ಚೇಳು, ವೃಶ್ಚಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Scorpion
Temporal range: Silurian–Recent
Asian forest scorpion in Khao Yai National Park, Thailand
Scientific classification
ಸಾಮ್ರಾಜ್ಯ:
Animalia
ವಿಭಾಗ:
ಉಪವಿಭಾಗ:
ವರ್ಗ:
Subclass:
ಗಣ:
Scorpiones

Superfamilies

Buthoidea
Chaeriloidea
Chactoidea
Iuroidea
Scorpionoidea
See classification for families.

ಚೇಳು ಗಳು ಪರಭಕ್ಷಕ ಜಾತಿಗೆ ಸೇರಿದ ಸಂಧಿಪದಿ (ಜಂತು)ಪ್ರಾಣಿಗಳಾಗಿವೆ.ಪ್ರಾಣಿ ವಿಂಗಡಣೆ ಸಂಧರ್ಭದಲ್ಲಿ ವರ್ಗೀಯ ವಿಂಗಡಣೆಯಲ್ಲಿ ಚೇಳುಗಳು ಅರಕ್ನಿಡ್ ಎಂಬ ಪ್ರಭೇದಕ್ಕೆ ಸೇರುತ್ತವೆ. ಅವುಗಳಿಗೆ ಎಂಟು ಪಾದಗಳಿವೆ.ಅವುಗಳ ಮುಂದಿರುವ ಇಕ್ಕಳದಂತಹ ವಾಸನೆ ಕಂಡು ಹಿಡಿಯುವ ಜೋಡಿ ನಖಗಳು ಹಾಗು ಪಟ್ಟಿಗಳುಳ್ಳ ಸಣ್ಣ ಬಾಲದ ತಿರುವು ಆಕಾರವು, ಅದರ ಹಿಂದೆಯೇ ವಿಷದ ಮುಳ್ಳನ್ನು ಹೊಂದಿರುತ್ತದೆ. ಚೇಳು ಅತ್ಯಂತ ವಿಷಕಾರಿ ಎಂದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಭಯವಿದೆ.ಈ ಪ್ರಭೇದದ 25 ಜಾತಿಯ ಚೇಳುಗಳಿಗೆ ಮಾತ್ರ ಮಾನವನನ್ನು ಕೊಲ್ಲುವ ವಿಷದ ಪ್ರಮಾಣವಿದೆ. ವಿಭಿನ್ನ ಭೌತಿಕ,ಸ್ವರೂಪದ,ಜೈವಿಕರಾಸಾಯನಿಕ ಮತ್ತು ನೈಸರ್ಗಿಕ ಅಳವಡಿಕೆಗಳು ಇವುಗಳಿಗೆ ಭೂಮಿ ಮೇಲೆ ಅವಕಾಶ ನೀಡಿವೆ.ಚೇಳುಗಳು ಭೂಮಿ ಮೇಲೆ ಭೌಗೋಳಿಕೆ ಚಿನ್ಹೆ ಕಾಣಿಸಿದ ಸಿಲುರಿಯನ್ ಕಾಲದ ಅವಧಿಯಿಂದಲೂ ಅತ್ಯಂತ ಸಮೃದ್ಧವಾಗಿ ಭೂಮಿ ಮೇಲೆ ಕಾಣಿಸಿವೆ.ಆಶ್ಚರ್ಯವೆಂದರೆ ಇವುಗಳ ಆಕಾರ,ಸ್ವರೂಪದಲ್ಲಿ ಯಾವುದೇ ಅಂತಹ ಬದಲಾವಣೆ ಕಂಡು ಬಂದಿಲ್ಲ.೪೪೩ to ೪೧೬ million years ago[೧]: 1 

ಚೇಳುಗಳು ಎಲ್ಲಾ ಖಂಡದಲ್ಲೂ ವ್ಯಾಪಕವಾಗಿ ಹರಡಿವೆ,ಆದರೆ ಅಂಟಾರ್ಟಿಕಾ,ಹೊರತುಪಡಿಸಿದರೆ ಅತ್ಯುನ್ನತ ಅಕ್ಷಾಂಶದ ಟಂಡ್ರಾ ಗಡಿ ರೇಖೆಗಳಲ್ಲಿ ಅವು ಕಾಣುವುದಿಲ್ಲ. ಅವುಗಳನ್ನು ಮನುಷ್ಯರು ಇಂಗ್ಲೆಂಡ್ ಮತ್ತು ನ್ಯುಜಿಲೆಂಡ್ ಗಳಿಗೆ ಪರಿಚಯಿಸಿದರು. ಚೇಳುಗಳಲ್ಲಿ ಒಟ್ಟು 1752 ಪ್ರಭೇದಗಳಿವೆ ಎಂದು ವರ್ಣಿಸಲಾಗಿದೆ.[೨] ಇವತ್ತಿನ ವರೆಗೆ ಅವುಗಳ ಕುಟುಂಬಕ್ಕೆ ಸೇರಿದ ಸುಮಾರು ಹದಿಮೂರು ವರ್ಗಗಳನ್ನು ಇದುವರೆಗೆ ಕಂಡು ಹಿಡಿಯಲಾಗಿದೆ. ಜೀವಿಗಳ ವರ್ಗೀಕರಣಶಾಸ್ತ್ರವು ಹಲವಾರು ಬದಲಾವಣೆಗಳನ್ನು ಕಂಡಿದೆ,ವಂಶವಾಹಿನಿಗಳ ಅಧ್ಯಯನಗಳು ಈ ಬಗ್ಗೆ ಇನ್ನಷ್ಟು ವಿವರಗಳ ಕಲೆ ಹಾಕಲು ಮುಂದಾಗಿದೆ.

ವ್ಯುತ್ಪತ್ತಿಶಾಸ್ತ್ರ[ಬದಲಾಯಿಸಿ]

ಈ ವಿಶಿಷ್ಟ ಚೇಳು ಎಂಬ ಶಬ್ದವನ್ನು ಸಾಮಾನ್ಯವಾಗಿ ಹೇಳುವಂತೆ ಮಧ್ಯ ಇಂಗ್ಲಿಷ್ ನಿಂದ ಸುಮಾರು 1175 ಮತ್ತು 1225 AD ಅವಧಿಯ ನಡುವೆ ಹೆಸರಿಸಲಾಗಿದೆ.ಅದಲ್ಲದೇ ಇದನ್ನು ಪುರಾತನ ಫ್ರೆಂಚ್ skorpiō ,[೩] ನಿಂದಲೂ ಪಡೆಯಲಾಗಿದೆ.ಈ ಪದದ ಮೂಲವು ಲ್ಯಾಟಿನ್ ಶಬ್ದದಿಂದಲೂ ಬಂದಿದೆ.scorpion ,[೪] ಮತ್ತೆ ಹಿಂದಕ್ಕೆ ಹೋದರೆ ಈ ಶಬ್ದದ ಬೇರುಗಳನ್ನು ಹಾಗೆ ನೋಡಿದರೆ ಗ್ರೀಕ್ ಶಬ್ದσκορπιός – ಭಂಡಾರದಿಂದ ಎತ್ತಿಕೊಳ್ಳಲಾಗಿದೆ.skorpios .[೫]

ಭೌಗೋಳಿಕ ಪ್ರಸರಣ ಹಂಚಿಕೆ[ಬದಲಾಯಿಸಿ]

ಅಂಟಾರ್ಕ್ಟಿಕಾ ಬಿಟ್ಟರೆ ಚೇಳುಗಳು ಎಲ್ಲೆಡೆಯೂ ವಾಸಿಸುತ್ತಿವೆ. ಆದರೆ ಇವು ಸ್ವಾಭಾವಿಕವಾಗಿ ಅಥವಾ ನೈಸರ್ಗಿಕವಾಗಿ ಗ್ರೇಟ್ ಬ್ರಿಟೇನ್, ನ್ಯುಜಿಲೆಂಡ್ ಮತ್ತು ಕೆಲವು ಒಸಿಯಾನಾ, ದ್ವೀಪ ಪ್ರದೇಶಗಳಲ್ಲಿ ಕಾಣಸಿಗುವುದಿಲ್ಲ.ಆದರೆ ಆಕಸ್ಮಿಕವಾಗಿ ಮನುಷ್ಯರ ವ್ಯಾಪಾರ ಮತ್ತು ವಾಣಿಜ್ಯ ಸಂದರ್ಭದಲ್ಲಿ ಇವುಗಳ ಪರಿಚಯವಾಯಿತೆನ್ನಲಾಗಿದೆ.[೧]: 249  ಚೇಳುಗಳ ಅತಿ ದೊಡ್ಡ ಪ್ರಮಾಣದ ಸಂಖ್ಯೆಯು ಉತ್ತರ ಗೋಳಾರ್ಧ ದಲ್ಲಿ ಅಂದರೆ ಉಷ್ಣವಲಯದ ಈ 23° N ಮತ್ತು38° N ಅಕ್ಷಾಂಶಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಇವುಗಳು ಅಪಾರವಾಗಿವೆ.ಇವುಗಳ ಮೇಲೆ ಇನ್ನೂ ರೇಖಾಂಶಗಳ ಮೇಲ್ತುದಿಯಲ್ಲಿ ಉತ್ತರ ಭಾಗದಲ್ಲಿ ಚೇಳುಗಳ ಜಾತಿಯನ್ನು ಪಾರುರೊಕ್ಟೊನಸ್ ಬೊರೆಸ್ ನ್ನು 50° N.ಇಲ್ಲಿ ಕಾಣಬಹುದಾಗಿದೆ.[೧]: 251 

ಚೇಳುಗಳು ನೈಸರ್ಗಿಕವಾಗಿ ಎಲ್ಲಾ ಕಡೆ ತಮ್ಮ ನೆಲೆವಾಸಹೊಂದಿವೆ.ಅತ್ಯಂತ ಎತ್ತರದ ಪರ್ವತ ಶಿಖರದಲ್ಲೂ ಇವುಗಳನ್ನು ಕಾಣಬಹುದು.ಗವಿಗಳು,ಆಂತರಿಕ ಉಬ್ಬರಯುಳ್ಳ ಪ್ರದೇಶಗಳು ಅಲ್ಲಿನ ವಲಯದಲ್ಲೂ ಇವುಗಳ ನೆಲೆವಾಸವಿದೆ.ಆದರೆ ಅಪವಾದವೆಂಬಂತೆ ಬೊರೆಯಿಲ್ ಪರಿಸರವಾಪ್ತಿ ಗಳಲ್ಲಿ ಉದಾಹರಣೆಗೆ ಟಂಡ್ರಾ, ಶಿಖರೀಯ-ಅತ್ಯಧಿಕ ಎತ್ತರ ಪ್ರದೇಶದ ತುದಿ ತೈಗಾ ಮತ್ತು ಶಾಶ್ವತ ಹಿಮಪಾತದಿಂದ ಆಚ್ಛಾದಿತ ಕೆಲವು ಪರ್ವತಗಳನ್ನು ಬಿಟ್ಟರೆ ಇವು ಎಲ್ಲೆಡೆಯೂ ಕಾಣುತ್ತವೆ.[೧]: 251–252 [೬] ಇಲ್ಲಿ ಸ್ಥಳೀಯ ಸೂಕ್ಷ್ಮ ಜೀವಿ ಗಳು, ಅದರ ಜೊತೆಗೆ ಚೇಳುಗಳ ನೆಲೆವಾಸವು ಭೂಮಿ-ಮೇಲ್ಭಾಗದಲ್ಲಿ, ಮರಗಳ-ಮೇಲೆ, ಲೊಥೊಫ್ಲಿಕ್ (ಬಂಡೆ-ಗಳು ಅವುಗಳಿಗೆ ಅಚ್ಚುಮೆಚ್ಚು) ಅಥವಾ ಪಾಸ್ಮೊಫಿಲಿಕ್ (ಮರಳು-ಪ್ರದೇಶ ಅಚ್ಚುಮೆಚ್ಚು); ಅದೇ ಅಲ್ಲದೇ ವಜೊವಿಸ್ ಜಾನ್ಸಿ ಜಾತಿಗಳು ಬಾಜಾ ಕ್ಯಾಲಿಫೊರ್ನಿಯಾ ದ ಎಲ್ಲೆಡೆ ನೆಲೆವಾಸ ಕಂಡುಕೊಂಡಿವೆ.ಇನ್ನುಳಿದ ಜಾತಿಗಳು ಉದಾಹರಣೆಗಾಗಿ ಯುಸ್ಕೊಪ್ರಿಯಸ್ ಕಾರ್ ಪೆಥಿಕಸ್ ಇವು ಕರಾವಳಿ ದಂಡೆಯ ಲಿಟ್ಟೊರಲ ವಲಯ ದಲ್ಲಿ ಕಾಣಸಿಗುತ್ತವೆ.[೭]

ಚೇಳುಗಳ ಐದು ಪ್ರಕಾರದ ವಾಸದ ನೆಲೆಗಳು; (ಯುಸ್ಕೊರ್ ಪಿಯಸ್ ಫ್ಲಾವಿಕಾಡಿಸ್ ), ಇವುಗಳು ಸಾಮಾನ್ಯವಾಗಿ ಕಡಿದಾದ ಪ್ರದೇಶ ವಾಗಿರುವ ಯುನೈಟೆಡ್ ಕಿಂಗ್ಡಮ್ ನ ಐಲೆ ಆಫ್ ಶೆಪ್ಪಿ ಯಲ್ಲಿ ಕಾಣುತ್ತವೆ. ಈ ಸಣ್ಣ ವಸಾಹತು ಪ್ರದೇಶದಲ್ಲಿ ಅವು 1860 ರಿಂದ ಜೀವಿಸುತ್ತಿವೆ,ಬಹುತೇಕ ಇವು ಆಫ್ರಿಕಾದಿಂದ ಹಣ್ಣುಗಳ ಆಮದು ಮಾಡಿಕೊಳ್ಳುವಾಗ ಇಲ್ಲಿಗೆ ಬಂದಿರಬಹುದು,ಆದರೆ ಇತ್ತೀಚಿಗೆ ಗಮನಿಸಿದಾಗ ಅವುಗಳ ನೆಲೆವಾಸದ ವಿನಾಶದಿಂದಾಗಿ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ.[ಸೂಕ್ತ ಉಲ್ಲೇಖನ ಬೇಕು] ಆದರೆ ಸಣ್ಣ ಆಕಾರದ ಈ ಚೇಳು ಮಾನವನಿಗೆ ಯಾವುದೇ ರೀತಿಯದ ಅಪಾಯ ಮಾಡಲಾರದು. ಇದು ವಿಶ್ವದ ಉತ್ತರದಂಚಿನ ಪ್ರದೇಶವಾಗಿದ್ದು ಚೇಳುಗಳಿಗೆ ಇಲ್ಲಿ ವನ್ಯ ಮೃಗಗಳ ನೆಲೆವಾಸದಲ್ಲಿ ಜಾಗ ದೊರಕಿದೆ ಎಂಬುದನ್ನು ಗುರುತು ಮಾಡುತ್ತದೆ.[೮][೯]

ವರ್ಗೀಕರಣ[ಬದಲಾಯಿಸಿ]

ಇದರಲ್ಲಿ ಒಟ್ಟು ಹದಿಮೂರು ಪ್ರಾಣಿ ಕುಟುಂಬವರ್ಗವಿದ್ದು,ಸುಮಾರು 1,400 ಪ್ರಭೇದ ಉಪ ಪ್ರಭೇದಗಳ ಚೇಳುಗಳನ್ನು ವರ್ಣಿಸಲಾಗಿದೆ ಇದಲ್ಲದೇ ಅಳಿವಿನಂಚಿನಲ್ಲಿರುವ ಮತ್ತು ಅಳಿಯುತ್ತಿರುವ ಸುಮಾರು 111 ಪ್ರಭೇದಗಳೂ ಸೇರಿವೆ.[೧೦]

ಈ ವರ್ಗೀಕರಣವನ್ನು ಮೂಲವಾಗಿ ಸೊಲ್ ಗ್ಲ್ಯಾಡ್ & ಫೆಟ್ (2003),[೧೧] ಇದು ಈ ಮೊದಲಿದ್ದ ಸಂಸ್ಥೆಯನ್ನು ಹಿ6ದೆ ಸರಿಸಿ ಆಡಳಿತ ನಡೆಸಿ ಈ ಅಧ್ಯಯನದಲ್ಲಿ ತೊಡಗಿದೆ.[೧೨] ಅಧಿಕವೆಂದರೆ ಈ ಜೀವಿವರ್ಗೀಕರಣವು ಬದಲಾವಣೆ ಹೊಂದಿದ್ದನ್ನು ಸೊಲೆಗ್ಲ್ಯಾಡ್ ಎಟ್ ಆಲ್ ತನ್ನ ಮಂಡನೆಗಳಲ್ಲಿ ಪ್ರತಿಪಾದಿಸಿದೆ. (2005).[೧೩][೧೪]

ಸಿಸ್ಟಮ್ಯಾಟಿಕ್ಸ್(ವಿಭಿನ್ನತೆಯ ವಿಧಾನಗಳು)[ಬದಲಾಯಿಸಿ]

ಈ ಕೆಳಗಿನ ವರ್ಗೀಕರಣವು ಇವತ್ತಿನ ಉಪಲಬ್ಧತೆಯನ್ನೂ ಅದರ ಕುಟುಂಬದ ಶ್ರೇಯಾಂಕದ ಆಧಾರದ ಮೇಲೆ ಮಾಡಲಾಗಿದೆ.

ಶ್ರೇಯಾಂಕದ ಚೇಳುಗಳು
  • ಅಪಶ್ರೇಯಾಂಕದ ಆರ್ಥೊಸೆರಿನಿ ಪೊಕೊಕ್, 1911
   • ಪರ್ಯಾಯವಾದ ಸುಡೊಚಾಕ್ಟಿಡಾ ಸೊಲೆಗ್ಲ್ಯಾಡ್ ಎಟ್ ಫೆಟ್, 2003
    • ಉನ್ನತ ಕುಟುಂಬದ ತಳಿ ಸುಡೊಚ್ಯಾಅಕ್ಟೊಡಿಯಾ ಗ್ರೊಮೊವ್, 1998
     • ಕುಟುಂಬ ಸುಡೊಚಾಕ್ಟಿಡೆ ಗ್ರೊಮೊವ್, 1998
   • ಪರ್ಯಾಯ ಭುತಿಡಾ ಸೊಲೆಗ್ಲ್ಯಾಡ್ et ಫೆಟ್, 2003
    • ಉನ್ನತ ಕುಟುಂಬದ ಜೀವಿ-ಜಂತು ಭ್ತೊಇವೆಡಾ C. L. ಕೊಚ್, 1837
     • ಕುಟುಂಬ ಭುತಿಡಾಯಿ ಸಿ. ಎಲ್. ಕೊಚ್, 1837 (ದಪ್ಪ-ಬಾಲದ ಚೇಳು s)
     • ಕುಟುಂಬ ಮೈಕ್ರೊಚಾರ್ಮೆಡಿ ಲ್ಕೌರೆಂಕೊ, 1996
   • ಪರ್ಯಾಯ ಚಾರಿಲಿಡಾ ಸೊಲೆಗ್ಲ್ಯಾಡ್ ಎಟ್ ಫೆಟ್, 2003
    • ಉನ್ನತ ಜೀವಿ ಜಂತು-ಕುಟುಂಬ ಚೆರಿಲೊಯಿಡಾ ಪೊಕೊಕ್, 1893
     • ಕುಟುಂಬ ಚಾರಿಲಿಡೆಯ್ ಪೊಕೊಕ್, 1893
   • ಪರ್ಯಾಯ ಇವುರಿಡಾ ಸೊಲೆಗ್ಲ್ಯಾಡ್ ಎಟ್ ಫೆಟ್, 2003
    • ಉನ್ನತ ಕುಟುಂಬದ ಜಂತು-ಜೀವಿ ಚಾಕ್ಟೊಡಿಯಾ ಪೊಕೊಕ್, 1893
     • ಕುಟುಂಬ ಚಾಕ್ಟಿಡಿಯೆ ಪೊಕೊಕ್, 1893
     • ಕುಟುಂಬ ಯುಸ್ಕೊರ್ಪಿಡೆ ಲೌರೆ, 1896
     • ಕುಟುಂಬ ಸೂಪರ್ ಸ್ಟಿಶಿನಾಯಿಡೆ ಸ್ಟಾಂಹಕೆ, 1940
     • ಕುಟುಂಬ ವೆಜೊವಿಡುಯಾ ಥೊರೆಲ್, 1876
    • ಉನ್ನತ ಕುಟುಂಬ ಜೀವಿ-ಜಂತು ಐರೊಡಿಯಾ ಥೊರೆಲ್, 1876
     • ಕುಟುಂಬ ಕ್ಯಾರಾಬ್ಯಾಕ್ಟೊನಿಡಿಯೆ ಕ್ರಾಪೆಲಿನ್, 1905 (ಕೂದಲುಳ್ಳ ಚೇಳುಗಳು)
     • ಕುಟುಂಬ ಐರುಡೆಯ್ ಥೊರೆಲ್, 1876
    • ಉನ್ನತ ಕುಟುಂಬ ಸ್ಕಾರ್ಪಿಯೊನ್ ಒಡಿಯಾ ಲ್ಯಾಟ್ರಿಲ್ಲೆ, 1802
     • ಕುಟುಂಬ ಬೊಥ್ರಿಇರುಡೆ ಸೈಮನ್, 1880
     • ಕುಟುಂಬ ಹೆಮಿಸ್ಕಾರ್ಪಿಯೊಡಿಯೆ ಪೊಕೊಕ್, 1893 (= ಇಶ್ಚುನಿರೆಡಿಯೆ, =ಲಿಯೊಚೆಲ್ಡಿಯಾ) (ಬಂಡೆ ಅಡಿಯ ಚೇಳು ಗಳು, ತೆವಳುವ ಚೇಳು ಗಳು, ಅಥವಾ ಮರದಲ್ಲಿ ವಾಸಿಸುವ ಚೇಳುಗಳು)
     • ಕುಟುಂಬ ಸ್ಕೊರ್ಪಿಯೊನಿಡೆ ಲ್ಯಾಟರೆಲ್ಲೆ, 1802 (ಗುದ್ದುಗಳಲ್ಲಿ(ಬಿಲಗಳು) ವಾಸಿಸುವ ಚೇಳುಗಳು ಅಥವಾ ದುರ್ಬಲ-ಕಾಲುಗಳುಳ್ಳ ಚೇಳುಗಳು)

ಪಳೆಯುಳಿಕೆ ದಾಖಲೆ[ಬದಲಾಯಿಸಿ]

ಚೇಳುಗಳನ್ನು ಹಲವಾರು ಜಾಗೆಗಳಲ್ಲಿ ಕಾಣಬಹುದು,ಪಳೆಯುಳಕೆ ದಾಖಲೆಗಳು, ಸಮುದ್ರ ತೀರದ ಸಿಲ್ವರಿನ್ ಕಾಲದ ಜೇಡಿ ಮಣ್ಣಿನ ದಿಬ್ಬಗಳು, ಕಲ್ಲಿದ್ದಿಲು ದೊರೆಯುವ ಪ್ರದೇಶಗಳಾದ ಕಾರ್ಬೊನ್ ಇಫಿರಸ್ ಕಾಲದ ದ ಸಂದರ್ಭದಲ್ಲಿ ಮತ್ತು ಬಿಳಿಚಿನ್ನದ ನಿಕ್ಷೇಪದ ಅವಶೇಷಗಳಲ್ಲಿ ಇವುಗಳು ಕಾಣಬರುತ್ತವೆ. ಅತ್ಯಂತ ಪುರಾತನ ಕಾಲದಲ್ಲಿ ಅಂದರೆ 430 ವರ್ಷಗಳ ಹಿಂದೆ ಸುಮಾರು ಸಿಲುರಿಯನ್ ಆಳ್ವಿಕೆ ಕಾಲದಲ್ಲಿನ ಪ್ರದೇಶದ ಕೆಳಭಾಗದಲ್ಲಿ ಸಮುದ್ರದಡಿಯಲ್ಲಿ ಟೊಳ್ಳು ಭಾಗದಲ್ಲಿ ಇವು ವಾಸಿಸುತ್ತಿದ್ದುದು ದಾಖಲಾಗಿದೆ.[೧೫] ಆದರೆ ಮೊದಲ ಚೇಳುಗಳು ಬೆಟ್ಟದ ಕಿರುಝರಿಗಿರುವ ಕಿವಿರುಗಳನ್ನು ಹೊಂದಿದ್ದವು,ಈಗಿರುವ ಶ್ವಾಸನಾಳದ ಆಕೃತಿಯ ಸ್ವರೂಪದ್ದಾಗಿರಲಿಲ್ಲ. ಸದ್ಯ ಸುಮಾರು 111 ರಷ್ಟು ಚೇಳು ಪಳೆಯುಳಿಕೆಗಳನ್ನು ಕಾಣಬಹುದು.[೧೦] ಸಾಮಾನ್ಯವಾಗಿ ಈ ಸಂಧಿಪದಿಗಳು ಅಕಶೇರುಕಗಳುಳ್ಳ ಚೇಳುಗಳ ಜಾತಿಗಿಂತ ಮಧ್ಯಂತರ ಯುಗದ ಪ್ರಾಣಿ ವರ್ಗಕ್ಕೆ ಸೇರಿವೆ.ಅಥವಾ ಅಮೆರಿಕನ್ ನ ಸೆನೊಝೊಯಿಕ್ ಕಾಲದಲ್ಲಿ ಇದ್ದವೆಂದು ಹೇಳಲಾಗಿದೆ.

ದೊಡ್ಡ ಆಕಾರದ ಚೇಳಿನಾಕಾರದ , ಸಮುದ್ರ ವಾಸಿ ಸಸ್ತನಿಯು ಪಾಲಿಯೊಝೊಯಿಕ್ ಕಾಲದಲ್ಲಿ ಕಂಡು ಬಂದಿವೆ.ಈ ಜಾತಿಯ ಸಂಧಿಪದಿಗಳು ಸದ್ಯದ ಚೇಳುಗಳಿಗೆ ಬಹುತೇಕ ಹೋಲಿಕೆಯಾಗುತ್ತವೆ,ಅಷ್ಟೇ ಅಲ್ಲದೇ ಈಗಿನವುಗಳಿಗೆ ಅವು ಸಂಬಂಧಪಟ್ಟದ್ದವೆಂದು ಹೇಳಬಹುದು. ಹಲವಾರು ಬೆಟ್ಟದ ಝರಿ ಜಾತಿಯ ಈ ಪ್ರಾಣಿವರ್ಗವು ಸುಮಾರು10 to 250 centimetres (3.9 to 98.4 in)ರಷ್ಟು ಉದ್ದಕ್ಕೆ ಬೆಳೆಯಬಹುದಾಗಿದೆ. ಆದರೆ, ಅವುಗಳಲ್ಲಿ ಶರೀರ ರಚನೆ ಅತ್ಯಂತ ವಿಭಿನ್ನವಾಗಿದ್ದು ಅವುಗಳ ಆಕಾರವು ಕಾರ್ಬೊ ನಿಫೆರಸ್ ಜಾತಿಯ ಸಂಧಿಪದಗಳಂತೆ ಇದ್ದು ಸದ್ಯದ ಜಾತಿಗಳಿಗೆ ದೂರದ ಸಂಬಂಧಿಯಂತೆ ಕಾಣುತ್ತಿವೆ. ಇದಲ್ಲದೇ ಇವುಗಳನ್ನು "ಸಮುದ್ರದ ಚೇಳುಗಳೆಂದು" ಕರೆಯುತ್ತಾರೆ.[೧೬] ಅವುಗಳ ಕಾಲುಗಳು ಚಿಕ್ಕವಾಗಿದ್ದವೆಂದು ಅಂದಾಜಿಸಲಾಗಿದೆ.ದಪ್ಪ,ಸುರುಳಿಯಾಕಾರದ ಬಾಲದ ಹಿಂದೆ ಸಣ್ಣ ಬಲಯುತವಾದ ಒಂದೇ ಒಂದು ನಖವಿತ್ತು.ಅವುಗಳು ಸಮುದ್ರದ ಬಲಯುತ ತೆರೆಗಳ ತಡೆಯಲು ಗಟ್ಟಿಯಾಗಿ ಬಂಡೆಗಳಿಗೆ ಅಂಟಿಕೊಳ್ಳಲು ಅವು ಸಮರ್ಥವಾಗಿದ್ದವು.ಸಮುದ್ರ ದಂಡೆಯ ಏಡಿಗಳಂತೆ ಅದರ ಕಾಲುಗಳು ಪ್ರಬಲವಾಗಿದ್ದವು.

ಜೀವಶಾಸ್ತ್ರ[ಬದಲಾಯಿಸಿ]

ಅಂಗರಚನಾ ಶಾಸ್ತ್ರ[ಬದಲಾಯಿಸಿ]

ಚೇಳಿನ ಶರೀರ ವಿಜ್ಞಾನ: 1 = ಜೀರ್ಣಾಂಗವ್ಯೂಹ ಅಥವಾ ಪ್ರೊಸೊಮಾ; 2 = ಹೊಟ್ಟೆ ಅಥವಾ ಮೆಸೊಸೊಮಾ; 3 = ಬಾಲ ಅಥವಾ ಮೆಟೊಸೊಮಾ; 4 = ಚಿಮುಟಾಂಗ ಅಥವಾ ಪೆಡಿಪಾಲ್ಪ್ಸ್5 = ಕಾಲುಗಳು; 6 = ಬಾಯಿಯ ಭಾಗಗಳು ಅಥವಾ ಮುಂಭಾಗದ ಹಲ್ಲುಗಳು; 7 = ಚಿಮಿಟಾಂಗ ಅಥವಾ ಕೊಂಡಿ; 8 = ಚಲಿಸಬಲ್ಲ ದವಡೆclaw ಅಥವಾ ಮಾನುಸ್; 9 = ನಿಶ್ಚಲ ದವಡೆ ಅಥವಾ ತಾರ್ಸುಸ್; 10 =ಕೊಂಡಿ ಅಥವಾ ಟೆಲ್ಸನ್;11 = ಗುದದ್ವಾರ.
ಅರಿಝೋನಾ ಬಾರ್ಬ್ ನ ಚೇಳು

ಚೇಳಿನ ಅಂಗರಚನೆಯು ಎರಡು ಭಾಗಗಳಲ್ಲಿ ವಿಂಗಡಣೆಯಾಗಿದೆ.(ಬಾಲದ ಹಿಂಭಾಗ )(ಟೇಲ್ಮ್ಯಾಟಾ): ಶಿರೊವಕ್ಷ ಭಾಗ(ಇದನ್ನು ವಿಜ್ಞಾನದಲ್ಲಿ ಪ್ರೊಸೊಮಾ ಎನ್ನುತ್ತಾರೆ) ಇನ್ನೊಂದು ಹೊಟ್ಟೆ ಭಾಗ (ಆಪಿಸ್ಥೊಸೊಮಾ)ಎಂದು ಹೇಳಲಾಗುತ್ತದೆ. ಹೊಟ್ಟೆಭಾಗವು ಮೆಸೊಮಾ (ಯಕೃತ್ತ) ಮತ್ತು ಮೆಟಾಸೊಮಾ (ಪಚನಾಂಗ).[೧]: 10  ಆಂಗಗಳನ್ನು ಒಳಗೊಂಡಿದೆ.

ಶಿರೊವಕ್ಷ ಭಾಗ[ಬದಲಾಯಿಸಿ]

ಈ ಶಿರೊವಕ್ಷಭಾಗವ ನ್ನು ಪ್ರೊಸೊಮಾ , ಎಂದೂ ಕರೆಯಲಾಗುತ್ತದೆ.ಚೇಳಿನ “ಶಿರ”, ವು ಈ ಅಂಗಗಳಾದ ಬೆನ್ನುಚಿಪ್ಪು, ಕಣ್ಣುಗಳು, ಅರೆಯುವ ದಂತಗಳು (ಬಾಯಿ ಭಾಗಗಳು), ನಖಗಳು (ಸಾಮಾನ್ಯವಾಗಿ ಇವನ್ನು ಉಗುರುಗಳು, (ಇಕ್ಕುಳುಗಳು ಅಥವಾ ಚಿಮುಟಾಂಗಗಳು) ಇರುತ್ತವೆ.ಅಲ್ಲದೇ ನಡೆಯಲು ನಾಲ್ಕು ಜೋಡಿ ನಡೆಯುವ ಕಾಲುಗಳು ಇರುತ್ತವೆ. ಚೇಳಿನ ಹೊರಭಾಗದ ತಲೆ ಬುರೆಡೆಯು ದಪ್ಪ ಮತ್ತು ಬಾಳಿಕೆ ಬರುವಂತಹದ್ದಾಗಿದ್ದು,ಪ್ರಾಣಿಭಕ್ಷಕಗಳಿಂದ ಉತ್ತಮ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದೆ. ಚೇಳುಗಳ ತಲೆ ಮೇಲ್ಗಡೆ ಎರಡು ಕಣ್ಣುಗಳಿವೆ;ಸಾಮಾನ್ಯವಾಗಿ ಈ ರಚನೆಯು ಅಂಗದ ಹೊರಭಾಗದಲ್ಲಿ ಎರಡು ಇಲ್ಲವೆ ಐದು ಜೊತೆ ಕಣ್ಣುಗಳ ಸಾಲು ತಲೆ ಮುಂಭಾಗದ ಅಂಚಿನಲ್ಲಿವೆ. ತಲೆ ಮೇಲಿದ್ದ ಅವುಗಳ ಕಣ್ಣುಗಳ ರಚನೆಯು ಅವುಗಳು ವಾಸಿಸುವ ಜಾಗೆಯ ಮೇಲೆ ಬದಲಾವಣೆಯಾಗುತ್ತವೆ.ಮೆತ್ತಗಿನ ಜೇಡಿ ಮಣ್ಣಿನಲ್ಲಿದ್ದರೆ ಕಣ್ಣುಗಳು ಮೆದುವಾಗಿಯೂ, ದಪ್ಪ ಅಥವಾ ಮರಳು ಮಣ್ಣಿನಲ್ಲಿದ್ದರೆ ಸ್ವಲ್ಪ ಗಡುಸಾಗಿಯೂ ಇರುತ್ತವೆ.ಅವುಗಳ ಬದುಕಿನ ಶೈಲಿಯ ಮೇಲೆ ಇದು ಅವಲಂಬಿಸಿದೆ.[೧೭]

ಇದರ ಜೀರ್ಣಾಂಗ ವ್ಯೂಹವು ಬಿಡಿಭಾಗದ ಕಿವಿರನ್ನು, ಹೊಂದಿದ್ದು ಕೊಂಡಿಗೂಡು (ನಖದಂತೆ ಆವರಿಸಿದ) ವಿಸ್ತೃತಾಂಗ ವನ್ನು ಬೇಟೆಯನ್ನು ಹಿಡಿಯಲು,ಸ್ವಯಂ ರಕ್ಷಣೆಗೆ ಮತ್ತು ವಾಸನಾಗ್ರಹಣಕ್ಕೆ ಉಪಯೋಗಿಸುತ್ತದೆ. ವಿಸ್ತೃತಾಂಗದ ವಿಂಗಡನೆಗಳು (ದೇಹದ ಹೊರಚಾಚಿದರೂ ಹೊರ ಶರೀರಕ್ಕೆ ಅತ್ಯಂತ ಹತ್ತಿರವಾಗಿವೆ.) ಅವೆಂದರೆ ಸೊಂಟ, ಕಾಲಿನ ಎಲುಬು, ತೊಡೆ ಎಲುಬು (ಮುಂಗಾಲಿನ ಮೇಲ್ಭಾಗದ ಮೂಳೆ), ಮಂಡಿಚಿಪ್ಪು, ಮೊಳಕಾಲು ಮೂಳೆ (ಹಿಂಗಾಲು, ಕೈ ಅಥವಾ ಚಲಿಸಬಲ್ಲ ಇಕ್ಕುಳದಂತಹ ಅಂಗ) ಮತ್ತುಹರಡಿದ ನಖ (ಸ್ಥಿತವಾಗಿರುವ ಇಕ್ಕಳುದಂತಹ ಅಂಗ). ಒಂದು ಚೇಳು ಸಾಮಾನ್ಯವಾಗಿ ಕಪ್ಪು ಬಿಡಿಯಂಗ ಅಥವಾ ತರಿತರಿಯಾದ ಕಣದ ಏಣಿಯಂತಹ ಡುಬ್ಬವನ್ನು ಪಡೆದಿದೆ.ಇವುಗಳನ್ನು "ಎದೆಏಣು" ಎನ್ನಲಾಗುತ್ತದೆ.ಅಥವಾ ಏರುಬೆನ್ನು ಎನ್ನಲಾಗುತ್ತದೆ.ಹೀಗೆ ದೇಹದ ವಿಂಗಡಿತ ಭಾಗಗಳು ಜೀವಿವರ್ಗೀಕರಣದ ಸಮಯದಲ್ಲಿ ಅನುಕೂಲವಾಗುತ್ತವೆ.[೧]: 12 

ಮೆಸೊಮಾ (ಅಂಗರಚನೆಯ ಕೊಂಡಿಗಳು)[ಬದಲಾಯಿಸಿ]

ಅದರ ಉದರ ಭಾಗವು ಒಟ್ಟು ಏಳು ಭಾಗಗಳನ್ನು ಹೊಂದಿರುತ್ತದೆ. (ಸರಣಿ ಭಾಗಗಳು), ಪ್ರತಿಯೊಂದೂ ಬೆನ್ನಮೇಲ್ಭಾಗದೊಂದಿಗೆ ಪ್ಲೇಟ್ ಮಾದರಿಯಲ್ಲಿ ಮುಚ್ಚಿರುತ್ತವೆ.(ಮೂಳೆಅಂಗ) ಅದಲ್ಲದೇ 3 ರಿಂದ 7 ರವರೆಗಿನ ಎಲ್ಲಾ ಭಾಗಗಳು ಒಂದೇ ರಚನೆ ಹೊಂದಿರುತ್ತವೆ. ಉದರದ ಮೊದಲ ಭಾಗದ ವಿಂಗಡನೆಯು ಒಂದು ಜೋಡಿ ಜನನಾಂಗ ಪೊರೆ ಯನ್ನು ಒಳಗೊಂಡಿದೆ.ಇದು ಇಡೀ ದೇಹದ ಪ್ರಮುಖ ಭಾಗ ವನ್ನು ರಕ್ಷಿಸುತ್ತದೆ. ಎರಡನೆಯ ಅದರ 2 ವಿಂಗಡನಾಂಗದ ವಲಯವು ಪ್ಲೇಟ್ ನಂತಹ ತಳವನ್ನು ಪಡೆದು ಗಡುಸುತನದ ಎಳೆಗಳನ್ನು ಹೊಂದಿರುತ್ತದೆ. ಪ್ರತಿಯೊಂದೂ ಕೊಂಡಿಯ ವಿಭಾಗಗಳು ಅಲ್ಲದೇ 3ರಿಂದ7 ವಿಭಾಜಕಗಳು ಒಂದು ಜೊತೆ ಶ್ವಾಸದ್ವಾರ ಹೊಂದಿದ್ದು ಇದು ಚೇಳಿನ ಉಸಿರಾಟಕ್ಕೆ ನೆರವಾಗುತ್ತದೆ. ಇವುಗಳನ್ನು ಸೂಕ್ಷ್ಮ ಶ್ವಾಸನಾಳಗಳು ಎಂದು ಕರೆಯುತ್ತಾರೆ. ಈ ಶ್ವಾಸನಾಳವು ಸಾಮಾನ್ಯವಾಗಿ ಆರಂಭದಲ್ಲಿ ಕತ್ತರಿಸಿದ ಹೋಳಿನಂತೆ,ದುಂಡಗೆ,ಅಂಡಾಕಾರ ಅಥವಾ ದೀರ್ಘ ವೃತ್ತಾಕಾರದ್ದಾಗಿರುತ್ತವೆ.0/}: 13–15 

ಅಂಗರಚನೆಯ ವಿಭಾಜಕ[ಬದಲಾಯಿಸಿ]

ಚೇಳಿನ ಅಂಗರಚನೆಯ ವಿಭಾಜಕವು ಬಾಲ, (ಆರು ವಿಭಜಕಗಳಾಗಿ ಕಾಣುತ್ತದೆ. ಇದೇ ಕೊನೆಯ ಕೊಂಡಿ ಎಂಬಂತೆ ಕಾಣಿಸುತ್ತದೆ), ಆದರೆ ಕೊನೆಯಲ್ಲಿ ಚೇಳಿನ ಗುದದ್ವಾರ ಅಲ್ಲದೇ ವಿಷದ ಬಾಲ (ಕಚ್ಚುವ ಭಾಗ) ವನ್ನೊಳಗೊಂಡಿರುತ್ತದೆ. ಈ ಬಾಲದ ವಿಭಜಕವು, ಒಂದು ಗೂಡು,ಒಳಗೊಂಡಿದ್ದು ಅದು ಎರಡು ಜೊತೆ ನಂಜು-ವಿಷ ಗ್ರಂಥಿಗಳನ್ನು ಪಡೆದಿದೆ, ಇದರಿಂದಾಗಿ ಅದು ಕಚ್ಚುವ ಅಥವಾ ಅದರ ವಿಷದ ಪಿಚಕಾರಿಯಂತೆ ಕೆಲಸ ಮಾಡುತ್ತದೆ.

ಅಪರೂಪವೆಂಬಂತೆ ಕೆಲವೆಡೆ ಚೇಳುಗಳು ಎರಡು ಹಿಂದಿನ ಅಂಗಗಳನ್ನು ಪಡೆದಿರುತ್ತದೆ.(ಬಾಲಗಳು). ಎರಡು ಬಾಲಗಳಿರುವ ಚೇಳುಗಳು ಬೇರೆ ಜಾತಿಯವಲ್ಲ ಆದರೆ ಇದು ಕೇವಲ ಜೀವವಾಹಿನಿಯ ಅಸಮರ್ಪಕತೆಯಾಗಿದೆ.[೧೮]

ನೇರಳಾತೀತ ಬೆಳಕಿನಲ್ಲಿ ಇದು ಪ್ರತಿಬಿಂಬಿಸುತ್ತದೆ.[ಬದಲಾಯಿಸಿ]

ಕಪ್ಪು ಬೆಳಕಿನಡಿಯ ಒಂದು ಚೇಳುಸಾಮಾನ್ಯವಾಗಿ ನೈಸರ್ಗಿಕ ಬೆಳಕಿಗೆ ಇದು ಕಪ್ಪಾಗಿ ಕಾಣುತ್ತದೆ.

ಕೆಲವು ನೇರಳಾತೀತ ಬೆಳಕಿಗೆ ಒಡ್ಡಿದ ಚೇಳುಗಳು ತಮ್ಮ ಮಿಂಚನ್ನು ತೋರುತ್ತವೆ. ಈ ನೇರಳಾತೀತ ಬೆಳಕು ಸಾಮಾನ್ಯವಾಗಿ ಪ್ರತಿದೀಪ್ತಿ ತೋರುತ್ತದೆ,ಯಾಕೆಂದರೆ ಇದು ಕಪ್ಪು ಬೆಳಕನ್ನು,ಸೂಸುವ ರಾಸಾಯನಿಕ ಭಾಗಗಳು ಅದಕ್ಕಿವೆ. ಇದರಲ್ಲಿನ ಒಂದು ಪ್ರದೀಪ್ತಿ ತೋರುವ ಭಾಗವನ್ನು ಬೆಟಾ-ಕಾರ್ಬೊಲೈನ್ಎಂದೂ ಕರೆಯಲಾಗುತ್ತದೆ.[೧೯] ನೇರಳಾತೀತ ದೀಪದ ಮೂಲಕ ಇದರ ಬದುಕಿನ ವಿಭಾಗಗಳ ಬಗ್ಗೆ ತಿಳಿಯಬಹುದಾಗಿದೆ,ಎಂದು ಕ್ಷೇತ್ರವಾರು ಸರ್ವೇಕ್ಷಣೆಗಳು ಹೇಳುತ್ತವೆ. ಈ ಪ್ರದೀಪ್ತಿಯು ಸಾಮಾನ್ಯವಾಗಿ ಅದರ ತಲೆಮೇಲ್ಭಾಗ ದ ಮಿಂಚನ್ನು ಪ್ರಹರಿಸುತ್ತದೆ.ಅದಲ್ಲದೇ ಅದು ಪ್ರತಿ ಅವತಾರವನ್ನು ತೋರಿ ಅದರ ತೀವ್ರತೆಯನ್ನು ಹೆಚ್ಚಿಸುತ್ತದೆ.[೧೯]

ಬದುಕು ಮತ್ತುಸ್ವಭಾವಗಳು[ಬದಲಾಯಿಸಿ]

ಚೇಳುಗಳ ಆಯುಷ್ಯದ ಬಗ್ಗೆ ನಿಖರ ಮಾಹಿತಿ ಇಲ್ಲ.ಅಲ್ಲದೇ ಇದರ ಬದುಕಿನ ಬಗ್ಗೆ ಜೀವನವೃತ್ತಾಂತದ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಇದರ ಆಯುಷ್ಯವು ಸುಮಾರಾಗಿ 4–25 ವರ್ಷಗಳೆಂದು ಅದಾಜಿಸಲಾಗಿದೆ.(ಯಾಕೆಂದರೆ ಇನ್ನೊಂದು ಜೀವಿವರ್ಗ ಅದೇ ಜಾತಿ ಝರಿ ಜಂತು ಪ್ರಾಣಿ )ಯ ಗರಿಷ್ಟ ಆಯುಷ್ಯ 25 ವರ್ಷಗಳಾಗಿವೆ ಎನ್ನಲಾಗಿದೆ). ಅದೇ ಹ್ಯಾಡೊಜೆನೆಸ್ ಜೀವವೈವಿಧ್ಯದ ಆಯುರ್ ಪ್ರಮಾಣವು 25–30 ವರ್ಷಗಳೆಂದು ಹೇಳಲಾಗಿದೆ.

ಸಾಮಾನ್ಯವಾಗಿ ಚೇಳುಗಳು ಉಷ್ಣತೆ 20 °C ರಿಂದ 37 °C ವರೆಗಿರುವ ವಾತಾವರಣವನ್ನು ಬಯಸುತ್ತವೆ. (68 °F ಫ್ಯಾರನ್ ಹೀಟ್ ದಿಂದ 99 °F),ಆದರೆ ಅತ್ಯಂತ ಕಡಿಮೆ ಉಷ್ಣತೆ ಅಥವಾ ಅತಿ ಹೆಚ್ಚಿನ ಮರಭೂಮಿಯ ಉಷ್ಣತೆಗೂ ಹೊಂದಿಕೊಳ್ಳುತ್ತವೆ.[೨೦][೨೧] ಚೇಳುಗಳ ಉಪಪಂಗಡವೆನಿಸಿದ ಸ್ಕಾರ್ಪಿಯೊಪ್ಸ್ ಇವುಗಳು ಏಶಿಯಾದ ಅತಿ ಎತ್ತರದ ಬೆಟ್ಟ ಪ್ರದೇಶದಲ್ಲಿ ಕಂಡುಬರುತ್ತವೆ, ಬೊಥ್ರಿಯುರಿಡ್ ಚೇಳುಗಳ ಜಾತಿಯು ಪತಗೋನಿಯಾ ಪಂಗಡಕ್ಕೆ ಸೇರಿದೆ.ಅದಲ್ಲದೇ ಸಣ್ಣ ಎಸ್ಕೊರ್ಪಿಯಸ್ ಇವು ಸೆಂಟ್ರಲ್ ಯುರೊಪಿಯಾದಲ್ಲಿ ವಾಸಿಸುತ್ತವೆ,ಇವು ಚಳಿಗಾಲದ −25 °C (−13 °F)ಈ ಪ್ರಮಾಣದ ಚಳಿಯಲ್ಲೂ ಬದುಕುತ್ತವೆ. ರೆಪೆಟೆಕ್ (ಟರ್ಕ್ ಮೆನಿಸ್ತಾನ್),ಗಳಲ್ಲಿ ಸುಮಾರು ಏಳು ಜಾತಿಯ ಚೇಳುಗಳು ವಾಸಿಸುತ್ತವೆ. (ಇದರಲ್ಲಿ ಪೆಕ್ಟಿನಿಬುತಸ್ ಬಿರುಲೈ ಜಾತಿಯು ಎಲ್ಲೆಡೆ) ಬದುಕಿದ್ದು ಇದು ಸಾಮಾನ್ಯವಾಗಿ –31 °C ದಿಂದ 50 °C. ವರೆಗೆ ಇರುವ ಉಷ್ಣಾತಾ ವಲಯದಲ್ಲಿ ವಾಸಿಸುತ್ತದೆ.[೨೨]

ಅವುಗಳೆಂದರೆ ನಾಕ್ಟುರನಲ್ ಮತ್ತು ಫೊಸೊರಿಯಲ್,ಉಪಜಾತಿಗಳು ನೆಲದಾಳದ ತಂಪು ಭಾಗದಲ್ಲಿ ವಾಸಿಸುತ್ತಿರುತ್ತವೆ.ಆಹಾರ ಹುಡುಕಲು ಮೇಲಕ್ಕೆ ಅಬಂದು ಮತ್ತೆ ತಮ್ಮ ಬೇಟೆ ದೊರಕಿದ ಅನಂತರ ನೆಲದಾಳದ ತಂಪು ಭಾಗಕ್ಕೆ ಇಲ್ಲವೆ ಬಂಡೆಯ ಪೊಟರಿಯೊಳಗೆ ಸೇರಿ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳುತ್ತವೆ. ಚೇಳುಗಳು ಯಾವಾಗಲೂ ಬೆಳಕಿಗೆ ಪ್ರತಿಕ್ರಿಯಿಸುವ ಸ್ವಭಾವ ಹೊಂದಿದೆ.ತಮ್ಮನ್ನು ಬೇಟೆಯಾಡುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಅಂದರೆ ಪಕ್ಷಿಗಳು,ಸಂಧಿಪದಿಗಳು,ಹಲ್ಲಿಗಳು,ಇಲಿಗಳು,ದಂಶಕಗಳು,ಹೆಗ್ಗಣಗಳು ಮತ್ತು ದೊಡ್ಡ ಇಲಿಗಳು ಇತ್ಯಾದಿಗಳಿಂದ ರಕ್ಷಿಸಿಕೊಳ್ಳುತ್ತವೆ.[೨೩]

ಚೇಳುಗಳು ಅತ್ಯಂತ ಅವಕಾಶವಾದಿಗಳಂತೆ ವರ್ತಿಸುತ್ತವೆ.ತಮ್ಮ ಪರಭಕ್ಷಕತನವನ್ನು ಸಣ್ಣ ಕೀಟಗಳು,ಹುಳುಗಳು ಅಲ್ಲದೇ ದೊಡ್ಡ ಗಾತ್ರದ ಚೇಳುಗಳು ಒಮ್ಮೊಮ್ಮೆ ಹಲ್ಲಿಗಳನ್ನೂ ಆಹಾರಕ್ಕಾಗಿ ಬೇಟೆಯಾಡುತ್ತವೆ. ಅದರ ಉದ್ದನೆ ಕೊಂಡಿಗಳು ಸುತ್ತಲೂ ಸುರುಳಿಯಾಕಾರದ ಸಂವೇದಿ ಕೂದಲನ್ನು ಹೊಂದಿದ್ದು ಅದನ್ನು ಸ್ಪರ್ಷಿಸಲು ಬರುವ ಬೇಟೆಯನ್ನು ಅದು ಸಲೀಸಾಗಿ ತನ್ನ ಆಹಾರವಾಗಿಸುತ್ತದೆ,ಬೇಟೆ ಹತ್ತಿರಕ್ಕೆ ಬಂದ ಮೇಲೆ ಅದು ನಿಧಾನವಾಗಿ ತನ್ನ (ವಿಷದ ಕೊಂಡಿಗಳಿಂದ)ಯಿಂದ ಅದನ್ನು ಘಾಸಿಗೊಳಿಸಿ ಭಕ್ಷಿಸುತ್ತದೆ. ತಮ್ಮ ವಿಷದ ಪ್ರಮಾಣಕ್ಕನುಗುಣವಾಗಿ ಅದು ತನ್ನ ಚಿಮುಟಾಂಗ ಬಳಸಿ ಅದನ್ನು ಹುಡಿಯಾಗಿಸಿ ಅರೆಯಬಹುದು. ಇಲ್ಲವೆ ಅದರ ನರವ್ಯೂಹ ನಿಷ್ಕ್ರಿಯಗೊಳ್ಳುವ ವಿಷವನ್ನು ಅದರೊಳಗೆ ಸೇರಿಸಿ ತನ್ನ ಬೇಟೆಯನ್ನು ಪಡೆಯುತ್ತದೆ. ಈ ಕ್ರಿಯೆಯು ಬೇಟೆಯನ್ನು ಸಾಯಿಸಬಹುದು ಇಲ್ಲವೆ ಅದನ್ನು ನಿಷ್ಕ್ರಿಯಗೊಳಿಸಿ ಸೇವಿಸಬಹುದು. ಚೇಳುಗಳಲ್ಲಿ ಆಹಾರ ಸೇವಿಸುವ ವಿಧಾನವು ವಿಚಿತ್ರವಾಗಿದೆ ಅದು ತನ್ನ ಮುಂಭಾಗದ ಹಲ್ಲುಗಳು,ಬೇಟೆ ಅರೆಯಲು ಅನುಕೂಲವಾಗಿರುವಂತೆ ನೋಡಿಕೊಳ್ಳುತ್ತದೆ.ಇದರ ಬಾಯಿಯಲ್ಲಿನ ಈ ವಿಚಿತ್ರ ದಂತ ಸರಣಿಯು ಅದನ್ನು ಮುಂಭಾಗದ ಬದಲಿಸಬಲ್ಲ ಹಲ್ಲುಗಳ ಮೂಲಕ ತನ್ನ ಆಹಾರ ಪಡೆಯುವಂತೆ ಮಾಡುತ್ತದೆ.ಬಹಳಷ್ಟು ಸಂಧಿಪದಿಗಳು ಹೀಗೆಯೇ ಮಾಡುತ್ತವೆ. ಅದರ ಮುಂದಿನ ಹಲ್ಲುಗಳ ರಚನೆ ಪಂಕ್ತಿಯು ತುಂಬಾ ಹರಿತವಾಗಿದ್ದು,ಬೇಟೆಯ ದೇಹದ ಭಾಗದಿಂದ ತನಗೆ ಬೇಕಾದಷ್ಟು ಮಾಂಸವನ್ನು ಅಥವಾ ಅದರ ಶರೀರ ಭಾಗವನ್ನು ಪಡೆದು ಅರೆಯುತ್ತದೆ.ಅದರ ಮೂಲ-ಹರಿತ ದವಡೆ ಮೂಲಕ ತನ್ನೆಡೆಗೆ ಎಳೆದು ಬಾಯಿಯಲ್ಲಿನ ಎಲ್ಲಾ ಭಾಗಗಳನ್ನು ಅದು ಬಳಸಿಕೊಳ್ಳುತ್ತದೆ. ಚೇಳುಗಳು ಹೆಚ್ಚಾಗಿ ದ್ರವರೂಪದ ಆಹಾರ ಪದಾರ್ಥಕ್ಕೆ ಹೆಚ್ಚು ಒತ್ತುಕೊಡುತ್ತವೆ,ಅವುಗಳಿಗೆ ಹೊರಭಾಗದ ಜೀರ್ಣಾಂಗದ ಅನುಕೂಲವೂ ಇದೆ. ಅದರಲ್ಲಿನ ಪಚನದ ರಸವು ಬೇಟೆಯೊಳಕ್ಕೆ ಹೋಗಿ ನಂತರ ಅದರ ಶರೀರವನ್ನು ದ್ರವರೂಪವನ್ನಾಗಿಸಿ ಹೀರಿಕೊಳ್ಳುತ್ತದೆ. ಕೆಲವು ಜೀರ್ಣವಾಗದ (ತುಪ್ಪಳ, ಬುರುಡೆ ಸ್ನಾಯು, ಇತ್ಯಾದಿ.) ಇವುಗಳು ಅದರ ದವಡೆಯೊಳಕ್ಕೆ ಸಿಕ್ಕಿ ಹಾಕಿಕೊಂಡು ನಂತರ ಹೊರಕ್ಕೆ ವಿಸರ್ಜಿಸಲ್ಪಡುತ್ತವೆ.[೧]: 296–297 

ಚೇಳುಗಳು ಒಂದೇ ಸಾರಿಗೆ ಅತ್ಯಧಿಕ ಆಹಾರ ಸೇವಿಸಬಲ್ಲವು. ವಿಚಿತ್ರವೆಂದರೆ ಅದಕ್ಕೆ ಆಹಾರ ಸಂಗ್ರಹಣೆಯ ಹೆಚ್ಚು ಸಾಮರ್ಥ್ಯವಿದ್ದರೆ ಅದರ ಚಯಾಪಚಯ ಕ್ರಿಯೆಯು ಅತ್ಯಂತ ಮಂದಗತಿಯಲ್ಲಿದೆ.ಹೀಗಾಗಿ ಅದರದು ಕ್ರಿಯಾತ್ಮಕವಲ್ಲದ ಬದುಕಿನ ಶೈಲಿಯಾಗಿದೆ. ಇದರಿಂದಾಗಿ ಚೇಳುಗಳು ದೀರ್ಘಾಯು ಎಂದು ಹೇಳಬಹುದು.ಹೀಗಾಗಿ ಅವು ಆಹಾರವಿಲ್ಲದೇ 6 ರಿಂದ 12 ತಿಂಗಳ ಕಾಲ ಉಪವಾಸ ಬದುಕಿರಬಹುದಾಗಿದೆ.: 297–298 [೧] ಚೇಳುಗಳ ತ್ಯಾಜ್ಯ ಪ್ರಮಾಣವು ಅತ್ಯಂತ ಕಡಿಮೆಯಾಗಿರುತ್ತದೆ.ಅದರ ವಿಸರ್ಜನೆಯು ಬಹುತೇಕ ಘನತ್ಯಾಜ್ಯ, ನಾರು ಮತ್ತು ಯುರಿಕ್ ಆಮ್ಲ ಒಳಗೊಂಡಿದೆ.[೭]

ಮರುಉತ್ಪಾದನೆ[ಬದಲಾಯಿಸಿ]

ಚೇಳುಗಳು ತಮ್ಮ ಲೈಂಗಿಕ ಚಟುವಟಿಕೆಯಿಂದ ಮರಿಗಳಿಗೆ ಜನ್ಮ ನೀಡುತ್ತವೆ,ಕೆಲವು ಗಂಡು ಮತ್ತು ಹೆಣ್ಣು ವೈಯಕ್ತಿಕವಾಗಿ ಈ ಮರುಜನ್ಮ ನೀಡುವ ಕಾರ್ಯದಲ್ಲಿ ತೊಡುಗುತ್ತವೆ. ಹೇಗೆಯಾದರೂ, ಕೆಲವು ಅಮೈಥುನದ ಮೂಲಕ ಸಂತಾನೋತ್ಪತ್ತಿ ಮಾಡುವ ಜೀವಿವರ್ಗಗಳೆಂದರೆ,ಹೊಟೆಂಟೊಟಾ ಹೊಟೆಂಟೊಟಾ ,ಹೊಟೆಂಟೊಟಾ ಕ್ಯಾಬೊವರ್ಡಿನೆಸ್ ,ಲೈಚೆಲೆಸ್ ಆಸ್ಟ್ರೇಲಿಯಸೆ , ಟಿಟಿಯಸ್ ಕೊಲಂಬಿಯನ್ಸ್ ,ಟಿಟಿಯಸ್ ಮೆಟುಂಡಸ್ ,ಟಿಟಿಯಸ್ ಸೆರ್ಯುಲೆಟಸ್ , ಟಿಟಿಯಸ್ ಸ್ಟಿಗ್ಮುರಸ್ ,ಟಿಟಿಯಸ್ ಟ್ರೈವಿಟಟಸ್ ,ಟಿಟಿಯಸ್ ಉರುಗ್ವೆನೆಸಿಸ್ , ಇವುಗಳೆಲ್ಲಾ ಅಂಡಾಣು ಸಂತಾನ,ಪ್ರವೃತ್ತಿ ಮೂಲಕ ಸಂತಾನಾಭಿವೃದ್ಧಿ ಮಾಡುತ್ತವೆ.ಹೀಗೆ ಇಲ್ಲಿ ಫಲಿತಗೊಳ್ಳದ ಮೊಟ್ಟೆಗಳು ದಿನಗಳೆದಂತೆ ಬ್ರೂಣ ಗಳಾಗಿ ಮರಿಗಳಾಗುತ್ತವೆ. ಚೇಳುಗಳಲ್ಲಿ ಈ ಅಂಡಾಣು ಸಂತಾನೋತ್ಪತ್ತಿ ಕ್ರಿಯೆಯು ಒಮ್ಮೆ ಅದು ಪ್ರೌಢಾವಸ್ಥೆ ನಂತರ ಆರಂಭಗೊಂಡರೆ ಹಾಗೆಯೇ ಮುಂದುವರಿಯುತ್ತದೆ.

ಇವುಗಳಲ್ಲಿನ ಲೈಂಗಿಕ ಸಂತಾನೋತ್ಪತ್ತಿಯಲ್ಲಿ ರೇತ್ರ ಅಂಗಾಂಶ ಗಳು ಗಂಡು ಜೀವಿಯಿಂದಹೆಣ್ಣು ಜೀವಿಯೆಡೆಗೆ ವರ್ಗಾಯಿಸಲ್ಪಡುತ್ತವೆ; ಚೇಳುಗಳಲ್ಲಿ ಸಂಕೀರ್ಣ ಒಂದುಗೂಡುವಿಕೆ ಮತ್ತು ಸಂತಾನಕ್ಕಾಗಿ ಸೇರುವಿಕೆ ಇವುಗಳ ಸಂತಾನಭಿವೃದ್ಧಿಗೆ ಪರಿಣಾಮಕಾರಿಯಾಗಿರುತ್ತದೆ. ಇವುಗಳ ಸೇರುವಿಕೆ ಆರಂಭವಾಗುವುದು, ಗಂಡು ಮತ್ತು ಹೆಣ್ಣುಎರಡೂ ತಮ್ಮ ತಮ್ಮ ಜಾಗೆಗಳನ್ನು ಗುರುತಿಸಲು ತಮ್ಮದೇ ಆದ ಮಿಶ್ರಿತ ಫೆರೊಮೊನ್ಸ್ (ವಾಸನಾ ರಾಸಾಯನಿಕ)ಮತ್ತು ಕಂಪನದ ಅಲೆಗಳ ಮೂಲಕ ಸಂಪರ್ಕ ಸಾಧಿಸುತ್ತವೆ. ಅವೆರಡೂ ತಾವು ವಿಭಿನ್ನ ಜಾತಿಗೆ ಸೇರಿದ್ದೇವೆ ಎಂದ ಬಳಿಕ ಗಂಡು-ಹೆಣ್ಣು ಪರಸ್ಪರ ಸೇರಿ ತಮ್ಮ ಸರಿಯಾದ ಒಟ್ಟಾಗುವಿಕೆಯನ್ನು ಪ್ರತಿಪಾದಿಸುತ್ತವೆ.

ಈ ಒಟ್ಟುಗೂಡುವಿಕೆಯು ಗಂಡು, ಹೆಣ್ಣನ್ನು ಪತ್ತೆ ಹಚ್ಚುವ ಮೂಲಕ ಆರಂಭವಾಗುತ್ತದೆ.ಅದಷ್ಟಕ್ಕೇ ಅದೇ ಪತ್ತೆ ಹಚ್ಚಿ ನಂತರ ಎರಡೂ "ನೃತ್ಯ" ಅಂದರೆ ಅದನ್ನು "ಪ್ರೊಮೆನೆಡ್ ಎ ಡೆಉಕ್ಸ್ " ಎನ್ನಲಾಗುತ್ತದೆ.ಇದರ ನಂತರ ಕೂಡುವಿಕೆ ಆರಂಭವಾಗುತ್ತದೆ. ಹೀಗೆ ಗಂಡು ತನ್ನ ಅಂಡಾಣುಗಳನ್ನು ಇಡಲು ಸೂಕ್ತ ಸ್ಥಳವಾದ ಹೆಣ್ಣು ಜೀವಿಯನ್ನು ಹುಡುಕುತ್ತದೆ. ಈ ಕೂಡುವಿಕೆಯು ಹಲವಾರು ವಿಶಿಷ್ಟತೆಗಳನ್ನು ಹೊಂದಿದೆ,ಮೊದಲು ಗಂಡು-ಹೆಣ್ಣುಗಳು ಈ ಸಮಯಕ್ಕಾಗಿ ಹಾತೊರೆಯು ದಡಬಡ ಸುರುವಾಗುತ್ತದೆ.ನಂತರ ಅವೆರಡರ ದವಡೆ ಮುಂಭಾಗದ ಹಲ್ಲುಗಳ ಮೂಲಕ ಚುಂಬನ ಚಟುವಟಿಕೆ ಆರಂಭವಾಗುತ್ತದೆ.ಗಂಡು ಹೆಣ್ಣನ್ನು ತನ್ನೆಡೆಗೆ ಜೋರಾಗಿ ಎಳೆದು ನಿಕಟವಾಗಿ ತನ್ನ ಚುಂಬನದ ಮಳೆಗರೆಯುತ್ತದೆ,ಗಂಡು ಸಣ್ಣ ಪ್ರಮಾಣದ ತನ್ನ ವಿಷದ ಕೊಂಡಿಯ ಕೆಳಭಾಗದಲ್ಲಿನ ದ್ರವವನ್ನು ಹೆಣ್ಣು ಚೇಳಿನ [೨೪] ಶಿರೊವಕ್ಷಕ್ಕೆ ಭಾಗಕ್ಕೆ ಬಿಡುತ್ತದೆ.ಅದನ್ನು ಮತ್ತೆ ಸಂತೈಸುವ ಒಂದು ಕ್ರಮದಲ್ಲಿ ಗಂಡು ಮತ್ತೆ ತನ್ನ ಚಳಕ ತೋರುತ್ತದೆ.

ಗಂಡು ತನ್ನ ಅಂಡಾಣುವನ್ನು ಹೆಣ್ಣಿನ ಅಂಗದಲ್ಲಿ ಇರಿಸಿದ ನಂತರ ಅದನ್ನು ಮುಂದೆ ಏನು ಮಾಡಬೇಕೆಂಬುದರ ಮಾರ್ಗದರ್ಶನ ಮಾಡುತ್ತದೆ. ಇದು ಗಂಡಿನ ಅಂಡಾಣು ಹೆಣ್ಣಿನ ಜನನಾಂಗದ ಪರಿಧಿಯಲ್ಲಿ ಸೇರಿ ರೇತ್ರ ಅಂಗಾಂಶ ಅಥವಾ ಧಾತು ಬಿಡುಗಡೆಯಾಗುವಂತೆ ಮಾಡಿ ಹೀಗೆ ಹೆಣ್ಣು ಮರಿ ಹಾಕಲು ಫಲಿತವಾಗುತ್ತದೆ. ಈ ಕೂಡುವಿಕೆಯು 1 ರಿಂದ 25+ ಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು.ಇದು ಗಂಡು ಜೀವಿಯ ಅಂಡಾಂಶ ಇಡುವ ಸಾಮರ್ಥ್ಯ ಅವಲಂಬಿಸಿದೆ. ಈ ಸೇರುವಿಕೆ ಸುದೀರ್ಘವಾದಎ ಹೆಣ್ಣು ತನ್ನ ಆಸಕ್ತಿ ಕಳೆದುಕೊಂಡು ಈ ಪ್ರಕ್ರಿಯೆಯನ್ನೇ ತ್ಯಜಿಸಬಹುದು.

ಒಮ್ಮೆ ಈ ಸೇರುವಿಕೆ ಪೂರ್ಣಗೊಂಡ ನಂತರ ಗಂಡು ಮತ್ತು ಹೆಣ್ಣು ಪ್ರತ್ಯೇಕಗೊಳ್ಳುತ್ತವೆ. ಗಂಡು ಈ ಪ್ರಕ್ರಿಯೆ ನಂತರ ತಕ್ಷಣವೇ ಈ ಜಾಗ ಬಿಡುತ್ತದೆ,ಯಾಕೆಂದರೆ ಹೆಣ್ಣಿನಿಂದ ಸ್ವಯಂ ಭಕ್ಷಣಗೆ ಒಳಗಾಗದಂತೆ ಎಚ್ಚರಿಕೆ ವಹಿಸುತ್ತದೆ.ಅದಕ್ಕೂ ಹೆಚ್ಚು ಇದು ಲೈಂಗಿಕ ಭಕ್ಷಣೆ ಆಗಬಾರದೆಂದು ಅದು ಎಚ್ಚರ ವಹಿಸುತ್ತದೆ.ಇದು ಚೇಳುಗಳಲ್ಲಿ ತೀರ ಅಪರೂಪವಾಗಿದೆ.

ಹುಟ್ಟುಮತ್ತುಬೆಳವಣಿಗೆ[ಬದಲಾಯಿಸಿ]

ಕಾಂಪ್ಸೊಬುಥ್ಸ್ ಹೆಣ್ಣು ಇನ್ನೊಂದು ಕಿರಿಯದೊಂದಿಗೆ

ಬಹುತೇಕ ಅರಾಕ್ನಿಡ್ ಜಾತಿಯ ಜೀವಿಗಳು, ಅಂದರೆ ಈ ಚೇಳುಗಳು ಅಂಡಜೋತ್ಪಾದನಾ ಸಂತಾನ ಅಭಿವೃದ್ಧಿಗೆ ಕಾರಣವಾಗಿವೆ. ಸಣ್ಣ ಮರಿಗಳು ಒಂದಾದ ನಂತರ ಒಂದು ಅಂಡಾಣು ಮೊಟ್ಟೆಯಿಂದ ಹೊರಬರುತ್ತವೆ,ಅವುಗಳು ಒಂದು ಸಾರಿಯಾದರೂ ತಾಯಿಯ ಮಾರ್ಗದರ್ಶನಕ್ಕೆ ಒಳಗಾಗದೇ ಹೊರಬರಲಾರವು.ಹೀಗೆ ಅವು ಚಿಕ್ಕವುಗಳಿದ್ದಾಗ ತಾಯಿಯ ಮೇಲೆ ಉಳಿದು ತೆವಳುವುದನ್ನು ಕಲಿಯುತ್ತವೆ. ಸಣ್ಣ ಮರಿಜೀವವು ನೈಸರ್ಗಿಕವಾಗಿ ತಾಯಿಯ ಮಾರ್ಗದರ್ಶನವಿಲ್ಲದೇ ಬದುಕಲಾರದು.ಹೆಚ್ಚಾಗಿ ಮೊದಲು ಅಂಡ ಒಡೆದು ಬಂದ ಮರಿಯು ಬದುಕುವುದು ಕಠಿಣ.ಮುಂದಿನವುಗಳನ್ನು ಹೇಗೆ ಜೋಪಾನ ಮಾಡುತ್ತದೆ ಎಂಬುದರ ಮೇಲೆ ಅವುಗಳ ಬದುಕು ಅವಲಂಬಿಸಿದೆ. ವಿಶೇಷವಾಗಿ ಹೆಚ್ಚು ಸಂಘಿಕವಾಗಿರುವ ಜೀವಿಗಳಲ್ಲಿ (ಉದಾಹರಣೆಗೆ ಪಾಂಡಿನಸ್ spp.), ಇವುಗಳೆಲ್ಲಾ ಯುವ/ತಾಯಿ ಸಂಘದೊಂದಿಗೆ ತಮ್ಮ ಬದುಕಿನ ವೇಳೆಯನ್ನು ಕಳೆಯುತ್ತವೆ. ಇವುಗಳ ಗಾತ್ರವು ಅಲ್ಲಿನ ವಾತಾವರಣ ಮತ್ತು ಜೀವಿ ವರ್ಗಗಳು ಈ ಚೇಳಿನ ಎರಡರಿಂದ ನೂರು ಜಾತಿಯ ಜೀವಿಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದರ ಒಟ್ಟಾರೆ ವರ್ಜ್ಯ ಪದಾರ್ಥವು 8 ಪಟ್ಟಾಗಿ ಅದರ ಜೀವನಚಕ್ರದಲ್ಲಿರುತ್ತದೆ.[೨೫]

ಮರಿಗಳು ಸಾಮಾನ್ಯವಾಗಿ ತಮ್ಮ ಪೋಷಕರನ್ನೇ ಹೋಲುತ್ತವೆ. ಅದು ವಿಸರ್ಜನಾ ವಸ್ತುಗಳನ್ನು ಆಗಾಗ ಹೊರಹಾಕುವುದರೊಂದಿಗೆ ಅದರ ಬೆಳವಣಿಗೆ ನಿಂತಿದೆ.(ಪೊರೆ ಬಿಚ್ಚುವಿಕೆ)ಯನ್ನು ಅವಲಂಬಿಸಿದೆ. ಒಂದು ಚೇಳಿನ ಅಭಿವೃದ್ಧಿಯು ಮರಿ ಕೀಟ ತಳೆಯುವ ರೂಪವನ್ನು ಅವಲಂಬಿಸಿದೆ.(ಇದು ಎಷ್ಟು ರೂಪ ಪಡೆದು ಭೂಮಿಗೆ ಬಂತು) ಚೇಳುಗಳು ಸಾಮಾನ್ಯವಾಗಿ ಐದರಿಂದ ಏಳು ರೂಪಗಳ ಪಡೆದ ನಂತರ ಪ್ರೌಢಾವಸ್ಥೆಗೆ ತಲುಪುತ್ತವೆ. ಈ ರೂಪಾಂತರವು ಹಳೆಯ ಪೊರೆ ಕಳಚು ಮೂಲಕ ಆಗುತ್ತದೆ.(ಮುಂಭಾಗದ ಮರಿ ಜೀವಿಯ ಅವತಾರದಂತೆ). ಹೀಗೆ ಅದರ ಶರೀರವು ಇಬ್ಭಾಗವಾಗಿ ಎರಡೂ ಕಡೆಯ ಭಾಗಗಳು ಒಟ್ಟು ಸೇರಿ ಹಳೆಯ ಶಿರೊಭಾಗವನ್ನು ಬಿಟ್ಟು ಒಂದು ಆಕಾರ ಪಡೆಯುತ್ತವೆ.ಇದನ್ನು ಮರುಜೀವ ಸೃಷ್ಟಿ ಎನ್ನಬಹುದು. ಹೀಗೆ ಅದು ರೂಪಾಂತರವಾದ ಮೇಲೆ ಚೇಳು ಹೊಸ ತಲೆ ಬುರುಡೆ ರೂಪದೊಂದಿಗೆ ದಾಳಿಗಳ ಎದುರಿಸಲು ಸನ್ನದ್ದವಾಗುತ್ತದೆ. ಈ ಚೇಳು ಹೊಸದಾದರೂ ಹೊಸ ಜಗತ್ತಿಗೆ ತನ್ನನ್ನು ತೆರೆದುಕೊಳ್ಳಲು ಸಮರ್ಥವಾಗುತ್ತದೆ.ಹೀಗೆ ಪೂರ್ಣಗೊಂಡ ನಂತರ ಅದರ ಜೀವನ ಚಕ್ರಕ್ಕೆ ಚಾಲನೆ ದೊರೆಯುತ್ತದೆ. ಈ ರೀತಿಯಾದ ಗಡಸುತನ ಪಡೆಯುವುದಕ್ಕೆ ಹೊಸರೂಪಾಂತರ ಎನ್ನುತ್ತಾರೆ. ಆದರೆ ಈ ಹೊಸ ಗಡಸುತನದ ಬುರುಡೆಯು ಶಿರೊವಕ್ಷದ ರಕ್ಷಣೆ ಮಾಡುತ್ತದೆ; ಇದನ್ನುಹೊಸರೂಪಾಂತರ ಎನ್ನುತ್ತಾರಲ್ಲದೇ,ಇದೇ ಅವುಗಳ ಬೆಳವಣಿಗೆಯ ಪ್ರದೀಪ್ತಿಯಾಗಿದೆ.

ಮಾನವರ ಜೊತೆಗಿನ ಸಂಬಂಧ[ಬದಲಾಯಿಸಿ]

ಚೇಳಿನ ಕೊಂಡಿಯ ತೀಕ್ಷಣತೆ ಮತ್ತು ವಿಷ[ಬದಲಾಯಿಸಿ]

ಎಲ್ಲರಿಗೂ ಗೊತ್ತಿರುವಂತೆ ಅದು ತನ್ನ ಆಹಾರಕ್ಕಾಗಿ ಬೇಟೆಗಳ ಹಿಡಿಯಲು ತನ್ನ ವಿಷವನ್ನು ಬಳಸಿ ಆ ಬೇಟೆಯನ್ನು ನಿಷ್ಕ್ರಿಯಗೊಳಿಸಿ ಸೇವಿಸುತ್ತದೆ.ಆದರೆ ಇದಕ್ಕಿಂತಲೂ ಅದು ಹೆಚ್ಚು ತೀಕ್ಷ್ಣವಾಗಿರುತ್ತದೆ. ಇದು ಪರಭಕ್ಷಕಗಳ ವಿರುದ್ಧ ರಕ್ಷಣೆಗಾಗಿಯೂ ಇದು ಬಳಕೆಯಾಗುತ್ತದೆ. ಈ ವಿಷವು ಕೆಲವು ಸಂಯುಕ್ತಗಳ ಮಿಶ್ರಣವಾಗಿದೆ.(ನರಕೋಶದ ನಂಜುಸಂಯುಕ್ತ,ಎಂಜೈಮ್ ರಾಸಾಯನಿಕಗಳು)ಇವು ದುಷ್ಪರಿಣಾಮ ಬೀರುವುದಲ್ಲದೇ ಕೆಲವೊಂದು ನಿರ್ಧಿಷ್ಟ ಪ್ರಾಣಿಗಳ ಕೊಲ್ಲುವ್ ಗುರಿಯಾಗಿರುತ್ತದೆ. ಅದು ಪ್ರತಿ ಸಂಯುಕ್ತವನ್ನು ಸೂಕ್ತ ಪ್ರಮಾಣದಲ್ಲಿ ಸಂಗ್ರಹಿಸಿಟ್ಟು ಅದು ತನಗೆ ಬೇಕಾದ ಪರಿಮಾಣದಲ್ಲಿ ಬಿಡುಗಡೆ ಮಾಡುತ್ತದೆ. ಇದರಲ್ಲಿ ಸುಮಾರು 1000+ ಜಾತಿಯ ಚೇಳುಗಳಿದ್ದು ಅವುಗಳಲ್ಲಿ ಕೇವಲ 25 ಜಾತಿಯ ಚೇಳುಗಳಿಗೆ ಮಾನವನನ್ನು ಕೊಲ್ಲುವಷ್ಟು ತೀಕ್ಷ್ಣವಾಗಿರುವ ವಿಷವಿರುತ್ತದೆ.ಇವೆಲ್ಲವೂ ಬುತೆಡಾಯ್ ಎಂಬ ಸಂಧಿಪದಿ ಕುಟುಂಬಕ್ಕೆ ಸೇರಿದ್ದಾಗಿವೆ.[೭][೨೬]

ವೈದ್ಯಕೀಯ ಉಪಯೋಗಳು[ಬದಲಾಯಿಸಿ]

ಇದರಲ್ಲಿ ಪ್ರಮುಖವೆಂದರೆ ಚೇಳಿನ ನಂಜು ಪ್ರೊಟೀನ್ ಇದನ್ನು ಔಷಧಿಯ ತಯಾರಿಕೆಯಲ್ಲೂ ಬಳಸುತ್ತಾರೆ.

ಸಣ್ಣ ಸರಣಿಯ ಈ ಜೀವಾಣು ವಿಷದಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಟ್ಯಾಸಿಯಮ್ (K+) ವಾಹಿನಿಗಳ ಕಾರ್ಯ ಅಡತಡೆ ಮಾಡುವುದಲ್ಲದೇ ಜೀವಿ ರಸಾಯನಿಕಗಳ ತಡೆಗೆ ಬಳಸಬಹುದು,ಅಷ್ಟೇ ಅಲ್ಲದೇ ಮಹತ್ವದ ಭೌತಶಾಸ್ತ್ರೀಯವಾಗಿ KCNA3 ವಾಹಿನಿಯಾಗುತ್ತದೆ, ಇದನ್ನು KV1.3,ಎಂದೂ ಕರೆಯಲಾಗುತ್ತದೆ.ದೊಡ್ಡ ಪ್ರಮಾಣದ ಅಯಾನುಗಳ ಸಾಗಣೆಗೂ Ca2+ ಇದನ್ನು ಬಳಸಲಾಗುತ್ತದೆ.ಇದು ದೈಹಿಕ T ದುಗ್ದಕೋಶ (T ಕೋಶ) ನಿಯಂತ್ರಣ ಹಾಗು ರಸವಿಸರ್ಜನೆಗೆ ಮಹತ್ವ ನೀಡುತ್ತದೆ. ಹೀಗೆ KV1.3 ಅಡೆತಡೆಗಳು ರೋಗನಿರೋಧಕ ಗಳ ನೆರವಿಗೆ ಸಹಾಯಕವಾಗಿವೆ. ರೋಗ ನಿರೋಧಕ ಶಕ್ತಿಹೀನತೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.(ಉದಾಹರಣೆಗೆ ಸಂಧಿವಾತ,ಹೊಟ್ಟೆಉರಿಯೂತ,ಕಣ್ಣಿನ ವಿವಿಧ ಬಿಳಿಪೊರೆಗಳ ನಿವಾರಣೆಗೆ ಇದರ ಬಳಕೆಯಾಗುತ್ತದೆ,)[೨೭]

ಚೇಳು ಜಾತಿಯ ಕ್ರಿಮಿಯ ವಿಷವು ವೈದ್ಯಕೀಯವಾಗಿ ಚರ್ಮರೋಗವಿಜ್ಞಾನದಲ್ಲಿ ಮಹತ್ವದ್ದಾಗಿದೆ.[೨೮]

ಡೆತ್ ಸ್ಟಾಲ್ಕರ್ ಜಾತಿ ಚೇಳುಗಳು ಅತ್ಯಂತ ಪ್ರಬಲ ವಿಷ ಹೊಂದಿರುತ್ತವೆ.

ನಂಜುಗಳ ಪರೀಕ್ಷೆಗೊಳಗಾಗಿರುವುದು:

 • ಕ್ಲೊರೊಟಾಕ್ಷಿನ್ ಒಂದು 36-ಅಮಿನೊ ಆಮ್ಲ ಜಠರ ಸಂಬಂಧಿ ದೋಷಗಳಿಗೆ ಅನುಕೂಲವಾದ ರಸಾಯನವು ಈ ವಿಷ ಯುಳ್ಳ ಡೆತ್ ಸ್ಟಾಲ್ಕರ್ ಚೇಳಿ ನಲ್ಲಿರುತ್ತದೆ.(ಲೆಯರೆಸ್ ಕ್ವಿಂಕೆಂಟ್ವ್ತ್ಚೆರಿಯಸ್ )ಇದು ಸಣ್ಣ ಪ್ರಕ್ರಿಯೆಗಳ ಸ್ಥಗಿತತೆ ತಡೆಯುತ್ತದೆ.ಅದನ್ನೇ ಕ್ಲೊರೈಡ್ ಚಾನಲ್ ಗಳೆನ್ನುತ್ತಾರೆ.[೨೯] ಈ ಕ್ಲೊರೊಟಾಕ್ಷಿನ್ ಮೆದುಳಿನ ಕ್ಯಾನ್ಸರ್ ನಿಂದ ಹಾಳಾದ ಕೋಶಗಳನ್ನು ಸರಿ ಮಾಡುತ್ತದೆ,ಇದು ಹೊಸ ವಿಧಾನಗಳ ಅಳವಡಿಸಲು ಹಾಗು ನೂತನ ತನಿಖೆಗೆ ದಾರಿ ಮಾಡಿಕೊಟ್ಟಿದೆ.ಹೀಗೆ ಹಲವಾರು ಅರ್ಬುದ ರೋಗಗಳ ಪತ್ತೆ ಹಾಗು ಗುಣಮುಖಕ್ಕೆ ಉಪಯೋಗಿಸಲಾಗುತ್ತಿದೆ.[೩೦]
 • ಮೌರೊಟಾಕ್ಷಿನ್ಇದನ್ನು ಟುನೇಶಿಯಾದ ಸ್ಕಾರ್ಪಿಯೊ ಮೌರಸ್ ಪಾಮ್ ಟಾಸ್ ಚೇಳಿನ ವಿಷದಿಂದ ಪಡೆಯಲಾಗುತ್ತದೆ.

ಸಂಸ್ಕೃತಿ[ಬದಲಾಯಿಸಿ]

ಇದನ್ನು ಕೆಲವು ದೇಶಗಳ ಸಂಸ್ಕೃತಿಯಲ್ಲೂ ಬಳಸಲಾಗುತ್ತಿದೆ.ವೃಶ್ಚಿಕ ಎಂಬುದನ್ನು ಹನ್ನೆರಡು ರಾಶಿಚಕ್ರದ ಭವಿಷ್ಯದಲ್ಲಿಯೂ ಬಳಸಲಾಗುತ್ತದೆ.ಬೆಬಲೋನಿಯನ್ ಭವಿಷ್ಯಗಾರರು ಚಾಲ್ಡೆಯನ್ ಕಾಲದಿಂದಲೂ ಬಳಕೆ ಮಾಡುತ್ತಾ ಬಂದಿದ್ದಾರೆ.[೧]: 462 

ಉತ್ತರ ಆಫ್ರಿಕಾ ಮತ್ತು ದಕ್ಷಿಣ ಏಶಿಯಾ ,ಗಳಲ್ಲಿ ಇದು ರಾಷ್ಟ್ರೀಯ ಮಟ್ಟದಲ್ಲಿ ವೃಶ್ಚಿಕವು ಒಂದು ಸಾಹಿತ್ಯ ಕಲಾಕೃತಿ ಯನ್ನಾಗಿ ಬಳಕೆ ಮಾಡಲಾಗುತ್ತದೆ.ವಿಶೇಷವಾಗಿ ಇಸ್ಲಾಮಿಕ್ ಕಲೆ ಕಂಡು ಬರುವ ಮಧ್ಯ ಪ್ರಾಚ್ಯ ದಲ್ಲಿ ಇದನ್ನು ಕಾಣಬಹುದು.[ಸೂಕ್ತ ಉಲ್ಲೇಖನ ಬೇಕು] ಇದನ್ನು ದುಷ್ಟ ಶಕ್ತಿ ವಿರುದ್ದ ಹೋರಾಡುವ ಮತ್ತು ಅದರಿಂದ ನಮ್ಮನ್ನು ರಕ್ಷಿಸುವ ಸಂಕೇತ ದರವೇಶಿಗಳ ಶಕ್ತಿಯನ್ನು ಹೊಂದಿದ್ದು ಇದರಿಂದ ದುಷ್ಟ ಶಕ್ತಿಗಳ ವಿರುದ್ದ ಪ್ರತಿಶಕ್ತಿಯಾಗಿ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಇನ್ನೊಂದು ಸಂದರ್ಭದಲ್ಲಿ ವೃಶ್ಚಿಕವು ಮಾನವ ಲೈಂಗಿಕತೆ ತೋರಿಸುವ ಸಂಕೇತವಾಗಿದೆ.[ಸೂಕ್ತ ಉಲ್ಲೇಖನ ಬೇಕು] ದಕ್ಷಿಣ ಏಶಿಯಾದಲ್ಲಿನ ದೇಶೀಯ ಔಷಧಿಗಳಲ್ಲಿ ಬಳಕೆಯಾಗುತ್ತದೆ.ಚೇಳು ಕಡಿತಕ್ಕೆ ಸಂಬಂಧಿಸಿದ ಉಪಕಥೆಗಳೂ ಇಲ್ಲಿ ಸಿಗುತ್ತವೆ.[೩೧]

ಪುರಾತನ ಈಜಿಪ್ತ್ ದೇಶದ ದೇವತೆ ಸರ್ಕೆಟ್ ಶಕ್ತಿಯನ್ನು ವೃಶ್ಚಿಕಕ್ಕೆ ಹೋಲಿಸಲಾಗುತ್ತದೆ.ಹಲವಾರು ದೇವತೆಗಳು ಪೀಡೆಗಳಿಂದ ನಮ್ಮೆಲ್ಲರನ್ನೂ ರಕ್ಷಿಸುತ್ತಾರೆಂಬ ನಂಬಿಕೆಯು ಇದೆ.

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ ೧.೮ Polis, Gary A. (1990). The Biology of Scorpions. Stanford University Press. p. 587. ISBN 9780804712491. Retrieved 2010-04-03.
 2. ಫ್ರಾಂಟ್ಸೆಕ್ ಕೊವಾರಿಕ್(2009),ಇಲುಸ್ಟ್ರೇಟೆಡ್ ಕ್ಯಾಟ್ ಲಾಗ್ ಆಫ್ ಸ್ಕಾರರ್ಪಿಯಾನ್ಸ್ ಪಾರ್ಟ್ ,I
 3. "ವೃಶ್ಚಿಕ",(n.d.) [1]ದಿ ಅಮೇರಿಕನ್ ಹೆರಿಟೇಜ್ ಡಿಕ್ಷನರಿ ಆಫ್ ದಿ ಇಂಗ್ಲೀಷ್ ಲಾಂಗ್ವೇಜ್‌‌,ನಾಲ್ಕನೆಯ ಆವೃತ್ತಿ. (2003). ಹಿಂಪಡೆದಿದ್ದು ಏಪ್ರಿಲ್ 14, 2010 from http://www.thefreedictionary.com/scorpion.
 4. "ವೃಶ್ಚಿಕ" . Dictionary.com. Dictionary.com Unabridged . Random House, Inc. http://dictionary.reference.com/browse/scorpion (accessed: April 14, 2010).
 5. [46]^ಹಾರ್ಮೋನಿಯ, ಹೆನ್ರಿ ಜಾರ್ಜ ಲಿಡ್ಡೆಲ್,ರಾಬರ್ಟ ಸ್ಕಾಟ್, ಒಂದು ಗ್ರೀಕ್-ಇಂಗ್ಲಿಷ್ ನಿಘಂಟು, ಎಟ್ ಪೆರ್ಸಯುಸ್‌.
 6. Huber, Bernhard A. (2005). African biodiversity: molecules, organisms, ecosystems. Springer. p. 26. ISBN 9780387243153. Retrieved 2010-04-14. {{cite book}}: More than one of |pages= and |page= specified (help); Unknown parameter |coauthors= ignored (|author= suggested) (help)
 7. ೭.೦ ೭.೧ ೭.೨ Gordon Ramel. "The Earthlife Web: The Scorpions". The Earthlife Web. Retrieved 2010-04-08.
 8. Rein, Jan Ove (2000). "Euscorpius flavicaudis". The Scorpion Files. Norwegian University of Science and Technology. Retrieved 2008-06-13.
 9. Benton, T. G. (1991). "The life history of Euscorpius flavicaudis (Scorpiones, Chactidae)" (PDF). Journal of Arachnology. 19: 105–110. Retrieved 2008-06-13.
 10. ೧೦.೦ ೧೦.೧ Dunlop, Jason A. (2008). "How many species of fossil arachnids are there". Journal of Arachnology. BioOne. 36 (2): 262–272. doi:10.1636/CH07-89.1. Retrieved 2010-04-07. {{cite journal}}: Unknown parameter |coauthors= ignored (|author= suggested) (help)
 11. Soleglad, Michael E. (2003). "High-level systematics and phylogeny of the extant scorpions (Scorpiones: Orthosterni)" (multiple parts). Euscorpius. Marshall University. 11: 1–175. Retrieved 2008-06-13. {{cite journal}}: Unknown parameter |coauthors= ignored (|author= suggested) (help)
 12. ಸ್ಕಾಟ್ ಎ. ಸ್ಟಾಕ್ ವೆಲ್, 1989. ರಿವಿಜನ್ ಆಫ್ ದಿ ಫಿಲೊಜನಿ ಅಂಡ್ ಹೈಯರ್ ಕ್ಲಾಸಿಫಿಕೇಶನ್ ಆಫ್ ಸ್ಕಾರ್ಪಿಯನ್ಸ್ (ಚೆಲೆಸೆರೆಟಾ). Ph.D. ಡಿಸರ್ಟೇಶನ್ , ಯುನ್ವರಸಿಟಿ ಆಫ್ ಕ್ಯಾಲಿಫೊರ್ನಿಯಾ, ಬರ್ಕಲಿ
 13. Soleglad, Michael E. (2005). "The systematic position of the scorpion genera Heteroscorpion Birula, 1903 and Urodacus Peters, 1861 (Scorpiones: Scorpionoidea)" (PDF). Euscorpius. Marshall University. 20: 1–38. Retrieved 2008-06-13. {{cite journal}}: Unknown parameter |coauthors= ignored (|author= suggested) (help)
 14. Fet, V.; Soleglad, E. (2005). "Contributions to scorpion systematics. I. On recent changes in high-level taxonomy" (PDF). Euscorpius. Marshall University (31): 1–13. ISSN 1536-9307. Retrieved 2010-04-07.
 15. Andrew Jeram (June 16, 1990). "When scorpions ruled the world". New Scientist.
 16. Waggoner, Ben. "Eurypterida". Regents of the University of California. Retrieved 2008-06-13.
 17. "ಆರ್ಕೈವ್ ನಕಲು". Archived from the original on 1999-08-22. Retrieved 2010-10-18.
 18. Prchal, Steve. "Pepe the Two Tailed Scorpion". Sonoran Arthropod Studies Institute. Retrieved 2008-06-13.
 19. ೧೯.೦ ೧೯.೧ Stachel, Shawn J (1999). "The fluorescence of scorpions and cataractogenesis". Chemistry & Biology. Cell Press. 6: 531–539. doi:10.1016/S1074-5521(99)80085-4. Retrieved 2008-06-17. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)[ಶಾಶ್ವತವಾಗಿ ಮಡಿದ ಕೊಂಡಿ]
 20. Hadley, Neil F. (1970). "Water Relations of the Desert Scorpion, Hadrurus Arizonensis". Journal of Experimental Biology. 53 (3): 547–558. PMID 5487163. Retrieved 2008-06-13.
 21. Hoshino, K. (2006). "Selection of Environmental Temperature by the Yellow Scorpion Tityus serrulatus Lutz & Mello, 1922 (Scorpiones, Buthidae)" (PDF). Journal of Venomous Animals and Toxins including Tropical Diseases. 12 (1): 59–66. doi:10.1590/S1678-91992006000100005. Retrieved 2008-06-13. {{cite journal}}: Italic or bold markup not allowed in: |journal= (help); Unknown parameter |coauthors= ignored (|author= suggested) (help)
 22. (ಕೊವಾರಿಕ, ಫ್ರಾಂಟಿಸಿಕ್; ಸ್ಟಿರಿ (ಸ್ಕಾರ್ಪಿಯನ್ಸ್), ಜಿಲವಾ 1998, p. 19
 23. "Scorpions". Australian Museum. Retrieved 2008-06-13.
 24. Hickman Jr., Cleveland P. (2005-02-01). Integrated Principles of Zoology (13 ed.). McGraw-Hill Science/Engineering/Math. p. 380. ISBN 978-0073101743. {{cite book}}: Unknown parameter |coauthors= ignored (|author= suggested) (help)
 25. Lourenco, W. R. (2000). "Reproduction in scorpions, with special reference to parthenogenesis" (PDF). European Arachnology: 71–85. Archived from the original (PDF) on 2008-10-03. Retrieved 2010-10-18.
 26. "ThinkQuest: Poisonous Animals: Scorpions". Archived from the original on 2005-04-03. Retrieved 2009-12-16. {{cite web}}: Unknown parameter |copyright year= ignored (help)
 27. Chandy KG, Wulff H, Beeton C, Pennington M, Gutman GA, Cahalan MD (2004). "K+ channels as targets for specific immunomodulation". Trends in Pharmacological Sciences. 25 (5): 280–289. doi:10.1016/j.tips.2004.03.010. PMC 2749963. PMID 15120495. {{cite journal}}: Unknown parameter |month= ignored (help); Unknown parameter |unused_data= ignored (help)CS1 maint: multiple names: authors list (link)
 28. Rapini, Ronald P.; Bolognia, Jean L.; Jorizzo, Joseph L. (2007). Dermatology: 2-Volume Set. St. Louis: Mosby. p. 1315. ISBN 1-4160-2999-0.{{cite book}}: CS1 maint: multiple names: authors list (link)
 29. DeBin JA, Strichartz GR (1991). "Chloride channel inhibition by the venom of the scorpion Leiurus quinquestriatus". Toxicon. 29 (11): 1403–8. doi:10.1016/0041-0101(91)90128-E. PMID 1726031.
 30. Deshane J, Garner CC, Sontheimer H (2003). "Chlorotoxin inhibits glioma cell invasion via matrix metalloproteinase-2". Journal of Biological Chemistry. 278 (6): 4135–44. doi:10.1074/jbc.M205662200. PMID 12454020. {{cite journal}}: Unknown parameter |month= ignored (help)CS1 maint: multiple names: authors list (link)
 31. Frembgen, Jürgen Wasim (2004). "The Scorpion in Muslim Folklore". Asian Folklore Studies. Nanzan Institute for Religion and Culture. 63 (1): 95–123.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: