ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
République Démocratique du Congo
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ದೇಶದ ಧ್ವಜ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ದೇಶದ ಲಾಂಛನ
ಧ್ವಜ ಲಾಂಛನ
ಧ್ಯೇಯ: Justice – Paix – Travail(ಫ್ರೆಂಚ್)
"ನ್ಯಾಯ-ಶಾಂತಿ-ದುಡಿಮೆ"
ರಾಷ್ಟ್ರಗೀತೆ: ದಿಬೌತ್ ಕಾಂಗೊಲೈಸ್

Location of ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ

ರಾಜಧಾನಿ ಕಿನ್ಶಾಸಾ
4°24′S 15°24′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಫ್ರೆಂಚ್
ಸರಕಾರ ಅರೆ ಅಧ್ಯಕ್ಷೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಜೋಸೆಫ್ ಕಬೀಲ
 - ಪ್ರಧಾನಿ ಆಂಟೋಯ್ನ್ ಗಿಝೆಂಗಾ
ಸ್ವಾತಂತ್ರ್ಯ  
 - ಬೆಲ್ಜಿಯಂನಿಂದ ಜೂನ್ 30 1960 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 2,344,858 ಚದರ ಕಿಮಿ ;  (12ನೆಯದು)
  905,351 ಚದರ ಮೈಲಿ 
 - ನೀರು (%) 3.3
ಜನಸಂಖ್ಯೆ  
 - 2007ರ ಅಂದಾಜು 63,655,000 (20ನೆಯದು)
 - 1984ರ ಜನಗಣತಿ 29,916,800
 - ಸಾಂದ್ರತೆ 25 /ಚದರ ಕಿಮಿ ;  (179ನೆಯದು)
65 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು $46.491 ಬಿಲಿಯನ್ (78ನೆಯದು)
 - ತಲಾ $774 (174ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
Increase 0.391 (167ನೆಯದು) – ಕಡಿಮೆ
ಚಲಾವಣಾ ನಾಣ್ಯ/ನೋಟು ಕಾಂಗೊಲೀಸ್ ಫ್ರಾಂಕ್ (CDF)
ಸಮಯ ವಲಯ WAT, CAT (UTC+1 to +2)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+1 to +2)
ಅಂತರಜಾಲ ಸಂಕೇತ .cd
ದೂರವಾಣಿ ಸಂಕೇತ +243

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಬೆಲ್ಜಿಯಂ ನ ಒಂದು ವಸಾಹತಾಗಿದ್ದಿತು. ಈ ದೇಶವು ಡಿ.ಆರ್. ಕಾಂಗೋ, ಕಾಂಗೋ ಕಿನ್ಶಾಸಾ, ಜಾಯಿರ್ ಎಂಬ ಇತರ ಹೆಸರುಗಳಿಂದಲೂ ಸಹ ಗುರುತಿಸಲ್ಪಡುತ್ತದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಆಫ್ರಿಕಾದ ಮೂರನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಮಧ್ಯ ಆಫ್ರಿಕಾದ ಗಣರಾಜ್ಯ ಮತ್ತು ಸುಡಾನ್ ಗಳು; ದಕ್ಷಿಣದಲ್ಲಿ ಉಗಾಂಡಾ, ರುವಾಂಡಾ, ಬುರುಂಡಿ, ಜಾಂಬಿಯಾ ಮತ್ತು ಅಂಗೋಲಾ ಗಳು; ಪ್ಪಶ್ಚಿಮಕ್ಕೆ ಕಾಂಗೋ ಗಣರಾಜ್ಯಗಳಿವೆ. ಪೂರ್ವದಲ್ಲಿ ಈ ದೇಶ ಮತ್ತು ಟಾಂಜಾನಿಯಾಗಳ ನಡುವೆ ಟಾಂಗನ್ಯೀಕಾ ಸರೋವರವಿರುವುದು. ಪಶ್ಚಿಮದಲ್ಲಿ ಸುಮಾರು ೪೦ ಕಿ.ಮೀ. ಗಳಷ್ಟು ಅಟ್ಲಾಂಟಿಕ್ ಮಹಾಸಾಗರದ ಕಿನಾರೆ ಪ್ರದೇಶವಿರುವುದು. ಕಾಂಗೋ ನದಿಯ ಕೊಳ್ಳವು ಸಂಪೂರ್ಣವಾಗಿ ಈ ರಾಷ್ಟ್ರದಲ್ಲಿಯೇ ಇದೆ. ಅಲ್ಲದೇ ನಾಡಿನ ಗಣನೀಯ ಭಾಗವು ಗೊಂಡಾರಣ್ಯವಾಗಿದೆ.