ವಿಷಯಕ್ಕೆ ಹೋಗು

ಗಜ್ಜರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[ಕೊಂಡಿಗಳನ್ನು ಸರಿಪಡಿಸಿ]

ಗಜ್ಜರಿ
ಗಜ್ಜರಿಯ ಪುಷ್ಪ ಪತ್ರ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
ಡಿ. ಕಾರೋಟ
Binomial name
ಡಾಕಸ್ ಕಾರೋಟ
Daucus carota subsp. maximus

ಗಜ್ಜರಿಯು (ಕ್ಯಾರಟ್) (ಡಾಕಸ್ ಕ್ಯಾರೋಟಾ ಉಪಜಾತಿ. ಸಟೈವಸ್) ಸಾಮಾನ್ಯವಾಗಿ ಕಿತ್ತಳೆ, ನೇರಳೆ, ಕೆಂಪು, ಬಿಳಿ, ಅಥವಾ ಹಳದಿ ಬಣ್ಣವುಳ್ಳ, ತಾಜಾ ಇದ್ದಾಗ ಗರಿಗರಿ ರಚನೆ ಹೊಂದಿರುವ ಒಂದು ಗಡ್ಡೆ ತರಕಾರಿ. ಗಜ್ಜರಿಯ ತಿನ್ನಲರ್ಹವಾದ ಭಾಗವು ಒಂದು ತಾಯಿಬೇರಾಗಿದೆ. ಅದು ಯೂರಪ್ ಮತ್ತು ನೈಋತ್ಯ ಏಷ್ಯಾಕ್ಕೆ ಸ್ಥಳೀಯವಾದ ಕಾಡು ಗಜ್ಜರಿ ಡಾಕಸ್ ಕ್ಯಾರೋಟಾದ ಒಂದು ದೇಶೀಯ ಪ್ರಕಾರ. ಪರ್ಷಿಯಾದಲ್ಲಿ ಮೂಲತಃ ಇದರ ಕೃಷಿಯನ್ನು ಅದರ ಎಲೆಗಳು ಮತ್ತು ಬೀಜಗಳಿಗಾಗಿ ಮಾಡುತ್ತಿದ್ದರು. ಸಾಮಾನ್ಯವಾಗಿ ಇದರ ಗೆಡ್ಡೆಗಳು ತರಕಾರಿಯಾಗಿ ಬಳಕೆಯಾಗುತ್ತಿದ್ದರೂ ಇದರ ಹಸಿರೆಲೆಗಳನ್ನೂ ಕೆಲವೊಮ್ಮೆ ಬಳಸುತ್ತಾರೆ. 

ಅಪಿಯಾಸಿಯೆ (Apiaceae) ಕುಟುಂಬದಲ್ಲಿ ಕ್ಯಾರೆಟ್ ಒಂದು ದ್ವೈವಾರ್ಷಿಕ ಸಸ್ಯ. ಇದು ಗೆಡ್ಡೆಗಳಾಗಿ ಬೆಳೆಯುವ ಮೊದಲು ನೆಲಕ್ಕೆ ಹತ್ತಿರದಲ್ಲಿಯೇ ವೃತ್ತಾಕಾರದ ಎಲೆಗಳನ್ನು ಹೋಲುವ ರಚನೆಗಳಾಗಿ ಬೆಳೆಯುತ್ತದೆ. ಬೇಗನೆ ಬೆಳೆಯುವ ತಳಿಗಳು ಬೀಜವನ್ನು ಬಿತ್ತಿದ ೯೦ ದಿನಗಳಲ್ಲಿ ಕಟಾವಿಗೆ ಬಂದರೆ ನಿಧಾನವಾಗಿ ಬೆಳೆಯುವ ತಳಿಗಳು ೧೨೦ ದಿನಗಳನ್ನು ತೆಗೆದುಕೊಳ್ಳುತ್ತವೆ. ಇದರ ಗಡ್ಡೆಗಳು ಅತ್ಯುತ್ತಮವಾದ ಆಲ್ಫಾ ಮತ್ತು ಬೀಟಾ ಕ್ಯಾರೋಟೀನ್ ಗಳನ್ನು ಹೊಂದಿರುತ್ತವೆ. ಇವು ವಿಟಮಿನ್ ಕೆಮತ್ತು ವಿಟಮಿನ್ ಬಿ೬ ಗಳ ಉತ್ತಮವಾದ ಮೂಲವಾಗಿವೆ. 

ವ್ಯುತ್ಪತ್ತಿ

[ಬದಲಾಯಿಸಿ]

ಇಂಗ್ಲಿಷ್ ಭಾಷೆಯಲ್ಲಿ ಈ ಪದವನ್ನು ೧೫೩೦ರಲ್ಲಿ ಬಳಸಿರುವುದು ಕಂಡುಬರುತ್ತದೆ. ಇದನ್ನು ಮಧ್ಯ ಫ್ರೆಂಚ್ ನಿಂದ ಎರವಲು ಪಡೆದಿರಬಹುದು.[೧] ಇದಕ್ಕೆ ಸಂವಾದಿಯಾದ ಪದಗಳನ್ನು ಲ್ಯಾಟಿನ್ ಮತ್ತು ಗ್ರೀಕ್ ಪದಗಳಲ್ಲಿಯೂ ಕಾಣಬಹುದು. ಇಂಡೋ-ಯುರೋಪಿಯನ್ ಭಾಷೆಯಲ್ಲಿ ಪ್ರಾಣಿಗಳ ಕೊಂಬಿನಂತಹ ರಚನೆಯ ಕಾರಣಕ್ಕಾಗಿ ಕೊಂಬು ಎಂಬ ಅರ್ಥವುಳ್ಳ ಕೆರ್ (*ker) ಎಂಬ ಶಬ್ದದಿಂದ ಇದನ್ನು ಸೂಚಿಸುತ್ತಿದ್ದರು. 

ಇತಿಹಾಸ

[ಬದಲಾಯಿಸಿ]

ಲಿಖಿತ ಇತಿಹಾಸ ಮತ್ತು ಆಣ್ವಿಕ ಆನುವಂಶಿಕ ಅಧ್ಯಯನಗಳು ದೇಶೀಯ ಕ್ಯಾರೆಟ್ ಮಧ್ಯ ಏಷ್ಯಾದ ಮೂಲದ್ದೆಂದು ಸೂಚಿಸುತ್ತವೆ.[೨] ಇದರ ಕಚ್ಚಾಸ್ವರೂಪದ ಮೂಲ ಬಹುಶಃ ಪರ್ಷಿಯಾ ಇರಬಹುದು. ನಂತರದ ಶತಶತಮಾನಗಳಲ್ಲಿ ಇದರ ಸಿಹಿಯನ್ನು ಹೆಚ್ಚಿಸುವಲ್ಲಿ ಹಾಗೂ ಇದರ ವನ್ಯಗುಣಗಳನ್ನು ಕಡಿಮೆಗೊಳಿಸುವ ಆಯ್ದ ತಳಿಗಳನ್ನು ಬೆಳೆಸುತ್ತಾ ಈಗಿನ ರೂಪದ ಕ್ಯಾರೆಟ್ ಗಳನ್ನು ಬೆಳೆಯುತ್ತಿರಬಹುದು.

ಒಂದು ಚಿತ್ರಣ ಲೇಬಲ್ "ತೋಟದ" ಕ್ಯಾರೆಟ್,  ಜೂಲಿಯಾನ Anicia ಕೋಡೆಕ್ಸ್, 6 ನೇ ಶತಮಾನ AD Constantinopolitan ಪ್ರತಿಯನ್ನು Dioscorides' 1ನೇ ಶತಮಾನದ ಗ್ರೀಕ್ pharmacopoeia. ಎದುರಿನ ಪುಟದ ಉಲ್ಲೇಖ "ಗೆಡ್ಡೆಗಳನ್ನು ಬೇಯಿಸಿ ತಿನ್ನಬಹುದು."[೩]

ಮೊದಮೊದಲು ಕ್ಯಾರೆಟ್ ಗಳನ್ನು ಗೆಡ್ಡೆಗಳಿಗಿಂತಲೂ ಅದರ ಸುವಾಸಿತ ಎಲೆಗಳಿಗಾಗಿ ಮತ್ತು ಬೀಜಗಳಿಗಾಗಿ ಬೆಳೆಯುತ್ತಿದ್ದರು. ಕ್ಯಾರೆಟ್ ಬೀಜಗಳು ಕ್ರಿ.ಪೂ.೨೦೦೦-೩೦೦೦ ಹೊತ್ತಿಗೇ ಸ್ವಿಟ್ಜರ್ಲ್ಯಾಂಡ್ ಮತ್ತು ದಕ್ಷಿಣ ಜರ್ಮನಿಗಳಲ್ಲಿ ಕಂಡುಬಂದಿವೆ.[೪]  ಪಾರ್ಸ್ಲಿ, ಕೊತ್ತಂಬರಿ ಸೊಪ್ಪು, ಕೊತ್ತಂಬರಿ, ಜೀರಿಗೆ, ಅನಿಸ್, ಸಬ್ಬಸಿಗೆ ಮತ್ತು ಜೀರಿಗೆ ಮೊದಲಾದ  ಕ್ಯಾರೆಟ್ ನ ಹತ್ತಿರದ ಸಂಬಂಧಿ  ತಳಿಗಳು  ಈಗಲೂ ಸುವಾಸನೆ ಮತ್ತು ಬೀಜಗಳಿಗಾಗಿ  ಬೆಳೆಯಲ್ಪಡುತ್ತಿವೆ. ಶಾಸ್ತ್ರೀಯ ಮೂಲಗಳ ಮೊದಲ ಉಲ್ಲೇಖದ ಪ್ರಕಾರ 1 ನೇ ಶತಮಾನದ ರೋಮನ್ನರು ಸೇವಿಸಿದ ಒಂದು ಗೆಡ್ಡೆ ತರಕಾರಿ ಎಂದು ಭಾವಿಸಲಾಗಿರುವ ಪ್ಯಾಸ್ಟಿನಾಕ (pastinaca),[೫] ಕ್ಯಾರೆಟ್ ಅಥವಾ ಅದಕ್ಕೆ ನಿಕಟವಾಗಿ ಸಂಬಂಧಿಸಿದ ಪಾರ್ಸ್ನಿಪ್[೬][೭] ಆಗಿರಬೇಕೆಂದು ಭಾವಿಸಲಾಗಿದೆ.

ಡಿಸ್ಕಾರೈಡನ ಒಂದನೇ ಶತಮಾನದ ಗಿಡಮೂಲಿಕೆ ಮತ್ತು ಔಷಧಕ್ಕೆ ಸಂಬಂಧಿಸಿದ ವೈದ್ಯಸಮಹಿತೆಯಾದ ಡೆ ಮಅಟೀರಿಯ ಮೆಡಿಕಾ (De Materia Medica) ಎಂಬ ಪುಸ್ತಕದ ಕಾಂಸ್ಟಾಂಟಿನೋಪಾಲಿಟನ್ನ ನಕಲಾದ ಕ್ರಿ.ಶ. ೬ನೇ ಶತಮಾನದ ಪೂರ್ವ ರೋಮನ್ನಿನ ಜೂಲಿಯಾನ ಅನಿಸಿಯಾ ಕೊಡೆಕ್ಸ (Juliana Anicia Codex) ಎಂಬ ಪುಸ್ತಕದಲ್ಲಿ ಈ ಸಸ್ಯವನ್ನು ಚಿತ್ರಿಸಲಾಗಿದೆ ಮತ್ತು ವಿವರಿಸಲಾಗಿದೆ. ಮೂರು ವಿಧದ ಕ್ಯಾರೆಟ್ ಗಳನ್ನು ವರ್ಣಿಸಲಾಗಿದೆ ಮತ್ತು ಗೆಡ್ಡೆಗಳನ್ನು ಬೇಯಿಸಿ ತಿನ್ನಬಹುದೆಂದು ವಿವರಿಸಲಾಗಿದೆ.[೮]

ಒಂದು ಶ್ರೇಣಿಯ ಬಣ್ಣಗಳ ಕ್ಯಾರೆಟ್

 ಸ್ಪೇನ್ ದೇಶದಲ್ಲಿ ಮೂರ್ಸ್ (Moors) ೮ ನೇ ಶತಮಾನದಲ್ಲಿ ಈ ಸಸ್ಯವನ್ನು ಪರಿಚಯಿಸಿದರು. ೧೦ ನೇ ಶತಮಾನದಲ್ಲಿ, ಪಶ್ಚಿಮ ಏಷ್ಯಾ, ಭಾರತ ಮತ್ತು ಯುರೋಪ್ ಗಳಲ್ಲಿನ ಗೆಡ್ಡೆಗಳು ನೇರಳೆ ಬಣ್ಣದಲ್ಲಿದ್ದವು.[೯] ಸುಮಾರು ಇದೇ ಸಮಯದಲ್ಲಿ ಅಫ್ಘಾನಿಸ್ಥಾನದಲ್ಲಿ ಆಧುನಿಕ ಕ್ಯಾರೆಟ್ ಹುಟ್ಟಿಕೊಂಡಿತು.[೧೦] ೧೧ನೇ ಶತಮಾನದ ಯಹೂದಿ ವಿದ್ವಾಂಸ ಸಿಮಿಯೋನ್ ಸೇಥ್ ಮತ್ತು ೧೨ನೇ ಶತಮಾನದ ಅರಬ್-ಅಂಡಾಲೂಸಿಯ ಕೃಷಿಕ ಇಬ್ನ್ ಅಲ್ ಅವ್ವಮ್ ( Ibn al-'Awwam) ಕೆಂಪು ಮತ್ತು ಹಳದಿ ಕ್ಯಾರೆಟ್ ಗಳನ್ನು ವರ್ಣಿಸಿದ್ದಾರೆ.https://kn.wikipedia.org/wiki/Carrot#cite_note-Dalby_2003-16 ಕ್ಯಾರೆಟ್ ಕೃಷಿ ಚೀನಾದಲ್ಲಿ ೧೪ನೇ ಶತಮಾನದಲ್ಲಿ, ಮತ್ತು ಜಪಾನ್ ದಲ್ಲಿ ೧೮ನೇ ಶತಮಾನದಲ್ಲಿ ಕಂಡುಬರುತ್ತದೆ.

ನೆದರ್ಲ್ಯಾಂಡ್ಸ್ ದೇಶದಲ್ಲಿ ೧೭ನೇ ಶತಮಾನದಲ್ಲಿ,[೧೧] ಕಿತ್ತಳೆ ಬಣ್ಣದ ಕ್ಯಾರೆಟ್ ಕಂಡುಬಂದಿತು. ವಾಸ್ತವವಾಗಿ ಆ ಸಮಯದಲ್ಲಿ ಡಚ್ ಧ್ವಜ ಕಿತ್ತಳೆಯನ್ನು ಒಳಗೊಂಡಿತ್ತು.  ಆಧುನಿಕ ಕ್ಯಾರೆಟ್ ಗಳನ್ನು ಪ್ರಾಚೀನ ವಸ್ತುಸಂಗ್ರಾಹಕನಾದ ಜಾನ್ ಅಬ್ರೇ (೧೬೨೬-೧೬೯೭) ಹೀಗೆ ವಿವರಿಸುತ್ತಾರೆ "ಕ್ಯಾರೆಟ್ ಗಳನ್ನು ಮೊದಲು ಸೊಮರ್ಸೆಟ್ಶೈರ್ ನ ಬೆಕ್ಕಿಂಗ್ಟನ್ ನಲ್ಲಿ ಬಿತ್ತಲಾಯಿತು. ತಾವು ಮೊದಲು(೧೬೬೮ರಲ್ಲಿ) ಇಲ್ಲಿಗೆ ಅದನ್ನು ತಂದಿರುವುದಾಗಿ ಬಹಳ ಹಳೆಯ ಮನುಷ್ಯನೊಬ್ಬ ನೆನಪುಮಾಡಿಕೊಂಡನು."[೧೨]  ಯುರೋಪಿಯನ್ ವಸಾಹತುಗಾರರು ವಸಾಹತು ಅಮೆರಿಕಾದಲ್ಲಿ 17 ನೇ ಶತಮಾನದಲ್ಲಿ ಕ್ಯಾರೆಟ್ ಅನ್ನು ಪರಿಚಯಿಸಿದರು.[೧೩]

ಹೊರನೋಟಕ್ಕೆ ಒಳಭಾಗದಲ್ಲಿ ಕಿತ್ತಳೆ ಬಣ್ಣದ ನೇರಳೆ ಕ್ಯಾರೆಟ್ ಗಳನ್ನು ಬ್ರಿಟಿಷ್ ಅಂಗಡಿಗಳಲ್ಲಿ ಮಾರಲು ೨೦೦೨ರಲ್ಲಿ ಪ್ರಾರಂಭಿಸಲಾಯಿತು.

ವಿವರಣೆ

[ಬದಲಾಯಿಸಿ]

Daucus carota ಒಂದು ದ್ವೈವಾರ್ಷಿಕ ಸಸ್ಯ. ಮೊದಲ ವರ್ಷದಲ್ಲಿ, ಅದರ ಎಲೆಗಳು ದೊಡ್ಡ ಪ್ರಮಾಣದ ಸಕ್ಕರೆಯನ್ನು ತಯಾರಿಸುತ್ತದೆ. ಇದನ್ನು ಎರಡನೆ ವರ್ಷ ಹೂಬಿಡಲು ಸಸ್ಯಕ್ಕೆ ಶಕ್ತಿಯನ್ನು ಒದಗಿಸಲು ಗೆಡ್ಡೆಗಳಲ್ಲಿ ಸಂಗ್ರಹಿಸಲಾಗುತ್ತದೆ.

ಮೊಳಕೆ ನಂತರ ಸ್ವಲ್ಪ ಚಿಗುರಿರುವುದು

ಮೊಳಕೆ ಬಂದ ಕೂಡಲೇ ಕ್ಯಾರೆಟ್ ಬೀಜಗಳು ಗೆಡ್ಡೆ ಮತ್ತು ಕಾಂಡದ ನಡುವೆ ಸ್ಪಷ್ಟವಾದ ಭಿನ್ನತೆಯನ್ನು ತೋರಿಸುತ್ತವೆ. ಪಾರ್ಶ್ವ ಬೇರುಗಳಿಲ್ಲದ ಕಾಂಡ ದಪ್ಪನಾಗಿರುತ್ತದೆ. ಕಾಂಡದ ಮೇಲಿನ ಕೊನೆಯಲ್ಲಿ ಬೀಜದಿಂದ ಬಂದ ಎಲೆಯಿರುತ್ತದೆ. ಮೊಳಕೆಯೊಡೆದ ೧೦-೧೫ದಿನಗಳಲ್ಲಿ ಮೊದಲ ನಿಜವಾದ ಎಲೆ ಕಾಣಿಸಿಕೊಳ್ಳುತ್ತದೆ. ನಂತರದ ಎಲೆಗಳು ಪರ್ಯಾಯವಾಗಿ (ಒಂದು ತೊಟ್ಟಿಗೆ ಒಂದು ಎಲೆಯಂತೆ) ಸುರುಳಿಯಂತೆ ಅರಳಿನಿಂತು ಚಿಗುರುತ್ತವೆ. ಎಲೆಯ ತೊಟ್ಟುಗಳು ಕಾಂಡವನ್ನು ಆವರಿಸಿಕೊಳ್ಳುತ್ತವೆ. ಸಸ್ಯವು ಬೆಳೆದಂತೆ ಗೆಡ್ಡೆಯ ಬಳಿಯಿರುವ ಬೀಜದಿಂದ ಬಂದ ಎಲೆ ದೂರ ತಳ್ಳಲ್ಪಡುತ್ತದೆ. ನೆಲದ ಮೇಲಕ್ಕಿರುವ ಕಾಂಡ ಸಂಕುಚಿತಗೊಳ್ಳುತ್ತದೆ ಮತ್ತು ಗೆಣ್ಣುಗಳು ಸ್ಪಷ್ಟವಾಗಿರುವುದಿಲ್ಲ. ಹೂಬಿಡಲೋಸುಗ ಬೀಜದ ಮೂಲ ವಿಸ್ತಾರಗೊಂಡಾಗ ಕಾಂಡದ ತುದಿ ಕಿರಿದಾಗುತ್ತದೆ ಮತ್ತು ಚೂಪುಗೊಳ್ಳುತ್ತದೆ. ಆಗ ಕಾಂಡ ಮೇಲ್ಮುಖವಾಗಿ ವಿಸ್ತರಿಸಿಕೊಂಡು ಹೆಚ್ಚಿನ ಶಾಖೆಗಳ ಸುಮಾರು ೬೦-೨೦೦ ಸೆಂಟಿಮೀಟರ್ ಗಳ (೨೦-೮೦ಇಂಚು) ಎತ್ತರದ ಹೂಗೊಂಚಲುಗಳನ್ನು ಬಿಡುತ್ತದೆ.[೧೪]

ಹೆಚ್ಚಿನ ಗೆಡ್ಡೆಗಳು ಮಾಂಸಲವಾದ ಹೊರಕವಚಗಳನ್ನು ಹಾಗೂ ಒಳಗಿನ ತಿರುಳನ್ನು ಒಳಗೊಂಡಿರುತ್ತವೆ. ಉತ್ತಮ ಗುಣಮಟ್ಟದ ಕ್ಯಾರಟ್ ಗಳು ಒಳಗಿನ ತಿರುಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಹೊರಕವಚವನ್ನು ಹೊಂದಿರುತ್ತವೆ. ಒಳಗಿನ ತಿರುಳಿಲ್ಲದ ಕ್ಯಾರೆಟ್ ಗಳು ಇರಲು ಸಾಧ್ಯವಿಲ್ಲವಾದರೂ, ಕೆಲವು ತಳಿಗಳು ಚಿಕ್ಕದಾದ ಹಾಗೂ ವರ್ಣದ್ರವ್ಯಗಳಿರುವ ತಿರುಳನ್ನು ಪಡೆಯುತ್ತವೆ. ಹೊರಕವಚ ಮತ್ತು ಒಳತಿರುಳಿನ ಬಣ್ಣದ ತೀವ್ರತೆ ಒಂದೇ ಇದ್ದಾಗ ಗೆಡ್ಡೆ ತಿರುಳಿಲ್ಲದ್ದಾಗಿ ಕಾಣಿಸಬಹುದು. ಸಾಮಾನ್ಯವಾಗಿ ಗೆಡ್ಡೆಗಳು ಉದ್ದನೆಯ ಹಾಗೂ ಶಂಕುವಿನ ಆಕಾರದವಾಗಿರುತ್ತವೆಯಾದರೂ, ಕೆಲವು ತಳಿಗಳಲ್ಲಿ ಸಿಲಿಂಡರ್ ಹಾಗೂ ಗೋಲಾಕಾರವನ್ನು ಹೋಲುವ ಗೆಡ್ಡೆಗಳು ಕಾಣಸಿಗುತ್ತವೆ. ಬೇರಿನ ವ್ಯಾಸ ಒಂದರಿಂದ ೧೦ ಸೆಂಟಿಮೀಟರ್ ವರೆಗೂ ವ್ಯಾಪಿಸಿರುತ್ತವೆ. ಬೇರಿನ ಉದ್ದ ಸಾಮಾನ್ಯವಾಗಿ ೧೦-೨೫ ಸೆಂಟಿಮೀಟರ್ ಆಗಿದ್ದರೂ ಕೆಲವೊಮ್ಮೆ ೫-೫೦ಸೆಂಟಿಮೀಟರ್ ಕೂಡ ಇರಬಹುದು.

Daucus carota umbel (inflorescence). Individual flowers are borne on undivided pedicels originating from a common node.
Top view of Daucus carota inflorescence, showing umbellets; the central flower is dark red.
 1. "Carrot". Online Etymology Dictionary. Retrieved 30 November 2014.
 2. Rubatsky, V. E.; Quiros, C. F.; Siman, P. W. (1999). Carrots and Related Vegetable Umbelliferae. CABI Publishing. ISBN 978-0-85199-129-0. {{cite book}}: Invalid |ref=harv (help)
 3. Folio 312, Juliana Anicia Codex
 4. Rubatsky, Quiros & Siman (1999), p. 6
 5. Encyclopedia of Food and Health. Elsevier Science. 2015. p. 387. ISBN 978-0-12-384953-3.
 6. Zohary, Daniel; Hopf, Maria (2000). Domestication of Plants in the Old World (3rd ed.). Oxford University Press. p. 203.
 7. Linnaeus later used the word as a scientific name for the genus Pastinaca, which includes parsnips.
 8. Folio 312, 313, 314, Juliana Anicia Codex
 9. "Carrots return to purple roots". BBC. May 16, 2002. Retrieved December 5, 2013.
 10. Simon et al. (2008), p. 328
 11. Otto Banga (1963). Main Types of the Western Carotene Carrot and their Origin. Tjeenk Willink.
 12. Oliver Lawson Dick, ed. Aubrey's Brief Lives. Edited from the Original Manuscripts, 1949, p. xxxv.
 13. Rubatsky, Quiros & Siman (1999), pp. 6–7
 14. Rubatsky, Quiros & Siman (1999), pp. 22–28

ಉಲ್ಲೇಖ ದೋಷ: <ref> tag with name "Abbott 2012" defined in <references> is not used in prior text.
ಉಲ್ಲೇಖ ದೋಷ: <ref> tag with name "Ballmer-Weber 2012" defined in <references> is not used in prior text.
ಉಲ್ಲೇಖ ದೋಷ: <ref> tag with name "Baranska 2005" defined in <references> is not used in prior text.
ಉಲ್ಲೇಖ ದೋಷ: <ref> tag with name "Bidlack 2011" defined in <references> is not used in prior text.
ಉಲ್ಲೇಖ ದೋಷ: <ref> tag with name "Brown 2012" defined in <references> is not used in prior text.
ಉಲ್ಲೇಖ ದೋಷ: <ref> tag with name "Burney 2010" defined in <references> is not used in prior text.
ಉಲ್ಲೇಖ ದೋಷ: <ref> tag with name "Carr 1998" defined in <references> is not used in prior text.
ಉಲ್ಲೇಖ ದೋಷ: <ref> tag with name "Cunningham 2000" defined in <references> is not used in prior text.
ಉಲ್ಲೇಖ ದೋಷ: <ref> tag with name "Czepa 2003" defined in <references> is not used in prior text.
ಉಲ್ಲೇಖ ದೋಷ: <ref> tag with name "DAFF" defined in <references> is not used in prior text.
ಉಲ್ಲೇಖ ದೋಷ: <ref> tag with name "Dalby 2003" defined in <references> is not used in prior text.
ಉಲ್ಲೇಖ ದೋಷ: <ref> tag with name "Elzer-Peters 2014" defined in <references> is not used in prior text.
ಉಲ್ಲೇಖ ದೋಷ: <ref> tag with name "Garrod 1978" defined in <references> is not used in prior text.
ಉಲ್ಲೇಖ ದೋಷ: <ref> tag with name "Gisslen 2010" defined in <references> is not used in prior text.
ಉಲ್ಲೇಖ ದೋಷ: <ref> tag with name "Greene 2012" defined in <references> is not used in prior text.
ಉಲ್ಲೇಖ ದೋಷ: <ref> tag with name "Gupta 2000" defined in <references> is not used in prior text.
ಉಲ್ಲೇಖ ದೋಷ: <ref> tag with name "Hedrén 2002" defined in <references> is not used in prior text.
ಉಲ್ಲೇಖ ದೋಷ: <ref> tag with name "Krech 2004" defined in <references> is not used in prior text.
ಉಲ್ಲೇಖ ದೋಷ: <ref> tag with name "Kurosaki 1988" defined in <references> is not used in prior text.
ಉಲ್ಲೇಖ ದೋಷ: <ref> tag with name "Mabey 1997" defined in <references> is not used in prior text.
ಉಲ್ಲೇಖ ದೋಷ: <ref> tag with name "Martino 2006" defined in <references> is not used in prior text.
ಉಲ್ಲೇಖ ದೋಷ: <ref> tag with name "Merck 2012" defined in <references> is not used in prior text.
ಉಲ್ಲೇಖ ದೋಷ: <ref> tag with name "Naqvi 2004" defined in <references> is not used in prior text.
ಉಲ್ಲೇಖ ದೋಷ: <ref> tag with name "Novotny 1995" defined in <references> is not used in prior text.
ಉಲ್ಲೇಖ ದೋಷ: <ref> tag with name "Riotte 1998" defined in <references> is not used in prior text.
ಉಲ್ಲೇಖ ದೋಷ: <ref> tag with name "Rose 2006" defined in <references> is not used in prior text.
ಉಲ್ಲೇಖ ದೋಷ: <ref> tag with name "Shannon 1998" defined in <references> is not used in prior text.
ಉಲ್ಲೇಖ ದೋಷ: <ref> tag with name "Staub 2010" defined in <references> is not used in prior text.
ಉಲ್ಲೇಖ ದೋಷ: <ref> tag with name "Strube 1999" defined in <references> is not used in prior text.
ಉಲ್ಲೇಖ ದೋಷ: <ref> tag with name "Tiwari 2012" defined in <references> is not used in prior text.
ಉಲ್ಲೇಖ ದೋಷ: <ref> tag with name "urlIPM UCDavis" defined in <references> is not used in prior text.
ಉಲ್ಲೇಖ ದೋಷ: <ref> tag with name "Yeager 2008" defined in <references> is not used in prior text.

ಉಲ್ಲೇಖ ದೋಷ: <ref> tag with name "Zidorn 2005" defined in <references> is not used in prior text.
"https://kn.wikipedia.org/w/index.php?title=ಗಜ್ಜರಿ&oldid=1150934" ಇಂದ ಪಡೆಯಲ್ಪಟ್ಟಿದೆ