ವಿಷಯಕ್ಕೆ ಹೋಗು

ಎಮ್. ವಿ. ಕಾಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೭,ಸೆಪ್ಟೆಂಬರ್,೧೯೨೧-೯,ಅಕ್ಟೋಬರ್,೨೦೧೪)

ಮಾಧವ ವಿಠಲ ಕಾಮತ್,
ಚಿತ್ರ:Mvkamath.jpg
ಮಾಧವ ವಿಠಲ ಕಾಮತ್
Born
ಮಾಧವ

ಸೆಪ್ಟೆಂಬರ್, ೭, ೧೯೨೧
ಉಡುಪಿ
Diedಅಕ್ಟೋಬರ್, ೯, ೨೦೧೪
ಉಡುಪಿ ಕಸ್ತುರ್ ಬಾ ಆಸ್ಪತ್ರೆ,
Occupation(s)ಪತ್ರಿಕೋದ್ಯಮಿ, ಟೈಮ್ಸ್ ಆಫ್ ಇಂಡಿಯ ವಿದೇಶ ಪ್ರತಿನಿಧಿ,ಲೇಖಕ, ಪ್ರಸಾರಭಾರತಿ ನಿರ್ದೇಶಕ,
Years active೧೯೪೦-೨೦೧೪
Known forಪ್ರತಿಭಾವಂತ ಪತ್ರಿಕೋದ್ಯಮಿ, ಆತ್ಯುತ್ತಮ ವಾಗ್ಮಿ, ಲೇಖಕ,
Website{URL

ಜನನ, ಬಾಲ್ಯ, ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

'ಮಾಧವ್ ವಿಟ್ಠಲ್ ಕಾಮತ್ ರವರು, [] ೧೯೨೧,ರ, ಸೆಪ್ಟೆಂಬರ್,೭ ರಂದು, ದಕ್ಷಿಣ ಕನ್ನಡ ಜಿಲ್ಲೆಯ 'ಉಡುಪಿ'ಯಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಡುಪಿಯಲ್ಲೇ ಪಡೆದು, ಮುಂಬೈನಲ್ಲಿ ಪದವಿ ಶಿಕ್ಷಣವನ್ನು ೧೯೪೧ ರಲ್ಲಿ ಗಳಿಸಿದರು. 'ರಸಾಯನ ಶಾಸ್ತ್ರ,' ಹಾಗೂ 'ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಕಾಮತರು,ಕಾಲೇಜ್ ವಿದ್ಯಾಭ್ಯಾಸದ ಬಳಿಕ 'ಡೈ ಕೆಮಿಸ್ಟ್,' ಆಗಿ ನೌಕರಿಗೆ ಸೇರಿಕೊಂಡರು. ಬರವಣಿಗೆ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ವಿಷಯಗಳಾಗಿದ್ದವು. ಸ್ವಲ್ಪದಿನಗಳ ನಂತರ ಅವರು ಪತ್ರಿಕೋದ್ಯಮಕ್ಕೆ ಹೊರಳಿದರು. ೧೯೪೬ ರಲ್ಲಿ ಬೊಂಬಾಯಿನ 'ಫ್ರೀ ಪ್ರೆಸ್ ಜರ್ನಲ್ ಪತ್ರಿಕೆ,' ಯಲ್ಲಿ ವರದಿಗಾರರಾಗಿ ಭರ್ತಿಯಾದರು. ನಂತರ ದೆಹಲಿಯ ಶಾಖೆಯಲ್ಲಿ ವಿಶೇಷ ಪ್ರತಿನಿಧಿಯಾಗಿ ನಿಯುಕ್ತರಾದರು. ಅಂದಿನ ಪ್ರಮುಖ ವಿದ್ಯಮಾನಗಳಾಗಿದ್ದ, 'ಕಾನ್ಸ್ಟಿ ಟ್ಯುಯೆಂಟ್ ಅಸೆಂಬ್ಲಿ, ನಾಥೂರಾಮ್ ಗೋಡ್ಸೆ ವಿಚಾರಣೆ ಮತ್ತಿತರ ಮಹತ್ವದ ವರದಿಗಳನ್ನು ತಯಾರಿಸಿ ಪ್ರಕಟಿಸಿದರು. ಸನ್, ೧೯೪೭ ರಲ್ಲಿ ಪ್ರಥಮ ಸ್ವಾತಂತ್ರ್ಯೋತ್ಸವದ ವರದಿಯನ್ನು ಕುಲಂಕುಶವಾಗಿ ವರದಿಮಾಡಿ ಇಂದಿಗೂ ಎಲ್ಲರೊಡನಿರುವ ವರದಿಗಾರರಲ್ಲಿ ಮೊದಲಿಗರೆಂಬ ಹೆಗ್ಗಳಿಕೆ ಅವರದು. ಎಂ.ವಿ.ಕಾಮತ್, ನಂತರ, 'ಫ್ರೀ ಪ್ರೆಸ್ ಜರ್ನಲ್, ಭಾರತ್ ಜ್ಯೋತಿ' ಪತ್ರಿಕೆಗಳಿಗೆ ಸಂಪಾದಕರಾಗಿ ದುಡಿದರು. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆಯ ವರದಿ ಮಾಡಲು ಪಿ.ಟಿ.ಐ ವರದಿಗಾರರಾಗಿ ಸನ್, ೧೯೫೫ ರಿಂದ ೧೯೫೮ ರ ವರೆಗೆ ನೇಮಕಗೊಂಡಿದ್ದರು. ಆಸಮಯದಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಸುದ್ದಿಗಳನ್ನು ವರದಿಮಾಡಿ ಸೈ ಎನ್ನಿಸಿಕೊಂಡರು. ಎಂ. ವಿ. ಕಾಮತ್ ಕೆಲಸಮಾಡಿದ ಪತ್ರಿಕೆಗಳ ವಿವರಗಳು .

ಚಿತ್ರ:MVK.jpg
'ಎಮ್.ವಿ.ಕಾಮತ್ (೨೦೧೩)

ಪತ್ರಿಕೋದ್ಯಮಕೃಷಿಯ ಮೈಲುಗಲ್ಲುಗಳು

[ಬದಲಾಯಿಸಿ]
  • ಸನ್, ೧೯೫೮-೫೯ ರಲ್ಲಿ 'ಮುಂಬೈನ ಯುನೈಟೆಡ್ ಏಶಿಯ ಸಂಪಾದಕ'ರಾಗಿ []
  • ಸನ್, ೧೯೫೯-೬೩ ರಲ್ಲಿ 'ಜರ್ಮನಿ'ಯಲ್ಲಿ,
  • ಸನ್, ೧೯೬೩-೬೭ ರಲ್ಲಿ 'ಪ್ಯಾರಿಸ್' ನಲ್ಲಿ, 'ಟೈಮ್ಸ್ ಆಫ್ ಇಂಡಿಯದ ಯೂರೋಪಿಯನ್ ಪ್ರತಿನಿಧಿ'ಯಾಗಿ ಕೆಲಸಮಾಡಿದರು.
  • ಸನ್, ೧೯೭೮-೮೧ ರವರೆಗೆ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯ ವಾರ ಪತ್ರಿಕೆ'ಯ 'ಭಾನುವಾರದ ಸಂಪಾದಕ'ರಾಗಿ ಕೆಲಸ ಸಲ್ಲಿಸಿದರು.
  • 'ಬಾಂಬೆ ಯೂನಿಯನ್ ಆಫ್ ಜರ್ನಲಿಸ್ಟ್ಸ್ ಅಧ್ಯಕ್ಷ'ರಾಗಿ,
  • 'ವಾಶಿಂಗ್ಟನ್ ನಲ್ಲಿ ಫಾರಿನ್ ಕರೆಸ್ಪಂಡೆಂಟ್ಸ್ ಅಸೋಸಿಯೇಶನ್ ನ ಸ್ಥಾಪಕ ಸದಸ್ಯ'ರಾಗಿ,
  • 'ಪ್ರಸಾರ ಭಾರತಿಯ ಅಧ್ಯಕ್ಷ'ರಾಗಿ,[]
  • 'ಮಣಿಪಾಲ್ ನ ಡಾ. ಟಿಎಂಎ ಪೈ ಪ್ರತಿಷ್ಠಾನ',
  • 'ಮಣಿಪಾಲ್ ವಿ.ವಿ.ಆಡಳಿತ ಮಂಡಳಿಯ ಸದಸ್ಯ',
  • 'ಮಣಿಪಾಲ್ ಇನ್ ಸ್ಟಿ ಟ್ಯೂಟ್ ಆಫ್ ಕಮ್ಯುನಿಕೇಶನ್ ನ ಗೌರವ ನಿರ್ದೇಶ'ರಾಗಿ, ಪ್ರಸ್ತುತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. []

'ಎಮ್.ವಿ.ಕಾಮತರು', ಭಾರತದ ಪತ್ರಿಕೋದ್ಯಮದಲ್ಲಿ ಭಾರಿ ಹೆಸರುಮಾಡಿದ್ದಾರೆ. ನಂತರ 'ಟೈಮ್ಸ್ ಆಫ್ ಇಂಡಿಯ', ಪತ್ರಿಕೆಯ ವಾಷಿಂಗ್‍ಟನ್ ನಗರದಲ್ಲಿ ಭಾರತದ ಪ್ರತಿನಿಧಿಯಾಗಿ, ಸುಮಾರು ೧೦ ವರ್ಷಗಳು (೧೯೬೯- ೭೮) ದುಡಿದರು. ಅಮೆರಿಕದಿಂದ ವಾಪಸ್ಸಾದ ಮೇಲೆ, 'ಟೈಮ್ಸ್ ಆಫ್ ಇಂಡಿಯ' ಪತ್ರಿಕೆಯ 'ಪ್ರಖ್ಯಾತ ವೀಕ್ಲಿ' ಪತ್ರಿಕೆಯಾಗಿದ್ದ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ'ನಲ್ಲಿ ಸಂಪಾದಕರಾಗಿದ್ದರು. ಭಾರತ ದೇಶದ ಸಾಮಾಜಿಕ ಸಮಸ್ಯೆಗಳನ್ನೂ ಹಾಗೂ ಅನೇಕ ವಿಷಯಗಳನ್ನು ಆರಿಸಿಕೊಂಡು, ಸುಮಾರು ೪೦ ಪುಸ್ತಕಗಳನ್ನು ರಚಿಸಿದ್ದಾರೆ. ಕಾಮತ್ ಅತ್ಯಂತ ಪ್ರಭಾವಿ ಮಾತುಗಾರರು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ, ಉದಯವಾಣಿ ಕನ್ನಡ ದೈನಿಕಪತ್ರಿಕೆಯಲ್ಲಿ ಇಂದಿಗೂ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದಾರೆ. ಮುಂಬೈನ ಮಾಹಿಮ್ ನಲ್ಲಿರುವ, ಕರ್ನಾಟಕ ಸಂಘದ ಕಾರ್ಯಕ್ರಮಗಳಿಗೆ ತಪ್ಪದೆ ಬರುತ್ತಾರೆ.[] ಕಾಮತ್ ಒಟ್ಟಾರೆ ೫೦ ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಪ್ರಮುಖವಾದವುಗಳು :

ಬರೆದ ಪುಸ್ತಕಗಳು

[ಬದಲಾಯಿಸಿ]
  • "Narendra Modi-The Architect of a Modern State", co-authored with Kalindi Randeri.
  • "On Media, Politics and Literature (2009)",
  • "Gandhi – A Spiritual Journey" (2007),
  • "Reporter at Large" (2002),
  • "The Pursuit of Excellence" (1982).

ಪ್ರಶಸ್ತಿಗಳು

[ಬದಲಾಯಿಸಿ]

ಕೊಂಕಣಿ ಅಲ್ಪ ಸಂಖ್ಯಕ ಭಾಷಾ ಸಂಸ್ಥೆ,ಮಣಿಪಾಲದ ಡಾ.ಟಿ.ಎಂ.ಎ, ಪೈ ಫೌಂಡೇಶನ್, 'ಶ್ರೇಷ್ಠ ಕೊಂಕಣಿಗ ಪ್ರಶಸ್ತಿ'ಯನ್ನು ಮಾರ್ಚ್, ೨೬ ರ ಸಂಜೆ, ೫-೩೦ ಕ್ಕೆ, ’ಹೋಟೆಲ್ ವ್ಯಾಲಿ ವ್ಯೂ’ ಸಭಾಂಗಣದಲ್ಲಿ ಕೊಡಲು ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ.

೯೦ನೇ ವರ್ಷದ ಹುಟ್ಟುಹಬ್ಬದ ಆಚರಣೆ

[ಬದಲಾಯಿಸಿ]

ಮಣಿಪಾಲಿನಲ್ಲಿ ಕಾಮತರ ೯೦ ನೇ ವರ್ಷದ ಹುಟ್ಟುಹಬ್ಬದ ಆಚರಣೆ ಹರ್ಷೋಲ್ಲಾಸಗಳಿಂದ ಜರುಗಿತು.

೯೩ ವರ್ಷದ ಪ್ರಾಯದಲ್ಲಿ, ವೃದ್ಧಾಪ್ಯದಿಂದ ಬಳಲುತ್ತಿದ್ದ ಕಾಮತರನ್ನು 'ಮಣಿಪಾಲಿನ ಕಸ್ತುರ್ಬಾ ಆಸ್ಪತ್ರೆ'ಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಗುಣವಾಗದೆ, ಅವರು ೨೦೧೪ ರ, ಅಕ್ಟೋಬರ್, ೯, ಗುರುವಾರ, ಬೆಳಿಗ್ಯೆ ೭-೩೦ಕ್ಕೆ ಕೊನೆಯುಸಿರೆಳೆದರು. [][]

ಉಲ್ಲೇಖಗಳು

[ಬದಲಾಯಿಸಿ]
  1. 'M.V. Kamath, a Journalist at Large'
  2. "knowyourstar.com, I lived to see "Tryst With Destiny": Dr. M V Kamath". Archived from the original on 2014-06-22. Retrieved 2014-04-16.
  3. An independent voice
  4. manipal-institute-of-communication-celebrates-veteran-journalist-mv-kamaths-90th-birthday
  5. "'A Reporter at Large'". Archived from the original on 2010-12-14. Retrieved 2014-04-16.
  6. "'Veteran journalist MV kamath dead, hundreds bid adieu', IBN Live". Archived from the original on 2014-10-10. Retrieved 2014-10-10.
  7. Net India, 'Veteran journalist M V Kamath passes away at 93'

ಬಾಹ್ಯ ಸಂಪರ್ಕ

[ಬದಲಾಯಿಸಿ]