ಕಾಮನ್ ಮ್ಯಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
"ಕಾಮನ್ ಮ್ಯಾನ್" ಅರ್ ಕೆ ಲಕ್ಷ್ಮಣ್

'ಲಕ್ಷ್ಮಣ್' ಅವರು ೫೬ ವರ್ಷ ಗಳಿಂದ 'ಟೈಮ್ಸ್ ಆಫ್ ಇಂಡಿಯ' ದಿನ ಪತ್ರಿಕೆ'ಯಲ್ಲಿ ಬರೆಯುತ್ತಿದ್ದ 'ಕಾಮನ್ ಮ್ಯಾನ್' ('ಸಾಮಾನ್ಯ ಪ್ರಜೆ'), ಅಥವಾ 'ಜನಸಾಮಾನ್ಯ', 'ವ್ಯಂಗ್ಯ ಚಿತ್ರಾಂಕಣ'ವನ್ನು ಓದಿ ಸವಿಯದವರಿಲ್ಲ. ಬೆಳಗ್ಯೆ ಎದ್ದು, ಕಾಫಿ ಕುಡಿಯುತ್ತಾ ಅದನ್ನು ಓದಿ ಸವಿಯುವುದು ಎಲ್ಲಾ ಮುಂಬೈಕರರ ದಿನಚರಿ ! ಇಂದಿಗೂ ಅಷ್ಟೆ. ಸುಮಾರು ೪೫ ವರ್ಷಗಳ ಕಾಲ ಕೆಲವರು 'ಟೈಮ್ಸ್ ಆಫ್ ಇಂಡಿಯ,' ಬಿಟ್ಟು ಬೇರೆ ದಿನ ಪತ್ರಿಕೆ ಕೊಳ್ಳದೆ ಇರುವುದಕ್ಕೆ ಕಾರಣ, ಅವರಿಗೆ ಲಕ್ಷ್ಮಣರ ವ್ಯಂಗ್ಯಚಿತ್ರ ಇಷ್ಟವಾಗಿರುವುದು. ೧೯೫೧ ರಲ್ಲಿ ಲಕ್ಷ್ಮಣ್ ಪ್ರಾರಂಭಿಸಿದ 'ಕಾಮನ್ ಮ್ಯಾನ್' ಸುಮಾರು ೬ ದಶಕಗಳವರೆಗಿದ್ದು, ಅವರಿಗೆ ಪ್ರಚಂಡ ಜನಪ್ರಿಯತೆಯನ್ನು ತಂದು ಕೊಟ್ಟಿದೆ. 'ಟೈಮ್ಸ್ ಪತ್ರಿಕೆ'ಯಲ್ಲಿ ಇದನ್ನು ನೋಡಿ ಆನಂದಿಸಲೆಂದೇ ಕೊಳ್ಳುವ ಸಾವಿರಾರು ಜನರಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವ ಕಾರ್ಮಿಕರಿಂದ ಹಿಡಿದು, ಎಲ್ಲಾ ವರ್ಗದ ಜನರಿಗೂ ಅವು ಬಲು ಪ್ರಿಯ. ದಫ್ತರ್ ಗಳಲ್ಲಿ ಅದರ ಬಗ್ಗೆ ದಿನವೆಲ್ಲಾ ಚರ್ಚೆ ನಡೆಯುತ್ತಿರುತ್ತದೆ.