ವಿಷಯಕ್ಕೆ ಹೋಗು

ಶ್ರೀನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀನಾಥ್
ಜನನ
ನಾರಾಯಣ ಸ್ವಾಮಿ

28 ಡಿಸೆಂಬರ್ 1943
ವೃತ್ತಿ(ಗಳು)ನಟ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ, ವಿಧಾನ ಪರಿಷತ್ ಸದಸ್ಯ
ಸಕ್ರಿಯ ವರ್ಷಗಳು1967–ಪ್ರಸ್ತುತ
ಸಂಗಾತಿಗೀತಾ (ವಿವಾಹ 1972)
ಮಕ್ಕಳು2
ಕುಟುಂಬಸಿ. ಆರ್. ಸಿಂಹ (ಸಹೋದರ)

ಡಾ.ಶ್ರೀನಾಥ್ (೧೯೪೩-) ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭಮಂಗಳ, ಮಾನಸ ಸರೋವರ ಮೊದಲಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾನಸ ಸರೋವರ ನಿರ್ಮಿಸಿದ ಮಿತ್ರವೃಂದ ಮೂವೀಸ್ ನಿರ್ಮಾಪಕರಲ್ಲಿ ಒಬ್ಬರು. ಕನ್ನಡದ ಕಿರುತೆರೆ ವಾಹಿನಿ ಉದಯ ಟಿವಿ ಯ ನಿರ್ವಾಹಕರಲ್ಲೊಬ್ಬರಾಗಿದ್ದಾರೆ. ಲಗ್ನಪತ್ರಿಕೆ ಚಿತ್ರದ ಸಣ್ಣದೊಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಾಥ್, ಚಿತ್ರರಂಗದಲ್ಲಿ ೫೪ ವರ್ಷಗಳನ್ನು ಪೂರೈಸಿದ್ದಾರೆ. ಇವರು ಪ್ರಖ್ಯಾತ ನಟ ಸಿ.ಆರ್.ಸಿಂಹ ಅವರ ಸಹೋದರರು. ನಟ ಶ್ರೀನಾಥ್ ಅವರು ೧೯೮೨ರಲ್ಲಿ ನೂರು ಚಿತ್ರಗಳನ್ನು ಪೂರೈಸಿದ ನಂತರ"ಅಭಿನಯ ಚಕ್ರವರ್ತಿ"ಎಂಬ ಬಿರುದನ್ನು ನೀಡಲಾಯಿತು.[೧][೨][೩]

ಶ್ರೀನಾಥ್ ಸಿನಿಪಯಣ[ಬದಲಾಯಿಸಿ]

ಪ್ರಣಯ ರಾಜಾ ಡಾ.ಶ್ರೀನಾಥ್ ಇವರ ಮೂಲ ಹೆಸರು ನಾರಾಯಣ ಸ್ವಾಮಿ. 28 ಡಿಸೆಂಬರ್ 1943ರಂದು ಮೈಸೂರಿನಲ್ಲಿ ರಾಮಸ್ವಾಮಿ ಹಾಗೂ ಲಲಿತ ದಂಪತಿಗೆ ಜನಿಸಿದರು. ಶ್ರೀನಾಥ್ ಅ ವರು ಖ್ಯಾತ ನಟ ಸಿ.ಆರ್.ಸಿಂಹ ಅವರ ಸಹೋದರ(ತಮ್ಮ). ಶ್ರೀನಾಥ್(ನಾರಾಯಣ ಸ್ವಾಮಿ)ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. ಎಸ್.ಜೆ ಪಾಲಿಟೆಕ್ನಿಕ್ ಬೆಂಗಳೂರಿನಿಂದ ಕಲಾ ಮತ್ತು ವಿಜ್ಞಾನ ಕಾಲೇಜು ಮತ್ತು ಡಿಪ್ಲೊಮಾ ಇನ್ ಸಿನಿಮಾಟೋಗ್ರಫಿ ಮಾಡಿದರು.1969ರಲ್ಲಿ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದಾಗ ಅವರು ಯುವ ಪ್ರತಿಭಾವಂತ  ಧನಾತ್ಮಕ ಸ್ವಭಾವದ ಭರತನಾಟ್ಯ ನರ್ತಕಿ ಗೀತಾ ಅವರನ್ನು ಎಂಇಎಸ್ ಕಾಲೇಜಿನಲ್ಲಿ ಭೇಟಿಯಾದರು ಮತ್ತು ಅವರ ಸಂಬಂಧವು ಆಹ್ಲಾದಕರ ರೂಪವನ್ನು ಪಡೆದುಕೊಂಡಿತು.ಏಕೆಂದರೆ ಅವರು ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಂಡರು ಮತ್ತು 1972ರಲ್ಲಿ ವಿವಾಹವಾದರು.

    ಡಾ.ಶ್ರೀನಾಥ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.ಅವರ ಮಗ ರೋಹಿತ್ ಕೂಡಾ ಜನಪ್ರಿಯ ಬಾಲನಟರಾಗಿದ್ದರು.ಮತ್ತು ಈಗ ವ್ಯಾಪಾರ ನಿರ್ವಹಣೆಯ ಸಲಹಗಾರರಾಗಿದ್ದಾರೆ.ರೋಹಿತ್ ಅವರ ಪತ್ನಿ ಮಂಗಳಾ.ಇವರಿಗೆ ಹಿತಾ ಎಂಬ ಮಗಳಿದ್ದಾಳೆ. ಡಾ.ಶ್ರೀನಾಥ್ ಅವರ ಮಗಳು ಅಮೂಲ್ಯ ಪ್ರತಿಭಾನ್ವಿತ ರಂಗಕಲಾವಿದೆ ಮತ್ತು ಫ್ಯಾಶನ್ ಡಿಸೈನರ್.ಅವರು ಬ್ಯಾಂಕ್ ಆಫ್ ಅಮೇರಿಕಾ ದಲ್ಲಿ ವಿಪಿ ದೀಪಕ್ ಅವರನ್ನು ವಿವಾಹವಾದರು.ಅವರು ತಮ್ಮ ಪುತ್ರಿಯರಾದ ದಿಯಾ,ಅರ್ಚಿಷಾ,ದಿಶಾರೊಂದಿಗೆ ಅಮೇರಿಕಾದ ಷಾರ್ಲೆಟ್ ನಲ್ಲಿ ವಾಸಿಸುತ್ತಿದ್ದಾರೆ.

  ಜನಪ್ರಿಯ ಸೆಲೆಬ್ರಿಟಿ ಯಾಗಿದ್ದರೂ ಈ ಹಿರಿಯ ನಟ ತನ್ನ ದಯೆ,ನಮ್ರತೆ,ಸಮಗೃತೆ ಹೆಸರುವಾಸಿಯಾಗಿದ್ದು ಅತ್ಯಂತ ಸರಳವಾದ ಜೀವನವನ್ನು ನಡೆಸುತ್ತಾರೆ.ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಕಡೆಗೆ ಅವರ ಸರಳತೆ ಮತ್ತು ಸಹಾನುಭೂತಿಯನ್ನು ವಿವರಿಸಲು ಪದಗಳಿಲ್ಲ.ಅವರು ವೈವಿಧ್ಯಮಯ ಪೋರ್ಟ್ಫೋಲಿಯೋವನ್ನು(portfolio) ಹೊಂದಿದ್ದಾರೆ.ಮತ್ತು ಚಲನಚಿತ್ರ ದೂರದರ್ಶನ ಧಾರಾವಾಹಿಗಳಲ್ಲಿ ಅಭಿನಯಿಸುತ್ತಾರೆ.ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.ಶ್ರೀನಾಥ್ ಅವರು ಚಿತ್ರರಂಗದಲ್ಲಿ 50ವರ್ಷಗಳನ್ನು ಪೂರೈಸಿದ್ದು ಅಲ್ಲದೇ ವಿವಾದಗಳಿಂದ ಮುಕ್ತರಾದ ಕೆಲವೇನಟರುಗಳಲ್ಲಿ ಒಬ್ಬರು.ಚಿತ್ರರಂಗ ಮತ್ತು ಸಮಾಜದಲ್ಲಿ "ಅಜಾತಶತ್ರು"ಎಂಬ ಬಿರುದನ್ನು ಪಡೆದಿದ್ದಾರೆ.ಅವರು ಸಮಾಜದಲ್ಲಿ ಬಹಳ ಗೌರವಾನ್ವಿತ ಸ್ಥಾನವನ್ನು ಪಡೆದುಕೊಂಡಿದ್ದಾರೆ ಮತ್ತು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

  ಅವರ ಎಂಟನೇ ವಯಸ್ಸಿನಲ್ಲಿ ರಂಗಭೂಮಿ ನಾಟಕಗಳಲ್ಲಿ ಪ್ರದರ್ಶನ ನೀಡಲು ಆರಂಭಿಸಿದಾಗ ಅವರ ನಟನೆಯ ಉತ್ಸಾಹ ಆರಂಭವಾಯಿತು.ಅವರ ರಂಗಭೂಮಿ ಅನುಭವವು ಪ್ರಭಾತ್ ಕಲಾವಿದರೊಂದಿಗೆ ಹಾಗೂ ನಟರಂಗ ಇನ್ನಿತರ ವೇದಿಕೆಗಳೊಂದಿಗೆ ಆರಂಭವಾಯಿತು.ಅವರು ತಮ್ಮ ಚಿಕ್ಕ ದಿನಗಳಲ್ಲಿ ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ಸ್ ಕ್ಲಬ್ ಮತ್ತು ಪ್ರಭಾತ್ ಕಲಾವಿದರುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

 ಡಾ.ಶ್ರೀನಾಥ್ ಅವರು ತಮ್ಮ 24ನೇ ವಯಸ್ಸಿನಲ್ಲಿ ತಮ್ಮ ಚಲನಚಿತ್ರ ವೃತ್ತಿ ಜೀವನವನ್ನು ಆರಂಭಿಸಿದರು.ಅಲ್ಲಿ ಅವರು 1966ರಲ್ಲಿ ಡಾ.ರಾಜ್ ಕುಮಾರ್ ನಟಿಸಿದ "ಲಗ್ನ ಪತ್ರಿಕೆ"ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ.ನಂತರ 1969ರಲ್ಲಿ ಎಸ್.ಕೆ.ಎ.ಚಾರಿ ಅವರ ನಿರ್ದೇಶನದಲ್ಲಿ "ಮಧುರ ಮಿಲನ"ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸಿದರು.ನಂತರ ಹಿಂತಿರುಗಿ ನೋಡಲಿಲ್ಲ.ಅನೇಕ ಸಿನಿಮಾದಲ್ಲಿ ನಟಿಸಿ ಚಿತ್ರರಂಗದಲ್ಲಿ  ಜನಪ್ರಿಯನಾಯಕರಾದರು.

  ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಶುಭ ಮಂಗಳ"ಚಿತ್ರವು 1975ರಲ್ಲಿ ಅವರನ್ನು ಸ್ಟಾರ್ ಮಾಡಿದಾಗ ಒಂದು ಮಹತ್ವದ ಮೈಲಿಗಲ್ಲನ್ನು ಪಡೆಯಿತು.ಚಲನಚಿತ್ರದ ಹಾಡುಗಳು ಅತ್ಯಂತ ಜನಪ್ರಿಯವಾದವು ಮತ್ತು ಅವು ಇಂದಿಗೂ ಅತ್ಯಂತ ಜನಪ್ರಿಯ.ಕನ್ನಡ ಚಲನಚಿತ್ರ ರಸಿಕರು ಅವರಿಗೆ "ಪ್ರಣಯ ರಾಜಾ"ಎಂಬ ಬಿರುದನ್ನು ನೀಡಿದರು.ನಂತರ ಅವರಿಗೆ ಇಂಡಸ್ಟ್ರಿಯಲ್ಲಿ ಒಂದು ಒಳ್ಳೆ ಇಮೇಜ್ ಬಂದಿತ್ತು.ಕನ್ನಡ ಉದ್ಯಮದ ಇತಿಹಾಸದಲ್ಲಿ ಶ್ರೀನಾಥ್-ಮಂಜುಳಾ ಜೋಡಿಯನ್ನು ಅತ್ಯಂತ ಯಶಸ್ವಿ ಜೋಡಿ ಎಂದು ಗುರುತಿಸಲಾಯಿತು.ಶ್ರೀನಾಥ್ ಮಂಜುಳಾ ಇಬ್ಬರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಡಾ.ರಾಜ್ ಕುಮಾರ್ ನಂತರದಲ್ಲಿ ಶ್ರೀನಾಥ್ ಯಶಸ್ವಿಯಾಗಿ ನೂರು ಚಿತ್ರಗಳನ್ನು ಪೂರೈಸಿದರು.ಈ ಸಮಯದಲ್ಲಿ ಶ್ರೀನಾಥ್ ಅವರಿಗಾಗಿ ಒಂದು ಕಾರ್ಯಕ್ರಮ ಮಾಡಲಾಯಿತು‌.ಕನ್ನಡ ಚಿತ್ರರಂಗದಲ್ಲಿ ಎರಡನೆ ಶತಚಿತ್ರನಟರಾಗಿ ಶ್ರೀನಾಥ್ ನೆಲೆಯೂರಿದ್ದಾರೆ.ನೂರು ಚಿತ್ರಗಳನ್ನು ಪೂರೈಸಿದ ನಂತರ ಶ್ರೀನಾಥ್ ಅವರಿಗೆ"ಅಭಿನಯ ಚಕ್ರವರ್ತಿ"ಎಂಬ ಬಿರುದನ್ನು ನೀಡಲಾಯಿತು.

ಶ್ರೀನಾಥ್ ಅವರು ಇದುವರೆಗೆ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟ, ಪೋಷಕ ನಟ,ಸಹಾಯಕ ನಟರಾಗಿ ಅಭಿನಯಿಸಿದ್ದಾರೆ. ಅವರು ತಮ್ಮ ಪತ್ನಿ ಜೊತೆಗೆ 5ಸಿನಿಮಾಗಳನ್ನು ನಿರ್ಮಿಸಿದ್ದಾರೆ.ಅವುಗಳಲ್ಲಿ ಎರಡು" ಮಾನಸ ಸರೋವರ "ಮತ್ತು"ಧರಣಿ ಮಂಡಲ ಮಧ್ಯದೊಳಗೆ"ಚಿತ್ರಗಳನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರೆ.

  ಶ್ರೀನಾಥ್ ಅವರು ಕರ್ನಾಟಕ ಚಿತ್ರರಂಗದ ಪ್ರಮುಖ ನಿರ್ದೇಶಕರಾದ ‌ ವೈ.ಆರ್.ಸ್ವಾಮಿ,ಗೀತಪ್ರಿಯ,ಶೇಷಗಿರಿರಾವ್,ಪುಟ್ಟಣ್ಣ ಕಣಗಾಲ್, ಕೆ.ಎಸ್.ಎಲ್.ಸ್ವಾಮಿ,ಮತ್ತು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಕೆ.ಬಾಲಚಂದರ್. ಭೀಮ್ ಸಿಂಗ್,ಶ್ರೀಧರ್ ,ಕೆ.ಎಸ್.ಪ್ರಕಾಶ್ ರಾವ್  ಮತ್ತು ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ಡಾ.ಶ್ರೀನಾಥ್ ಅವರ ಚಲನಚಿತ್ರ ಗೀತೆಗಳನ್ನು ‌ಶ್ರೀ ಬಾಲಮುರಳಿಕೃಷ್ಣ,ಎಸ್.ಪಿ.ಬಾಲಸುಬ್ರಹ್ಮಣ್ಯಂ,ಪಿ.ಬಿ.ಶ್ರೀನಿವಾಸ್ ಮತ್ತು ಕೆ.ಜೆ.ಯೇಸುದಾಸ್ ರಂತಹ ಖ್ಯಾತ ಗಾಯಕರು ಹಾಡಿದ್ದಾರೆ. ಅವರ ಅನೇಕ ಹಾಡುಗಳನ್ನು ವಿಜಯ್ ಭಾಸ್ಕರ್,  ರಾಜನ್ ನಾಗೇಂದ್ರ, ಇಳಯರಾಜ,ಮತ್ತು ಸತ್ಯಂ ಮುಂತಾದ ಸಂಗೀತ ಪಟುಗಳು ರಚಿಸಿದ್ದಾರೆ.ಅವರ ಹಾಡುಗಳ ಸಾಹಿತ್ಯವನ್ನು ಜನಪ್ರಿಯ ಕವಿಗಳಾದ ಕೆ.ಎಸ್.ನರಸಿಂಹ ಸ್ವಾಮಿ,  ಆರ್.ಎನ್.ಜಯಗೋಪಾಲ್,ಚಿ.ಉದಯ್ ಶಂಕರ್,ಜಿ.ಎಸ್.ಶಿವರುದ್ರಪ್ಪ,ಗೀತಪ್ರಿಯ,ಎಂ.ಎನ್.ವ್ಯಾಸರಾವ್ ಅನೇಕರು ರಚಿಸಿದ್ದಾರೆ.

ಸಮಾಜಕ್ಕೆ ಕೊಡುಗೆ[ಬದಲಾಯಿಸಿ]

ಹಿರಿಯ ನಟ ಡಾ.ಶ್ರೀನಾಥ್ ಅವರು ದೆಯಾ ಆರ್ಟ್ ಫೌಂಡೇಷನ್ ಎಂಬ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ.ಕ್ಯಾನ್ಸರ್,ಎಚ್ಐವಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತವನ್ನು ಒದಗಿಸುತ್ತಾರೆ.

 • ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಪ್ರತ್ಯೇಕವಾಗಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದು. 
 • ಉಚಿತ ಆರೋಗ್ಯ ತಪಾಸಣಾ ಶಿಬಿರಗಳು.
 • ದೈಹಿಕ ಅಂಗವಿಕಲರಿಗಾಗಿ ನಿಧಿ ಸಂಗ್ರಹ ಶಿಬಿರಗಳು.
 • ವೃದ್ಧಾಶ್ರಮಗಳಲ್ಲಿ ಸೇವಾ ಚಟುವಟಿಕೆಗಳು 
 • ರಕ್ತದಾನ ಶಿಬಿರಗಳು.
 • ಔಷಧಗಳು ಮತ್ತು ಪೌಷ್ಟಿಕ ಆಹಾರದ ಉಚಿತ ಪೂರೈಕೆ.

ಸೆಮಿನಾರ್ ಮತ್ತು ಸಮ್ಮೇಳನಗಳಲ್ಲಿ[ಬದಲಾಯಿಸಿ]

ಅಭಿನಯ ಚಕ್ರವರ್ತಿ ಡಾ.ಶ್ರೀನಾಥ್ ಅವರು ಸೆಮಿನಾರ್ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ.

 • ಪ್ರತಿನಿಧಿ-*1977ರಲ್ಲಿ ದೆಹಲಿಯಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
 • ಮುಖ್ಯ ಅತಿಥಿ*1981ರಲ್ಲಿ ದೆಹಲಿಯಲ್ಲಿ ಶ್ರೀನಾಥ್ ಚಲನಚಿತ್ರೋತ್ಸವ
 • ಮುಖ್ಯ ಅತಿಥಿ*1983ರಲ್ಲಿ ಧಾರವಾಡ ವಿಶ್ವವಿದ್ಯಾಲಯದಲ್ಲಿ(ಕರ್ನಾಟಕ ವಿಶ್ವವಿದ್ಯಾಲಯ) ಚಲನಚಿತ್ರ ಉದ್ಯಮದ ಕುರಿತು ಸೆಮಿನಾರ್.
 • ಮುಖ್ಯ ಅತಿಥಿ*-1983ರಲ್ಲಿ ಸಿಂಗಪೂರ್ ನಲ್ಲಿ ಕನ್ನಡ ಕೂಟ ಆಚರಣೆಗಳು.
 • ಮುಖ್ಯ ಅತಿಥಿ-*1988ರಲ್ಲಿ ಯು.ಕೆ.ಯು ಮ್ಯಾಂಚೆಸ್ಟರ್ ನಲ್ಲಿ ವಿಶ್ವ ಕನ್ನಡ ಕೂಟ.
 • ಮುಖ್ಯ ಅತಿಥಿ-*1987-88ರಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ಬ್ರಾಹ್ಮಣ ಸಮಾವೇಶ.
 • ಮುಖ್ಯ ಅತಿಥಿ-*ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ರಜತ ಮಹೋತ್ಸವ ಆಚರಣೆಗಳು.
 • ಮುಖ್ಯ ಅತಿಥಿ-*ನ್ಯೂ ಇಂಗ್ಲೆಂಡ್ ಕನ್ನಡ ಕೂಟ 2001ರಲ್ಲಿ ಯು.ಎಸ್ಎ ಬೋಸ್ಟನ್ ನಲ್ಲಿ.
 • ಮುಖ್ಯ ಅತಿಥಿ-*ಅಮೇರಿಕಾದ ಫೀನಿಕ್ಸ್ ನಲ್ಲಿ ಆರತಿ ಸ್ಕೂಲ್ ಆಫ್ ಡಾನ್ಸ
 • ಮುಖ್ಯ ಅತಿಥಿ-*2001ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ತ್ರಿವೇಣಿ ಕನ್ನಡ ಕೂಟದ ರಜತ ಮಹೋತ್ಸವ ಆಚರಣೆ.
 • ಮುಖ್ಯ ಅತಿಥಿ-*2011ರಲ್ಲಿ ಆಸ್ಟ್ರೇಲಿಯಾ ದ ಮೆಲ್ಬೋರ್ನ್ ನಲ್ಲಿ ಮೆಲ್ಬೋರ್ನ್ ಕನ್ನಡ ಕೂಟ
 • ಮುಖ್ಯ ಅತಿಥಿ-*2011 ರಲ್ಲಿ ಲಂಡನ್ ಯು.ಕೆ ನಲ್ಲಿ ಯುರೋಪಿಯನ್ ಕನ್ನಡ ಕೂಟ

ಶ್ರೀನಾಥ್ ಶೀರ್ಷಿಕೆಗಳು[ಬದಲಾಯಿಸಿ]

*1976-ರೊಮ್ಯಾಂಟಿಕ್ ಪಾತ್ರಗಳಲ್ಲಿ ಅವರ ಅದ್ಭುತ ಅಭಿನಯಕ್ಕಾಗಿ ಕರ್ನಾಟಕದ ಜನರು ಅವರಿಗೆ"*ಪ್ರಣಯ ರಾಜಾ"*ಎಂಬ ಬಿರುದನ್ನು ನೀಡಿದರು.

*1982-*ನೂರು ಚಿತ್ರಗಳನ್ನು ಪೂರೈಸಿದ ನಂತರ"*ಅಭಿನಯ ಚಕ್ರವರ್ತಿ"*ಎಂಬ ಬಿರುದನ್ನು ನೀಡಲಾಯಿತು.(ಡಾಕ್ಟರ್ ರಾಜ್ ಕುಮಾರ್ ನಂತರದಲ್ಲಿ ಕನ್ನಡ ಚಿತ್ರರಂಗದ ಎರಡನೇ ಶತಚಿತ್ರನಟರಾಗಿ ಶ್ರೀನಾಥ್ ನೆಲೆಯೂರಿದ್ದಾರೆ).

*1999-* ಕನ್ನಡ ಕೂಟ ಲಾಸ್ ಏಂಜಲೀಸ್ ದಕ್ಷಿಣ ಕ್ಯಾಲಿಫೋರ್ನಿಯಾ ಯು.ಎಸ್.ಎ ಇಂದ "ನಟನಕಲಾ ಸಾರ್ವಭೌಮ"ಬಿರುದನ್ನು ನೀಡಲಾಯಿತು.

*2008-*" ಗೌರವ ಡಾಕ್ಟರೇಟ್ ಪದವಿ ಪ್ರದಾನ"(University: The open international University for complementary medicines University location;Colombo shrilanka)

*2001- ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಬೋಸ್ಟನ್ ಯು.ಎಸ್.ಎ ಇಂದ "ಅಭಿನಯ ಕಲಾರತ್ನ"ಬಿರುದನ್ನು ನೀಡಲಾಯಿತು.

*2001- ಅಮೇರಿಕಾದ ಫೀನಿಕ್ಸ್ ನ ಆರತಿ ಸ್ಕೂಲ್ ಆಫ್ ಡಾನ್ಸ್ ನಿಂದ "ಆರತಿ ಕಲಾರತ್ನ"ಬಿರುದನ್ನು ನೀಡಲಾಯಿತು.

*2010-*ಕೈರಳಿ ಸಾಂಸ್ಕೃತಿಕ ಸಂಘದಿಂದ "ಭವ ಚಕ್ರವರ್ತಿ"ಎಂಬ ಬಿರುದನ್ನು ನೀಡಲಾಗಿದೆ.

*2014-*ಟೊರಂಟೋ ಕೆನಡಾದ COOK ಕನ್ನಡ ಕೂಟದಿಂದ "ಆದರ್ಶ ಬಿಂಬ"ಬಿರುದನ್ನು ನೀಡಲಾಗಿದೆ.

*2015-*ನೆವಿಕಾ  ಯು.ಎಸ್.ಎ.ಯಿಂದ "ಕನ್ನಡ ರತ್ನ"ಬಿರುದನ್ನು ನೀಡಲಾಯಿತು.

*2015-*ಬೆಂಗಳೂರು ಸ್ಯಾನ್ಸಿಟಿಯಿಂದ "ಕಾಲಾ ರತ್ನ" ಎಂಬ ಬಿರುದನ್ನು ನೀಡಲಾಯಿತು.

*2018*-USA ನಲ್ಲಿ AKKA 2018 ಸಮ್ಮೇಳನದಲ್ಲಿ "ಅಭಿನಯ ಮಾಣಿಕ್ಯ" ಬಿರುದನ್ನು ನೀಡಲಾಗಿದೆ.

ಸಂಯೋಜಿತ ಸಂಸ್ಥೆಗಳು[ಬದಲಾಯಿಸಿ]

*ಅಧ್ಯಕ್ಷರು-* ಕರ್ನಾಟಕ ಸಹಕಾರಿ ಚಲನಚಿತ್ರ ಮತ್ತು ಲಲಿತ ಕಲಾ ಒಕ್ಕೂಟ .  

*ಸದಸ್ಯ-* ಕನ್ನಡ ಸಾಹಿತ್ಯ ಪರಿಷತ್.     

*ಸಾಂಸ್ಕೃತಿಕ ರಾಯಭಾರಿ- ಸೂರ್ಯೋದಯ ಪ್ರತಿಷ್ಠಾನ.

*ಸ್ಥಾಪಕ -ಸದಸ್ಯ- ದೆಯಾ ಕಲಾ ಪ್ರತಿಷ್ಠಾನ.

*ಗೌರವಾಧ್ಯಕ್ಷ-* ಭೀಮನಕಟ್ಟೆ ಹರಿದಾಸ ಸೇವಾ ಸಮಿತಿ.

*ಸದಸ್ಯ-* ಭೀಮನಕಟ್ಟೆ ಎಜುಕೇಷನಲ್ ಟ್ರಸ್ಟ್.   

*ಸಂಘಟಕ-* ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಾವಿರ ವರ್ಷಗಳಷ್ಟು ಹಳೆಯದಾದ ನರಸಿಂಹ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಕ್ಕಾಗಿ ನಿಧಿ ಸಂಗ್ರಹಿಸಲು.

*ಸ್ಥಾಪಕ-* ನಿರ್ದೇಶಕ-ಶ್ರೀನಿಧಿ ಚಾರಿಟೇಬಲ್ ಟ್ರಸ್ಟ್ ಫಾರ್ ವೃದ್ಧಾಶ್ರಮ.

*ಸ್ಥಾಪಕ ಸದಸ್ಯ-* ಕರ್ನಾಟಕ ಅನಾಥ ಮಕ್ಕಳ ಮನೆ,ಗಿರಿನಗರ, ಬೆಂಗಳೂರಿನಲ್.  

*ಅಧ್ಯಕ್ಷರು-* ಸಾಮೂಹಿಕ ವಿವಾಹ ಸಮಿತಿ  ಶೆಣೇಶ್ವರ ದೇವಸ್ಥಾನ ಟ್ರಸ್ಟ್  ಕೆಂಪೇಗೌಡ ನಗರ ಬೆಂಗಳೂರು.

*ಸಲಹೆಗಾರ-* ಸ್ಫೂರ್ತಿ ಮಹಿಳಾ ಸಮಾಜ ಬೆಂಗಳೂರು.

*ಗೌರವ ಸದಸ್ಯ-* ರೋಟರಿ ಕ್ಲಬ್ (ಪಶ್ಚಿಮ)ಮೈಸೂರು.  

*ಸದಸ್ಯ-* ಸೆಂಚುರಿ ಕ್ಲಬ್ ಬೆಂಗಳೂರು.  

*ಸದಸ್ಯರು-* ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA).

*ಸದಸ್ಯ-* ಕಾಸ್ಮೋಪಾಲಿಟನ್ ಕ್ಲಬ್.

*ಗೌರವ ಸದಸ್ಯ-* ಬೆಂಗಳೂರು ನಗರ ಸಂಸ್ಥೆ.

*ಗೌರವ ಸದಸ್ಯ-* ಕ್ಲಬ್-ಬೆಂಗಳೂರು.
ಪ್ರಶಸ್ತಿಗಳು,ಗೌರವಗಳು ಮತ್ತು ಬಿರುದುಗಳು[ಬದಲಾಯಿಸಿ]

 • ಪ್ರಣಯ ರಾಜಾ,ಅಭಿನಯ ಚಕ್ರವರ್ತಿ,ಕಲಾಶ್ರೀ ಬಿರುದುಗಳನ್ನು ಶ್ರೀನಾಥ್ ಹೊಂದಿದ್ದಾರೆ.
 • ಶ್ರೀನಾಥ್ ಅವರು 70 ರ ದಶಕದಲ್ಲಿ ಪ್ರಣಯದ (ರೊಮ್ಯಾಂಟಿಕ್) ಪಾತ್ರಗಳಲ್ಲಿ ಸಕ್ಸಸ್ ಕಂಡಿದ್ದರಿಂದ ಅವರ ಅದ್ಭುತ ಅಭಿನಯಕ್ಕಾಗಿ "ಪ್ರಣಯ ರಾಜಾ"ಎಂಬ ಬಿರುದನ್ನು ಕನ್ನಡ ಚಲನಚಿತ್ರ ರಸಿಕರು ಅಭಿಮಾನಿಗಳು ನೀಡಿರುತ್ತಾರೆ.
 • ನಟ ಶ್ರೀನಾಥ್ ಡಾಕ್ಟರ್ ರಾಜ್ ಕುಮಾರ್ ನಂತರದಲ್ಲಿ ಎರಡನೆ ಶತಚಿತ್ರನಟರಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆ.1982ರಲ್ಲಿ ನೂರು ಚಿತ್ರಗಳನ್ನು ಶ್ರೀನಾಥ್ ಪೂರೈಸಿದ್ದರಿಂದ ಹಾಗೂ ಬಹುಬೇಡಿಕೆಯ ನಟ ಆಗಿದ್ದರಿಂದ ಅದ್ಭುತ ನಟನೆ ನೀಡುತ್ತಿದ್ದರಿಂದ "ಅಭಿನಯ ಚಕ್ರವರ್ತಿ"ಎಂಬ ಬಿರುದನ್ನು ನೀಡುತ್ತಾರೆ.
 • ಕಲಾಶ್ರೀ ಎಂಬ ಬಿರುದು ಕೂಡಾ ಶ್ರೀನಾಥ್ ಅವರಿಗೆ ಇದೆ
 • 2008 ರಲ್ಲಿ ಗೌರವ ಡಾಕ್ಟರೇಟ್(The open international University for complementary medicines University location; Colombo shrilanka)
 • 2013-14" ಡಾಕ್ಟರ್ ರಾಜ್ ಕುಮಾರ್ "ಜೀವಮಾನ ಸಾಧನಾ ಪ್ರಶಸ್ತಿ (ಕನ್ನಡ ಚಲನಚಿತ್ಯೊದ್ಯಮದಲ್ಲಿ ಅವರ ಒಟ್ಟಾರೆ ಕೊಡುಗೆ ಮತ್ತು ಸಾಧನೆಗಾಗಿ)
 • 2016 ರಲ್ಲಿ "ಕುಂದನ್ ಪ್ರಶಸ್ತಿ " ಬೆಂಗಳೂರು ರಂಗಶ್ರೀ ಕಲಾಸಂಸ್ದೆ ವತಿಯಿಂದ.
 • 2014-15 ರಲ್ಲಿ "ಅಪ್ಪಾಜಿ ಸೌಹಾರ್ದ ಪ್ರಶಸ್ತಿ"by Dr.Rajkumar Trust.
 • 2013 -"ಮಾಧ್ಯಮ ಸನ್ಮಾನ ದಶಕದ ಪ್ರಶಸ್ತಿ "-(ದೂರದರ್ಶನ ಮತ್ತು ಮಾಧ್ಯಮದಲ್ಲಿ ಅವರ ಕೊಡುಗೆಗಾಗಿ)
 • 2007-"ಸುಜಯಶ್ರೀ ಪ್ರಶಸ್ತಿ" ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯ ವತಿಯಿಂದ
 • 1999- "ಟಿಪ್ಪು ಪ್ರಶಸ್ತಿ"ಕನ್ನಡ ಯುವ ಸೇನೆ ವತಿಯಿಂದ
 • 2003-"ರಾಜ್ಯೋತ್ಸವ ಪ್ರಶಸ್ತಿ"(ಕರ್ನಾಟಕ ರಾಜ್ಯ ಸರ್ಕಾರದಿಂದ)
 • 2016-ತಾಮ್ರ ಮಾನವ ಹಕ್ಕಿನ ಪುರಸ್ಕಾರ 2016 ಮಾನವೀಯ ಶ್ರೆಷ್ಠತೆ ಕ್ಷೇತ್ರದಲ್ಲಿ ಸಾರ್ಕ್ ರಾಷ್ಟ್ರಗಳ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ರಾಜ್ಯ ಪ್ರಶಸ್ತಿ
 • 2018- "ಮುರುಘಾ ಶ್ರೀ ಪ್ರಶಸ್ತಿ"ಚಿತ್ರದುರ್ಗ ಮುರುಘಾ ಮಠದಿಂದ ಪ್ರದಾನ
 • 1999-"ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಪ್ರಶಸ್ತಿ" ಹಿರಿಯ ನಟ /ನಾಯಕರಿಗಾಗಿ
 • 1998-"ಜೀವಮಾನ ಸಾಧನಾ ಪ್ರಶಸ್ತಿ"ನಾಕ್ ಔಟ್ ಉದಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರದಾನ
 • 1998-"ಆರ್ ನಾಗೇಂದ್ರ ರಾವ್ ಪ್ರಶಸ್ತಿ"ಚಲನಚಿತ್ರಗಳಲ್ಲಿ ಉತ್ತಮ ಸೇವೆಗಾಗಿ ಚೆನ್ನೈ ನಲ್ಲಿ ಪ್ರಸ್ತುತಪಡಿಸಲಾಯಿತು.
 • 1998-"ಸಹಕಾರಿ ರತ್ನ"ಸಹಕಾರಗಳಿಂದ ತುಮಕೂರು ಜಿಲ್ಲೆ.
 • 1997-"ಕೆಂಪೇಗೌಡ ಪ್ರಶಸ್ತಿ"ಬೆಂಗಳೂರು ನಗರ ನಿಗಮದಿಂದ ಪ್ರದಾನ.
 • 1993- "ಮಾನವ ಮೌಲ್ಯಗಳು ಮತ್ತು ರಾಷ್ಟ್ರೀಯ ಏಕೀಕರಣವನ್ನು ಶ್ರೀಮಂತಗೊಳಿಸುವುದಕ್ಕಾಗಿ IEP ಇಂದ "ಉದ್ಯೋಗ ಶ್ರೇಷ್ಠ ಪ್ರಶಸ್ತಿ".
 • 1989-"ವಿಜಯ ರತ್ನ"ಪ್ರಶಸ್ತಿ.
 • 1987-"ರೋಟರಿ ಎಕ್ಸೆಲೆನ್ಸ್ ಪ್ರಶಸ್ತಿ" ರೋಟರಿ ಕ್ಲಬ್ ಬೆಂಗಳೂರು ದಕ್ಷಿಣ
 • 1983-"ಮಾನಸ ಸರೋವರ"ದಲ್ಲಿನ ಅಭಿನಯಕ್ಕಾಗಿ ಚಲನಚಿತ್ರ ಅಭಿಮಾನಿಗಳ ಸಂಘದಿಂದ "ಅತ್ಯುತ್ತಮ ನಟ "ಪ್ರಶಸ್ತಿ
 • 1983-"ಕಲಾವೇದಿ ಪ್ರಶಸ್ತಿ" ಮಲಿಯಾಳಮ್ ಅಸ್ಸೋಸಿಯೇಷನ್ ನಿಂದ
 • 1981-"ಶ್ರೀ ರಾಘವೇಂದ್ರ ವೈಭವ"ಚಿತ್ರಕ್ಕಾಗಿ "ಕರ್ನಾಟಕ ರಾಜ್ಯ ಪ್ರಶಸ್ತಿ"(ಅತ್ಯುತ್ತಮ ನಟ)
 • 1978-"ಭಕ್ತ ಶಿರೋಮಣಿ"ಉಡುಪಿ ಮಠದಿಂದ ಪ್ರದಾನ
 • 1976-"ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ"ಬೆಸುಗೆ ಚಿತ್ರಕ್ಕಾಗಿ.
 • 2003-"ಕೈಲಾಸಂ ಪ್ರಶಸ್ತಿ"ಗೊರೂರು ಪ್ರತಿಷ್ಠಾನ
 • 2003-"ಸಿಲ್ವರ್ ಕ್ರೌನ್-ಫೋಟೋ ಮತ್ತು ವೀಡಿಯೋಗ್ರಾಫರ್ಸ ಅಸ್ಸೋಸಿಯೇಷನ್ ಶಿಕಾರಿಪುರ.
 • 2007-"ಸ್ನೇಹಜೀವಿ ಪ್ರಶಸ್ತಿ"ಕಸ್ತೂರಿ ಟಿ.ವಿ.ಚಾನೆಲ್ ನೀಡುವ ಜೀವಮಾನ ಸಾಧನೆ ಪ್ರಶಸ್ತಿ
 • 2012-"ಸುವರ್ಣ ಟಿ.ವಿ.ಯಿಂದ ಜೀವಮಾನ ಸಾಧನಾ ಪ್ರಶಸ್ತಿ"
 • 2012-"ಉದಯ ಟಿ.ವಿ.ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ"
 • 2003- ಕರ್ನಾಟಕ ಸರ್ಕಾರದಿಂದ "ಕಲಾರತ್ನ"ಪ್ರಶಸ್ತಿ ಲಭಿಸಿದೆ.

ಶ್ರೀನಾಥ್ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

 • ಅಜ್ಞಾತವಾಸ
 • ಆನಂತರ
 • ಗಂಡ ಭೇರುಂಡ
 • ರಾಮ ಪರಶುರಾಮ
 • ಮಂಜಿನ ತೆರೆ


ರಾಜಕೀಯ[ಬದಲಾಯಿಸಿ]

ಪ್ರಸಕ್ತ ರಾಜಕೀಯದಲ್ಲು ಸಕ್ರಿಯರಾಗಿರುವ ಇವರು ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಸದಸ್ಯರಾಗಿದ್ದರು .

ಉಲ್ಲೇಖಗಳು[ಬದಲಾಯಿಸಿ]

 1. http://www.filmibeat.com/celebs/srinath-kannada-actor.html
 2. https://chiloka.com/celebrity/srinath
 3. http://www.imdb.com/name/nm7154019/