ಆಪರೇಷನ್ ಡೈಮಂಡ್ ರಾಕೆಟ್
ಗೋಚರ
(ಆಪರೇಷನ್ ಡೈಮಂಡ್ ರ್ಯಾಕೆಟ್ ಇಂದ ಪುನರ್ನಿರ್ದೇಶಿತ)
ಆಪರೇಷನ್ ಡೈಮಂಡ್ ರಾಕೆಟ್ |
---|
ಆಪರೇಷನ್ ಡೈಮಂಡ್ ರಾಕೆಟ್ - ಜೇಮ್ಸ್ ಬಾಂಡ್ ಮಾದರಿಯಲ್ಲಿನ ಕನ್ನಡ ಚಲನಚಿತ್ರಗಳಲ್ಲೊಂದು. ಡಾ.ರಾಜ್‍ಕುಮಾರ್ ಸಿ.ಐ.ಡಿ ಏಜೆಂಟ್ 999 ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ, ಪದ್ಮಪ್ರಿಯ ನಾಯಕಿಯಾಗಿ ನಟಿಸಿದ್ದು, ಚಿ.ಉದಯಶಂಕರ್ ರಚಿಸಿರುವ ಸಂಪೂರ್ಣ ಆಂಗ್ಲ ಸಾಹಿತ್ಯ ಇರುವ "If you come today" ಎಂಬ ಗೀತೆಯಿದೆ. ಚಿತ್ರದ ಉತ್ತರಾರ್ಧದ ಬಹುಭಾಗ ನೇಪಾಳದಲ್ಲಿ ಚಿತ್ರೀಕರಿಸಲಾಗಿದೆ. ಡಾ.ರಾಜ್ ಅಭಿನಯದ ಬಾಂಡ್ ಸರಣಿ ಚಿತ್ರಗಳಲ್ಲಿ ಈ ಚಿತ್ರವು ಕೊನೆಯದು.
ಸ್ವಾರಸ್ಯ
[ಬದಲಾಯಿಸಿ]- ಬಾಂಡ್ ಸರಣಿಯ ನಾಲ್ಕು ಚಿತ್ರಗಳಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿರುವ ಪಾತ್ರದ ಹೆಸರು ಪ್ರಕಾಶ್ (ಸಿ.ಐ.ಡಿ. ೯೯೯)
- ನಾಲ್ಕೂ ಚಿತ್ರಗಳ ನಿರ್ದೇಶಕರು ದೊರೆ-ಭಗವಾನ್ ಮತ್ತು ನಾಲ್ಕೂ ಚಿತ್ರಗಳಿಗೆ ಸಂಗೀತ ನೀಡಿದವರು ಜಿ.ಕೆ.ವೆಂಕಟೇಶ್
- ಈ ಚಿತ್ರವು ಮಾತ್ರ ವರ್ಣಚಿತ್ರ; ಉಳಿದವು ಕಪ್ಪುಬಿಳುಪು ಚಿತ್ರ.
- ಈ ಚಿತ್ರದಲ್ಲಿ ಮಾತ್ರ ಹಾಸ್ಯನಟ ನರಸಿಂಹರಾಜು ಅಭಿನಯಿಸಿಲ್ಲ; ಉಳಿದ ಮೂರು ಚಿತ್ರಗಳಲ್ಲಿ ಬೇಬಿ ಎಂಬ ಹೆಸರಿನ ಸಿ.ಐ.ಡಿ. ಸಹಾಯಕನ/ಕಾರ್ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.
- ಗುಬ್ಬಿ ವೀರಣ್ಣ ಮತ್ತು ತಮ್ಮ ತಾಯಿ, ಬಾಂಡ್ ಶೈಲಿಯ ಪಾತ್ರಗಳನ್ನು ನಿರ್ವಹಿಸಿದಕ್ಕೆ ಅಸಮಾಧಾನ ತೋರಿಸಿದ್ದರು. ಅದರಿಂದ, ರಾಜ್‍ಕುಮಾರ್ ಮತ್ತೆ ಆ ರೀತಿಯ ಪಾತ್ರಗಳನ್ನು ಮಾಡಲಿಲ್ಲ.
- ಹೆಂಗಳೆಯರೊಂದಿಗೆ ಸರಸ ಮತ್ತು ಹೆಚ್ಚು ಮಂದಿಯನ್ನು ಕೊಲೆಗೈವ ಬಾಂಡ್ ಪಾತ್ರಗಳು, ನೋಡುಗರಿಗೆ ಕೆಟ್ಟ ಮಾದರಿಯಾಗುತ್ತವೆ ಎಂಬುದು ವೀರಣ್ಣನವರ ವಾದವಾಗಿತ್ತು.
- ನಾಲ್ಕು ಮಂದಿ, ನತನೆಯನ್ನು ಮೆಚ್ಚುವುದು ಮಾತ್ರವಲ್ಲದೆ, ಒಳ್ಳೆಯ ಬುದ್ಧಿ ಕಲಿಯಬೇಕು ಎಂಬುದು ರಾಜ್‍ಕುಮಾರ್‌ರ ತಾಯಿಯ ಒತ್ತಾಸೆಯಾಗಿತ್ತು.
- ಹೀಗಾಗಿ, ರಾಜ್ ಮುಂದೆ ಖಳನಟರಾಗಿ ನಟಿಸಿದರೂ, ಆ ಚಿತ್ರದಲ್ಲಿ ರಾಜ್‌ರ ಒಂದು ಒಳ್ಳೆ ಪಾತ್ರವೂ ಇರುವಂತೆ ಚಿತ್ರಕಥೆ ತಯಾರು ಮಾಡಲಾಗುತ್ತಿತ್ತು. ನಾನೊಬ್ಬ ಕಳ್ಳ, ರವಿಚಂದ್ರ ಚಿತ್ರಗಳ ದ್ವಿಪಾತ್ರಕ್ಕೆ ಇದೇ ನಾಂದಿಯಾಯ್ತು.
ಇವನ್ನೂ ನೋಡಿ
[ಬದಲಾಯಿಸಿ]- ಜೇಡರಬಲೆ
- ಗೋವಾದಲ್ಲಿ ಸಿ.ಐ.ಡಿ. ೯೯೯
- ಆಪರೇಷನ್ ಜಾಕ್ಪಾಟ್ನಲ್ಲಿ ಸಿ.ಐ.ಡಿ. ೯೯೯
- ಡಾ.ರಾಜ್‍ಕುಮಾರ್
- ದೊರೆ-ಭಗವಾನ್
- ಜಿ.ಕೆ.ವೆಂಕಟೇಶ್
- ನರಸಿಂಹರಾಜು
- ಚಿ.ಉದಯಶಂಕರ್
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
If you come today | ಚಿ.ಉದಯಶಂಕರ್ | ಡಾ.ರಾಜ್‍ಕುಮಾರ್ |
ಚಳಿ ಚಳಿ | ಚಿ.ಉದಯಶಂಕರ್ | ಡಾ.ರಾಜ್‍ಕುಮಾರ್, ಎಸ್.ಜಾನಕಿ |
ನೀ ನಡುಗುವೆ ಏಕೆ, ಬಾ ಭಯವನು ಬಿಡು | ಚಿ.ಉದಯಶಂಕರ್ | ಡಾ.ರಾಜ್‍ಕುಮಾರ್ |
ಅಲ್ಲಿ ಇಲ್ಲಿ ನೋಡುವೆ ಏಕೆ | ಚಿ.ಉದಯಶಂಕರ್ | ಡಾ.ರಾಜ್‍ಕುಮಾರ್, ವಾಣಿ ಜಯರಾಂ |