೀನಾ ದೇಶವು ಲಾಹೋರ್‌ನ ಹೊರವಲಯದಲ್ಲಿ ಹೈಯೆರ್-ರೂಬಾ ಆರ್ಥಿಕ ವಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಸಹಾಯಹಸ್ತವನ್ನು ನೀಡುತ್ತಿದೆ.
ಇತರ ಆರ್ಥಿಕ ವಲಯಗಳಲ್ಲಿ, ಕೇವಲ ಚೀನಾದ ಹೂಡಿಕೆದಾರರಿಗಷ್ಟೇ ಮುಕ್ತವಾಗಿರುವ ಚೀನಾ-ಪಾಕಿಸ್ತಾನ್ ಆರ್ಥಿಕ ವಲಯ ಮತ್ತು ಭವಿಷ್ಯದ ಪಾಕಿಸ್ತಾನದ ಕಿರೀಟ ಭೂಷಣ ಎಂದೇ ಹೆಸರಾಗಿರುವ ಗ್ವಾದಾರ್ ಇವು ಸೇರಿವೆ.
ಕೇವಲ ಜಪಾನ್‌ಗೆ ಸೇರಿರುವ ವಿದೇಶಿ ಹೂಡಿಕೆದಾರರಿಗಾಗಿ ಒಂದು ಜಪಾನೀ ನಗರವನ್ನು ಸೃಷ್ಟಿಸುವುದರ ಕುರಿತಾದ ಮಾತುಕತೆಗಳು ಕೂಡಾ ಚಾಲ್ತಿಯಲ್ಲಿವೆ.
ಪ್ರಸಕ್ತವಾಗಿ ನಿರ್ಮಾಣದ ಹಂತದಲ್ಲಿರುವ ಸಿಯಾಲ್‌ಕೋಟ್-ಲಾಹೋರ್ ಮೋಟಾರುಮಾರ್ಗದ ಸಮೀಪದಲ್ಲಿ ಹೊಸದೊಂದು SEZ ಪ್ರಸ್ತಾವಿಸಲ್ಪಟ್ಟಿದ್ದು, ಮೋಟಾರುಮಾರ್ಗ ಉದ್ದಕ್ಕೂ ಸಾಗುವ ಹೊಸ SEZ ಒಂದರಲ್ಲಿ ೧ ಶತಕೋಟಿ $ ಮೊತ್ತದ ಹೂಡಿಕೆಯೊಂದನ್ನು ಮಾಡಲು ಕತಾರ್ ಪ್ರಸ್ತಾವಿಸಿದೆ.
ಫೈಸಲಾಬಾದ್‌ನಲ್ಲಿಯೂ ಸಹ ಒಂದು ಹೊಸ ವಲಯವು ನಿರ್ಮಾಣ ಹಂತದಲ್ಲಿದ್ದು, ಇದು ಸಂಪೂರ್ಣಗೊಂಡಾಗ ಪಾಕಿಸ್ತಾನದ ಅತಿದೊಡ್ಡ ಕೈಗಾರಿಕಾ ವಸಾಹತು ಎನಿಸಿಕೊಳ್ಳಲಿದೆ; ಪ್ರತಿಯೊಂದು ದೇಶಕ್ಕೆ ಸಂಬಂಧಿಸಿದಂತೆಯೂ ಇದು ವಿಭಾಗಗಳನ್ನು ಹೊಂದಿದ್ದು, ಈಗಾಗಲೇ ಸಂಪೂರ್ಣಗೊಂಡಿರುವ ಮೊದಲ ಹಂತದಲ್ಲಿ ಚೀನಿಯರ ಒಂದು ವಿಶೇಷ ವಲಯವು ನೆಲೆಗೊಂಡಿದೆ.
ಪಾಕಿಸ್ತಾನದಲ್ಲಿನ SEZಗಳ ಪಟ್ಟಿ
[ಬದಲಾಯಿಸಿ]- ಕರಾಚಿ ರಫ್ತು ಸಂಸ್ಕರಣಾ ವಲಯ, ಕರಾಚಿ, ಸಿಂಧ್
- ರಿಸಲ್‌ಪುರ್ ರಫ್ತು ಸಂಸ್ಕರಣಾ ವಲಯ, ರಿಸಲ್‌ಪುರ್
- ಸಿಯಾಲ್‌ಕೋಟ್ ರಫ್ತು ಸಂಸ್ಕರಣಾ ವಲಯ, ಸಿಯಾಲ್‌ಕೋಟ್, ಪಂಜಾಬ್
- ಗುಜ್ರಾನ್‌ವಾಲಾ ರಫ್ತು ಸಂಸ್ಕರಣಾ ವಲಯ, ಗುಜ್ರಾನ್‌ವಾಲಾ, ಪಂಜಾಬ್
ಫಿಲಿಪೈನ್ಸ್
[ಬದಲಾಯಿಸಿ]ಫಿಲಿಪೈನ್ ಆರ್ಥಿಕ ವಲಯಗಳು (ಪರಿಸರವಿಜ್ಞಾನ ವಲಯಗಳು) ಉದ್ಯಮಗಳ ಜಮಾವಣೆಗಳು ಅಥವಾ ಸಂಗ್ರಹಗಳಾಗಿದ್ದು, ಆರ್ಥಿಕ ಅಭಿವೃದ್ಧಿಯನ್ನು ಪ್ರವರ್ತಿಸುವ ಉದ್ದೇಶಕ್ಕಾಗಿ ಅವನ್ನು ಭೌಗೋಳಿಕವಾಗಿ ಒಟ್ಟುಗೂಡಿಸಲಾಗಿದೆ. ಈ ಪರಿಸರವಿಜ್ಞಾನ ವಲಯಗಳು ಗಣರಾಜ್ಯ ಕಾಯಿದೆ ಸಂಖ್ಯೆ ೭೯೧೬ರ ಅನುಸಾರ ಸ್ಥಾಪಿಸಲ್ಪಟ್ಟಿದ್ದು, ಇದು ಅನ್ಯಥಾ "೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ" ಎಂದು ಹೆಸರಾಗಿದ್ದು ಗಣರಾಜ್ಯ ಕಾಯಿದೆ ಸಂಖ್ಯೆ ೮೭೪೮ರಿಂದ ತಿದ್ದುಪಡಿಮಾಡಲ್ಪಟ್ಟಿದೆ.[೫]
ವ್ಯಾಪಾರ ಮತ್ತು ಕೈಗಾರಿಕಾ ಇಲಾಖೆಗೆ ಜೋಡಿಸಲಾದ ಮಂಡಳಿಯೊಂದರ (PEZA ಮಂಡಳಿ) ಮೂಲಕ, ಫಿಲಿಪೈನ್ ಆರ್ಥಿಕ ವಲಯ ಪ್ರಾಧಿಕಾರ ದ ವತಿಯಿಂದ ಫಿಲಿಪೈನ್ ಪರಿಸರವಿಜ್ಞಾನ ವಲಯಗಳ ಆಡಳಿತ-ನಿರ್ವಹಣೆಯನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ. ಪರಿಸರವಿಜ್ಞಾನ ವಲಯಗಳು, ಕೈಗಾರಿಕಾ ವಸಾಹತುಗಳು, ರಫ್ತು ಸಂಸ್ಕರಣಾ ವಲಯಗಳು, ಮುಕ್ತ ವ್ಯಾಪಾರದ ವಲಯಗಳು, ಮತ್ತು ಅದೇ ರೀತಿಯ ಇತರ ಅಸ್ತಿತ್ವಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗಳ ಕುರಿತಾಗಿ PEZA ಮಂಡಳಿಯು ಸಾರ್ವತ್ರಿಕ ಕಾರ್ಯನೀತಿಗಳನ್ನು ನಿಗದಿಪಡಿಸುತ್ತದೆ.[೬] ಸದರಿ ಮಂಡಳಿಯು ಪರಿಸರವಿಜ್ಞಾನ ವಲಯಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾವಗಳನ್ನೂ ಅವಲೋಕಿಸುತ್ತದೆ ಹಾಗೂ ತರುವಾಯದಲ್ಲಿ ಫಿಲಿಪೈನ್ಸ್ ಗಣರಾಜ್ಯದ ಅಧ್ಯಕ್ಷರಿಗೆ ಈ ಕುರಿತು ಶಿಫಾರಸುಮಾಡುತ್ತದೆ. ಇದರ ಜೊತೆಗೆ, ಶಾಖ, ಬೆಳಕು ಮತ್ತು ವಿದ್ಯುತ್, ನೀರು ಸರಬರಾಜು, ದೂರಸಂಪರ್ಕ, ಸಾರಿಗೆ, ಸುಂಕದ ರಸ್ತೆಗಳು ಮತ್ತು ಸೇತುವೆಗಳು, ರೇವುಪಟ್ಟಣ ಸೇವೆಗಳು, ಮತ್ತು ಇದೇ ಬಗೆಯ ಇತರ ಬಾಬುತ್ತುಗಳಂಥ ಪರಿಸರ ವಿಜ್ಞಾನ ವಲಯದಲ್ಲಿನ ಉಪಯುಕ್ತತೆಗಳು, ಇತರ ಸೇವೆಗಳು ಮತ್ತು ಮೂಲಸೌಕರ್ಯಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆಗಳನ್ನೂ PEZA ಮಂಡಳಿಯು ನಿಯಂತ್ರಿಸುತ್ತದೆ ಮತ್ತು ಕೈಗೆತ್ತಿಕೊಳ್ಳುತ್ತದೆ.[೭]
ಫಿಲಿಪೈನ್ ಪರಿಸರವಿಜ್ಞಾನ ವಲಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ, ಅದರಲ್ಲೂ ನಿರ್ದಿಷ್ಟವಾಗಿ ೧೯೮೭ರ ವಿವಿಧೋದ್ದೇಶದ ಹೂಡಿಕೆಗಳ ಸಂಹಿತೆಯಲ್ಲಿ ಕಂಡುಬಂದಿರುವ ವ್ಯವಹಾರ ಸಂಸ್ಥೆಗಳಿಗೆ ಹಲವಾರು ಉತ್ತೇಜನಗಳನ್ನು ಮಂಜೂರುಮಾಡಲಾಗಿದೆ.[೮] ಈ ಉತ್ತೇಜನಗಳಲ್ಲಿ ಇವೆಲ್ಲವೂ ಸೇರಿವೆ: ಆದಾಯ ತೆರಿಗೆ ರಜಾದಿನಗಳು; ಬಂಡವಾಳ ಸಾಧನ, ಬಿಡಿಭಾಗಗಳು, ಮತ್ತು ಗೌಣ ಸಾಮಗ್ರಿಗಳ ಆಮದಿನ ಮೇಲೆ ಶೂನ್ಯ ಪ್ರತಿಶತ (೦%) ಸುಂಕ; ಹಡಗುಕಟ್ಟೆ ಸುಂಕದ ಬಾಕಿಗಳು ಮತ್ತು ರಫ್ತು ತೆರಿಗೆ, ಕರ ಅಥವಾ ಶುಲ್ಕಗಳಿಂದ ವಿನಾಯಿತಿ; ಮತ್ತು ಸುಂಕ ಇಲಾಖೆಯ ಕಾರ್ಯವಿಧಾನಗಳ ಸರಳೀಕರಣ.[೯] ಇದರ ಜೊತೆಗೆ, ಪರಿಸರವಿಜ್ಞಾನ ವಲಯಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವ್ಯವಹಾರ ಸಂಸ್ಥೆಗಳಿಗೆ ೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆಯು ಎಲ್ಲಾ ತೆರಿಗೆಗಳಿಂದ ವಿನಾಯಿತಿ ನೀಡುತ್ತದೆ. ವ್ಯವಹಾರ ಸಂಸ್ಥೆಗಳು ಇತರ ಎಲ್ಲಾ ತೆರಿಗೆಗಳನ್ನು ಪಾವತಿಸುವ ಬದಲಿಗೆ ತಮ್ಮ ಒಟ್ಟಾರೆ ಆದಾಯದ ಐದು ಪ್ರತಿಶತದಷ್ಟು (೫%) ಭಾಗವನ್ನು ರಾಷ್ಟ್ರೀಯ ಸರ್ಕಾರಕ್ಕೆ ಪಾವತಿಸುವುದು ಅಗತ್ಯವಾಗಿದೆ.[೧೦][೧೧]
PEZA ನೋಂದಣಿ ಮತ್ತು ಉತ್ತೇಜನಗಳಿಗೆ ಸಂಬಂಧಿಸಿದಂತೆ ಅರ್ಹವಾಗಿರುವ ಚಟುವಟಿಕೆಗಳಲ್ಲಿ ಈ ಮುಂದಿನವು ಸೇರಿವೆಯಾದರೂ ಅದು ಅಷ್ಟಕ್ಕೇ ಸೀಮಿತಗೊಂಡಿಲ್ಲ: ೧) ರಫ್ತು ತಯಾರಿಕೆ; ೨) ಮಾಹಿತಿ ತಂತ್ರಜ್ಞಾನ ಸೇವಾ ರಫ್ತು; ೩) ಪ್ರವಾಸೋದ್ಯಮ; ೪) ವೈದ್ಯಕೀಯ ಪ್ರವಾಸೋದ್ಯಮ; ೫) ಕೃಷಿ-ಕೈಗಾರಿಕಾ ರಫ್ತು ತಯಾರಿಕೆ; ೬) ಕೃಷಿ-ಕೈಗಾರಿಕಾ ಜೈವಿಕ-ಇಂಧನ ತಯಾರಿಕೆ; ಮತ್ತು ೭) ಸರಕು-ಸಾಗಣಾ ತಂತ್ರ ಮತ್ತು ಸಂಗ್ರಹಿಸಿಡುವ ಸೇವೆಗಳು.[೧೨]
ಸುತ್ತುವರೆದಿರುವ ಸಮುದಾಯಗಳ ರಾಜಕೀಯ ಮತ್ತು ಆರ್ಥಿಕ ಪರಿಸರದಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವಂತೆ ಫಿಲಿಪೈನ್ ಆರ್ಥಿಕ ವಲಯಗಳನ್ನು ವಿನ್ಯಾಸಗೊಳಿಸಲಾಗಿದೆಯಾದರೂ, ಅವು ವಾಸ್ತವವಾಗಿ ತಮ್ಮ ನೆರೆಹೊರೆಯವರೊಂದಿಗೆ ಅದೇ ರೀತಿಯಲ್ಲಿ ಪರಸ್ಪರ ಪ್ರಭಾವಬೀರುತ್ತಿವೆ. ೨೦೧೦ರ ಮೇ ೩೧ರ ವೇಳೆಗೆ ಇದ್ದಂತೆ, ಫಿಲಿಪೈನ್ಸ್‌ನಲ್ಲಿ ೨೦೦ಕ್ಕೂ ಹೆಚ್ಚಿನ ಪರಿಸರವಿಜ್ಞಾನ ವಲಯಗಳಿದ್ದವು. ೨೦೦ಕ್ಕೂ ಹೆಚ್ಚಿನ ಈ ಪರಿಸರವಿಜ್ಞಾನ ವಲಯಗಳ ಪೈಕಿ ಏಳು (೭) ವಲಯಗಳು ಕೃಷಿ-ಕೈಗಾರಿಕಾ ಆರ್ಥಿಕ ವಲಯಗಳಾಗಿವೆ, ೧೩೪ ವಲಯಗಳು ಮಾಹಿತಿ ತಂತ್ರಜ್ಞಾನದ ಪಾರ್ಕ್‌ಗಳು ಮತ್ತು ಕೇಂದ್ರಗಳಾಗಿವೆ, ೬೫ ವಲಯಗಳು ತಯಾರಿಕೆಗೆ ಸಂಬಂಧಿಸಿದ ಪರಿಸರವಿಜ್ಞಾನ ವಲಯಗಳಾಗಿವೆ, ಎರಡು (೨) ವಲಯಗಳು ವೈದ್ಯಕೀಯ ಪ್ರವಾಸೋದ್ಯಮದ ಪ್ರದೇಶಗಳು/ಕೇಂದ್ರಗಳಾಗಿವೆ, ಮತ್ತು ಒಂಬತ್ತು (೯) ವಲಯಗಳು ಪ್ರವಾಸೋದ್ಯಮದ ಆರ್ಥಿಕ ವಲಯಗಳಾಗಿವೆ. ೪೧ ಖಾಸಗಿ ಆರ್ಥಿಕ ವಲಯಗಳ ಪೈಕಿ ಕೆವೈಟ್‌ನ ಜನರಲ್ ಟ್ರಯಾಸ್‌ನಲ್ಲಿರುವ ಗೇಟ್‌ವೇ ಬಿಸಿನೆಸ್ ಪಾರ್ಕ್ ಅತಿದೊಡ್ಡ ರಫ್ತುದಾರನಾಗಿದೆ ಮತ್ತು ಲಗುನಾ ಟೆಕ್ನೋಪಾರ್ಕ್ ಇಂಕ್ ಎಂಬುದು ಎರಡನೇ ಅತಿದೊಡ್ಡ ಖಾಸಗಿ ಪರಿಸರ ವಿಜ್ಞಾನ ವಲಯವಾಗಿದೆ. ಸರ್ಕಾರಿ-ಸ್ವಾಮ್ಯದ ನಾಲ್ಕು ವಲಯಗಳೆಂದರೆ, ಕೆವೈಟ್ ಆರ್ಥಿಕ ವಲಯ, ಬಟಾನ್ ಆರ್ಥಿಕ ವಲಯ, ಮ್ಯಾಕ್ಟನ್ ಆರ್ಥಿಕ ವಲಯ ಮತ್ತು ಬಗುಯೊ ಸಿಟಿ ಆರ್ಥಿಕ ವಲಯ. ಅತ್ಯಂತ ಸುಪರಿಚಿತವಾಗಿರುವ ಕೆಲವೊಂದು ಆರ್ಥಿಕ ವಲಯಗಳೆಂದರೆ, ಕ್ಲಾರ್ಕ್ ವಿಶೇಷ ಆರ್ಥಿಕ ವಲಯ, ಮತ್ತು ಸ್ಯೂಬಿಕ್ ಆರ್ಥಿಕ ವಲಯ; ಇವು ಹಿಂದೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಸೇನಾ ನೆಲೆಗಳು ಎನಿಸಿಕೊಂಡಿದ್ದವು.
ಫಿಲಿಪೈನ್ಸ್‌ನಲ್ಲಿರುವ SEZಗಳ ಪಟ್ಟಿ
[ಬದಲಾಯಿಸಿ]ಫಿಲಿಪೈನ್ಸ್‌ನಲ್ಲಿರುವ ೨೦೦ಕ್ಕೂ ಹೆಚ್ಚಿನ SEZಗಳ ಪೈಕಿಯ ಕೆಲವೊಂದು ವಲಯಗಳೆಂದರೆ:
- ಸ್ಯೂಬಿಕ್ ಕೊಲ್ಲಿ ಮಹಾನಗರದ ಪ್ರಾಧಿಕಾರ (೭೬.೫೯ ಹೆಕ್ಟೇರುಗಳು)
- ಕ್ಲಾರ್ಕ್ ವಿಶೇಷ ಆರ್ಥಿಕ ವಲಯ (೨೯,೩೬೫ ಹೆಕ್ಟೇರುಗಳು)
- ಬಟಾನ್ ರಫ್ತು ಸಂಸ್ಕರಣಾ ವಲಯ (೧,೭೩೩.೩೭ ಹೆಕ್ಟೇರುಗಳು)
- PHIVIDEC ಕೈಗಾರಿಕಾ ಪ್ರಾಧಿಕಾರ
- ಝಾಂಬೊವಂಗಾ ನಗರ ವಿಶೇಷ ಆರ್ಥಿಕ ವಲಯ
- ಕಾಗಯಾನ್ ವಿಶೇಷ ಆರ್ಥಿಕ ವಲಯ
- ಔರೊರಾ ವಿಶೇಷ ಆರ್ಥಿಕ ವಲಯ
- ಲೈಟ್ ಇಂಡಸ್ಟ್ರಿ & ಸೈನ್ಸ್ ಪಾರ್ಕ್ I, II, & III (೨೭೨.೨೨ ಹೆಕ್ಟೇರುಗಳು)
- ಲಗುನಾ ಟೆಕ್ನೋಪಾರ್ಕ್ (೨೮೯.೯೫ ಹೆಕ್ಟೇರುಗಳು)
- ಲಗುನಾ ಅಂತರರಾಷ್ಟ್ರೀಯ ಕೈಗಾರಿಕಾ ಪ್ರದೇಶ (೩೪.೮೮ ಹೆಕ್ಟೇರುಗಳು)
- ಹೆರ್ಮೊಸಾ ಪರಿಸರ ವಿಜ್ಞಾನ ವಲಯ ಕೈಗಾರಿಕಾ ಪ್ರದೇಶ (೧೪೨.೦೪ ಹೆಕ್ಟೇರುಗಳು)
- ಕೆಪ್ಪೆಲ್ ಫಿಲಿಪೈನ್ಸ್ ಸಾಗರ ವಿಶೇಷ ಆರ್ಥಿಕ ವಲಯ (೨೨.೯೨ ಹೆಕ್ಟೇರುಗಳು)
- ಫಿಲಿನ್‌ವೆಸ್ಟ್ ತಂತ್ರಜ್ಞಾನ ಪಾರ್ಕ್ - ಕ್ಯಾಲಂಬಾ (೫೧.೦೭ ಹೆಕ್ಟೇರುಗಳು)[೧೩]
ಪೋಲೆಂಡ್
[ಬದಲಾಯಿಸಿ]ಪೋಲೆಂಡ್‌ನಲ್ಲಿ[೧೪] ೧೪ ವಿಶೇಷ ಆರ್ಥಿಕ ವಲಯಗಳಿವೆ. ಅವುಗಳೆಂದರೆ:
- ಕ್ಯಾಮಿಯೆನ್ನೊಗೋರ್ಸ್ಕಾ SSE
- ಕ್ಯಾಟೋವಿಸ್ ವಿಶೇಷ ಆರ್ಥಿಕ ವಲಯ
- ಕೋಸ್ಟ್ರಜಿನ್ಸ್ಕೊ-ಸ್ಲೂಬಿಕಾ SSE
- ಕ್ರಾಕೋವ್ಸ್ಕಿ ಪಾರ್ಕ್ ಟೆಕ್ನಾಲಜಿಕ್‌ಜ್ನಿ
- ಲೆಗ್ನಿಕಾ SSE
- ಲೊಡ್‌ಜ್ಕಾ SSE
- SSE EURO-PARK MIELEC
- ಸ್ಲೂಪ್ಸ್‌ಕಾ SSE
- SSE ಸ್ಟಾರಾಚೌವಿಸ್
- ಸುವಾಲ್ಸ್ಕಾ SSE
- ಪೊಮೊರ್ಸ್ಕಾ SSE (ಪೊಮೆರಾನಿಯನ್ ವಿಶೇಷ ಆರ್ಥಿಕ ವಲಯ)
- ಟಾರ್ನೊಬ್ರಜೆಸ್ಕಾ SSE
- ವಾಲ್‌ಬ್ರಜಿಕ್ ವಿಶೇಷ ಆರ್ಥಿಕ ವಲಯ "INVEST-PARK"
- ವಾರ್ಮಿನ್ಸ್ಕೊ-ಮಜುರ್ಸ್ಕಾ SSE
ಕೊರಿಯಾ ಗಣರಾಜ್ಯ (ದಕ್ಷಿಣ ಕೊರಿಯಾ)
[ಬದಲಾಯಿಸಿ]ಡೇಗು-ಗಯೋಂಗ್ಬಕ್ ಮುಕ್ತ ಆರ್ಥಿಕ ವಲಯವು (DGFEZ) ದಕ್ಷಿಣ ಕೊರಿಯಾದ ಆಗ್ನೇಯದ ಭಾಗವಾದ ಡೇಗು-ಗಯೋಂಗ್ಬಕ್ ಪ್ರದೇಶದಲ್ಲಿ ನೆಲೆಗೊಂಡಿದೆ. ಡೇಗುವಿನ ನಾಲ್ಕು ಭಾಗಗಳಾದ ಡೊಂಗ್-ಗು, ಸುಸಿಯಾಂಗ್-ಗು, ನ್ಯಾಮ್-ಗು, ಮತ್ತು ಡಾಲ್ಸಿಯಾಂಗ್-ಗುನ್ ಇವುಗಳನ್ನು, ಮತ್ತು ಗಯೋಂಗ್‌ಸ್ಯಾಂಗ್ಬಕ್-ಡೊವಿನ (ಗಯೋಂಗ್ಬಕ್) ನಾಲ್ಕು ಭಾಗಗಳಾದ ಗುಮಿ, ಪೊಹಾಂಗ್, ಗಯೋಂಗ್‌ಸ್ಯಾನ್, ಮತ್ತು ಯೆನೊಂಗ್ಚಿಯಾನ್ ಇವುಗಳನ್ನು ಇದು ಒಳಗೊಳ್ಳುತ್ತದೆ. ಒಟ್ಟಾರೆಯಾಗಿ ಅಲ್ಲಿ ವಿಶೇಷೀಕರಿಸಲ್ಪಟ್ಟ ೧೧ ಜಿಲ್ಲೆಗಳಿದ್ದು, ೩೯.೫೪ km೨ನಷ್ಟು ವಿಸ್ತೀರ್ಣಕ್ಕೆ ಅವು ಹಬ್ಬಿವೆ. DGFEZಯು ಒಂದು ಜ್ಞಾನ-ಸೃಜನಶೀಲ ಮುಕ್ತ ಆರ್ಥಿಕ ವಲಯವಾಗಿದ್ದು, ಇಲ್ಲಿನ ೭ ಜಿಲ್ಲೆಗಳು ಜ್ಞಾನಾಧಾರಿತ ಸೇವಾ ಉದ್ಯಮಗಳ ಮೇಲೆ ವಿಶೇಷೀಕರಿಸಲ್ಪಟ್ಟಿದ್ದರೆ, ೪ ಜಿಲ್ಲೆಗಳು ಜ್ಞಾನಾಧಾರಿತ ತಯಾರಿಕಾ ಉದ್ಯಮಗಳಿಗೆ ಸಂಬಂಧಿಸಿ ವಿಶೇಷಜ್ಞತೆಯನ್ನು ಪಡೆದಿವೆ.
ರಷ್ಯಾ
[ಬದಲಾಯಿಸಿ]ರಷ್ಯಾ ಪ್ರಸಕ್ತವಾಗಿ ಒಕ್ಕೂಟದ ೧೬ ಆರ್ಥಿಕ ವಲಯಗಳು ಮತ್ತು ಹಲವಾರು ಪ್ರಾದೇಶಿಕ ಯೋಜನೆಗಳನ್ನು ಹೊಂದಿದೆ.
೨೦೧೦ರ ಮಾರ್ಚ್ ವೇಳೆಗೆ ಇದ್ದಂತೆ, ರಷ್ಯಾದ ಒಕ್ಕೂಟದ ವಿಶೇಷ ಆರ್ಥಿಕ ವಲಯಗಳು ೧೮ ದೇಶಗಳಿಗೆ ಸೇರಿದ ೨೦೭ ಹೂಡಿಕೆದಾರರಿಗೆ ಆಶ್ರಯದಾತರಾಗಿದ್ದವು. ರಷ್ಯಾದ SEZನಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರ ಪೈಕಿ ಪ್ರಮುಖ MNCಗಳೂ ಸೇರಿಕೊಂಡಿವೆ. ಅವುಗಳೆಂದರೆ: ಯಾಕೊಹಾಮಾ, ಸಿಸ್ಕೊ, ಇಸುಝು, ಏರ್ ಲಿಕ್ವೈಡ್, ಬೆಕೆರ್ಟ್, ರಾಕ್‌ವೂಲ್ ಮತ್ತು ಅನೇಕ ಇತರ ಸಂಸ್ಥೆಗಳು.
ರಷ್ಯಾದಲ್ಲಿ ಈಗ ಅಸ್ತಿತ್ವದಲ್ಲಿರುವ ಒಕ್ಕೂಟದ ೧೫ ವಿಶೇಷ ಆರ್ಥಿಕ ವಲಯಗಳು ಹಾಗೂ ಸ್ಥಾಪಿಸಲ್ಪಡಬೇಕಿರುವ ವಿಶೇಷ ಆರ್ಥಿಕ ವಲಯಗಳು, OJSC "ವಿಶೇಷ ಆರ್ಥಿಕ ವಲಯಗಳಿಂದ" ನಿರ್ವಹಿಸಲ್ಪಡುತ್ತವೆ. SEZನ್ನು ಬೆಳೆಸುವ ಮತ್ತು ನಿರ್ವಹಿಸುವಲ್ಲಿನ ವಿಶ್ವದ ಅತ್ಯುತ್ತಮ ಪರಿಪಾಠಗಳನ್ನು ಒಟ್ಟುಗೂಡಿಸಲು ಹಾಗೂ ಕಾರ್ಯಗತಗೊಳಿಸಲು, ಮತ್ತು ರಷ್ಯಾದ ಆರ್ಥಿಕತೆಯಲ್ಲಿ ವಿದೇಶಿ ನೇರ ಹೂಡಿಕೆಗೆ (FDI) ಉತ್ತೇಜನವನ್ನು ನೀಡಲು, ೨೦೦೬ರಲ್ಲಿ OJSC "SEZ" ಸಂಸ್ಥಾಪಿಸಲ್ಪಟ್ಟಿತು.
ಇದರ ಸಂಪೂರ್ಣ ಸ್ವಾಮ್ಯವನ್ನು ರಷ್ಯಾದ ನಾಗರಿಕ ಸರ್ಕಾರವು ಹೊತ್ತಿದ್ದು, ಅದರ ವತಿಯಿಂದ ಧನಸಹಾಯವೂ ಈ ವಿಶೇಷ ಆರ್ಥಿಕ ವಲಯಕ್ಕೆ ಸಿಗುತ್ತದೆ.
೨೦೦೫ರ ಜುಲೈ ೨೨ರಂದು ಜಾರಿಗೆ ಬಂದ ಒಕ್ಕೂಟದ ಕಾನೂನು ಸಂಖ್ಯೆ ೧೧೬ FZನಿಂದ ರಷ್ಯಾದಲ್ಲಿನ ಒಕ್ಕೂಟದ ಆರ್ಥಿಕ ವಲಯಗಳು ನಿಯಂತ್ರಿಸಲ್ಪಡುತ್ತವೆ.
ತಾಂತ್ರಿಕ/ಹೊಸ ಪರಿವರ್ತನೆಯ ವಲಯಗಳು
[ಬದಲಾಯಿಸಿ]- ಡಬ್ನಾ
- ಝೆಲೆನೊಗ್ರಾಡ್
- ನ್ಯೂಡಾರ್ಫ್ (Russian: Нойдорф) - ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಸಮೀಪವಿರುವ ಸ್ಟ್ರೆಲ್ನಾದಲ್ಲಿನ ವಿಶೇಷ ಆರ್ಥಿಕ ವಲಯದಲ್ಲಿರುವ ಕೈಗಾರಿಕಾ ಮತ್ತು ವ್ಯವಹಾರ ಪ್ರದೇಶ.
- ನೋವೊ-ಓರ್ಲೊವ್ಸ್ಕೊಯೆ (Russian: Ново-Орловское) - ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿರುವ SEZ ಪ್ರದೇಶ
- ಟಾಮ್ಸ್ಕ್
ಕೈಗಾರಿಕಾ/ಅಭಿವೃದ್ಧಿಗೆ ಸಂಬಂಧಿಸಿದ ವಲಯಗಳು
[ಬದಲಾಯಿಸಿ]- "ಅಲಾಬ್ಯೂಗಾ" (ವಿಶೇಷ ಆರ್ಥಿಕ ವಲಯ)
- ಲಿಪೆಟ್ಸ್ಕ್
ಪ್ರವಾಸಿ ವಲಯಗಳು
[ಬದಲಾಯಿಸಿ]- ಕ್ರಾಸ್‌ನೊಡರ್ ಕ್ರಾಯ್
- ಸ್ಟಾವ್ರೊಪೊಲ್ ಕ್ರಾಯ್
- ಕಲಿನಿನ್‌ಗ್ರಾಡ್ ಒಬ್ಲಾಸ್ಟ್ (ಯಾಂಟಾರ್, ಕಲಿನಿನ್‌ಗ್ರಾಡ್ ವಿಶೇಷ ಆರ್ಥಿಕ ವಲಯ)
- ಆಲ್ಟಾಯ್ ಕ್ರಾಯ್
- ಆಲ್ಟಾಯ್ ಗಣರಾಜ್ಯ
- ಇರ್ಕುಟ್ಸ್ಕ್ ಒಬ್ಲಾಸ್ಟ್
- ಬುರ್ಯಾಟಿಯಾ
- ವ್ಲಾದಿವೊಸ್ಟಾಕ್
ಉಕ್ರೇನ್
[ಬದಲಾಯಿಸಿ]೨೦೦೫ರ ಮಾರ್ಚ್ ೩೧ರವರೆಗೆ ಉಕ್ರೇನ್‌ನಲ್ಲಿ ವಿಶೇಷ ಆರ್ಥಿಕ ವಲಯಗಳು ಅಸ್ತಿತ್ವದಲ್ಲಿದ್ದವು. ನೌತ್-ಕ್ರಿಮಿಯನ್ ಪ್ರಾಯೋಗಿಕ ಆರ್ಥಿಕ ವಲಯವಾದ ಸೈವಾಶ್ (೧೯೯೬ರಿಂದ) ಮೊದಲು ಸೃಷ್ಟಿಸಲ್ಪಟ್ಟ ವಲಯವಾಗಿತ್ತು. ೧೯೯೮ರಿಂದ ೨೦೦೦ದವರೆಗೆ ೧೧ ಹೊಸ ವಲಯಗಳು ಸೃಷ್ಟಿಸಲ್ಪಟ್ಟವು.
ಹೆಸರು | ಸ್ಥಳ | ವಿಸ್ತೀರ್ಣ | ಸ್ಥಾಪನೆಯಾದದ್ದು | ಕಾಲಮಿತಿ* |
---|---|---|---|---|
NCEEZ ಸೈವಾಶ್ | ಕ್ರಿಮಿಯಾದ ಸ್ವಾಯತ್ತ ಗಣರಾಜ್ಯ | ೧೯೯೬ | ೫ ವರ್ಷಗಳು | |
ಸ್ಲಾವುಟಿಕ್ | ಸ್ಲಾವುಟಿಕ್, ಕೀವ್ ಒಬ್ಲಾಸ್ಟ್ | ೨,೦೦೦ ಹೆಕ್ಟೇರು | ೩೦.೦೬.೧೯೯೮ | ೦೧.೦೧.೨೦೨೦ರವರೆಗೆ |
ಅಝೊವ್ | ಮರಿಯುಪೋಲ್, ಡೊನೆಟ್ಸ್ಕ್ ಒಬ್ಲಾಸ್ಟ್ | ೩೧೫ ಹೆಕ್ಟೇರು | ೨೧.೦೭.೧೯೯೮ | ೬೦ ವರ್ಷಗಳು |
ಡೊನೆಟ್ಸ್ಕ್ | ಡೊನೆಟ್ಸ್ಕ್, ಡೊನೆಟ್ಸ್ಕ್ ಒಬ್ಲಾಸ್ಟ್ | ೪೬೬ ಹೆಕ್ಟೇರು | ೨೧.೦೭.೧೯೯೮ | ೬೦ ವರ್ಷಗಳು |
ಝಕಾರ್‌ಪ್ಯಾಟಿಯಾ | ಉಝೊರೊಡ್ಸ್‌ಕ್ಯಿ ರೈಯೊನ್ ಮತ್ತು ಮುಕಾಚಿವ್ಸ್‌ಕ್ಯಿ ರೈಯೊನ್, ಝಕಾರ್‌ಪ್ಯಾಟಿಯಾ ಒಬ್ಲಾಸ್ಟ್ | ೭೩೭ ಹೆಕ್ಟೇರು | ೦೯.೦೧.೧೯೯೯ | ೩೦ ವರ್ಷಗಳು |
ಯಾವೊರಿವ್ | ಯಾವೊರಿವ್ಸ್‌ಕ್ಯಿ ರೈಯೊನ್, ಎಲ್ವಿವ್ ಒಬ್ಲಾಸ್ಟ್ | ೧೧೬,೦೦೦ ಹೆಕ್ಟೇರು | ೧೭.೦೨.೧೯೯೯ | ೦೧.೦೧.೨೦೨೦ರವರೆಗೆ |
ಇಂಟರ್‌ಪೋರ್ಟ್ ಕೋವೆಲ್ | ಕೋವೆಲ್, ವೊಲಿನ್ ಒಬ್ಲಾಸ್ಟ್ | ೫೭ ಹೆಕ್ಟೇರು | ೦೧.೦೧.೨೦೦೦ | ೨೦ ವರ್ಷಗಳು |
ಕ್ಯುರೊರ್ಟೊಪೊಲಿಸ್ ಟ್ರಸ್ಕಾವೆಟ್ಸ್ | ಟ್ರಸ್ಕಾವೆಟ್ಸ್, ಎಲ್ವಿವ್ ಒಬ್ಲಾಸ್ಟ್ | ೭೭೪ ಹೆಕ್ಟೇರು | ೦೧.೦೧.೨೦೦೦ | ೨೦ ವರ್ಷಗಳು |
ಮಿಕೋಲೈವ್ | ಮಿಕೋಲೈವ್, ಮಿಕೋಲೈವ್ ಒಬ್ಲಾಸ್ಟ್, ಹಡಗಿನ ಅಂಗಳ ಪ್ರದೇಶ, ಮತ್ತು ಹೊಂದಿಕೊಂಡಿರುವ ಪ್ರದೇಶ | ೮೬೫ ಹೆಕ್ಟೇರು | ೦೧.೦೧.೨೦೦೦ | ೩೦ ವರ್ಷಗಳು |
ಪೋರ್ಟ್ ಕ್ರಿಮ್ | ಕಿರ್ಕ್, ಕ್ರಿಮಿಯಾದ ಸ್ವಾಯತ್ತ ಗಣರಾಜ್ಯ | ೨೭ ಹೆಕ್ಟೇರು | ೦೧.೦೧.೨೦೦೦ | ೩೦ ವರ್ಷಗಳು |
ಪೋರ್ಟೊ-ಫ್ರಾಂಕೊ | ಒಡೆಸ್ಸಾ, ಒಡೆಸ್ಸಾ ಟ್ರೇಡ್ ಸೀ ಪೋರ್ಟ್‌ನ ಪ್ರದೇಶದ ಭಾಗ | ೩೨ ಹೆಕ್ಟೇರು | ೦೧.೦೧.೨೦೦೦ | ೨೫ ವರ್ಷಗಳು |
ರೇನಿ | ರೇನಿ, ಒಡೆಸ್ಸಾ ಒಬ್ಲಾಸ್ಟ್ | ೯೪ ಹೆಕ್ಟೇರು | ೧೭.೦೫.೨೦೦೦ | ೩೦ ವರ್ಷಗಳು |
* ಆರಂಭದಲ್ಲಿ ಕಾರ್ಯಾಚರಣೆಯ ಯೋಜಿತ ಸಮಯವನ್ನು ನೀಡಲಾಗಿದೆ. ೨೦೦೫ರ ಮಾರ್ಚ್ ೩೧ರಂದು ಎಲ್ಲಾ ವಲಯಗಳು ಮುಚ್ಚಿದ್ದವು.NCEEZ — ನೌತ್-ಕ್ರಿಮಿಯನ್ ಪ್ರಾಯೋಗಿಕ ಆರ್ಥಿಕ ವಲಯ.ಮೂಲಗಳು: [೯] Archived 2011-01-16 ವೇಬ್ಯಾಕ್ ಮೆಷಿನ್ ನಲ್ಲಿ. [೧೦] Archived 2016-12-20 ವೇಬ್ಯಾಕ್ ಮೆಷಿನ್ ನಲ್ಲಿ. [೧೧] Archived 2011-01-16 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು Пехник А.В., Іноземні інвестиції в економіку України. Навчальний посібник , Вид. «Знання», Київ ೨೦೦೭, ಪುಟಗಳು: ೪೯, ೩೧೦–೩೧೯ |
U.S.S.R.
[ಬದಲಾಯಿಸಿ]ಫಿನ್ಲೆಂಡ್ [ಸೂಕ್ತ ಉಲ್ಲೇಖನ ಬೇಕು] ಮತ್ತು ಯುಗೋಸ್ಲಾವಿಯಾಗೆ ಸಂಬಂಧಿಸಿ ಹೇಳುವುದಾದರೆ, ಆ ಸಂಸ್ಥಾನಗಳನ್ನು ಸೋವಿಯತ್ ಒಕ್ಕೂಟದ ಕಾರ್ಯನೀತಿಯು ವಿಶೇಷ ಆರ್ಥಿಕ ವಲಯಗಳಾಗಿ ಪರಿಗಣಿಸಿದ್ದೇ ಅವುಗಳ ಕ್ಷಿಪ್ರ ಆರ್ಥಿಕ ಬೆಳವಣಿಗೆಗೆ ಕಾರಣವಾಗಿತ್ತು; ಇದರಿಂದಾಗಿ, ಪಶ್ಚಿಮದ ತಂತ್ರಜ್ಞಾನಗಳು ಮತ್ತು ಪ್ರಾಯೋಗಿಕ-ಜ್ಞಾನಕ್ಕೆ ಅವು ಪ್ರವೇಶಾವಕಾಶವನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಇಂಥ ಉತ್ಪನ್ನಗಳು USSRಗೆ ರಫ್ತಾಗುವುದನ್ನು ಅನೇಕವೇಳೆ ನಿಷೇಧಿಸಲಾಯಿತು, ಅವು ಹೊಂದಿದ್ದ ದ್ವಂದ್ವ ಉದ್ದೇಶವೇ ಇದಕ್ಕೆ ಕಾರಣ ಎಂಬುದು ಗಮನಾರ್ಹ ಸಂಗತಿ. (U.S.S.R. ವಿಶೇಷ ಆರ್ಥಿಕ ವಲಯಗಳು)
ಉಲ್ಲೇಖಗಳು
[ಬದಲಾಯಿಸಿ]- ↑ [೧] ಲೆ "ಪ್ಯಾರಡಿಸ್" ಔ ಲೆ ಡ್ರೋಯ್ಟ್ ಫೆರಾ ಲಾ ಲೋಯ್, ಎಲ್'ಇಕೊ, ನವೆಂಬ್ರೆ ೨೦೧೦.
- ↑ [೨] ಹೆಚ್ಚಿನ ಓದಿಗೆ: SEZ ಸೆಟ್ ಟು ಫೈರ್ ಅಪ್ ಇಕನಾಮಿಕ್ ಗ್ರೋತ್
- ↑ "[[Burmese ಭಾಷೆ|Burmese]]: စစ်တွေနှင့် ကျောက်ဖြူမြို့တို့တွင် အထူးစီးပွားရေးဇုန် တည်ဆောက်သွားမည်ဟု သိရ[[Category:Articles containing Burmese-language text]]". Weekly Eleven News (in Burmese). 2010-08-22. Retrieved 2010-08-28.
{{cite news}}
: URL–wikilink conflict (help)CS1 maint: unrecognized language (link) - ↑ http://english.peopledaily.com.cn/೨೦೦೭೦೩/೧೩/eng೨೦೦೭೦೩೧೩_೩೫೭೦೨೯.html[ಶಾಶ್ವತವಾಗಿ ಮಡಿದ ಕೊಂಡಿ]
- ↑ ೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆಯ ಪಠ್ಯವು ಇಲ್ಲಿ ಕಂಡುಬರುತ್ತದೆ: http://www.peza.gov.ph/index.php?option=com_content&view=article&id=೯೭&Itemid=೫೫[ಶಾಶ್ವತವಾಗಿ ಮಡಿದ ಕೊಂಡಿ] or http://www.chanrobles.com/specialeconomiczoneact.htm
- ↑ ೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ, ಖಂಡ ೧೨
- ↑ ಪೂರ್ವೋಕ್ತ
- ↑ ೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ, ಖಂಡ ೨೩.
- ↑ ವಿವಿಧೋದ್ದೇಶದ ಹೂಡಿಕೆಗಳು ಸಂಹಿತೆ, ಕಲಮು ೩೯.
- ↑ ೧೯೯೫ರ ವಿಶೇಷ ಆರ್ಥಿಕ ವಲಯ ಕಾಯಿದೆ, ಖಂಡ ೨೪.
- ↑ ಇದನ್ನೂ ನೋಡಿ: PEZA-ನೋಂದಾಯಿತ ಆರ್ಥಿಕ ವಲಯ ಉದ್ದಿಮೆಗಳಿಗೆ ಲಭ್ಯವಿರುವ ಹಣಕಾಸಿನ ಉತ್ತೇಜನಗಳಿಗಾಗಿ ಇಲ್ಲಿ ನೋಡಿ: http://www.peza.gov.ph/index.php?option=com_content&view=article&id=೧೧೨&Itemid=೧೫೪[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.peza.gov.ph/index.php?option=com_content&view=article&id=೧೧೧&Itemid=೧೫೩[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.peza.gov.ph/index.php?option=com_content&view=article&id=೧೧೬&Itemid=೧೬೧[ಶಾಶ್ವತವಾಗಿ ಮಡಿದ ಕೊಂಡಿ]
- ↑ [೩] Archived 2009-09-11 ವೇಬ್ಯಾಕ್ ಮೆಷಿನ್ ನಲ್ಲಿ. ಪೋಲೆಂಡ್‌ನಲ್ಲಿನ SEZ- ಮೂಲ: ಪೋಲೆಂಡ್ ಸರ್ಕಾರ
- ಚೀ ಕಿಯಾನ್ ಲಿಯಾಂಗ್, ೨೦೦೭, ಎ ಟೇಲ್ ಆಫ್ ಟೂ ಕಂಟ್ರೀಸ್: ಓಪನ್‌ನೆಸ್ ಅಂಡ್ ಗ್ರೋತ್ ಇನ್ ಚೀನಾ ಅಂಡ್ ಇಂಡಿಯಾ [೧೨] Archived 2011-07-19 ವೇಬ್ಯಾಕ್ ಮೆಷಿನ್ ನಲ್ಲಿ., ಡೈನಮಿಕ್ಸ್, ಇಕನಾಮಿಕ್ ಗ್ರೋತ್, ಅಂಡ್ ಇಂಟರ್‌ನ್ಯಾಷನಲ್ ಟ್ರೇಡ್ (DEGIT) ಸಮಾವೇಶದ ಪ್ರಬಂಧ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸೌತ್ ಕಝಕ್ಸ್ತಾನ್ "ಓಂಟುಸ್ಟಿಕ್" ಸ್ಪೆಷಲ್ ಇಕನಾಮಿಕ್ ಜೋನ್ Archived 2011-07-22 ವೇಬ್ಯಾಕ್ ಮೆಷಿನ್ ನಲ್ಲಿ.
- ಇಂಡಿಯನ್ ಸ್ಪೆಷಲ್ ಇಕನಾಮಿಕ್ ಜೋನ್ಸ್
- ಎಕ್ಸ್ಪೋಟ್ ಪ್ರೊಸೆಸಿಂಗ್ ಜೋನ್ಸ್ ಆಫ್ ಪಾಕಿಸ್ತಾನ್
- PEZA ಫಿಲಿಪೈನ್ಸ್ Archived 2009-02-27 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾರತದ ವಿಶೇಷ ಆರ್ಥಿಕ ವಲಯಗಳ ನಕ್ಷೆ[ಶಾಶ್ವತವಾಗಿ ಮಡಿದ ಕೊಂಡಿ]
- ಓಪನ್ ಜಾಯಿಂಟ್ ಸ್ಟಾಕ್ ಕಂಪನಿ "ಸ್ಪೆಷಲ್ ಇಕನಾಮಿಕ್ ಜೋನ್ಸ್" (ರಷ್ಯಾ) Archived 2010-01-28 ವೇಬ್ಯಾಕ್ ಮೆಷಿನ್ ನಲ್ಲಿ.
- U.S.S.R. ವಿಶೇಷ ಆರ್ಥಿಕ ವಲಯಗಳು
- ಇಂಡಿಯಾ: ಸಿಟಿಜನ್ಸ್ ಗ್ರೂಪ್ ಡಿಮ್ಯಾಂಡ್ ಮೊರಟೋರಿಯಂ ಆನ್ SEZಸ್ ಒನ್ವರ್ಲ್ಡ್ ಸೌತ್ ಏಷ್ಯಾ Archived 2011-09-27 ವೇಬ್ಯಾಕ್ ಮೆಷಿನ್ ನಲ್ಲಿ.
- CS1 errors: URL–wikilink conflict
- CS1 maint: unrecognized language
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Wikipedia introduction cleanup from November 2010
- Articles with invalid date parameter in template
- All pages needing cleanup
- Articles covered by WikiProject Wikify from November 2010
- All articles covered by WikiProject Wikify
- Articles with hatnote templates targeting a nonexistent page
- Article sections to be split from November 2010
- Articles to be split from November 2010
- All articles to be split
- Articles containing Russian-language text
- Articles with unsourced statements from December 2010
- ವಿಶೇಷ ಆರ್ಥಿಕ ವಲಯಗಳು
- ಅಂತರರಾಷ್ಟ್ರೀಯ ವ್ಯವಹಾರ
- ಅಂತರರಾಷ್ಟ್ರೀಯ ವ್ಯಾಪಾರ
- ಅಂತರರಾಷ್ಟ್ರೀಯ ಆರ್ಥಿಕತೆ