ನಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Naan shiva.jpg
Gara Flat
ಮೂಲ
ಮೂಲ ಸ್ಥಳಮಧ್ಯ ಮತ್ತು ದಕ್ಷಿಣ ಏಷ್ಯಾ, ಯುರೋಪ್
ಪ್ರಾಂತ್ಯ ಅಥವಾ ರಾಜ್ಯಪಾಕಿಸ್ತಾನ, ಭಾರತ, ಅಫಘಾನಿಸ್ತಾನ್, ಮಲೇಷಿಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಸಿಂಗಾಪುರ್
ವಿವರಗಳು
Courseಮುಖ್ಯ, ಗ್ರೇವೀಸ್ ಮತ್ತು ಸೂಪ್ ಜೊತೆ ಬಡಿಸಲಾಗುತ್ತದೆ
ಬಡಿಸುವಾಗ ಬೇಕಾದ ಉಷ್ಣತೆಹಾಟ್, ಕೊಠಡಿ ತಾಪಮಾನ
ಮುಖ್ಯ ಘಟಕಾಂಶ(ಗಳು)ಗೋಧಿ ಹಿಟ್ಟು (ಉದಾಹರಣೆಗೆ ಅಟಾ, ಮೈದಾ), ನೀರು, ಅಡುಗೆ ಕೊಬ್ಬು (ಉದಾ: ಬೆಣ್ಣೆ, ತುಪ್ಪ), ಮೊಸರು, ಹಾಲು (ಐಚ್ಛಿಕ)

ನಾನ್ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿ ಕಂಡುಬರುವ, ಗೂಡೊಲೆಯಲ್ಲಿ ಬೇಯಿಸಲಾದ ಒಂದು ಹುದುಗು ಸೇರಿಸಿದ ಫ಼್ಲ್ಯಾಟ್‍ಬ್ರೆಡ್. ಸಾಮಾನ್ಯವಾಗಿ, ಇದು ಪೀಟಾವನ್ನು ಹೋಲುತ್ತದೆ, ಮತ್ತು ಪೀಟಾ ಬ್ರೆಡ್‍ನಂತೆ ಹುದುಗಾಗಿ ಮಡ್ಡಿಯನ್ನು ಸೇರಿಸಲಾಗುತ್ತದೆ. ನಾನ್ಅನ್ನು ತಂದೂರ್‍ನಲ್ಲಿ ಬೇಯಿಸಲಾಗುತ್ತದೆ, ತಂದೂರಿ ಅಡುಗೆಗೆ ಇದರಿಂದಲೇ ಆ ಹೆಸರು ಬಂದಿದೆ. ಹಾಗಾಗಿ, ಇದು ರೋಟಿಯಿಂದ ಬೇರೆಯಾಗಿದೆ, ಏಕೆಂದರೆ, ರೋಟಿಯನ್ನು ಸಾಮಾನ್ಯವಾಗಿ ತವಾ ಎಂದು ಕರೆಯಲಾದ ಚಪ್ಪಟೆ ಅಥವಾ ಸ್ವಲ್ಪ ಒಳಬಾಗಿನ ಕಬ್ಬಿಣದ ಹೆಂಚಿನ ಮೇಲೆ ಬೇಯಿಸಲಾಗುತ್ತದೆ. ಆಧುನಿಕ ಪಾಕವಿಧಾನಗಳು ಕೆಲವೊಮ್ಮೆ ಮಡ್ಡಿಯ ಬದಲಾಗಿ ಒದಗುಪುಡಿಯನ್ನು ಬಳಸುತ್ತವೆ. ನಾನ್‍ಗೆ ವಿಭಿನ್ನವಾದ ರುಚಿಯನ್ನು ನೀಡಲು ಹಾಲು ಅಥವಾ ಮೊಸರನ್ನೂ ಬಳಸಬಹುದು.ಹಿಟ್ಟಿನ ಮಿಶ್ರಣವನ್ನು ತಯಾರಿಸಲು ನೀರಿನ ಬದಲು ಹಾಲನ್ನು ಬಳಸಿದರೆ ಮ್ರುದುವಾದ ಹಿಟ್ಟು ತಯಾರಾಗುತ್ತದೆ.ಯೀಸ್ಟ್ ಮತ್ತು ಲ್ಯಾಕ್ಟೋಬಸಿಲ್ಲಿ ಬಳಸಿದಲ್ಲಿ ಹಾಲಿನಲ್ಲಿ ಹುಳಿಸುವಿಕೆ ಕ್ರಿಯ ನಡೆಯುತ್ತದೆ.[೧]

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "naan-recipe-without-yeas". www.vegrecipesofindia.com. vegrecipesofindia.
"https://kn.wikipedia.org/w/index.php?title=ನಾನ್&oldid=1000715" ಇಂದ ಪಡೆಯಲ್ಪಟ್ಟಿದೆ