ಮೈದಾ
ಮೈದಾ ಹಿಟ್ಟಿನ ಮೂಲ ವಸ್ತು ಗೋಧಿ. ಗೋಧಿಯನ್ನು ಗಿರಣಿಗಳಲ್ಲಿ ಹುಡಿಮಾಡಿಸಿದಾಗ,ಇದರ ಬಣ್ಣವು ನಸುಹಳದಿಯಾಗಿ ಇರುವುದು. ಮೈದಾಹಿಟ್ಟನ್ನು ಧಾನ್ಯದ ಭ್ರೂಣಹಾರದಿಂದ (ಪಿಷ್ಟಭರಿತ ಬಿಳಿ ಭಾಗ) ತಯಾರಿಸಲಾದರೆ, ಗೋದಿಹಿಟ್ಟಿನಲ್ಲಿರುವ ನಾರುಯುಕ್ತ ತವುಡನ್ನು ಗಿರಣಿಯಲ್ಲಿ ತೆಗೆದು, ಈ ಹಿಟ್ಟನ್ನು ನುಣ್ಣಗೆ ನಯಗೊಳಿಸಿ, ಶುದ್ಧೀಕರಿಸಿ ಹಾಗು ಬೆನ್ಜೈಲ್ ಬೆನ್ಜೋಯಿಕ್ ಪೆರೋಕ್ಸೈಡ್ ಎನ್ನುವ ರಾಸಾಯನಿಕವನ್ನು ಬಳಸಿ ಬಿಳುಚಿಸಿದಾಗ(ಬ್ಲೀಚ್ ಮಾಡಿದಾಗ) ಅಚ್ಚ ಬಿಳಿಯ ಬಣ್ಣದ ಮೈದಾ ಹುಡಿಯು ಸಿದ್ದವಾಗುತ್ತದೆ. ಇದೇ ಕಾರಣದಿಂದಾಗಿ ಮೈದಾದಿಂದ ತಯಾರಿಸಿದ ಖಾದ್ಯಗಳ ಅತಿಸೇವನೆಯಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಾಂಗಗಳಲ್ಲಿ ಕಲ್ಲುಗಳು ಉದ್ಭವಿಸುವುದಲ್ಲದೆ ಮುಂತಾದ ಆರೋಗ್ಯದ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ.
ಮೂಲತಃ ಹಳದಿಯಾಗಿರುವ ಮೈದಾ ಬಿಳಿಬಣ್ಣದಲ್ಲಿ ಜನಪ್ರಿಯವಾಗಿದೆ.
ಇದು ನಿಕಟವಾಗಿ ಕೇಕ್ ಹಿಟ್ಟನ್ನು ಹೋಲುವ, ಮತ್ತು ವ್ಯಾಪಕವಾಗಿ ಭಾರತೀಯ ತ್ವರಿತ ಆಹಾರ, ಪೇಸ್ಟ್ರೀಗಳು ಹಾಗು ಬ್ರೆಡ್‍ನಂತಹ ಭಾರತೀಯ ಬೇಕರಿ ಉತ್ಪನ್ನಗಳು, ವಿವಿಧ ಸಿಹಿತಿಂಡಿಗಳು, ಮತ್ತು ಕೆಲವೊಮ್ಮೆ ಪರಾಠಾ ಮತ್ತು ನಾನ್ ನಂತಹ ಸಾಂಪ್ರದಾಯಿಕ ಭಾರತೀಯ ರೊಟ್ಟಿಗಳನ್ನು ತಯಾರಿಸಲು ಬಳಸಲಾಗುತ್ತದೆ.