ವಿಷಯಕ್ಕೆ ಹೋಗು

ಜಿ.ಬಿ.ಜೋಶಿ(ಜಡಭರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Govindacharya Bhimacharya Joshi
ಜನನ1904
Hombal, Gadag district
ಕಾವ್ಯನಾಮJadabharata, Anamadheya []
ವೃತ್ತಿPlaywright, Publisher and Producer of Playwrights
ರಾಷ್ಟ್ರೀಯತೆIndian
ಕಾಲ1950s
ಪ್ರಕಾರ/ಶೈಲಿPlay (theatre)
ಪ್ರಮುಖ ಪ್ರಶಸ್ತಿ(ಗಳು)

ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು ೧೯೦೪ ಜುಲೈ ೨೯ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಇವರ ತಾಯಿ ಭಾರತೀಬಾಯಿ ; ತಂದೆ ಭೀಮಾಚಾರ್ಯರು.[] ಜಿ.ಬಿ.ಜೋಶಿಯವರು ೧೯೩೩ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗು ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನು ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು. ಖ್ಯಾತ ನಾಟಕಕಾರ ಗಿರೀಶ ಕಾರ್ನಾಡ ಅವರಲ್ಲೊಬ್ಬರು. ೧೯೫೯ರಲ್ಲಿ ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕ ಮನ್ವಂತರ”ವನ್ನು ಪ್ರಾರಂಭಿಸಿದರು.ಜಿ.ಬಿ.ಜೋಶಿಯವರು "ಜಡಭರತ" ಹಾಗು "ಅನಾಮಧೇಯ" ಕಾವ್ಯನಾಮದಲ್ಲಿ ಸಾಹಿತ್ಯ ರಚಿಸಿದ್ದಾರೆ.

ಕೃತಿಗಳು

[ಬದಲಾಯಿಸಿ]

ಅವರ ನಾಟಕಗಳು ಹಾಗು ಇತರ ಕೃತಿಗಳು ಇಂತಿವೆ:

  • ಮೂಕಬಲಿ
  • ಸತ್ತವರ ನೆರಳು
  • ಕದಡಿದ ನೀರು
  • ಆ ಊರು ಈ ಊರು
  • ನಾನೇ ಬಿಜ್ಜಳ
  • ಪರಿಮಳದವರು
  • ಜರ್ಮನ್ ಬಂಗ್ಲೆ

ಕಾದಂಬರಿ

[ಬದಲಾಯಿಸಿ]
  • ಧರ್ಮಸೆರೆ

ಕವನಸಂಕಲನ

[ಬದಲಾಯಿಸಿ]
  • ಜೀವಫಲ

ರಂಗಭೂಮಿ

[ಬದಲಾಯಿಸಿ]

ಜಿ. ಬಿ. ಜೋಶಿಯವರ ನಾಟಕಗಳು ದಿವಂಗತ ಬಿ.ವಿ.ಕಾರಂತರಿಂದ ಹಾಗು ನೀ. ನಾ. ಸಂ. ತಂಡದವರಿಂದ ರಂಗಭೂಮಿಯ ಮೇಲೆ ಪ್ರಯೋಗಗೊಂಡಿವೆ. ವಿಶೇಷತಃ ಬಿ. ವಿ. ಕಾರಂತರಿಂದ ಪ್ರದರ್ಶಿತವಾದ “ಸತ್ತವರ ನೆರಳು” ತುಂಬಾ ಜನಪ್ರಿಯ ನಾಟಕಪ್ರದರ್ಶನವಾಗಿತ್ತು.

ಚಿತ್ರೀಕರಣ

[ಬದಲಾಯಿಸಿ]

ಜಿ.ಬಿ.ಜೋಶಿಯವರ “ಧರ್ಮಸೆರೆ” ಕಾದಂಬರಿಯನ್ನು ಚಲನಚಿತ್ರವಾಗಿ ರೂಪಾಂತರಿಸಲಾಗಿದೆ. ಈ ಚಲನಚಿತ್ರದಲ್ಲಿ ಶ್ರೀನಾಥ ನಾಯಕರಾಗಿ ಹಾಗು ಆರತಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಪುರಸ್ಕಾರಗಳು

[ಬದಲಾಯಿಸಿ]
  • ೧೯೭೪ರಲ್ಲಿ “ಸತ್ತವರ ನೆರಳು” ಹಾಗು ೧೯೭೭ರಲ್ಲಿ “ನಾನೇ ಬಿಜ್ಜಳ” ಈ ನಾಟಕಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು.
  • ೧೯೮೬ರಲ್ಲಿ ಜಿ.ಬಿ.ಜೋಶಿಯವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • ೧೯೮೬ರಲ್ಲಿ ಕರ್ನಾಟಕಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
  • ೧೯೮೭ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ
  • ೧೯೯೩ರಲ್ಲಿ ಭಾರತೀಯ ಪ್ರಕಾಶಕರ ಒಕ್ಕೂಟದಿಂದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ ದೊರೆತಿದೆ.

ಜಿ.ಬಿ.ಜೋಶಿಯವರು ೧೯೯೩ ಡಿಸೆಂಬರ ೨೬ರಂದು ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]
  1. "G B Joshi". www.kannadakavi.com. Archived from the original on 26 ಜುಲೈ 2018. Retrieved 26 July 2018.
  2. Biography: G.B. Joshi