ಕೊಬ್ಬು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಕೊಬ್ಬು (ಮೇದಸ್ಸು, ನೆಣ) ಅಧಿಕ ಪ್ರಮಾಣದಲ್ಲಿ ಬೇಕಾದ ಮೂರು ಮುಖ್ಯ ಪೌಷ್ಟಿಕಾಂಶಗಳಲ್ಲಿ ಒಂದು, ಇತರ ಎರಡು ಪೌಷ್ಟಿಕಾಂಶಗಳೆಂದರೆ ಕಾರ್ಬೋಹೈಡ್ರೇಟುಗಳು ಮತ್ತು ಪ್ರೋಟೀನ್‍ಗಳು.[೧] ಕೊಬ್ಬಿನ ಅಣುಗಳು ಪ್ರಧಾನವಾಗಿ ಇಂಗಾಲ ಮತ್ತು ಜಲಜನಕದ ಪರಮಾಣುಗಳನ್ನು ಹೊಂದಿರುತ್ತವೆ, ಹಾಗಾಗಿ ಅವುಗಳೆಲ್ಲ ಹೈಡ್ರೋಕಾರ್ಬನ್ ಅಣುಗಳಾಗಿವೆ. ಉದಾಹರಣೆಗಳಲ್ಲಿ ಕೊಲೆಸ್ಟರಾಲ್, ಟ್ರೈಗ್ಲಿಸರೈಡ್‍ಗಳು ಸೇರಿವೆ. ಕರಾರುವಾಕ್ಕಾದ ಅರ್ಥದಲ್ಲಿ "ಕೊಬ್ಬು" ಪದವು ನಿರ್ದಿಷ್ಟವಾಗಿ ಕೊಠಡಿಯ ತಾಪಮಾನದಲ್ಲಿ ಘನಪದಾರ್ಥಗಳಾಗಿರುವ ಲಿಪಿಡ್‍ಗಳನ್ನು ಸೂಚಿಸಬಹುದು. ಇತರ ಲಿಪಿಡ್‍ಗಳಂತೆ, ಕೊಬ್ಬುಗಳು ಸಾಮಾನ್ಯವಾಗಿ ನೀರಿನಲ್ಲಿ ಮಿಶ್ರಣವಾಗುವುದಿಲ್ಲ, ಮತ್ತು ಕಾರ್ಬನಿಕ ದ್ರಾವಕಗಳಲ್ಲಿ ಕರಗುತ್ತವೆ. ಕೊಬ್ಬು (ಮಾನವರು ಸೇರಿದಂತೆ) ಬಹುತೇಕ ಪರಾವಲಂಬಿ ಜೀವಿಗಳ ಆಹಾರದ ಅಗತ್ಯ ಭಾಗವಾಗಿದೆ ಮತ್ತು ಅತ್ಯಂತ ಶಕ್ತಿಸಾಂದ್ರವಾಗಿದೆ, ಹಾಗಾಗಿ ಶಕ್ತಿ ಸಂಗ್ರಹದ ಅತ್ಯಂತ ಫಲಕಾರಿ ರೂಪವಾಗಿದೆ ಮತ್ತು ನೀರನ್ನು ಬಂಧಿಸಿಕೊಳ್ಳದ್ದರಿಂದ ದೇಹದ ದ್ರವ್ಯರಾಶಿಯನ್ನು ಪ್ರೋಟೀನ್‍ಗಳಷ್ಟು ಹೆಚ್ಚಿಸುವುದಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. "Macronutrients: the Importance of Carbohydrate, Protein, and Fat". McKinley Health Center. University of Illinois at Urbana–Champaign. Retrieved 20 September 2014.
"https://kn.wikipedia.org/w/index.php?title=ಕೊಬ್ಬು&oldid=892065" ಇಂದ ಪಡೆಯಲ್ಪಟ್ಟಿದೆ