ಕ್ಷೀರೋತ್ಪನ್ನ
Jump to navigation
Jump to search
ಕ್ಷೀರೋತ್ಪನ್ನಗಳು (ಹೈನೋತ್ಪನ್ನಗಳು, ಹೈನು) ಎಂದರೆ ಮುಖ್ಯವಾಗಿ ದನಗಳು, ಎಮ್ಮೆಗಳು, ಮೇಕೆಗಳು, ಕುರಿಗಳು, ಒಂಟೆಗಳು, ಮತ್ತು ಮಾನವರಂತಹ ಸಸ್ತನಿಗಳ ಹಾಲಿನಿಂದ ಉತ್ಪಾದಿಸಲಾದ ಅಥವಾ ಅದನ್ನು ಹೊಂದಿರುವ ಒಂದು ಬಗೆಯ ಆಹಾರ. ಕ್ಷೀರೋತ್ಪನ್ನಗಳಲ್ಲಿ ಮೊಸರು, ಗಿಣ್ಣು, ಮತ್ತು ಬೆಣ್ಣೆಯಂತಹ ಆಹಾರ ಪದಾರ್ಥಗಳು ಸೇರಿವೆ.[೧] ಕ್ಷೀರೋತ್ಪನ್ನಗಳನ್ನು ಉತ್ಪಾದಿಸುವ ಸ್ಥಳವನ್ನು ಡೈರಿ ಅಥವಾ ಡೈರಿ ಕಾರ್ಖಾನೆ ಎಂದು ಕರೆಯಲಾಗುತ್ತದೆ. ಕ್ಷೀರೋತ್ಪನ್ನಗಳನ್ನು ವಿಶ್ವದಾದ್ಯಂತ ಸೇವಿಸಲಾಗುತ್ತದೆ.
ಆರೋಗ್ಯ[ಬದಲಾಯಿಸಿ]
ಕ್ಷೀರೋತ್ಪನ್ನಗಳು ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಹಾಲಿನ ಅಲರ್ಜಿ ಇರುವ ವ್ಯಕ್ತಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು.
ಕ್ಷೀರೋತ್ಪನ್ನಗಳ ಅತಿಯಾದ ಸೇವನೆಯು ಆಹಾರಕ್ಕೆ ಗಣನೀಯ ಪ್ರಮಾಣದ ಕೊಲೆಸ್ಟರಾಲ್ ಮತ್ತು ಪರಿಷ್ಕರಿಸಿದ ಕೊಬ್ಬಿನ ಕೊಡುಗೆ ನೀಡಬಹುದು. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು, ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಉಲ್ಲೇಖಗಳು[ಬದಲಾಯಿಸಿ]
- ↑ "Dairy | Clemson University, South Carolina". www.clemson.edu. Retrieved 2016-11-11.