ಪರಾಠಾ

ಪರಾಠಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಚಪಾತಿಯಂಥ ಖಾದ್ಯ.[೧] ಇದು ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ. ಪರಾಠಾ ಪದವು ಪರಟ್ ಮತ್ತು ಆಟಾ ಶಬ್ದಗಳ ಸಮ್ಮಿಲನವಾಗಿದೆ ಮತ್ತು ಅಕ್ಷರಶಃ ಇದರರ್ಥ ಬೇಯಿಸಿದ ಕಣಕದ ಪದರಗಳು.[೨]
ಇತಿಹಾಸ
[ಬದಲಾಯಿಸಿ]ಪರಾಠಾ ಎಂಬ ಹಿಂದೂಸ್ಥಾನಿ ಪದವು ಸಂಸ್ಕೃತದಿಂದ ಬಂದಿದೆ. ೧೩ ನೇ ಶತಮಾನದಲ್ಲಿ ಇಂದಿನ ಕರ್ನಾಟಕವನ್ನು ಆಳಿದ ಚಾಲುಕ್ಯ ರಾಜ ೩ನೇ ಸೋಮೇಶ್ವರನ ಕೃತಿಯಾದ ಮನಸೊಲ್ಲಾಸದಲ್ಲಿ ವಿವಿಧ ರೀತಿಯ ಗೋಧಿಯಿಂದ ತಯಾರಿಸಿದ ಖಾದ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ.[೩] ಬ್ಯಾನರ್ಜಿ ರವರ (೨೦೧೦) ಪ್ರಕಾರ, ಪರಾಠಾಗಳು ಪಂಜಾಬಿ ಮತ್ತು ಉತ್ತರ ಭಾರತದ ಅಡುಗೆಗೆ ಸಂಬಂಧಿಸಿವೆ. ಪರಾಠಾಗಳನ್ನು ವಿವಿಧ ರೀತಿಯ ಸ್ಟಫಿಂಗ್‌ಗಳೊಂದಿಗೆ ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ. ಬ್ಯಾನರ್ಜಿ ಹೇಳುವಂತೆ, ಮೊಘಲರು ಸಹ ಪರಾಠಾಗಳ ಬಗ್ಗೆ ಒಲವು ಹೊಂದಿದ್ದರು, ಇದು ಡಾಕೈ ಪರಾಠಾ (ಬಹುಪದರದ ಪರಾಠಾ)ವನ್ನು ತಯಾರಿಸಲು ಉತ್ತೇಜನ ನೀಡಿತು. ಡಾಕೈ ಪರಾಠಾ ಎಂಬ ಹೆಸರು ಬಾಂಗ್ಲಾದೇಶದ ಡಾಕಾದಿಂದ ಸಿಕ್ಕಿದೆ.
ಸರಳ ಮತ್ತು ಸ್ಟಫ್ಡ್ ಪ್ರಭೇದಗಳು
[ಬದಲಾಯಿಸಿ]ಭಾರತೀಯ ಉಪಖಂಡದ ಭಾಗದಲ್ಲಿ ಪರಾಠಾಗಳು ಅತ್ಯಂತ ಜನಪ್ರಿಯವಾದ ಫ್ಲಾಟ್ ಬ್ರೆಡ್‌ಗಳಲ್ಲಿ ಒಂದಾಗಿದೆ. ತವಾ ಮೇಲೆ ಸಂಪೂರ್ಣವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಲಟ್ಟಿಸಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಪರಾಠಾಗಳು ಚಪಾತಿ / ರೋಟಿಗಳಿಂತ ದಪ್ಪವಾಗಿರುತ್ತದೆ. ಇದಕಕೆ ಕಾರಣ ಪರಾಠಾ ವನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಸವರುತ್ತಾರೆ.ಹಾಗೂ ಕೆಲವೊಮ್ಮೆ ಕ್ಯಾರೆಟ್, ಬಟಾಟೆ ಯಂತಹ ತರಕಾರಿಗಳನ್ನು ಉಪಯೋಗಿಸಿ ಸ್ಟಫಿಂಗ್ ಮಾಡಲಾಗುತ್ತದೆ.
ಪರಾಠಾಗಳಿಗೆ ಸಾಮಾನ್ಯವಾಗಿ ಹಿಸುಕಿದ, ಮಸಾಲೆಯುಕ್ತ ಆಲೂಗಡ್ಡೆ, ದಾಲ್ (ಮಸೂರ), ಎಲೆ ತರಕಾರಿಗಳು, ಮೂಲಂಗಿಗಳು, ಹೂಕೋಸು ಅಥವಾ ಪನೀರ್ ಮುಂತಾದ ಅನೇಕ ಪರ್ಯಾಯಗಳನ್ನು ಸ್ಟಫಿಂಗ್ ಗಾಗಿ ಉಪಯೋಗಿಸಬಹುದು.[೪] ಪರಾಠಾಗಳನ್ನು ಉಪಾಹಾರ ಭಕ್ಷ್ಯವಾಗಿ ಅಥವಾ ಚಹಾ-ಸಮಯದಲ್ಲಿ ಲಘು ಆಹಾರವಾಗಿ ಸೇವಿಸಬಹುದು.
ಸೇವನೆ
[ಬದಲಾಯಿಸಿ]ಪರಾಠಾ ಭಾರತೀಯ ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ, ಇದನ್ನು ತುಪ್ಪ ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಸಾಮಾನ್ಯವಾಗಿ ಪರಾಠಾವನ್ನು ಬೆಣ್ಣೆಯೊಂದಿಗೆ ತಿನ್ನುತ್ತಾರೆ. ಮೊಸರು, ಹುರಿದ ಮೊಟ್ಟೆ, ಆಮ್ಲೆಟ್, ಮಟನ್ ಖೀಮಾ ಮಟನ್, ನಿಹಾರಿ, ಜೀರಾ ಆಲೂ, ದಾಲ್ ಅಥವಾ ರೈತದ ಜೊತೆಗೆ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುತ್ತಾರೆ.
ವಿಧಗಳು
[ಬದಲಾಯಿಸಿ]ಅಜ್ವೈನ್ ಪರಾಠಾ, ಆಲೂ ಪರಾಠಾ, ಆಲೂ ಚೀಸ್ ಪರಾಠಾ, ಅಂಡಾ ಪರಾಠಾ, ಬೂಂದಿ ಪರಾಠಾ, ಚನಾ ಪರಾಠಾ, ಚನಾ ದಾಲ್ ಪರಾಠಾ, ಚಿಕನ್ ಪರಾಠಾ,[೫] ದಾಲ್ ಪರಾಠಾ,ಗೋಬಿ ಪರಾಠಾ, ಜೈಪುರಿ ಪರಾಠಾ, ಕೇರಳ ಪರಾಠಾ, ಲಚ್ಚಾ ಪರಾಠಾ,ಗಾಜರ್ ಪರಾಠಾ, ಧನಿಯಾ ಪರಾಠಾ, ಡಾಕೈ ಪರಾಠಾ,ಚಿಲ್ಲೀ ಪರಾಠಾ,ಮಟರ್ ಪರಾಠಾ, ಮೀಠಾ ಪರಾಠಾ, ಮೇಥಿ ಪರಾಠಾ,[೬] ಮಟನ್ ಪರಾಠಾ,ಮಿಕ್ಸ್ ಪರಾಠಾ, ಪಾಲಕ್ ಪರಾಠಾ, ಪನೀರ್ ಪರಾಠಾ, ಪ್ಲೈನ್ ಪರಾಠಾ, ಪುದೀನಾ ಪರಾಠಾ,ಪ್ಯಾಸ್ ಕಾ ಪರಾಠಾ,ತಂದೂರಿ ಪರಾಠಾ, ಟೊಮೇಟೊ ಪರಾಠಾ,[೭] ಖೀಮಾ ಪರಾಠಾ,ಮಕ್ಕಾ ಪರಾಠಾ,ಲೌಕಿ ಪರಾಠಾ.
ಪರಾಠಾಕ್ಕಿರುವ ಇತರ ಹೆಸರುಗಳು
[ಬದಲಾಯಿಸಿ]ಪಾರಂಥ, ಪರೌನ್ಥಾ, ಪ್ರೋನ್ಥಾ, ಪಾರೊಂಟೆ(ಪಂಜಾಬಿಯಲ್ಲಿ)[೮], ಪೊರೋಟಾ(ಬಂಗಾಳಿ ಮತ್ತು ಮಲೆಯಾಳಂ), ಪಲಾಟಾ (ಬರ್ಮಾದಲ್ಲಿ), ಪೊರೋಥಾ(ಅಸ್ಸಾಮಿಯಲ್ಲಿ)[೯], ಫೊರೋತಾ (ಸಿಲೇಟಿ ಭಾಷೆಯಲ್ಲಿ) ಮತ್ತು ಫರಾತಾ (ಮೌರಿಟಿಯಸ್ ನಲ್ಲಿ, ಶ್ರೀಲಂಕಾ ಮತ್ತು ಮಾಲ್ಡೀವ್ಸ್).[೧೦]
ರೆಡಿಮೇಡ್ ಪರಾಠಾಗಳು
[ಬದಲಾಯಿಸಿ]ಪರಾಠಾಗಳನ್ನು ತಯಾರಿಸುವುದು ಕಷ್ಟಕರವಾಗಿದ್ದರಿಂದ ಇದೀಗ ಮಾರುಕಟ್ಟೆಯಲ್ಲಿ ರೆಡಿಮೇಡ್ ಪರಾಠಾಗಳೂ ಲಭ್ಯವಿದೆ.[೧೧] [೧೨]
ಉಲ್ಲೇಖಗಳು
[ಬದಲಾಯಿಸಿ]- ↑ "parantha Photos | Images of parantha - Times of India". The Times of India. Retrieved 5 January 2020.
- ↑ "Paratha, Pāraṭhā, Parathā: 3 definitions". www.wisdomlib.org. 15 July 2018. Retrieved 5 January 2020.
- ↑ "Parathas of India: 5 Types Of Parathas From Across The Country You Must Try". NDTV Food. Retrieved 5 January 2020.
- ↑ "ಆರ್ಕೈವ್ ನಕಲು". Archived from the original on 2019-12-27. Retrieved 2020-01-05.
- ↑ "Chicken Paratha or Chicken Kheema Paratha". YourHungerStop. 1 April 2015. Archived from the original on 10 ಜುಲೈ 2018. Retrieved 5 January 2020.
- ↑ Amit, Dassana (20 January 2013). "Methi Paratha". Dassana Amit Recipes. Retrieved 5 January 2020.
- ↑ "Onion Tomato Parathas". The Steaming Pot. 16 July 2011. Retrieved 5 January 2020.
- ↑ "Punjabi aloo paratha recipe | stuffed aloo paratha | aloo ka paratha |". www.tarladalal.com. Retrieved 5 January 2020.
- ↑ "TBI Food Secrets: 18 Traditional Indian Breads That You Must Absolutely Try Out". The Better India. 26 October 2016. Retrieved 5 January 2020.
- ↑ "How to make Sri Lankan egg roti/paratha". Island smile. 12 August 2019. Retrieved 5 January 2020.
- ↑ "Readymade Lachha Paratha". indiamart.com (in ಇಂಗ್ಲಿಷ್). Retrieved 5 January 2020.
- ↑ "Ready-to-eat food: These food packs will be a great dinner option - Times of India". The Times of India. Retrieved 5 January 2020.