ಜಿ.ಬಿ.ಜೋಶಿ(ಜಡಭರತ)
Govindacharya Bhimacharya Joshi | |
---|---|
ಜನನ | 1904 Hombal, Gadag district |
ಕಾವ್ಯನಾಮ | Jadabharata, Anamadheya [೧] |
ವೃತ್ತಿ | Playwright, Publisher and Producer of Playwrights |
ರಾಷ್ಟ್ರೀಯತೆ | Indian |
ಕಾಲ | 1950s |
ಪ್ರಕಾರ/ಶೈಲಿ | Play (theatre) |
ಪ್ರಮುಖ ಪ್ರಶಸ್ತಿ(ಗಳು) |
|
ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು ೧೯೦೪ ಜುಲೈ ೨೯ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಇವರ ತಾಯಿ ಭಾರತೀಬಾಯಿ ; ತಂದೆ ಭೀಮಾಚಾರ್ಯರು.[೨] ಜಿ.ಬಿ.ಜೋಶಿಯವರು ೧೯೩೩ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗು ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನು ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಅವರಲ್ಲೊಬ್ಬರು. ೧೯೫೯ರಲ್ಲಿ ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕ “ಮನ್ವಂತರ”ವನ್ನು ಪ್ರಾರಂಭಿಸಿದರು.ಜಿ.ಬಿ.ಜೋಶಿಯವರು "ಜಡಭರತ" ಹಾಗು "ಅನಾಮಧೇಯ" ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]ಅವರ ನಾಟಕಗಳು ಹಾಗು ಇತರ ಕೃತಿಗಳು ಇಂತಿವೆ:
ನಾಟಕ
[ಬದಲಾಯಿಸಿ]- ಮೂಕಬಲಿ
- ಸತ್ತವರ ನೆರಳು
- ಕದಡಿದ ನೀರು
- ಆ ಊರು ಈ ಊರು
- ನಾನೇ ಬಿಜ್ಜಳ
- ಪರಿಮಳದವರು
- ಜರ್ಮನ್ ಬಂಗ್ಲೆ
ಕಾದಂಬರಿ
[ಬದಲಾಯಿಸಿ]- ಧರ್ಮಸೆರೆ
ಕವನಸಂಕಲನ
[ಬದಲಾಯಿಸಿ]- ಜೀವಫಲ
ರಂಗಭೂಮಿ
[ಬದಲಾಯಿಸಿ]ಜಿ. ಬಿ. ಜೋಶಿಯವರ ನಾಟಕಗಳು ದಿವಂಗತ ಬಿ.ವಿ.ಕಾರಂತರಿಂದ ಹಾಗು ನೀ. ನಾ. ಸಂ. ತಂಡದವರಿಂದ ರಂಗಭೂಮಿಯ ಮೇಲೆ ಪ್ರಯೋಗಗೊಂಡಿವೆ. ವಿಶೇಷತಃ ಬಿ. ವಿ. ಕಾರಂತರಿಂದ ಪ್ರದರ್ಶಿತವಾದ “ಸತ್ತವರ ನೆರಳು” ತುಂಬಾ ಜನಪ್ರಿಯ ನಾಟಕಪ್ರದರ್ಶನವಾಗಿತ್ತು.
ಚಿತ್ರೀಕರಣ
[ಬದಲಾಯಿಸಿ]ಜಿ.ಬಿ.ಜೋಶಿಯವರ “ಧರ್ಮಸೆರೆ” ಕಾದಂಬರಿಯನ್ನು ಚಲನಚಿತ್ರವಾಗಿ ರೂಪಾಂತರಿಸಲಾಗಿದೆ. ಈ ಚಲನಚಿತ್ರದಲ್ಲಿ ಶ್ರೀನಾಥ ನಾಯಕರಾಗಿ ಹಾಗು ಆರತಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಪುರಸ್ಕಾರಗಳು
[ಬದಲಾಯಿಸಿ]- ೧೯೭೪ರಲ್ಲಿ “ಸತ್ತವರ ನೆರಳು” ಹಾಗು ೧೯೭೭ರಲ್ಲಿ “ನಾನೇ ಬಿಜ್ಜಳ” ಈ ನಾಟಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು.
- ೧೯೮೬ರಲ್ಲಿ ಜಿ.ಬಿ.ಜೋಶಿಯವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
- ೧೯೮೬ರಲ್ಲಿ ಕರ್ನಾಟಕಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
- ೧೯೮೭ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ
- ೧೯೯೩ರಲ್ಲಿ ಭಾರತೀಯ ಪ್ರಕಾಶಕರ ಒಕ್ಕೂಟದಿಂದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ ದೊರೆತಿದೆ.
ನಿಧನ
[ಬದಲಾಯಿಸಿ]ಜಿ.ಬಿ.ಜೋಶಿಯವರು ೧೯೯೩ ಡಿಸೆಂಬರ ೨೬ರಂದು ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "G B Joshi". www.kannadakavi.com. Archived from the original on 26 ಜುಲೈ 2018. Retrieved 26 July 2018.
- ↑ Biography: G.B. Joshi