ವಿಷಯಕ್ಕೆ ಹೋಗು

ಎಂ. ಎನ್. ವ್ಯಾಸರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ. ಎನ್. ವ್ಯಾಸರಾವ್ (1945ರ   ಜನವರಿ 27-2018ರ ಜುಲೈ 15)- ಕನ್ನಡ ಗೀತರಚನೆಗಾರ, ಕವಿ, ಕಥೆಗಾರ, ಕಾದಂಬರಿಕಾರರು.

ಪುಟ್ಟಣ್ಣ ಕಣಗಾಲರ ಚಿತ್ರಗಳಿಗೆ ಬರೆದ ಗೀತೆಗಳು, ಅವರು ರಚಿಸಿದ ಭಾವಗೀತೆಗಳು ಜನಮಾನಸದಲ್ಲಿ ಸದಾ ಹಸಿರು. 15ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಹಾಡುಗಳನ್ನು ಹಾಗೂ 35ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿರುವ ಹೆಗ್ಗಳಿಕೆ ಇವರದು.[]

ಬದುಕು

[ಬದಲಾಯಿಸಿ]

ಎಂ.ಎನ್. ವ್ಯಾಸರಾವ್ ಅವರು  1945ರ   ಜನವರಿ 27ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ಸುಶೀಲಮ್ಮನವರು. ಪ್ರಾಥಮಿಕ ಶಿಕ್ಷಣವನ್ನು  ಮೈಸೂರಿನಲ್ಲಿ ನಡೆಸಿ, ಬೆಂಗಳೂರು ವಿಶ್ವವಿದ್ಯಾಲಯದ ಬಿ.ಎ. ಪದವಿ, ಡ್ರಾಮ್ಯಾಟಿಕ್ಸ್‌ನಲ್ಲಿ ಡಿಪ್ಲೊಮ ಹೀಗೆ ವಿದ್ಯಾಭ್ಯಾಸವನ್ನು ಪೂರೈಸಿದ ವ್ಯಾಸರಾವ್  ಯುನೈಟೆಡ್ ಕಮರ್ಶಿಯಲ್ ಬ್ಯಾಂಕಿನಲ್ಲಿ  34 ವರ್ಷಗಳ  ಸೇವೆಯ ನಂತರ ಸ್ವಯಂ ನಿವೃತ್ತಿ ಪಡೆದು  ಅಧ್ಯಯನ, ಸಾಹಿತ್ಯರಚನೆ ಮತ್ತಿತರ ಸೃಜನಶೀಲ ಚಟುವಟಿಕೆಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡರು.[]

ಕನ್ನಡ ಸಾಹಿತ್ಯ, ಸಿನಿಮಾ ಮತ್ತು ಸಾಂಸ್ಕೃತಿಕ ಲೋಕದ ಪ್ರಮುಖ ವಕ್ತಾರರಾಗಿದ್ದ ವ್ಯಾಸರಾವ್  2018ರ ಜುಲೈ 15ರಂದು ನಿಧನರಾದರು.

ಚಲನಚಿತ್ರರಂಗದಲ್ಲಿ

[ಬದಲಾಯಿಸಿ]

ಶುಭಮಂಗಳ ಚಿತ್ರದ "ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು"  ಎಂಬ ಹಾಡಿನಿಂದ ಇವರು ಜನರ ಗಮನ ಸೆಳೆದರು.

‘ಇವಳೇ ಅವಳು, ಅವಳೇ ಇವಳು ಮನದಲ್ಲಿ ನಿಂತವಳು’‘ಮರೆಯಲಾರೆ ಸಂಸ್ಕೃತಿ ನುಡಿಸಲಾರೆ ಸಮಶೃತಿ’, ‘ಚಂದ ಚಂದ ಸಂಗಾತಿ ನೋಟವೆ ಚಂದ’, ‘ನೀನೇ ನನ್ನ ಕಾವ್ಯ ಕನ್ನಿಕೆ’, ‘ಯುಗಯುಗಗಳೆ ಸಾಗಲಿ ನಮ್ಮ ಪ್ರೀತಿ ಶಾಶ್ವತ’ ಇವು ಅವರ ಪ್ರಸಿದ್ಧ ಚಿತ್ರ ಗೀತೆಗಳು.

ನೂರಾರು ಚಲನಚಿತ್ರಗಳಿಗೆ ಗೀತರಚಿಸಿದ್ದಾರೆ.  ವ್ಯಾಸರಾಯರ  ಸಾಹಿತ್ಯದ ಮೈಸೂರು ಮಲ್ಲಿಗೆ, ಆಸ್ಪೋಟ, ದಂಗೆ ಎದ್ದ ಮಕ್ಕಳು, ವಾತ್ಸಲ್ಯ ಪಥ ಪ್ರಶಸ್ತಿ ಪಡೆದ ಚಲನಚಿತ್ರಗಳಾಗಿವೆ.

ಸಾಹಿತ್ಯರಂಗದಲ್ಲಿ

[ಬದಲಾಯಿಸಿ]

ಅವರ ಸಣ್ಣ ಕಥೆಗಳ ಮೊದಲ ಸಂಕಲನ ‘ಬೆಳ್ಳಿ ಮೂಡುವ ಮುನ್ನ’.  

‘ಮಳೆಯಲ್ಲಿ ನೆನೆದ ಮರಗಳು’ ಕಥಾಸಂಕಲನ; ‘ಉತ್ತರ ಮುಖಿ’ ನೀಳ್ಗವಿತೆಗಳ ಸಂಕಲನ; ಸ್ಕಾಟ್ ಡಬಲ್ ಎಕ್ಸ್, ಅಖಿಲಾ ಮೈ ಡಾರ್ಲಿಂಗ್ ಮುಂತಾದ ಪತ್ತೇದಾರಿ ಕಾದಂಬರಿಗಳು; ನಿರೋಷ, ನದಿಮೂಲ ಮೊದಲಾದ ಸೃಜನಶೀಲ ಕಾದಂಬರಿಗಳು, ‘ಕತ್ತಲಲ್ಲಿ ಬಂದವರು’ ನಾಟಕ ಹೀಗೆ ಎಂ. ಎನ್. ವ್ಯಾಸರಾಯರ ಸಾಹಿತ್ಯ ಸಾಧನೆ ವ್ಯಾಪಕ.

ವ್ಯಾಸರಾಯರ ಹಲವಾರು ಕಥೆಗಳು ತೆಲುಗು, ಹಿಂದಿ, ಬಂಗಾಳಿ, ಇಂಗ್ಲಿಷ್‌ ಇನ್ನಿತರ ಭಾಷೆಗಳಿಗೆ ಭಾಷಾಂತರಗೊಂಡಿವೆ.

ಅವರು ಹಲವಾರು ಚೀನಿ, ಇಂಗ್ಲಿಷ್, ಐರಿಶ್, ಫ್ರೆಂಚ್, ಉರ್ದು ಮುಂತಾದ ಭಾಷೆಗಳಲ್ಲಿನ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಬಿ.ಸಿ. ರಾಮಚಂದ್ರಶರ್ಮ, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಡಾ. ರಾಜಕುಮಾರ್, ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಸುಮತೀಂದ್ರ ನಾಡಿಗ್, ಎಚ್.ಎಸ್. ವೆಂಕಟೇಶಮೂರ್ತಿ, ಸಿ. ಅಶ್ವತ್ಥ್ ಮೊದಲಾದವರ ಸಂದರ್ಶನ ಲೇಖನಗಳನ್ನು  ಪ್ರಕಟಿಸಿದ್ದಾರೆ. ಕೆ.ಎಸ್. ಅಶ್ವತ್ಥರ ಆತ್ಮಕಥನವನ್ನು  ಸುಧಾ ಪತ್ರಿಕೆಯಲ್ಲಿ ನಿರೂಪಿಸಿದ್ದಾರೆ. ಶ್ರವಣ ಮತ್ತು ದೃಶ್ಯಮಾಧ್ಯಮದಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ.   ಹಲವಾರು  ಕ್ಯಾಸೆಟ್ಟುಗಳಿಗೆ ಹಾಡುಗಳನ್ನು ಮೂಡಿಸಿದ್ದಾರೆ, 35ಕ್ಕೂ ಮಿಕ್ಕು ಧಾರಾವಾಹಿಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ.

ನೂರಾರು ಚಲನಚಿತ್ರಗಳಿಗೆ ಗೀತರಚಿಸಿದ್ದಾರೆ.  ವ್ಯಾಸರಾಯರ  ಸಾಹಿತ್ಯದ ಮೈಸೂರು ಮಲ್ಲಿಗೆ, ಆಸ್ಪೋಟ, ದಂಗೆ ಎದ್ದ ಮಕ್ಕಳು, ವಾತ್ಸಲ್ಯ ಪಥ ಪ್ರಶಸ್ತಿ ಪಡೆದ ಚಲನಚಿತ್ರಗಳಾಗಿವೆ.

ಪ್ರಶಸ್ತಿಗಳು

[ಬದಲಾಯಿಸಿ]

ಕೆಂಪೇಗೌಡ

ಇವರ ಮಳೆಯಲ್ಲಿ ನೆನೆದ ಮರಗಳು ಕಥಾಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗೂ ಬರ್ಕಲೀ ತರಂಗಿಣಿ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಜೇಸೀ ಪ್ರಶಸ್ತಿ, ಸ್ವರಮಂದಾರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಸಂದಿವೆ.[]

ಉಲ್ಲೇಖಗಳು

[ಬದಲಾಯಿಸಿ]