ವಿಷಯಕ್ಕೆ ಹೋಗು

ಟೈಮ್ಸ್ ಆಫ್ ಇಂಡಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:News paper1.jpg
'ಬೊಂಬಾಯಿನ ಟೈಮ್ಸ್ ಆಫ್ ಇಂಡಿಯ ಇಂಗ್ಲೀಷ್ ದಿನಪತ್ರಿಕೆಯ ಕಚೇರಿ'

ಟೈಮ್ಸ್ ಆಫ್ ಇಂಡಿಯ, ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ ಇಂಗ್ಲೀಷ್ ದಿನಪತ್ರಿಕೆ. 'ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಶನ್ ವರದಿ'ಯ ಪ್ರಕಾರ,ವಿಶ್ವದಲ್ಲಿ ಪ್ರಚಲಿತ ಎಲ್ಲಾ ಇಂಗ್ಲೀಷ್ ದಿನಪತ್ರಿಕೆಗಳ ಪೈಕಿ, ಇದೇ ಅತಿಹೆಚ್ಚು ಪ್ರಸಾರದಲ್ಲಿರುವ ಪತ್ರಿಕೆ. ಬ್ರಾಡ್ ಶೀಟ್, ಟ್ಯಾಬ್ಲಾಯಿಡ್, ಕಾಂಪಾಕ್ಟ್, ಬರ್ ಲೈನರ್, ಮತ್ತು ಆನ್ ಲೈನ್, ಸ್ಥರಗಳಲ್ಲಿ. ಸನ್ ೨೦೦೮ ರಲ್ಲಿ ೩.೧೪ ಮಿಲಿಯನ್ ಪ್ರತಿಗಳು ದಿನ ನಿತ್ಯ ಪ್ರಸಾರವಾಗುತ್ತಿದ್ದವು. ವಿಶ್ವದಲ್ಲಿ ಮಾರಾಟವಾಗುವ ಯಾವುದೇ ಭಾಷೆಯ ದಿನ ಪತ್ರಿಕೆಯಲ್ಲಿ ೮ ನೆಯ ಸ್ಥಾನದಲ್ಲಿದೆ. ೨೦೧೧ ರ ಇಂಡಿಯನ್ ರೀಡರ್ಶಿಪ್ ಸರ್ವೆಯ ಪ್ರಕಾರ, 'ಟೈಮ್ಸ್ ಆಫ್ ಇಂಡಿಯಾ ದೈನಿಕ'ವನ್ನು ಓದುವವರು ಬಹಳ ಜನ. ಸುಮಾರು ೭೪.೭೧ ಲಕ್ಷ (೭.೪೭೧ ಮಿಲಿಯನ್) ಈ ಪತ್ರಿಕೆಯ ಸ್ವಾಮಿತ್ವ ಮತ್ತು ಪ್ರಕಟಣೆಯ ಜವಾಬ್ದಾರಿ, ಬೆನೆಟ್ ಕೋಲ್ಮನ್ ಅಂಡ್ ಕಂಪೆನಿಯದು. ಇದನ್ನು 'ಸಾಹು ಜೈನ್ ಪರಿವಾರ' ಹೊಂದಿದೆ. ೧೭೦ ವರ್ಷಗಳ ಹಿಂದೆ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟು ಪ್ರಕಟಿಸಲ್ಪಡುತ್ತಿದ್ದ ಪ್ರಥಮ ಇಂಗ್ಲೀಷ್ ಪತ್ರಿಕೆ. ಇದರ ದೀರ್ಘವಾದ ಇತಿಹಾಸದಲ್ಲಿ ಹಲವಾರು ಬದಲಾವಣೆಗಳಾದವು. ಮೊದಲು ಯೂರೋಪ್, ಅಮೆರಿಕಗಳ ಸುದ್ದಿಗಳನ್ನು ಹೆಚ್ಚಾಗಿ ಮೊದಲು ನೋಡಬಹುದಾಗಿತ್ತು. ಬ್ರಿಟಿಷ್ ಸರ್ಕಾರದ ನೀತಿಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆ, ಬ್ರಿಟಿಷ್ ಸರ್ಕಾರದ ಮುಖವಾಡದಂತಿತ್ತು.

'ಬ್ರಿಟಿಷ್ ಸರ್ಕಾರ,' ದಿಂದ ಸ್ಥಾಪಿಸಲ್ಪಟ್ಟ, ಮೊಟ್ಟಮೊದಲ 'ಇಂಗ್ಲೀಷ್ ದಿನಪತ್ರಿಕೆ'[ಬದಲಾಯಿಸಿ]

'ಟೈಮ್ಸ್ ಆಫ್ ಇಂಡಿಯ ದಿನ-ಪತ್ರಿಕೆ', ಬೊಂಬಾಯಿದ್ವೀಪದಿಂದ, ಬ್ರಿಟಿಷ್ ಸರ್ಕಾರ,'ಸ್ಥಾಪಿಸಿದ ಮೊಟ್ಟಮೊದಲ 'ಇಂಗ್ಲೀಷ್ ದಿನಪತ್ರಿಕೆ'ಯಾಗಿತ್ತು. ಮೊದಲು,'Bombay times and Journal of Commerce', (ಬೈವೀಕ್ಲಿ), ನವೆಂಬರ್ ೩, ೧೮೩೮ ರಲ್ಲಿ ಲಾಂಚ್ ಆಯಿತು. ಬಾಂಬೆಬಂದರಿನ ಯೂರೋಪಿಯನ್ನರಿಗೆ ಹಾಗೂ ಇಂಗ್ಲೀಷ್ ಓದಬಲ್ಲ ಕೆಲವೇ ಬೊಂಬಾಯಿನ ನಾಗರಿಕರಿಗೆ, ತನ್ನದೆ ಆದ ಒಂದು ಪತ್ರಿಕೆ ದೊರೆಯಿತು. ಪತ್ರಿಕೆಯ ಮುಖಪುಟದಲ್ಲಿ ಬರಿ ಜಾಹಿರಾತುಗಳೇ ಇದ್ದವು. ಈತರಹದ ವ್ಯವಹಾರ, ೧೯೩೯ ವರೆಗೆ ಮುಂದುವರೆಯಿತು. ನಂತರ, ಚೈನಾಕ್ಕೆ ಹಡಗಿನಲ್ಲಿ 'ಒಪಿಯಂ' ರಪ್ತುಮಾಡುತ್ತಿದ್ದ ಸಮಾಚಾರಗಳೂ ಸೇರಿದಂತೆ,ವಿದೇಶಿ ವರ್ತಮಾನಗಳು ಹೆಚ್ಚಾಗಿ ಅಚ್ಚಾಗುತ್ತಿದ್ದವು. 'ಡಾ. ಝ್. ಏ. ಭ್ರೆನ್ನನ್ ' ಅದರ ಪ್ರಥಮ ಸಂಪಾದಕರು. 'ಬಾಂಬೆ ಛೇಂಬರ್ ಆಫ್ ಕಾಮರ್ಸ್', ನ ಕಾರ್ಯದರ್ಶಿ ಕೂಡ. ಇವೆರಡೂ ಹುದ್ದೆಗಳನ್ನು ಅವರು ಬಹಳದಿನ ಕಾಪಾಡಿಕೊಂಡುಬಂದರು.ಪತ್ರಿಕೆಯ ವಾರ್ಷಿಕ ಚಂದ ೩೦. ರೂಗಳು. ಪತ್ರಿಕೆಯನ್ನು ಪ್ರಾರಂಭಿಸುವ ಮೊದಲು, ಒಂದು ಸಮಿತಿಯನ್ನು ಕರೆದರು. ಅದರಲ್ಲಿ, ೧೧ ಬ್ರಿಟಿಷ್ ಸಂಸ್ಥೆಗಳ ಸದಸ್ಯರ ಸಿಂಡಿಕೇಟ್, ೨ ಬ್ಯಾರಿಸ್ಟರ್ ಗಳು, ಒಬ್ಬ ಬೊಂಬಾಯಿನ ಪ್ರಸಿದ್ಧ ಪಾರ್ಸಿ ಉದ್ಯಮಿ, ರಾಜಾ, 'ಜಮ್ ಶೆಡ್ ಜಿ ಜೀಜೀ ಭಾಯ್', ರವರು ಇದ್ದರು. ಕಾಲಾಂತರದಲ್ಲಿ ಪತ್ರಿಕಾಕರ್ತರು ನೇಮಿಸಲ್ಪಟ್ಟರು. ೧೮೫೫ ರಲ್ಲಿ ಬೊಂಬಯಿನಲ್ಲಿ 'ಟೆಲೆಗ್ರಾಫ್ ಸೇವೆ' ಆರಂಭವಾಯಿತು. 'ರಾಯ್ ಟರ್ಸ್' ಸುದ್ದಿ ವಿತರಣಾ ಸಂಸ್ಥೆಯೊಂದಿಗೆ ಒಪ್ಪಂದವೇರ್ಪಟ್ಟಿತು. ಈಗಲೂ 'ರಾಯ್ ಟರ್ಸ್', ಜೊತೆ ಸಂಬಂಧವಿದೆ.

ಸೆಪ್ಟೆಂಬರ್, ೨೮, ೧೮೬೧[ಬದಲಾಯಿಸಿ]

ಈಗ ಪೇಪರ್, "Times of India". ಎಂಬ ಹೊಸ ಹೆಸರುಪಡೆಯಿತು, ಮೊದಲು ಇದರ ಹೆಸರು, 'Bombay Times and standard' ಅಂತ ಇತ್ತು. ೧೫ ದಿನಕ್ಕೊಮ್ಮೆ, ಶನಿವಾರ ಹಾಗೂ ಬುಧವಾರ ಪ್ರಕಟವಾಗುತ್ತಿತ್ತು. ಅದೇ ವರ್ಷದ ಕೊನೆಯಲ್ಲಿ ದೈನಿಕವಾಯಿತು. ೧೮೯೨ 'Bennet Coleman & Co. Ltd;' ಕಂಪೆನಿಯ ಮಾಲೀಕ 'ಥೊಮಸ್ ಬೆನೆಟ್',ರವರು ಎಡಿಟರ್ ಆದರು. 'M. Coleman' ರ ಜೊತೆಗಾರಿಕೆಯೊಂದಿಗೆ. ಇವರು ನ್ಯೂಸ್ ಪೇಪರ್ ಪ್ರಕಟಣೆಯಲ್ಲಿ ಪ್ರಚಂಡರು. ಎಡಿಟರ್ , 'Stanli Rid' [೧೯೦೭-೧೯೨೩] ಬೆಳಗಿನಿಂದ ಮಧ್ಯರಾತ್ರಿಯವರೆಗೆ ದುಡಿದು ಪತ್ರಿಕೆಯನ್ನು ಮುಂದೆತಂದರು. ಅಲ್ಲಿನ ವರೆಗೆ ಯಾವುದಾದರು 'ತಾಜಾನ್ಯೂಸ್' ಬಂದರೆ , ಅದು ಮಾರನೆಯದಿನ ಅಚ್ಚಾಗುತ್ತಿತ್ತು. ಇದರಲ್ಲಿ ಸಹಕರಿಸಲು ಕರ್ಮಚಾರಿಗಳು ಒಪ್ಪದೆ ಗಲಾಟೆ ಮಾಡಿದರು. ಆದರೆ, ರೀಡ್ ಇದನ್ನು ಒಪ್ಪದೆ, ಆ ದಿನವೇ ಪ್ರಕಟಿಸಲು ಪ್ರಯತ್ನಿಸುತ್ತಿದ್ದರು. ೧೯೦೨ ಮೊದಲು 'ಪಾರ್ಸಿ ಬಝಾರ್' ನಿಂದ 'ಚರ್ಚ್ ಗೇಟ್' ಗೆ, ಈ ಪತ್ರಿಕೆಯ ಕಛೇರಿ ಸ್ಥಳಾಂತರಿಸಲ್ಪಟ್ಟಿತು. ಅಲ್ಲಿ, 'ಎಡಿಟರ್ ಬೆನೆಟ್ ರವರ ಛೇಂಬರ್' ನ 'ಸೀಲಿಂಗ್ ಫ್ಯಾನ್', ಕಳಚಿಕೊಂಡು ಬಿದ್ದು ಬಹಳ ತೊಂದರೆಯಾಯಿತು. ಅವರು ತಮ್ಮ ಕೆಲಸವನ್ನು ಬೇರೆಯಾರಹತ್ತಿರವೋ ಹೋಗಿ ಮಾಡಬೇಕಾಗಿಬಂತು. ಈ ಘಟನೆಯ ತರುವಾಯ,ವರ್ತಮಾನಪತ್ರಿಕೆಯ ಕಛೇರಿಯನ್ನು, ಬೊಂಬಾಯಿನ ವಿಕ್ಟೋರಿಯ ಟರ್ಮಿನಸ್ '[ವೀಟಿ]', ಈಗಿನ 'ಛತ್ರಪತಿ ಶಿವಾಜಿಮಹರಾಜ್ ಟರ್ಮಿನಸ್' ಎದುರಿಗೆ ಸ್ಥಳಾಂತರಿಸಲಾಯಿತು. ೧೯೧೫ ನಲ್ಲಿ ಪತ್ರಿಕೆಯ ಧೋರಣೆಯಲ್ಲಿ ಕೆಲವು ಬದಲಾವಣೆಗಳಾದವು. ಹೊಸರೋಟರಿ ಮುದ್ರಣ ಯಂತ್ರಬಂದದ್ದರಿಂದ, ವೃತ್ತಪತ್ರಿಗೆಗಳ ಉತ್ಪಾದನೆಹೆಚ್ಚಿತು.ಗಾಗಿ ಪತ್ರಿಕೆಯ ಬೆಲೆಯನ್ನು ೪ ಆಣೆಯಿಂದ ೧ ಆಣೆಗೆ ಇಳಿಸಲು ಸಾಧ್ಯವಾಯಿತು. ಇದೊಂದು ದಿಟ್ಟ ಹೆಜ್ಜೆ.

೧೯೪೬ ರಿಂದ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ಮಾಲಿಕತ್ವ ಭಾರತೀಯರ ಕೈಗೆ ಸಿಕ್ಕಿದ್ದರಿಂದ ಗಮನಾರ್ಹ ಬದಲಾವಣೆಗೆ ನಾಂದಿಯಾಯಿತು :[ಬದಲಾಯಿಸಿ]

ಬ್ರಿಟಿಷ್ ರ ನೀತಿಯನ್ನು ಸಾರುವ ಪತ್ರಿಕೆಯೆಂದು ಹೇಳುವವರು ಇದ್ದರು.

೧೯೪೯ ರಲ್ಲಿ, 'Metrimonials'," Catches and Hatches " ಹೆಚ್ಚಿನ ಆದ್ಯತೆ ಪಡೆಯಿತು[ಬದಲಾಯಿಸಿ]

೧೯೫೦ ರಲ್ಲಿ, 'ಸಿಂಹ ಹಾಗೂ ಯೂನಿಕಾರ್ನ್' ನಿಂದ, ೨ ಆನೆಗಳು ಇರುವ ಲಾಂಛನವನ್ನು ಆರಿಸಿಕೊಂಡರು. 'Let Truth prevail' "ಎಲ್ಲೆಡೆಯೂ ನೈಜತೆಗೆ ಬೆಲೆಬರಲಿ " ಆ ವರ್ಷವೆ, ಬ್ರಿಟಿಷ್ ಸಂಪಾದಕ, 'ಐವರ್ ಎಸ್. ಜೆಹು' ಕೊನೆಯ ಸಂಪಾದಕರು, ತಮ್ಮ ರಾಜೀನಾಮೆಸಲ್ಲಿಸಿದರು. ೧೯೫೭ ಪತ್ರಿಕೆಯನ್ನು 'ಶಾಂತಿಪ್ರಸಾದ್ ಜೈನ್ 'ಕೈಗೆ ತೆಗೆದುಕೊಂಡರು.

'ಆರ್.ಕೆ.ಲಕ್ಷ್ಮಣ್,' ರ, 'ಕಾಮನ್ ಮ್ಯಾನ್', "You said it", ಶುರುವಾದ " ವ್ಯಂಗ್ಯ ಚಿತ್ರಾಂಕಣ," ಇಂದಿಗೂ ನಡೆಯುತ್ತಲೇ ಇದೆ[ಬದಲಾಯಿಸಿ]

ಚಿತ್ರ:ಚಿತ್ರ-RKL.2.jpg.jpg
ಆರ್.ಕೆ.ಲಕ್ಷ್ಮಣ್ ರವರ ನಂಟು, ೬೦ ವರ್ಷಕ್ಕೂ ಮಿಗಿಲು

೧೯೯೨ ವಿಶ್ವದ ೬ ಅತ್ಯಂತ ಮಹತ್ವದ ಪತ್ರಿಕೆಗಳಲ್ಲೊಂದು, ಎಂದು 'ಬಿ.ಬಿ.ಸಿ', ವರದಿಮಾಡಿತು. ೧೯೯೪ 'Bombay times, supplements', ಬಣ್ಣದ ಮುದ್ರಣದಲ್ಲಿ ಹೊರಬಂತು. ೧೯೯೬ www.timesofindia.com, ಲಾಂಚ್ ಆಯಿತು. ಜುಲೈ ೪, ೧೯೯೭ 'Times of India', ಪತ್ರಿಕೆಯಲ್ಲಿ ಪ್ರಪ್ರಥಮವಾಗಿ ವರ್ಣ-ಚಿತ್ರಗಳು ಮುದ್ರಿಸಲ್ಪಟ್ಟವು.

ಜನವರಿ, ೨೦೦೩. 'Times of India', ದೆಹಲಿಶಾಖೆಯಲ್ಲಿ ಪೂರ್ತಿಯಾಗಿ ಬಣ್ಣದ ಮುದ್ರಣದಲ್ಲಿ ಪ್ರಕಟವಾಯಿತು[ಬದಲಾಯಿಸಿ]

ಚಿತ್ರ:RKL exhi.jpg
'ಆರ್.ಕೆ.ಲಕ್ಷ್ಮಣ್ ಮಾಜಿ-ರಾಷ್ಟ್ರಪತಿಯವರ ಜೊತೆ,ವ್ಯಂಗ್ಯಚಿತ್ರ-ಪ್ರಸ್ತುತಿ ಸಮಾರಂಭದ ಉದ್ಘಾಟನೆಯಲ್ಲಿ'

ವಿಶ್ವದಲ್ಲೇ ಮಾರಾಟವಾಗುವ ಅತಿಹೆಚ್ಚು ಪ್ರಸಾರವಿರುವ ದೈನಿಕವೆಂದು ಹೆಸರಾಯಿತು. ೩ ಮಿಲಿಯನ್ ಕಾಪಿಗಳು. ೧೦ ನಗರಗಳಲ್ಲಿ ಹಬ್ಬಿದೆ. ಮುಂಬಯಿ, ದೆಹಲಿ, ಆಹ್ಮೆದಾಬಾದ್, ಬೆಂಗಳೂರು, ಲಖನೊ, ಚಂದಿಘಡ್, ಹೈದರಾಬಾದ್, ಪುಣೆ, ಪಾಟ್ನ, ಕೋಲ್ಕತ ಓದುಗರ ಸಂಖ್ಯೆ ೫ ಮಿ. ಮುಟ್ಟಿತು. ೧೯ ನೆಯ ಶತಮಾನದಲ್ಲಿ ೮೦೦ ಜನ ಕೆಲಸಮಾಡುತ್ತಿದ್ದರು.ಮೊದಲು ಮಾಲಿಕತ್ವವನ್ನು 'ದಾಲ್ಮಿಯ' ತೆಗೆದುಕೊಂಡರು, ನಂತರ, 'Sahu Shanti Prasad Jain', Sahu Jain group from Bijnore ಯು.ಪಿ. ತೆಗೆದುಕೊಂಡರು. ಈಗಿನ ಪ್ರಧಾನ ಸಂಪಾದಕರು : 'ಜೈದೀಪ್ ಬೋಸ್'. 'ಮೀಡಿಯ ಗ್ರೂಪ್' ಹಾಗೂ 'ಬೆನೆಟ್ ಕೋಲ್ ಮನ್ ಅಂಡ್ ಕಂಪೆನಿ' ಸೇರಿ, ಪ್ರಕಟಿಸುತ್ತಿರುವ ಪತ್ರಿಕೆಗಳು :

'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ'ವಾರ ಪತ್ರಿಕೆ[ಬದಲಾಯಿಸಿ]

'ಟೈಮ್ಸ್ ಆಫ್ ಇಂಡಿಯ'ದ ಆಗಿನ ಸಮಯದ, 'ಅತ್ಯಂತ ಜನಪ್ರಿಯ ವಾರ ಪತ್ರಿಕೆ', 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ಭಾರತದಾದ್ಯಂತ ಅತ್ಯಂತ ಹೆಚ್ಚಿನ ಮಾರಾಟದಲ್ಲಿತ್ತು. ಅದಕ್ಕೆ ಕಾರಣರಾದ ಸಂಪಾದಕರುಗಳು,

ಅತ್ಯಂತ ವಿಚಾರಪೂರ್ಣವಾದ ಅಂಕಣಗಳು ಸುದ್ದಿಗಳು, ಹಾಗೂ 'ಆರ್.ಕೆ.ಲಕ್ಷ್ಮಣ್' ರವರ ವ್ಯಂತ್ಯ ಚಿತ್ರಗಳಿಂದ ಅತಿ ಹೆಚ್ಚು ಮೆಚ್ಚುಗೆ ಗಳಿಸಿತ್ತು. ಆದರೆ ಕೆಲವರ್ಷಗಳ ನಂತರ, ಹೆಚ್ಚಿಗೆ ಬದಲಾವಣೆ ಹಾಗೂ ಸುದ್ದಿಗಳನ್ನು ವಿವರಿಸುವ ಮೋಡಿಯಲ್ಲಿ ಏನೂ ಹೆಚ್ಚಳವಿಲ್ಲದ್ದರಿಂದ, ಪ್ರಾಬಲ್ಯತೆ ತಾನಾಗಿಯೇ ಕಡಿಮೆಯಾಗಿ, ಕೊನೆಗೆ ನಿಂತೇ ಹೋಯಿತು. ಕೆಲವು ಪತ್ರಿಕೆಗಳು ತಲೆಯೆತ್ತಿ ಮಾರುಕಟ್ಟೆಯಲ್ಲಿ ಲಗ್ಗೆ ಹಾಕಿದವು. ಅವುಗಳಲ್ಲಿ ಮಂಚೂಣಿಯಲ್ಲಿದ ಪತ್ರಿಕೆಗಳು :

  • 'ಇಂಡಿಯಾ ಟುಡೆ',
  • 'ವೀಕ್'
  • 'ಬ್ಲಿಝ್'
  • 'ಇಂಪ್ರಿಂಟ್', ಮುಂತಾದವುಗಳು.

ಟೈಮ್ಸ್ ಆಫ್ ಇಂಡಿಯ, ಪತ್ರಿಕೆಯ ಜೊತೆ ನಿಕಟ ಸಂಬಂಧವಿರುವ ವ್ಯಕ್ತಿಗಳು :[ಬದಲಾಯಿಸಿ]

" 'Shanti Prasad Jain'

" 'Indu Jain', chair-person

" 'Jug Suraiya' (associate editor, columnist, "Jugular Vein," cartoonist, "Dubyaman II")

" 'Shashi Tharoor', edit page

" 'Swaminathan Aiyar' (columnist, "Swaminomics")

" 'R.K.Laxman' ("You Said It" editorial cartoon), featuring the famous Common Man.

ಭಾರತದ ಮೆಟ್ರೊಗಳಲ್ಲಿ ಪ್ರಕಟವಾಗುತ್ತಿರುವ ಟೈಮ್ಸ್ ಆಫ್ ಇಂಡಿಯ ಸಪ್ಲಿಮೆಂಟ್ ಗಳು[ಬದಲಾಯಿಸಿ]

ವೆಬ್ ಸೈಟ್[ಬದಲಾಯಿಸಿ]