ವಿಷಯಕ್ಕೆ ಹೋಗು

ತಲೆನೋವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಲೆನೋವು ಮುಖ, ತಲೆ, ಅಥವಾ ಕುತ್ತಿಗೆಯಲ್ಲಿರುವ ನೋವಿನ ಲಕ್ಷಣವಾಗಿರುತ್ತದೆ. ಇದು ಮೈಗ್ರೇನ್‌, ಒತ್ತಡ ಪ್ರಕಾರದ ತಲೆನೋವು ಅಥವಾ ಸಮೂಹ ತಲೆನೋವಾಗಿ ಉಂಟಾಗಬಹುದು.[೧] ಪದೆಪದೇ ಬರುವ ತಲೆನೋವುಗಳು ಸಂಬಂಧಗಳು ಮತ್ತು ಉದ್ಯೋಗದ ಮೇಲೆ ಪ್ರಭಾವ ಬೀರಬಹುದು. ತೀವ್ರ ತಲೆನೋವು ಇರುವವರಲ್ಲಿ ಖಿನ್ನತೆಯಾಗುವ ಹೆಚ್ಚಿನ ಅಪಾಯ ಕೂಡ ಇದೆ.

ತಲೆನೋವುಗಳು ಅನೇಕ ಪರಿಸ್ಥಿತಿಗಳ ಪರಿಣಾಮವಾಗಿ ಉಂಟಾಗಬಹುದು. ತಲೆನೋವುಗಳಿಗೆ ಅನೇಕ ವಿಭಿನ್ನ ವರ್ಗೀಕರಣ ವ್ಯವಸ್ಥೆಗಳಿವೆ. ಅಂತರರಾಷ್ಟ್ರೀಯ ತಲೆನೋವು ಸಂಘದ ವ್ಯವಸ್ಥೆಯದ್ದು ಅತ್ಯಂತ ಚೆನ್ನಾಗಿ ಗುರುತಿಸಲ್ಪಟ್ಟದ್ದಾಗಿದೆ. ತಲೆನೋವಿನ ಕಾರಣಗಳಲ್ಲಿ ನಿರ್ಜಲೀಕರಣ, ಆಯಾಸ, ನಿದ್ದೆಯ ಅಭಾವ, ಒತ್ತಡ, ಔಷಧಿಗಳ ಪರಿಣಾಮಗಳು, ಮನಃಪ್ರಭಾವಕ ಮದ್ದುಗಳ ಪರಿಣಾಮಗಳು, ವೈರಾಣು ಸೋಂಕುಗಳು, ಜೋರಾದ ಶಬ್ದಗಳು, ನೆಗಡಿ, ತಲೆ ಪೆಟ್ಟು, ಬಹಳ ತಂಪಾದ ಆಹಾರ ಅಥವಾ ಪಾನೀಯದ ವೇಗದ ಸೇವನೆ, ಮತ್ತು ದಂತ ಅಥವಾ ಸೈನಸ್ ಸಮಸ್ಯೆಗಳು ಸೇರಿರಬಹುದು.[೨]

ಉಲ್ಲೇಖಗಳು[ಬದಲಾಯಿಸಿ]

  1. "Headache disorders Fact sheet N°277". October 2012. Archived from the original on 16 February 2016. Retrieved 15 February 2016.
  2. "Headache Causes". Mayo Clinic (in ಇಂಗ್ಲಿಷ್). Retrieved 2019-10-21.
"https://kn.wikipedia.org/w/index.php?title=ತಲೆನೋವು&oldid=975059" ಇಂದ ಪಡೆಯಲ್ಪಟ್ಟಿದೆ