ತಾಯಿಬೇರು
Jump to navigation
Jump to search

ಸಸ್ಯಗಳಲ್ಲಿನ ಎರಡು ಬಗೆಯ ಬೇರು ವ್ಯವಸ್ಥೆಗಳು. ಹೋಲುವ ಗಾತ್ರಗಳ ಅನೇಕ ಬೇರುಗಳು ಇರುವುದು ನಾರಿನಂಥ ಬೇರು ವ್ಯವಸ್ಥೆಯ (A) ಲಕ್ಷಣವಾಗಿದೆ. ತದ್ವಿರುದ್ಧವಾಗಿ, ತಾಯಿಬೇರು ವ್ಯವಸ್ಥೆಯನ್ನು (B) ಬಳಸುವ ಸಸ್ಯಗಳು ಒಂದು ಮುಖ್ಯಬೇರನ್ನು ಬೆಳೆಸಿಕೊಳ್ಳುತ್ತವೆ. ಹೆಚ್ಚು ಸಣ್ಣಗಿರುವ ಬೇರುಗಳು ತಾಯಿಬೇರಿನಿಂದ ಕವಲೊಡೆಯುತ್ತವೆ. ಅಕ್ಷರಗಳು ಬೇರುಗಳ ಆರಂಭವನ್ನು ಗುರುತಿಸುತ್ತವೆ.
ತಾಯಿಬೇರು ಎಂದರೆ ಒಂದು ದೊಡ್ಡ, ಮಧ್ಯದಲ್ಲಿರುವ ಮತ್ತು ಪ್ರಧಾನವಾದ ಬೇರಾಗಿರುತ್ತದೆ. ಇದರಿಂದ ಇತರ ಬೇರುಗಳು ಪಾರ್ಶ್ವಕ್ಕೆ ಅಂಕುರಿಸುತ್ತವೆ. ಸಾಮಾನ್ಯವಾಗಿ ತಾಯಿಬೇರು ಸ್ವಲ್ಪಮಟ್ಟಿಗೆ ನೆಟ್ಟಗಿದ್ದು ಬಹಳ ದಪ್ಪವಾಗಿರುತ್ತದೆ, ಮತ್ತು ಕ್ರಮೇಣ ಮೊನಚಾಗುವ ಆಕಾರವನ್ನು ಹೊಂದಿದ್ದು ನೇರವಾಗಿ ಕೆಳಮುಖವಾಗಿ ಬೆಳೆಯುತ್ತದೆ.[೧] ಗಜ್ಜರಿಯಂತಹ ಕೆಲವು ಸಸ್ಯಗಳಲ್ಲಿ, ತಾಯಿಬೇರು ಬಹಳ ಅಭಿವೃದ್ಧಿಗೊಂಡ ಒಂದು ಶೇಖರಣಾ ಅಂಗವಾಗಿರುತ್ತದೆ. ಹಾಗಾಗಿ ಅದನ್ನು ತರಕಾರಿಯಾಗಿ ಕೃಷಿಮಾಡಲಾಗುತ್ತದೆ.
ಉಲ್ಲೇಖಗಳು[ಬದಲಾಯಿಸಿ]
- ↑ Botany Manual: Ohio State University Archived 2004-08-06 at the Wayback Machine.