ಕುತ್ತಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Structure of Adam's apple.png

ಕುತ್ತಿಗೆಯು ಅನೇಕ ಭೂಚರ ಅಥವಾ ದ್ವಿತೀಯಕವಾಗಿ ಜಲವಾಸಿ ಕಶೇರುಕಗಳಲ್ಲಿ ಶರೀರದ ಭಾಗವಾಗಿದೆ, ಮತ್ತು ತಲೆಯನ್ನು ಮುಂಡ ಅಥವಾ ಅಟ್ಟೆಯಿಂದ ಪ್ರತ್ಯೇಕಿಸುತ್ತದೆ. ಕುತ್ತಿಗೆಯು ತಲೆಯ ಭಾರಕ್ಕೆ ಆಧಾರವಾಗಿದೆ ಮತ್ತು ಮಿದುಳಿನಿಂದ ಕೆಳಗೆ ಶರೀರದ ಉಳಿದ ಭಾಗಗಳಿಗೆ ಸಂವೇದನಾತ್ಮಕ ಹಾಗೂ ಚಲನಶೀಲ ಮಾಹಿತಿಯನ್ನು ಒಯ್ಯುವ ನರಗಳನ್ನು ರಕ್ಷಿಸುತ್ತದೆ. ಜೊತೆಗೆ, ಕುತ್ತಿಗೆಯು ಸುಲಭವಾಗಿ ಬಾಗುವಂಥದ್ದು ಮತ್ತು ತಲೆಗೆ ಎಲ್ಲ ದಿಕ್ಕುಗಳಲ್ಲಿ ತಿರುಗಲು ಹಾಗೂ ಚಲಿಸಲು ಅವಕಾಶ ನೀಡುತ್ತದೆ.