ಮಂಜುಳ
Jump to navigation
Jump to search
Manjula | |
---|---|
Born | |
Died | ೧೨ ಸೆಪ್ಟೆಂಬರ್ ೧೯೮೬ ಬೆಂಗಳೂರು, India | (aged ೩೧)
Occupation | ನಟಿ |
Years active | 1973–1983 |
Spouse(s) | ಅಮೃತರಾಮ್ |
Children | ಅಭಿಷೇಕ್ ಅಭಿನಯ |
ಮಂಜುಳಾ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು.
ಜನನ[ಬದಲಾಯಿಸಿ]
- ಜನ್ಮಸ್ಥಳ ಬೆಂಗಳೂರು. ತಂದೆ ಶಿವಣ್ಣ ಪೋಲೀಸ್ ಸಬ್‌ಇನ್‌ಸ್ಪೆಕ್ಟರ್. ಭರತನಾಟ್ಯ ಪ್ರವೀಣೆಯಾಗಿದ್ದ ಮಂಜುಳಾರ ಪ್ರತಿಭೆ ಪ್ರಭಾತ್ ಕಲಾವಿದರು ತಂಡದ ಮೂಲಕ ಬೆಳಕಿಗೆ ಬಂತು. ಸಿ.ವಿ.ಶಿವಶಂಕರ್ ಅವರಮನೆ ಕಟ್ಟಿ ನೋಡು ಚಿತ್ರದಿಂದ ಬಾಲನಟಿಯಾಗಿ ಬೆಳ್ಳಿತೆರೆಗೆ ಬಂದರು.
- ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿರುವಾಗಲೇ ಯಾರ ಸಾಕ್ಷಿ ಚಿತ್ರದಿಂದ ನಾಯಕಿಯಾದರು. ಕನ್ನಡದ ನಾಯಕನಟ ಶ್ರೀನಾಥ್ ಮತ್ತು ಮಂಜುಳಾ ಜೋಡಿ ಪ್ರಣಯ ಜೋಡಿ ಎಂದು ಪ್ರಸಿಧ್ಧವಾಗಿತ್ತು. ಮಂಜುಳಾ ಅವರು ನಿರ್ಮಾಪಕ ಅಮೃತಂ ಅವರನ್ನು ವಿವಾಹವಾಗಿದ್ದರು. ಸಂಪತ್ತಿಗೆ ಸವಾಲ್ ಚಿತ್ರದಲ್ಲಿನ ಬಜಾರಿ ಸ್ವಭಾವದ ಹೆಣ್ಣಿನ ಪಾತ್ರವಾದ ದುರ್ಗಿ ಪಾತ್ರದಲ್ಲಿ ಅಭಿನಯಿಸಿ, ಬಹಳ ಪ್ರಸಿದ್ಧಿಯನ್ನು ಪಡೆದರು.
- ಆ ಪಾತ್ರವು ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ಪಾತ್ರಗಳಲ್ಲೊಂದಾಗಿ ಸ್ಥಾನಪಡೆದಿದೆ. ಅನೇಕ ಉತ್ತಮ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಮಂಜುಳಾರವರ ಖಾಸಗಿ ಜೀವನ ಸುಖಮಯವಾಗಿರಲಿಲ್ಲ. ಸುಮಾರು ೫೪ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ತನ್ನ "ಹುಡುಗಾಟದ ಹುಡುಗಿ" ಚಿತ್ರವನ್ನು ನಿರ್ದೇಶಿಸಿದ "ಅಮೃತಂ" ಅವರು ಮಂಜುಳ ಅವರನ್ನು ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡರು ಬಳಿಕ ಒಂದು ಗಂಡು ಮಗುವಿಗೆ ಜನನ ನೀಡಿದರು ನಂತರ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು.
- ಗಂಡು ಮಗುವಿಗೆ " ಅಭಿಷೇಕ್" ಎಂದು ಹೆಸರಿಸಿದರು. ಹೆಣ್ಣು ಮಗುವಿಗೆ "ಅಭಿನಯ" ಎಂದು ನಾಮಕರಣ ಮಾಡಿದರು. ಆ ನಂತರ ಬಣ್ಣದ ಜಗತ್ತಿನಿಂದ ದೂರ ಉಳಿದು ತಾನಾಯಿತು ತನ್ನ ಮಕ್ಕಳಾಯಿತು ತನ್ನ ಸಂಸಾರವಾಯಿತೆಂದು ಸಂತೋಷದಿಂದಿದ್ದ ಸಮಯದಲ್ಲಿ ಅವರು ಬೆಂಕಿ ಆಕಸ್ಮಿಕದಲ್ಲಿ, ನಿಗೂಢ ರೀತಿಯಲ್ಲಿ (ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ?), ತಮ್ಮ ೩೫ನೇ ವಯಸ್ಸಿನಲ್ಲಿ ಮರಣ ಹೊಂದಿದರು.
ಮಂಜುಳಾ ಅಭಿನಯದ ಚಿತ್ರಗಳು[ಬದಲಾಯಿಸಿ]
- ಮೂರೂವರೆ ವಜ್ರಗಳು
- ಭಕ್ತ ಕುಂಬಾರ
- ಸಂಪತ್ತಿಗೆ ಸವಾಲ್
- ಮಯೂರ
- ದಾರಿ ತಪ್ಪಿದ ಮಗ
- ನೀ ನನ್ನ ಗೆಲ್ಲಲಾರೆ
- ಎರಡು ಕನಸು
- ಶ್ರೀನಿವಾಸ ಕಲ್ಯಾಣ
- ಗಲಾಟೆ ಸಂಸಾರ
- ಹುಡುಗಾಟದ ಹುಡುಗಿ
- ಪಾಯಿಂಟ್ ಪರಿಮಳ
- ಸವತಿಯ ನೆರಳು
- ಸೀತಾರಾಮು
- ದೀಪಾ
- ಮರೆಯದ ಹಾಡು
- ಮರೆಯಲಾಗದ ಕಥೆ
- ಕುಂಕುಮ ರಕ್ಷೆ
- ಬದುಕು ಬಂಗಾರವಾಯಿತು
- ನಿನಗಾಗಿ ನಾನು
- ಶಿಕಾರಿ
- ಸೊಸೆ ತಂದ ಸೌಭಾಗ್ಯ
- ಮಿಥುನ
- ಬೆಸುಗೆ
- ಸಿಂಗಾಪುರದಲ್ಲಿ ರಾಜಾಕುಳ್ಳ
- ಕಿಟ್ಟು ಪುಟ್ಟು
- ಬೆತ್ತಲೆಸೇವೆ
- ತಾಯಿಗಿಂತ ದೇವರಿಲ್ಲ
- ಎರಡು ಮುಖ
- ಯಾರ ಸಾಕ್ಷಿ?
- ಮನೆ ಗೆದ್ದ ಮಗ - ಕೊನೆಯ ಚಿತ್ರ.