ವಿಷಯಕ್ಕೆ ಹೋಗು

ಧರ್ಮಸೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧರ್ಮಸೆರೆ
ಧರ್ಮಸೆರೆ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಆರತಿ
ಕಥೆಜಡಭರತ
ಪಾತ್ರವರ್ಗಶ್ರೀನಾಥ್ ಆರತಿ ಸತ್ಯಪ್ರಿಯ, ಸೀತಾರಾಮ್, ಶಿವರಾಂ,ಮುಸರಿ ಕೃಷ್ಣಮುರ್ತಿ, ಸತ್ಯಭಾಮ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಎಸ್.ಮಾರುತಿ ರಾವ್
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಅಂಬಾ ಫಿಲಂಸ್
ಸಾಹಿತ್ಯವಿಜಯನಾರಸಿಂಹ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ಇತರೆ ಮಾಹಿತಿಜಡಭರತಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ.

ಜಡಭರತಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. ಧರ್ಮಸೆರೆ ೧೯೭೯ನೇ ವರ್ಷದಲ್ಲಿ ಪ್ರಕಟವಾದ ಚಲನಚಿತ್ರ. ಪುಟ್ಟಣ್ಣ ಕಣಗಾಲ್ ಈ ಚಿತ್ರದ ನಿರ್ದೇಶಕರು.

ದೊಡ್ಡ ಮಗಳು ಮೂಕಿ(ಆರತಿ), ಎರಡನೆಯಾಕೆ ವಾಚಾಳಿ. ಹೆಣ್ಣು ನೋಡಬಂದ ಹುಡುಗ(ಶ್ರೀನಾಥ್) ತಂಗಿಯನ್ನು ಮದುವೆಯಾಗುವುದಾಗಿ ಹೇಳಿದಾಗ ಹೂಗುಟ್ಟುವ ತಂದೆ, ತಾಳಿ ಕಟ್ಟುವ ಸಮಯದಲ್ಲಿ ಅಕ್ಕನ ಮದುವೆಯಾಗದೆ ತಂಗಿಗೆ ಮದುವೆ ಮಾಡಲಾಗದು, ಮೂಕಿ ಅಕ್ಕನಿಗೂ ತಾಳಿ ಕಟ್ಟಿ, ನನ್ನ ಧರ್ಮಸೆರೆಯನ್ನು ನಿವಾರಿಸಿ ಎಂದು ಭಾವಿ ಅಳಿಯನ ಕಾಲು ಹಿಡಿಯುತ್ತಾನೆ.ಮನೆಗೆಲಸದವಳಾಗಿಯೋ ಅಥವಾ ಹೇಗಾದರೂ ಸರಿಯೇ, ಆಕೆಯನ್ನು ಬಾಳಿಸಿ ಎಂದಾಗ ಶ್ರೀನಾಥ್ ವಿಧಿಯಿಲ್ಲದೆಯೇ ಅಕ್ಕ-ತಂಗಿ ಇಬ್ಬರಿಗೂ ತಾಳಿ ಕಟ್ಟುತ್ತಾನೆ.ತಂದೆಯ ಧರ್ಮಸೆರೆಯೇನೋ ಕಳೆಯಿತು, ಮುಂದಿನ ಬಾಳುವೆ ಹೇಗೆ ಎಂಬುದನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

ಹಾಡುಗಳು

[ಬದಲಾಯಿಸಿ]

ಈ ಚಿತ್ರದ "ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ" ಹಾಡು ಜನಪ್ರಿಯವಾಗಿದೆ.

ತಾರಾಬಳಗ

[ಬದಲಾಯಿಸಿ]
  • ಆರತಿ
  • ಶ್ರೀನಾಥ್
  • ಸತ್ಯ ಪ್ರಿಯಾ
  • ಸತ್ಯ ಭಾಮ
  • ಜಯಶ್ರೀ
  • ಬೇಬಿ ನಂದಿನಿ
  • ಸೀತಾರಾಮ್
  • ಮುಸೂರಿ ಕೃಷ್ಣಮೂರ್ತಿ
  • ನಂಜುಂಡಸ್ವಾಮಿ
  • ಪ್ರಣವ ಮೂರ್ತಿ
  • ಕಿರಣ್
  • ದ್ವಾರಕಾನಾಥ
  • ಶಿವರಾಮ್
  • ಚಂದ್ರಶೇಖರ್
  • ಜೈ ಜಗದೀಶ್
  • ಯೋಗ ನರಸಿಂಹ
  • ವಿಶ್ವನಾಥ ರಾವ್
  • ದಿಕ್ಕಿ ಮಾಧವ ರಾವ್
  • ಶರಪಂಜರ ಅಯ್ಯಂಗಾರ್
  • ಅಪ್ಪು ರಾವ್