ವಿಕಿಪೀಡಿಯ:ಪರಿಶೀಲನಾರ್ಹತೆ
ವಿಕಿಪೀಡಿಯದಲ್ಲಿ ಪರಿಶೀಲನಾರ್ಹತೆ ಎಂದರೆ, ವಿಶ್ವಕೋಶವನ್ನು ಉಪಯೋಗಿಸುವ ಯಾರಾದರೂ ಮಾಹಿತಿಯು ಅಧಿಕೃತ ಮೂಲದಿಂದ ಬಂದಿದೆಯೆ ಎಂದು ಪರೀಕ್ಷಿಸಬಹುದು. ವಿಕಿಪೀಡಿಯವು ಸ್ವಂತ ಸಂಶೋಧನೆ ಯನ್ನು ಪ್ರಕಾಶಿಸುವುದಿಲ್ಲ. ಅದರ ಸಂಗ್ರಹವು ಹಿಂದೆ ಪ್ರಕಾಶನಗೊಂಡಿರುವ ಮಾಹಿತಿಯ ಮೇಲೆ ನಿರ್ಣಯವಾಗುವುದೇ ವಿನಃ, ಸಂಪಾದಕರ ನಂಬಿಕೆ ಅಥವಾ ಅನುಭವದ ಮೇಲಲ್ಲ. ನೀವು ಕೆಲವೊಂದರ ಬಗ್ಗೆ ಖಂಡಿತವಾಗಿ ಸರಿ ಎನಿಸಿದರೂ, ನೀವು ಅವುಗಳನ್ನು ಸೇರಿಸುವ ಮುನ್ನ ಅವುಗಳು ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಾಗಿರಬೇಕು. ಯಾವಾಗ ಅಧಿಕೃತ ಮೂಲಗಳು ಒಪ್ಪಿಗೆಯಾಗವಿದಿಲ್ಲವೋ, ಆಗ ಬಹಳಷ್ಟು ಮೂಲಗಳು ಏನು ಹೇಳುತ್ತವೆಯೋ ಅವುಗಳನ್ನು ಪ್ರತಿಕಡೆಗೂ ಬರಾಬರಿ ತೂಕವನ್ನು ಕೊಟ್ಟು ಮತ್ತು ತಟಸ್ತ ದೃಷ್ಟಿಕೋನ ವನ್ನು ಕಾಯ್ದುಕೊಂಡು ಮುಂದಿಡಬೇಕಾಗುವುದು. ಲೇಖನಗಳು, ಪಟ್ಟಿಗಳು ಮತ್ತು ಶಿರೋನಾಮೆಗಳಲ್ಲಿರುವ ಎಲ್ಲಾ ವಸ್ತುಗಳೂ ಸೇರಿದಂತೆ ಪರಿಶೀಲನಾರ್ಹ. ಪರಿಶೀಲನಾರ್ಹಗಳಲ್ಲಿ ಪ್ರಶ್ನಿಸಲ್ಪಟ್ಟುವುಗಳು ಅಥವಾ ಪ್ರಶ್ನಿಸಲ್ಪಡುವಂತವಹ ಎಲ್ಲಾ ಯಥೋಕ್ತಿಗಳು ಮತ್ತು ಯಾವುದೇ ವಸ್ತುವನ್ನು ನೇರವಾಗಿ ಬೆಂಬಲಿಸುವ ಒಂದು ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತ ಕೊಡಬೇಕಾಗಬಹುದು. ಆಧಾರದ ಅಗತ್ಯವಿದ್ದುಕೂಡ, ಆಧಾರವಿಲ್ಲದಿರುವ ಯಾವುದೇ ಒಂದನ್ನೂ ತೆಗೆದುಹಾಕಬಹುದು. ಆಧಾರವಿಲ್ಲದಿರುವ ಅಥವಾ ದುರ್ಬಲ ಆಧಾರವಿರುವ ಜೀವಂತ ವ್ಯಕ್ತಿಗಳ ಬಗ್ಗೆ ಇರುವ ಕಲಹಪ್ರಿಯ ವಸ್ತುಗಳನ್ನು ದಯವಿಟ್ಟು ತತ್ಕ್ಷಣ ತೆಗೆದುಹಾಕಿ.
ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತಕೊಡುವ ಬರವಣಿಗೆ ಹೇಗೆ ಮಾಡಬೇಕೆಂದು ತಿಳಿಯಲು ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತಕೊಡುವ ಆಕರಗಳು ಇದನ್ನು ನೋಡಿ. ಪರಿಶೀಲನಾರ್ಹತೆ, ಸ್ವಂತ ಸಂಶೋಧನೆ ಅಲ್ಲದಿರುವುದು ಮತ್ತು ತಟಸ್ತ ದೃಷ್ಟಿಕೋನ ಇವುಗಳು ವಿಕಿಪೀಡಿಯದ ಒಳಭಾಗದ ಅಡಕ ನೀತಿಗಳಾಗಿವೆ. ಅವುಗಳು ಜತೆ ಸೇರಿ ಕಾರ್ಯವೆಸೆಗಿ ಸಾರಾಂಶವನ್ನು ನಿರ್ದರಿಸುವುದರಿಂದ, ಸಂಪಾದಕರುಗಳು ಈ ಎಲ್ಲಾ ಮೂರು ಮುಖ್ಯವಾದ ಅಂಶಗಳನ್ನು ತಿಳಿದುಕೊಂಡಿರಬೇಕು. ಲೇಖನಗಳು ಹಕ್ಕುಸಾಮ್ಯ(ಕಾಪಿರೈಟ್) ನೀತಿಯನ್ನು ಕೂಡ ಒಪ್ಪಿಕೊಳ್ಳುವಂತಿರಬೇಕು
ಪರಿಶೀಲನೀಯತೆ ಎಂದರೆ ವಿಕಿಪೀಡಿಯಾದಲ್ಲಿನ ಪ್ರತಿ ಹೇಳಿಕೆಯನ್ನು ವಿಶ್ವಾಸಾರ್ಹ ಮೂಲಗಳಿಂದ ದೃಢೀಕರಿಸಬಹುದು. ಇದು ವಿಕಿಪೀಡಿಯಾದ ವಿಶ್ವಾಸಾರ್ಹತೆಯ ಅಡಿಗಲ್ಲು.
ಮೂಲಗಳ ಆಯ್ಕೆ
[ಬದಲಾಯಿಸಿ]ಗುಣಮಟ್ಟದ ಮೂಲಗಳು
[ಬದಲಾಯಿಸಿ]- ಸ್ವೀಕಾರಾರ್ಹ ಮೂಲಗಳು:
- -ಅಕಾಡೆಮಿಕ್ ಜರ್ನಲ್ಗಳು (ಉದಾ: Nature, The Lancet)
- -ಪ್ರಸಿದ್ಧ ಪತ್ರಿಕೆಗಳು (ಉದಾ: ಪ್ರಜಾವಾಣಿ, ದಿ ಹಿಂದೂ)
- -ಸರ್ಕಾರಿ ಪ್ರಕಟಣೆಗಳು (ಉದಾ: ಭಾರತದ ಜನಗಣತಿ)
- ಉದಾಹರಣೆ:
- -ಸರಿ: "ಇಂಡಿಯನ್ ಎಕ್ಸ್ಪ್ರೆಸ್ (15 ಜನವರಿ 2023) ಪ್ರಕಾರ, ಬೆಂಗಳೂರು ಭಾರತದ ಸ್ಟಾರ್ಟಪ್ ರಾಜಧಾನಿ."
- -ತಪ್ಪು: "ಬೆಂಗಳೂರು ಸ್ಟಾರ್ಟಪ್ಗಳಿಗೆ ಉತ್ತಮ ಸ್ಥಳ ಎಂದು ನನ್ನ ಸ್ನೇಹಿತರು ಹೇಳಿದರು."
ಅಸ್ವೀಕಾರಾರ್ಹ ಮೂಲಗಳು
[ಬದಲಾಯಿಸಿ]- ತಪ್ಪಿಸಬೇಕಾದವು:
- -ಸ್ವಯಂ-ಪ್ರಕಟಿತ ಬ್ಲಾಗ್ಗಳು (ಉದಾ: Medium, WordPress)
- -ಸೋಶಿಯಲ್ ಮೀಡಿಯಾ ಪೋಸ್ಟ್ಗಳು (Twitter, Facebook)
- -ಅಜ್ಞಾತ-ಲೇಖಕರ ವೆಬ್ಸೈಟ್ಗಳು
- ಉದಾಹರಣೆ:
- -ತಪ್ಪು: "ವಿಕಿಪೀಡಿಯಾದ ಬಗ್ಗೆ X (Twitter) ಯೂಸರ್ Y ಹೇಳಿದ್ದಾರೆ..."
ಉಲ್ಲೇಖಗಳನ್ನು ಸೇರಿಸುವುದು ಹೇಗೆ
[ಬದಲಾಯಿಸಿ]ಮೂಲ ತಂತ್ರಾಂಶ
[ಬದಲಾಯಿಸಿ]- ಪುಸ್ತಕಗಳಿಗೆ: {{Cite book|title=ಕರ್ನಾಟಕದ ಇತಿಹಾಸ|author=ರಾಮಶರ್ಮ|year=2010|publisher=ABC ಪ್ರಕಾಶನ}}
- ವೆಬ್ ಪೇಜ್ಗಳಿಗೆ:
{{Cite web|url=https://example.com|title=ಶೀರ್ಷಿಕೆ|author=ಲೇಖಕ|date=2023-05-01|publisher=ಪತ್ರಿಕೆ}}
ಸಾಮಾನ್ಯ ತಪ್ಪುಗಳು
[ಬದಲಾಯಿಸಿ]- ಉಲ್ಲೇಖವಿಲ್ಲದ ವಿವರಗಳು:
- -ತಪ್ಪು: "ಕನ್ನಡ ಭಾಷೆ 2000 ವರ್ಷಗಳಷ್ಟು ಹಳೆಯದು."
- -ಸರಿ: "A History of Kannada Literature (ಪ್ರಕಾಶನ X, 1995) ಪ್ರಕಾರ, ಕನ್ನಡದ ಮೂಲ ಕ್ರಿ.ಶ. 3ನೇ ಶತಮಾನದ್ದು."
- ತಪ್ಪಾದ ಉಲ್ಲೇಖ:
- -ಮೂಲವು ಹೇಳಿಕೆಯನ್ನು ಬೆಂಬಲಿಸದಿದ್ದರೆ (ಉದಾ: "ಚಂದ್ರಯಾನ-3 ಯಶಸ್ವಿಯಾಗಿದೆ" ಎಂದು ಒಂದು ಕ್ರಿಕೆಟ್ ಲೇಖನದಿಂದ ಉಲ್ಲೇಖಿಸುವುದು).
ಪರಿಶೀಲನೀಯತೆ ಉಲ್ಲಂಘನೆಯ ಪರಿಣಾಮಗಳು
[ಬದಲಾಯಿಸಿ]- ಉಲ್ಲೇಖರಹಿತ ವಿಷಯವನ್ನು ತೆಗೆದುಹಾಕಲಾಗುತ್ತದೆ.
![]() | This page documents an Kannada Wikipedia policy, a widely accepted standard that all editors should normally follow. Changes made to it should reflect consensus. |