ಮೂಲಂಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂಲಂಗಿ
Radish 3371103037 4ab07db0bf o.jpg
Radishes
Egg fossil classification
Kingdom:
(unranked):
(unranked):
Eudicots
(unranked):
Order:
Family:
Genus:
Species:
R. sativus
Binomial nomenclature
Raphanus sativus

ಮೂಲಂಗಿ ಸಸ್ಯಹಾರಿಗಳ ಬಹು ಬಳಕೆಯ ತರಕಾರಿ. ಸಲಾಡ್ ಒಂದೇ ಅಲ್ಲ ಬಗೆ ಬಗೆಯಲ್ಲಿ ಅದನ್ನು ಸೇವಿಸಲಾಗುತ್ತೆ. ಮೂಲಂಗಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಂಶವಿದೆ. ಮೂಲಂಗಿ ಕೇವಲ ರುಚಿಯೊಂದೇ ಅಲ್ಲ, ಅದರಲ್ಲಿ ರೋಗನಿರೋಧಕ ಶಕ್ತಿ ಇದೆ.[೧]

ಪೋಷಕಾಂಶಗಳು[ಬದಲಾಯಿಸಿ]

೧೦೦ ಗ್ರಾಂ ಮೂಲಂಗಿಯಲ್ಲಿರುವ ಪೋಷಕಾಂಶಗಳು

ಸಾರಜನಕ ೦.೭ ಗ್ರಾಂ
ಪಿಷ್ಟ ೩.೪ ಗ್ರಾಂ
ಮೇದಸ್ಸು ೦.೧ ಗ್ರಾಂ
ಖನಿಜಾಂಶ ೦.೬ ಗ್ರಾಂ
ನಾರಿನಾಂಶ ೦.೮ ಗ್ರಾಂ
ರಂಜಕ ೨೨ ಗ್ರಾಂ
ಸೋಡಿಯಂ ೩೩ ಮಿಲಿಗ್ರಾಂ
ಪೊಟ್ಯಾಷಿಯಂ ೧೩೮ ಮಿಲಿಗ್ರಾಂ
ರೈಬೋಫ್ಲೆವಿನ್ ೦.೦೨ ಮಿಲಿಗ್ರಾಂ
ಆಕ್ಸಾಲಿಕ್ ಆಮ್ಲ ಮಿಲಿಗ್ರಾಂ
ಎ ಜೀವಸತ್ವ ಐ. ಯು.
ಸಿ ಜೀವಸತ್ವ ೧೫ ಮಿಲಿಗ್ರಾಂ
ಸುಣ್ಣ ೫೦ ಮಿಲಿಗ್ರಾಂ
ಕಬ್ಬಿಣ ೦.೪ ಮಿಲಿಗ್ರಾಂ
ಥಯಾಮಿನ್ ೦.೪ ಮಿಲಿಗ್ರಾಂ


Daikon.Japan.jpg

ಮೂಲಂಗಿ (ರ್‍ಯಾಫ಼್ಯಾನಸ್ ಸ್ಯಾಟೀವಸ್) ಯೂರೋಪ್‍ನಲ್ಲಿ ಪೂರ್ವ-ರೋಮನ್ ಕಾಲದಲ್ಲಿ ಒಗ್ಗಿಸಲಾದ ಬ್ರ್ಯಾಸಿಕೇಸಿಯಿ ಕುಟುಂಬದ ಒಂದು ತಿನ್ನಬಹುದಾದ ಗಡ್ಡೆತರಕಾರಿ. ಅವನ್ನು ವಿಶ್ವಾದ್ಯಂತ ಬೆಳೆಸಲಾಗುತ್ತದೆ ಮತ್ತು ಸೇವಿಸಲಾಗುತ್ತದೆ. ಮೂಲಂಗಿ ಗಾತ್ರ, ಬಣ್ಣ ಮತ್ತು ಬೇಕಾಗುವ ಬೇಸಾಯ ಸಮಯಾವಧಿಯಲ್ಲಿ ಬದಲಾಗುವ ಅನೇಕ ಬಗೆಗಳನ್ನು ಹೊಂದಿದೆ.

ಪೌಷ್ಟಿಕಾಂಶ[ಬದಲಾಯಿಸಿ]

ಇದು ಹಲವಾರು ಪೌಷ್ಟಿಕಾಂಶಗಳಿಂದ ಕೂಡಿದ್ದು, ವಿವರ ಇಲ್ಲಿದೆ.

Radishes, raw
Nutritional value per 100 g (3.5 oz)
ಆಹಾರ ಚೈತನ್ಯ 66 kJ (16 kcal)
ಶರ್ಕರ ಪಿಷ್ಟ 3.4 g
- ಸಕ್ಕರೆ 1.86 g
- ಆಹಾರ ನಾರು 1.6 g
ಕೊಬ್ಬು 0.1 g
Protein 0.68 g
Thiamine (vit. B1) 0.012 mg (1%)
Riboflavin (vit. B2) 0.039 mg (3%)
Niacin (vit. B3) 0.254 mg (2%)
Pantothenic acid (B5) 0.165 mg (3%)
Vitamin B6 0.071 mg (5%)
Folate (vit. B9) 25 μg (6%)
Vitamin C 14.8 mg (18%)
ಕ್ಯಾಲ್ಸಿಯಂ 25 mg (3%)
ಕಬ್ಬಿಣ ಸತ್ವ 0.34 mg (3%)
ಮೆಗ್ನೇಸಿಯಂ 10 mg (3%)
ಮ್ಯಾಂಗನೀಸ್ 0.069 mg (3%)
ರಂಜಕ 20 mg (3%)
ಪೊಟಾಸಿಯಂ 233 mg (5%)
ಸತು 0.28 mg (3%)
Fluoride 6 µg
Link to USDA Database entry
Percentages are roughly approximated
using US recommendations for adults.
Source: USDA Nutrient Database

ಉಪಯೋಗಗಳು[ಬದಲಾಯಿಸಿ]

  • ಮೂಲಂಗಿ ಸೇವನೆಯಿಂದ ಅದರಲ್ಲಿರುವ ವಿಟಿಮಿನ್ ಸಿ ನಮ್ಮ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಇದು ಕ್ಯಾನ್ಸರ್ ಬರುವುದನ್ನೂ ತಡೆಯಬಲ್ಲದು.
  • ಕೆಂಪು ರಕ್ತಕಣಗಳ ಬೆಳವಣಿಗೆ ಹಾಗೂ ಕಾಮಾಲೆ ರೋಗದ ಚಿಕಿತ್ಸೆಗೆ ಸಹಕಾರಿ. ಮೂಲಂಗಿಯ ಬೇರಿನ ಭಾಗ ಮಾತ್ರವಲ್ಲ, ಅದರ ಸೊಪ್ಪಿನ ಬಳಕೆ ಕೂಡ ಉಪಯುಕ್ತ.
  • ಮೂಲಂಗಿ ಸೇವಿಸಿದರೆ ಬೇಗ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವವವನ್ನೇ ನೀಡುತ್ತದೆ. ಅಂದರೆ ಅದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ತೆಳ್ಳಗಾಗಬೇಕು ಎನ್ನುವವರು, ತಮ್ಮ ತಿನ್ನುವ ಚಟವನ್ನು ನಿಯಂತ್ರಿಸಿಕೊಳ್ಳಬೇಕು ಎಂಬುವವರು ಮೂಲಂಗಿ ಸಹಕಾರಿಯಾಗತ್ತದೆ.
  • ಇನ್ನು, ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಬಳಸಲು ವೈದ್ಯರೇ ಸಲಹೆ ನೀಡುತ್ತಾರೆ.
  • ಮೂತ್ರಕೋಶ ಮತ್ತು ಮೂತ್ರಪಿಂಡವನ್ನು ಶುಚೀಕರಿಸಲು ಸಹಕಾರಿಯಾದ ಮೂಲಂಗಿ ಸೇವನೆಯಿಂದ ಉರಿಮೂತ್ರ ಮುಂತಾದ ಮೂತ್ರ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ಹೊಂದಲು ಅನುವಾಗುತ್ತದೆ.
  • ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ಸಹಕಾರಿ.
  • ಅಸ್ತಮ ಮುಂತಾದ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುವವರಿಗೆ ಮೂಲಂಗಿ ಸೇವನೆ ಒಳ್ಳೆಯದು.
  • ಹಸಿ ಮೂಲಂಗಿಯ ಚೂರುಗಳಿಗೆ ನಿಂಬೆರಸ, ಕಾಳು ಮೆಣಸಿನಪುಡಿ ಮತ್ತು ಉಪ್ಪು ಬೆರೆಸಿ ತಿನ್ನುವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣ ನಿವಾರಣೆಯಾಗುತ್ತದೆ.
  • ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
  • ಚೇಳು ಕುಟುಕಿದ ಜಾಗಕ್ಕೆ ಮೂಲಂಗಿ ಮತ್ತು ಉಪ್ಪನ್ನು ಅರೆದು ಹಚ್ಚಿದರೆ ವಿಷ ಏರುವುದಿಲ್ಲ ಮತ್ತು ಉರಿ ಕಮ್ಮಿಯಾಗುತ್ತದೆ.
  • ಊಟದಲ್ಲಿ ಹಸಿಮೂಲಂಗಿಯನ್ನು ಸೇವಿಸುವುದರಿಂದ ಕಣ್ಣು,ಮೂಗು,ಕಿವಿ ಮತ್ತು ಗಂಟಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನವೂ ಹಸಿಮೂಲಂಗಿಯನ್ನು ಬಳಸಿ, ಒಳ್ಳೆಯದು.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಮೂಲಂಗಿ&oldid=962114" ಇಂದ ಪಡೆಯಲ್ಪಟ್ಟಿದೆ