ವಿಷಯಕ್ಕೆ ಹೋಗು

ಕಾರ್ಬೋಹೈಡ್ರೇಟುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಲಿಹೈಡ್ರಾಕ್ಸಿ ಆಲ್ಡಿಹೈಡುಗಳು ಇಲ್ಲವೆ ಪಾಲಿಹೈಡ್ರಾಕ್ಸಿ ಕೀಟೋನುಗಳು. ಜಲವಿಶ್ಲೇಷಣೆಗೆ ಒಳಪಡಿಸಿದಾಗ ಮೇಲಿನ ಎರಡು ಸಂಯುಕ್ತಗಳಲ್ಲಿ ಯಾವುದೇ ಒಂದನ್ನು ನೀಡುವ ವಸ್ತುಗಳಿಗೂ ಇದೇ ಹೆಸರಿದೆ. ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ದೃಷ್ಟಿಗಳಿಂದ ಕಾರ್ಬೋಹೈಡ್ರೇಟುಗಳು ಪ್ರಾಮುಖ್ಯವಾದವೂ ಹೌದು. ಕುತೂಹಲಕರವಾದವೂ ಹೌದು. ಆಹಾರ ಪದಾರ್ಥಗಳ ರೂಪದಲ್ಲಿ ಅವು ಮನುಷ್ಯರಿಗೂ ಪ್ರಾಣಿಗಳಿಗೂ ವಿಪುಲಶಕ್ತಿಯ ಆಕರಗಳು. ಅಲ್ಲದೆ ಅವು ಭೂಮಿಯ ಗತಕಾಲದಲ್ಲಿ ಹುದುಗಿಹೋಗಿ ಪರಿವರ್ತನೆಗೊಂಡು ಕಲ್ಲಿದ್ದಲು ಹಾಗೂ ಪೀಟ್ ರೂಪ ತಳೆದು ಪುನಃ ಶಕ್ತಿಯ ಮೂಲಗಳಾಗಿವೆ. ಸಸ್ಯಕೋಶದಲ್ಲಿ ದೊರೆಯುವ ಸ್ಟಾರ್ಚ್ ಮತ್ತು ಪ್ರಾಣಿಗಳ ಅಂಗಾಂಶಗಳಲ್ಲಿ ದೊರೆಯುವ ಗ್ಲೈಕೊಜನ್-ಇವು ಕಾರ್ಬೋಹೈಡ್ರೇಟುಗಳ ಪ್ರಮುಖ ನಿಧಿಗಳು. ಇವೆರಡೂ ಡಿ-ಗ್ಲೂಕೋಸಿನ ಬಹ್ವಂಗಿಗಳು (ಪಾಲಿಮರ್ಸ್). ಸ್ತನಿಗಳಲ್ಲಿ ಗ್ಲೈಕೋಲಿಪೊಪ್ರೊಟಿನುಗಳು-ಲಿಪಿಡ್‍ಗಳಿಗೆ ಬದ್ಧವಾಗಿರುವ ಗ್ಲೈಕೋಪ್ರೋಟೀನುಗಳು-ಕೋಶದ ಪೊರೆಗಳ ಬೃಹತ್ ಆವಶ್ಯಕ ರಚನಾತ್ಮಕ ಭಾಗಗಳಾಗಿಯೂ ಕೋಶದ ಕಣದಂಥ (ವಿವಿಕ್ತ) ಅಂಗಕಗಳಾಗಿಯೂ (ಆರ್ಗ್‍ನೆಲ್ಸ್) ಪ್ರಮುಖವಾಗಿವೆ. ಬಹು ಶರ್ಕರ-ಪ್ರೋಟೀನ್ ಸಂಬದ್ಧಗಳು ನಿರೋಧಕಗಳ ಉತ್ಪತ್ತಿಯಲ್ಲಿ ನಿರೋಧಜನಕಗಳಾಗಿ ಪಾತ್ರ ವಹಿಸುವ ಸಾಮಥ್ರ್ಯ ಪಡೆದಿವೆ. ಬಹುಶರ್ಕರಗಳು ದೇಹದಲ್ಲಿ ಬಾಹ್ಯಕೋಶಿಕ (ಪಾಚಕ) ಆಧಾರ ವಸ್ತುಗಳ ಪ್ರಮುಖ ಭಾಗಗಳಾಗಿಯೂ ಇವೆ.[]

ದ್ಯುತಿಸಂಶ್ಲೇಷಣ

[ಬದಲಾಯಿಸಿ]

ದ್ಯುತಿಸಂಶ್ಲೇಷಣ ಸಾಮಥ್ರ್ಯವುಳ್ಳ ಕೆಲವು ಸೂಕ್ಷ್ಮಾಣುಗಳ ಹೊರತು ಮಿಕ್ಕೆಲ್ಲ ಜೀವಿಗಳು ಹಸಿರು ಸಸ್ಯಗಳಲ್ಲಿ ಮೊದಲೇ ಶೇಖರವಾಗುವ ಕಾರ್ಬೊಹೈಡ್ರೇಟುಗಳಿಂದ ಶಕ್ತಿಯನ್ನು ಪಡೆಯುತ್ತವೆ. ಈ ರೀತಿಯಲ್ಲಿ ಮಾನವರಿಗೆ ಮತ್ತು ಪ್ರಾಣಿಗಳಿಗೆ ಕಾರ್ಬೋಹೈಡ್ರೇಟುಗಳು ಆಹಾರರೂಪದಲ್ಲಿ ಅತ್ಯಂತ ಮುಖ್ಯವಾಗಿವೆ. ಆಹಾರದ ರೂಪದಲ್ಲಿ ದೇಹಕ್ಕೆ ತೆಗೆದುಕೊಂಡ ಕಾರ್ಬೋಹೈಡ್ರೇಟುಗಳು ಅನ್ನನಾಳದಲ್ಲಿ ಡಯಾಸ್ಟೆಟಿಕ್ ಕಿಣ್ವಗಳಿಂದ ಗ್ಲೂಕೋಸ್ ಆಗಿ ವಿಭಜನೆಗೊಳ್ಳುತ್ತವೆ. ಈ ಗ್ಲೂಕೋಸ್ ಸಣ್ಣ ಕರುಳಿನಿಂದ ಹೀರಲ್ಪಟ್ಟು ಅನಂತರ ಗ್ಲೈಕೊಜನ್ ಆಗಿ ಪರಿವರ್ತನೆಯಾಗುತ್ತದೆ. ಇದು ಹೆಚ್ಚಾಗಿ ಪಿತ್ತಜನಕಾಂಗ, ಸ್ವಲ್ಪಮಟ್ಟಿಗೆ ಸ್ನಾಯುಗಳಲ್ಲಿ ಶೇಖರವಾಗುತ್ತದೆ. ಜೀವಿಗೆ ಶಕ್ತಿಯನ್ನು ಒದಗಿಸಲೋಸ್ಕರ ಗ್ಲೈಕೋಜನ್ ಗ್ಲೂಕೋಸ್ ಆಗಿ ಅಪಚಯ ಗೊಳ್ಳುತ್ತದೆ. ಅಂತಿಮವಾಗಿ ಕ್ಲಿಷ್ಟ ಹಂತಗಳ ಮೂಲಕ ನೀರು ಮತ್ತು ಇಂಗಾಲದ ಡೈಆಕ್ಸೈಡ್ ಆಗಿ ಉತ್ಕರ್ಷಿತಗೊಳ್ಳುತ್ತದೆ.

ಚಯಾಪಚಯ

[ಬದಲಾಯಿಸಿ]

ಗ್ಲೂಕೋಸಿನ ಅಪಚಯ ಗ್ಲೈಕಾಲಿಸಿಸ್ನೊಂದಿಗೆ (ಶರ್ಕರ ವಿಶ್ಲೇಷಣ) ಆರಂಭವಾಗುತ್ತದೆ. ಗ್ಲೈಕಾಲಿಸಿಸ್ ಗಾಳಿಯ ಅಭಾವದಲ್ಲಿ ನಡೆಯುವ ಕ್ರಿಯೆ. ಇದು ಗ್ಲೂಕೋಸ್ ವಿಭಜನೆ ಹೊಂದಿ ವಸ್ತುವಾದ ಪೈರುವಿಕ್ ಆಮ್ಲವನ್ನು ಉತ್ಪತ್ತಿಮಾಡುವ ಒಂದು ಮಾರ್ಗ. (ಇದು ಎಂಬ್ಡೆನ್-ಮೆಯರಾಘ್ ಮಾರ್ಗವೆಂದು ಪರಿಚಿತವಾಗಿದೆ). ಈ ಒಡೆಯುವಿಕೆ ಸುಮಾರು ಹನ್ನೆರಡು ಹಂತಗಳಲ್ಲಿ ನಡೆಯುತ್ತದೆ. ಕ್ರೇಬ್ ವರ್ತುಲದಲ್ಲಿ (ಪೈರೂವಿಕ್ ಆಮ್ಲದ ಮೂಲಕ) ಗ್ಲೂಕೋಸ್ ವಿಭಜನೆಗೊಳ್ಳಲು ಸಹಾಯಮಾಡುತ್ತದೆ. ಕ್ರೇಬ್ ವರ್ತುಲ ಯಾವ ಯಾವ ಜೀವಿಗಳಲ್ಲಿ ನಡೆಯುತ್ತದೋ ಆ ಜೀವಿಗಳಲ್ಲೆಲ್ಲ ಗ್ಲೈಕಾಲಿಸಿಸ್ಸಿನ ಕಿಣ್ವಗಳು ಇವೆ. ಕಾರ್ಬೋಹೈಡ್ರೇಟ್ ಚಯಾಪಚಯದ ಒಂದು ಭಾಗವಾದ ಹೆಕ್ಸೊಸ್ ಮಾನೋಫಾಸ್ಫೇಟ್ ಪಾಶ್ರ್ವವಾಹಿಪಥ (ಷಂಟ್) ಎಂದು ಪರಿಚಿತವಾಗಿರುವ ಮತ್ತೊಂದು ಅಭಿಕ್ರಿಯೆಯಲ್ಲಿ ಜೀವಿಯಲ್ಲಿ ಇಂಗಾಲದ ಗ್ಲೂಕೋಸು ಇಂಗಾಲದ (ಪೆಂಟೋಸ್) ಶರ್ಕರವಾಗಿ ವಿದಳನಗೊಳ್ಳುತ್ತದೆ ಮತ್ತು ಒಂದು ಇಂಗಾಲದ ಪರಮಾಣು ಇಂಗಾಲದ ಡೈ ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ. (ಗ್ಲೂಕೋಸ್‍ನ ನೇರ ಉತ್ಕರ್ಷಣ ಕ್ರಿಯೆ). ಈ ರೀತಿ ಉತ್ಪತ್ತಿಯಾಗುವುದು ರೈಬೋಸ್ ಅಥವಾ ಸರಿಯಾಗಿ ಹೇಳಬೇಕಾದರೆ ರೈಬೋಸ್ ಫಾಸ್ಪೇಟ್. ಇದು ತನ್ನ ಸರದಿಯಲ್ಲಿ ತನ್ನದೇ ಆದ ಚಯಾಪಚಯಕ್ರಿಯೆಗಳ ಮೂಲಕ ಹಾದು ಗ್ಲೈಕಾಲಿಟಿಕ್ ಮಾರ್ಗಕ್ಕೆ ಸಂಬಂಧ ಪಟ್ಟ ಒಂದು ಮಧ್ಯವರ್ತಿಯನ್ನು ಉತ್ಪತ್ತಿಮಾಡುತ್ತದೆ ಮತ್ತು ಈ ರೀತಿಯಲ್ಲಿ ಚಕ್ರ ಸಂಪೂರ್ಣಗೊಳ್ಳುತ್ತದೆ. ಜೀವಿಯ ಕೋಶದ ನ್ಯೂಕ್ಲಿಯೆಕ್ ಆಮ್ಲಗಳ ಒಂದು ಅತಿಮುಖ್ಯ ಘಟಕ ರೈಬೋಸ್.ಗ್ಲೈಕಾಲಿಸಿಸಿನಿಂದ ಒಮ್ಮೆ ಉತ್ಪತ್ತಿಯಾದ ಪೈರುವೇಟ್ ಜೀವಿಯ ಅಥವಾ ಮತ್ತಷ್ಟು ನಿಖರವಾಗಿ ಹೇಳಬೇಕೆಂದರೆ ಆ ಜೀವಿಯಲ್ಲಿರುವ ಕಿಣ್ವಕ್ಕೆ ಅನುಗುಣವಾಗಿ ವಿವಿಧ ರೀತಿಯಲ್ಲಿ ಚಯಾಪಚಯಗೊಳ್ಳುತ್ತದೆ. ಈ ರೀತಿಯಲ್ಲಿ ಸಂಕುಚನಶೀಲ ಸ್ನಾಯುಗಳಲ್ಲಿರುವ ಕಿಣ್ವ ಪೈರುವೇಟ್ ಲ್ಯಾಕ್ಟಿಕ್ ಆಮ್ಲವಾಗಿ ಅಪಕರ್ಷಣವಾಗುವ ಕ್ರಿಯೆಯನ್ನು ವರ್ಧಿಸುತ್ತದೆ. ಗಾಳಿಯ ಅಭಾವದಲ್ಲಿ ಚಯಾಪಚಯದಲ್ಲಿ ಪ್ರವೇಶಿಸುವ ಗ್ಲೈಕೊಜನ್ನಿನ ಪ್ರತಿಯೊಂದು ಗ್ಲೈಕೊಸಿಲ್ ಮಾನಕ್ಕೆ ಎರಡು ಲ್ಯಾಕ್ಟೇಟ್ ಅಣುಗಳು ಸ್ನಾಯುವಿನಲ್ಲಿ ಉತ್ಪತ್ತಿಯಾಗುತ್ತವೆ.[]

ಯೀಸ್ಟಿನಲ್ಲಿರುವ ಕಿಣ್ವವ್ಯವಸ್ಥೆ

[ಬದಲಾಯಿಸಿ]

ಯೀಸ್ಟಿನಲ್ಲಿರುವ ಕಿಣ್ವವ್ಯವಸ್ಥೆ (ಪೈರೂವಿಕ್ ಡೀ ಕಾರ್ಬೊಕ್ಸಿಲೇಸ್) ಪೈರೊವೇಟ್ ಅಸಿಟಾಲ್ಡಿಹೈಡ್ ಮತ್ತು ಅಔ2 ಆಗಿ ಡೀಕಾರ್ಬಾಕ್ಸಿಲೇಷನ್ ಆಗುವುದನ್ನು ವೇಗವರ್ಧನಗೊಳಿಸುತ್ತದೆ. ಆಲ್ಕೋಹಾಲಿನ ಹುದುಗುವಿಕೆಯ ಕೊನೆಯ ಘಟ್ಟದಲ್ಲಿ ಅಸಿಟಾಲ್ಡಿಹೈಡ್ ಇನ್ನೊಂದು ಕಿಣ್ವ ವ್ಯವಸ್ಥೆಯಿಂದ (ಆಲ್ಕೋಹಾಲಿನ ಡೀಹೈಡ್ರೊಜಿನೇಸ್ ಮತ್ತು ಸಹಘಟಕಗಳು) ಎಥೆನಾಲ್ ಆಗಿ ಅಪಕರ್ಷಣಗೊಳ್ಳುತ್ತದೆ. ಹೀಗೆ ಆಲ್ಕೋಹಾಲಿನ ಹುದುಗುವಿಕೆಯ ಪ್ರಕ್ರಿಯೆಯಲ್ಲಿ ಉಪಯೋಗಿಸಲ್ಪಟ್ಟ ಪ್ರತಿ 1 ಮೋಲ್ ಗ್ಲೂಕೋಸಿಗೆ 2 ಮೋಲ್ ಎಥೆನಾಲ್ ಹಾಗೂ 2 ಮೋಲ್ ಅಔ2 ಗಳು ಉತ್ಪಾದನೆಗೊಳ್ಳುತ್ತದೆ.ಗಾಳಿಯ ಅಭಾವದಲ್ಲಿ ನಡೆಯುವ ಮೇಲೆ ವಿವರಿಸಲಾದ ಕಾರ್ಬೋಹೈಡ್ರೇಟ್ ಚಯಾಪಚಯದಲ್ಲಿ ಆಕ್ಸಿಜನ್ನಿನ ಆವಶ್ಯಕತೆಯಿಲ್ಲ. ಗ್ಲೈಕಾಲಿಸಿಸಿನ ಮಧ್ಯವರ್ತಿ ಹಂತಗಳಲ್ಲಿ ಒಂದಾದ ಟ್ರಯೋಸ್ ಫಾಸ್ಪೇಟಿನ ಉತ್ಕರ್ಷಣದಲ್ಲಿ ಎನ್‍ಎಡಿ ಒಂದು ಮುಖ್ಯ ಉತ್ಕರ್ಷಣಕಾರಿ. ಇದು ಟ್ಟ್ರಯೋಸ್ ಫಾಸ್ಪೇಟಿನಿಂದ ಎಲೆಕ್ಟ್ರಾನುಗಳನ್ನು ಸ್ವೀಕರಿಸುತ್ತದೆ ಮತ್ತು ಕ್ರಿಯೆಯಲ್ಲಿ ಪಾತ್ರವಹಿಸುವ ಅಂಗಾಂಶಕ್ಕನುಗುಣವಾಗಿ ಎಲೆಕ್ಟ್ರಾನನ್ನು ಅಸಿಟಾಲ್ಡಿಹೈಡ್ ಅಥವಾ ಪೈರುವೇಟಿಗೆ ವರ್ಗಾಯಿಸುತ್ತದೆ.ಹೀಗೆ ಶಕ್ತಿಯ ಮೂಲಕ್ಕೆ ಸರಳವಾದ ಶರ್ಕರ ಅಣು ಮುಖ್ಯ ಕಾರಣ. ಪೈರುವಿಕ್ ಆಮ್ಲ, ಅಸಿಟೈಲ್ ಅo4 ,ಕ್ರೇಬ್‍ನ ಸಿಟ್ರಿಕ್ ಆಮ್ಲವರ್ತುಲ ಇವುಗಳ ಮೂಲಕ ಕೋಶ ಗ್ಲೂಕೋಸನ್ನು ಅಂತಿಮವಾಗಿ ಅo2 ಮತ್ತು ಊ2o ಆಗಿ ಉತ್ಕರ್ಷಿಸುವ ಕ್ರಿಯೆಯನ್ನು -ಇದು ಉಸಿರಾಟದ ಪ್ರಕ್ರಿಯೆ -ಈಕೆಳಗಿನಂತೆ ನಿರೂಪಿಸಬಹುದು. ಅ6ಊ12ಔ6+ 6ಔ26ಅo2+6ಊ20  ಈ1= -680,000 ಕೆಲೂರಿಗಳು(1). 

ಅಕ್ಸಾಲ್‍ಅಸಿಟಿಕ್ ಆಮ್ಲ

[ಬದಲಾಯಿಸಿ]

ಪೈರುವೇಟಿನಿಂದ ಉತ್ಪತ್ತಿಯಾಗುವ ಅಸಿಟೈಲ್ ಅo4 ಅಕ್ಸಾಲ್‍ಅಸಿಟಿಕ್ ಆಮ್ಲದೊಡನೆ ಸಂಘನನವಾಗಿ ಸಿಟ್ರಿಕ್ ಆಮ್ಲವನ್ನು ನೀಡುತ್ತದೆ. ಸಿಟ್ರೇಟಿನ ವಿಭಜನೆಯಿಂದ ಈ ಕೆಳಗಿನ ಸಂಯುಕ್ತಗಳು ಅನುಕ್ರಮವಾಗಿ ಉತ್ಪತ್ತಿಯಾಗುತ್ತವೆ. ಸಿಸ್-ಅಕೋನಿಟೇಟ್, ಐಸೊ-ಸಿಟ್ರೇಟ್, ಅಕ್ಸಾಲೋಸಕ್ಸಿನೇಟ್, ಚಿ-ಕೀಟೋ ಗ್ಲುಟರೇಟ್, ಸಕ್ಸಿನೇಟ್, ಫ್ಯೂಮರೇಟ್ ಮತ್ತು ಮ್ಯಾಲೇಟ್. ಕಡೆಯ ಹಂತದಲ್ಲಿ ಅಕ್ಸಾಲ್ ಅಸಿಟೇಟನ್ನು ಪುನರುತ್ಪತ್ತಿ ಮಾಡಲು ಮ್ಯಾಲೆಟ್ ಮತ್ತೆ ವಿಭಜನೆಗೊಳ್ಳುತ್ತದೆ. ಈ ರೀತಿಯಲ್ಲಿ ಸಂಯುಕ್ತ ಮತ್ತೊಂದು ಹೊಸ ಪೈರುವೇಟ್ ಅಣುವಿನಿಂದ ಕ್ರಿಯೆಯನ್ನು ಆರಂಭಿಸುವುದು. ವರ್ತುಲದ ಪ್ರತಿಯೊಂದು ಸುತ್ತಿನಲ್ಲಿ ಉತ್ಪತ್ತಿಯಾಗುವ ಮಧ್ಯವರ್ತಿಗಳಲ್ಲಿ ಒಂದಾದ ಅಕ್ಸಾಲ್ ಅಸಿಟೇಟ್  ನೂತನ ಅಸಿಟಿಕ್ ಆಮ್ಲದ ಉತ್ಪನ್ನವನ್ನು  ಸ್ವೀಕರಿಸುವುದರ ಮೂಲಕ ಸಕ್ಕರೆಯಿಂದ ಬರುವ ಪೈರುವೇಟ್ ಮತ್ತು ಅಔ2 ಆಗಿ ಎಲ್ಲ ಸಕ್ಕರೆಯಲ್ಲಿ ಬಳಕೆಯಾಗುವ ವರೆಗೆ ಪರಿವರ್ತನೆಯಾಗುತ್ತದೆ. ಪ್ರಾಣಿ ಮತ್ತು ಸಸ್ಯ ವರ್ಗಗಳಲ್ಲೂ ಹೆಚ್ಚಿನ ಸೂಕ್ಷ್ಮಜೀವಿಗಳಲ್ಲೂ ಕ್ರೆಬ್ ಚಕ್ರಕ್ರಿಯೆಯಿರುತ್ತದೆಂಬುದಾಗಿ ಪ್ರದರ್ಶಿಸಲಾಗುತ್ತದೆ.ಈ ಕ್ರಿಯೆ (ಶಕ್ತಿಯ ಉತ್ಪತ್ತಿಗೆ ಅವಕಾಶ ಮಾಡುವ) ಉತ್ಕರ್ಷಣ ಸಾಮಥ್ರ್ಯವಿರುವ, ಕೋಶದ ಮೈಟೊಕಾಂಡ್ರಿಯ ಅಥವಾ ದೊಡ್ಡ ಕಣದೊಂದಿಗೆ ಸಂಪರ್ಕವನ್ನು ಹೊಂದಿದೆ. ಕ್ರೇಬ್ ವರ್ತುಲದ ಮಧ್ಯವರ್ತಿಗಳಾದ ಕ್ರಿಯಾಧರಗಳನ್ನು ಉತ್ಕರ್ಷಣಗೊಳಿಸುವ ಸಾಮಥ್ರ್ಯವನ್ನು ಮೈಟೊಕಾಂಡ್ರಿಯ ಮಾತ್ರ ಪ್ರದರ್ಶಿಸಬಲ್ಲದು. ಕೋಶನ್ಯೂಕ್ಲಿಯೈ (ಆನುವಂಶಿಕ ದ್ವಿಗುಣವೃತ್ತಿ ಸಾಂಕೇತಿಕ ವಸ್ತುವನ್ನು ಹೊಂದಿರುವ) ಮತ್ತು ಮೈಕ್ರೊಸೋಮ್‍ಗಳಿಗೆ (ಪ್ರೋಟಿನ್ ಸಂಶ್ಲೇಷಣೆಯಲ್ಲಿ ಪಾತ್ರವಹಿಸುವ) ಕ್ರೇಬ್ ವರ್ತುಲದ ಉತ್ಕರ್ಷಣಗಳನ್ನು ವೃದ್ಧಿಸುವ ಶಕ್ತಿಯಲ್ಲ.

ಪೈರೂವಿಕ್ ಆಮ್ಲ

[ಬದಲಾಯಿಸಿ]

ವರ್ತುಲವನ್ನು ಪ್ರವೇಶಿಸುವ ಪ್ರತಿಯೊಂದು ಪೈರೂವಿಕ್ ಆಮ್ಲದ ಅಣುವಿಗೆ ಸುಮಾರು 30,000 ಕೆಲೊರಿಗಳಷ್ಟು (300 ಕಿಲೋ ಕೆಲೋರಿಗಳು) ಶಕ್ತಿ ಉತ್ಪತ್ತಿಯಾಗುತ್ತವೆ. ಒಂದು ಗ್ಲೂಕೋಸ್ ಅಣುವಿನಿಂದ ಎರಡು ಪೈರೂವಿಕ್ ಆಮ್ಲಅಣುಗಳು ಉತ್ಪತ್ತಿಯಾಗುತ್ತದೆ. ಎಂದರೆ ಪ್ರತಿಯೊಂದು ಗ್ಲೂಕೊಸ್ ಅಣುವಿನಿಂದ 550,000 ಕೆಲೊರಿಗಳಷ್ಟು ಶಕ್ತಿ ಉತ್ಪತ್ತಿಯಾಗುತ್ತದೆ ಎಂದಾಯಿತು. ಇದು ಗ್ಲೂಕೋಸ್ ಅಣುವಿನಲ್ಲಿ ದೊರೆಯುವ ಒಟ್ಟು ಶಕ್ತಿಯ 80% ಭಾಗ.ಕಾರ್ಬೋಹೈಡ್ರೇಟ್ ಅಥವಾ ಇತರ ಆಹಾರಗಳ ಉತ್ಕರ್ಷಣದಿಂದ ಯಾವ ರೀತಿಯಲ್ಲಿ ಕೋಶ ಶಕ್ತಿಯನ್ನು ಶೇಖರಿಸಿಕೋಳ್ಳುತ್ತದೆ ಎಂಬುದರ ಕ್ರಿಯಾವಿನ್ಯಾಸ ಬಹುಕ್ಲಿಷ್ಟವಾದದ್ದು ಮತ್ತು ಮುಖ್ಯವಾಗಿ ಎಟಿಪಿ ಎಂಬ ನಿರ್ದಿಷ್ಟ ಸಂಯುಕ್ತವೊಂದು ರಾಸಾಯನಿಕ ಕ್ರಿಯೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಈ ಸಂಯುಕ್ತದ ಅಂತ್ಯದ ಎರಡು ಫಾಸ್ಫೇಟ್ ಗುಂಪುಗಳಲ್ಲಿ ಹೆಚ್ಚಿನ ಶಕ್ತಿಯಿರುತ್ತದೆ. ಇದು ಆಹಾರ ಪದಾರ್ಥಗಳು ಉತ್ಕರ್ಷಣಗೊಳ್ಳುವಾಗ ಉತ್ಪತ್ತಿಯಾಗುತ್ತದೆ. ಇವು ಶಕ್ತಿಯ ಭಂಡಾರಗಳು. ಈ ಶಕ್ತಿ ಯಾಂತ್ರಿಕ ಕಾರ್ಯ, ನರಪ್ರೇಷಣ (ನರ್ವ್ ಟ್ರಾನ್ಸ್‍ಮಿಶನ್) ಅಥವಾ ಜೀವಕೋಶ ಹಾಗೂ ಜೀವಿಗೆ ಸಂಬಂಧಿಸಿದ ರಾಸಾಯನಿಕ ಕ್ರಿಯೆಗಳಿಗೆ ಅವಶ್ಯವಾದ ಶಕ್ತಿಯ ಮೂಲ. ಎಟಿಪಿ ಶಕ್ತಿಯ ಮೂಲವಾಗಿ ಬಳಸಲ್ಪಟ್ಟಾಗ ಪ್ರತಿಯೊಂದು ವೈಯಕ್ತಿಕ ಅಣುವಿಗೂ 8,000-9,000ಕೆಲೊರಿಗಳ ರೀತ್ಯ ಶಕ್ತಿಯನ್ನು ಒದಗಿಸುತ್ತದೆ. ಈವೇಳೆಯಲ್ಲಿ ಅದು ತನ್ನ ಅಂತ್ಯದ ಒಂದು ಫಾಸ್ಪೇಟ್ ಗುಂಪನ್ನು ಕಳೆದುಕೊಂಡು ಎಟಿಪಿ ಆಗುತ್ತದೆ. ಇನ್ನಷ್ಟು ಆಹಾರ ಸಾಮಗ್ರಿಗಳ ಉತ್ಕರ್ಷಣದ ಮೂಲಕ ಎಟಿಪಿ ಮತ್ತು ಫಾಸ್ಪೇಟುಗಳಿಂದ ಎಟಿಪಿ ಸಂಶ್ಲೇಷಣೆ ಆಗುತ್ತದೆ. ಜೀವವಿಧಾನದಲ್ಲಿ ಶಕ್ತಿಯನ್ನು ಉಪಯೋಗಿಸಿಕೊಳ್ಳುವ ಈ ಕುಶಲ ವಿಧಾನಕ್ಕೆ ಕಾರಾಣವಾಗಿರುವ ಕಿಣ್ವಗಳಲ್ಲಿ ಅಧಿಕ ಸಂಖ್ಯೆಯವು ಮೈಟೊಕಾಂಡ್ರಿಯಾದಲ್ಲಿ ಸ್ಥಾನೀಕೃತವಾಗಿವೆ.

ಪ್ರಾಣಿಯ ಜೀವನದ ಸಂರಕ್ಷಣೆ

[ಬದಲಾಯಿಸಿ]

ಪ್ರಾಣಿಯ ಜೀವನದ ಸಂರಕ್ಷಣೆಗೆ ಕಾರ್ಬೋಹೈಡ್ರೇಟಿನ ಪ್ರಾಮುಖ್ಯ ಕಾರ್ಬೋಹೈಡ್ರೇಟನ್ನು ತಿನ್ನುವುದನ್ನು ಮಿತಿಗೊಳಿಸಿದಾಗ ಅಥವಾ ಕಾರ್ಬೋಹೈಡ್ರೇಟ್ ಚಯಾಪಚಯದಲ್ಲಿ ಕ್ಷೋಭೆಯುಂಟಾದಾಗ ತಿಳಿದುಬರುತ್ತದೆ. ಕಾರ್ಬೋಹೈಡ್ರೇಟಿನ ಕೊರತೆಯಿಂದ ಪ್ರಾಣಿ ಬಡಕಲಾಗಿ ಕ್ಷೀಣವಾಗುತ್ತದೆ. ಶಕ್ತಿಯ ಆವಶ್ಯಕತೆಗಳಿಗಾಗಿ ಬಳಸುವುದರಿಂದ ಪ್ರೋಟೀನ್ ಶೇಖರಣೆಯಲ್ಲಿ ಕೊರತೆಯುಂಟಾದರೆ ಕಾರ್ಬೋಹೈಡ್ರೇಟ್ ಚಯಾಪಚಯದಲ್ಲಿ ಕ್ಷೋಭೆಯುಂಟಾದಾಗ ಅದು ಸಿಹಿಮೂತ್ರ (ಇನ್ಸ್ಯುಲಿನ್ನಿನ ಕೊರತೆ), ವಾನ್ ಜೀರ್ಕ್ಸ್ ಖಾಯಿಲೆ ಅಥವಾ ಗ್ಲೈಕೊಜನ್ ಶೇಖರಣಾ ಖಾಯಿಲೆ (ಕಿಣ್ವದ ಅಭಾವದಿಂದ ಪಿತ್ತಜನಕಾಂಗದಲ್ಲಿ  ಗ್ಲೈಕೊಜನಿನ ಹೆಚ್ಚಿನ ಶೇಖರಣೆ), ಗ್ಯಾಲೆಕ್ಟೋಸೆಮಿಯಾ (ಕಿಣ್ವದ ಅಭಾವದಿಂದ ಉಂಟಾಗುವ ಮತ್ತೊಂದು ಖಾಯಿಲೆ) ಇತ್ಯಾದಿ ವಿವಿಧ ರೂಪಗಳಲ್ಲಿ ವ್ಯಕ್ತವಾಗುತ್ತದೆ.

ದ್ಯುತಿಸಂಶ್ಲೇಷಣೆ-೧

[ಬದಲಾಯಿಸಿ]

ಪ್ರಾಣಿಜೀವನದ ಉಳಿವಿಗೆ ಅವಶ್ಯಕವಾದ ಕಾರ್ಬೋಹೈಡ್ರೇಟುಗಳನ್ನು ಪ್ರಾಣಿಕೋಶಗಳು ಸಂಶ್ಲೇಷಿಸಿಕೊಳ್ಳಲಾರವು ಮತ್ತು ಪೂರ್ವಭಾವಿಯಾಗಿ ಸಂಶ್ಲೇಷಿತರೂಪದಲ್ಲಿ ಇವನ್ನು ಹೊರಗಿನಿಂದ ಸರಬರಾಜು ಮಾಡಬೇಕು. ಸಸ್ಯಗಳು ಇವನ್ನು ಸಂಶ್ಲೇಷಿಸುವುದರಿಂದ ದ್ಯುತಿಸಂಶ್ಲೇಷಣೆಯ ಮೂಲಕ ಸಸ್ಯಗಳಿಂದ ನಡೆಯುವ ಕಾರ್ಬೋಹೈಡ್ರೇಟುಗಳ ಸಂಶ್ಲೇಷಣೆಯ ಕ್ರಿಯಾವಿಧಿ ಅತಿಮುಖ್ಯವಾದದ್ದು. ಕಾರ್ಯತಃ ದ್ಯುತಿಸಂಶ್ಲೇಷಣೆ ಉಸಿರಾಟದ ಕ್ರಿಯೆಗೆ ಪ್ರತೀಪಗಾಮಿ (ರಿವರ್ಸಲ್) ಕ್ರಿಯೆ. ಎಂದರೆ ಶಕ್ತಿಯ ವ್ಯಯದಿಂದ ಇಂಗಾಲದ ಡೈಆಕ್ಸೈಡ್ ಮತ್ತು ನೀರಿನಿಂದ ಕಾರ್ಬೋಹೈಡ್ರೇಟಿನ ತಯಾರಿಕೆ [ಸಮೀಕರಣ (1)ರ ತಿರುಗುಮುರುಗ ರೂಪ]. ದ್ಯುತಿಸಂಶ್ಲೇಷಣೆ ಎಂಬ ಪದವೇ ಸೂಚಿಸುವಂತೆ ಶಕ್ತಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಸೂರ್ಯನಿಂದ ದೊರೆಯುವ ಬೆಳಕಿನ ಶಕ್ತಿಯ ಹೀರುವಿಕೆ ಮತ್ತು ಅಂತಿಮವಾಗಿ ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸಲು ಮುಖ್ಯವಾದ ಸಂಯುಕ್ತಗಳೆಂದರೆ ಎಲೆಯಲ್ಲಿರುವ ಹಸಿರು ವರ್ಣದ್ರವ್ಯಗಳು ಹರಿತ್ತುಗಳಾದ ಎ ಮತ್ತು ಬಿ ಹಾಗೂ ಕೆರೊಟಾನಾಯ್ಡುಗಳು. ಈ ವರ್ಣ ದ್ರವ್ಯಗಳು ಹರಿತ್ತಣು ಅಥವಾ ಕ್ಲೋರೋಪ್ಲಾಸ್ಟಿನಲ್ಲೇ ಪ್ರೋಟೀನ್ ಅಥವಾ ಲಿಪೊ ಪ್ರೋಟೀನ್ ಸಂಕೀರ್ಣಗಳ ರೂಪದಲ್ಲಿ ದೊರೆಯುತ್ತವೆ. ದ್ಯುತಿಸಂಶ್ಲೇಷಣ ಕ್ರಿಯೆಯಿಂದ ಕಾರ್ಬೋಹೈಡ್ರೇಟುಗಳ ಉಂಟಾಗುವಿಕೆಯನ್ನು ಶಕ್ತಿಯನ್ನು ಅಪೇಕ್ಷಿಸುವ ಉತ್ಕರ್ಷಣ ಅಪಕರ್ಷಣ ಕ್ರಿಯೆಯೆಂದು ಹೇಳಬಹುದು. ಅಪಕರ್ಷಣಕಾರಿಯಾದ ನೀರು ಆಕ್ಸಿಜನ್ನಾಗಿ ಉತ್ಕರ್ಷಣಗೊಳ್ಳುತ್ತದೆ. ಉತ್ಕರ್ಷಣಕಾರಿಯಾದ ಅಔ2,ಅ(ಊ2ಔ) ನಿಂದ ಪ್ರತಿನಿಧಿತವಾಗುವ ಕಾರ್ಬೋಹೈಡ್ರೇಟ್ ಮಟ್ಟಕ್ಕೆ ಅಪಕರ್ಷಿಸಲ್ಪಡುತ್ತದೆ.

ವರ್ಗೀಕರಣ

[ಬದಲಾಯಿಸಿ]

ಕಾರ್ಬೋಹೈಡ್ರೇಟುಗಳನ್ನು ಏಕಶರ್ಕರಗಳು (ಮಾನೋಸಾಕ್ಕರಾಯಿಡ್ಸ್), ಲಘುಶರ್ಕರಗಳು (ಆಲಿಗೋಸಾಕ್ಕರಾಯಿಡ್ಸ್) ಮತ್ತು ಬಹು ಶರ್ಕರಗಳು (ಪಾಲಿಸಾಕ್ಕರಾಯಿಡ್ಸ್) ಎಂದು ಮೂರು ಪ್ರಮುಖ ಗುಂಪುಗಳಾಗಿ ವರ್ಗೀಕರಿಸಬಹುದು.

ಏಕಶರ್ಕರಗಳು

[ಬದಲಾಯಿಸಿ]

ಇವು ಸರಳ ಶರ್ಕರಗಳು ; ಸಾಮಾನ್ಯವಾದ ಪರಿಸ್ಥಿತಿಗಳಲ್ಲಿ ಜಲವಿಶ್ಲೇಷಣೆಯಿಂದ ಅಲ್ಪತರ ಮಾನಗಳಿಗೆ ಪರಿವರ್ತನೆಯಾಗುವುದಿಲ್ಲ. ಇವುಗಳಲ್ಲಿ ಹೆಚ್ಚಿನವು ಶಾಖೆಯಿಲ್ಲದವು ಮತ್ತು ಇವನ್ನು ನೇರ ಸರಣಿಯ ಪಾಲಿಹೈಡ್ರಾಕ್ಸಿ ಆಲ್ಡಿಹೈಡುಗಳು (ಆಲ್ಡೋಸುಗಳು) ಅಥವಾ ಕೀಟೋನುಗಳು (ಕೀಟೋಸುಗಳು) ಎಂದು ವಿವರಿಸಬಹುದು. ಆಲ್ಡೋಸುಗಳಲ್ಲಿ ಉದಾಹರಣೆಗಾಗಿ ಗ್ಲೂಕೋಸನ್ನು ಅಊಔ-(ಅಊಔಊ)4-ಅಊ2ಔಊ ಎಂಬ ಸೂತ್ರದಿಂದ ಹೇಳಿದಾಗ ಕಾರ್ಬೊನಿಲ್ ಪುಂಜ ಅ-1ದಲ್ಲಿದ್ದರೆ, ಕೀಟೋಸುಗಳಲ್ಲಿ ಸರಣಿಯ ಅ-2 ರಲ್ಲಿ ಇರುತ್ತದೆ. ಉಳಿದ ಐದು ಇಂಗಾಲ ಪರಮಾಣುಗಳಿಗೆ ಹೈಡ್ರಾಕ್ಸಿಲ್ ಪುಂಜ ಬದ್ಧವಾಗಿರುತ್ತದೆ. ಸಾಮಾನ್ಯವಾಗಿ ಅವು ಆರು (ಪೈರನೋಸ್) ಅಥವಾ ಐದು (ಫ್ಯುರನೋಸ್) ಸಂಖ್ಯಾವಲಯಗಳಲ್ಲಿ ದೊರೆತರೂ ಅವುಗಳಲ್ಲಿ ಹೆಚ್ಚಿನ ಗುಣಗಳು ವಿವೃತಸರಣಿ (ಓಪನ್‍ಚೈನ್) ರಚನೆಯುಳ್ಳ ವಸ್ತುಗಳ ಗುಣಗಳಿಗೆ ಸರಿ ಹೊಂದುತ್ತದೆ. ಟ್ರಯೋಸುಗಳು (3), ಟೆಟ್ರೋಸುಗಳು (4), ಪೆಂಟೋಸುಗಳು (5), ಹೆಕ್ಸೋಸುಗಳು (6) ಇತ್ಯಾದಿ ನಾನೋಸುಗಳು (9) ವರೆಗೆ ಅವನ್ನು ಅವುಗಳಲ್ಲಿರುವ ಇಂಗಾಲ ಪರಮಾಣುಗಳ ಸಂಖ್ಯೆಗೆ ಅನುಗುಣವಾಗಿ ವರ್ಗೀಕರಿಸಲಾಗಿದೆ. ಸುಮಾರು ಇಪ್ಪತ್ತು ಏಕಶರ್ಕರಗಳು ಪ್ರಕೃತಿಯಲ್ಲಿ ದೊರೆಯುತ್ತದೆ. ಇವುಗಳಲ್ಲಿ ಮುಖ್ಯವಾದವು ಹೆಕ್ಸೋಸುಗಳು, ವಿಶೇಷವಾಗಿ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಗ್ಯಲಕ್ಟೋಸ್, ಪೆಂಟೋಸುಗಳ ಗುಂಪಿಗೆ ಅರ್ಯಾಬಿನೋಸ್, ಕ್ಸೈಲೋಸ್ ಮತ್ತು ರೈಬೋಸ್‍ಗಳು ಸೇರಿವೆ. ಡಿ-ರೈಬೋಸ್ ಮತ್ತು 2-ಡಿ ಆಕ್ಸಿರೈಬೋಸ್ ಇವು ಸಕಲ ಜೀವಕೋಶಗಳಲ್ಲಿಯೂ ದೊರೆಯುವ ಎರಡು ವಿಧದ ನ್ಯೂಕ್ಲಿಯಕ್ ಆಮ್ಲದ (ಡಿಎನ್‍ಎ ಮತ್ತು ಆರ್‍ಎನ್‍ಎ) ಪ್ರಮುಖ ಅಂಶಗಳು. ರೈಬೋಸ್ ಸಹ ಅನೇಕ ಸಹಕಿಣ್ವಗಳ ಘಟಕ. ಮಧ್ಯವರ್ತಿ ಚಯಾಪಚಯದಲ್ಲಿ ಭಾಗವಹಿಸುವ ಮತ್ತೊಂದು ಪೆಂಟೋಸ್ ಎಂದರೆ ಕ್ಸೈಲ್ಯುಲೋಸ್ (ಫಾಸ್ಪೇಟ್ ಎಸ್ಟರ್ ರೂಪದಲ್ಲಿ). ಏಕಶರ್ಕರಗಳ ಚಯಾಪಚಯದಲ್ಲಿ ಡೈಹೈಡ್ರಾಕ್ಸಿಅಸಿಟೋನ್ ಎಂಬ ಒಂದು ಟ್ರಯೋಸ್ ಫಾಸ್ಪೇಟು ಗುಂಪನ್ನೊಳಗೊಂಡ ವ್ಯುತ್ಪನ್ನದ ರೂಪದಲ್ಲಿರುತ್ತದೆ. ಚಯಾಪಚಯದಲ್ಲಿ ಮುಖ್ಯವಾದ ಹೆಪ್ಟೋಸ್ ಎಂದರೆ ಸೀಡೋಹೆಪ್ಟ್ಯುಲೋಸ್. ಇದು ಪ್ರಕೃತಿಯಲ್ಲಿ ಅಸಂಯೋಜಿತ ರೂಪದಲ್ಲಿಯೂ ಮಾನೋ ಹಾಗೂ ಡೈಫಾಸ್ಪೇಟುಗಳ ರೂಪದಲ್ಲಿಯೂ ದೊರೆಯುತ್ತದೆ. ಕೆಲವು ಸಸ್ಯಗಳು (ಸೀಡಂ ಜಾತಿಯವು)ಮತ್ತು ಕೆಲವು ಗ್ರಾಮ್-ನೆಗೆಟಿವ್ ಜೀವಾಣುಗಳು ಸ್ವಾಭಾವಿಕ ಮೂಲಗಳು.


ಆಕ್ಟೋಸ್

[ಬದಲಾಯಿಸಿ]

ಡಿ-ಗ್ಲೈಕೋ-ಡಿ -ಮ್ಯಾನೋ ಆಕ್ಟ್ಯುಲೋಸ್ ಒಂದೇ ಈವರೆಗೆ ಪ್ರತ್ಯೇಕಗೊಳಿಸಲಾಗಿರುವ ಆಕ್ಟೋಸು. ಇದನ್ನು ಅವಕ್ಯಾಡೊ ಪಿಯರ್‍ನಿಂದ (ಒಂದು ಜಾತಿಯ ಹಣ್ಣು) ಡಿ-ಸೀಡೊಹೆಪ್ಟ್ಯುಲೋಸಿನೊಂದಿಗೆ ಪಡೆಯಲಾಗಿದೆ.

ನಾನೋಸ್

[ಬದಲಾಯಿಸಿ]

ಇದು ಇದರ ವ್ಯುತ್ಪನ್ನ ನ್ಯೂರಾಮಿನಿಕ್ ಆಮ್ಲದ ರೂಪದಲ್ಲಿ ಇರುವುದಾಗಿ ತಿಳಿದುಬಂದಿದೆ. ನ್ಯೂರಾಮಿನಿಕ್ ಆಮ್ಲ ಗ್ಯಾಂಗ್ಲಿಯೋಸೈಡುಗಳಲ್ಲಿ (ಮಿದುಳಿನ ತೈಲಗಳಲ್ಲಿ) ಇರುತ್ತದೆ.

ಡಿಆಕ್ಸಿ ಶರ್ಕರಗಳು

[ಬದಲಾಯಿಸಿ]

ಕೆಲವು ಸಂದರ್ಭಗಳಲ್ಲಿ ಒಂದು ಅಥವಾ ಹೆಚ್ಚು ಹೈಡ್ರಾಕ್ಸಿಲ್ ಗುಂಪು ಜಲಜನಕ ಪರಮಾಣುಗಳ ಅಥವಾ ಮಿಥೈಲ್ ಗುಂಪಿನಿಂದ ಪ್ರತಿ ಸ್ಥಾಪಿತವಾಗುತ್ತವೆ. ಮತ್ತು ತತ್ಪರಿಣಾಮವಾಗಿ ಉಂಟಾಗುವ ಸಂಯುಕ್ತವೇ ಡಿಆಕ್ಸಿ ಶರ್ಕರ , 2-ಆಕ್ಸಿ-ಡಿ-ರೈಬೋಸ್  ಡಿಆಕ್ಸಿ ರೈಬೋನ್ಯೂಕ್ಲಿಯಿಕ್ ಆಮ್ಲದ (ಡಿಎನ್‍ಎ) ಶರ್ಕರ, ಎಲ್-ರ್ಯಾóಮ್ನೋಸ್ (6-ಡಿಆಕ್ಸಿ-ಎಲ್-ಮ್ಯಾನೋಸ್ ; ಎಲ್ ಮ್ಯಾನೋಮಿಥೈಲೋಸ್) ಮತ್ತು ಎಲ್-ಫ್ಯುಕೋಸ್ (6-ಡಿಆಕ್ಸಿ-ಎಲ್ ಗ್ಯಾಲಕ್ಟೋಸ್ ; ಎಲ್ ಗ್ಯಾಲಕ್ಟೋ ಮಿಥೈಲೋಸ್) ಇವು ಸಾಮಾನ್ಯ ಉದಾಹರಣೆಗಳು. ಎಲ್-ಫ್ಯೂಕೋಸನ್ನು ಸಸ್ಯಗಳ ಗ್ಲೈಕೊಸೈಡುಗಳಲ್ಲಿ ಮತ್ತು ಹರಿತ್ತು ಶೈವಾಲಗಳ ಗೋಂದಿನ ಸೋರಿವಿಕೆಯ ಪಾಲಿಶರ್ಕರಗಳಲ್ಲಿ ನೋಡಬಹುದು. ಮನುಷ್ಯರ ಹಾಲಿನ ಲಘುಶರ್ಕರಗಳಲ್ಲಿ ರಕ್ತವರ್ಗ ವಸ್ತುಗಳ ಬಹುಶರ್ಕರಗಳಲ್ಲಿ ಮತು ಅನೇಕ ಗ್ಲೈಕೋಪ್ರೋಟೀನುಗಳಲ್ಲಿ ಸಹ ಅದು ದೊರೆಯುತ್ತದೆ. ಕಂದು ಶೈವಾಲದ ಬಹುಶರ್ಕರಗಳಲ್ಲಿನ ಶರ್ಕರದ ಅಂಶ ಫ್ಯೂಕಾಯ್ಡಿನ್. ಬಹುಶರ್ಕರದಲ್ಲಿರುವ ಅಂಶ ಇದೊಂದೇ. ಸ್ಟ್ರೆಪ್ಟೊಮೈಸಿನ್‍ನ ಒಂದು ಶಾಖೀಯ ಡಿಆಕ್ಸಿ ಶರ್ಕರ. ಅನೇಕ ಶಾಖೀಯ ಶರ್ಕರಗಳು ಪ್ರಕೃತಿಯಲ್ಲಿರುವುದಾಗಿ ತಿಳಿದುಬಂದಿದೆ.

ವ್ಯುತ್ಪನ್ನಗಳು

[ಬದಲಾಯಿಸಿ]

ಓಸಜೋóನುಗಳು ಮತ್ತು ಓಸಾಟ್ರಯeóÉೂೀಲುಗಳು; ಫೀನೈಲ್ ಹೈಡ್ರಜೀನಿನೊಡನೆ  ಮಾನೋಸ್ಯಾಕರೈಡುಗಳ ಕ್ರಿಯೆ ಆಗ್ರ್ಯಾನಿಕ್ ರಸಾಯನಶಾಸ್ತ್ರದ ಕ್ರಿಯೆಗಳಲ್ಲಿ ಶ್ರೇಷ್ಠವಾದ ಒಂದು ರಾಸಾಯನಿಕ ಕ್ರಿಯೆ. ದೀರ್ಘಕಾಲದ ಕಾಸುವಿಕೆಯಿಂದ ಫೀನೈಲ್ ಹೈಡ್ರಜೀನಿನ ಮೂರು ಅಣುಗಳು ಆಲ್ಡೋಸ್ ಅಥವಾ ಕೀಟೋಸಿನೊಡನೆ ಕ್ರಿಯೆ ಹೊಂದಿ ಓಸeóÉೂೀನ್ ಉತ್ಪತ್ತಿಯಾಗುತ್ತದೆ. ಪ್ರತಿಯೊಂದು ಕೀಟೋಸ್ ಸಹ ರಚನಾತ್ಮಕವಾಗಿ ಸಂಬಂಧವಿರುವ ಎರಡು ಆಲ್ಡೋಸುಗಳಿಂದ ಪಡೆಯುವಂಥ ಓಸeóÉೂೀನನ್ನು ನೀಡುತ್ತದೆ. ಶರ್ಕರಗಳ ಲಕ್ಷಣ ಮತ್ತು ಪತ್ತೆಯಲ್ಲಿ ಓಸeóÉೂೀನುಗಳು ಅತ್ಯಂತ ಶ್ರೇಷ್ಠವಾದ ಸ್ಫಟಿಕೀಯ ವ್ಯುತ್ಪನ್ನಗಳು. ಆದರೆ ಕಾಪರ್ ಸಲ್ಫೇಟಿನಿಂದ ಓಸeóÉೂೀನನ್ನು ಉತ್ಕರ್ಷಿಸಿ ಪಡೆದ ಓಸಾಟ್ರಯಜೋಲುಗಳು ಸ್ಥಿರವಾಗಿರುವುದರಿಂದಲೂ ಶುದ್ಧರೂಪದಲ್ಲಿ ಪಡೆಯಬಹುದಾದ್ದರಿಂದಲೂ ದ್ರಾವಣದಲ್ಲಿ ನಿರ್ವರ್ಣವಾಗಿದ್ದು ದ್ಯುತಿಭ್ರಮಣೆಯನ್ನು ಸುಲಭವಾಗಿ ಅಳೆಯಬಹುದಾದ್ದರಿಂದಲೂ ಅವುಗಳ ತಯಾರಿಕೆಯ ಕಡೆಗೆ ಒಲವು ಹೆಚ್ಚು.

ಎಸ್ಟರುಗಳು

[ಬದಲಾಯಿಸಿ]

ಶರ್ಕರಗಳಲ್ಲಿ ಮತ್ತು ಅವುಗಳ ವ್ಯುತ್ಪನ್ನಗಳಲ್ಲಿರುವ ಹೈಡ್ರಾಕ್ಸಿಲ್ ಪುಂಜವನ್ನು ಬಹು ಸುಲಭವಾಗಿ ಫಾಸ್ಪೇಟ್ ಮತ್ತು ಸಲ್ಫೇಟ್‍ಗಳಿಂದ ಎಸ್ಟರೀಕರಿಸಬಹುದು. ಫಾಸ್ಪೇಟ್ ಎಸ್ಟರುಗಳು, ಮುಕ್ತ ಶಕ್ತಿಯ ಶೇಖರಣೆ ಮತ್ತು ಬಿಡುಗಡೆಯ ಚಯಾಪಚಯಗಳಲ್ಲಿ ಹಾಗೂ ವೇಗವರ್ಧನೆಯಲ್ಲಿ ಭಾಗವಹಿಸುವುದರಿಂದ ಜೈವಿಕ ಕ್ರಿಯೆಗಳಲ್ಲಿ ವ್ಯಾಪಕವಾದ ಪ್ರಾಮುಖ್ಯವನ್ನು ಪಡೆದಿವೆ. ಕೋರಿ ಎಸ್ಟರ್ ಎಂದು ಪರಿಚಿತವಾಗಿರುವ ಗ್ಲೂಕೋಸ್ ಫಾಸ್ಪೇಟಿಗೆ ಪ್ರಾಣಿಯ ದೇಹದಲ್ಲಿನ ಚಯಾಪಚಯದಲ್ಲಿ ಪ್ರಮುಖವಾದ ಪಾತ್ರವೊಂದಿದೆ.

ಶರ್ಕರ ಈಥರುಗಳು

[ಬದಲಾಯಿಸಿ]

ಮೆಥಾಕ್ಸಿಲ್ ಗುಂಪನ್ನು ಜೊತೆಗೂಡಿಸುವುದರ ಮೂಲಕ ಈಥರೀಕಣ (ಮೆಥಿಲೇಷನ್) ಏಕಶರ್ಕರಗಳು ಮತ್ತು ಅವುಗಳ ಸಂಕೀರ್ಣ ಪಾಲಿಮರಿಕ್ ವ್ಯುತ್ಪನ್ನಗಳ ರಚನೆಯ ಸೃಷ್ಟೀಕರಣದಲ್ಲಿ ಒಂದು ಮುಖ್ಯ ಹಂತ.

ಏಕಶರ್ಕರಗಳ ಗುಣಗಳು

[ಬದಲಾಯಿಸಿ]

ಅಪಕರ್ಷಣ ಗುಣಧರ್ಮಗಳು : ಅಣುವಿನಲ್ಲಿರುವ ಮುಕ್ತ ಅಥವಾ ವಿಭವಮುಕ್ತ ಆಲ್ಡಿಹೈಡ್ ಅಥವಾ ಕೀಟೋನ್ ಗುಂಪಿನಿಂದಾಗಿ ಏಕಶರ್ಕರಗಳು ಲೋಹ ಅಯಾನುಗಳನ್ನು ಅದರಲ್ಲಿಯೂ ವಿಶೇಷವಾಗಿ ಪ್ರತ್ಯಾಮ್ಲ ದ್ರಾವಣಗಳಲ್ಲಿ ತಾಮ್ರ ಅಥವಾ ಬೆಳ್ಳಿಯನ್ನು ಅಪಕರ್ಷಿಸಬಲ್ಲವು. ಅಪಕರ್ಷಣ ಶರ್ಕರಗಳನ್ನು ಪತ್ತೆಹಚ್ಚುವುದರಲ್ಲಿ ಅತ್ಯಂತ ಸಾಮಾನ್ಯವಾದ ಅಭಿಕರ್ಮಕವೆಂದರೆ (ರೀ ಏಜೆಂಟ್) ಫೆಹಲಿಂಗ್‍ನ ದ್ರಾವಣ. ಈ ಅಭಿಕರ್ಮಕದಲ್ಲಿ ಎಂಬುದರ ಕ್ಲಿಷ್ಟರೂಪ ಟಾರ್‍ಟ್ರೇಟ್ ದ್ರಾವಣ ರೂಪದಲ್ಲಿ ಉಳಿದಿರುತ್ತದೆ. ಶರ್ಕರದಲ್ಲಿರುವ ಆಲ್ಡಿಹೈಡ್ ಗುಂಪನ್ನು ಸುಮಾರಾದ ಉತ್ಕರ್ಷಣಕಾರಿಗಳನ್ನು ಉಪಯೋಗಿಸಿ ಮಾನೋ ಕಾರ್ಬಾಕ್ಸಿಲಿಕ್ ಆಮ್ಲಕ್ಕೂ ಪ್ರಬಲ ಉತ್ಕರ್ಷಣಕಾರಿಗಳನ್ನು (ನೈಟ್ರಿಕ್ ಆಮ್ಲದಂಥ) ಉಪಯೋಗಿಸಿ ಡೈಕಾರ್ಬಾಕ್ಸಿಲಿಕ್ ಆಮ್ಲಗಳಿಗೂ ಉತ್ಕರ್ಷಿಸಬಹುದು. ಇವೇ ಪರಿಸ್ಥಿತಿಗಳಲ್ಲಿ ಪೆಂಟೋಸುಗಳು ಪರ್‍ಫ್ಯುರಾಲುಗಳನ್ನು ನೀಡುತ್ತವೆ.

ಪರಿವರ್ತಿ(ಮ್ಯುಟರೊಟೇಶನ್)

[ಬದಲಾಯಿಸಿ]

ಸಾಮಾನ್ಯ ಗ್ಲೂಕೋಸನ್ನು ನೀರಿನಲ್ಲಿ ವಿಲೀನಗೊಳಿಸಿದಾಗ ಆರಂಭ ವಿಶಿಷ್ಟ ದ್ಯುತಿಭ್ರಮಣ ಕ್ರಮೇಣ ಇದರ ಅರ್ಧಕ್ಕೆ ಅಂದರೆ +55ಲಿ ಗೆ ಇಳಿಯುತ್ತದೆ. ಇದಕ್ಕೆ ಗ್ಯಾಲಕ್ಟೋಸ್, ಮ್ಯಾಲ್ಟೋಸ್ ಮತ್ತು ಲ್ಯಾಕ್ಟೋಸುಗಳು ಹೊರತಾಗಿವೆ. ಗ್ಲೂಕೋಸ್ ಹತ್ತು ರೂಪಗಳಲ್ಲಿ  ದೊರೆಯುವುದೇ ಇದರ ಕಾರಣ. ಇದು ಅಣುವಿನ ಮೊದಲನೆ ಇಂಗಾಲ ಅಣುವಿನ ಸುತ್ತಲ ವಿನ್ಯಾಸದಿಂದ ಸಾಧ್ಯವಾಗಿದೆ.

ಅಧಿಅವಯವಗಳು (ಎಪಿಮರುಗಳು)

[ಬದಲಾಯಿಸಿ]

ಶರ್ಕರ ಆಮ್ಲಗಳಂಥ ಎರಡು ಶರ್ಕರಗಳು ಅಥವಾ ಅವುಗಳ ವ್ಯುತ್ಪನ್ನಗಳ ರಚನೆಯಲ್ಲಿ ಅಪಕರ್ಷಣಕಾರಿ ಗುಂಪಿನ ಪಕ್ಕದಲ್ಲಿರುವ ಇಂಗಾಲ ಅಣುವಿನ ವಿನ್ಯಾಸದಲ್ಲಿ ಮಾತ್ರ ಬದಲಾದಾಗ ಅದನ್ನು ಅಧಿಅವಯವಗಳೆಂದು ಹೇಳುತ್ತೇವೆ. ಈರೀತಿಯಲ್ಲಿ ಗ್ಲೂಕೋಸ್, ಫ್ರಕ್ಟೋಸ್ ಮತ್ತು ಮಾನೋಸುಗಳು ಅಧಿಅವಯವಗಳಾದ ಹೆಕ್ಸೋಸುಗಳು. ಸುಣ್ಣದ ತಿಳಿನೀರಿನಿಂದ ಗ್ಲೂಕೋಸನ್ನು ಸ್ವಲ್ಪಮಟ್ಟಿಗೆ (ದುರ್ಬಲವಾಗಿ) ಕ್ಷಾರಗೊಳಿಸಿದಾಗ ಈ ಅಧಿಅವಯಗಳ ನಡುವೆ ಒಂದು ಸಮತೋಲನವುಂಟಾಗುತ್ತದೆ. (ಲೋರಿಡಿ ಬ್ರೂನ್ ರೂಪಾಂತರ)

ಅಮೈನೋ ಶರ್ಕರಗಳು

[ಬದಲಾಯಿಸಿ]

ರಕ್ತವರ್ಗ ವಸ್ತುಗಳು ಮತ್ತು ಗ್ಲೈಕೋಪ್ರೋಟೀನುಗಳನ್ನು ಒಳಗೊಂಡ ಬಹುಶರ್ಕರಗಳನ್ನು ಜಲವಿಚ್ಛೇದನೆ ಮಾಡಿದಾಗ ಪಡೆಯುವ ಏಕಶರ್ಕರಗಳಲ್ಲಿ ಹೈಡ್ರಾಕ್ಸಿಲ್ ಪುಂಜ ಅಮೈನೋ ರ್ಯಾಡಿಕಲ್ ಒಂದರಿಂದ ಪ್ರತಿಸ್ಥಾಪಿತವಾಗಿರುವುದು ಕಂಡುಬರುತ್ತದೆ. ಆ ರೀತಿಯ ವಸ್ತುಗಳಲ್ಲಿ ಸಾಮಾನ್ಯವಾದ ಘಟಕಗಳಲ್ಲಿ 2-ಅಮೈನೋ-2-ಡಿಆಕ್ಸಿ-ಡಿ ಗ್ಲೂಕೋಸ್ (ಡಿ-ಗ್ಲೂಕೋಸಮೀನ್) ಒಂದು. ಡಿ-ಗ್ಲೂಕೋಸಮೀನ್ ಮಾನಗಳ ಪ್ರತ್ಯಾವರ್ತಿಯಿಂದ ಉಂಟಾದ ಬಹ್ವಂಗಿ ಹೈಲ್-ಯುರಾನಿಕ್ ಆಮ್ಲದಲ್ಲಿ ಶರ್ಕರ ಅಣುಗಳ ಅಮೈನೋ ಗುಂಪುಗಳಲ್ಲಿ ಅಸಿಟೈಲ್ ಅಂಶಗಳಿವೆ. ಪ್ರಾಣಿಗಳ ಕೋಶಾಂಗಗಳಲ್ಲಿ ವ್ಯಾಪಕವಾಗಿ ಹರಡಿರುವ ಮತ್ತು ಪ್ರಬಲವಾದ ರಕ್ತದ ಸಂಘನನವಿರೋಧಿ (ಎಂಟಿಕೋಯಾಗ್ಯುಲೆಂಟ್), ಲಕ್ಷಣ ಇರುವ ಮತ್ತು ಗ್ಲೂಕರಾನಿಕ್ ಆಮ್ಲ ಮತ್ತು ಡಿ-ಗ್ಲೂಕೋಸಮೀನ್‍ಗಳಿಂದ ರೂಪಿತವಾಗಿರುವ ಹೆಪರಿನ್ನಿನಲ್ಲಿ ಶರ್ಕರ ಓ-ಮತ್ತು-ಎನ್ ಸಲ್ಫೇಟು ಗುಂಪುಗಳನ್ನು ಹೊಂದಿದೆ. ಹೆಕ್ಸೋಸಮೀನುಗಳಾದ ಕೈಟೋಮೀನ್ (ಡಿ-ಗ್ಲೂಕೋಸಮೀನ್) ಮತ್ತು ಕಾಂಡ್ರೂಸಮೀನುಗಳು (ಡಿ-ಗ್ಯಾಲಕ್ಟೋಸ ಸಮೀನ್) ಕ್ರಸ್ಟೇಶಿಯಾ ಮತ್ತು ಬೂಜುಗಳ ಕಂಕಾಲ ಪ್ರಕೃತಿ ಉತ್ಪನ್ನಗಳ ರಚನಕಾರಕ ವಸ್ತುಗಳು. ಇವುಗಳ ಪೈಕಿ ಮೊದಲನೆಯದು ಅಮೈನೋ ಬಹುಶರ್ಕರವಾದ ಕಾಯಿಟಿನಿನಲ್ಲಿ, ಮ್ಯೂಕೋಪ್ರೋಟೀನುಗಳಲ್ಲಿ ಮತ್ತು ಮ್ಯೂಕೋಪಾಲಿ ಶರ್ಕರಗಳಲ್ಲಿದ್ದರೆ ಎರಡನೆಯದು ಶರ್ಕರ ಮೃದ್ವಸ್ಥಿ ಮತ್ತು ಕಂಡರಗಳ ಕಾಯಿಂಡ್ರಾಯಿಟ್ನ ಸಲ್ಫ್ಯೂರಿಕ್ ಆಮ್ಲದಲ್ಲಿ ದೊರೆಯುತ್ತದೆ. ಕಾಯಿಟಿನಿನಲ್ಲಿ ಹೆಕ್ಸೋಸಮಿನ್ ಒಂದು ಸರಪಳಿಯಂತೆ ಸೇರಿಸಲ್ಪಟ್ಟಿದೆ. ಹಯಲ್ಯುರಾನಿಕ್ ಆಮ್ಲದ ಸಲ್ಫೇಟ್ (ಕಣ್ಣಿನ ಕಾರ್ನಿಯಾದಿಂದ) ಮತ್ತು ಓವೋಮ್ಯುಕಾಯಿಡ್ ಎಂದು ಪರಿಚಿತವಾಗಿರುವ ತತ್ತಿಯ ಒಂದಾದ (ಅಂಡಶ್ವೇತ) ಮ್ಯೂಕೋಬಹುಶರ್ಕರಗಳ ಮುಂತಾದ ಸ್ವಾಭಾವಿಕ ವಸ್ತುಗಳಲ್ಲಿರುವಂತೆಯೇ ಇದರಲ್ಲೂ ಅಮೈನೋ ಪುಂಜ ಅಸಿಟೈಲ್ ಪುಂಜಕ್ಕೆ ಸಾಗಿಸಲ್ಪಟ್ಟಿದೆ. ಹೈಡ್ರೊಕ್ಲೋರಿಕ್ ಆಮ್ಲದೊಡನೆ ಕಾಯಿಟಿನನ್ನು ಜಲವಿಶ್ಲೇಷಣೆಗೊಳಮಾಡಿದಾಗ ಕಾಯಿಟೋಸಮೀನ್ ಹೈಡ್ರೊಕ್ಲೋರೈಡ್ ಉತ್ಪತ್ತಿಯಾಗುತ್ತದೆ. ಸಮುದ್ರದ ನಳ್ಳಿ ಮತ್ತು ಏಡಿಯ ಶಿಲೆಗಳಿಂದ ಅಮೈನೋಬಹುಶರ್ಕರವಾದ ಕಾಯಿಟಿನನ್ನು ಕ್ಯಾಲ್ಸಿಯಂ ಕಾರ್ಬೊನೇಟನ್ನು ಖನಿಜ ಆಮ್ಲಗಳಲ್ಲಿ ವಿಲೀನಗೊಳಿಸಿದ ಮೇಲೂ ಪ್ರೋಟೀನುಗಳನ್ನು ಬೇರ್ಪಡಿಸಿದ ಮೇಲೂ ಚರ್ಮದಂತಿರುವ ವಸ್ತುವಿನಿಂದ ಬೇರ್ಪಡಿಸಬಹುದು. ಈ ಬೆರ್ಪಡಿಸಿದ ವಸ್ತು (ಕಾಯಿಟಿನ್) ವರ್ಣರಹಿತ ಅಸ್ಫಟಿಕ ರೂಪದಲ್ಲಿ ಇದ್ದು ನೀರು, ದುರ್ಬಲ ಖನಿಜಾಮ್ಲಗಳು ಮತ್ತು ಕ್ಷಾರಗಳಲ್ಲಿ (ಸೆಲ್ಯೂಲೋಸ್‍ನಂತೆ) ಲೀನವಾಗುವುದಿಲ್ಲ ಮತ್ತು ಶ್ವೀಷರನ ಅಭಿಕರ್ಮಕದಲ್ಲೂ ಲೀನವಾಗುವುದಿಲ್ಲ.

ಶರ್ಕರಾಮ್ಲಗಳು

[ಬದಲಾಯಿಸಿ]

ಗ್ಲೂಕೋಸ್ ಇಂಗಾಲವನ್ನು ಕಳೆದುಕೊಳ್ಳದೆ ಸುಲಭದಲ್ಲಿ ಆಮ್ಲವಾಗಿ ಉತ್ಕರ್ಷಿತಗೊಳ್ಳುತ್ತದೆ. ರಾಸಾಯನಿಕವಾಗಿ ವಿದ್ಯುಚ್ಛೇದನೆಯಿಂದಾಗಲೀ ಕಿಣ್ವಗಳ ಮೂಲಕವಾಗಲೀ (ಗ್ಲೂಕೋಸ್ ಆಕ್ಸಿಡೇಸ್) ಇಂಗಾಲ-1 ಆಲ್ಡಿಹೈಡಿಕ್ ಪುಂಜವನ್ನು ಉತ್ಕರ್ಷಿಸಿದಾಗ ಗ್ಲೂಕಾನಿಕ್ ಆಮ್ಲವುಂಟಾಗುತ್ತದೆ. ಇದು ಆಮ್ಲದಂತೆ ಮುಖ್ಯವಾಗಿದೆ. ಫೆರೆಸ್ ಗ್ಲೂಕೋನೇಟನ್ನು ಕಬ್ಬಿಣ ಕೊರತೆ ರಕ್ತಕ್ಷೀಣತೆಯಲ್ಲಿಯೂ ಕ್ಯಾಲ್ಸಿಯಂ ಗ್ಲೂಕೋನೇಟನ್ನು ಕ್ಯಾಲ್ಸಿಯಂ ಕೊರತೆಯಲ್ಲಿಯೂ ನೀಡುವರು. ಆಲ್ಡೋಸುಗಳಲ್ಲಿ ಅಂತ್ಯದಲ್ಲಿರುವ (ಅ-6)ಅಊ2ಔಊ ಗುಂಪನ್ನು ಅಔಔಊ ಗೆ ಉತ್ಕರ್ಷಿಸುವುದರಿಂದ ಯೂರಾನಿಕ್ ಆಮ್ಲವನ್ನು ಪಡೆಯುವರು. ಪ್ರಕೃತಿಯಲ್ಲಿ ಇವು ಗ್ಲೂಕೊಸೈಡ್ ಬಂಧದಲ್ಲಿ ಮಾತ್ರ ದೊರೆಯುವುದಾಗಿ ಕಂಡುಬಂದಿದೆ. ಹೀಗೆ ಗ್ಲೈಕೊಜನ್ ಮತ್ತು ಗ್ಲೈಕೊಪ್ರೋಟಿನುಗಳನ್ನು ಬಿಟ್ಟು ಉಳಿದ ಎಲ್ಲ ಬಹುಶರ್ಕರಗಳಲ್ಲಿ ಡಿ-ಗ್ಲೂಕಯುರಾನಿಕ್ ಆಮ್ಲ ಸಾಮಾನ್ಯ ಘಟಕವಾಗಿದೆ (ಪಾಲಿಯುರಾನೈಡುಗಳು, ಮ್ಯುಕೋಬಹುಶರ್ಕರಗಳು). ಪ್ರಾಣಿಗಳು ವಿಷ ಪದಾರ್ಥಗಳಾದ ಫೀನಾಲ್‍ಗಳು, ಸ್ಟೀರಾಲ್‍ಗಳು ಮತ್ತು ಆರೋಮ್ಯಾಟಿಕ್ ಕಾರ್ಬಾಕ್ಸಲಿಕ್ ಆಮ್ಲಗಳನ್ನು ಗ್ಲೈಕೊಸೈಡುಗಳನ್ನಾಗಿ ಪರಿವರ್ತಿಸಿ ಮೂತ್ರದಲ್ಲಿ ಹೊರಹಾಕುವ ಕ್ರಿಯೆಯಲ್ಲಿ ಗೂಕ್ಲ್‍ಯೂರೋನಿಕ್ ಆಮ್ಲವನ್ನು ಬಳಸಿಕೊಳ್ಳುತ್ತವೆ. ಗಮನಾರ್ಹವಾಗಿ ಸಂಯುಕ್ತವಾಗಿ ದೊರೆಯುವ ಇತರ ಯುರಾನಿಕ್ ಆಮ್ಲಗಳೆಂದರೆ ಪೆಕ್ಟಿನ್ನಿನಲ್ಲಿ ವಿಶೇಷವಾಗಿ ದೊರೆಯುವ ಡಿ-ಗ್ಯಾಲಕ್ಟುರಾನಿಕ್ ಆಮ್ಲ, ಡಿ-ಮ್ಯಾನ್‍ಯುರಾನಿಕ್ ಆಮ್ಲ (ಪ್ರಧಾನ ಘಟಕ) ಮತ್ತು ಎಲ್-ಗುಲುರಾನಿಕ್ ಆಮ್ಲಗಳು. ಇವು ವಿವಿಧ ಪ್ರಮಾಣಗಳಲ್ಲಿ ದೊರೆಯುತ್ತವೆ. ಆಲ್ಜಿನಿಕ್ ಆಮ್ಲದಲ್ಲಿ (ಕಂದು ಸಮುದ್ರದ ಜೊಂಡಿನಲ್ಲಿ ಮತ್ತು ಪ್ರಾಣಿಗಳ ಬಹುಶರ್ಕರಗಳಲ್ಲಿ ಎಲ್.ಇಡ್ಯುರಾನಿಕ್ ಆಮ್ಲ ಕಾಯಿಂಡ್ರೇಟಿನ ಸಲ್ಫೇಟ್ (ಬಿ-ಹೆಪರಿನ್). ಎಲ್-ಅಸ್ಕಾರ್ಬಿಕ್ ಆಮ್ಲದ (ಸಿ ವಿಟಮಿನ್) ಜೀವ ಸಂಶ್ಲೇಷಣೆಯಲ್ಲಿ ಡಿ-ಗ್ಲೂಕುರಾನಿಕ್ ಆಮ್ಲ ಒಂದು ಪುರೋವರ್ತಿ (ಪ್ರಿಕರ್ಸರ್).

ಗ್ಲೂಕೊಸೈಡುಗಳು

[ಬದಲಾಯಿಸಿ]

ಏಕಶರ್ಕರಗಳ ಅತ್ಯಂತ ಪ್ರಮುಖ ಗುಣಗಳಲ್ಲಿ ಒಂದು ಗ್ಲೂಕೊಸೈಡುಗಳನ್ನು ಅಥವಾ ಅಸಿಟಾಲುಗಳನ್ನು ಉತ್ಪತ್ತಿಮಾಡುವ ಸಾಮಥ್ರ್ಯ. ಈ ರೀತಿಯಲ್ಲಿ ಅಜಲ ವಿಥೆನಾಲ್‍ನಲ್ಲಿರುವ ಡಿ-ಗ್ಲೂಕೋಸಿಗೆ ಶುಷ್ಕಹೈಡ್ರೊಜನ್ ಕ್ಲೋರೈಡ್ ಅನಿಲವನ್ನು ಹಾಯಿಸಿದಾಗ -ಮತ್ತು -ಮೀಥೈಲ್ ಡಿಗ್ಲೂಕೋಸೈಡುಗಳು ರೂಪಿತವಾಗುತ್ತವೆ. ಇವು ಆಮ್ಲ ದ್ರಾವಣಗಳಲ್ಲಿ ಗ್ಲೂಕೋಸ್ ಮತ್ತು ಮೀಥೈಲ್ ಆಲ್ಕೊಹಾಲ್‍ಗಳಿಗೆ ಜಲವಿಶ್ಲೇಷಣೆಯಾಗುತ್ತವೆ. ಫಿನಾಲುಗಳು ಮತ್ತು ಆಲಿಸೈಕ್ಲಿಕ್ ಆಲ್ಕೊಹಾಲುಗಳಿಂದ ವ್ಯುತ್ಪನ್ನವಾದ ಸ್ವಾಭಾವಿಕ ಗ್ಲೂಕೊಸೈಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕೃತಿಮೂಲಗಳಿಂದ ಪಡೆದು ವಿಚ್ಛಿನ್ನಗೊಳಿಸಿ ಅವುಗಳ ಅಧ್ಯಯನ ನಡೆಸಲಾಗಿದೆ. ಗ್ಲೈಕೊಸೈಡಿನ ಶರ್ಕರದ ಅರ್ಧಭಾಗ ಗ್ಲೈಕೊಸಿಲ್ ಅಂಶ ಎಂಬುದಾಗಿಯೂ ಮತ್ತು ಅಶರ್ಕರಭಾಗವನ್ನು ಸಾಮಾನ್ಯವಾಗಿ ಅಗ್ಲೈಕಾನ್ ಎಂಬುದಾಗಿ ಕರೆಯುತ್ತಾರೆ. ಮುಕ್ತಶರ್ಕರಗಳೊಡನೆ ಹೋಲಿಸಿದಲ್ಲಿ ಆಲ್ಕೈಲ್ ಗ್ಲೈಕೊಸೈಡುಗಳು ಅಪಕರ್ಷಣಕಾರಿಗಳು ಮತ್ತು ಪ್ರತ್ಯಾಮ್ಲಗಳಲ್ಲಿ ಸ್ಥಿರವಾಗಿರುತ್ತವೆಯಾದರೂ ಸಾರರಿಕ್ತ ಆಮ್ಲಗಳಿಂದ ಮೂಲಶರ್ಕರ ಮತ್ತು ಆಲ್ಕೊಹಾಲುಗಳಾಗಿ ಜಲವಿಚ್ಛೇದನೆಯಾಗುತ್ತದೆ.ಗಂಧಕದ ಗ್ಲೂಕೊಸೈಡುಗಳು ಸಾಸುವೆ ಎಣ್ಣೆಯಂಥ ಪ್ರಕೃತಿಯ ಉತ್ಪನ್ನಗಳಲ್ಲಿಯೂ ದೊರೆಯುತ್ತವೆ. ಕಪ್ಪುಸಾಸುವೆಯಲ್ಲಿ ಸಿನಿಗ್ರಿನ್ ಮತ್ತು ಬಿಳಿಯ ಸಾಸುವೆಯಲ್ಲಿ ಸಿನಾಲ್ಬಿನ್ ಇವೆ. ಇವುಗಳಲ್ಲಿ ಗ್ಲೈಕೊಸೈಡ್ ಬಂಧ ಗಂಧಕದ ಮೂಲಕವಾಗಿವೆ.

ಡಿ-ಗ್ಲೂಕೋಸ್

[ಬದಲಾಯಿಸಿ]

ಪ್ರಕೃತಿಯಲ್ಲಿನ ಗ್ಲೂಕೊಸೈಡುಗಳಲ್ಲಿ ಲಘುಶರ್ಕರಗಳು ಸೇರಿದಂತೆ ಇತರ ಶರ್ಕರ ಅಂಶವಿದ್ದರೂ ಡಿ-ಗ್ಲೂಕೋಸ್ ಸರ್ವಸಾಧಾರಣವಾದ ಶರ್ಕರ, ಪ್ರಾಣಿಗಳ ಗ್ಲೈಕೊಸೈಡುಗಳಿಗೆ ಉದಾಹರಣೆಗಳೆಂದರೆ ಸೆರೆಬ್ರೊಸೈಡುಗಳು ಮತ್ತು ಗ್ಯಾಂಗ್ಲಿಯೊ ಸೈಡುಗಳು. ಕೋಶನ್ಯೂಕ್ಲಿಯೋ ಪ್ರೋಟಿನುಗಳ ಘಟಕಗಳಾದ ನ್ಯೂಕ್ಲಿಯೆಕ್ ಆಮ್ಲಗಳು, ಪಿರಿಮಿಡೀನುಗಳು ಅಥವಾ ಪ್ಯೂರಿನುಗಳ ನೈಟ್ರೊಜನ್ ಗ್ಲೈಕೊಸೈಡುಗಳಿಂದ ಕೂಡಿದ್ದು ಡಿ-ರೈಬೋಸ್ ಅಥವಾ ಡಿ-ಆಕ್ಸಿರೈಬೋಸಿನೊಂದಿಗೆ ಬಂಧನಕ್ಕೊಳಗಾಗಿರುತ್ತವೆ, ತನ್ನ ಸರದಿಯಲ್ಲಿ ಇದು ಎಸ್ಟರ್ ಫಾಸ್ಫೇಟ್ ಗುಂಪುಗಳ ಮೂಲಕ ಇತರ ಅವಶಿಷ್ಟಗಳೊಡನೆ ಬಂಧನಕ್ಕೊಳಗಾಗಿರುತ್ತವೆ. ಇವಲ್ಲದೆ ಶಕ್ತಿ ವರ್ಗಾವಣೆಯಲ್ಲಿ ಹೆಚ್ಚು ನಿರತವಾಗಿರುವ ಅಡಿನೊಸಿನ್ ಡೈ ಮತ್ತು ಟ್ರೈಫಾಸ್ಫೇಟುಗಳು (ಎ.ಡಿ.ಪಿ ಮತ್ತು ಎ.ಟಿ.ಪಿ) ಮತು ಯುರಿಡಿನ್-ಡೈಫಾಸ್ಫೇಟ್ ಗ್ಲೂಕೋಸ್ (ಯು.ಡಿ.ಪಿ.ಜಿ) ಮುಂತಾದ ಸಹಕಿಣ್ವಗಳು ಕೂಡ ಸಾರಜನಕ ಗ್ಲೈಕೊಸೈಡುಗಳು.

ಸ್ಯಾಪೂನಿನ್

[ಬದಲಾಯಿಸಿ]

ಸ್ಯಾಪೂನಿನ್ ಎಂಬ ಹೆಸರಿನ ಗ್ಲೈಕೊಸೈಡುಗಳು ಒಂದು ದೊಡ್ಡ ಗುಂಪಿದೆ. ಈ ಗುಂಪಿನವನ್ನು ನೀರಿನೊಡನೆ ಬೆರೆಸಿದಾಗ ಅವು ಸಾಬೂನಿನಂಥ ನೊರೆಯನ್ನು ನೀಡುತ್ತವೆ. ಇವು ಹೆಚ್ಚು ವಿಷಯುಕ್ತವಾದವು. ಮೀನು ಮುಂತಾದ ಶೀತರಕ್ತ ಪ್ರಾಣಿಗಳಿಗೆ ಇವು ಬಹು ಅಲ್ಪ ಪ್ರಮಾಣದಲ್ಲಿಯೂ ಘಾತಕಕಾರಿಗಳು. ಕೆಂಪುರಕ್ತದ ಪ್ರಾಣಿಗಳಲ್ಲಿ ಸೆಪೊನಿನ್ ಕೆಂಪುರಕ್ತ ಕಣಗಳ ವಿಚ್ಛಿದ್ರವನ್ನುಂಟುಮಾಡುತ್ತದೆ. ಸ್ಯಾಫೊನಿನುಗಳ ಜಲವಿಶ್ಲೇಷಣೆದಿಂದ ಪಡೆದ ಅಗ್ಲೈಕೋನುಗಳನ್ನು ಸ್ಯಾಪೊಜಿನಿನುಗಳೆನ್ನುವರು. ಸಬ್ಬಸಿಗೆ ಸೊಪ್ಪಿನ ಬೇರಿನಿಂದ ಪಡೆದ ಸ್ಯಾಪೊನಿನ್ ಜಲವಿಶ್ಲೇಷಣೆಗೊಂಡಾಗ ರ್ಹಾಮ್ನೋಸ್ ಮತ್ತು ಗ್ಲೂಕೋಸುಗಳನ್ನು ನೀಡುತ್ತದೆ ಮತ್ತು ಸ್ಟಿರಾಲ್ ವ್ಯುತ್ಪನ್ನಗಳಲ್ಲೊಂದಾದ ಫಿನಾಂಥ್ರಿನ್ ಅಗ್ಲೈಕೋನ್‍ಗಳನ್ನು ಸ್ಯಾಪೊಜಿನಿನ್ ನೀಡುತ್ತದೆ. ಡಿಜಿಟಾನಿನ್ ಈ ಗುಂಪಿಗೆ ಸೇರಿದುದಾಗಿದೆ, ಕೆಲವು ಗ್ಲೈಕೊಸೈಡುಗಳು ಸ್ಟಿರಾಲ್‍ಗಳಿಗೆ ಸಂಬಂಧಪಟ್ಟಿವೆ ಮತ್ತು ಡಿಜಿಟಾಲಿಸ್ ಮತ್ತು ಸ್ಟ್ರೊಫ್ಯಾಂತಸ್ ಜಾತಿಯಿಂದ ಪಡೆದುವಾಗಿದ್ದು ಇವು ಹೃದಯ ಸ್ನಾಯುಗಳು ಉತ್ತೇಜಿತಗೊಳಿಸುವ ಔಷಧಿಗಳಂತೆ ಪ್ರಯೋಜನಕಾರಿಯಾಗಿವೆ.  ಈ ಶರ್ಕರಗಳಲ್ಲಿರುವುದು ಸಾಮಾನ್ಯವಾಗಿ ಡಿ-ಆಕ್ಸಿಶರ್ಕರಗಳೆಂಬುದು ಗಮನಾರ್ಹವಾದ ವಿಷಯ.

ಪರಿಶರ್ಕರ ಆಲ್ಕೊಹಾಲುಗಳು

[ಬದಲಾಯಿಸಿ]

ಎಲ್ಲ ಅಪಕರ್ಷಣಕಾರಿ ಶರ್ಕರಗಳನ್ನು ಅಪಕರ್ಷಣಗೊಳಿಸಿ ಪಾಲಿಹೈಡ್ರಿಕ್ ಆಲ್ಕೊಹಾಲುಗಳಾಗಿ ವರ್ತಿಸಬಹುದಾದರೂ ಈ ಗುಂಪಿಗೆ ಸೇರಿದ ಅನೇಕವು ಪ್ರಕೃತಿಯಲ್ಲಿ ದೊರೆಯುತ್ರವೆ. ಗ್ಲಿಸರಾಲ್ ಪರಿಚಿತವಾಗಿರುವ ಒಂದು ಟ್ರೈಹೈಡ್ರಿಕ್ ಆಲ್ಕೊಹಾಲ್. ಇದು ತೈಲಾಮ್ಲಗಳೊಡನೆ ಸಂಯೋಗ ಹೊಂದಿ ಗ್ಲಿಸರೈಡುಗಳ (ಕೊಬ್ಬುಗಳ) ರೂಪದಲ್ಲಿ ದೊರೆಯುತ್ತದೆ. ಕೊಬ್ಬನ್ನು ಸಾಬೂನೀಕರಣಗೊಳಿಸಿದಾಗ ಗ್ಲಿಸರಾಲ್ ಬಿಡುಗಡೆಯಾಗುತ್ತದೆ ; ಮತ್ತು ಈ ರೀತಿಯಲ್ಲಿ ಇದು ಸಾಬೂನಿನ ಕೈಗಾರಿಕೆಯಲ್ಲಿ ಉಪೋತ್ಪನ್ನವಾಗಿ ದೊರೆಯುತ್ತದೆ. ಟೆಟ್ರಾಹೈಡ್ರಿಕ್ ಆಲ್ಕೊಹಾಲ್ ಆದ ಎರಥ್ರಿಟಾಲ್ ಆಲ್ಗೆ (ಶೈವಾಲ) ಶಿಲೀಂಧ್ರ ಮತ್ತು ಶೈವಾಕಗಳಲ್ಲಿ (ಲಿಚನ್ಸ್) ದೊರೆಯುತ್ತದೆ. ಪ್ರಕೃತಿಯಲ್ಲಿ ದೊರೆತಿರುವ ನಾಲ್ಕು ಟ್ರೈಹೈಡ್ರಿಕ್ ಆಲ್ಕೊಹಾಲ್‍ಗಳಲ್ಲಿ ಡಿ-ಮ್ಯಾನಿಟಾಲ್, ಡಿ-ಸಾರ್ಬಿಟಾಲ್ ಮತ್ತು ಡಲ್ಸಿಟಾಲ್ ಪ್ರಮುಖವಾಗಿವೆ. ಆಷ್ ಮರದ ಮನ್ನಾದಲ್ಲಿ ಮತ್ತು ಇತರ ಅನೇಕ ಸಸ್ಯಗಳಲ್ಲಿ ಮ್ಯಾನಿಟಾಲ್ ದೊರೆಯುತ್ತದೆ. ಇದು ಸಮುದ್ರದ ಕಂದುಜೊಂಡಿನಲ್ಲಿ ವಿಶೇಷವಾಗಿ ಉಂಟು. ಲ್ಯಾಮಿನ್ಭೆರಿಯಾ ಡಿಜಿಟಾಟಾದ ಶುಷ್ಕ ತೂಕದ 37% ಭಾಗಕ್ಕೂ ಹೆಚ್ಚು ಭಾಗ ಸಿಕ್ಕುವುದಾಗಿ ವರದಿಯಾಗಿದೆ. ಈ ಪರಿಮಾಣ ವರ್ಷದ ಋತುಗಳೊಡನೆ ಬದಲಾಗುತ್ತದೆ. ಸುಕ್ರೋಸನ್ನು ಒತ್ತಡದಲ್ಲಿ ಹೈಡ್ರೊಜನೀಕರಣಗೊಳಿಸಿದಾಗ ಸಾರ್ಬಿಟಾಲಿನೊಡನೆ ಮ್ಯಾನಿಟಾಲ್ ಉತ್ಪತ್ತಿಯಾಗುತ್ತದೆ. ಇತರ ಪಾಲಿಹೈಡ್ರಿಕ್ ಆಲ್ಕೊಹಾಲುಗಳಂತೆ ಬೋರಿಕ್ ಆಮ್ಲದ್ರಾವಣದ ಆಮ್ಲೀಯತೆಯನ್ನು ಮ್ಯಾನಿಟಾಲ್ ಹೆಚ್ಚಿಸುತ್ತದೆ ಮತ್ತು ಇದರ ದ್ರಾವಣದ ಅತಿಕಡಿಮೆ ಪ್ರಮಾಣದ ವಿಶಿಷ್ಡ ಭ್ರಮಣಾಂಕವನ್ನು ಬೋರೇಟುಗಳನ್ನು ಆರ್ಸಿನೇಟುಗಳನ್ನು ಸೇರಿಸುವುದರ ಮೂಲಕ ಹೆಚ್ಚಿಸಬಹುದು. ಆಮ್ಲಗಳೊಡನೆ ಮ್ಯಾನಿಟಾಲ್ ಎಸ್ಟರುಗಳನ್ನು ನೀಡುತ್ತದೆ ; ಮ್ಯಾನಿಟಾಲ್ ಹೆಕ್ಸಾನೈಟ್ರೇಟ್ ಒಂದು ಆಸ್ಫೋಟಕ ವಸ್ತು.

ಸಾರ್ಬಿಟಾಲ್

[ಬದಲಾಯಿಸಿ]

ಇದೊಂದು ಮುಖ್ಯ ಪಾಲಿಹೈಡ್ರಿಕ್ ಆಲ್ಕೊಹಾಲ್ ; ಇದು ಡಿ-ಗ್ಲೂಕೋಸ್‍ಗೆ ಸಂಬಂಧಿಸಿದೆ; ಅನೇಕ ಹಣ್ಣುಗಳಲ್ಲಿ ಸ್ವಲ್ಪ ಪ್ರಮಾಣದ ಸಾರ್ಬೋಸಿನೊಂದಿಗೆ (ಕೇಟೋಹೆಕ್ಸೊಸ್)ಪ್ರಕೃತಿಯಲ್ಲಿ ದೊರೆಯುತ್ತದೆ. ಇದನ್ನು ವಾಣಿಜ್ಯಕ್ಕಾಗಿ ಡಿ-ಗ್ಲೂಕೋಸನ್ನು ವಿದ್ಯುತ್ ವಿಶ್ಲೇಷಿಸಿ ಅಪಕರ್ಷಣೆ ಅಥವಾ ಉತ್ಪ್ರೇರಕೀಯ ಹೈಡ್ರೊಜನೀಕರಣದಿಂದ ತಯಾರಿಸುವರು ; ಈ ವಸ್ತುವಿಗೆ ಇರುವ ಪ್ರಮುಖ ಉಪಯೋಗವೆಂದರೆ ಆಸ್ಕಾರ್ಬಿಕ್ ಆಮ್ಲ (ಸಿ ವಿಟಮನ್) ತಯಾರಿಕೆಯಲ್ಲಿ ಮಧ್ಯವರ್ತಿಯಾದ ಎಲ್-ಸಾರ್ಬೋಸ್ ತಯಾರಿಕೆ.ಡೆಲ್ಸಿಟಾಲ್: ಇದು ಒಂದು ಡಿ-ಗ್ಯಾಲಕ್ಟೋಸಿನ ಅಪಕರ್ಷಣ ಉತ್ಪನ್ನ. ಇದಕ್ಕೆ ಜೀವಾಣುವಿಜ್ಞಾನದಲ್ಲಿ ಉಪಯೋಗ ಉಂಟು.

ಇನೊಸಿಟಾಲುಗಳು

[ಬದಲಾಯಿಸಿ]

ಇವು ಹೆಕ್ಸಾಹೈಡ್ರೊಸೈಕ್ಲೋ ಹೆಕ್ಸೇನುಗಳು. ಇವು ಸಿಹಿಯಾಗಿವೆ. ನೀರಿನಲ್ಲಿ ಲೀನವಾಗುವುವು ಹಾಗೂ ಅಪಕರ್ಷಣಕಾರಿಗಳಲ್ಲ ಬಯೋಸ್-I ಎಂದು ಪರಿಚಿತವಾಗಿರುವ ಮೆಸೊ-ಇನೊಸಿಟಾಲ್, ಬಯೊಟಿನ್‍ನೊಡನೆ (ಬಯೋಸ್-II) ಸೇರಿದಾಗ ಯೀಸ್ಟ್ ಉತ್ಪಾದನೆಗೆ ಪ್ರೇರಕವಾಗುವ (ಉತ್ತೇಜಕಕಾರಿ) ವೃದ್ದಿತತ್ತ್ವ. ಫೈಟಿಕ್ ಆಮ್ಲ ಅಥವಾ ಫೈಟಿನ್ ಎಂಬ ಸಂಯುಕ್ತ ವಸ್ತು ಮೆಸೊ-ಇನೊಸಿಟಾಲ್ ಹೆಕ್ಸಾಫಾಸ್ಫೇಟ್. ಪೆಂಟಾಹೈಡ್ರಾಕ್ಸಿ ಸೈಕ್ಲೊಹೆಕ್ಸೇಬುಗಳು ಸಹ ಸಸ್ಯಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಚೆನ್ನಾಗಿ ಪರಿಚಿತವಾಗಿರುವುದು ಡಿ-ಕ್ವೆರ್ಸಿಟಾಲ್.

ಲಘುಶರ್ಕರಗಳು

[ಬದಲಾಯಿಸಿ]

ಲಘುಶರ್ಕರಗಳ ಗುಂಪಿಗೆ ಹೆಚ್ಚಿನ ಸಂಖ್ಯೆಯ ಬಹುಶರ್ಕರಗಳು ಸೇರಿವೆ. ಪ್ರತಿಯೊಂದು ಗುಂಪಿಗೆ ಕೆಲವು ಏಕಶರ್ಕರಮಾನಗಳು ಸೇರಿವೆ (ಗ್ರೀಕ್ : ಅಲಿಗೊ ಎಂದರೆ ಕೆಲವೂ). ಇದನ್ನು ಆಮ್ಲೀಯ ಜಲವಿಶ್ಲೇಷಣೆಕ್ಕೊಳಮಾಡಿದಾಗ ಕೇವಲ ಸರಳ ಶರ್ಕರಗಳು ಅಥವಾ ಅವುಗಳ ವ್ಯುತ್ಪನ್ನಗಳು ದೊರೆಯುತ್ತವೆ. ಲಘುಶರ್ಕರಗಳು ನೀರಿನ (ಟಿ-1) ಅಣುಗಳ ನಷ್ಟದಿಂದ ರೂಪಿತವಾಗುವ ಗ್ಲೈಕೋಸೈಡಿಕ್ ಬಂಧನಗಳಿಂದ ಬದ್ಧವಾದ ಏಕಶರ್ಕರಗಳ ಅಂಶವನ್ನೊಳಗೊಂಡಿವೆ. ಪ್ರತಿ ಮೋಲಿನಲ್ಲಿರುವ ಏಕಶರ್ಕರಗಳ ಸಂಖ್ಯೆಯ ಆಧಾರದ ಮೇಲೆ ಶರ್ಕರಗಳನ್ನು ದ್ವಿಶರ್ಕರಗಳು, ತ್ರಿಶರ್ಕರಗಳು, ಚತುಶ್ಯರ್ಕರಗಳು ಮತ್ತು ಪಂಚಶರ್ಕರಗಳೆಂದು ವರ್ಗೀಕರಿಸಬಹುದು. ತಿಳಿದಿರುವ ಹೆಚ್ಚಿನ ಸಂಖ್ಯೆಯ ಲಘುಶರ್ಕರಗಳು ಪ್ರಕೃತಿಯಲ್ಲಿ ದೊರೆಯುವ ವಸ್ತುಗಳಾಗಿವೆ ಇಲ್ಲವೆ ಭಾಗಶಃ ಜಲವಿಶ್ಲೇಷಣೆಯ ವ್ಯುತ್ಪನ್ನಗಳಾಗಿವೆ ಅಥವಾ ಟ್ರಾನ್ಸ್ ಗ್ಲೈಕೊಲೈಸೇಷನ್ ರಾಸಾಯನಿಕ ಕ್ರಿಯೆಗಳ ವ್ಯುತ್ಪನ್ನಗಳು ಅಥವಾ ಬಹುಶರ್ಕರಗಳು.

ದ್ವಿಶರ್ಕರಗಳು

[ಬದಲಾಯಿಸಿ]

ಒಂದು ದ್ವಿಶರ್ಕರದಲ್ಲಿ ಒಂದು ಏಕಶರ್ಕರ ಅದರ ಹೆಮಿಅಸಿಟೈಲ್ ಹೈಡ್ರಾಕ್ಸಿಲ್ ಮತ್ತು ಇನ್ನೊಂದು ಶರ್ಕರದ ಹೈಡ್ರಾಕ್ಸಿಲ್ ನಡುವೆ ಏರ್ಪಡುವ ಒಂದು ಆಕ್ಸಿಜನ್ ಬಂಧದ ಮೂಲಕ ಜೊತೆಗೂಡಿಸಲ್ಪಟ್ಟಿದೆ. ಲ್ಯಾಕ್ಟೋಸಿನಲ್ಲಿರುವಂತೆ ಎರಡನೆ ಹೈಡ್ರಾಕ್ಸಿಲ್ ಆಲ್ಕೊಹಾಲಿಕ್ ಹೈಡ್ರಾಕ್ಸಿಲ್ ಆದರೆ ದ್ವಿಶರ್ಕರದಲ್ಲಿ ಒಂದು ಅಪಕರ್ಷಣಕಾರಿ ಪುಂಜ ಉಳಿಯುತ್ತದೆ. ಸುಕ್ರೋಸ್ ಅಥವಾ ಟ್ರೆಹಲೋಸಿನಲ್ಲಿರುವಂತೆ ಎರಡೂ ಏಕಶರ್ಕರಗಳ ಹೆಮಿಅಸಿಟಾಲ್ ಹೆಡ್ರಾಕ್ಸಿಲ್‍ಗಳು ಗ್ಲೈಕೊಸೈಡಿಕ್ ಬಂಧನಕ್ಕೆ ಉಪಯೋಗಿಸಲ್ಪಟ್ಟರೆ, ತತ್ಪರಿಣಾಮವಾಗಿ ದೊರೆಯುವ ದ್ವಿಶರ್ಕರದಲ್ಲಿ ಅಪಕರ್ಷಣಾಕಾರಿ ಪುಂಜ ಇರುವುದಿಲ್ಲ. ಈ ವ್ಯತ್ಯಾಸದಿಂದಲೇ ದ್ವಿಶರ್ಕರಗಳನ್ನು (ಹಾಗೂ ಇತರ ಲಘುಶರ್ಕರಗಳನ್ನು) ಅಪಕರ್ಷಣಕಾರಿ ಮತ್ತು ಅಪಕರ್ಷಣಕಾರಿಯಲ್ಲದ ಶರ್ಕರಗಳು ಎಂದು ವರ್ಗೀಕರಿಸಬಹುದು. ಅಪಕರ್ಷಣಕಾರಿ ಲಘುಶರ್ಕರಗಳು ಸರಳ ಶರ್ಕರಗಳ ಅನೇಕ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ. ಲಘುಶರ್ಕರದ ಘಟಕಗಳಾದ ಏಕಶರ್ಕರದ ಘಟಕಗಳು ಲ್ಯಾಕ್ಟೋಸ್ (ಡಿ-ಗ್ಲೂಕೋಸ್ ಮತ್ತು ಡಿ-ಗ್ಯಾಲಕ್ಟೊಸ್ ) ಮತ್ತು ಸುಕ್ರೋಸಿನಲ್ಲಿರುವಂತೆ (ಡಿ-ಗ್ಲೂಕೋಸ್ ಮತ್ತು ಎಲ್-ಗ್ಯಾಲಕ್ಟೋಸ್) ಬೇರೆಯಾಗಿರಬಹುದು ಅಥವಾ ಡಿ-ಗ್ಲೂಕೋಸಿನ ಎರಡು ಅಣುಗಳನ್ನು ಹೊಂದಿರುವ ಟ್ರಹಲೋಸ್ ಮತ್ತು ಮಾಲ್ಟೋಸುಗಳಂತೆ ಒಂದೇ ಆಗಿರಬಹುದು.

ಸುಕ್ರೋಸ್ (ಕಬ್ಬಿನ ಸಕ್ಕರೆ) ದ್ವಿಶರ್ಕರ ಸಸ್ಯವರ್ಗ

[ಬದಲಾಯಿಸಿ]

ಸುಕ್ರೋಸ್ (ಕಬ್ಬಿನ ಸಕ್ಕರೆ) ದ್ವಿಶರ್ಕರ ಸಸ್ಯವರ್ಗದಲ್ಲಿ ವ್ಯಾಪಕವಾಗಿ ದೊರೆಯುತ್ತದೆ. ಅದರಲ್ಲಿಯೂ ಬೀಟ್‍ರೂಟ್ ಮತ್ತು ಕಬ್ಬಿನಲ್ಲಿ ವಿಶೇಷವಾಗಿ ದೊರೆಯುವುದರಿಂದ ಇವು ಫ್ರಕ್ಟೋಸುಗಳು ಘಟಕ ಶರ್ಕರಗಳಾಗಿದ್ದು ಗ್ಲೂಕೋಸಿನ (ಆಲ್ಡಿಹೈಡಿಕ್ ಗುಂಪು) ಮತ್ತು ಫ್ರಕ್ಟೋಸಿನೊಡನೆ (ಕೀಟೋಗುಂಪು) ಬಂಧನಕ್ಕೊಳಗಾಗಿರುವುದರಿಂದ ಇದು ಅಪಕರ್ಷಣಕಾರಿಯಲ್ಲದ ಶರ್ಕರವಾಗಿದೆ.  ಫ್ರಕ್ಟೋಫ್ಯೂರ ನೋಸ್ ವಲಯವನ್ನು ಉಳ್ಳ ಸುಕ್ರೋಸ್ ಆಮ್ಲಗಳಲ್ಲಿ ವಿಶೇಷವಾಗಿ ಅಸ್ಥಿರವಾಗಿರುವುದರಿಂದ ಬಹು ಸುಲಭವಾಗಿ ಜಲವಿಶ್ಲೇಷಣೆಗೊಳಾಗುತ್ತವೆ. ಗ್ಲುಕೋಸ್ ಮತ್ತು ಫ್ರಕ್ಟೋಸುಗಳು ಸಮಪ್ರಮಾಣದಲ್ಲಿರುವ ಮಿಶ್ರಣವನ್ನು ಕೊಡುವಂತೆ ಸುಕ್ರೋಸ್ ಜಲವಿಭಜನೆಗೊಳಗಾಗುವುದನ್ನು ವಿಪರ್ಯಾಯ (ಇನ್ವರ್ಷನ್) ಎಂದು ಕರೆಯುವರು. ಏಕೆಂದರೆ ಫ್ರಕ್ಟೋಸಿನ ಹೆಚ್ಚಿನ ಮಟ್ಟದ ಅಪ್ರದಕ್ಷಿಣ ಹೆಚ್ಚಿನ ಮಟ್ಟದ ಅಪ್ರದಕ್ಷಿಣ ದ್ಯುತಿಭ್ರಮಣ (ಆಪ್ಟಿಕಲ್ ರೊಟೇಶನ್) ಪ್ರದಕ್ಷಿಣದಿಂದ ಅಪ್ರದಕ್ಷಿಣಕ್ಕೆ ಬದಲಾಗುತ್ತದೆ. ತತ್ಪರಿಣಾಮವಾಗಿ ದೊರೆಯುವ ಮಿಶ್ರಣವನ್ನು ವಿಪರ್ಯಯಸ್ಥಶರ್ಕರವೆನ್ನುವರು (ಇನ್ವರ್ಟ್ ಶುಗರ್). ಜೇನಿನಲ್ಲಿನ ಶರ್ಕರದಲ್ಲಿರುವ ಹೆಚ್ಚಿನ ಪ್ರಮಾಣದ ಶರ್ಕರ ವಿಷರ್ಯಯಸ್ಥಶರ್ಕರ. ಫ್ರಕ್ಟೋಸಿನಿಂದ ಸುಕ್ರೋಸ್ ಮತ್ತು ಗ್ಲೂಕೋಸಿಗೆ ಸಿಹಿ ಕ್ರಮವಾಗಿ ಕಡಿಮೆಯಾಗುತ್ತದೆ.ಸಣ್ಣಗೋದಿ, ಎರ್ಗಟ್, ಶಿಲೀಂಧ್ರ, ಸಣ್ಣ ಅಣಬೆಗಳು, ಯೀಸ್ಟ್ ಮತ್ತು ಸೆಲೆಜಿನೆಲ್ಲಾ ಲೆಪಿಡೊಫಿಲ್ಲಾ ಎಂಬ ಪುನರ್ಜೀವಿತ ಸಸ್ಯಗಳಲ್ಲಿ ಟ್ರೆಹಲೋಸ್ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಕೆಲವು ಕೀಟಗಳಲ್ಲಿ ಇದು ರಕ್ತದ ಪ್ರಧಾನಶರ್ಕರವಾಗಿದೆ ಮತ್ತು ಮೈಕೊ ಬ್ಯಾಕ್ಟೀರಿಯಿಂ ಟ್ಯುಬರ್‍ಕ್ಯುಲಾಸಿಸಿನಿಂದ ವ್ಯುತ್ಪನ್ನಗೊಳಿಸಿದ ಹೆಚ್ಚು ವಿಷಯುಕ್ತ ತೈಲದಲ್ಲಿ ಇರುತ್ತದೆ. ಇದು ಒಂದು ಅಪಕರ್ಷಣಕಾರಿಯಲ್ಲದ ಶರ್ಕರ. ಇದರಲ್ಲಿ ಎರಡು ಗ್ಲೂಕೋಸ್ ಮಾನಗಳ ಅ1ಇಂಗಾಲಗಳು ಬಂಧಿತವಾಗಿವೆ.ಸುಕ್ರೋಸ್ ಬಿಟ್ಟರೆ ತ್ರಿಶರ್ಕರವಾದ ರ್ಯಾಫಿನೋಸ್ ಸಸ್ಯವರ್ಗದಲ್ಲಿ ಹೆಚ್ಚಾಗಿ ಹರಡಿರುವ ಲಘುಶರ್ಕರವೆಂದು ಕಾಣುತ್ತದೆ. ಇದು ಬೀಟ್‍ರೂಟುಗಳಲ್ಲಿ ಮುಕ್ತ ಸ್ಥಿತಿಯಲ್ಲಿ ಅತ್ಯಲ್ಪ ಪ್ರಮಾಣ ದೊರೆಯುತ್ತದೆಯಾರೂ (0.05%) ಸುಕ್ರೋಸಿನ ತಯಾರಿಕೆಯಲ್ಲಿ ಮಾತೃದ್ರಾವಣದಲ್ಲಿ ಶೇಖರವಾಗುತ್ತದೆ.

ಹಾಲಿನ ಲಘುಶರ್ಕರಗಳು

[ಬದಲಾಯಿಸಿ]

ಹಾಲಿನ ಲಘುಶರ್ಕರಗಳಲ್ಲಿ ಅತ್ಯಂತ ಪ್ರಮುಖವಾದುದು ಸುಮಾರು 5% ಭಾಗದ ವರೆಗೆ ದೊರೆಯುವ ಲ್ಯಾಕ್ಟೋಸ್. ಇದು ಒಂದು -1-4-ಗ್ಲೂಕೋಸ್ ಬಂಧ ಇರುವ ಅಪಕರ್ಷಣಕಾರಿ ಶರ್ಕರ. ಕ್ಷೀರದಲ್ಲಿ ವರ್ಗದಲ್ಲಿ ಈ ಪ್ರಮಾಣ ವ್ಯತ್ಯಾಸಗೊಳ್ಳುತ್ತದೆ. ಮಾನವ ಕ್ಷೀರದಲ್ಲಿ ಲ್ಯಾಕ್ಟೋಸನ್ನುಳಿದು ಅದರ ಸಾರ ಲೀಟರಿಗೆ 3 ಗ್ರಾಂಗಳು.

ವ್ಯುತ್ಪನ್ನ ದ್ವಿಶರ್ಕರಗಳು

[ಬದಲಾಯಿಸಿ]

ಪರಿಚಯವಾಗಿರುವ ಅನೇಕ ದ್ವಿಶರ್ಕರಗಳನ್ನು ಉನ್ನತರ ಲಘು ಅಥವಾ ಬಹುಶರ್ಕರಗಳನ್ನು ನಿಯಂತ್ರಿತಣಗೊಳಿಸಿದ ಆಮ್ಲ ಅಥವಾ ಕಿಣ್ವಗಳಿಂದ ಜಲವಿಶ್ಲೇಷಣೆಗೆ ಒಳಮಾಡುವುದರ ಮೂಲಕ ಪಡೆಯಬಹುದು ಸೆಲ್ಲೊಬಯೋಸ್ ಎಂಬುದು ಸೆಲ್ಯುಲೋಸಿನ ಪುನರಾವರ್ತನೀಯ ಮೂಲ ಬಹುಶರ್ಕರನ್ನು ನಿಯಂತ್ರಿತ ಜಲವಿಶ್ಲೇಷಣೆಗೆ ಒಳಮಾಡಿದಾಗ ಬಿಡುಗಡೆಯಾಗುತ್ತದೆ. ಅದು ಮುಕ್ತ ಸ್ಥಿತಿಯಲ್ಲಿ ದೊರೆಯುವಂತೆ ಕಂಡುಬರುವುದಿಲ್ಲ. ಅದು ಒಂದು -1-4-ಗ್ಲೂಕೊ ಸೈಡಿಕ್ ಬಂಧ ಇರುವ ಮತ್ತು ಅಪಕರ್ಷಣಕಾರಿ ಶರ್ಕರ. ಸ್ಟಾರ್ಚನ್ನು - ಅಮೈಲೇಸಿನೊಡನೆ ಕ್ರಿಯೆಗೆ ಒಳಮಾಡುವುದರ ಮೂಲಕ ಮಾಲ್ಟೋಸನ್ನು (-1-4-ಗ್ಲೂಕೊ ಸೈಡಿಕ್ ಬಂಧ ಇರುವ ಮತ್ತು ಅಪಕರ್ಷಣಕಾರಿ ದ್ವಿಶರ್ಕರ) ಪಡೆಯಬಹುದು. ಐಸೊಮಾಲ್ಟೋಸ್ ಎಂಬುದು ಅಮೈಲೊ ಪೆಕ್ಟಿನ್ ಗ್ಲೈಕೊಜನ್ ಮತ್ತು ವಿಶೇಷವಾಗಿ ಕೆಲವು ಸೂಕ್ಷ್ಮಾಣು ಡೆಕ್ಸ್‍ಟ್ರಾನ್‍ಗಳ ಘಟಕ. ನೈಜಿರೋಸ್ (-1-3-ಬಂಧನ) ಎಂಬುದು ಸ್ಟಾರ್ಚ್ ಮತ್ತು ಗ್ಲೂಕೊಜನ್ನಿನ ಭಾಗಶಃ ಜಲವಿಶ್ಲೇಷಣೆಯಿಂದ ದೊರೆಯುತ್ತದೆ. ರ್ಯಾಫಿನೋಸಿನ ಸಂಪೂರ್ಣ ಅಮ್ಲೀಯ ಜಲವಿಶ್ಲೇಷಣೆಯಿಂದ ತಲಾ ಒಂದು ಅಣು ಡಿ-ಗ್ಲೂಕೋಸ್ ದೊರೆತರೂ ಸಾರರಿಕ್ತ ಆಮ್ಲಜಲವಿಶ್ಲೇಷಣೆಗೆ ಅಥವಾ ಯೀಸ್ಟ್ ಇನ್ವರ್ಟೇಸಿನೊಡನೆ ಕ್ರಿಯೆಗೊಳಮಾಡಿದಾಗ ಡಿ-ಫ್ರಕ್ಟೋಸಿನ ಡಿ-ಪ್ರಕ್ಟೋಸ್ ಒಂದು ಅಣು ಮತ್ತು ದ್ವಿಶತಕದ ಮೆಲಿಬಯೋಸ್ ದೊರೆಯುತ್ತವೆ. ಬಾದಾಮಿಯ ಎಮಲ್ಷನ್ ರ್ಯಾಫಿನೋಸನ್ನು ಸಕ್ಕರೆ ಮತ್ತು ಡಿ-ಗ್ಯಾಲೆಕ್ಟೋಸುಗಳಿಗೆ ಜೀರ್ಣಗೊಳಿಸುತ್ತದೆ. ಜಂಟಿಯೊಬಯೋಸ್ (1-6 ಬಂಧನದ ಅಪಕರ್ಷಣಕಾರಿ ಶರ್ಕರ), ಅಮಿಗ್ಡಲಿನ್ ಮತ್ತು ಕ್ರೋಸಿನ್‍ಗಳಂಥ (ಕೇಸರಿಯ ವರ್ಣದ್ರವ್ಯ) ಹೆಚ್ಚಿನ ಸಂಖ್ಯೆಯ ಗ್ಲೈಕೊಸೈಡುಗಳ ಶರ್ಕರ ಘಟಕವಾಗಿದೆ. ಇದನ್ನು ಸ್ಟಾರ್ಚ್ ಜಲವಿಚ್ಛೇದಿತಗಳಲ್ಲಿ ಪರಾವರ್ತನ (ರಿವರ್ಷನ್) ಉತ್ಪನ್ನವಾಗಿ ಪಡೆಯಬಹುದು. ಅಲ್ಲದೇ ಹಳದಿ ಜೆಂಟಿಯನ್ನನಿಂದ ಪಡೆದ ತ್ರಿಶರ್ಕರ ಜೆಂಟಿಯಾನೋಸ್ ಇನ್ವರ್ಟೇಸಿನ ಕ್ರಿಯೆಗೊಳಗಾದಾಗ ಸಹ ಪಡೆಯಬಹುದು. ಸ್ವಾಭಾವಿಕ ಗೋಂದುಗಳು ಹಾಗೂ ಗೋಂದಿನ ದ್ರಾವಣಗಳು ಭಾಗಶಃ ಜಲವಿಶ್ಲೇಷಿತಗಳು ಅನೇಕ ದ್ವಿಶರ್ಕರಗಳ ಅತ್ಯಂತ ಸಾಮಾನ್ಯ ಮೂಲಗಳು.

ದ್ವಿ ಮತ್ತು ಲಘುಶರ್ಕರಗಳು

[ಬದಲಾಯಿಸಿ]

ದ್ವಿ ಮತ್ತು ಲಘುಶರ್ಕರಗಳು ಉಂಟಾಗುವ ಮತ್ತೊಂದು ವಿಧಾನ ಶರ್ಕರ ಮಾನಗಳ ವರ್ಗಾವಣೆಯ ಕ್ರಿಯೆಯಿಂದ. ಈ ಕ್ರಿಯೆ ಜಲವಿಶ್ಲೇಷಣ ಕಿಣ್ವವೊಂದರ ಮೂಲಕ ನಡೆಯುತ್ತದೆ ಮತ್ತು ಅದೇ ಶರ್ಕರದ ಮತ್ತೊಂದು ವರ್ಗಾಯಿತ ಮಾನವನ್ನು ಸ್ವೀಕರಿಸುತ್ತದೆ. ಈ ರೀತಿಯಲ್ಲಿ ಮಾಲ್ಟೋಸ್ ಬೂಜಿನ ಕಿಣ್ವವೊಂದರಿಂದ ಜಲವಿಶ್ಲೇಷಣೆಗೊಳಗಾದಾಗ ಕೊನೆಯ ಪಕ್ಷ ನಾಲ್ಕು ಲಘುಶರ್ಕರಗಳು ಉತ್ಪತ್ತಿಯಾಗುತ್ತವೆ. ಕಬ್ಬಿನ ಸಕ್ಕರೆಯನ್ನು ಜೇನಿನ ಇನ್ವರ್ಟೇಸನ್ನು ಉಪಯೋಗಿಸಿ ಜಲವಿಶ್ಲೇಷಣೆಗೆ ಒಳಮಾಡಿದಾಗ ಮಧ್ಯವರ್ತಿಗಳಾಗಿ ಆರು ಲಘುಶರ್ಕರಗಳು ಉತ್ಪತ್ತಿಯಗುತ್ತವೆ. ಇವುಗಳಲ್ಲಿ ಐದು ಶರ್ಕರಗಳು ಸುಕ್ರೋಸ್‍ನ ಜಲೀಯ ವಿಶ್ಲೇಷಣದಿಂದ ಪಡೆದ ಶರ್ಕರಗಳಿಂದ ಭಿನ್ನವಾಗಿರುತ್ತವೆ. ಯೀಸ್ಟ್ ಮತ್ತು ಬೂಜಿನ ಇನ್ವರ್ಟೆಸುಗಳ ಸಹಾಯದಿಂದ ಎಂಟು ಲಘುಶರ್ಕರಗಳನ್ನು ಪಡೆಯಬಹುದು. ಇವೆಲ್ಲವೂ ಅಂತಿಮವಾಗಿ ಕಿಣ್ವಗಳಿಂದ ಜಲವಿಶ್ಲೇಷಣೆಗೊಳಗಾಗಿ ಗ್ಲೂಕೋಸ್ ಮತ್ತು ಫ್ರಕ್ಟೋಸುಗಳನ್ನು ಬಿಡುಗಡೆಮಾಡುತ್ತವೆ. ಈ ಲಘು ಶರ್ಕರಗಳ ಪೈಕಿ ನಾಲ್ಕು ದ್ವಿಶರ್ಕರಗಳು, ಮೂರು ತ್ರಿಶರ್ಕರಗಳು ಮತ್ತು ಒಂದು ಚತುಶ್ಶರ್ಕರ. ಅಂತೆಯೇ ಅಗೇವಿನ ಕಾಂಡದ ಕಿಣ್ವ ಸುಕ್ರೋಸ್‍ನಿಂದ ಪ್ರಾರಂಭಿಸಿ ಒಂದು ಗ್ಲೂಕೋಸ್‍ಮಾನ ಮತ್ತು ಫ್ರಕ್ಟೋಸಿನ ಒಂದು ಸರಣಿಯುಳ್ಳ ಲಘು ಶರ್ಕರಗಳ ಮಾಲೆಯನ್ನು ಉಂಟುಮಾಡುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: