ವಿಷಯಕ್ಕೆ ಹೋಗು

ಸಬ್ಬಸಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dill
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Anethum

ಪ್ರಜಾತಿ:
A. graveolens
Binomial name
Anethum graveolens
Synonyms

Peucedanum graveolens (L.) C. B. Clarke


ಸಬ್ಬಸಿಗೆಯು (ಅನೇಥಮ್ ಗ್ರ್ಯಾವಿಯೋಲೆನ್ಸ್) ಒಂದು ಅಲ್ಪಕಾಲದ ಬಹುವಾರ್ಷಿಕ ಮೂಲಿಕೆ. ಅದು ಅನೇಥಮ್ ಪಂಗಡದ ಏಕಮಾತ್ರ ಜಾತಿ, ಆದರೆ ಕೆಲವು ಸಸ್ಯಶಾಸ್ತ್ರಜ್ಞರಿಂದ ಒಂದು ಸಂಬಂಧಿತ ಪಂಗಡದಲ್ಲಿ ಪ್ಯೂಸೇಡ್ಯಾನಮ್ ಗ್ರ್ಯಾವಿಯೋಲೆನ್ಸ್ ಎಂದು ವರ್ಗೀಕರಿಸಲಾಗುತ್ತದೆ. ಅದು ಕೃಶವಾದ ಕಾಂಡಗಳು ಮತ್ತು ೧೦-೨೦ ಸೆ.ಮಿ. ಉದ್ದದ ಪ್ರತಿಯಾದ, ನಯವಾಗಿ ವಿಭಜಿತವಾದ, ಕೋಮಲವಾದ ಮೆತ್ತಗಿನ ಎಲೆಗಳೊಂದಿಗೆ ೪೦-೬೦ ಸೆ.ಮಿ. ಎತ್ತರಕ್ಕೆ ಬೆಳೆಯುತ್ತದೆ. ಉಕ್ರೇನ್ ಮತ್ತು ರಷ್ಯಾದಲ್ಲಿ ಇದನ್ನು ಜಾಸ್ತಿ ಬಳಸುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇದನ್ನ ಸೇವಿಸಬೇಕು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹೆಚ್ಚಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಸೊಪ್ಪು ಇಷ್ಟಪಡುವವರಿಗೆ ಸಬ್ಬಸಿಗೆ ಸೊಪ್ಪು (Dill Leaves) ಹೆಚ್ಚು ಇಷ್ಟ ಆಗುತ್ತದೆ. ಚಿಕ್ಕ ಸೂಜಿಯಂತೆ ಇದರ ಎಲೆ ಇರುತ್ತದೆ. ಇದು ನಾಲಿಗೆಗೆ ಹೆಚ್ಚು ರುಚಿ ನೀಡುವ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಪರಿಮಳದಿಂದ ಕೂಡಿರುವ ಸಬ್ಬಸಿಗೆಯನ್ನು ಪಲ್ಯ, ಸಾಂಬಾರಿಗೆ ಬಳಸುತ್ತಾರೆ. ಉಕ್ರೇನ್ (Ukraine) ಮತ್ತು ರಷ್ಯಾದಲ್ಲಿ (Russia) ಇದನ್ನು ಜಾಸ್ತಿ ಬಳಸುತ್ತಾರೆ. ವಾರಕ್ಕೆ ಒಮ್ಮೆಯಾದರೂ ಇದನ್ನ ಸೇವಿಸಬೇಕು. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹೆಚ್ಚಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಔಷಧೀಯ ಗುಣಗಳು

[ಬದಲಾಯಿಸಿ]
  • ಹೆರಿಗೆಯ ನಂತರ ಕೆಲವು ಮಹಿಳೆಯರಿಗೆ ಎದೆಹಾಲಿನ ಪ್ರಮಾಣ ಕಡಿಮೆ ಇರುತ್ತದೆ. ಅಂತವರಿಗೆ ಸಬ್ಬಸಿಗೆ ಸೊಪ್ಪನ್ನು ನೀಡುವುದರಿಂದ ಅದರಲ್ಲಿರುವ ಕಬ್ಬಿಣ ಅಂಶವು ಎದೆಹಾಲನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ, ಹಾಗು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸಬ್ಬಸಿಗೆ ಸೊಪ್ಪು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ
  • ಸಬ್ಬಸಿಗೆ ಸೊಪ್ಪನ್ನು ನಾವು ನಮ್ಮ ಆಹಾರ ಪದಾರ್ಥದಲ್ಲಿ ಅಳವಡಿಸಿಕೊಳ್ಳುವುದರಿಂದ ಅದರಲ್ಲಿರುವಂತಹ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸುವ ಕಾರ್ಯ ನಿರ್ವಹಿಸುತ್ತದೆ.
  • ಮಾನಸಿಕ ಒತ್ತಡಗಳ ನಿಯಂತ್ರಣಕ್ಕೆ ಸಬ್ಬಸಿಗೆ ಸೊಪ್ಪಿನಲ್ಲಿ ಫೈವನೈಡ್ಸ್ ಹಾಗು ವಿಟಮಿನ್ ಬಿ ಕಾಂಪ್ಲೆಕ್ಸ್ ಪೋಷಕಾಂಶಗಳು ಇದ್ದು, ಇದು ದೇಹದಲ್ಲಿ ಎಂಜೈಮ್ ಗಳು ಹಾಗು ಹಾರ್ಮೋನು ಗಳ ಉತ್ಪತ್ತಿಯನ್ನು ಮಾಡುತ್ತದೆ. ಇದರಿಂದ ಮನಸಿಗ್ಗೆ ಹೊಸ ಚೈತನ್ಯ ಬರುತ್ತದೆ ಹಾಗು ಒತ್ತಡ ದೂರವಾಗುತ್ತದೆ.
  • ಹೊಟ್ಟೆ ನೋವು ನಿವಾರಣೆಗೆ ಸಬ್ಬಸಿಗೆ ಸೊಪ್ಪಿನ ರಸವನ್ನು ತೆಗೆದುಕೊಂಡು, ಅದಕ್ಕೆ ಜೇನು ತುಪ್ಪ ಬೆರೆಸಿ, ಸೇವಿಸುವುದರಿಂದ ಅಜೀರ್ಣದಿಂದುಂಟಾದ ಹೊಟ್ಟೆನೋವು ನಿವಾರಣೆಯಾಗುತ್ತದೆ.
  • ಸಬ್ಬಸಿಗೆ ಸೊಪ್ಪು ಅಲರ್ಜಿಯನ್ನು ಕಡಿಮೆ ಮಾಡುತ್ತದೆ, ಸಬ್ಬಸಿಗೆ ಸೊಪ್ಪನ್ನು ಅರಿಶಿನದ ಜೊತೆ ಅರೆದು, ಅಲರ್ಜಿಗಳಾದ ಚರ್ಮದ ಭಾಗಕ್ಕೆ ಹಚ್ಚುವುದರಿಂದ ಅಲರ್ಜಿಯು ಕಡಿಮೆಯಾಗುತ್ತದೆ.

ಸಬ್ಬಸಿಗೆ ಸೊಪ್ಪಿನ ಆರೋಗ್ಯಕಾರಿ ಗುಣಗಳು

[ಬದಲಾಯಿಸಿ]
  • ನಿವಾರಣೆ ಮಾಡುತ್ತದೆ.
  • ಮಲಬದ್ಧತೆಯ ವಾಯು (ಗ್ಯಾಸ್ಟ್ರಿಕ್) ತೊಂದರೆ ನಿವಾರಣೆ ಮಾಡುತ್ತದೆ.
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಆರ್ಥ್ರೈಟಿಸ್ ಸಮಸ್ಯೆಯನ್ನು ನಿಯಂತ್ರಿಸುತ್ತದೆ.
  • ಶ್ವಾಶಕೋಶಕ್ಕೆ ಸಂಬಂದಿಸಿದ ತೊಂದರೆಗಳನ್ನು ಹತೋಟಿಗೆ ತರುತ್ತದೆ.
  • ಉರಿಯೂತವನ್ನು ಕಡಿಮೆ ಮಾಡುತ್ತದೆ.
  • ಹಾರ್ಮೋನ್‌ಗಳ ಅಸಮತೋಲನವನ್ನು ಸರಿಪಡಿಸುತ್ತದೆ.