ಮೊಸರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀರು ಬಸಿದ ಗಟ್ಟಿ ಮೊಸರು

ಮೊಸರು ಹಾಲನ್ನು ರೆನಿಟ್ (ಕರುಗಳ ಹೊಟ್ಟೆಯಲ್ಲಿರುವ ಕಿಣ್ವಗಳ ಸಂಕೀರ್ಣ) ಅಥವಾ ನಿಂಬೆರಸ ಅಥವಾ ವಿನಿಗರ್‌ನಂತಹ ಒಂದು ಆಮ್ಲೀಯ ಖಾದ್ಯ ಪದಾರ್ಥದೊಂದಿಗೆ ಹೆಪ್ಪುಗಟ್ಟಿಸಿ ನಂತರ (ಹ್ವೇ ಎಂದು ಕರೆಯಲಾಗುವ) ದ್ರವ ಭಾಗವನ್ನು ಬಸಿದು ಪಡೆಯಲಾಗುವ ಒಂದು ಕ್ಷೀರೋತ್ಪನ್ನ. ಹುಳಿಯಾಗಲು ಬಿಟ್ಟ ಹಾಲು (ಹಸಿ ಹಾಲು ಅಥವಾ ಲ್ಯಾಕ್ಟಿಕ್ ಆಮ್ಲದ ಬ್ಯಾಕ್ಟೀರಿಯಾ ಅಥವಾ ಮಡ್ಡಿಯನ್ನು ಸೇರಿಸಿದ ಪಾಶ್ಚೀಕರಿಸಿದ ಹಾಲು) ಸಹ ನೈಸರ್ಗಿಕವಾಗಿ ಮೊಸರನ್ನು ಉತ್ಪಾದಿಸುತ್ತದೆ, ಮತ್ತು ಹುಳಿ ಹಾಲಿನ ಕೆನೆಯನ್ನು ಈ ರೀತಿ ಉತ್ಪಾದಿಸಲಾಗುತ್ತದೆ. ಹೆಚ್ಚಿದ ಆಮ್ಲೀಯತೆಯು ಹಾಲಿನ ಪ್ರೋಟೀನುಗಳು (ಕೇಸೀನ್) ಘನರಾಶಿಯಾಗಿ ಸಿಕ್ಕಾಗುವಂತೆ ಮಾಡುತ್ತದೆ, ಮತ್ತು ಹಾಲು "ಮೊಸರಾಗುತ್ತದೆ".


"https://kn.wikipedia.org/w/index.php?title=ಮೊಸರು&oldid=408314" ಇಂದ ಪಡೆಯಲ್ಪಟ್ಟಿದೆ