ವಿಷಯಕ್ಕೆ ಹೋಗು

ಭಕ್ತ ಕುಂಬಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಕ್ತ ಕುಂಬಾರ
ಭಕ್ತ ಕುಂಬಾರ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಎನ್.ಆರ್.ಅನುರಾಧ ದೇವಿ
ಚಿತ್ರಕಥೆಹುಣಸೂರು ಕೃಷ್ಣಮೂರ್ತಿ
ಸಂಭಾಷಣೆಹುಣಸೂರು ಕೃಷ್ಣಮೂರ್ತಿ
ಪಾತ್ರವರ್ಗರಾಜಕುಮಾರ್ ಲೀಲಾವತಿ, ಮಂಜುಳ ಬಾಲಕೃಷ್ಣ, ರಮೇಶ್ (ಮಿಸ್.ಲೀಲಾವತಿ),ರಾಜಾಶಂಕರ್,ವಜ್ರಮುನಿ,ತೂಗುದೀಪ ಶ್ರೀನಿವಾಸ್,ಸಂಪತ್,ದ್ವಾರಕೀಶ್,ಶನಿಮಹಾದೇವ್,ಜೋಕರ್ ಶ್ಯಾಂ,ಎಚ್.ಆರ್.ಶಾಸ್ತ್ರಿ,ತಿಪಟೂರು ಸಿದ್ದರಾಮಯ್ಯ,ಎಂ.ಎನ್.ಲಕ್ಷ್ಮೀದೇವಿ,ಕಾಂಚನ,ಬೇಬಿ ಶ್ರೀದೇವಿ
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಎಂ.ಎ.ರೆಹಮಾನ್
ಸಂಕಲನಕೋಟಗಿರಿ ಗೋಪಾಲರಾವ್ , ವೆಂಕಟೇಶ್ವರ ರಾವ್
ಬಿಡುಗಡೆಯಾಗಿದ್ದು೧೯೭೪
ನೃತ್ಯಉಡುಪಿ.ಬಿ.ಜಯರಾಂ
ಚಿತ್ರ ನಿರ್ಮಾಣ ಸಂಸ್ಥೆಲಕ್ಷ್ಮಿ ಫಿಲಂಸ್ ಕಂಬೈನ್ಸ್
ಸಾಹಿತ್ಯಹುಣಸೂರು ಕೃಷ್ಣಮೂರ್ತಿ,ಚಿ.ಉದಯಶಂಕರ್
ಹಿನ್ನೆಲೆ ಗಾಯನಪಿ ಬಿ ಎಸ್, ಎಸ್ ಜಾನಕಿ, ಎಸ್ ಪಿ ಬಿ

ಪರಿಚಯ

[ಬದಲಾಯಿಸಿ]

ಭಕ್ತ ಕುಂಬಾರ ಭಾರತೀಯ ಭಕ್ತಿ ಪರಂಪರೆಯನ್ನು ಅದರಲ್ಲೂ ಪಂಡರಾಪುರ ವಿಟ್ಠಲನ ಭಕ್ತ ಪ್ರೇಮವನ್ನು ಮತ್ತು ಭಕ್ತರ ಪರಮಾತ್ಮನ ಸಂಬಂಧಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿರುವ ಚಿತ್ರ. 1974 ರಲ್ಲಿ ಕನ್ನಡ ಭಾಷೆಯಲ್ಲಿ ತೆರೆ ಕಂಡ ಈ ಚಿತ್ರ ನಿರ್ದೇಶಿಸಿದ್ದು ಹುಣಸೂರು ಕೃಷ್ಣಮೂರ್ತಿ. ತಾರಾ ಬಳಗದಲ್ಲಿ ಡಾ||ರಾಜ್ ಕುಮಾರ್ ಮತ್ತು ಲೀಲಾವತಿ ಕಾಣಿಸಿಕೊಂಡಿದ್ದಾರೆ. ಭಕ್ತ ಗೋರನ ಭಕ್ತಿಯ ಉನ್ಮತ್ತತೆ ಯನ್ನು ಡಾ||ರಾಜ್ ಕುಮಾರ್ ತಮ್ಮ ಅಮೋಘ ಅಭಿನಯದ ಮುಖಾಂತರ ಕಟ್ಟಿ ಕೊಟ್ಟಿದ್ದಾರೆ[].

ಭಕ್ತ ಗೋರ ಒಬ್ಬ ಸಾಮಾನ್ಯ ಮಡಿಕೆ ಮಾಡುವ ಕುಂಬಾರ, ಕಡು ಬಡತನದಲ್ಲಿ ಬಿದ್ದು ಬೇಯುತ್ತಿದ್ದಂತಹ ಹಿನ್ನೆಲೆಯುಳ್ಳವನು . ಅವನು ದೇವರ ನಾಮಗಳನ್ನು, ಭಜನೆಗಳನ್ನು ತಾನು ಕೆಲಸ ಮಾಡುವುದರ ಜೊತೆಗೆ ಹಾಡುತ್ತಿರುತ್ತಾನೆ. ಒಮ್ಮೆ ಮಡಿಕೆ ಮಾಡಲು ಮಣ್ಣು ತುಳಿದು ಹಸನು ಮಾಡುತ್ತಿರಬೇಕಾದರೆ ಪರಮಾತ್ಮನ ಗೀತೆಗಳನ್ನು ಹಾಡುತ್ತ ಮೈ ಮರೆಯುತ್ತಾನೆ. ಅವನು ಎಷ್ಟು ಭಕ್ತಿ ಪರವಶನಾಗುತ್ತಾನೆಂದರೆ, ಏನೂ ಅರಿಯದ ತನ್ನ ಪುಟ್ಟ ಕಂದ ಅಚಾನಕ್ ಆಗಿ ಮಡಿಕೆಯ ಕೆಸರಿಗೆ ಬಿದ್ದರೂ ಅದೂ ಅವನ ಅರಿವಿಗೆ ಬಾರದೆ ಅದನ್ನು ತುಳಿದು ಜೀವಂತ ಸಮಾಧಿ ಮಾಡಿಬಿಡುತ್ತಾನೆ. ಕೊನೆಗೆ ತನ್ನ ತಪ್ಪಿನ ಅರಿವಾಗಿ ಪರಮಾತ್ಮನಲ್ಲಿ ಮೊರೆ ಇಟ್ಟಾಗ ಪಂಡರಾಪುರದ ವಿಠ್ಠಲನೇ ಸತ್ತ ಮಗುವನ್ನು ಬದುಕಿಸುತ್ತಾನೆ.

  1. https://kannada.filmibeat.com/movies/bhakta-kumbara-1974.html#cast